Connect with us

ದಕ್ಷಿಣ ಕನ್ನಡ

crop insurance ಬೆಳೆ ವಿಮೆ ಪರಿಹಾರದಲ್ಲಿ ಅನ್ಯಾಯ – ಪುತ್ತೂರಿನ ರೈತ ಸಂಘಗಳ ಸಮಾಲೋಚನಾ ಸಭೆಯಲ್ಲಿ ಭುಗಿಳೆದ್ದ ರೈತರ ಆಕ್ರೋಶ; ಸರ್ಕಾರದ ವಿರುದ್ಧ ಸಮರಕ್ಕೆ ಸಿದ್ಧತೆ!

Published

on



Ad Widget

Ad Widget

Ad Widget

Ad Widget
Ad Widget

Ad Widget

Ad Widget

Ad Widget

ಪುತ್ತೂರು: ಜಿಲ್ಲೆಯಲ್ಲಿ ಬೆಳೆ ನಷ್ಟದಿಂದ ತತ್ತರಿಸಿರುವ ರೈತರಿಗೆ ವಿಮಾ ಕಂಪನಿಗಳಿಂದ ಸೂಕ್ತ ಪರಿಹಾರ ಸಿಗದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪುತ್ತೂರಿನ ಎಪಿಎಂಸಿ ರೈತ ಸಭಾಂಗಣದಲ್ಲಿ ನಡೆದ ವಿವಿಧ ರೈತ ಸಂಘಗಳ ಸಮಾಲೋಚನಾ ಸಭೆಯಲ್ಲಿ, ಸರ್ಕಾರ ಮತ್ತು ವಿಮಾ ಕಂಪನಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. ಜಂಟಿ ಸರ್ವೇ ನಡೆಸಿ ಬೆಳೆ ಹಾನಿಯನ್ನು ನಿಗದಿಪಡಿಸಬೇಕು, ಶಾಸಕರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ರೈತ ಸಮಾವೇಶ ನಡೆಸಬೇಕು ಎಂಬ ಪ್ರಮುಖ ಬೇಡಿಕೆಗಳು ಕೇಳಿಬಂದವು.

Ad Widget

Ad Widget

Ad Widget alt="Ad Widget"/>

Ad Widget

ಬೆಳೆ ವಿಮೆ ಬೋಗಸ್: ರೈತರ ಆಕ್ರೋಶ

Ad Widget

Ad Widget <> Ad Widget

ರೈತರು ಕಷ್ಟಪಟ್ಟು ಬೆಳೆದು, ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದಾಗ ಬೆಳೆ ವಿಮೆ ಪ್ರಯೋಜನಕ್ಕೆ ಬಾರದಿರುವುದು ರೈತರ ಆಕ್ರೋಶಕ್ಕೆ ಮುಖ್ಯ ಕಾರಣ. “ಕಂಪನಿಗಳು ರೈತರನ್ನು ನಾಶ ಮಾಡುವ ಹುನ್ನಾರ ಮಾಡುತ್ತಿವೆ, ಇದು ವ್ಯವಸ್ಥಿತವಾಗಿ ರೈತರನ್ನು ಮುಗಿಸುವ ಕಾರ್ಯ” ಎಂದು ರೈತ ಮುಖಂಡರು ಆರೋಪಿಸಿದರು. 94ಸಿ, ಕುಮ್ಕಿ ಹಕ್ಕು, ಪ್ಲಾಟಿಂಗ್ ಸಮಸ್ಯೆಗಳ ಬಗ್ಗೆಯೂ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.



Ad Widget

ರೈತ ಧ್ವನಿ ಒಕ್ಕೂಟದ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, “ರೈತರು ಸಂಪೂರ್ಣ ನಷ್ಟದಲ್ಲಿದ್ದಾಗ ಬೆಳೆ ವಿಮೆ ಪ್ರಯೋಜನಕ್ಕೆ ಬಂದಿಲ್ಲ. ರೈತರು ಒಗ್ಗಟ್ಟಿನ ಮೂಲಕ ಬೇಡಿಕೆಗಳನ್ನು ಇಡಬೇಕು. ವಿಮಾ ಕಂಪನಿ ಸರಿಯಾಗಿ ಪರಿಹಾರ ನೀಡಬೇಕು, ಇಲ್ಲದೇ ಹೋದರೆ ಅವರನ್ನು ಕೈಬಿಡಬೇಕು” ಎಂದು ಆಗ್ರಹಿಸಿದರು.

Ad Widget

Ad Widget

ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು ಮಾತನಾಡಿ, “ತೋಟಗಾರಿಕಾ ಇಲಾಖೆಯೇ ಶೇ. 80 ಹಾನಿಯಾಗಿರುವುದನ್ನು ಘೋಷಿಸಿದೆ. ಕಟ್ಟಿದ ಹಣಕ್ಕಿಂತ ಕಡಿಮೆ ಪರಿಹಾರ ಬರಲು ಕಾರಣವೇನು? ಅಧಿಕಾರಿಗಳ ಅಸಡ್ಡೆಯಾ, ಮಳೆ ಮಾಪಕದ ಸಮಸ್ಯೆಯಾ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅತಿವೃಷ್ಟಿ, ಅನಾವೃಷ್ಟಿಗಳು ಆದಾಗ ವಿಮೆ ನೀಡುವುದಿಲ್ಲ ಎಂಬುದು ಸರಿಯಲ್ಲ. ರೈತರಿಗೆ ಸಂಪೂರ್ಣ ವಿಮಾ ಮೊತ್ತ ಸಿಗುವಂತಾಗಬೇಕು” ಎಂದು ಒತ್ತಾಯಿಸಿದರು.

ರೈತ ಮುಖಂಡ ಈಶ್ವರಭಟ್ ಕೆಮ್ಮಾರ ಮಾತನಾಡಿ, “ಗ್ರಾಮಕ್ಕೊಂದು ವಿಮಾ ಹಣ ಬಂದಿದೆ. ಜಿಲ್ಲಾ ಮಟ್ಟದ ವರದಿ ಪಡೆದು ಹಾನಿಯನ್ನು ಪರಿಗಣಿಸಬೇಕು. ಜಂಟಿ ಹೆಸರಿನ ಪಹಣಿಗೆ ಮನೆ ಯಜಮಾನ ವಿಮೆ ಪಾವತಿಸಿದರೂ, ಕಂಪನಿ ಪರಿಹಾರದಲ್ಲಿ ವಿಭಜಿಸುತ್ತಿದೆ. ಕೆಲವು ಪಹಣಿಯ ನಂಜ, ಪುಂಜ ಜಾಗವನ್ನು ದುಪ್ಪಟ್ಟು ಎಂದು ಪರಿಗಣಿಸುವುದು ಸರಿಯಲ್ಲ” ಎಂದು ದೂರಿದರು.

ರೈತ ಮುಖಂಡ ರೂಪೇಶ್ ರೈ ಅಲಿಮಾರು ಮಾತನಾಡಿ, “ವಿಮಾ ಕಂಪನಿ ಯಾವುದೇ ಹಣವನ್ನು ಹಾಕದಿರುವುದರಿಂದ ಬೆಳೆ ವಿಮೆ ಎಂಬುದೇ ಬೋಗಸ್ ಆಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಕುವ ಹಣವನ್ನು ತೋಟಗಾರಿಕೆ ಇಲಾಖೆಯ ಮೂಲಕ ನೇರವಾಗಿ ರೈತರಿಗೆ ನೀಡಬೇಕು. ರೈತರ ತೋಟವನ್ನು ಅಧಿಕಾರಿಗಳೇ ಕಾಯುವ ಕೆಲಸ ಮಾಡುವುದಾದರೆ, ಕೃಷಿ ಸಂರಕ್ಷಣೆಗೆ ಕೋವಿ ಅಗತ್ಯವಿಲ್ಲ” ಎಂದು ಖಾರವಾಗಿ ನುಡಿದರು.

ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರೈತ ಧ್ವನಿ ಒಕ್ಕೂಟ ಸಂಚಾಲಕ ಕೃಷ್ಣ ಪ್ರಸಾದ್ ಆಳ್ವ, ರೈತ ಮುಖಂಡ ರೂಪೇಶ್ ರೈ ಅಲಿಮಾರು, ಅಮರ್ ನಾಥ ಆಳ್ವ, ಈಶ್ವರ ಭಟ್ ಕೆಮ್ಮಾರ, ಮುರಳೀಧರ ರೈ ಮಠಂತಬೆಟ್ಟು, ರಾಮಕೃಷ್ಣ ಭಟ್, ರಮೇಶ್, ಮನೋಹರ ಶಿರಾಡಿ, ಮುರುವ ಮಹಾಬಲ ಭಟ್, ಚೆನ್ನಪ್ಪ ಗೌಡ ನೆಲ್ಯಾಡಿ, ಶಿವಣ್ಣ ಗೌಡ ಇಡ್ಯಾಡಿ, ಹೊನ್ನಪ್ಪ ಉಪಸ್ಥಿತರಿದ್ದರು.

ಮುಂದಿನ ನಡೆ: ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಸಮಾವೇಶ ನಡೆಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು.

Farmers in Puttur are outraged over delayed crop insurance compensation and government apathy. Accusing the government and insurance companies of injustice, farmers are preparing for a major protest against crop losses. Demands include joint surveys and district-level conventions. Get complete information on the struggles and protests of Karnataka’s farmers.

Ad Widget
Click to comment

Leave a Reply

ಪುತ್ತೂರು

ಮುಳಿಯ ಶ್ಯಾಮ್ ಭಟ್‌ ನಿಧನ : ‘ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌’ ಅ.6ರಂದು ಮಧ್ಯಾಹ್ನ 2 ಗಂಟೆಯವರೆಗೆ ಶೋರೂಮ್ ಬಂದ್

Published

on



Ad Widget

Ad Widget

Ad Widget

Ad Widget

ಪುತ್ತೂರು, ಅ.5: ಹಿರಿಯ ಚಿನ್ನಾಭರಣ ಉದ್ಯಮಿ ಹಾಗೂ ಮುಳಿಯ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ ಸಂಸ್ಥೆಯ ಮಾಲಕ ಸರಾಫ್‌ ಮುಳಿಯ ಶ್ಯಾಮ್ ಭಟ್‌ (81) ಅವರ ನಿಧನಕ್ಕೆ ಗೌರವ ಸೂಚಿಸಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಪುತ್ತೂರು ಹಾಗೂ ಸುಳ್ಯ ಶೋರೂಂಗಳನ್ನು ಅ.6ರಂದು ಮಧ್ಯಾಹ್ನದವರೆಗೆ ಬಂದ್ ಇರಿಸಲಾಗುವುದು.

Ad Widget

Ad Widget

Ad Widget

Ad Widget

ಚಿನ್ನಾಭರಣ ಉದ್ಯಮ ಕ್ಷೇತ್ರದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿದ್ದ ಶ್ಯಾಮ್ ಭಟ್‌ ಅವರ ಅಗಲಿಕೆಗೆ ಸಂತಾಪ ಸೂಚಿಸುವ ಉದ್ದೇಶದಿಂದ ಶೋರೂಂ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

Ad Widget

Ad Widget alt="Ad Widget"/>

Ad Widget

ಶ್ಯಾಮ್ ಭಟ್‌ ಅವರು ಅ.4ರಂದು ನಿಧನರಾಗಿದ್ದು, ಅ.6ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಬಳಿಕ ಅಂತ್ಯಕ್ರಿಯೆ ನಡೆಯಲಿದೆ.

Ad Widget

Ad Widget <> Ad Widget



Ad Widget
Ad Widget
Continue Reading

ಬಿಗ್ ನ್ಯೂಸ್

Puttur Dasara-92ನೇ ವರ್ಷದ ಶಾರದೋತ್ಸವಕ್ಕೆ ಹೊಸ ರೂಪ; ‘ಪುತ್ತೂರು ದಸರಾ’ ನಾಮಾಂಕಿತದಲ್ಲಿ ನವರಾತ್ರಿಯ ವೈಭವದ ಆಚರಣೆ

Published

on



Ad Widget

Ad Widget

Ad Widget

Ad Widget

ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget

Ad Widget

ಪುತ್ತೂರು: ಮೈಸೂರು, ಮಡಿಕೇರಿ ಹಾಗೂ ಕುದ್ರೋಳಿಯಂತೆ ಪುತ್ತೂರಿನಲ್ಲೂ ಹಿಂದೆ ವೈಭವದಿಂದ ದಸರಾ ಉತ್ಸವಗಳು ನಡೆಯುತ್ತಿದ್ದವು. ಕಾಲಕ್ರಮೇಣ ಆ ಪರಂಪರೆಯ ವೈಭವ ಕಡಿಮೆಯಾಗಿದ್ದರೂ, ಕಳೆದ ಮೂರು ವರ್ಷಗಳಿಂದ ಶ್ರೀ ಶಾರದೋತ್ಸವದ ಮೂಲಕ ಪುತ್ತೂರಿನ ದಸರಾ ಪರಂಪರೆಯನ್ನು ಮರುಕಳಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಈ ಉತ್ಸವಕ್ಕೆ ಮತ್ತಷ್ಟು ವಿಶಾಲ ರೂಪ ನೀಡುವ ಉದ್ದೇಶದಿಂದ ಈ ವರ್ಷದಿಂದ ಪುತ್ತೂರು ಶಾರದೋತ್ಸವವನ್ನು ‘ಪುತ್ತೂರು ದಸರಾ’ ಎಂಬ ನಾಮಾಂಕಿತದಲ್ಲಿ ಆಚರಿಸಲು ನಿರ್ಧರಿಸಲಾಗಿದೆ.

Ad Widget

Ad Widget

Ad Widget alt="Ad Widget"/>

Ad Widget

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.11ರಿಂದ 21ರವರೆಗೆ 92ನೇ ವರ್ಷದ ನವರಾತ್ರಿ ಪೂಜೆ ಹಾಗೂ ಶ್ರೀ ಶಾರದೋತ್ಸವ ವೈಭವದಿಂದ ನಡೆಯಲಿದೆ.

Ad Widget

Ad Widget <> Ad Widget

ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.21ರಂದು 20ಕ್ಕೂ ಅಧಿಕ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಇದರೊಂದಿಗೆ ‘ಪುತ್ತೂರು ದಸರಾ’ ಸಂಪನ್ನಗೊಳ್ಳಲಿದೆ.



Ad Widget

ದಸರಾ ಪರಂಪರೆಗೆ ಹೊಸ ರೂಪ
ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಮಾತನಾಡಿ, ಹಲವು ಪವಾಡಗಳಿಗೆ ಸಾಕ್ಷಿಯಾಗಿರುವ ಪುತ್ತೂರು ಶಾರದಾ ಭಜನಾ ಮಂದಿರದಲ್ಲಿ ಕಳೆದ ಮೂರು ವರ್ಷಗಳಿಂದ ಶಾರದೋತ್ಸವವನ್ನು ಗತಕಾಲದ ವೈಭವವನ್ನು ಮರುಕಳಿಸುವ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.

Ad Widget

Ad Widget

ಈ ಬಾರಿ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ನಾಮಾಂಕಿತ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಪುತ್ತೂರು ತಾಲೂಕಿನ ದಸರಾ ಮಹೋತ್ಸವವಾಗಿ ರೂಪಿಸುವ ಉದ್ದೇಶವಿದೆ. ಈ ಕುರಿತು ಮೂರು ವರ್ಷಗಳ ಹಿಂದೆಯೇ ಸಮಿತಿಯಲ್ಲಿ ಚಿಂತನೆ ನಡೆದಿತ್ತು ಎಂದು ಅವರು ತಿಳಿಸಿದರು.

ಪುತ್ತೂರಿನಲ್ಲೇ ದಸರಾ ವೈಭವ
ಹಿಂದೆ ದಸರಾ ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳಲು ಪುತ್ತೂರಿನ ಜನರು ಮಂಗಳೂರು ಹಾಗೂ ಮಡಿಕೇರಿಗೆ ತೆರಳುತ್ತಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ಪುತ್ತೂರು ಶಾರದೆಯ ವೈಭವದ ಶೋಭಾಯಾತ್ರೆ ಜನರ ಗಮನ ಸೆಳೆಯುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೊಸತನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸೀತಾರಾಮ ರೈ ಹೇಳಿದರು.

ಪುತ್ತೂರಿನಲ್ಲೇ ಜನರು ದಸರಾ ವೈಭವವನ್ನು ಕಣ್ತುಂಬಿಕೊಳ್ಳುವಂತಾಗಬೇಕು ಎಂಬ ಉದ್ದೇಶದಿಂದ ಶಾರದೋತ್ಸವಕ್ಕೆ ‘ಪುತ್ತೂರು ದಸರಾ’ ಎಂಬ ವಿಶಾಲ ರೂಪ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇದು ಪುತ್ತೂರು ತಾಲೂಕಿನ ಜನತೆಯ ದಸರಾ ಮಹೋತ್ಸವವಾಗಿ ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹತ್ತು ದಿನ ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮ
ಅ.11ರಿಂದ ಆರಂಭವಾಗುವ ಉತ್ಸವದಲ್ಲಿ ನವರಾತ್ರಿ ಪೂಜೆ, ಶ್ರೀ ಶಾರದಾ ಆರಾಧನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚಂಡಿಕಾ ಹೋಮ ಸೇರಿದಂತೆ ವಿಶೇಷ ಧಾರ್ಮಿಕ ಆಚರಣೆಗಳು ನಡೆಯಲಿದ್ದು, ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರು ಹಾಗೂ ಸಾರ್ವಜನಿಕರನ್ನು ರಂಜಿಸಲಿವೆ.

