Connect with us

ದಕ್ಷಿಣ ಕನ್ನಡ

ಫೋಟೊ ಲೀಕ್‌ ಬಿಜೆಪಿಯವರದ್ದೆ ಕೃತ್ಯ – ಟಿಕೆಟ್‌ ಗಾಗಿ  ಒಕ್ಕಲಿಗ ಸಮುದಾಯದ ನಿಯೋಗ ಸ್ವಾಮೀಜಿ  ಬಳಿ ತೆರಳಿದ ತಕ್ಷಣ  ಚಿತ್ರ ವೈರಲ್‌ ಆಗಿದೆ:  ಅಮಳ ರಾಮಚಂದ್ರ

Published

on



Ad Widget

Ad Widget

Ad Widget

Ad Widget

ಪುತ್ತೂರು:  ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್‌ ಆದ  ಆಕ್ಷೇಪಾರ್ಹ ಚಿತ್ರದ (Viral photo )  ಸತ್ಯಾಸತ್ಯತೆ  ಕ್ಷೇತ್ರದ ಜನತೆ ಮುಂದೆ ಬಹಿರಂಗವಾಗಬೇಕು. ಶಾಸಕರು ಎಲ್ಲ ಪಕ್ಷದ ಆಸ್ತಿಯಾಗಿದ್ದು ಅವರ ಮೇಲೆ ಬಂದ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಪ್ರಥಮ ಬಾರಿಗೆ ಇಲ್ಲಿನ ಜನ ಪ್ರತಿನಿಧಿಯೊಬ್ಬರ ಕುರಿತಾಗಿ ಈ ರೀತಿಯ ಗುರುತರ ಆರೋಪ ಬಂದಿದ್ದು ಇದು ಪುತ್ತೂರಿನ ಮಾನ ಹಾಗೂ ಗೌರವದ ಪ್ರಶ್ನೆಯೂ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಅಮಳ ರಾಮಚಂದ್ರ (Amala Ramachandra) ತಿಳಿಸಿದ್ದಾರೆ

Ad Widget

Ad Widget

Ad Widget

Ad Widget

ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು “ ಫೊಟೊ ವೈರಲ್‌ ಹಿಂದೆ ಬಿಜೆಪಿಯವರೇ ಇರುವುದು ಸ್ಪಷ್ಟ . ಶಾಶಕರಿಗೆ ಟಿಕೆಟ್‌ ತಪ್ಪಿಸಬೇಕು ಎಂಬ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ. ಪೋಟೋ ವೈರಲ್‌ ಆದ ಸಮಯವನ್ನು ಸೂಕ್ಷ್ಮವಾಗಿ ಗಮನಿಸಿದರೇ ಈ ಸಂಗತಿಯ ಅರಿವಾಗುತ್ತದೆ. ಒಕ್ಕಲಿಗ ಸಮುದಾಯದ ನಿಯೋಗವೊಂದು ಇವರಿಗೆ ಟಿಕೆಟ್ ನೀಡಬೇಕೆಂದು ಸ್ವಾಮೀಜಿಯ ಬಳಿಗೆ ತೆರಳಿದ ಕೆಲವೇ ಗಂಟೆಯಲ್ಲಿ ಚಿತ್ರ ಬಿತ್ತರವಾಗಿರುವುದನ್ನು ಗಮನಿಸಿದರೆ ಟಿಕೆಟ್ ತಪ್ಪಿಸುವ ಉದ್ದೇಶದಿಂದಲೇ ಈ ಕೃತ್ಯ ಮಾಡಲಾಗಿದೆ ಎಂದು ಸ್ಪಷ್ಟವಾಗುತ್ತದೆ.  ನಿಯೋಗ ಹೋದ ಮೇಲೆ ಹಾಗೂ ಟಿಕೆಟ್ ಘೋಷಣೆಯ ಯಾಗುವ ಮೊದಲು ಚಿತ್ರ ಹೊರ ಬಂದಿರುವುದನ್ನು ಗಮನಿಸಿದರೆ, ಪಕ್ಷದ ಮೇಲಿನ ಕೋಪದ ಬದಲು ವ್ಯಕ್ತಿ ಮೇಲಿನ ವೈಯಕ್ತಿಕ ದ್ವೇಷವೆಂಬುದು ಸ್ಪಷ್ಟವಾಗುತ್ತದೆ” ಎಂದರು.

Ad Widget

Ad Widget

Ad Widget alt="Ad Widget"/>

Ad Widget

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಕಚ್ಚೆ, ಕೈ, ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೃತ್ಯ ಬೆಳಕಿಗೆ ಬಂದು ದಿನಗಳು ಉರುಳಿದರೂ, ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ತನಿಖೆ ಆಗಬಾರದೆಂಬುದೇ ಬಿಜೆಪಿ ಹಿತಾಸಕ್ತಿಯಾಗಿದೆ. ಪುತ್ತೂರಿನ ಗೌರವದ ಪ್ರಶ್ನೆಯಾಗಿರುವ ಹಿನ್ನಲೆಯಲ್ಲಿ ಪೊಲೀಸರು ಘಟನೆಯನ್ನು ಯಾವುದೇ ಒತ್ತಡವಿಲ್ಲದೆ ನಿಷ್ಪಕ್ಷಪಾತದಿಂದ ತನಿಖೆಯನ್ನು ನಡೆಸಬೇಕು. ಕೃತ್ಯ ಬೆಳಕಿಗೆ ಬಂದು 6 ದಿನ ಕಳೆದರೂ ಪೊಲೀಸ್‌ ಇಲಾಖೆ ಷಡ್ಯಂತ್ರ ಬೇಧಿಸುವ ಕಾರ್ಯ ಮಾಡಿಲ್ಲ ಎಂದರು.   

Ad Widget

Ad Widget <> Ad Widget

ಪುತ್ತೂರಿನ ಆಕ್ಷೇಪಾರ್ಹ ಚಿತ್ರ ವೈರಲ್ ಆಗಿರುವುದರ ಹಿಂದೆ ಬಿಜೆಪಿಯವರ ಕೈವಾಡ ಇರುವುದು ಸ್ಪಷ್ಟ. ಆರು ತಿಂಗಳ ಹಿಂದಿನಿಂದಲೂ ಈ ವಿಚಾರ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿತ್ತು. ಕೆ.ಡಿ.ಪಿ. ಸದಸ್ಯರೊಬ್ಬರ ದೂರವಾಣಿ ಸಂಭಾಷಣೆಯ ಧ್ವನಿಸುರುಳಿಯಲ್ಲಿ ಕೂಡಾ ಸಿಡಿ ವಿಚಾರ ಪ್ರಸ್ತಾಪವಾಗಿದ್ದಾಗಲೇ ಕಾಂಗ್ರೆಸ್ ಈ ವಿಚಾರವನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸುವ ಕಾರ್ಯ ಮಾಡಿತ್ತು. ಎಂದು ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.



Ad Widget

ಸ್ತ್ರೀಯರನ್ನು ವೇದಿಕೆಯಲ್ಲಿ ಮಾತೆಯರೆಂದು ಹೇಳುವ ಬಿಜೆಪಿಯವರು ಸಮಸ್ಯೆಗಳ ಪರಿಹಾರಕ್ಕೆ ಬಂದ ಮಹಿಳೆಯರನ್ನು ದುರ್ಬಳಕೆ ಮಾಡುವ ಕಾರ್ಯ ಜನಪ್ರತಿನಿಧಿಗಳಿಂದ ನಡೆಯುತ್ತಿದೆ. ನಕಲಿ ಹಿಂದುತ್ವದ ಮೂಲಕ ಅಧಿಕಾರ ಗಳಿಸಿ, ಅವ್ಯವಹಾರಗಳ ಮೂಲಕ ಹಣವನ್ನು ಸಂಪಾಧಿಸಿ ಮಜಾ ಮಾಡುವ ಕಾರ್ಯವನ್ನು ಬಿಜೆಪಿಯ ವ್ಯಕ್ತಿಗಳು ಮಾಡುತ್ತಿದ್ದಾರೆ ಎಂಬ ಆಪಾದನೆ ಈಗ ಸತ್ಯವಾಗಿದೆ. ಜನಪ್ರತಿನಿಧಿಗಳಾದ ಉದ್ದೇಶವನ್ನು ಮರೆತು, ಮಜಾ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳ ಕುಂಟಿತಕ್ಕೆ ಕಾರಣವಾಗುತ್ತಿದ್ದಾರೆ. ಕಾಗೆ ಹಿಕ್ಕೆ ಹಾಕಿದರೂ ವಿಪಕ್ಷದವರನ್ನು ಬೊಟ್ಟು ಮಾಡುತ್ತಿದ್ದವರು ಚಿತ್ರದ ವಿಚಾರದಲ್ಲಿ ಕಾಂಗ್ರೆಸ್ ಕಡೆ ಬೊಟ್ಟು ಮಾಡಿಲ್ಲ. ನಮ್ಮಲ್ಲಿನ ರಾಜಕೀಯ ವಿರೋಧಿಗಳು ಮಾಡಿದ್ದು ಎಂದು ಹೇಳಿವ ಮೂಲಕ ಅವರ ಪಕ್ಷದವರ ಕಡೆಗೇ ಬೆರಳು ಮಾಡುವ ಕಾರ್ಯವನ್ನು ಶಾಸಕರು ಮಾಡುತ್ತಿದ್ದಾರೆ ಎಂದರು.

