ಸಿನೆಮಾ
‘Karavali’ trailer launch-ಕರಾವಳಿ’ ಟ್ರೇಲರ್ ಲಾಂಚ್‌ನಲ್ಲಿ ಹೈಡ್ರಾಮಾ: ಪ್ರಜ್ವಲ್ ಫ್ಯಾನ್ಸ್ ಕಿರಿಕ್, ರಾಜ್ ಬಿ. ಶೆಟ್ಟಿ ಬೇಸರ, ಸಂಭಾವನೆ ಗುಟ್ಟು ರಟ್ಟು!
ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕೇವಲ ಸಿನಿಮಾ ಝಲಕ್‌ನಿಂದಷ್ಟೇ ಅಲ್ಲ, ವೇದಿಕೆಯಲ್ಲಿ ನಡೆದ ಹೈಡ್ರಾಮಾದಿಂದಾಗಿ ಈಗ ಇಡೀ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಿ ಮತ್ತು ಅವರ ಅಭಿಮಾನಿಗಳ ಆಕ್ರೋಶ ಇಡೀ ಕಾರ್ಯಕ್ರಮದ ದಿಕ್ಕನ್ನೇ ಬದಲಿಸಿತು. ಪೊಲೀಸರು ಎಂಟ್ರಿ ಕೊಡುವಷ್ಟರ ಮಟ್ಟಿಗೆ ಪರಿಸ್ಥಿತಿ ಕೈಮೀರಿತು.
ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಕೇವಲ ಸಿನಿಮಾ ಝಲಕ್‌ನಿಂದಷ್ಟೇ ಅಲ್ಲ, ವೇದಿಕೆಯಲ್ಲಿ ನಡೆದ ಹೈಡ್ರಾಮಾದಿಂದಾಗಿ ಈಗ ಇಡೀ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ! ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಿ ಮತ್ತು ಅವರ ಅಭಿಮಾನಿಗಳ ಆಕ್ರೋಶ ಇಡೀ ಕಾರ್ಯಕ್ರಮದ ದಿಕ್ಕನ್ನೇ ಬದಲಿಸಿತು. ಪೊಲೀಸರು ಎಂಟ್ರಿ ಕೊಡುವಷ್ಟರ ಮಟ್ಟಿಗೆ ಪರಿಸ್ಥಿತಿ ಕೈಮೀರಿತು.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಇನ್‌ಸೈಡ್ ಸ್ಟೋರಿ!
🔴 ವೇದಿಕೆಯಲ್ಲೇ ಅಭಿಮಾನಿಗಳ ವಾಗ್ವಾದ, ಪೊಲೀಸ್ ಎಂಟ್ರಿ!
ಟ್ರೇಲರ್ ಲಾಂಚ್ ಕಾರ್ಯಕ್ರಮ ಶುರುವಾಗುತ್ತಿದ್ದಂತೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಚಿತ್ರತಂಡದ ವಿರುದ್ಧ ತಿರುಗಿಬಿದ್ದರು. “ನಮ್ಮ ಹೀರೋನ ಯಾಕೆ ಕರೆದಿಲ್ಲ? ಟ್ರೇಲರ್‌ನಲ್ಲಿ ಅವರ ಧ್ವನಿ ಯಾಕಿಲ್ಲ?” ಎಂದು ನೇರವಾಗಿಯೇ ಗಲಾಟೆ ಆರಂಭಿಸಿದರು. ಕಾರ್ಯಕ್ರಮದಲ್ಲಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹಾಗೂ ಅಭಿಮಾನಿಗಳ ನಡುವೆ ಮಾತಿನ ಸಮರವೇ ನಡೆಯಿತು. ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು.
🎬 “ಅಪನಂಬಿಕೆ ಬೇಡ, ನಾವೇ ಆಹ್ವಾನಿಸಿದ್ದೆವು” – ನಿರ್ದೇಶಕ ಗುರುದತ್ತ ಗಾಣಿಗ ಸ್ಪಷ್ಟನೆ
ಅಭಿಮಾನಿಗಳ ಮತ್ತು ಮಾಧ್ಯಮಗಳ ತೀಕ್ಷ್ಣ ಪ್ರಶ್ನೆಗಳಿಗೆ ಚಿತ್ರದ ನಿರ್ದೇಶಕ ಗುರುದತ್ತ ಗಾಣಿಗ ಮುಖಾಮುಖಿಯಾದರು.
ಆಹ್ವಾನದ ಕುರಿತು: “ನಾವು ಪ್ರಜ್ವಲ್ ಅವರನ್ನು ಕರೆದಿದ್ದೆವು. ಹಿಂದಿನ ರಾತ್ರಿವರೆಗೂ ಬರುವುದಾಗಿ ಹೇಳಿದ್ದರು. ಅಭಿಮಾನಿಗಳಿಗೂ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅವರು ಯಾಕೆ ಬರಲಿಲ್ಲವೋ ಅವರೇ ಹೇಳಬೇಕು.”
ಡಬ್ಬಿಂಗ್ ವಿವಾದ: “ಪ್ರಜ್ವಲ್ ಧ್ವನಿ ಈ ಪಾತ್ರಕ್ಕೆ ಸೂಟ್ ಆಗುತ್ತದೋ ಇಲ್ಲವೋ ಎಂಬ ಸಣ್ಣ ಅನುಮಾನವಿತ್ತು. ಆದರೂ ಅವರಿಗಾಗಿ ಡಬ್ಬಿಂಗ್ ಸ್ಟುಡಿಯೋ ಬ್ಲಾಕ್ ಮಾಡಿ, ಟ್ರೇಲರ್ ಮುಗಿದ ನಂತರ ಡಬ್ ಮಾಡಿ ಎಂದಿದ್ದೆವು. ಆದರೆ ಅವರಿಂದ ಯಾವುದೇ ರೆಸ್ಪಾನ್ಸ್ ಬರಲಿಲ್ಲ.”
ಸಂಭಾವನೆ ಲೆಕ್ಕಾಚಾರ: “ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್ ಇರುತ್ತಾರೆ ಎಂದು ಪ್ರಜ್ವಲ್‌ಗೆ ಮೊದಲೇ ಹೇಳಿ ರಾಜ್ ಬಿ. ಶೆಟ್ಟಿ ಅವರನ್ನು ಕರೆತಂದಿದ್ದೇವೆ. ಪ್ರಜ್ವಲ್ ಅವರ 1 ಕೋಟಿ 25 ಲಕ್ಷ ರೂ. ಸಂಭಾವನೆಯಲ್ಲಿ 1 ಕೋಟಿ ರೂ. ನೀಡಲಾಗಿದೆ. ಬಾಕಿ ಇರುವ 25 ಲಕ್ಷ ರೂ. ಬಗ್ಗೆ ಮಾತುಕತೆಯೂ ಆಗಿತ್ತು.”
💔 “ನಮ್ಮ ಇಂಡಸ್ಟ್ರಿ ಉದ್ಧಾರವಾಗದೇ ಇರಲು ಇಂಥ ಘಟನೆಗಳೇ ಕಾರಣ!” – ರಾಜ್ ಬಿ. ಶೆಟ್ಟಿ ಬೇಸರ
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರಾವಳಿಯ ಪ್ರತಿಭೆ ರಾಜ್ ಬಿ. ಶೆಟ್ಟಿ ಈ ಬೆಳವಣಿಗೆಯಿಂದ ತೀವ್ರ ಬೇಸರ ಹೊರಹಾಕಿದರು:
”ಈ ಚಿತ್ರಕ್ಕೆ ಮೊದಲ ಆಯ್ಕೆ ನಾನಾಗಿರಲಿಲ್ಲ. ನಾನಿಲ್ಲಿ ಅತಿಥಿ ಪಾತ್ರ ಮಾಡಿದ್ದೇನೆಯೇ ಹೊರತು, ಯಾರಿಗೂ ಕಾಂಪಿಟೀಷನ್ ಕೊಡಲು ಬಂದಿಲ್ಲ. ಪೋಸ್ಟರ್‌ನಲ್ಲಿ ನನ್ನ ಹೆಸರು ಹಾಕದಿದ್ದರೂ ನನಗೆ ಬೇಸರವಿಲ್ಲ, ಸಿನಿಮಾ ಎಲ್ಲರಿಗಿಂತ ದೊಡ್ಡದು. ಇಡೀ ದೇಶವೇ ನೋಡುವಂತಹ ಕಥೆ ಇಲ್ಲಿದೆ. ಇದರಿಂದ ಪ್ರಜ್ವಲ್‌ಗೆ ದೊಡ್ಡ ಹೆಸರು ಬಂದರೆ ನನಗೆ ಹೆಮ್ಮೆ. ಆದರೆ, ನಮ್ಮ ಇಂಡಸ್ಟ್ರಿ ಉದ್ದಾರ ಆಗದಿರಲು ಇಂಥಾ ಘಟನೆಗಳೂ ಕಾರಣ…”
⚡ ಪಲ್ಟಿ ಹೊಡೆದ ಕಥೆ: “ಸಂಭಾವನೆ ಬಾಕಿ ಇದೆ, ಅದಕ್ಕೇ ಬಂದಿಲ್ಲ” – ‘ಡೈನಾಮಿಕ್ ಪ್ರಿನ್ಸ್’ ತಿರುಗೇಟು!
ಇತ್ತ ಚಿತ್ರತಂಡದ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿರುವ ನಟ ಪ್ರಜ್ವಲ್ ದೇವರಾಜ್, ತಮಗಾಗಿರುವ ಅನ್ಯಾಯವನ್ನು ಬಿಚ್ಚಿಟ್ಟಿದ್ದಾರೆ.
ಡಬ್ಬಿಂಗ್ ಮಾಡದಿರಲು ಕಾರಣ: “ಚಿತ್ರತಂಡದವರು ನನ್ನ ಸಂಭಾವನೆ ಮತ್ತು ಜಿಎಸ್‌ಟಿ ಪೇಮೆಂಟ್ ಬಾಕಿ ಇಟ್ಟುಕೊಂಡಿದ್ದಾರೆ. ಅದನ್ನು ಸೆಟಲ್ ಮಾಡದೇ ಡಬ್ಬಿಂಗ್ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಕಳೆದ ವರ್ಷವೇ ನಾನು ಒಂದೂವರೆ ಕೋಟಿ ಸಂಭಾವನೆ ಬಿಟ್ಟುಕೊಟ್ಟಿದ್ದೆ. ಆದರೆ ಈ ಚಿತ್ರಕ್ಕಾಗಿ 3 ವರ್ಷ ಬೇರೆ ಸಿನಿಮಾ ಒಪ್ಪಿಕೊಳ್ಳದೇ ಕಾಯ್ದಿದ್ದೇನೆ.”
ಮಾತಿನ ರೀತಿ ಸರಿ ಇರಲಿಲ್ಲ: “ಸಂಭಾವನೆ ಕೇಳಿದರೆ ನಿರ್ದೇಶಕರು ಕೊಡುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದರು, ಅವರ ಧ್ವನಿ ಸರಿ ಇರಲಿಲ್ಲ. ಟ್ರೇಲರ್ ಹಾಗೂ ಹಾಡಿನಲ್ಲಿ ನನ್ನ ವಾಯ್ಸ್ ಇಲ್ಲ ಎಂಬುದು ನಿನ್ನೆ ರಾತ್ರಿಯಷ್ಟೇ ಗೊತ್ತಾಯಿತು. ಅದಕ್ಕೇ ನಾನು ಕಾರ್ಯಕ್ರಮದಿಂದ ದೂರ ಉಳಿದೆ. ಆದರೆ ರಾಜ್ ಬಿ. ಶೆಟ್ಟಿ ಅವರ ಮೇಲೆ ಗೌರವವಿದೆ, ಅವರದು ಎಕ್ಸ್‌ಟ್ರಾ ಆರ್ಡಿನರಿ ಪ್ರತಿಭೆ. ಅವರೊಂದಿಗೆ ಯಾವುದೇ ಸಮಸ್ಯೆಯಿಲ್ಲ.”
ಒಟ್ಟಿನಲ್ಲಿ, ಅದ್ಧೂರಿಯಾಗಿ ಮೂಡಿಬರಬೇಕಿದ್ದ ‘ಕರಾವಳಿ’ ಸಿನಿಮಾದ ಪ್ರಚಾರದ ಆರಂಭದಲ್ಲೇ ಈ ಮಟ್ಟದ ಭಿನ್ನಾಭಿಪ್ರಾಯಗಳು ಮತ್ತು ಹಣಕಾಸಿನ ಕಿರಿಕ್ ಬೀದಿಗೆ ಬಂದಿರುವುದು ಸ್ಯಾಂಡಲ್‌ವುಡ್ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಚಿತ್ರತಂಡ ಹಾಗೂ ನಾಯಕ ನಟನ ನಡುವಿನ ಈ ಕೋಲ್ಡ್ ವಾರ್ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು!
ಸಿನೆಮಾ
Rajinikanth-ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ತಲೈವಾ: ರಜಿನಿಕಾಂತ್ ನೋಡಲು ಮುಗಿಬಿದ್ದ ಅಭಿಮಾನಿಗಳು
‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರು: ‘ಧರ್ಮನ್’ ಚಿತ್ರದ ಚಿತ್ರೀಕರಣಕ್ಕಾಗಿ ಮೈಸೂರಿಗೆ ಆಗಮಿಸಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಬುಧವಾರ (ಸೆ.30) ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ.
ಮೈಸೂರಿನ ಸುತ್ತಮುತ್ತ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ರಜಿನಿಕಾಂತ್ ಅವರು ನಗರದಲ್ಲಿರುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ʻತಲೈವಾʼನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಶೂಟಿಂಗ್ ಸ್ಥಳಗಳು ಹಾಗೂ ಅವರು ಭೇಟಿ ನೀಡುವ ಪ್ರದೇಶಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದಾರೆ.
ಚಾಮುಂಡೇಶ್ವರಿ ದೇವಾಲಯಕ್ಕೆ ರಜಿನಿಕಾಂತ್ ಭೇಟಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರನ್ನು ನೋಡಲು ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳನ್ನು ಕಂಡ ರಜಿನಿಕಾಂತ್ ಅವರು ಪ್ರೀತಿಯಿಂದ ಕೈಬೀಸಿ ಅಭಿಮಾನಿಗಳ ಖುಷಿಗೆ ಕಾರಣರಾದರು.
ಇದಕ್ಕೂ ಮುನ್ನ ಮಂಗಳವಾರ (ಸೆ.29) ಸೋಮನಾಥಪುರದಲ್ಲಿ ‘ಧರ್ಮನ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ನಟ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರು ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕೆಲಕಾಲ ಆತ್ಮೀಯವಾಗಿ ಮಾತುಕತೆ ನಡೆಸಿದ್ದು, ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಕರ್ನಾಟಕದಲ್ಲಿ ರಜಿನಿಕಾಂತ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಅವರು ರಾಜ್ಯಕ್ಕೆ ಆಗಮಿಸಿದಾಗಲೆಲ್ಲ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯುತ್ತದೆ. ಇದೀಗ ಮೈಸೂರಿನಲ್ಲಿ ನಡೆಯುತ್ತಿರುವ ‘ಧರ್ಮನ್’ ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ತಲೈವಾ ನಗರದಲ್ಲಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.
ರಜಿನಿಕಾಂತ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ‘ಜೈಲರ್-2’ ಕೂಡ ಸದ್ಯ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿದ್ದಾರೆ. ‘ಜೈಲರ್-2’ ಅಕ್ಟೋಬರ್ 15ರಂದು ತೆರೆಗೆ ಬರಲಿದೆ.
ಸಿನೆಮಾ
Bethlehem Family Unit-ಮಲಯಾಳಂ ಚಿತ್ರರಂಗದಲ್ಲಿ ದಾಖಲೆ ಬರೆದ ‘ಬೆತ್ಲೆಹೆಮ್ ಕುಟುಂಬ ಯೂನಿಟ್’: ಅ.2ಕ್ಕೆ ಒಟಿಟಿ ಎಂಟ್ರಿ
ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಕೊಚ್ಚಿ: ಮಲಯಾಳಂ ಚಿತ್ರರಂಗದಲ್ಲಿ ಭರ್ಜರಿ ಯಶಸ್ಸು ಕಂಡಿರುವ ‘ಬೆತ್ಲೆಹೆಮ್ ಕುಟುಂಬ ಯೂನಿಟ್’ (Bethlehem Kudumba Unit) ಇದೀಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ನಿವಿನ್ ಪೌಲಿ ಹಾಗೂ ಮಮಿತಾ ಬೈಜು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಅ.2ರಿಂದ ಜಿಯೋಹಾಟ್‌ಸ್ಟಾರ್ (JioHotstar) ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
ಗಿರೀಶ್ ಎ.ಡಿ. ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 326 ಕೋಟಿ ರೂ. ಗಳಿಸುವ ಮೂಲಕ ಮಲಯಾಳಂ ಚಿತ್ರರಂಗದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ‘ಲೋಕಾ ಚಾಪ್ಟರ್ 1: ಚಂದ್ರ’ ಚಿತ್ರ 304 ಕೋಟಿ ರೂ. ಗಳಿಕೆಯೊಂದಿಗೆ ಮೊದಲ ಸ್ಥಾನದಲ್ಲಿತ್ತು. ‘ಬೆತ್ಲೆಹೆಮ್ ಕುಟುಂಬ ಯೂನಿಟ್’ ಈ ದಾಖಲೆಯನ್ನು ಹಿಂದಿಕ್ಕಿದೆ.
ಚಿತ್ರವು ಕೇರಳದಲ್ಲಿ ಮೊದಲ ಬಾರಿಗೆ 150 ಕೋಟಿ ರೂ. ಗಳಿಕೆ ದಾಖಲಿಸಿದ ಮಲಯಾಳಂ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಅತಿ ವೇಗವಾಗಿ 300 ಕೋಟಿ ರೂ. ಕ್ಲಬ್ ಸೇರಿದ ಚಿತ್ರ ಎಂಬ ದಾಖಲೆಗೂ ಪಾತ್ರವಾಗಿದೆ.
ಸಿನೆಮಾ
Hanuman Ansh-₹2 ಕೋಟಿ ಬಜೆಟ್ ಸಿನಿಮಾ ₹347 ಕೋಟಿ ಗಳಿಕೆ; ‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ‘ಹನುಮಾನ್ ಅಂಶ್ʼ
ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ.
ಮುಂಬಯಿ: ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದ ‘ಹನುಮಾನ್ ಅಂಶ್’ (Hanuman Ansh) ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ.
ಕೇವಲ ₹2 ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ವಿಶ್ವದಾದ್ಯಂತ ₹300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ₹347 ಕೋಟಿಯ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಯಾಗಿ 45 ದಿನಗಳು ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮುಂದುವರಿದಿರುವುದು ವಿಶೇಷವಾಗಿದೆ.
‘ಪೆದ್ದಿ’, ‘ಟಾಕ್ಸಿಕ್’ ದಾಖಲೆ ಹಿಂದಿಕ್ಕಿದ ಸಿನಿಮಾ
ಭಾನುವಾರ (ಸೆ.20) ‘ಹನುಮಾನ್ ಅಂಶ್’ ಭಾರತದಲ್ಲಿ ₹13.75 ಕೋಟಿ ಹಾಗೂ ವಿದೇಶದಲ್ಲಿ ₹1.50 ಕೋಟಿ ಗಳಿಕೆ ಮಾಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ ₹347.05 ಕೋಟಿಗೆ ತಲುಪಿದೆ ಎಂದು ಸ್ಯಾಕ್‌ನಿಲ್ಕ್ ವರದಿ ಮಾಡಿದೆ.
ಈ ಮೂಲಕ ರಾಮ್ ಚರಣ್ ಅಭಿನಯದ ‘ಪೆದ್ದಿ’ ಹಾಗೂ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗಳ ವಿಶ್ವದಾದ್ಯಂತದ ಗಳಿಕೆಯನ್ನು ‘ಹನುಮಾನ್ ಅಂಶ್’ ಹಿಂದಿಕ್ಕಿದೆ.
‘ಪೆದ್ದಿ’ ₹341.90 ಕೋಟಿ ಹಾಗೂ ‘ಟಾಕ್ಸಿಕ್’ ₹341.99 ಕೋಟಿ ಗಳಿಕೆ ಮಾಡಿದ್ದರೆ, ‘ಹನುಮಾನ್ ಅಂಶ್’ ₹347.05 ಕೋಟಿ ಗಳಿಕೆಯೊಂದಿಗೆ ಈ ಎರಡೂ ಸಿನಿಮಾಗಳನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲಾ’ ಸಿನಿಮಾದ ಗಳಿಕೆಯನ್ನೂ ಹಿಂದಿಕ್ಕಿರುವ ‘ಹನುಮಾನ್ ಅಂಶ್’, ಈ ವರ್ಷದ ಹಿಂದಿ ಸಿನಿಮಾಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಚಿತ್ರವಾಗಿ ಹೊರಹೊಮ್ಮಿದೆ ಎಂದು ವರದಿಯಾಗಿದೆ.
ಇತರ ಭಾಷೆಯ ಸಿನಿಮಾಗಳನ್ನೂ ಹಿಂದಿಕ್ಕಿದ ‘ಹನುಮಾನ್ ಅಂಶ್’
ಕಳೆದ ವಾರದಲ್ಲಿಯೂ ಸಿನಿಮಾ ತನ್ನ ಗಳಿಕೆಯ ಓಟ ಮುಂದುವರಿಸಿದ್ದು, ‘ಜನಾ ನಾಯಕನ್’, ‘ಬೆತ್ತೆಹೇಮ್ ಕುಟುಂಬ ಯೂನಿಟ್’, ‘ಮಾನ ಶಂಕರ ವರಪ್ರಸಾದ್ ಗಾರು’ ಹಾಗೂ ‘ಕರುಪ್ಪು’ ಸೇರಿದಂತೆ ವಿವಿಧ ಚಿತ್ರರಂಗಗಳ ಪ್ರಮುಖ ಸಿನಿಮಾಗಳ ಜಾಗತಿಕ ಗಳಿಕೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.
ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ‘ಮಹಾರಾಜ್ ಜಿ’ ಎಂದೇ ಜನಪ್ರಿಯರಾಗಿದ್ದ ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ.
ಸ್ವಯಂಭೂ ಮೀಡಿಯಾ ನೆಟ್‌ವರ್ಕ್, ರಾಗಿಣಿ ಎಸ್., ನಮ್ರತಾ ಜಿ.ಎಸ್. ಹಾಗೂ ಅನುಪ್ರಿಯಾ ಎ. ನಗರ್ ನಿರ್ಮಿಸಿರುವ ಚಿತ್ರದಲ್ಲಿ ಚಂದನ್ ಕೆ. ಆನಂದ್ ಮತ್ತು ಶೋಭಿನವ್ ಸತ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಖಿಲ್ ದುಬೆ, ಉದಯಸಿಂಹ ರಜಪೂತ್, ಪೂರ್ಣಿಮಾ ತಿವಾರಿ ಹಾಗೂ ಮನೀಶ್ ಚೌಧರಿ ಸೇರಿದಂತೆ ಹಲವು ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
-
ಪುತ್ತೂರು20 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್24 hours agoArshia Khan-ನವರಾತ್ರಿಗೆ ‘ಅಷ್ಟಭುಜ ಧಾರಿಣಿ ದೇವಿ’ಯಾಗಿ ಮಿಂಚಲಿರುವ ವಿಟ್ಲದ ಅರ್ಷಿಯಾ ಖಾನ್
-
ಮಂಗಳೂರು23 hours agoCM-ಒಂದು ಅಭಿನಂದನೆಯೂ ಇಲ್ಲ ಎಂದು ಕ್ರೀಡಾಪಟುವಿನಿಂದ ಬೇಸರ ವ್ಯಕ್ತವಾದ ಕೂಡಲೇ ಪೂವಮ್ಮಗೆ ಕರೆ ಮಾಡಿದ ಸಿಎಂ..! ಏನೂ ಹೇಳಿದ್ರು ಗೊತ್ತೇ..?
-
ಬಿಗ್ ನ್ಯೂಸ್22 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಶಿಕ್ಷಣ23 hours agoSpecial classes: ಮಳೆ ರಜೆ ಹೊಂದಾಣಿಕೆ: ಅ.3ರಿಂದ ಅ.7ರವರೆಗೆ ದಸರಾ ರಜೆಯಲ್ಲೂ ವಿಶೇಷ ತರಗತಿ
-
ಅಪರಾಧ22 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ23 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
ಶಿಕ್ಷಣ23 hours agoVivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ


















