Connect with us

ನಿಧನ ವಾರ್ತೆ

Sarala Maheshwari-ದೂರದರ್ಶನದ ಖ್ಯಾತ ಸುದ್ದಿ ನಿರೂಪಕಿ ಸರಳಾ ಮಹೇಶ್ವರಿ ನಿಧನ

Published

on



Ad Widget

Ad Widget

Ad Widget

Ad Widget

1980ರ ದಶಕದ ದೂರದರ್ಶನದ (DD) ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ಸರಳಾ ಮಹೇಶ್ವರಿ (71) ಅವರು ಗುರುವಾರ (ಫೆ. 12) ನಿಧನರಾಗಿದ್ದಾರೆ. ಅವರ ನಿಧನಕ್ಕೆ ದೂರದರ್ಶನ ನ್ಯಾಷನಲ್ ತನ್ನ ಅಧಿಕೃತ ‘ಎಕ್ಸ್’ ಖಾತೆಯ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Ad Widget

Ad Widget

Ad Widget

Ad Widget

ನವದೆಹಲಿ: 1980ರ ದಶಕದ ದೂರದರ್ಶನದ (DD) ಅತ್ಯಂತ ಜನಪ್ರಿಯ ಮತ್ತು ಪ್ರಭಾವಶಾಲಿ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ಸರಳಾ ಮಹೇಶ್ವರಿ (71) ಅವರು ಗುರುವಾರ (ಫೆ. 12) ನಿಧನರಾಗಿದ್ದಾರೆ. ಅವರ ನಿಧನಕ್ಕೆ ದೂರದರ್ಶನ ನ್ಯಾಷನಲ್ ತನ್ನ ಅಧಿಕೃತ ‘ಎಕ್ಸ್’ ಖಾತೆಯ ಮೂಲಕ ತೀವ್ರ ಸಂತಾಪ ವ್ಯಕ್ತಪಡಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಮೂರು ದಶಕಗಳ ಕಾಲ ಸುದ್ದಿಯ ಲೋಕದಲ್ಲಿ:
ಸ್ಪಷ್ಟ ಉಚ್ಚಾರಣೆ ಮತ್ತು ಸೌಮ್ಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದ ಸರಳಾ ಅವರು 1976 ರಿಂದ 2005 ರವರೆಗೆ ಸುಮಾರು ಮೂರು ದಶಕಗಳ ಕಾಲ ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ಅವರು 1976 ರಲ್ಲಿ ಉದ್ಯೋಷಕಿಯಾಗಿ ಆಯ್ಕೆಯಾಗಿದ್ದರು. 1984 ರಿಂದ 1986 ರವರೆಗೆ ಲಂಡನ್‌ನಲ್ಲಿ ನೆಲೆಸಿದ್ದ ಅವರು, ಬಿಬಿಸಿ (BBC) ನ್ಯೂಸ್ ರೀಡರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 1988 ರಲ್ಲಿ ಭಾರತಕ್ಕೆ ಮರಳಿದ ಅವರು ಮತ್ತೆ ದೂರದರ್ಶನ ಸೇರಿ ವೃತ್ತಿಜೀವನ ಮುಂದುವರಿಸಿದ್ದರು.

Ad Widget

Ad Widget <> Ad Widget

ಐತಿಹಾಸಿಕ ಕ್ಷಣಗಳ ಸಾಕ್ಷಿ:
ಭಾರತದ ಇತಿಹಾಸದ ಪ್ರಮುಖ ಘಟನೆಗಳನ್ನು ದೇಶಕ್ಕೆ ತಲುಪಿಸಿದ ಹೆಗ್ಗಳಿಕೆ ಸರಳಾ ಅವರದ್ದು. 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ದಾರುಣ ಸುದ್ದಿಯನ್ನು ದೇಶದ ಜನತೆಗೆ ಮೊದಲು ಪ್ರಸಾರ ಮಾಡಿದ್ದು ಇದೇ ಸರಳಾ ಮಹೇಶ್ವರಿ. ಅಷ್ಟೇ ಅಲ್ಲದೆ, 1997 ರಲ್ಲಿ ಮದರ್ ತೆರೇಸಾ ಅವರ ಅಂತ್ಯಸಂಸ್ಕಾರದ ಸುದ್ದಿಯನ್ನು ಪಶ್ಚಿಮ ಬಂಗಾಳದಿಂದ ನೇರವಾಗಿ ವರದಿ ಮಾಡಿದ್ದರು.



Ad Widget

ಉಗ್ರರ ಬೆದರಿಕೆಗೂ ಕುಗ್ಗದ ಚೇತನ:
ಪಂಜಾಬ್‌ನಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿದ್ದ ಕಾಲದಲ್ಲಿ, ಭಯೋತ್ಪಾದನೆಯ ವಿರುದ್ಧ ನಿರ್ಭೀತವಾಗಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಇವರು ಸಿಖ್ ಉಗ್ರರಿಂದ ಕೊಲೆ ಬೆದರಿಕೆಯನ್ನೂ ಎದುರಿಸಿದ್ದರು. ಆದರೂ ತಮ್ಮ ವೃತ್ತಿಧರ್ಮಕ್ಕೆ ಚ್ಯುತಿ ಬಾರದಂತೆ ಧೈರ್ಯದಿಂದ ಕಾರ್ಯನಿರ್ವಹಿಸಿದ್ದರು.

Ad Widget

Ad Widget

ಕುಟುಂಬ ಮತ್ತು ಅಂತ್ಯಕ್ರಿಯೆ:
ಮೃತರು ಪತಿ ಡಾ. ಪವನ್ ಮಹೇಶ್ವರಿ, ಪುತ್ರ ಡಾ. ಕವೀಶ್ ಮತ್ತು ಪುತ್ರಿ ಹಿಮಾಂಶು ಮಹೇಶ್ವರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ದೆಹಲಿಯ ನಿಗಮ್ ಬೋಧ ಘಾಟ್‌ನಲ್ಲಿ ಇಂದು (ಫೆ.12) ಸಂಜೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Ad Widget
Click to comment

Leave a Reply

ನಿಧನ ವಾರ್ತೆ

Kadaba-ಕಡಬ : ಹೆದ್ದಾರಿಯಲ್ಲಿ ದಿಢೀರ್ ಪ್ರತ್ಯಕ್ಷವಾದ ಕಡವೆ; ಕಾರಿಗೆ ಡಿಕ್ಕಿ, ಸ್ಥಳದಲ್ಲೇ ಸಾವು

Published

on



Ad Widget

Ad Widget

Ad Widget

Ad Widget

ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡವೆಯೊಂದು ಕಾರಿಗೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ಶುಕ್ರವಾರ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗಕ್ಕೆ ಭಾರೀ ಹಾನಿಯಾಗಿದ್ದು, ಕಡವೆ ರಸ್ತೆಯ ಬದಿಗೆ ಎಸೆಯಲ್ಪಟ್ಟು ಮೃತಪಟ್ಟಿದೆ.

Ad Widget

Ad Widget

Ad Widget

Ad Widget

ಕಡಬ: ಗುಂಡ್ಯ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡವೆಯೊಂದು ಕಾರಿಗೆ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ಶುಕ್ರವಾರ ನಡೆದಿದೆ.

Ad Widget

Ad Widget

Ad Widget alt="Ad Widget"/>

Ad Widget

ಹೆದ್ದಾರಿಯಲ್ಲಿ ಕಾರೊಂದು ಸಂಚರಿಸುತ್ತಿದ್ದ ವೇಳೆ ಏಕಾಏಕಿ ಅಡ್ಡ ಬಂದ ಕಡವೆಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗಕ್ಕೆ ಭಾರೀ ಹಾನಿಯಾಗಿದ್ದು, ಕಡವೆ ರಸ್ತೆಯ ಬದಿಗೆ ಎಸೆಯಲ್ಪಟ್ಟು ಮೃತಪಟ್ಟಿದೆ.

Ad Widget

Ad Widget <> Ad Widget

ಈ ಭಾಗದಲ್ಲಿ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಘಟನೆ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆ ಕಾಡುಪ್ರಾಣಿಗಳು ಹೆದ್ದಾರಿಗೆ ಬರುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾದ ಅಗತ್ಯವಿದೆ.



Ad Widget

ಈ ಹಿಂದೆಯೂ ಇದೇ ಪರಿಸರದಲ್ಲಿ ಕಾಡುಪ್ರಾಣಿಗಳಿಂದ ವಾಹನ ಸವಾರರಿಗೆ ಅಪಾಯ ಉಂಟಾದ ಘಟನೆಗಳು ನಡೆದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Ad Widget

Ad Widget

ಕಾಡುಪ್ರಾಣಿಗಳ ಸಂಚಾರವಿರುವ ಪ್ರದೇಶಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದರ ಜತೆಗೆ, ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ದೂರದಿಂದಲೇ ಪ್ರಾಣಿಗಳು ಕಾಣುವಂತೆ ಮಾಡುವ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಡುಪ್ರಾಣಿಗಳು ಹೆದ್ದಾರಿಗೆ ಬರುವುದರಿಂದ ಉಂಟಾಗುವ ಅಪಘಾತಗಳನ್ನು ತಡೆಯಲು ಕ್ರಮ ವಹಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

Ad Widget
Continue Reading

ನಿಧನ ವಾರ್ತೆ

Kasaragod-ಕಾಸರಗೋಡು: ಬೈಕ್‌-ಕಾರು ಮುಖಾಮುಖಿ ಡಿಕ್ಕಿ; ಸವಾರ ಸಾವು, ಪತ್ನಿ ಗಂಭೀರ

Published

on



Ad Widget

Ad Widget

Ad Widget

Ad Widget

ಸೀತಾಂಗೋಳಿ–ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್‌ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಬೈಕ್‌-ಕಾರು ಮುಖಾಮುಖಿ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಊಞಂಪದವು ನಿವಾಸಿ ಎಂ.ಟಿ. ಮುಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಕಾಸರಗೋಡು: ಸೀತಾಂಗೋಳಿ–ಪೆರ್ಲ ರಸ್ತೆಯ ಪುತ್ತಿಗೆ ಮುಗುರೋಡ್‌ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಬೈಕ್‌-ಕಾರು ಮುಖಾಮುಖಿ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದು, ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ಊಞಂಪದವು ನಿವಾಸಿ ಎಂ.ಟಿ. ಮುಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರ ಪತ್ನಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Ad Widget <> Ad Widget

ಇಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಮುಹಮ್ಮದ್ ಅಶ್ರಫ್ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿದೆ.



Ad Widget

ಡಿಕ್ಕಿಯ ರಭಸಕ್ಕೆ ಅಶ್ರಫ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Continue Reading

ನಿಧನ ವಾರ್ತೆ

Mangalore-ಮಂಗಳೂರು: ನ್ಯಾಯಾಧೀಶರ ಕಾರು, ಗೂಡ್ಸ್ ಆಟೋ, ಬೈಕ್ ನಡುವೆ ಸರಣಿ ಅಪಘಾತ; ಗೂಡ್ಸ್ ಆಟೋ ಚಾಲಕ ಮೃತ್ಯು

Published

on



Ad Widget

Ad Widget

Ad Widget

Ad Widget

ಮಂಗಳೂರು ನಗರದ ಬಾವುಟಗುಡ್ಡೆಯ ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಕಾರು, ಗೂಡ್ಸ್ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಗೂಡ್ಸ್ ಆಟೋ ರಿಕ್ಷಾ ಚಾಲಕ ಮೃತಪಟ್ಟಿದ್ದಾರೆ. ಮೃತರನ್ನು ಕಾಸರಗೋಡು ಮೊಗ್ರಾಲ್‌ನ ಪೊಟ್ಟೊರಿ ಪೇರಲ್ ನಿವಾಸಿ ಚಂದ್ರ ಕೆ. (67) ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ಮಂಗಳೂರು: ನಗರದ ಬಾವುಟಗುಡ್ಡೆಯ ಕೋರ್ಟ್ ಕ್ರಾಸ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಕಾರು, ಗೂಡ್ಸ್ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಗೂಡ್ಸ್ ಆಟೋ ರಿಕ್ಷಾ ಚಾಲಕ ಮೃತಪಟ್ಟಿದ್ದಾರೆ.

Ad Widget

Ad Widget

Ad Widget alt="Ad Widget"/>

Ad Widget

ಮೃತರನ್ನು ಕಾಸರಗೋಡು ಮೊಗ್ರಾಲ್‌ನ ಪೊಟ್ಟೊರಿ ಪೇರಲ್ ನಿವಾಸಿ ಚಂದ್ರ ಕೆ. (67) ಎಂದು ಗುರುತಿಸಲಾಗಿದೆ.

Ad Widget

Ad Widget <> Ad Widget

ದಕ್ಷಿಣ ಕನ್ನಡ ಜಿಲ್ಲಾ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿನಯ್ ಡಿ. ಅವರು ಕಾರಿನಲ್ಲಿ (ಕೆಎ-05-ಎನ್‌ಕೆ-2504) ಬೆಳಗ್ಗೆ ನ್ಯಾಯಾಲಯದತ್ತ ತೆರಳುತ್ತಿದ್ದರು. ಕರಂಗಲ್ಪಾಡಿಯ ರಾಧಾ ಮೆಡಿಕಲ್ಸ್ ಎದುರಿನ ತಿರುವಿನಲ್ಲಿ ಸಾಗುತ್ತಿದ್ದಾಗ, ಗೂಡ್ಸ್ ಆಟೋ ರಿಕ್ಷಾ (ಕೆಎ-19-ಎಡಿ-4395) ನಿಯಂತ್ರಣ ತಪ್ಪಿ ನ್ಯಾಯಾಧೀಶರ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.



Ad Widget

ಬಳಿಕ ಗೂಡ್ಸ್ ಆಟೋ ರಿಕ್ಷಾ ಅದೇ ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ (ಕೆಎ-19-ಎಚ್‌ವೈ-1664)ಕ್ಕೂ ಢಿಕ್ಕಿ ಹೊಡೆದು ಮಗುಚಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Ad Widget

Ad Widget

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚಂದ್ರ ಕೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಗೂಡ್ಸ್ ಆಟೋ ರಿಕ್ಷಾ ಢಿಕ್ಕಿಯಿಂದ ದ್ವಿಚಕ್ರ ವಾಹನ ಸವಾರ ಪ್ಲೆವಿಯನ್ ಮೆರ್ವಿನ್ ಅವರಿಗೂ ಗಾಯಗಳಾಗಿವೆ. ಅಪಘಾತದಲ್ಲಿ ಕಾರು, ಗೂಡ್ಸ್ ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನ ಜಖಂಗೊಂಡಿವೆ.

ಅಪಘಾತದಲ್ಲಿ ನ್ಯಾಯಾಧೀಶ ವಿನಯ್ ಡಿ. ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯಾಧೀಶ ವಿನಯ್ ಡಿ. ಅವರು ನೀಡಿದ ದೂರಿನ ಆಧಾರದ ಮೇಲೆ ಕದ್ರಿ ಟ್ರಾಫಿಕ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Ad Widget
Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading