Connect with us

ವೈರಲ್‌ ನ್ಯೂಸ್‌

Nagini dance-ಕೆಸರು ಗದ್ದೆಯಲ್ಲಿ ದಂಪತಿಗಳ ನಾಗಿನಿ ಡ್ಯಾನ್ಸ್‌!

Published

on



Ad Widget

Ad Widget

Ad Widget

Ad Widget

ಜನರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹಲವು ಬಗೆಯ ರೀಲ್ಸ್‌ಗಳನ್ನ ಮಾಡಿ ಹರಿಬಿಡುತ್ತಾರೆ. ಈ ರೀಲ್ಸ್ ಮೂಲಕ ಅನೇಕ ಪ್ರತಿಭೆಗಳು ಹೊರಗೆ ಬರುತ್ತವೆ. ಇದೀಗ ದಂಪತಿಯ ಅಂತಹದೊಂದು ಪ್ರತಿಭೆ ಹೊರಗೆ ಬಂದಿದೆ. ಇನ್ನೇನು ನಾಗರಪಂಚಮಿ ಹಬ್ಬ ಹತ್ತಿರ ಬರುತ್ತಿದೆ. ಜನರು ನಾಗದೇವರನ್ನು ನೆನೆದು ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಈ ಸಮಯದಲ್ಲಿ ಇದೀಗ ದಂಪತಿ ನಾಗಿನಿ ಡ್ಯಾನ್ಸ್ ಮೂಲಕ ಜನರಿಗೆ ನಾಗದೇವರ ದರ್ಶನ ನೀಡಿದ್ದಾರೆ. ಅವರ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರ ಡ್ಯಾನ್ಸ್ ವೀಕ್ಷಕರ ಮುಖದಲ್ಲಿ ನಗುವನ್ನು ಮೂಡಿಸಿದೆ.

Ad Widget

Ad Widget

Ad Widget

Ad Widget

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ, ದಂಪತಿ ನೀರಿನಿಂದ ತುಂಬಿರುವ ಹೊಲದಲ್ಲಿ ಹಾವಿನಂತಹ ಚಲನೆಗಳಿಂದ ಸ್ಫೂರ್ತಿ ಪಡೆದ ನಾಗಿನ್ ಡ್ಯಾನ್ಸ್ ಅನ್ನು ಪ್ರದರ್ಶಿಸಿದ್ದಾರೆ. ಅವರಿಬ್ಬರು ಹೊಲದಲ್ಲಿನ ಕೆಸರಿನಲ್ಲಿ ಮಲಗಿಕೊಂಡು, ನಂತರ ನಿಂತು ಹಾವಿನಂತೆ ಬಳಕುತ್ತಾ ನೃತ್ಯ ಮಾಡಿದ್ದಾರೆ. ಇಲ್ಲಿ ಮಹಿಳೆ ರೊಮ್ಯಾಂಟಿಕ್ ಭಂಗಿಗಳನ್ನು ನೀಡಿದ್ದಾಳೆ. ಆ ಹೊಲದಲ್ಲಿ ಕೆಸರೇ ತುಂಬಿರುವುದರಿಂದ ದಂಪತಿಯ ಬಟ್ಟೆ, ಮೈ ಕೇಸರಿನಿಂದ ಬಳಿದುಕೊಂಡಿದೆ. ಈ ದೃಶ್ಯವು ಅನೇಕ ವೀಕ್ಷಕರನ್ನು ರಂಜಿಸಿದೆ ಮತ್ತು ಗೊಂದಲಕ್ಕೀಡು ಮಾಡಿದೆ.

Ad Widget

Ad Widget

Ad Widget alt="Ad Widget"/>

Ad Widget

ವಿನಯ್ ವಿಕೆ 9351 ಎಂಬ ಬಳಕೆದಾರರು ಯೂಟ್ಯೂಬ್‍ನಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಶೀಘ್ರದಲ್ಲೇ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಲೈಕ್‌ಗಳು ಮತ್ತು ವೀಕ್ಷಣೆಗಳ ಹಸಿವು ಜನರನ್ನು ಹುಚ್ಚರನ್ನಾಗಿ ಮಾಡುತ್ತಿದೆ” ಎಂದು ಒಬ್ಬ ವೀಕ್ಷಕರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ನಾಗಿನ್ ಈ ರೀತಿ ನೃತ್ಯ ಮಾಡುತ್ತಾರೆಯೇ” ಎಂದು ಪ್ರಶ್ನಿಸಿದ್ದಾರೆ.

Ad Widget

Ad Widget <> Ad Widget

ಸಾಮಾನ್ಯವಾಗಿ ಜನರು ಕೆಸರು ಕಾಲಿಗೆ ತಗುಲಿದರೆ ಅದನ್ನು ಕಂಡು ಅಸಹ್ಯಪಟ್ಟುಕೊಂಡು ಬೇಗನೆ ಹೋಗಿ ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಅಂತಹದರಲ್ಲಿ ಈ ದಂಪತಿ ಕೆಸರು ಗದ್ದೆಯಲ್ಲೇ ಬಿದ್ದು ಉರುಳಾಡುತ್ತಿದ್ದಾರೆ. ಇದನ್ನು ನೋಡಿದರೆ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಜನರು ಎಷ್ಟು ದೂರ ಹೋಗುತ್ತಾರೆ ಮತ್ತು ಯಾವ ಕೆಲಸಕ್ಕೂ ಮುಂದಾಗುತ್ತಾರೆ ಎಂಬುದನ್ನು ಎತ್ತಿ ತೋರಿಸುತ್ತದೆ. ಕೆಲವು ವೀಕ್ಷಕರು ವಿಡಿಯೊವನ್ನು ಮನರಂಜನೆಯಾಗಿ ಕಂಡುಕೊಂಡರೆ, ಇತರರು ಆನ್‍ಲೈನ್‍ ಖ್ಯಾತಿಗಾಗಿ ಜನರು ಎಷ್ಟು ದೂರ ಹೋಗಬಹುದು ಎಂಬ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.



Ad Widget
Ad Widget
Click to comment

Leave a Reply

ವೈರಲ್‌ ನ್ಯೂಸ್‌

ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ

Published

on



Ad Widget

Ad Widget

Ad Widget

Ad Widget

ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

Ad Widget

Ad Widget

Ad Widget

Ad Widget


ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.

Ad Widget

Ad Widget

Ad Widget alt="Ad Widget"/>

Ad Widget


ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.

Ad Widget

Ad Widget <> Ad Widget


ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.



Ad Widget


ನಿರೂಪಕಿ ಹಾಗೂ ವಾಯ್ಸ್‌ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್‌ಓವರ್‌ನ ವಿಶೇಷತೆಯಾಗಿದೆ.

Ad Widget

Ad Widget


ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್‌ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.


2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.

Ad Widget
Continue Reading

ಅಂತರ ರಾಜ್ಯ

Punjab-ಪಂಜಾಬ್ ವಿವಾಹದಲ್ಲಿ ವಧುವಿನ ಮೇಲೆ 8 ಕೋಟಿ ರೂ. ನೋಟುಗಳ ಮಳೆ: ಹಬ್ಬಿದ್ದ ವದಂತಿಗೆ ಬಿತ್ತು ಬ್ರೇಕ್; ಅಸಲಿ ಮೊತ್ತ ಎಷ್ಟು ಗೊತ್ತೇ?

Published

on



Ad Widget

Ad Widget

Ad Widget

Ad Widget

ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget

Ad Widget

ಅಮೃತಸರ, ಫೆ.19: ಪಂಜಾಬ್‌ನ ತರಣ್ ತರಣ್‌ನಲ್ಲಿ ಇತ್ತೀಚೆಗೆ ನಡೆದ ಅದ್ಧೂರಿ ವಿವಾಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮದುವೆಯ ಸಂಭ್ರಮದಲ್ಲಿ ವರ ಮತ್ತು ವಧುವಿನ ಮೇಲೆ ಬರೋಬ್ಬರಿ 8 ಕೋಟಿ ರೂಪಾಯಿ ಮೌಲ್ಯದ ನೋಟುಗಳ ಸುರಿಮಳೆಗೈಯಲಾಗಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು.

Ad Widget

Ad Widget

Ad Widget alt="Ad Widget"/>

Ad Widget

ಘಟನೆಯ ಹಿನ್ನೆಲೆ:
ರಾಜಮನೆತನದ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಸಂಭ್ರಮಾಚರಣೆಯ ಭಾಗವಾಗಿ ನೋಟುಗಳನ್ನು ಗಾಳಿಯಲ್ಲಿ ತೂರಿ ಸುರಿಮಳೆಗೈಯಲಾಗಿತ್ತು. ಅತಿಥಿಗಳು ಈ ದೃಶ್ಯವನ್ನು ಕಂಡು ಆಶ್ಚರ್ಯಚಕಿತರಾಗಿದ್ದರು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಇದನ್ನು ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದರೆ, ಇನ್ನು ಕೆಲವರು ಇದು ಅಲ್ಲಿನ ಸಂಪ್ರದಾಯ ಎಂದು ಅಭಿಪ್ರಾಯಪಟ್ಟಿದ್ದರು. ಕೋಟ್ಯಂತರ ರೂಪಾಯಿ ಹಣವನ್ನು ಹೀಗೆ ಪೋಲು ಮಾಡಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು.

Ad Widget

Ad Widget <> Ad Widget

ಅಸಲಿ ಸತ್ಯ ಬಹಿರಂಗ:
ಆದರೆ, ಈ ಹರಡಿದ್ದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂಬುದು ಈಗ ತಿಳಿದುಬಂದಿದೆ. ಮದುವೆಯ ಕಾರ್ಯಕ್ರಮದಲ್ಲಿದ್ದ ಡಿಜೆ ಆಪರೇಟರ್ ಈ ಕುರಿತು ಅಸಲಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ವಾಸ್ತವವಾಗಿ ಅಲ್ಲಿ ಸುರಿಸಿದ್ದು 8 ಕೋಟಿ ರೂಪಾಯಿಗಳನ್ನಲ್ಲ, ಬದಲಿಗೆ ಕೇವಲ 3 ಲಕ್ಷ ರೂಪಾಯಿಗಳನ್ನು ಮಾತ್ರ!



Ad Widget

ಹಣದ ರಾಶಿ ದೊಡ್ಡದಾಗಿ ಕಾಣಲು ಕಾರಣವೆಂದರೆ, ಅಲ್ಲಿ ಬಳಸಲಾದ ಬಹುಪಾಲು ನೋಟುಗಳು 10 ರೂಪಾಯಿ ಮುಖಬೆಲೆಯದ್ದಾಗಿದ್ದವು. ಕಡಿಮೆ ಮುಖಬೆಲೆಯ ನೋಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ, ನೋಡುವವರಿಗೆ ಅದು ಕೋಟ್ಯಂತರ ರೂಪಾಯಿಯಂತೆ ಭಾಸವಾಗಿತ್ತು. “ಇದು ಕುಟುಂಬದ ಸಂತೋಷವನ್ನು ವ್ಯಕ್ತಪಡಿಸುವ ಒಂದು ವಿಧಾನ ಮತ್ತು ಸ್ಥಳೀಯ ಆಚರಣೆಯ ಭಾಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿದೆ.

Ad Widget

Ad Widget

ಒಟ್ಟಿನಲ್ಲಿ, 8 ಕೋಟಿ ರೂಪಾಯಿ ಎಂದು ಹಬ್ಬಿದ್ದ ಸುದ್ದಿ ಕೇವಲ ಅತಿಶಯೋಕ್ತಿಯಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ವಿವಾದಕ್ಕೆ ತೆರೆ ಬಿದ್ದಿದೆ.

Ad Widget
Continue Reading

ವೈರಲ್‌ ನ್ಯೂಸ್‌

ಚೀನಾದಲ್ಲಿ ಇತಿಹಾಸ ನಿರ್ಮಾಣ : ಗಂಟೆಗೆ 700ಕಿಮೀ ವೇಗದಲ್ಲಿ ಸಂಚರಿಸುವ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

Published

on



Ad Widget

Ad Widget

Ad Widget

Ad Widget

ಬೀಜಿಂಗ್‌: ನವೀನ ತಂತ್ರಜ್ಞಾನಗಳಿಂದ ಜಗತ್ತನ್ನು ನಿಬ್ಬೆರಗುಗೊಳಿಸುವ ಚೀನಾ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಿದೆ. ಗಂಟೆಗೆ 700 ಕಿ.ಮೀ ಸಂಚರಿಸುವ ಸೂಪರ್‌ ಕಂಡಕ್ಟಿವ್‌ ಮ್ಯಾಗ್ಲೆವ್‌ ರೈಲಿನ ಮಾದರಿಯ ಪ್ರಾಯೋಗಿಕ ಪರೀಕ್ಷೆಯನ್ನು ಚೀನಾ ಯಶಸ್ವಿಯಾಗಿ ನಡೆಸಿದೆ. ಈ ವೇಗ ನೂತನ ವಿಶ್ವದಾಖಲೆಯಾಗಿದೆ. ಒಂದು ವೇಳೆ ಈ ರೈಲು ನಿಜರೂಪ ಪಡೆದು ಹಳಿ ಮೇಲೆ ಓಡಿದರೆ ಅದು ವಿಶ್ವದ ಅತ್ಯಂತ ವೇಗದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Ad Widget

Ad Widget

Ad Widget

Ad Widget

ಹಾಲಿ ಚೀನಾದಲ್ಲಿ ಇರುವ ಶಾಂಘೈ ಮ್ಲಾಗ್ಲೇವ್‌ ಗಂಟೆಗೆ 460 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವಿಶ್ವದ ಅತಿವೇಗದ ರೈಲು ಎಂಬ ಹಿರಿಮೆ ಹೊಂದಿದೆ. ಪರೀಕ್ಷಿಸಿದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯ
ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯವು 700 ಕಿ.ಮೀ/ ಗಂಟೆಗೆ ಸಂಚರಿಸುವ ರೈಲಿನ ಮಾದರಿಯನ್ನು ಪರೀಕ್ಷಿಸಿದೆ. 400 ಮೀ.ಉದ್ದ ಮ್ಯಾಗ್ಲೆವ್‌ ಹಳಿಯ ಮೇಲೆ 1000 ಕೆಜಿ ತೂಕದ ರೈಲಿನ ಮಾದರಿಯನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆ ವೇಳೆ ಗಂಟೆಗೆ 700 ಕಿ.ಮೀ ದೂರ ಸಂಚರಿಸಬೇಕಾದ ವೇಗವನ್ನು ರೈಲು ಕೇವಲ 2 ಸೆಕೆಂಡ್‌ಗಳಲ್ಲೇ ಸಾಧಿಸುವ ಮೂಲಕ, ಯೋಜನೆಯ ಕಾರ್ಯಸಾಧು ಬಗ್ಗೆ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಇದು ಇದುವರೆಗೆ ಪರೀಕ್ಷಿಸಲ್ಪಟ್ಟ ಅತ್ಯಂತ ವೇಗದ ಸೂಪರ್‌ ಕಂಡಕ್ಟಿಂಗ್‌ ಮ್ಯಾಗ್ಲೆವ್‌ ರೈಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು
ಸಂಶೋಧನಾ ತಂಡವು ಒಂದು ದಶಕದಿಂದ ಈ ಯೋಜನೆಗಾಗಿ ಶ್ರಮಿಸುತ್ತಿತ್ತು, ಇದೇ ವರ್ಷದ ಜನವರಿಯಲ್ಲಿ ಇದೇ ಹಳಿ ಮೇಲೆ 648 ಕಿ.ಮೀ/ ಗಂಟೆ ಸಂಚಾರದ ಪರೀಕ್ಷೆ ನಡೆಸಿತ್ತು. ಇದೀಗ ಆ ವೇಗ 700 ಕಿ.ಮೀಗೆ ಹೆಚ್ಚಿದೆ. ಮ್ಯಾಗ್ಲೇವ್‌ ತಂತ್ರಜ್ಞಾನದ ರೈಲುಗಳಿಗೆ ಚಕ್ರ ಇರುವುದಿಲ್ಲ. ಬದಲಾಗಿ ಅವು ಹಳಿ ಮತ್ತು ರೈಲಿನ ನಡುವೆ ಉತ್ಪತ್ತಿಯಾಗುವ ಅಯಂಸ್ಕಾತೀಯ ವಲಯದಲ್ಲಿ ಗಾಳಿಯಲ್ಲೇ ತೇಲಿಕೊಂಡು ಮುಂದೆ ಸಾಗುತ್ತದೆ.

Ad Widget

Ad Widget <> Ad Widget

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading