Connect with us

ಬಿಗ್ ನ್ಯೂಸ್

‘Flare Masters’-‘ಫ್ಲಾರ್ ಮಾಸ್ಟರ್ಸ್’ ನಿಂದ ಆಂಧ್ರಪ್ರದೇಶದಲ್ಲಿ 100 ಕೋಟಿ ರೂ. ಹೂಡಿಕೆ : ಬಂಟ್ವಾಳ ಹನೀಫ್ ಸಾರಥ್ಯದ ಸಂಸ್ಥೆ

Published

on



Ad Widget

Ad Widget

Ad Widget

Ad Widget

ಯುಎಇ ಮೂಲದ ಪ್ರಖ್ಯಾತ ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆ ‘ಫ್ಲಾರ್ ಮಾಸ್ಟರ್ಸ್’ (Flour Masters) ಆಂಧ್ರಪ್ರದೇಶದಲ್ಲಿ 100 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ತನ್ನ ಮೊದಲ ವಿದೇಶಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ.

Ad Widget

Ad Widget

Ad Widget

Ad Widget

ವಿಜಯವಾಡ: ಯುಎಇ ಮೂಲದ ಪ್ರಖ್ಯಾತ ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆ ‘ಫ್ಲಾರ್ ಮಾಸ್ಟರ್ಸ್’ (Flour Masters) ಆಂಧ್ರಪ್ರದೇಶದಲ್ಲಿ 100 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ತನ್ನ ಮೊದಲ ವಿದೇಶಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಭಾರತೀಯ ಹಾಗೂ ವಿದೇಶಿ ಮಾರುಕಟ್ಟೆಗಳಿಗೆ ಫ್ಲಾಟ್ ಬ್ರೆಡ್ ಉತ್ಪನ್ನಗಳನ್ನು ಪೂರೈಸುವ ಈ ಘಟಕದಲ್ಲಿ ಹಿಟ್ಟು ಮಿಲ್ಲಿಂಗ್, ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ಅಭಿವೃದ್ಧಿ ಹಾಗೂ ರಫ್ತು ಸೌಲಭ್ಯಗಳು ಒಂದೇ ಕ್ಯಾಂಪಸ್ ನಲ್ಲಿ ಇರಲಿವೆ.

Ad Widget

Ad Widget

Ad Widget alt="Ad Widget"/>

Ad Widget

ಬಂಟ್ವಾಳದ ಅನಿವಾಸಿ ಭಾರತೀಯ ಉದ್ಯಮಿ ಹನಿ ಎಂ. ಹನೀಫ್ ಮತ್ತು ಪುತ್ತೂರಿನ ಶಹನಾಝ್ ಹನೀಫ್ ದಂಪತಿ ಈ ಸಂಸ್ಥೆಯ ಸಾರಥಿಗಳಾಗಿದ್ದಾರೆ.

Ad Widget

Ad Widget <> Ad Widget

ಸಿಎಂ ಸಮ್ಮುಖದಲ್ಲಿ ಘೋಷಣೆ:
ಜುಲೈ 21ರಂದು ವಿಜಯವಾಡದಲ್ಲಿ ನಡೆದ ‘ಆಂಧ್ರಪ್ರದೇಶ-ಯುಎಇ ಆಹಾರ ಕ್ಲಸ್ಟರ್’ ಕಾರ್ಯಕ್ರಮದಲ್ಲಿ ಈ ಮಹತ್ವದ ಯೋಜನೆಯನ್ನು ಪ್ರಕಟಿಸಲಾಯಿತು. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಯುಎಇ ಆರ್ಥಿಕ ಸಚಿವ ಅಬ್ದುಲ್ಲಾ ಬಿನ್ ಟೌಕ್ ಅಲ್ ಮರ್ರಿ ಅವರ ಸಮ್ಮುಖದಲ್ಲಿ ಯೋಜನೆಯ ನೀಲನಕ್ಷೆಯನ್ನು ಬಿಡುಗಡೆ ಮಾಡಲಾಯಿತು.



Ad Widget

ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಕೈಗಾರಿಕಾ ಸಚಿವ ಟಿ.ಜಿ. ಭರತ್, ಮುಖ್ಯ ಕಾರ್ಯದರ್ಶಿ ಜಿ. ಸಾಯಿ ಪ್ರಸಾದ್, ಯುಎಇ ಆಹಾರ ಮತ್ತು ಪಾನೀಯಗಳ ವ್ಯಾಪಾರ ಸಮೂಹದ ಅಧ್ಯಕ್ಷ ಸಲೇಹ್ ಅಬ್ದುಲ್ಲಾ ಲೂಟಾ, ಆರ್ಥಿಕ ನೀತಿಗಳು ಮತ್ತು ಅಧ್ಯಯನಗಳ ಸಹಾಯಕ ಅಂಡರ್ ಸೆಕ್ರೆಟರಿ ಡಾ. ಮರಿಯಾ ಹನೀಫ್ ಅಲ್ ಖಾಸಿಮ್ ಸೇರಿದಂತೆ ಭಾರತ ಮತ್ತು ಯುಎಇ ಎರಡೂ ದೇಶಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.

Ad Widget

Ad Widget

ಫ್ಲಾರ್ ಮಾಸ್ಟರ್ಸ್ ನ ಸ್ಥಾಪಕ, ಅಧ್ಯಕ್ಷ ಹಾಗೂ ಗ್ರೂಪ್ ಸಿಇಒ ಹನಿ ಎಂ. ಹನೀಫ್ ಅವರು ಭಾರತದ ಅತ್ಯಾಧುನಿಕ ಸಂಯೋಜಿತ ಫ್ಲಾಟ್ ಬ್ರೆಡ್ ಉತ್ಪಾದನಾ ಕ್ಯಾಂಪಸ್ ನಿರ್ಮಿಸುವ ಕಂಪೆನಿಯ ಯೋಜನೆಯನ್ನು ಅನಾವರಣಗೊಳಿಸಿದರು. ಪ್ರಸ್ತಾವಿತ ಘಟಕದಲ್ಲಿ ಹಿಟ್ಟಿನ ಗಿರಣಿ, ಸಂಶೋಧನೆ ಮತ್ತು ಅಭಿವೃದ್ಧಿ (R&D), ಉತ್ಪನ್ನದ ಸಂಶೋಧನೆ, ಬೃಹತ್ ಪ್ರಮಾಣದ ಉತ್ಪಾದನೆ, ಸಿದ್ಧ ಆಹಾರಗಳ ತಯಾರಿಕೆ ಹಾಗೂ ರಫ್ತು ಕಾರ್ಯಾಚರಣೆಗಳನ್ನು ಒಂದೇ ವ್ಯವಸ್ಥೆಯಡಿ ಸಂಯೋಜಿಸಲಾಗುತ್ತದೆ.

ಮುಖ್ಯಮಂತ್ರಿ ಹಾಗೂ ಯುಎಇ ಸಚಿವರ ಸಮ್ಮುಖದಲ್ಲಿ ವೀಡಿಯೊ ಪ್ರಸ್ತುತಿಯ ಮೂಲಕ ಯೋಜನೆಯನ್ನು ವಿವರಿಸಿದ ಹನಿ ಎಂ. ಹನೀಫ್, ಈ ಹೂಡಿಕೆಯು ರೈತರು, ಉದ್ಯೋಗಿಗಳು, ಪೂರೈಕೆದಾರರು, ಗ್ರಾಹಕರು ಹಾಗೂ ದೇಶದ ಆರ್ಥಿಕತೆಗೆ ದೀರ್ಘಾವಧಿಯ ಮೌಲ್ಯ ಸೃಷ್ಟಿಸುವುದರ ಜೊತೆಗೆ ಭಾರತವನ್ನು ಫ್ಲಾಟ್ ಬ್ರೆಡ್ ಉತ್ಪಾದನೆ ಮತ್ತು ಸಂಶೋಧನೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿದೆ ಎಂದು ಹೇಳಿದರು.

“ರೈತರು, ಉದ್ಯೋಗಿಗಳು, ಗ್ರಾಹಕರು, ವ್ಯಾಪಾರ ಪಾಲುದಾರರು ಹಾಗೂ ವಿಶಾಲ ಆರ್ಥಿಕತೆಗೆ ದೀರ್ಘಾವಧಿಯ ಮೌಲ್ಯವನ್ನು ಸೃಷ್ಟಿಸುವ ವಿಶ್ವದರ್ಜೆಯ ಸಂಯೋಜಿತ ಫ್ಲಾಟ್ ಬ್ರೆಡ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ನಮ್ಮ ದೃಷ್ಟಿಕೋನವಾಗಿದೆ. ಅದೇ ವೇಳೆ ಭಾರತವನ್ನು ಫ್ಲಾಟ್ ಬ್ರೆಡ್ ಸಂಶೋಧನೆ ಮತ್ತು ಉತ್ಪಾದನಾ ಶ್ರೇಷ್ಠತೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವೂ ನಮ್ಮದಾಗಿದೆ’ ಎಂದು ಅವರು ತಿಳಿಸಿದರು.

ಕಂಪೆನಿಯ ಮಾಹಿತಿ ಪ್ರಕಾರ, ಆಂಧ್ರಪ್ರದೇಶದಲ್ಲಿ 15 ಎಕರೆ ವಿಸ್ತೀರ್ಣದ ಗ್ರೀಲ್ಡ್ ಕ್ಯಾಂಪಸ್ನಲ್ಲಿ ಯೋಜನೆ ನಿರ್ಮಾಣವಾಗಲಿದೆ. ಅತ್ಯಾಧುನಿಕ ಸ್ವಯಂಚಾಲಿತ ಘಟಕದಲ್ಲಿ ಆರಂಭಿಕ ಹಂತದಲ್ಲಿ ಪ್ರತಿದಿನ ಸುಮಾರು 10 ಲಕ್ಷ ಫ್ಲಾಟ್ ಬ್ರೆಡ್ ಗಳನ್ನು ಉತ್ಪಾದಿಸಲಾಗುತ್ತದೆ. ಇದರಲ್ಲಿ ಟೋರ್ಟಿಲ್ಲಾ ಸೇರಿದಂತೆ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ಮಾದರಿಯ ಫ್ಲಾಟ್ ಬ್ರೆಡ್ ಗಳು ಸೇರಿವೆ. ಮುಂದಿನ ಹಂತಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಪ್ರತಿದಿನ 2 ಕೋಟಿ ಫ್ಲಾಟ್ ಬ್ರೆಡ್ ಗಳಿಗೆ ಹೆಚ್ಚಿಸಲು ಅಗತ್ಯ ಮೂಲಸೌಕರ್ಯವನ್ನು ರೂಪಿಸಲಾಗಿದೆ.

ಈ ಯೋಜನೆಯಿಂದ 500ಕ್ಕೂ ಹೆಚ್ಚು ಕೌಶಲ್ಯಪೂರ್ಣ ಮತ್ತು ಅರೆಕೌಶಲ್ಯಪೂರ್ಣ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದೆ. ಇಂಜಿನಿಯರಿಂಗ್‌, ಕಾರ್ಯಾಚರಣೆ, ಗುಣಮಟ್ಟ ನಿಯಂತ್ರಣ, ಆಡಳಿತ ಹಾಗೂ ನಿರ್ವಹಣಾ ವಿಭಾಗಗಳಲ್ಲಿ 50ಕ್ಕೂ ಹೆಚ್ಚು ವೃತ್ತಿಪರ ಹುದ್ದೆಗಳು ಸೃಷ್ಟಿಯಾಗಲಿವೆ. ಅಲ್ಲದೆ, ಸ್ಥಳೀಯವಾಗಿ ಕಚ್ಚಾ ವಸ್ತುಗಳ ಸಂಗ್ರಹಣೆ ಮತ್ತು ಪೂರೈಕೆದಾರರ ಸಹಭಾಗಿತ್ವದಿಂದ ಕೃಷಿ, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್ ವಿತರಣೆ ಸೇರಿದಂತೆ ಸಂಬಂಧಿತ ವಲಯಗಳಲ್ಲೂ ಪರೋಕ್ಷ ಉದ್ಯೋಗಾವಕಾಶಗಳು ಹೆಚ್ಚಲಿವೆ ಎಂದು ಕಂಪೆನಿ ತಿಳಿಸಿದೆ.

ಕ್ಯಾಂಪಸ್ನಲ್ಲೇ ಅತ್ಯಾಧುನಿಕ ಹಿಟ್ಟು ಮಿಲ್ಲಿಂಗ್ ಘಟಕವನ್ನೂ ಸ್ಥಾಪಿಸಲಾಗುತ್ತದೆ. ಇದರಿಂದ ಕೃಷಿ ಉತ್ಪನ್ನಗಳ ಸಂಗ್ರಹಣೆಯಿಂದ ಹಿಡಿದು ಹಿಟ್ಟು ಮಿಲ್ಲಿಂಗ್, ಉತ್ಪಾದನೆ ಮತ್ತು ವಿತರಣೆಯವರೆಗಿನ ಎಲ್ಲ ಪ್ರಕ್ರಿಯೆಗಳು ಒಂದೇ ಕ್ಯಾಂಪಸ್ನಲ್ಲಿ ನಡೆಯಲಿವೆ. ಒಟ್ಟು ಉತ್ಪಾದನೆಯಲ್ಲಿ ಶೇಕಡಾ 60ರಷ್ಟು ಭಾರತೀಯ ಮಾರುಕಟ್ಟೆಗೆ ಪೂರೈಕೆಯಾಗಲಿದ್ದು, ಉಳಿದ ಶೇಕಡಾ 40ರಷ್ಟು ಉತ್ಪನ್ನಗಳನ್ನು ಏಷ್ಯಾ ದೂರದ ಪೂರ್ವ, ಆಫ್ರಿಕಾ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.

ಮಂಗಳೂರಿನ ಅನಿವಾಸಿ ಭಾರತೀಯ ಉದ್ಯಮಿ ಹನಿ ಎಂ. ಹನೀಫ್ ಹಾಗೂ ಅವರ ಪತ್ನಿ, ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿ ಶಹನಾಝ್ ಹನೀಫ್ ಅವರು ಯುಎಇಯಲ್ಲಿ ಸ್ಥಾಪಿಸಿದ ಫ್ಲಾರ್ ಮಾಸ್ಟರ್ಸ್, ಮಧ್ಯಪ್ರಾಚ್ಯದ ಪ್ರಮುಖ ಟೋರ್ಟಿಲ್ಲಾ ಮತ್ತು ಫ್ಲಾಟ್ ಬ್ರೆಡ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಬಂಟ್ವಾಳದ ಎಸ್ಟಿಎಸ್ ಕಾಲೇಜಿನಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣ ಪಡೆದ ಹನಿ ಎಂ. ಹನೀಫ್, ಮಂಗಳೂರಿನ ಕಾಲೇಜ್ ಫಾರ್ ಲೀಡರ್ಶಿಪ್ ಅಂಡ್ ಡ್ಯೂಮನ್ ರಿಸೋರ್ಸ್ ಡೆವಲಪ್ಟೆಂಟ್ (CLHRD) ನಲ್ಲಿ ಪದವಿ ಪಡೆದಿದ್ದಾರೆ.

ಪುತ್ತೂರಿನವರಾದ ಶಹನಾಝ್ ಹನೀಫ್ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರರಾಗಿದ್ದು, HMH ಗ್ರೂಪ್ನಡಿ ಕಾರ್ಯನಿರ್ವಹಿಸುವ ಎಲ್ಲ ಕಂಪೆನಿಗಳ ನಿರ್ದೇಶಕಿ ಹಾಗೂ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಪತ್ನಿಯ ಕೊಡುಗೆಯನ್ನು ಉಲ್ಲೇಖಿಸಿದ ಹನಿ ಎಂ. ಹನೀಫ್, “ಜೀವನ ಸಂಗಾತಿಯಾಗಿಯೂ, ಉದ್ಯಮ ಪಾಲುದಾರೆಯಾಗಿಯೂ ಅವರು ವಹಿಸಿರುವ ಪಾತ್ರ ನನ್ನ ಉದ್ಯಮಶೀಲತಾ ಪಯಣವನ್ನು ಯಶಸ್ವಿಗೊಳಿಸುವಲ್ಲಿ ನಿರ್ಣಾಯಕವಾಗಿದೆ. ಅವರ ಬೆಂಬಲಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.

ಆಧುನಿಕ ಉತ್ಪಾದನಾ ಘಟಕದಿಂದ ಕಾರ್ಯನಿರ್ವಹಿಸುತ್ತಿರುವ ಫ್ಲಾರ್ ಮಾಸ್ಟರ್ಸ್ ತನ್ನ ಉತ್ಪನ್ನಗಳನ್ನು 25ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ. 50ಕ್ಕೂ ಹೆಚ್ಚು ಖಾಸಗಿ ಲೇಬಲ್ ಬ್ಯಾಂಡ್ ಗಳಿಗೆ ಉತ್ಪಾದನೆ ಮಾಡುತ್ತಿರುವ ಸಂಸ್ಥೆ ಚಿಲ್ಲರೆ ವ್ಯಾಪಾರ, ಆಹಾರ ಸೇವೆ ಹಾಗೂ ಕೈಗಾರಿಕಾ ವಲಯಗಳಲ್ಲಿ ವಿಶ್ವದಾದ್ಯಂತ 200ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡುತ್ತಿದೆ. ಅನೇಕ HORECA ನಿರ್ವಾಹಕರು ಹಾಗೂ ಆಹಾರ ಸೇವಾ ವಿತರಕರಿಗೆ ಒಪ್ಪಂದದ ಉತ್ಪಾದನಾ ಪಾಲುದಾರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಕಂಪೆನಿಯು ISO 22000:2018 ಮತ್ತು ಹಲಾಲ್ ಪ್ರಮಾಣೀಕರಣಗಳನ್ನು ಪಡೆದಿದ್ದು, ಟೋರ್ಟಿಲ್ಲಾ ಇಂಡಸ್ಟ್ರಿ ಅಸೋಸಿಯೇಷನ್, ಅಮೆರಿಕನ್ ಬೇಕರ್ಸ್ ಅಸೋಸಿಯೇಷನ್ ಹಾಗೂ ಯುಎಇ ಆಹಾರ ಮತ್ತು ಪಾನೀಯ ತಯಾರಕರ ಗ್ರೂಪ್ ನ ಸದಸ್ಯತ್ವ ಹೊಂದಿದೆ. ಒಪ್ಪಂದದ ಉತ್ಪಾದನೆಯ ಜೊತೆಗೆ ತನ್ನದೇ ಆದ ಪ್ರೀಮಿಯಂ ಟೋರ್ಟಿಲ್ಲಾ ಮತ್ತು ಫ್ಲಾಟ್ ಬ್ರೆಡ್ ಬ್ಯಾಂಡ್ ಗಳನ್ನೂ ಮಧ್ಯಪ್ರಾಚ್ಯದಲ್ಲಿ ಮಾರುಕಟ್ಟೆಗಿಳಿಸಿದೆ.

ಆಂಧ್ರಪ್ರದೇಶದ ಯೋಜನೆಯನ್ನು ಕಂಪೆನಿಯ ಜಾಗತಿಕ ವಿಸ್ತರಣಾ ವಿಭಾಗವಾದ ಫ್ಲಾರ್ ಮಾಸ್ಟರ್ಸ್ ಇಂಟರ್ನ್ಯಾಷನಲ್ ಮುನ್ನಡೆಸಲಿದೆ. ವಿದೇಶಿ ಮಾರುಕಟ್ಟೆಗಳನ್ನು ಗುರುತಿಸುವುದು, ಹೊಸ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವುದು ಹಾಗೂ ಕಾರ್ಯತಂತ್ರದ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಈ ವಿಭಾಗದ್ದಾಗಿದೆ. ದೀರ್ಘಾವಧಿಯ ವಿಸ್ತರಣಾ ಕಾರ್ಯತಂತ್ರದ ಭಾಗವಾಗಿ 2045ರೊಳಗೆ ವಿಶ್ವದಾದ್ಯಂತ 100 ಫ್ಲಾಟ್ ಬ್ರೆಡ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಗುರಿ ಕಂಪೆನಿ ಹೊಂದಿದೆ.

ಉದ್ಯಮಿಯಾಗಿ ಹನಿ ಎಂ. ಹನೀಫ್ ಅವರ ಪಯಣ ಅಂತರರಾಷ್ಟ್ರೀಯ ಆಹಾರ ವಹಿವಾಟಿನಿಂದ ಆರಂಭವಾಯಿತು. 2013ರಲ್ಲಿ ಅವರು ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್‌ ಕಂಪೆನಿಯನ್ನು ಸ್ಥಾಪಿಸಿದ್ದು, ಇದೇ ಮುಂದೆ HMH ಗ್ರೂಪ್ ಅಡಿಪಾಯವಾಯಿತು. ಪ್ರಸ್ತುತ HMH ಗ್ರೂಪ್ ವ್ಯಾಪ್ತಿಯಲ್ಲಿ ಫ್ಲೋರ್ ಮಾಸ್ಟರ್ಸ್, ಅಮೆರಿಕನ್ ಸ್ಪೆಷಾಲಿಟಿ ಫುಡ್ಸ್ ಕಂಪೆನಿ, ಅಮೆರಿಕನ್ ಫನ್ ಫುಡ್ಸ್ ಕಂಪೆನಿ, HMH ಗ್ಲೋಬಲ್ ಬ್ರಾಂಡ್ಸ್ ಹಾಗೂ ಫೋರ್ M ರಿಸೋರ್ಸಸ್ ಸೇರಿದಂತೆ ಹಲವು ಸಂಸ್ಥೆಗಳು ಉತ್ಪಾದನೆ, ಬ್ಯಾಂಡ್ ನಿರ್ಮಾಣ, ವಿತರಣೆ ಮತ್ತು ಜಾಗತಿಕ ವ್ಯಾಪಾರ ವಿಸ್ತರಣೆ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಉದ್ಯಮ ವಲಯದಲ್ಲಿ ‘ದಿ ಟೋರ್ಟಿಲ್ಲಾ ಮ್ಯಾನ್’ ಎಂದೇ ಪರಿಚಿತರಾಗಿರುವ ಹನಿ ಎಂ. ಹನೀಫ್, ಜಾಗತಿಕ ಆಹಾರ ಉತ್ಪಾದನೆ, ಖಾಸಗಿ ಲೇಬಲ್ ಉತ್ಪಾದನೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿಯನ್ನು ಆಧಾರವಾಗಿಟ್ಟುಕೊಂಡು ತಮ್ಮ ಉದ್ಯಮವನ್ನು ಬೆಳೆಸಿದ್ದಾರೆ. ಆಂಧ್ರಪ್ರದೇಶದ ಹೊಸ ಯೋಜನೆಯ ಮೂಲಕ ಭಾರತವನ್ನು ಫ್ಲಾರ್ ಮಾಸ್ಟರ್ಸ್ನ ಜಾಗತಿಕ ಉತ್ಪಾದನಾ ನೆಲೆಯಾಗಿ ರೂಪಿಸುವುದರ ಜೊತೆಗೆ, ದೇಶದಲ್ಲಿ ಆಹಾರ ಸಂಸ್ಕರಣೆ, ರಫ್ತು ಮತ್ತು ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ನೀಡುವ ಗುರಿ ಹೊಂದಿದ್ದಾರೆ.

Ad Widget
Click to comment

Leave a Reply

ಬಿಗ್ ನ್ಯೂಸ್

Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ

Published

on



Ad Widget

Ad Widget

Ad Widget

Ad Widget

ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.

Ad Widget

Ad Widget <> Ad Widget

ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.



Ad Widget

ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.

Ad Widget

Ad Widget

ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.

ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.

Ad Widget
Continue Reading

ಬಿಗ್ ನ್ಯೂಸ್

Arshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್

Published

on



Ad Widget

Ad Widget

Ad Widget

Ad Widget

ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.

Ad Widget

Ad Widget

Ad Widget

Ad Widget

ಮಂಗಳೂರು: ನವರಾತ್ರಿ ಸಂದರ್ಭ ನಡೆಯಲಿರುವ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನದಲ್ಲಿ ವಿಟ್ಲದ ಯಕ್ಷಗಾನ ಕಲಾವಿದೆ ಅರ್ಷಿಯಾ ಖಾನ್ ಅವರು ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ರಂಗಸ್ಥಳವೇರಲು ಸಜ್ಜಾಗಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

‘ಯಕ್ಷಪ್ರಿಯೆ ತನು ವಿಟ್ಲ’ ಎಂದೇ ಪರಿಚಿತರಾಗಿರುವ ಅರ್ಷಿಯಾ ಖಾನ್ ಅವರು ಕದ್ರಿಯ ಕದಳಿ ಕಲಾ ಕೇಂದ್ರದ ವಿದ್ಯಾರ್ಥಿನಿ. ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕದಳಿ ಕಲಾ ಕೇಂದ್ರ ಆಯೋಜಿಸಿರುವ ‘ಕದಳಿ ದಶಾಹಃ’ ಯಕ್ಷಗಾನ ಹಬ್ಬದ ಅಂಗವಾಗಿ ಅ.20ರಂದು ಸಂಪೂರ್ಣ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನದಲ್ಲಿ ಅರ್ಷಿಯಾ ಅವರು ದೇವಿ ಪಾತ್ರ ನಿರ್ವಹಿಸಲಿದ್ದಾರೆ.

Ad Widget

Ad Widget <> Ad Widget

ಕಳೆದ 12 ವರ್ಷಗಳಿಂದ ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಅರ್ಷಿಯಾ, ಆದಿಮಾಯೆ ಸೇರಿದಂತೆ ಹಲವು ಅಸುರ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.



Ad Widget

“ಉಳ್ಳಾಲ್ತಿ ಅಮ್ಮನ (ಕಟೀಲು ದುರ್ಗಾಪರಮೇಶ್ವರಿ) ಮೇಲಿನ ಭಕ್ತಿಯೇ ನನ್ನಲ್ಲಿ ಯಕ್ಷಗಾನದ ಆಸಕ್ತಿ ಮೂಡಲು ಕಾರಣ. ಈ ಬಾರಿ ನವರಾತ್ರಿಯ ಪರ್ವಕಾಲದಲ್ಲಿ ದೇವಿ ಪಾತ್ರ ನಿರ್ವಹಿಸುವ ಅವಕಾಶ ದೊರೆತಿದೆ. ಅಷ್ಟಭುಜ ಧರಿಸಿ ರಂಗಸ್ಥಳ ಏರುವ ಆ ಪವಿತ್ರ ಕ್ಷಣವನ್ನು ಕಲ್ಪಿಸಿಕೊಂಡಾಗಲೇ ರೋಮಾಂಚನವಾಗುತ್ತದೆ” ಎಂದು ಅರ್ಷಿಯಾ ಹೇಳಿದ್ದಾರೆ.

Ad Widget

Ad Widget

ಯಕ್ಷಗಾನಕ್ಕೆ ತನ್ನದೇ ಆದ ಪಾವಿತ್ರ್ಯವಿದೆ ಎಂದು ಹೇಳಿದ ಅವರು, ದೇವಿ ಪಾತ್ರ ನಿರ್ವಹಿಸುವ ಸಂದರ್ಭದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಕಳೆದ ಆರು ತಿಂಗಳಿಂದ ಮಾಂಸಾಹಾರ ತ್ಯಜಿಸಿ ವ್ರತ ಆಚರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರತಿದಿನ ದೈವಸ್ಥಾನ ಅಥವಾ ದೇವಸ್ಥಾನಕ್ಕೆ ಭೇಟಿ ನೀಡಿ ಧ್ಯಾನ ಮಾಡುತ್ತಿದ್ದೇನೆ. ನವರಾತ್ರಿ ಆರಂಭವಾದ ಬಳಿಕ ಇನ್ನಷ್ಟು ಕಟ್ಟುನಿಟ್ಟಿನ ವ್ರತ ಆಚರಿಸಲು ಉದ್ದೇಶಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಯಕ್ಷಗಾನ ಪ್ರೇಮಕ್ಕೆ ಕುಟುಂಬದ ಬೆಂಬಲ
“ಯಕ್ಷಗಾನವು ಪೌರಾಣಿಕ ಕಥಾನಕಗಳನ್ನು ಆಧರಿಸಿದೆ. ನಮ್ಮ ಧರ್ಮ ಬೇರೆಯಾಗಿರುವುದರಿಂದ ಯಕ್ಷಗಾನದ ಕಥಾನಕಗಳಲ್ಲಿನ ಪ್ರತಿಯೊಂದು ಪಾತ್ರವನ್ನೂ ಓದಿ ತಿಳಿದುಕೊಳ್ಳುವುದು ಅಗತ್ಯ. ಇದು ನನಗಿರುವ ದೊಡ್ಡ ಸವಾಲು. ಆದರೆ ಯಕ್ಷಗುರು ರಮೇಶ್ ಭಟ್ ಅವರ ಮಾರ್ಗದರ್ಶನದಲ್ಲಿ ಎಲ್ಲವನ್ನೂ ಕಲಿಯಲು ಪ್ರಯತ್ನಿಸುತ್ತಿದ್ದೇನೆ” ಎಂದು ಅರ್ಷಿಯಾ ತಿಳಿಸಿದ್ದಾರೆ.

ತಮ್ಮ ಯಕ್ಷಗಾನ ಆಸಕ್ತಿಗೆ ಕುಟುಂಬದವರ ಸಂಪೂರ್ಣ ಸಹಕಾರವಿದೆ. ಸಾರ್ವಜನಿಕರಿಂದಲೂ ಸಾಕಷ್ಟು ಬೆಂಬಲ ದೊರೆತಿದೆ. ಕೆಲವರು ಟೀಕಿಸಿದರೂ ಅದನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಪದವೀಧರೆಯಾಗಿರುವ ಅರ್ಷಿಯಾ ಖಾನ್ ಅವರು ಪ್ರಸ್ತುತ ಮಾಧ್ಯಮ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ.

Ad Widget
Continue Reading

ರಾಜ್ಯ

Temperature-ಹಿಂಗಾರು ಮಳೆ ಇಳಿಮುಖ, ಬಿಸಿಲು ಏರುಮುಖ; ಕರ್ನಾಟಕಕ್ಕೆ ಹವಾಮಾನ ಎಚ್ಚರಿಕೆ..!

Published

on



Ad Widget

Ad Widget

Ad Widget

Ad Widget

ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.

Ad Widget

Ad Widget

Ad Widget

Ad Widget

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮು ಅಂತ್ಯಗೊಂಡು ಹಿಂಗಾರು ಆರಂಭವಾಗಿರುವ ಬೆನ್ನಲ್ಲೇ ಮಳೆ ಕೊರತೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿರುವ ಋತುಮಾನದ ಮುನ್ಸೂಚನೆ ಪ್ರಕಾರ, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಬಾರಿ ಹಿಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ.

Ad Widget

Ad Widget

Ad Widget alt="Ad Widget"/>

Ad Widget

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಹಿಂಗಾರು ಅವಧಿಯಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಈ ಅವಧಿಯ ವಾಡಿಕೆ ಸರಾಸರಿ ಮಳೆ 182.2 ಮಿ.ಮೀ. ಆಗಿದ್ದು, ದಕ್ಷಿಣ ಒಳನಾಡಿನಲ್ಲಿ 201.9 ಮಿ.ಮೀ. ವಾಡಿಕೆ ಮಳೆಯಿದೆ. ಆದರೆ ಈ ಬಾರಿ ಈ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Ad Widget

Ad Widget <> Ad Widget

ಮಳೆ ಕೊರತೆಯ ಮುನ್ಸೂಚನೆಯು ಕೃಷಿ ಹಾಗೂ ಜಲಾಶಯಗಳ ನೀರಿನ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ನೀರಿನ ಮಿತವ್ಯಯ ಹಾಗೂ ಪರ್ಯಾಯ ಬೆಳೆ ಯೋಜನೆಗಳತ್ತ ಗಮನಹರಿಸುವ ಅಗತ್ಯವಿದೆ.



Ad Widget

ಮಳೆ ಕೊರತೆಗೆ ಕಾರಣವೇನು?
ಎಲ್ ನಿನೋ ಪ್ರಭಾವ: ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೋ ಪರಿಸ್ಥಿತಿ ಮುಂದುವರಿದಿದ್ದು, ಸಮುದ್ರದ ಮೇಲ್ಮೈ ತಾಪಮಾನ ವಾಡಿಕೆಗಿಂತ ಹೆಚ್ಚಾಗಿದೆ. ಈ ಪರಿಸ್ಥಿತಿ ವರ್ಷಾಂತ್ಯದವರೆಗೂ ಮುಂದುವರಿಯುವ ಸಾಧ್ಯತೆಯಿದ್ದು, ಹಿಂಗಾರು ಮಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ತಟಸ್ಥ ಐಒಡಿ: ಹಿಂದೂ ಮಹಾಸಾಗರದಲ್ಲಿನ ಇಂಡಿಯನ್ ಓಷನ್ ಡೈಪೋಲ್ (IOD) ಸದ್ಯ ತಟಸ್ಥ ಸ್ಥಿತಿಯಲ್ಲಿದ್ದು, ಹಿಂಗಾರು ಅವಧಿಯಲ್ಲೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

Ad Widget

Ad Widget

ದಕ್ಷಿಣ ಭಾರತದಲ್ಲಿ ಹೇಗಿರಲಿದೆ ಮಳೆ?
ತಮಿಳುನಾಡು, ಪುದುಚೇರಿ-ಕಾರೈಕಲ್, ಕರಾವಳಿ ಆಂಧ್ರಪ್ರದೇಶ-ಯಾನಾಂ, ರಾಯಲಸೀಮೆ, ಕೇರಳ-ಮಾಹೆ ಸೇರಿದಂತೆ ದಕ್ಷಿಣ ಭಾರತದ ಕೆಲವು ಹವಾಮಾನ ಉಪವಿಭಾಗಗಳಲ್ಲಿ ಹಿಂಗಾರು ಮಳೆ ಸಾಮಾನ್ಯ ಅಥವಾ ವಾಡಿಕೆಯಷ್ಟಿರುವ ಸಾಧ್ಯತೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಮಳೆ ವಾಡಿಕೆಯಷ್ಟಿರುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ತಿಳಿಸಿದೆ.

ದೇಶದ ಮಟ್ಟದಲ್ಲಿ ಅಕ್ಟೋಬರ್‌ನಲ್ಲಿ ಬಹುತೇಕ ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ಆದರೆ ವಾಯವ್ಯ ಭಾರತದ ಕೆಲವು ಭಾಗಗಳು, ದಕ್ಷಿಣ ಪರ್ಯಾಯ ದ್ವೀಪ ಹಾಗೂ ಪೂರ್ವ ಭಾರತದ ಕೆಲವೆಡೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಮಳೆಯಷ್ಟೇ ಅಲ್ಲ, ತಾಪಮಾನವೂ ಏರಿಕೆ
ಹಿಂಗಾರು ಮಳೆಯ ಕೊರತೆಯೊಂದಿಗೆ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ.

ಈಶಾನ್ಯ ಮತ್ತು ವಾಯವ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಕಡೆ ಹಗಲಿನ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ರೀತಿ ಈಶಾನ್ಯ ಭಾರತ ಹೊರತುಪಡಿಸಿ ಬಹುತೇಕ ಪ್ರದೇಶಗಳಲ್ಲಿ ರಾತ್ರಿಯ ಕನಿಷ್ಠ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗುವ ಸಾಧ್ಯತೆಯಿದ್ದು, ಸೆಕೆ ಮುಂದುವರಿಯುವ ಮುನ್ಸೂಚನೆ ಇದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading