Connect with us

ಕಾರ್ಯಕ್ರಮಗಳು

Janmabhoomi-ಪುತ್ತೂರು : ಮಾಡಾವುನಲ್ಲಿ ಹರ್ಷಕುಮಾರ್ ರೈ ಮಾಡಾವುರವರ ‘ಜನ್ಮಭೂಮಿ’ ಭಾರತ್ ಪೆಟ್ರೋಲಿಯಂ ಶುಭಾರಂಭ

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಪುತ್ತೂರು: ಭಾರತ್ ಪೆಟ್ರೋಲಿಯಂನ ಅಧೀನದಲ್ಲಿ ನಡೆಯುವ, ಡಾ. ಹರ್ಷ ಕುಮಾರ್ ರೈ ಮಾಡಾವುರವರ ಮಾಲಕತ್ವದ ಜನ್ಮಭೂಮಿ ಪೆಟ್ರೋಲಿಯಂ ಅ.11 ರಂದು ಕೆಯ್ಯೂರು ಗ್ರಾಮದ ಮಾಡಾವುನಲ್ಲಿ ಶುಭಾರಂಭಗೊಂಡಿತು.

Ad Widget

Ad Widget

Ad Widget alt="Ad Widget"/>

Ad Widget

ಮಾಲಕ ಹರ್ಷ ಕುಮಾರ್ ರೈ ಯವರ ಜನ್ಮದಾತರಾದ ಕೆ.ಎಂ.ಮೋಹನ್ ರೈ ಮತ್ತು ಜಯಂತಿ ಎಂ.ರೈಯವರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಶುಭಾರಂಭಗೊಳಿಸಿ ಆಶೀರ್ವದಿಸಿದರು.

Ad Widget

Ad Widget <> Ad Widget

ಮಾಸ್ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆಯನ್ನು ಮಾಡುವ ಮೂಲಕ ಗ್ರಾಮೀಣ ಪ್ರದೇಶದ ಒಂದಷ್ಟು ಜನರಿಗೆ ಉದ್ಯೋಗ ಕೊಡಿಸುವ ಕೆಲಸದೊಂದಿಗೆ ಗ್ರಾಮದ ಅಭಿವೃದ್ಧಿಗೆ ಹರ್ಷ ಕುಮಾ‌ರ್ ರೈಯವರು ನಾಂದಿ ಹಾಡಿದ್ದಾರೆ. ಗ್ರಾಮದ ಅಭಿವೃದ್ಧಿಯೇ ದೇಶದ ಅಭಿವೃದ್ಧಿಯಾಗಿದೆ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಇಂತಹ ಸಂಸ್ಥೆಗಳು ನಿರ್ಮಾಣವಾಗಬೇಕು ಎಂದರು.



Ad Widget

ಮಾಡಾವಿಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ನಾವೆಲ್ಲರೂ ಸೇರಿಕೊಂಡು ಈ ಊರನ್ನು ಅಭಿವೃದ್ಧಿಗೊಳಿಸುವ ಮೂಲಕ ಒಂದಷ್ಟು ಜನರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ಮಾಡುವ, ಹರ್ಷ ಕುಮಾ‌ರ್ ರೈಯವರ ಜನ್ಮಭೂಮಿ ಪೆಟ್ರೋಲಿಯಂ ಯಶಸ್ಸು ಕಾಣಲಿ ಎಂದು ಹೇಳಿ ಸೀತಾರಾಮ ರೈ ಶುಭ ಹಾರೈಸಿದರು.

Ad Widget

Ad Widget

ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಮಾಡಾವಿನಂತಹ ಗ್ರಾಮೀಣ ಪ್ರದೇಶಕ್ಕೆ ಪೆಟ್ರೋಲ್ ಬಂಕ್‌ನ ಅವಶ್ಯಕತೆ ತುಂಬಾ ಇತ್ತು ಅದನ್ನು ಹರ್ಷ ಕುಮಾರ್ ರೈಯವರು ನೀಗಿಸಿದ್ದಾರೆ. ಗ್ರಾಮೀಣ ಪ್ರದೇಶದ ಸುಸಜ್ಜಿತ ಬಂಕ್ ಇದಾಗಿದ್ದು ವಾಹನ ಚಾಲಕರು ತಮ್ಮ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸುವ ಮೂಲಕ ಸಂಸ್ಥೆಯ ಯಶಸ್ಸಿಗೆ ಸಹಕರಿಸಬೇಕಾಗಿದೆ. ಜನ್ಮಭೂಮಿ ಪೆಟ್ರೋಲಿಯಂ ಯಶಸ್ಸು ಅನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.

ಹರ್ಷ ಕುಮಾರ್ ರೈಯವರು ತಮ್ಮ ಹುಟ್ಟೂರಿನಲ್ಲಿ ಜನ್ಮಭೂಮಿ ಎಂಬ ಪೆಟ್ರೋಲಿಯಂ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಈ ಭಾಗದ ವಾಹನ ಮಾಲಕ, ಚಾಲಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಸಂಸ್ಥೆಯು ಅಭಿವೃದ್ಧಿಯನ್ನು ಕಾಣಲಿ, ದೇವರ ಆಶೀರ್ವಾದವಿರಲಿ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಕೆ.ಎಂ.ಎಫ್ ಉಪಾಧ್ಯಕ್ಷ ಎಸ್ .ಬಿ.ಜಯರಾಮ ರೈ ಬಳಜ್ಜರವರು ಮಾತನಾಡಿ, ಶುಭ ಹಾರೈಸಿದರು.

ಒಂದು ಒಳ್ಳೆಯ ಸುಂದರ ಪರಿಸರದಲ್ಲಿ ಹರ್ಷ ಕುಮಾರ್ ರೈಯವರು ಪೆಟ್ರೋಲಿಯಂ ಯುನಿಟ್ ಆರಂಭಿಸಿದ್ದಾರೆ. ಪಾರ್ಕಿಂಗ್‌ನಿಂದ ಹಿಡಿದು ಉಚಿತ ಏರ್, ಶೌಚಾಲಯ ವ್ಯವಸ್ಥೆ ಎಲ್ಲವನ್ನು ಒಳಗೊಂಡಿದೆ. ಸಂಸ್ಥೆಯು ಯಶಸ್ಸು ಕಾಣಲಿ ಎಂದು ಮಂಗಳೂರು ಭಾರತ್ ಪೆಟ್ರೋಲಿಯಂ ಪ್ರಾದೇಶಿಕ ವ್ಯವಸ್ಥಾಪಕ ಅಮೋಲ್ ಬೊಸ್ಲೆ ಶುಭ ಹಾರೈಸಿದರು.

ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ವರುಣ್ ರೈ, ಶ್ರೀದೇವಿ ಇಲೆಕ್ಟಿಕಲ್ಸ್‌ ನ ಸುಬ್ರಾಯ ಗೌಡ ಮಾಡಾವು ಹಾಗೂ ಕಟ್ಟಡ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದ್ದ ಅಶ್ರಫ್ ಸನ್‌ಶೈನ್ ಕುಂಬ್ರರವರುಗಳನ್ನು ಈ ಸಂದರ್ಭದಲ್ಲಿ ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಮಂಗಳೂರು ಭಾರತ್ ಪೆಟ್ರೋಲಿಯಂ ಪ್ರಾದೇಶಿಕ ವ್ಯವಸ್ಥಾಪಕ ಅಮೋಲ್ ಬೊಸ್ಲೆ, ಸೇಲ್ಸ್ ಆಫೀಸರ್ ಶಿತೇಶ್ ಚೌದರಿ, ಇಂಜಿನಿಯರ್ ಹೆಡ್ ನೀರಜ್‌ ರವರುಗಳನ್ನು ಶಾಲು, ಹೂಗುಚ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹಲವು ಗಣ್ಯರನ್ನು ಈ ಸಂದರ್ಭದಲ್ಲಿ ಹರ್ಷ ಕುಮಾರ್ ರೈಯವರು ಶಾಲು ಹೊದೆಸಿ ಗೌರವಿಸಿದರು.

ಕೆಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾ‌ರ್ ರೈ ಬಾಳ್ಕೊಟ್ಟು, ನವದೆಹಲಿ ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ವಿಶ್ವಾಸ್ ಶೆಣೈ, ಭಾರತ್ ಪೆಟ್ರೋಲಿಯಂನ ಸೇಲ್ಸ್ ಆಫೀಸರ್ ಶಿತೇಶ್ ಚೌದರಿ, ಇಂಜಿನಿಯರ್ ಹೆಡ್ ನೀರಜ್, ಮಾಡಾವು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹುಸೈನಾರ್ ಹಾಜಿ ಸಂತೋಷ್ ನಗರ, ಕೆಯ್ಯರು ವರ್ತಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಯ್ಯರು ಗ್ರಾಪಂ ಸದಸ್ಯ ತಾರಾನಾಥ ಕಂಪ ಸೇರಿದಂತೆ ನೂರಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದರು.

ಜನ್ಮಭೂಮಿ ಪೆಟ್ರೋಲಿಯಂ ಮಾಲಕ ಡಾ। ಹರ್ಷ ಕುಮಾರ್ ರೈ ಮಾಡಾವು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ, ಸಹಕಾರ ಕೋರಿದರು. ಜನ್ಮಭೂಮಿ ಪೆಟ್ರೋಲಿಯಂನ ಆಡಳಿತದಾರ ಮನೋಹರ ಆಳ್ವ ಸಹಕರಿಸಿದರು.

ರಾಜಕೀಯ ಗಣ್ಯರು, ಅಧಿಕಾರಿಗಳಿಂದ ಶುಭ ಹಾರೈಕೆ:
ಜನ್ಮಭೂಮಿ ಪೆಟ್ರೋಲಿಯಂನ ಶುಭಾರಂಭದ ಸಂದರ್ಭದಲ್ಲಿ ರಾಜಕೀಯ ಗಣ್ಯರಿಂದ ಹಿಡಿದು ಸಾವಿರಾರು ಮಂದಿ ಆಗಮಿಸಿ ಶುಭ ಹಾರೈಸಿದ್ದಾರೆ. ವಿಶೇಷವಾಗಿ ವಿವಿಧ ರಾಜಕೀಯ ಗಣ್ಯರು, ಮುಖಂಡರು, ರೋಟರಿ, ಜೇಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳು, ಸಿಬ್ಬಂದಿ ವರ್ಗದವರು, ವರ್ತಕರ ಸಂಘದ ಪದಾಧಿಕಾರಿಗಳು, ಉದ್ಯಮಿಗಳು, ಹರ್ಷ ಕುಮಾ‌ರ್ ರೈಯವರ ಬಂಧುಗಳು, ಹಿತೈಷಿಗಳು, ಸೇರಿದಂತೆ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ವಿವಿಧ ಗಣ್ಯರು, ಅಧಿಕಾರಿ ವರ್ಗದವರು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಶುಭ ಹಾರೈಸಿದರು.

ಜನ್ಮದಿನ, ಜನ್ಮಸ್ಥಳ, ಜನ್ಮದಾತರಿಂದ ಉದ್ಘಾಟನೆ:
ಜನ್ಮಭೂಮಿ ಪೆಟ್ರೋಲಿಯಂ ಬಂಕ್ ಉದ್ಘಾಟನೆಯು ಬಹಳ ವಿಶೇಷತೆಯನ್ನು ಒಳಗೊಂಡಿತ್ತು. ಪೆಟ್ರೋಲಿಯಂ ಬಂಕ್ ಮಾಲಕರಾದ ಹರ್ಷ ಕುಮಾ‌ರ್ ರೈಯವರ ಜನ್ಮದಿನ ಅ.11 ರಂದು ಅವರ ಜನ್ಮಸ್ಥಳ ಮಾಡಾವುನಲ್ಲಿ ಅವರ ಜನ್ಮದಾತರಾದ ಕೆ.ಎಂ.ಮೋಹನ್ ರೈ ಮತ್ತು ಜಯಂತಿ ಎಂ.ರೈಯವರಿಂದ ಜನ್ಮಭೂಮಿ ಪೆಟ್ರೋಲಿಯಂನ ಉದ್ಘಾಟನೆ ನಡೆದಿದೆ.

ಹಲವು ವಿಶೇಷತೆಗಳನ್ನೊಳಗೊಂಡ ಪೆಟ್ರೋಲ್ ಬಂಕ್
ಜನ್ಮಭೂಮಿ ಪೆಟ್ರೋಲಿಯಂ ಬಂಕ್ ಪುತ್ತೂರು-ಕುಂಬ್ರ-ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ಮಾಡಾವುನಲ್ಲಿದೆ. ಸಂಪೂರ್ಣ ಗ್ರಾಮೀಣ ಪ್ರದೇಶದಲ್ಲಿರುವ ಸುಸಜ್ಜಿತ ಬಂಕ್ ಇದಾಗಿದೆ. ಸೋಲಾರ್ ಪವರ್ ಸಿಸ್ಟಮ್‌ನೊಂದಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ವಾಹನಗಳ ಟಯರ್‌ಗಳಿಗೆ ಉಚಿತ ಗಾಳಿ ವ್ಯವಸ್ಥೆ, ಶುದ್ದೀಕರಿಸಿದ ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಗಳು ಬಂಕ್‌ನಲ್ಲಿದೆ. ಹರ್ಷ ಕುಮಾ‌ರ್ ರೈ ಮಾಲಕತ್ವದ ಜನ್ಮ ಪ್ಯೂಯೆಲ್ಸ್ ಇದೇ ರಸ್ತೆಯಲ್ಲಿ ಕುಂಬ್ರ ಜಂಕ್ಷನ್‌ನಲ್ಲಿದೆ.

‘ನಮ್ಮ ಮೇಲೆ ಪ್ರೀತಿ ಇಟ್ಟು ನಮ್ಮ ಜನ್ಮಭೂಮಿ ಪೆಟ್ರೋಲಿಯಂನ ಉದ್ಘಾಟನಾ ಸಮಾರಂಭಕ್ಕೆ ವಿವಿಧ ಕ್ಷೇತ್ರದ ಸಾವಿರಾರು ಮಂದಿ ಗಣ್ಯರು ಆಗಮಿಸಿ ಶುಭ ಹಾರೈಸಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಆಭಾರಿಯಾಗಿದ್ದೇನೆ. ಮುಂದೆಯೂ ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹವನ್ನು ಬಯಸುತ್ತೇನೆ. ಶುಭ ಹಾರೈಸಿದ ಸಮಸ್ತ ಬಂಧುಗಳಿಗೆ, ಅಧಿಕಾರಿ ವರ್ಗದವರಿಗೆ, ಹಿತೈಷಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ʼ-ಡಾ. ಹರ್ಷ ಕುಮಾ‌ರ್ ರೈ ಮಾಡಾವು, ಮಾಲಕರು, ಜನ್ಮಭೂಮಿ ಪೆಟ್ರೋಲಿಯಂ ಮಾಡಾವು

Ad Widget
Click to comment

Leave a Reply

ಸ್ಥಳೀಯ

Dharmasthala-ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ; ಶಿಬಿರಾರ್ಥಿಗಳಿಗೆ ಭಜನಾ ತರಬೇತಿ

Published

on



Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ‌.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.

Ad Widget

Ad Widget

Ad Widget

Ad Widget

ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ‌.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.

Ad Widget

Ad Widget

Ad Widget alt="Ad Widget"/>

Ad Widget

ದಾಸ ಸಾಹಿತ್ಯದ ‘ಇಟ್ಹಾಂಗೆ ಇರುವೆನೋ ಹರಿಯೇ’, ಏಸು ಕಾಯಂಗಳ ಕಳೆದು’ ಹಾಗೂ ಇನ್ನಿತರ ಭಜನಾ ಕೀರ್ತನೆಗಳನ್ನು ತರಬೇತುದಾರರು ಅಭ್ಯಾಸ ಮಾಡಿಸಿದರು.

Ad Widget

Ad Widget <> Ad Widget

ಈ ಸಂದರ್ಭದಲ್ಲಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್ ಹಾಗೂ ಭಜನಾ ಕಮ್ಮಟ ಪರಿಷತ್ ನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.



Ad Widget
Ad Widget
Continue Reading

ಕಾರ್ಯಕ್ರಮಗಳು

Swachha Bharat Mission-ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ವಿಟ್ಲದಲ್ಲಿ 3 ಟಿಪಿಡಿ ಸಾಮರ್ಥ್ಯದ ಎಂಆರ್‌ಎಫ್ ಘಟಕಕ್ಕೆ ಸಂಸದ ಕ್ಯಾ. ಚೌಟ ಚಾಲನೆ

Published

on



Ad Widget

Ad Widget

Ad Widget

Ad Widget

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಎಂ.ಆರ್.ಎಫ್(ಮೆಟೀರಿಯಲ್‌ ರಿಕವರಿ ಫೆಸಿಲಿಟಿ) ಘಟಕಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಚಾಲನೆ ನೀಡಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಎಂ.ಆರ್.ಎಫ್(ಮೆಟೀರಿಯಲ್‌ ರಿಕವರಿ ಫೆಸಿಲಿಟಿ) ಘಟಕಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಇಂದು ಚಾಲನೆ ನೀಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ 2.0 ಹಾಗೂ ಕೇಂದ್ರ ಪುರಸ್ಕೃತ ವಿವಿಧ ಯೋಜನೆಯಡಿ ಸುಮಾರು 60.10 ಲಕ್ಷ ರೂಪಾಯಿಗಳ ಅನುದಾನದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಈ ಘನ ತ್ಯಾಜ್ಯ ಘಟಕದಲ್ಲಿ ಒಣತ್ಯಾಜ್ಯ ಸಂಗ್ರಹಿಸುವುದಕ್ಕೆ 3 ಟಿಪಿಡಿ ಸಾಮರ್ಥ್ಯದ ಮೆಟೀರಿಯಲ್‌ ರಿಕವರಿ ಫೆಸಿಲಿಟಿ ಘಟಕವನ್ನು ನಿರ್ಮಿಸಲಾಗುತ್ತದೆ. ಆ ಮೂಲಕ ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ಬಹಳ ವೈಜ್ಞಾನಿಕವಾದ ಒಣ ಕಸ ಸಂಗ್ರಹ ಹಾಗೂ ವಿಲೇವಾರಿ ವ್ಯವಸ್ಥೆ ಅಳವಡಿಕೆಯಾಗುತ್ತಿದೆ. ಇದು ಗ್ರಾಮೀಣ ಭಾಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್‌ ಮಿಷನ್‌ ಅನುಷ್ಠಾನ ಪ್ರಕ್ರಿಯೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

Ad Widget

Ad Widget <> Ad Widget

ವಿಟ್ಲದ ಎಂಆರ್‌ಎಫ್‌ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು , ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಅಲ್ಲದೆ, ಒಣ ಕಸವನ್ನು ಈ ರೀತಿಯ ಅತ್ಯಾಧುನಿಕ ವ್ಯವಸ್ಥೆಯಡಿ ಸಂಗ್ರಹಿಸಿ ವಿಲೇವಾರಿ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶವನ್ನು ಒದಗಿಸುವ ಜತೆಗೆ ಆರ್ಥಿಕವಾಗಿ ಸಂಪನ್ಮೂಲ ಕ್ರೋಢೀಕರಣಕ್ಕೂ ಅನುಕೂಲ ಕಲ್ಪಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ದ ಕನಸು ನನಸಾಗಬೇಕಾದರೆ, ಗ್ರಾಮ ಮತ್ತು ಪಟ್ಟಣ ಮಟ್ಟದಲ್ಲೇ ಆಧುನಿಕ ಮೂಲಸೌಕರ್ಯಗಳು ಬೆಳೆಯಬೇಕು. ಈ ₹60.10 ಲಕ್ಷದ ಯೋಜನೆಯು ನಮ್ಮ ವಿಟ್ಲ ಪಟ್ಟಣ ಪಂಚಾಯತಿಯನ್ನು ಮಾದರಿ ಮತ್ತು ಸ್ವಾವಲಂಬಿ ಪಟ್ಟಣವನ್ನಾಗಿ ಪರಿವರ್ತಿಸಲು ನಾಂದಿ ಹಾಡಲಿದೆ ಎಂದರು. ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂಚಾಯತ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.



Ad Widget

ಈ ಕಾರ್‍ಯಕ್ರಮದ ಬಳಿಕ ಪ್ರಧಾನಮಂತ್ರಿಯವರ 25 ವರ್ಷಗಳ ಸಾರ್ವಜನಿಕ ಸೇವೆ ಪ್ರಯುಕ್ತ ನಡೆಯುತ್ತಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿಟ್ಲ ಮಹಾಶಕ್ತಿ ಕೇಂದ್ರದ ಬೂತ್ ಸಂಖ್ಯೆ 5ರ ಪಳಿಕೆಯಲ್ಲಿ ಸಂಸದ ಕ್ಯಾ.ಚೌಟ ಅವರು ಕಾರ್ಯಕರ್ಯರೊಂದಿಗೆ ಸಸಿ ನೆಟ್ಟು ನೀರುಣಿಸಿದರು.

Ad Widget

Ad Widget

ಈ ವೇಳೆ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ, ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ, ಬಿಜೆಪಿ ಮುಖಂಡರಾದ ದೇವಪ್ಪ ಪೂಜಾರಿ, ಸಂಜಯ್ ಪ್ರಭು, ಪ್ರಸನ್ನ ದರ್ಬೆ, ನಿತೀಶ್ ಕುಮಾರ್ ಶಾಂತಿವನ, ಹರಿಪ್ರಸಾದ್ ಯಾದವ್, ವಿದ್ಯಾಧರ ಜೈನ್, ಶ್ರೀಕೃಷ್ಣ ವಿಟ್ಲ, ಪ್ರೀತಂ ಪೂಂಜಾ , ಉದಯ ಆಲಂಗಾರ್, ಹರೀಶ್ ಸಿ.ಎಚ್ ಉಪಸ್ಥಿತರಿದ್ದರು.

Ad Widget
Continue Reading

ಕಾರ್ಯಕ್ರಮಗಳು

Bantare Serige-2026-ಅ.3ರಂದು ‘ಬಂಟೆರೆ ಸೇರಿಗೆ-2026’: 15 ಸಾಧಕರಿಗೆ ಪ್ರಶಸ್ತಿ; ಬಂಟರ ಸಂಘಕ್ಕೆ 5.50 ಎಕರೆ ಜಾಗದ ಹಕ್ಕುಪತ್ರ ಹಸ್ತಾಂತರ; 3,000 ಮಂದಿಯ ಸಾಮರ್ಥ್ಯದ ಮದುವೆ ಹಾಲ್ ನಿರ್ಮಾಣಕ್ಕೆ ಯೋಜನೆ

Published

on



Ad Widget

Ad Widget

Ad Widget

Ad Widget

ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ‘ಬಂಟೆರೆ ಸೇರಿಗೆ-2026’ ಕಾರ್ಯಕ್ರಮ ಅ.3ರಂದು ಪುತ್ತೂರಿನ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿಯ ಮಾರ್ಗದರ್ಶನದಲ್ಲಿ ‘ಬಂಟೆರೆ ಸೇರಿಗೆ-2026’ ಕಾರ್ಯಕ್ರಮ ಅ.3ರಂದು ಪುತ್ತೂರಿನ ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ.

Ad Widget

Ad Widget

Ad Widget alt="Ad Widget"/>

Ad Widget

ಬೆಳಿಗ್ಗೆ 9ಕ್ಕೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಎರಡು ರಥಗಳಲ್ಲಿ ಸಾಧಕರು, ಶಾಸಕ ಅಶೋಕ್ ಕುಮಾರ್ ರೈ ಹಾಗೂ ಅತಿಥಿಗಳನ್ನು ರಾಜರಸ್ತೆ ಮೂಲಕ ಬಂಟರ ಭವನಕ್ಕೆ ಕರೆತರಲಾಗುವುದು. ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಮಹಾದ್ವಾರ ಉದ್ಘಾಟಿಸಲಿದ್ದು, ದಂಬೆಕ್ಕಾನ ಸದಾಶಿವ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ.

Ad Widget

Ad Widget <> Ad Widget

ಬೆಳಿಗ್ಗೆ 11ಕ್ಕೆ ಶಾಸಕ ಅಶೋಕ್ ಕುಮಾರ್ ರೈ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಜಿತ್ ಕುಮಾರ್ ರೈ ಮಾಲಾಡಿ ಶುಭಾಶಂಸನೆ ಮಾಡಲಿದ್ದು, ಶಶಿಧರ್ ಶೆಟ್ಟಿ ಬರೋಡಾ ಪ್ರಶಸ್ತಿ ಪ್ರದಾನ, ಆರ್.ಕೆ. ಶೆಟ್ಟಿ ಮುಂಬೈ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಜಗನ್ನಾಥ ರೈ ಬೀಡು ಮುಖ್ಯ ಅತಿಥಿಯಾಗಿರುವರು.



Ad Widget

ಪ್ರಶಸ್ತಿ ಪುರಸ್ಕೃತರು: ಸಹಕಾರರತ್ನ *ಸವಣೂರು ಸೀತಾರಾಮ ರೈ, **ಚನಿಲ ತಿಮ್ಮಪ್ಪ ಶೆಟ್ಟಿ, **ಮಿತ್ರಂಪಾಡಿ ಪುರಂದರ ರೈ, **ಡಾ. ಸಂದೀಪ್ ರೈ, ಸಹಕಾರರತ್ನ **ಅಗರಿ ನವೀನ್ ಭಂಡಾರಿ, **ಸುಬೇದಾರ್ ಮೇಜರ್ ರಮೇಶ್ ರೈ ಬೋಳೋಡಿ, **ಚಂದ್ರಹಾಸ್ ರೈ ಬನ್ನೂರು ಬಾಳಿಕೆ, **ಜಯಲಕ್ಷ್ಮಿ ಶೆಟ್ಟಿ, **ಸತೀಶ್ ರೈ ಕುತ್ಯಾಡಿ, **ಪ್ರವೀಣ್ ಭಂಡಾರಿ ಪುರ, **ಡಾ. ಸತ್ಯವತಿ ಆಳ್ವ, **ಸರೋಜ ಉಮೇಶ್ ರೈ ಮನವಳಿಕೆ, ಪಿಯುಸಿ ವಿಭಾಗದ **ಸಸ್ತಿ ಶೆಟ್ಟಿ, *ಸಮೃದ್ಧಿ ಶೆಟ್ಟಿ ಹಾಗೂ ಶರಣ್ಯ ಶೆಟ್ಟಿ ಅವರಿಗೆ ವಿವಿಧ ಕ್ಷೇತ್ರಗಳ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು.

Ad Widget

Ad Widget

ಅಶೋಕ್ ರೈಗೆ ವಿಶೇಷ ಸನ್ಮಾನ

ಪುತ್ತೂರಿನ ಮರೀಲ್‌ನಲ್ಲಿ ಬಂಟರ ಸಂಘಕ್ಕೆ ಸರ್ಕಾರದಿಂದ 5.50 ಎಕರೆ ಜಾಗ ಮಂಜೂರು ಮಾಡಿಸಲು ಸಹಕರಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಹಕ್ಕುಪತ್ರವನ್ನು ಸಂಘಕ್ಕೆ ಹಸ್ತಾಂತರಿಸಲಿದ್ದು, ಜಾಗಕ್ಕೆ ಸರ್ಕಾರಕ್ಕೆ ಪಾವತಿಸಬೇಕಾದ ಮೊತ್ತವನ್ನು ಶಾಸಕರೇ ಭರಿಸಿದ್ದಾರೆ ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.

ಮಂಜೂರಾದ ಜಾಗದಲ್ಲಿ ಮೊದಲ ಹಂತವಾಗಿ ಅಡ್ಯಾರ್ ಗಾರ್ಡನ್ ಮಾದರಿಯ ಮದುವೆ ಹಾಲ್ ಮತ್ತು ಭೋಜನ ಶಾಲೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸುಮಾರು 3,000 ಮಂದಿಗೆ ಅವಕಾಶ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ಹಂತಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಪುತ್ತೂರು ಮೂಲದ ಸೌಮ್ಯ ಪ್ರಿಯ ಹೆಗ್ಡೆ ಅರಿಯಡ್ಕ ಹಾಗೂ ಉಮೇಶ್ ಪೂಂಜ ದೇರ್ಲ ಅವರನ್ನು ಸನ್ಮಾನಿಸಲಾಗುವುದು. ಪ್ರಧಾನ ಕಾರ್ಯದರ್ಶಿ ಅಮರನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಮಾಂಸಾಹಾರಿ ಭೋಜನದ ವ್ಯವಸ್ಥೆ ಇದೆ.

ಸುದ್ದಿಗೋಷ್ಠಿಯಲ್ಲಿ ದಂಬೆಕ್ಕಾನ ಸದಾಶಿವ ರೈ, ಸಾಜ ರಾಧಾಕೃಷ್ಣ ಆಳ್ವ, ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂತೋಷ್ ಕುಮಾರ್ ಶೆಟ್ಟಿ ಸಾಜ ಹಾಗೂ ಭಾಗ್ಗೇಶ್ ರೈ ಉಪಸ್ಥಿತರಿದ್ದರು.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading