Connect with us

ವೈರಲ್‌ ನ್ಯೂಸ್‌

Bikini Photoshoot :ಉಡುಪಿ ಬೀಚ್‌ ನಲ್ಲಿ ಬಿಕಿನಿ ತೊಟ್ಟು ಫೋಟ್‌ಶೂಟ್ ಗೆ ಪೊಲೀಸರ ಅಡ್ಡಿ –ಇದ್ಯಾವ ರೀತಿ ಕಾನೂನು ಉಲ್ಲಂಘನೆ : ಯುವತಿ ಗರಂ ; ಪೊಲೀಸರು ನೀಡಿದ ಸ್ಪಷ್ಟನೆಯೇನು ?    

Published

on



Ad Widget

Ad Widget

Ad Widget

Ad Widget

ಉಡುಪಿ: ಕ್ಯಾಥಿಶ್ರೀ ಎಂಬ ಸೋಷಿಯಲ್ ಮಿಡಿಯಾ ಇನ್ಫುಯೆನ್ಸರ್ ಯುವತಿ ಪಡುಬಿದ್ರಿ ಬೀಚ್ ನಲ್ಲಿ ಬಿಕಿನಿಯಲ್ಲಿ ಫೋಟ್ಶೂಟ್ ನಡೆಸಿದ ವೇಳೆ ಪೊಲೀಸರು ಅಡ್ಡಿಯನ್ನುಂಟು ಮಾಡಿರುವುದನ್ನು ಖಂಡಿಸಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಇದೀಗ ಈ ಘಟನೆಯ ಬಗ್ಗೆ ಪೊಲೀಸ್‌ ಇಲಾಖೆ ಸ್ಪಷ್ಟನೆ ನೀಡಿದೆ.

Ad Widget

Ad Widget

Ad Widget

Ad Widget

ಕ್ಯಾಥಿಶ್ರೀ ಇನ್ಸ್ಟಾಗ್ರಾಮ್ನಲ್ಲಿ 7 ಲಕ್ಷ ಅಧಿಕ ಫಾಲೋವರ್ಸ್ ಹೊಂದಿದ್ದು, ಟ್ರಾವೆಲ್‌ ಬ್ಲಾಗರ್‌ ಆಗಿದ್ದಾರೆ. ಪ್ರವಾಸಿ ತಾಣಗಳಿಗೆ ತೆರಳಿ ಅಲ್ಲಿನ ಚಟುಟುವಟಿಕೆಗಳನ್ನು ತಮ್ಮ ಪೇಜ್‌ ನಲ್ಲಿ ಹಾಕುವ ಹವ್ಯಾಸ ಹೊಂದಿದ್ದಾರೆ. ಆಕೆ ತನ್ನ ಟ್ಟಿಟ್ಟರ್ ಅಕೌಂಟ್ ನಲ್ಲಿ ಸ್ತ್ರೀವಾದಿ, ವರ್ಣವಿರೋಧಿ, ಕೋಮುವಾದದ ಶತ್ರು ಎಂದು ಬರೆದುಕೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಪಡುಬಿದ್ರಿ ಬೀಚ್ ನಲ್ಲಿ ನಡೆದ ಘಟನೆಯು ವಾರದ ಹಿಂದಿನದು.ವೀಡಿಯೊವನ್ನು ಆಕೆ 2 ದಿನಗಳ ಹಿಂದೆಯಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾಳೆ. ಆ ಪೋಸ್ಟ್‌ ನಲ್ಲಿ ಆಕೆ ಪಡುಬಿದ್ರೆ ಬೀಚ್ನಲ್ಲಿ ನನಗೆ ಕಹಿ ಅನುಭವವಾಗಿದೆ. ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ನೈತಿಕ ಪೊಲೀಸ್ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಎಂದು ಆಕೆ ಪ್ರಶ್ನಿಸಿದ್ದರು.

Ad Widget

Ad Widget <> Ad Widget

ಪೋಸ್ಟ್‌ ನಲ್ಲಿ ಏನಿದೆ ?



Ad Widget


ಕ್ಯಾಥಿಶ್ರೀಯೂ ಬೀಚ್ನಲ್ಲಿ ಬಿಕನಿ ಹಾಕಿ ತೆಗೆದಿರುವ ಫೋಟೊವನ್ನೂ, ಇಬ್ಬರು ಪೊಲೀಸರು ಅವರ ಬಳಿ ಬರುತ್ತಿರುವ ಮತ್ತು ಬೀಚ್ನಲ್ಲಿ ಕುಳಿತಿದ್ದ ಕೆಲವರ ಫೋಟೊಗಳನ್ನೂ ಪೋಸ್ಟ್ ಮಾಡಿದ್ದಾರೆ. ‘ಪಡುಬಿದ್ರಿ ಬೀಚ್ನಲ್ಲಿ ಗಂಡ ನನ್ನ ಫೋಟೊ ತೆಗೆಯುತ್ತಿದ್ದರು. ಆಗ ಅಲ್ಲಿಗೆ ಇಬ್ಬರು ಪೊಲೀಸರು ಬಂದು ಬಿಕನಿ ಯಾಕೆ ಧರಿಸಿದ್ದೀರಿ. ಅದಕ್ಕೆ ಅನುಮತಿ ಇದೆಯಾ ಎಂದು ಪ್ರಶ್ನಿಸಿದರು’ ಎಂದು ಬರೆದುಕೊಂಡಿದ್ದಾರೆ.

Ad Widget

Ad Widget

‘ಬಿಕನಿ ಹಾಕಿಕೊಂಡು ಬೀಚ್ಗೆ ಬರೋದು ಕಾನೂನುಬದ್ಧ. ಅದಕ್ಕೆ ಯಾವುದೇ ಅನುಮತಿ ಬೇಡ ಎಂದು ನನ್ನ ಗಂಡ ಪೊಲೀಸರಿಗೆ ತಿಳಿಸಿದರು. ಆಗ ಪೊಲೀಸರು ದೂರದಲ್ಲಿ ಕುಳಿತಿದ್ದ ಗುಂಪೊಂದನ್ನು ತೋರಿಸಿ, ನೀವು ಬಟ್ಟೆ ಬದಲಾಯಿಸದಿದ್ದರೆ ಅವರು ನಿಮ್ಮ ಮೇಲೆ ಹಲ್ಲೆ ನಡೆಸಬಹುದು ಎಂದರು. ನನ್ನ ಹಕ್ಕುಗಳನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಆ ರೀತಿ ವರ್ತಿಸಿದ್ದಾರೆ’ ಎಂದು ಯುವತಿ ಅಸಮಾಧಾನ ತೋಡಿಕೊಂಡಿದ್ದಾರೆ.

‘ನಾವು ಅಲ್ಲಿಂದ ನಮ್ಮ ರೂಮ್ಗೆ ಬಂದೆವು. ಅಲ್ಲಿಂದ ನೋಡಿದಾಗ ಪೊಲೀಸರು ಆ ರೌಡಿಗಳ ಜೊತೆಗೆ ಮಾತನಾಡುತ್ತಿದ್ದರು. ಆ ಸ್ಥಳ ಸುರಕ್ಷಿತವಲ್ಲ ಎಂದು ಅರಿತು ನಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ ಮುಂದಿನ ಗ್ರಾಮಕ್ಕೆ ಹೊರಟೆವು’ ಎಂದು ಯುವತಿ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ
ಕ್ಯಾಥಿಶ್ರೀ ಯವರು Instagram ನಲ್ಲಿ ಬೀಚ್‌ ಪೋಸ್ಟ್‌ ಹಾಕುತ್ತಲೇ, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆ ನಡೆದಿದೆ. ಹಲವರು ಪೊಲೀಸರ ಕ್ರಮವನ್ನು ಸಮರ್ಥಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಹಸಿಬಿಸಿಯಾಗಿ ಕಾಣಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಅವರ ವಾದ. ಅದರೇ ಇನ್ನೂ ಕೆಲವರು ಮಹಿಳೆಯ ಹಕ್ಕಿನ ಉಲ್ಲಂಘನೆ. ಬಟ್ಟೆ ತೋಡುವುದು ವ್ಯಕ್ತಿಯೊಬ್ಬರ ಐಚ್ಚಿಕ. ಅದು ಅವರ ವೈಯುಕ್ತಿಕ ಸ್ವಾತಂತ್ರ್ಯ . ಅದಕ್ಕೆ ಅಡ್ಡಿ ಪಡಿಸಲು ಪೊಲಿಸರು ಅಥಾವ ಇತರ ಸಾರ್ವಜನಿಕರು ಯಾರು ಎಂದು ಪ್ರಶ್ನಿಸಿದ್ದಾರೆ

ಪೊಲೀಸರ ಸ್ಪಷ್ಟನೆಯೇನು ?
ಒಬ್ಬ ಯುವತಿ ಹಾಗೂ ಯುವಕ ಪಡುಬಿದ್ರೆ ಬ್ಲೂಫ್ಲ್ಯಾಗ್ ಬೀಚ್ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದ್ದು, ಅದರಂತೆ ಬೀಟ್ ಕರ್ತವ್ಯದಲ್ಲಿದ್ದ ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ಯುವಕ ಹಾಗೂ ಯುವತಿಯನ್ನು ಕರೆದು ಬ್ಲೂಫ್ಲ್ಯಾಗ್ ಬೀಚ್ ವಸತಿ ಪ್ರದೇಶವಾಗಿರುವ ಬಗ್ಗೆ ಮನವರಿಕೆ ಮಾಡಿದ್ದು, ಅವರು ಅಲ್ಲಿಂದ ತೆರಳಿದ್ದರು. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಈ ಬಗ್ಗೆ ಯುವತಿಯನ್ನು ಸಂಪರ್ಕಿಸಿ, ಅವರಿಗೆ ಯಾವುದೇ ದೂರುಗಳಿದ್ದಲ್ಲಿ ಮುಕ್ತವಾಗಿ ನೀಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಅವರಿಂದ ಯಾವುದೇ ದೂರು ಬಂದಲ್ಲಿ ಕಾನೂನಿನಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ತಿಳಿಸಿದೆ.

ಪಡುಬಿದ್ರಿಯ ಬ್ಲೂ ಫ್ಲಾಗ್ ಬೀಚ್ನಲ್ಲಿ ಇದೇ ಯುವತಿ ಬಿಕನಿ ಹಾಕಿ ಫೋಟೊ ಶೂಟ್ ಮಾಡಿದ್ದಾರೆ. ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಸಾರ್ವಜನಿಕ ವಲಯದಲ್ಲಿರುವ ಸಮುದ್ರತೀರದಲ್ಲಿ ಫೋಟೊ ಶೂಟ್ ಮಾಡಿರುವುದರಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಪೊಲೀಸ್ ಮೂಲಗಳು ಹೇಳಿವೆ.

Ad Widget
Click to comment

Leave a Reply

ವೈರಲ್‌ ನ್ಯೂಸ್‌

ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ

Published

on



Ad Widget

Ad Widget

Ad Widget

Ad Widget

ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

Ad Widget

Ad Widget

Ad Widget

Ad Widget


ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget


ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.

Ad Widget

Ad Widget <> Ad Widget


ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.



Ad Widget


ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.

Ad Widget

Ad Widget


ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.


2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.

Ad Widget
Continue Reading

ಅಂತರ ರಾಜ್ಯ

Punjab-ಪಂಜಾಬ್ ವಿವಾಹದಲ್ಲಿ ವಧುವಿನ ಮೇಲೆ 8 ಕೋಟಿ ರೂ. ನೋಟುಗಳ ಮಳೆ: ಹಬ್ಬಿದ್ದ ವದಂತಿಗೆ ಬಿತ್ತು ಬ್ರೇಕ್; ಅಸಲಿ ಮೊತ್ತ ಎಷ್ಟು ಗೊತ್ತೇ?

Published

on



Ad Widget

Ad Widget

Ad Widget

Ad Widget

ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget

Ad Widget

ಅಮೃತಸರ, ಫೆ.19: ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಘಟನೆಯ ಹಿನ್ನೆಲೆ:
ರಾಜಮನೆತನದ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಸಂಭ್ರಮಾಚರಣೆಯ ಭಾಗವಾಗಿ ನೋಟುಗಳನ್ನು ಗಾಳಿಯಲ್ಲಿ ತೂರಿ ಸುರಿಮಳೆಗೈಯಲಾಗಿತ್ತು. ಅತಿಥಿಗಳು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಇದನ್ನು ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದರೆ, ಇನ್ನು ಕೆಲವರು ಇದು ಅಲ್ಲಿನ ಸಂಪ್ರದಾಯ ಎಂದು ಅಭಿಪ್ರಾಯಪಟ್ಟಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.

Ad Widget

Ad Widget <> Ad Widget

ಅಸಲಿ ಸತ್ಯ ಬಹಿರಂಗ:
ಆದರೆ, ಈ ಹರಡಿದ್ದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಈಗ ತಿಳಿದುಬಂದಿದೆ. ಮದುವೆಯ ಕಾರ್ಯಕ್ರಮದಲ್ಲಿದ್ದ ಡಿಜೆ ಆಪರೇಟರ್ ಈ ಕುರಿತು ಅಸಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ ಅಲ್ಲಿ ಸುರಿಸಿದ್ದು 8 ಕೋಟಿ ರೂಪಾಯಿಗಳನ್ನಲ್ಲ, ಬದಲಿಗೆ ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ!



Ad Widget

ಹಣದ ರಾಶಿ ದೊಡ್ಡದಾಗಿ ಕಾಣಲು ಕಾರಣವೆಂದರೆ, ಅಲ್ಲಿ ಬಳಸಲಾದ ಬಹುಪಾಲು ನೋಟುಗಳು 10 ರೂಪಾಯಿ ಮುಖಬೆಲೆಯದ್ದಾಗಿದ್ದವು. ಕಡಿಮೆ ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ನೋಡುವವರಿಗೆ ಅದು ಕೋಟ್ಯಂತರ ರೂಪಾಯಿಯಂತೆ ಭಾಸವಾಗಿತ್ತು. “ಇದು ಕುಟುಂಬದ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಮತ್ತು ಸ್ಥಳೀಯ ಆಚರಣೆಯ ಭಾಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.

Ad Widget

Ad Widget

ಒಟ್ಟಿನಲ್ಲಿ, 8 ಕೋಟಿ ರೂಪಾಯಿ ಎಂದು ಹಬ್ಬಿದ್ದ ಸುದ್ದಿ ಕೇವಲ ಅತಿಶಯೋಕ್ತಿಯಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ವಿವಾದಕ್ಕೆ ತೆರೆ ಬಿದ್ದಿದೆ.

Ad Widget
Continue Reading

ವೈರಲ್‌ ನ್ಯೂಸ್‌

ಚೀನಾದಲ್ಲಿ ಇತಿಹಾಸ ನಿರ್ಮಾಣ : ಗಂಟೆಗೆ 700ಕಿಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Published

on



Ad Widget

Ad Widget

Ad Widget

Ad Widget

ಬೀಜಿಂಗ್‌: ನವೀನ ತಂತ್ರಜ್ಞಾನಗಳಿಂದ ಜಗತ್ತನ್ನು ನಿಬ್ಬೆರಗುಗೊಳಿಸುವ ಚೀನಾ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದೆ. ಗಂಟೆಗೆ 700 ಕಿ.ಮೀ ಸಂಚರಿಸುವ ಸೂಪರ್‌ ಕಂಡಕ್ಟಿವ್‌ ಮ್ಯಾಗ್ಲೆವ್‌ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಯನ್ನು ಚೀನಾ ಯಶಸ್ವಿಯಾಗಿ ನಡೆಸಿದೆ. ಈ ವೇಗ ನೂತನ ವಿಶ್ವದಾಖಲೆಯಾಗಿದೆ. ಒಂದು ವೇಳೆ ಈ ರೈಲು ನಿಜರೂಪ ಪಡೆದು ಹಳಿ ಮೇಲೆ ಓಡಿದರೆ ಅದು ವಿಶ್ವದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Ad Widget

Ad Widget

Ad Widget

Ad Widget

ಹಾಲಿ ಚೀನಾದಲ್ಲಿ ಇರುವ ಶಾಂಘೈ ಮ್ಲಾಗ್ಲೇವ್‌ ಗಂಟೆಗೆ 460 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಶ್ವದ ಅತಿವೇಗದ ರೈಲು ಎಂಬ ಹಿರಿಮೆ ಹೊಂದಿದೆ. ಪರೀಕ್ಷಿಸಿದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯ
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯವು 700 ಕಿ.ಮೀ/ ಗಂಟೆಗೆ ಸಂಚರಿಸುವ ರೈಲಿನ ಮಾದರಿಯನ್ನು ಪರೀಕ್ಷಿಸಿದೆ. 400 ಮೀ.ಉದ್ದ ಮ್ಯಾಗ್ಲೆವ್‌ ಹಳಿಯ ಮೇಲೆ 1000 ಕೆಜಿ ತೂಕದ ರೈಲಿನ ಮಾದರಿಯನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆ ವೇಳೆ ಗಂಟೆಗೆ 700 ಕಿ.ಮೀ ದೂರ ಸಂಚರಿಸಬೇಕಾದ ವೇಗವನ್ನು ರೈಲು ಕೇವಲ 2 ಸೆಕೆಂಡ್‌ಗಳಲ್ಲೇ ಸಾಧಿಸುವ ಮೂಲಕ, ಯೋಜನೆಯ ಕಾರ್ಯಸಾಧು ಬಗ್ಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದು ಇದುವರೆಗೆ ಪರೀಕ್ಷಿಸಲ್ಪಟ್ಟ ಅತ್ಯಂತ ವೇಗದ ಸೂಪರ್‌ ಕಂಡಕ್ಟಿಂಗ್‌ ಮ್ಯಾಗ್ಲೆವ್‌ ರೈಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು, ಇದೇ ವರ್ಷದ ಜನವರಿಯಲ್ಲಿ ಇದೇ ಹಳಿ ಮೇಲೆ 648 ಕಿ.ಮೀ/ ಗಂಟೆ ಸಂಚಾರದ ಪರೀಕ್ಷೆ ನಡೆಸಿತ್ತು. ಇದೀಗ ಆ ವೇಗ 700 ಕಿ.ಮೀಗೆ ಹೆಚ್ಚಿದೆ. ಮ್ಯಾಗ್ಲೇವ್‌ ತಂತ್ರಜ್ಞಾನದ ರೈಲುಗಳಿಗೆ ಚಕ್ರ ಇರುವುದಿಲ್ಲ. ಬದಲಾಗಿ ಅವು ಹಳಿ ಮತ್ತು ರೈಲಿನ ನಡುವೆ ಉತ್ಪತ್ತಿಯಾಗುವ ಅಯಂಸ್ಕಾತೀಯ ವಲಯದಲ್ಲಿ ಗಾಳಿಯಲ್ಲೇ ತೇಲಿಕೊಂಡು ಮುಂದೆ ಸಾಗುತ್ತದೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading