ಪುತ್ತೂರು : ಡಿ 1 : ಜಾಗದ ತಕರಾರು ಎಸಿ ಕೋರ್ಟುನಲ್ಲಿ ಇತ್ಯರ್ಥಗೊಂಡ ಬಳಿಕ, ತನ್ನ ಸ್ವಾಧಿನಕ್ಕೆ ಬಂದ ಭೂಮಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ನಡೆಸುತ್ತಿರುವಾಗ ತಂಡವೊಂದು ಅವಾಚ್ಯ ಶಬ್ಧಗಳಿಂದ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದೆಯೆಂದು ಮಹಿಳೆಯೊಬ್ಬರು ಆಸ್ಫತ್ರೆಗೆ ದಾಖಲಾಗಿ, ಠಾಣೆಗೆ ದೂರು ನೀಡಿದ ಘಟನೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಎಂಬಲ್ಲಿ ನಡೆದಿದೆ. ಪುತ್ತೂರು ಶಾಸಕ ಸಂಜೀವ ಮಠಂದೂರುರವರು ನೊಂದವರ ಪರ ನಿಲ್ಲದೇ, ಹಲ್ಲೆ ನಡೆಸಿದವರ ಬೆಂಬಲವಾಗಿ ನಿಂತು ಅನ್ಯಾಯ ಮಾಡುತ್ತಿದ್ದಾರೆಂದು ದೂರುದಾರ ಮಹಿಳೆ ಮಾಧ್ಯಮಗಳ ಮುಂದೆ ಅಳಲು ತೋರಿದ್ದಾರೆ
ಮೂಲತ : ಪುತ್ತೂರು ತಾಲೂಕಿನ ಬೆಳ್ಳಿಪಾಡಿ ನಿವಾಸಿ, ಪ್ರಸ್ತುತ ಕೆಮ್ಮಿಂಜೆ ಗ್ರಾಮದ ಕೊಂಬೆಟ್ಟು ಮನೆಯಲ್ಲಿ ವಾಸವಿರುವ ಶಕುಂತಳಾ ರೈ (67) ಹಲ್ಲೆಗೊಳಗಾಗಿ ಆಸ್ಫತ್ರೆಗೆ ದಾಖಲಾದ ಮಹಿಳೆ. ಇವರಿಗೆ ಬೆಳ್ಳಿಪ್ಪಾಡಿಯಲ್ಲಿ ಪಿತ್ರಾರ್ಜಿತ ಆಸ್ತಿಯಿದ್ದು , ಇದರ ಸಮೀಪ ನೆಲೆಸಿರುವ, ಸ್ಥಳೀಯ ಬೆಳ್ಳಿಪಾಡಿ ಗ್ರಾಮ ಕೂಟೇಲ್ ನಿವಾಸಿಗಳಾದ ಹರೀಶ್ ಗೌಡ, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನು ಗೌಡ, ಸುಭಾಶ್ ಮತ್ತು ಇತರರು ಪ್ರಕರಣ ದಾಖಲಾದ ಆರೋಪಿಗಳು. ಇವರ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 1860, 143, 147,504,323,506,149 ರಂತೆ ಪ್ರಕರಣ ದಾಖಲಾಗಿದೆ
ಬೆಳ್ಳಿಪ್ಪಾಡಿಯ ಶಕುಂತಳಾ ರೈ ಎಂಬ ಮಹಿಳೆ ಜಾಗದ ತಕರಾರಿನ ವಿಚಾರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಸ್ವತಃ ಮಹಿಳೆಯೇ ಮಾಧ್ಯಮದೊಂದಿಗೆ ಮಾತನಾಡಿ ತಮಗಾದ ಅನ್ಯಾಯದ ಬಗ್ಗೆ ತಿಳಿಸಿದ್ದಾರೆ. ನ್ಯಾಯ ಬೇಕೆಂದು ಕೋರ್ಟ್ ಮೆಟ್ಟಿಲೇರಿದಾಗ ಶಾಸಕ ಸಂಜೀವ ಮಠಂದೂರು ಅವರು ನಮ್ಮ ಪರವಾಗಿ ನ್ಯಾಯ ಬರಬಾರದು ಎಂದು ಒತ್ತಡ ಹೇರಿದ್ದಾಗಿ ಆರೋಪ ಮಾಡಿದ್ದಾರೆ.
ದೂರಿನಲ್ಲಿ ಏನಿದೆ ?
ಬೆಳ್ಳಿಪಾಡಿ ಗ್ರಾಮದ ಕಲ್ಲಡ್ಕ ಎಂಬಲ್ಲಿ ಶಕುಂತಾಳ ಶೆಟ್ಟಿ ಮತ್ತು ಅವರ ತಮ್ಮ ಶ್ವೇತಾ ಪ್ರಕಾಶ್ ̧ರೈ ತಂಗಿಯರಾದ ನವೀನ ರೈ ಮತ್ತು ಜಯಲತಾ ರೈ ರವರಿಗೆ ತಾಯಿಯವರ ಪಿತ್ರಾರ್ಜಿತ ಜಮೀನಿದೆ. ಇದರಲ್ಲಿ ಇವರೆಲ್ಲಾ ಸಹೋದರ ಸಹೋದರಿಯರು ಹಕ್ಕುದಾರರಾಗಿದ್ದು , ಅವರ ಜತೆ . ಈ ಜಾಗದ ಕುರಿತಾಗಿ ಆರೋಪಿಗಳ ಪೈಕಿ ಕೆಲವರಿಗೆ ಹಾಗೂ ಇನ್ನಿತರರಿಗೆ ತಕರಾರುಗಳಿದ್ದವು. ಈ ಬಗ್ಗೆ ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಸುಭಾಶ್, ಹರೀಶ್, ಪದ್ಮನಾಭ ಗೌಡ ರವರ ನಡುವೆ ಪುತ್ತೂರು ಎಸಿ ಕೋರ್ಟಿನಲ್ಲಿ ವ್ಯಾಜ್ಯ ನಡೆದು ಶಕುಂತಳಾ ರೈ ಹಾಗೂ ಮನೆಯವರ ಪರ ತೀರ್ಪು ಬಂದಿದೆ.
ಬಳಿಕ ಆ ಜಾಗದಲ್ಲಿ ಶಕುಂತಾಳ ರೈ ಯವರು ಅಭಿವೃದ್ದಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದರು. ನ 29 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಶಕುಂತಳಾರವರು ಜೆಸಿಬಿಯಲ್ಲಿ ಜಾಗವನ್ನು ಸಮತಟ್ಟು ಮಾಡುತ್ತಿದ್ದ ಸಮಯ ಆರೋಪಿಗಳಾದ ಹರೀಶ್, ಪದ್ಮನಾಭ ಗೌಡ, ಸಂಜೀವ ಗೌಡ ಯಾನೆ ರಾಮಣ್ಣ ಗೌಡ, ಪೆರ್ನು ಗೌಡ, ಸುಭಾಶ್ ಮತ್ತು ಇತರರು ಬಂದು ಅವಾಚ್ಯ ಪದಗಳಿಂದ ನಿಂದಿಸಿ ನಿಮ್ಮನ್ನು ಇಲ್ಲಿಯೇ ಹೂತು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳಿಗೆ ಶಾಸಕರ ಬೆಂಬಲ ಆರೋಪ
ದೂರುದಾರ ಮಹಿಳೆ ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಆರೋಪಿಗಳ ಪರ ನಿಂತು ಅವರ ಕಾನೂನು ಬಾಹಿರ ಕೃತ್ಯಗಳಿಗೆ ಬೆಂಬಲಿಸುತ್ತಿದ್ದಾರೆ. ಶಾಸಕರೇ ಈ ರೀತಿ ಮಾಡಿದರೆ ಜನಸಾಮಾನ್ಯರು ಏನು ಮಾಡ್ಬೇಕು. ಶಾಸಕರದ್ದೇ ಎಲ್ಲಾ ಅಂದಮೇಲೆ ಕೊರ್ಟ್ ಕಚೇರಿ ಯಾಕೆ ಎಲ್ಲಾ ವೆಸ್ಟ್. ಜನಪ್ರನಿಧಿಗಳೇ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿದರೆ ಜನ ಸಾಮಾನ್ಯರ ಗತಿ ಏನು..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
” ಬೆಳ್ಳಿಪ್ಪಾಡಿಯ ಕಲ್ಲಡ್ಕ ಎಂಬಲ್ಲಿ ನಮಗೆ ಸಹೋದರ , ಸಹೋದರಿಯರಿಗೆ 5 ಎಕರೆ 80 ಸೆನ್ಸ್ ಜಾಗವಿದೆ. ಈ ಜಾಗದ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದು ಹಲವು ಬಾರಿ ತೀರ್ಪು ನಮ್ಮ ಪರವಾಗಿ ಬಂದಿದೆ . ಎದುರು ಪಾರ್ಟಿಯ ರಾಜಕೀಯ ಒತ್ತಡಗಳ ಹೊರತಾಗಿಯೂ ಇತ್ತೀಚಿಗೆ ಎಸಿ ಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬಂದಿದೆ. ಆದರೆ ಮರುದಿನವೇ 25ರಷ್ಟು ಜನ ಬಂದು ಕುಡಿದ ಮತ್ತಿನಲ್ಲಿ ನಮ್ಮ ಮತ್ತು ಕುಟುಂಬದ ಮೇಲೆ ಹಲ್ಲೆ ಮಾಡಿ ಮಾನಹಾನಿ ಮಾಡಿದ್ದಾರೆ. ನನ್ನ ತಲೆಗೆ, ಹೊಟ್ಟೆ, ಕುತ್ತಿಗೆ, ಬೆನ್ನಿಗೆ ಹಲ್ಲೆ ಮಾಡಿದ್ದಾಗಿ ತಿಳಿಸಿದ್ದಾರೆ. ಈ ಬಗ್ಗೆ ನಾನು ಪುತ್ತೂರು ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದೆ. ನ್ಯಾಯಾಲಯವು ಪ್ರಕರಣ ದಾಖಲಿಸುವಂತೆ ಪುತ್ತೂರು ನಗರ ಠಾಣೆಗೆ ಸೂಚಿಸಿತ್ತು. ಆದರೇ ರಾಜಕೀಯ ಒತ್ತಡದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಲ್ಲ” ಎಂದು ಶಕುಂತಳಾ ರೈವಯರು ವಿವರಿಸಿದರು.
“ಈ ಹಿಂದೆ ಆ ಜಾಗದಲ್ಲಿ ನಾವು ಚಿಕ್ಕ ಟೆಂಟ್ ಹಾಕಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದೆವು. ಆಗಲೂ ಆರೋಪಿಗಳು ತೊಂದರೆ ನೀಡಿದ್ದರು. ಆಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ದೂರು ಕೊಡುವುದಕ್ಕೆ ಹೋದರೆ ಅವರು ದೂರಿನ ಪ್ರತಿ ನೋಡುವುದಕ್ಕೂ ತಯಾರಿಲ್ಲ ” ಎಂದು ಆರೋಪಿಸಿದ್ದಾರೆ.
ಎಸಿ ಕೋರ್ಟಿನಲ್ಲಿ ನಮ್ಮ ಪರವಾಗಿ ತೀರ್ಪು ಬಂದ ಮರುದಿನವೇ ನಮ್ಮ ಪರವಾಗಿ ಜಡ್ಜ್ ಮೆಂಟ್ ಮಾಡಿದ ಇಬ್ಬರು ಸದ್ಯಸರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಅವರು ಹೇಳಿದಾಗೆ ಕೇಳುವ ಸದಸ್ಯರನ್ನು ನೇಮಕ ಮಾಡಿದ್ದಾರೆ. ಇದರಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕೈವಾಡ ಇದೆ. ಎಂದು ಮಹಿಳೆ ಹೇಳಿದ್ದಾರೆ