ಚಿನ್ನ-ಬೆಳ್ಳಿ ದರ
Gold Rate Today : ಖರೀದಿಗೂ ಮುನ್ನ ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ ಇಲ್ಲಿ ತಿಳಿಯಿರಿ
ಬೆಂಗಳೂರು: ಭಾರತದಲ್ಲಿ ನಿನ್ನೆ ಏರಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆ (Silver Price) ಇಂದು ಏರಿಳಿತವಾಗಿಲ್ಲ. ನಿನ್ನೆ ಸ್ವಲ್ಪ ಅಂದರೆ 110 ರೂಪಾಯಿ ಏರಿತ್ತು. ಬೆಳ್ಳಿಯ ಬೆಲೆ (Silver Price) ನಿನ್ನೆ1,200 ರೂಪಾಯಿ ಇಳಿದಿತ್ತು. ಇಂದು ಕೂಡ ಇದೇ ದರ ಮುಂದುವರಿದಿದೆ. ಯಾವುದೇ ಬದಲಾವಣೆ ಆಗಿಲ್ಲ.
ಚಿನ್ನದ ಬೆಲೆ ಏರಿಳಿತದ ವಿಚಾರಕ್ಕೆ ಬಂದರೆ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ಭಾರತದ ಕರೆನ್ಸಿಯ ಮೌಲ್ಯ ನಿರ್ಣಾಯಕ.
Gold Rate Today : ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ದರ 4675 ಹಾಗೂ 10 ಗ್ರಾಂ ಚಿನ್ನದ ಇಂದು 46,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ ರೂ 5100 ಹಾಗೂ 10 ಗ್ರಾಂ ಗೆ 51,000 ರೂ. ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ 10 ಗ್ರಾಂ ನ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,350 ರೂ. ಮುಂಬೈ- 46,750 ರೂ, ದೆಹಲಿ- 46,900 ರೂ, ಕೊಲ್ಕತ್ತಾ- 46,750 ರೂ, ಬೆಂಗಳೂರು- 46,800 ರೂ, ಹೈದರಾಬಾದ್- 46,750 ರೂ, ಕೇರಳ- 46,750 ರೂ, ಪುಣೆ- 46,780 ರೂ, ಮಂಗಳೂರು- 46,800 ರೂ, ಮೈಸೂರು- 46,800 ರೂ. ಆಗಿದೆ.
ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 51,650 ರೂ, ಮುಂಬೈ- 51,000 ರೂ, ದೆಹಲಿ- 51,150 ರೂ, ಕೊಲ್ಕತ್ತಾ- 51,000 ರೂ, ಬೆಂಗಳೂರು- 51,050 ರೂ, ಹೈದರಾಬಾದ್- 51,000 ರೂ, ಕೇರಳ- 51,000 ರೂ, ಪುಣೆ- 51,030 ರೂ, ಮಂಗಳೂರು- 51,050 ರೂ, ಮೈಸೂರು- 51,050 ರೂ. ಆಗಿದೆ.
ಬೆಳ್ಳಿಯ ದರ ( Silver Price)
ಬೆಳ್ಳಿ ದರ ಕೂಡ ಇಂದು ಏರಿಳಿತವಾಗಿಲ್ಲ. 2 ದಿನಗಳ ಹಿಂದೆ 1 ಕೆಜಿ ಬೆಳ್ಳಿ ಬೆಲೆ 58,500 ರೂ. ಇದ್ದುದು ಇಂದು 57,300 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,500 ರೂ, ಮೈಸೂರು- 62,500 ರೂ., ಮಂಗಳೂರು- 62,500 ರೂ., ಮುಂಬೈ- 57,300 ರೂ, ಚೆನ್ನೈ- 62,500 ರೂ, ದೆಹಲಿ- 57,300 ರೂ, ಹೈದರಾಬಾದ್- 62,500 ರೂ, ಕೊಲ್ಕತ್ತಾ- 57,300 ರೂ. ಆಗಿದೆ.