Ad Widget

Ad Widget

ಈಗ ಬಂದಿರುವ ಟ್ರೈಲರ್‌  ʼಪಿಕ್ಚರ್‌ ಅಭಿ ಭಿ  ಬಾಕಿ ಹೇʼ   ಎಂಬ ಮಾತು ಕೇಳಿ ಬರುತ್ತಿದೆ. ಚಿತ್ರ ಸತ್ಯವಾಗಿದ್ದರೂ, ಸುಳ್ಳಾಗಿದ್ದರೂ ಬಿಜೆಪಿ ಬಂಡವಾಳವನ್ನು ಇದು  ಬಯಲು ಮಾಡಿದೆ. ಘಟನೆ ಸತ್ಯವಾಗಿದ್ದರೆ ಶಾಸಕರು, ಸುಳ್ಳಾಗಿದ್ದಾರೆ ಬಿಜೆಪಿ ಬೆಲೆ ತೆರಬೇಕಾಗುತ್ತದೆ. ಪ್ರತೀ ಬಾರಿ ಶಾಸಕರನ್ನು ಸರ್ಥಿಸುತ್ತಿದ್ದವರು, ಈಗ ಮೌನವಾಗಿರುವುದು ನೋಡಿದರೆ ಅವರೆಲ್ಲರೂ ಈ ಕೃತ್ಯದಲ್ಲಿ ಭಾಗಿಯಾರುವಂತೆ ಕಾಣಿಸುತ್ತಿದೆ. ಸ್ತ್ರೀಯ ಮಾನ ಖಂಡನೆ ಮಾಡುವ ಕಾರ್ಯವನ್ನು ಮಾಡಿರುವುದು ಮಹಿಳೆಯರ ಮೇಲೆ ಗೌರವವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡರಾದ ಜಯಂತಿ ಬಲ್ನಾಡು, ಮಹಮ್ಮದ್ ರಿಯಾಝ್, ಮಹಾಲಿಂಗ ನಾಯ್ಕ ಉಪಸ್ಥಿತರಿದ್ದರು.

Ad Widget
Click to comment

Leave a Reply

ಪುತ್ತೂರು

ಮುಳಿಯ ಶ್ಯಾಮ್ ಭಟ್‌ ನಿಧನ : ‘ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌’ ಅ.6ರಂದು ಮಧ್ಯಾಹ್ನ 2 ಗಂಟೆಯವರೆಗೆ ಶೋರೂಮ್ ಬಂದ್

Published

on



Ad Widget

Ad Widget

Ad Widget

Ad Widget

ಪುತ್ತೂರು, ಅ.5: ಹಿರಿಯ ಚಿನ್ನಾಭರಣ ಉದ್ಯಮಿ ಹಾಗೂ ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಸಂಸ್ಥೆಯ ಮಾಲಕ ಸರಾಫ್‌ ಮುಳಿಯ ಶ್ಯಾಮ್ ಭಟ್‌ (81) ಅವರ ನಿಧನಕ್ಕೆ ಗೌರವ ಸೂಚಿಸಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಪುತ್ತೂರು ಹಾಗೂ ಸುಳ್ಯ ಶೋರೂಂಗಳನ್ನು ಅ.6ರಂದು ಮಧ್ಯಾಹ್ನದವರೆಗೆ ಬಂದ್ ಇರಿಸಲಾಗುವುದು.

Ad Widget

Ad Widget

Ad Widget

Ad Widget

ಚಿನ್ನಾಭರಣ ಉದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿದ್ದ ಶ್ಯಾಮ್ ಭಟ್‌ ಅವರ ಅಗಲಿಕೆಗೆ ಸಂತಾಪ ಸೂಚಿಸುವ ಉದ್ದೇಶದಿಂದ ಶೋರೂಂ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಶ್ಯಾಮ್ ಭಟ್‌ ಅವರು ಅ.4ರಂದು ನಿಧನರಾಗಿದ್ದು, ಅ.6ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

Ad Widget

Ad Widget <> Ad Widget



Ad Widget
Ad Widget
Continue Reading

ಬಿಗ್ ನ್ಯೂಸ್

Puttur Dasara-92ನೇ ವರ್ಷದ ಶಾರದೋತ್ಸವಕ್ಕೆ ಹೊಸ ರೂಪ; ‘ಪುತ್ತೂರು ದಸರಾ’ ನಾಮಾಂಕಿತದಲ್ಲಿ ನವರಾತ್ರಿಯ ವೈಭವದ ಆಚರಣೆ

Published

on



Ad Widget

Ad Widget

Ad Widget

Ad Widget

ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವೈಭವದಿಂದ ನಡೆಯಲಿದೆ.

Ad Widget

Ad Widget <> Ad Widget

ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು 20ಕ್ಕೂ ಅಧಿಕ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಇದರೊಂದಿಗೆ ‘ಪುತ್ತೂರು ದಸರಾ’ ಸಂಪನ್ನಗೊಳ್ಳಲಿದೆ.



Ad Widget

ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ, ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.

Ad Widget

Ad Widget

ಈ ಬಾರಿ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ನಾಮಾಂಕಿತ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಪುತ್ತೂರು ತಾಲೂಕಿನ ದಸರಾ ಮಹೋತ್ಸವವಾಗಿ ರೂಪಿಸುವ ಉದ್ದೇಶವಿದೆ. ಈ ಕುರಿತು ಮೂರು ವರ್ಷಗಳ ಹಿಂದೆಯೇ ಸಮಿತಿಯಲ್ಲಿ ಚಿಂತನೆ ನಡೆದಿತ್ತು ಎಂದು ಅವರು ತಿಳಿಸಿದರು.

ಪುತ್ತೂರಿನಲ್ಲೇ ದಸರಾ ವೈಭವ
ಹಿಂದೆ ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಪುತ್ತೂರಿನ ಜನರು ಮಂಗಳೂರು ಹಾಗೂ ಮಡಿಕೇರಿಗೆ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸೀತಾರಾಮ ರೈ ಹೇಳಿದರು.

ಪುತ್ತೂರಿನಲ್ಲೇ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ವಿಶಾಲ ರೂಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹತ್ತು ದಿನ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ
ಅ.11ರಿಂದ ಆರಂಭವಾಗುವ ಉತ್ಸವದಲ್ಲಿ ನವರಾತ್ರಿ ಪೂಜೆ, ಶ್ರೀ ಶಾರದಾ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚಂಡಿಕಾ ಹೋಮ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರನ್ನು ರಂಜಿಸಲಿವೆ.

ಅ.21ರಂದು ನಡೆಯುವ ಸಮಾರೋಪದಂದು 20ಕ್ಕೂ ಅಧಿಕ ಪ್ರಸಿದ್ಧ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ‘ಪುತ್ತೂರು ದಸರಾ’ ವೈಭವಕ್ಕೆ ತೆರೆ ಬೀಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಸಮಿತಿಯ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ ಪಿ., ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಹಾಗೂ ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.

Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget <> Ad Widget

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕಿಶನ್ ಕೆ ವೈ, ತ್ರಿಶಿಕ್ ಕೆ. ಗೌಡ , ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ, ಅನ್ವಿತ್ ಎಸ್ .ಪಿ, ನಿದೀಶ್ ಶೆಟ್ಟಿ, ಮನ್ವಂತ್ ದ್ವಿತೀಯ ಪಿಯುಸಿ ಪ್ರಣಮ್ ಪಿ ಶೆಟ್ಟಿ ,ಚಿಂತನ್ ಕೆ, ಕೆ ಆರ್ ದಿಶಾಂತ್ ಹಾಗೂ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿನ್ಯಾ ರೈ, ಸೃಷ್ಟಿ ಎಸ್. ಆರ್. ರೈ, ವೀಕ್ಷಾ ಬಿ. ಆರ್, ಧರಣಿ ಕೆ. ಟಿ, ಶ್ರಾವ್ಯ, ಕೆ. ಸುಶಾನಿ, ಸಿ. ಎಸ್. ಚಿನ್ಮಯ್ ಗೌಡ, ಪಾವನಿ ಕೆ. ವಸಿಷ್ಠ, ಸಾನ್ವಿ ಎಸ್, ತನ್ವಿ ದ್ವಿತೀಯ ಪಿಯುಸಿ ಧನ್ವಿ ಎ. ಆರ್ ಭಾಗವಹಿಸಿರುತ್ತಾರೆ.



Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading