ಬೆಳ್ತಂಗಡಿ : ಡಿ 13 : ಎರಡು ದಿನದ ಹಿಂದೆ ಜ್ವರಕ್ಕೆ ತುತ್ತಾದ ಬೆಳ್ತಂಗಡಿಯ ಯುವತಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಡಿ.12 ರಂದು ನಡೆದಿದೆ. ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಅರ್ಬಿ ಮನೆಯ ಸಿಂಗರವರ ಪುತ್ರಿ ಪವಿತ್ರ (22ವ) ಮೃತಪಟ್ಟ ಯುವತಿ.
2 ದಿನದ ಹಿಂದೆ ಜ್ವರಕ್ಕೆ ತುತ್ತಾದ ಪವಿತ್ರಾರವರನ್ನು ಗುರುವಾಯನಕೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಜ್ವರ ಉಲ್ಬಣಗೊಂಡ ನಂತರ ಅವರನ್ನು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ತಂದೆ, ಸಹೋದರರು, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