ನಿಮ್ಮ ನಗರಗಳ ಚಿನ್ನ ಹಾಗೂ ಬೆಳ್ಳಿಯ ದರವನ್ನು ಪ್ರತಿ ದಿನ ಇಲ್ಲಿ ತಿಳಿದುಕೊಳ್ಳಬಹುದು
ಚಿನ್ನ-ಬೆಳ್ಳಿ ದರ
Gold Rate Today -ಅಮೆರಿಕ-ಇರಾನ್ ಸಂಘರ್ಷದ ಎಫೆಕ್ಟ್: 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹1.48 ಲಕ್ಷ; ಬೆಳ್ಳಿಯೂ ದುಬಾರಿ
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ. ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಂಗಳೂರು: ಜಾಗತಿಕ ರಾಜಕೀಯ ಬೆಳವಣಿಗೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಭಾರಿ ಪ್ರಭಾವ ಬೀರಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಹಾಗೂ ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇಂದಿನ ಚಿನ್ನದ ದರ ವಿವರ (ಜೂನ್ 12, 2026):
24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):
ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2,940 ರೂ. ಏರಿಕೆಯಾಗಿದ್ದು, ಒಟ್ಟು ದರ 1,48,580 ರೂ. ತಲುಪಿದೆ. ಪ್ರತಿ ಗ್ರಾಂಗೆ 294 ರೂ. ಹೆಚ್ಚಳವಾಗಿದ್ದು, 14,858 ರೂ. ದಾಖಲಾಗಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):
ಆಭರಣ ಚಿನ್ನದ ಬೆಲೆಯೂ ಏರಿಕೆಯ ಹಾದಿಯಲ್ಲಿದ್ದು, 10 ಗ್ರಾಂಗೆ 2,700 ರೂ. ಹೆಚ್ಚಳವಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ ಬೆಲೆ 1,36,200 ರೂ. ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರದಲ್ಲಿ ಇಂದು ಒಂದೇ ದಿನ 10,000 ರೂ. ಏರಿಕೆಯಾಗಿದ್ದು, ಕೆಜಿ ಬೆಳ್ಳಿಯ ಬೆಲೆ 2,60,000 ರೂ. ನೊಂದಿಗೆ ಹೊಸ ದಾಖಲೆ ಬರೆದಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ಇರಾನ್ ಪಡೆಗಳು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿರುವುದು ಮತ್ತು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವುದು ತೈಲ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ ಒಮಾನ್ ಕರಾವಳಿಯಲ್ಲಿ ಭಾರತದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದಿರುವುದು ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಿದೆ.
ಆದರೆ, ಅಂತಿಮವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಮೇಲಿನ ಯೋಜಿತ ದಾಳಿಯನ್ನು ರದ್ದುಗೊಳಿಸಿ, ಶಾಂತಿ ಸಂಧಾನಕ್ಕೆ ಮುಂದಾಗುವುದಾಗಿ ಹೇಳಿರುವುದು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಸಂಚಲನ ಮೂಡಿಸಿದೆ. ಸುರಕ್ಷಿತ ಹೂಡಿಕೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪುಷ್ಟಿ ನೀಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಆಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್: ಒಂದೇ ದಿನ ಸಾವಿರ ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ..!
ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಂಗಳೂರು: ವಾರದ ಮೊದಲ ದಿನವಾದ ಸೋಮವಾರ ಆಭರಣ ಖರೀದಿದಾರರಿಗೆ ದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿರುವ ಚಿನ್ನದ ಬೆಲೆ, ಇಂದು ಮತ್ತಷ್ಟು ಕುಸಿತ ಕಾಣುವ ಮೂಲಕ ಗ್ರಾಹಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಬೆಲೆ ಇಳಿಕೆಗೆ ಕಾರಣಗಳೇನು?
ಜಾಗತಿಕ ಮಾರುಕಟ್ಟೆಯಲ್ಲಿನ ಏರುಪೇರುಗಳು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿ, ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಹಾಗೂ ಹಣದುಬ್ಬರದ ಅಪಾಯಗಳ ನಡುವೆಯೂ ಹೂಡಿಕೆದಾರರು ಹೆಚ್ಚಿನ ಬಡ್ಡಿದರ ಸಿಗುವ ಸುರಕ್ಷಿತ ಕಡೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಚಿನ್ನದ ಮೇಲಿನ ಬೇಡಿಕೆ ಕುಸಿದು ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವರದಿಯಾಗಿದೆ.
ಇಂದಿನ ಚಿನ್ನದ ಬೆಲೆ ವಿವರ (ಜೂನ್ 8):
24 ಕ್ಯಾರೆಟ್ ಚಿನ್ನ (ಅಪರಂಜಿ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1,040 ರೂಪಾಯಿ ಭಾರಿ ಇಳಿಕೆಯಾಗಿದೆ. ಇದರಿಂದಾಗಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15,169 ರೂಪಾಯಿಗೆ ತಲುಪಿದೆ.
22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 950 ರೂಪಾಯಿ ಕುಸಿತ ಕಂಡಿದೆ. ಇದರೊಂದಿಗೆ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 13,905 ರೂಪಾಯಿಯಾಗಿದೆ.
ಕಳೆದ 10 ದಿನಗಳ ಟ್ರೆಂಡ್:
ಕಳೆದ ಹತ್ತು ದಿನಗಳಿಂದ ಚಿನ್ನದ ಬೆಲೆ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಕಳೆದ 10 ದಿನಗಳಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 5,350 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನದ ಮೇಲೆ 4,900 ರೂಪಾಯಿ ಇಳಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿನ್ನ-ಬೆಳ್ಳಿ ದರ
Gold Rate Today -ಕದನ ವಿರಾಮದ ಬೆನ್ನಲ್ಲೇ ಭಾರಿ ಏರಿಕೆ ಕಂಡ ಚಿನ್ನ ಮತ್ತು ಬೆಳ್ಳಿ ದರ..! ಒಂದೇ ದಿನ ಕೆ.ಜಿ ಬೆಳ್ಳಿಗೆ ₹11,000 ಹೆಚ್ಚಳ..!
ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಭಾರಿ ಏರಿಕೆ ಕಂಡಿವೆ. ಅಖಿಲ ಭಾರತ ಸರಾಫ್ ಅಸೋಸಿಯೇಷನ್ ನೀಡಿರುವ ಮಾಹಿತಿಯಂತೆ, ಬುಧವಾರ ಚಿನಿವಾರ ಪೇಟೆಯಲ್ಲಿ ಈ ಬೆಲೆಬಾಳುವ ಲೋಹಗಳ ಬೆಲೆ ಹೊಸ ದಾಖಲೆ ಬರೆದಿದೆ.
ಬೆಳ್ಳಿಯ ದರದಲ್ಲಿ ಭಾರಿ ಜಿಗಿತ:
ಬೆಳ್ಳಿಯ ದರವು ಪ್ರತಿ ಕೆ.ಜಿಗೆ ಬರೋಬ್ಬರಿ ₹11,000 ರಷ್ಟು ಏರಿಕೆಯಾಗಿದೆ. ಇದರಿಂದಾಗಿ ದೇಶದಲ್ಲಿ ಬೆಳ್ಳಿಯ ಬೆಲೆ ಈಗ ₹2.51 ಲಕ್ಷದ ಗಡಿ ತಲುಪಿದೆ.
ಚಿನ್ನದ ಬೆಲೆ ಎಷ್ಟು ಹೆಚ್ಚಳ?:
ಚಿನ್ನದ ದರದಲ್ಲೂ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದ್ದು, 10 ಗ್ರಾಂ (ಶೇ 99.9ರಷ್ಟು ಪರಿಶುದ್ಧತೆ) ಚಿನ್ನದ ಬೆಲೆಯಲ್ಲಿ ₹3,200 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನದ ಮಾರುಕಟ್ಟೆ ದರವು ₹1,56,400ಕ್ಕೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಹಠಾತ್ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಒಲವು ದೇಶದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಖರೀದಿದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
-
ನಿಧನ ವಾರ್ತೆ16 hours agoUppinangadi-ಉಪ್ಪಿನಂಗಡಿ: ಸೇತುವೆ ಮೇಲೆ ಬೈಕ್, ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ನದಿಯಲ್ಲಿ ಶವವಾಗಿ ಪತ್ತೆ
-
ಬಿಗ್ ನ್ಯೂಸ್22 hours agoBantwal-Big Breaking-ದ.ಕ. ಜಿಲ್ಲೆಯಲ್ಲಿ ಗುಡುಗು-ಮಿಂಚಿನ ಮಳೆ: ಸಿಡಿಲು ಬಡಿದು ಮನೆ ಜಖಂ-ಮಹಿಳೆ ಅಸ್ವಸ್ಥ
-
ಅಪರಾಧ22 hours agoPuttur-ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ 11 ಗೋವುಗಳ ಸಾಗಾಟ; ವಾಹನ ಪತ್ತೆ, ಇಬ್ಬರು ಪರಾರಿ
-
ಅಂತರ ರಾಜ್ಯ21 hours agoMurder-ಆಸ್ತಿಗಾಗಿ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ: ಆಕಸ್ಮಿಕ ಸಾವೆಂದು ನಂಬಿಸಿದ್ದ ಪತ್ನಿ ಅರೆಸ್ಟ್
-
ಸ್ಥಳೀಯ22 hours agoCrop insurance-ಬೆಳೆ ವಿಮೆಯಲ್ಲಿ ಭಾರೀ ಇಳಿಕೆ – ದ.ಕ. ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರು ಶಾಕ್..!; ಬೇಗನೆ ಜಮೆಯಾದರೂ ಪರಿಹಾರ ಮೊತ್ತದಲ್ಲಿ ಭಾರೀ ಇಳಿಕೆ; ಲೆಕ್ಕಾಚಾರ ಬಹಿರಂಗಕ್ಕೆ ಆಗ್ರಹ
-
Uncategorized11 hours ago
ಪುತ್ತೂರು : ಪರವಾನಿಗೆ ರಹಿತವಾಗಿ ಹಿಂಸಾತ್ಮಕವಾಗಿ 11 ಗೋವುಗಳ ಸಾಗಾಟ; ಶಿವಪ್ರಸಾದ್ ಬಂಧನ
-
ನಿಧನ ವಾರ್ತೆ20 hours agoAccident-ಹುತಾತ್ಮ ಸೈನಿಕನ ಮೃತದೇಹ ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಸೈನಿಕನ ಮಗ, ಸಹೋದರ ಸೇರಿ ನಾಲ್ವರು ಸಾವು
-
ರಾಜಕೀಯ16 hours agoPuttur-ಪುತ್ತೂರು: ಅಲ್ಪಸಂಖ್ಯಾತ ಸೇವಾ ಕೇಂದ್ರ ಉದ್ಘಾಟನೆಗೆ ಬಿಜೆಪಿ ಮೋರ್ಚಾದಿಂದ ಆಗ್ರಹ


















