ಚಿನ್ನ-ಬೆಳ್ಳಿ ದರ
Gold Rate Today -ಸ್ವರ್ಣಪ್ರಿಯರಿಗೆ ಗುಡ್‌ನ್ಯೂಸ್; ಚಿನ್ನದ ಬೆಲೆ ಕೊಂಚ ಇಳಿಕೆ-ಬೆಳ್ಳಿ ಸ್ಥಿರ; ಇಲ್ಲಿದೆ ಇಂದಿನ ದರ
ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿಕೆ ಆಗಿ ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ಸಂತೋಷವನ್ನುಂಟುಮಾಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 12 ರೂನಷ್ಟು ಇಳಿದರೆ, ಅಪರಂಜಿ ಚಿನ್ನದ ಬೆಲೆ 16 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಈ ವಾರ ಹೆಚ್ಚೇನೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಅದು ಗ್ರಾಮ್ಗೆ 89.50 ರೂ ಮತ್ತು 98 ರು ದರ ಹೊಂದಿದೆ.
ಬೆಂಗಳೂರು, ನ.28: ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿಕೆ ಆಗಿ ಚಿನ್ನಾಭರಣ ಪ್ರಿಯರಿಗೆ ಸ್ವಲ್ಪ ಸಂತೋಷವನ್ನುಂಟುಮಾಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್ಗೆ 12 ರೂನಷ್ಟು ಇಳಿದರೆ, ಅಪರಂಜಿ ಚಿನ್ನದ ಬೆಲೆ 16 ರೂನಷ್ಟು ಕಡಿಮೆ ಆಗಿದೆ. ಮುಂಬೈ ಮೊದಲಾದ ಮಾರುಕಟ್ಟೆಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 7,093 ರೂ ಆಗಿದೆ. ಬೆಳ್ಳಿ ಬೆಲೆಯಲ್ಲಿ ಈ ವಾರ ಹೆಚ್ಚೇನೂ ಬದಲಾವಣೆ ಆಗಿಲ್ಲ. ಭಾರತದಲ್ಲಿ ಅದು ಗ್ರಾಮ್ಗೆ 89.50 ರೂ ಮತ್ತು 98 ರು ದರ ಹೊಂದಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನ.28ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,930 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,350 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,010 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 70,930 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 77,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 89.50 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 70,900 ರೂ
ಚೆನ್ನೈ: 70,900 ರೂ
ಮುಂಬೈ: 70,930 ರೂ
ದೆಹಲಿ: 71,050 ರೂ
ಕೋಲ್ಕತಾ: 70,900 ರೂ
ಕೇರಳ: 70,900 ರೂ
ಅಹ್ಮದಾಬಾದ್: 70,950 ರೂ
ಜೈಪುರ್: 71,210 ರೂ
ಲಕ್ನೋ: 71,210 ರೂ
ಭುವನೇಶ್ವರ್: 71,060 ರೂ
ಚಿನ್ನ-ಬೆಳ್ಳಿ ದರ
Gold Rate Today -ಅಮೆರಿಕ-ಇರಾನ್ ಸಂಘರ್ಷದ ಎಫೆಕ್ಟ್: 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1.48 ಲಕ್ಷ; ಬೆಳ್ಳಿಯೂ ದುಬಾರಿ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ. ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂದಿನ ಚಿನ್ನದ ದರ ವಿವರ (ಜೂನ್ 12, 2026):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
ಆಭರಣ ಚಿನ್ನದ ಬೆಲೆಯೂ ಏರಿಕೆಯ ಹಾದಿಯಲ್ಲಿದ್ದು, 10 ಗ್ರಾಂಗೆ 2,700 ರೂ. ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ ಬೆಲೆ 1,36,200 ರೂ. ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇರಾನ್ ಪಡೆಗಳು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಒಮಾನ್ ಕರಾವಳಿಯಲ್ಲಿ ಭಾರತದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದಿರುವುದು ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಿದೆ.
ಆದರೆ, ಅಂತಿಮವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ರದ್ದುಗೊಳಿಸಿ, ಶಾಂತಿ ಸಂಧಾನಕ್ಕೆ ಮುಂದಾಗುವುದಾಗಿ ಹೇಳಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಆಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್: ಒಂದೇ ದಿನ ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ..!
ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಲೆ ಇಳಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ಹಣದುಬ್ಬರದ ಅಪಾಯಗಳ ನಡುವೆಯೂ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಸಿಗುವ ಸುರಕ್ಷಿತ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಜೂನ್ 8):
24 ಕ್ಯಾರೆಟ್ ಚಿನ್ನ (ಅಪರಂಜಿ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,040 ರೂಪಾಯಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,169 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂಪಾಯಿ ಕುಸಿತ ಕಂಡಿದೆ. ಇದರೊಂದಿಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,905 ರೂಪಾಯಿಯಾಗಿದೆ.
ಕಳೆದ 10 ದಿನಗಳ ಟ್ರೆಂಡ್:
ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 5,350 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಮೇಲೆ 4,900 ರೂಪಾಯಿ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಕದನ ವಿರಾಮದ ಬೆನ್ನಲ್ಲೇ ಭಾರಿ ಏರಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ..! ಒಂದೇ ದಿನ ಕೆ.ಜಿ ಬೆಳ್ಳಿಗೆ ₹11,000 ಹೆಚ್ಚಳ..!
ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ಬೆಳ್ಳಿಯ ದರದಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರವು ಪ್ರತಿ ಕೆ.ಜಿಗೆ ಬರೋಬ್ಬರಿ ₹11,000 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಬೆಳ್ಳಿಯ ಬೆಲೆ ಈಗ ₹2.51 ಲಕ್ಷದ ಗಡಿ ತಲುಪಿದೆ.
ಚಿನ್ನದ ಬೆಲೆ ಎಷ್ಟು ಹೆಚ್ಚಳ?:
ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, 10 ಗ್ರಾಂ (ಶೇ 99.9ರಷ್ಟು ಪರಿಶುದ್ಧತೆ) ಚಿನ್ನದ ಬೆಲೆಯಲ್ಲಿ ₹3,200 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಮಾರುಕಟ್ಟೆ ದರವು ₹1,56,400ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಒಲವು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.


