ಅ.21ರಂದು ನಡೆಯುವ ಸಮಾರೋಪದಂದು 20ಕ್ಕೂ ಅಧಿಕ ಪ್ರಸಿದ್ಧ ಕಲಾತಂಡಗಳು, ಸಾವಿರಾರು ಕುಣಿತ ಭಜನಾ ತಂಡಗಳು ಹಾಗೂ ವಿವಿಧ ವಾದ್ಯಘೋಷಗಳು ಶೋಭಾಯಾತ್ರೆಗೆ ಮೆರುಗು ನೀಡಲಿವೆ. ಶ್ರೀ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆಯೊಂದಿಗೆ ಈ ಬಾರಿಯ ‘ಪುತ್ತೂರು ದಸರಾ’ ವೈಭವಕ್ಕೆ ತೆರೆ ಬೀಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ದಸರಾ ಸಮಿತಿಯ ಗೌರವ ಮಾರ್ಗದರ್ಶಕ ಡಾ. ಸುರೇಶ್ ಪುತ್ತೂರಾಯ, ಉಪಾಧ್ಯಕ್ಷ ದಯಾನಂದ ಪಿ., ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೋಶಾಧಿಕಾರಿ ವಸಂತ್ ಕುಮಾರ್ ಹಾಗೂ ಶೋಭಾಯಾತ್ರೆಯ ಸಂಚಾಲಕರಾದ ಕೃಷ್ಣ ಎಂ. ಅಳಿಕೆ ಮತ್ತು ನವೀನ್ ಕುಲಾಲ್ ಪುತ್ತೂರು ಉಪಸ್ಥಿತರಿದ್ದರು.

Ad Widget
Continue Reading

ಶಿಕ್ಷಣ

Vivekananda-ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

Published

on



Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget

Ad Widget

Ad Widget

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.

Ad Widget

Ad Widget

Ad Widget alt="Ad Widget"/>

Ad Widget

ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

Ad Widget

Ad Widget <> Ad Widget

ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕಿಶನ್ ಕೆ ವೈ, ತ್ರಿಶಿಕ್ ಕೆ. ಗೌಡ , ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ, ಅನ್ವಿತ್ ಎಸ್ .ಪಿ, ನಿದೀಶ್ ಶೆಟ್ಟಿ, ಮನ್ವಂತ್ ದ್ವಿತೀಯ ಪಿಯುಸಿ ಪ್ರಣಮ್ ಪಿ ಶೆಟ್ಟಿ ,ಚಿಂತನ್ ಕೆ, ಕೆ ಆರ್ ದಿಶಾಂತ್ ಹಾಗೂ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿನ್ಯಾ ರೈ, ಸೃಷ್ಟಿ ಎಸ್. ಆರ್. ರೈ, ವೀಕ್ಷಾ ಬಿ. ಆರ್, ಧರಣಿ ಕೆ. ಟಿ, ಶ್ರಾವ್ಯ, ಕೆ. ಸುಶಾನಿ, ಸಿ. ಎಸ್. ಚಿನ್ಮಯ್ ಗೌಡ, ಪಾವನಿ ಕೆ. ವಸಿಷ್ಠ, ಸಾನ್ವಿ ಎಸ್, ತನ್ವಿ ದ್ವಿತೀಯ ಪಿಯುಸಿ ಧನ್ವಿ ಎ. ಆರ್ ಭಾಗವಹಿಸಿರುತ್ತಾರೆ.



Ad Widget

ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

Continue Reading

ಇಂದಿನ ಟ್ರೆಂಡಿಂಗ್‌ ಸುದ್ದಿಗಳು

error: Content is protected !!

Discover more from Nikhara News | Kannada News Website

Subscribe now to keep reading and get access to the full archive.

Continue reading