Ad Widget

Woman Misisng : ಬೆಳ್ತಂಗಡಿ : ಸಿಮ್‌ ಖರೀದಿಗೆ ಪೇಟೆಗೆ ತೆರಳಿದ ವಿವಾಹಿತೆ ನಾಪತ್ತೆ -ಪತ್ತೆಯಾದಲ್ಲಿ ತಿಳಿಸುವಂತೆ ಮನವಿ

WhatsApp Image 2022-12-27 at 11.53.38
Ad Widget

Ad Widget

Ad Widget

ಬೆಳ್ತಂಗಡಿ :  ಸಿಮ್ ಕಾರ್ಡ್ ಖರೀದಿಗೆಂದು ಪೇಟೆಗೆ ತೆರಳಿದ ಗೃಹಿಣಿ ವಾಪಸ್ಸು ಮನೆಗೆ ಬಾರದೇ ನಾಪತ್ತೆಯಾದ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯ ಪತಿ ಠಾಣೆಗೆ ದೂರು ನೀಡಿದ್ದು, ಮಹಿಳೆ ಪತ್ತೆಯಾದಲ್ಲಿ ಠಾಣೆಗೆ ತಿಳಿಸುವಂತೆ ಪೊಲೀಸ್‌ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Ad Widget

Ad Widget

Ad Widget

Ad Widget

ಬೆಳ್ತಂಗಡಿ ತಾಲೂಕು  ಗರ್ಡಾಡಿ ಗ್ರಾಮದ ಬಂಗಟ ಮನೆ ನಿವಾಸಿ ಜೋನ್ ಮೋನಿಸ್ ರವರ ಪತ್ನಿ ಪ್ರಿಯ ಟಿ.ಎಂ (37 ವರ್ಷ) ನಾಪತ್ತೆಯಾದವರು.   ಇವರು  ಡಿ. 22 ರಂದು ಮನೆಯಿಂದ ಹೊರ ಹೋಗಿದ್ದು ಈ ವೇಳೆ  ಮಡಂತ್ಯಾರಿಗೆ ಹೋಗಿ ಮೊಬೈಲ್ ಸಿಮ್ ಕಾರ್ಡ್ ತರುವುದಾಗಿ  ತಿಳಿಸಿದ್ದರು . ಆದರೇ  ವಾಪಾಸು ಮನೆಗೆ ಬಾರದೇ ನಾಪತ್ತೆ ಯಾಗಿದ್ದರೆ.

Ad Widget

Ad Widget

Ad Widget

Ad Widget

ಅವರ ಬಳಿ ಇದ್ದ ಎರಡು ಮೊಬೈಲ್ ನಂಬರ್ ಗಳನ್ನು ಸ್ವಿಚ್ ಆಫ್ ಮಾಡಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ . ಹೀಗಾಗಿ  ಪತಿ ಜೋನ್ ಮೋನಿಸ್  ರವರು  ಬೆಳ್ತಂಗಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು  ಪ್ರಕರಣ ದಾಖಲಾಗಿದೆ. .

ಮನೆಯಿಂದ ಹೊರಟವೇಳೆ  ಪ್ರಿಯಾ ರವರು ನೀಲಿ ಬಣ್ಣದಲ್ಲಿ ಬಿಳಿಹೂಗಳಿರುವ ಚೂಡಿದಾರದ ಟಾಪ್ ಮತ್ತು ನೀಲಿ ಬಣ್ಣ ಲೆಗ್ಗಿನ್ ಪ್ಯಾಂಟ್ ಧರಿಸಿದ್ದರು. ಇವರು ಸುಮಾರು 5 ಅಡಿ 2 ಇಂಚು ಉದ್ದವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದು ಬೂದು ಮೈಬಣ್ಣದವರಾಗಿದ್ದಾರೆ.

Ad Widget

Ad Widget

 ಕನ್ನಡ, ಮಲೆಯಾಳಿ, ಕೊಂಕಣಿ ಮತ್ತು ತುಳು ಭಾಷೆ ಮಾತನಾಡುತ್ತಾರೆ. ಇವರು  ಕಾಣ ಸಿಕ್ಕಿದಲ್ಲಿ  ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರ ಮೊಬೈಲ್ ನಂಬ್ರ: 9480805370 ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 08256-232093 ನೇದಕ್ಕೆ ತಿಳಿಸುವಂತೆ  ಪೊಲೀಸ್‌ ಇಲಾಖೆಯೂ ಪ್ರಕಟನೆಯಲ್ಲಿ ತಿಳಿಸಿದೆ.

Crime Upadate : ಮಂಗಳೂರು: ರೌಡಿ ಶಿಟರ್ ಪಿಂಕಿ ನವಾಜ್ ಕೊಲೆಗೆ ಯತ್ನಿಸಿದವರಿಂದಲೇ ಜಲೀಲ್ ಮರ್ಡರ್ ! ಅನೈತಿಕ ಸಂಪರ್ಕ ಕೊಲೆಯಲ್ಲಿ ಅಂತ್ಯವಾಯಿತೇ? ಸಂಜೆ ಜೀವ ಬೆದರಿಕೆಯೊಡ್ಡಿ ರಾತ್ರಿ ಹತ್ಯೆ…!

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: