Ad Widget

Condoms Found in School Bag :ಹೈಸ್ಕೂಲ್ ವಿದ್ಯಾರ್ಥಿಗಳ ಸ್ಕೂಲ್ ಬ್ಯಾಗ್ ಪರಿಶೀಲನೆ ವೇಳೆ ಶಾಕ್‌ …! ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಮದ್ಯ, ಸಿಗರೇಟ್‌ ಪತ್ತೆ

WhatsApp Image 2022-12-01 at 09.49.48
Ad Widget

Ad Widget

Ad Widget

Condoms Found in School Bag ಬೆಂಗಳೂರು ನವೆಂಬರ್ 30: ಬೆಂಗಳೂರು ನಗರದ ಹೈಸ್ಕೂಲ್ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಅನಪೇಕ್ಷಿತ ವಸ್ತುಗಳು ಪತ್ತೆಯಾದ ಘಟನೆಯೂ ಸಾರ್ವಜನಿಕ ವಲಯದಲ್ಲಿ ಹಾಗೂ ಮಕ್ಕಳ ಪೋಷಕರ ಮನದಲ್ಲಿ ಆತಂಕ ಹಾಗೂ ಅನ್ಯಮನಸ್ಕತೆಗೆ ಕಾರಣವಾಗಿದೆ. ಬೆಂಗಳೂರು ನಗರದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿ ಮೊಬೈಲ್ ಫೋನ್ ಗಳಲ್ಲದೇ, ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳು, ಸಿಗರೇಟ್ ಗಳು, ಲೈಟರ್ ಗಳು ಹಾಗೂ ಅಧಿಕ ಹಣ ಪತ್ತೆಯಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ದಿನ ನ .30 ರಂದು ವರದಿ ಮಾಡಿತ್ತು

Ad Widget

Ad Widget

Ad Widget

Ad Widget

ಮಕ್ಕಳು ಶಾಲೆಗೆ ಮೊಬೈಲ್ ತರುತ್ತಿದ್ದಾರೆ ಎನ್ನುವ ದೂರುಗಳು ಬಂದ ಹಿನ್ನಲೆಯಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳ ಬ್ಯಾಗ್ ಗಳನ್ನು ತಪಾಸಣೆ ನಡೆಸಿದಾಗ ಅಪ್ರಾಪ್ತ ಮಕ್ಕಳ ಬ್ಯಾಗ್ ನಲ್ಲಿ ಕೆಲವು ಊಹಿಸಲಾರದ ವಸ್ತುಗಳು ಕಂಡುಬಂದಿದೆ. ಕೊರೊನಾ ಸಮಯದಲ್ಲಿ ಆನ್ಲೈನ್ ಶಿಕ್ಷಣದ ಬಳಿಕ ವಿದ್ಯಾರ್ಥಿಗಳಿಗೆ ಮೊಬೈಲ್ ಗೀಳು ಹೆಚ್ಚಾಗಿದ್ದು, ತರಗತಿಗಳಿಗೆ ಮೊಬೈಲ್ ತಂದು ಬಳಸುವ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಎಎಂಎಸ್ ಸಹಯೋಗದೊಂದಿಗೆ ಅಧ್ಯಾಪಕರ ಬೆಂಗಳೂರಿನ ಅನೇಕ ಶಾಲೆಯ ಮಕ್ಕಳ ಬ್ಯಾಗ್ ಗಳನ್ನು ಪರಿಶೀಲನೆ ನಡೆಸಿದ್ದಾರೆ

Ad Widget

Ad Widget

Ad Widget

Ad Widget

ನಾಗರಬಾವಿ ಬಡಾವಣೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರು ಮಾತನಾಡಿದ್ದು, ಈ ಬಗ್ಗೆ ಶಾಲೆಯಲ್ಲಿ ವಿಶೇಷವಾಗಿ ಪೋಷಕರ ಸಭೆ ನಡೆಸುತ್ತೇವೆ. ಮಕ್ಕಳ ಬ್ಯಾಗ್ ನಲ್ಲಿ ಈ ರೀತಿಯ ವಸ್ತುಗಳು ಪತ್ತೆಯಾಗಿರುವುದರಿಂದ ಪೋಷಕರು ಕೂಡ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಆಗಿರುವ ಅನಿರೀಕ್ಷಿತ ಬದಲಾವಣೆಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಅನಪೇಕ್ಷಿತ ವಸ್ತುಗಳು ಪತ್ತೆಯಾದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸುವ ಬದಲು ಆಪ್ತಸಮಾಲೋಚನೆಗೆ ಶಿಫಾರಸು ಮಾಡಲಾಗಿದೆ. ಇನ್ನು ಶಾಲೆಯಲ್ಲಿ ಆಪ್ತಸಮಾಲೋಚನೆಗಳನ್ನು ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸದ್ಯ 10 ದಿನ ರಜೆ ನೀಡಲಾಗಿದ್ದು, ಪೋಷಕರಿಂದಲೂ ಸಹಾಯ ಕೇಳಿದ್ದೇವೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಇನ್ನು 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್ ನಲ್ಲಿ ಕಾಂಡೋಮ್ ಪತ್ತೆಯಾಗಿದ್ದು, ಈ ಬಗ್ಗೆ ಆಕೆಯನ್ನು ಪ್ರಶ್ನಿಸಿದಾಗ, ಆಕೆ ತನ್ನ ಸಹಪಾಠಿಗಳನ್ನು ಹಾಗೂ ಖಾಸಗಿ ಟ್ಯೂಷನ್ ಬಗ್ಗೆ ಆರೋಪ ಮಾಡಿದ್ದಾಳೆ ಎಂದು ಪರೀಶೀಲನೆ ನಡೆಸಿದ ಅಧ್ಯಾಪಕರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Ad Widget

Ad Widget

ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಮಾತನಾಡಿದ್ದು, ನಗರದ ಶೇಕಡಾ 80ರಷ್ಟು ಶಾಲೆಯಲ್ಲಿ ಪರಿಶೀಲನೆ ನಡೆಸಿದ್ದೇವೆ. ಒಬ್ಬ ವಿದ್ಯಾರ್ಥಿಯ ಬ್ಯಾಗ್ನಲ್ಲಿ ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿದೆ. ಮತ್ತೊಬ್ಬರ ನೀರಿನ ಬಾಟಲಿಯಲ್ಲಿ ಮದ್ಯ ಪತ್ತೆಯಾಗಿದೆ. ಈ ಆಘಾತದಿಂದ ಹೊರಬರಲು ನಾವು ಯತ್ನಿಸುತ್ತಿದ್ದೇವೆ. ಕೆಲ ವಿದ್ಯಾರ್ಥಿಗಳು, ತನ್ನ ಸಹಾಪಾಠಿಗಳಿಗೆ ಹಾಗೂ ಶಿಕ್ಷಕರಿಗೆ ಕಿರುಕುಳ ನೀಡುವುದು, ಅಶ್ಲೀಲ ಭಾಷೆ ಬಳಸಿ ಬೈಯುವುದು, ಕೆಟ್ಟ ಸನ್ನೆಗಳನ್ನು ಮಾಡುವುದು ಕಂಡುಬಂದಿದೆ. ಈ ರೀತಿ ನಡವಳಿಕೆ 5ನೇ ತರಗತಿ ವಿದ್ಯಾರ್ಥಿಯಲ್ಲೂ ಕಂಡುಬಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಕ್ಕಳ ಶಾಲಾ ಬ್ಯಾಗ್ ಪರಿಶೀಲಿಸಿದಾಗ ಅವುಗಳಲ್ಲಿ ಕಾಂಡೋಮ್ಗಳು, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ನೀರು ಮಿಶ್ರಿತ ಮದ್ಯ ಸಿಕ್ಕಿರುವ ವಿಷಯ ಕುರಿತು ಕುಟುಂಬ, ಸಮಾಜ ಹಾಗೂ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕು ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿ ಹಾಗೂ ಸಾಹಿತಿಗಳು, ಶಿಕ್ಷಣ ತಜ್ಞರು, ಪ್ರಗತಿಪರ ಚಿಂತಕರು ಸಲಹೆ ನೀಡಿದ್ದಾರೆ.

ಬ್ಯಾಗ್ನಲ್ಲಿ ಕಾಂಡೋಮ್ ಪತ್ತೆ ಆಗಿರುವ ಕುರಿತು ದಿನಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಪೋಷಕರನ್ನು ಆತಂಕಕ್ಕೀಡು ಮಾಡಿದೆ. ಹೀಗಾಗಿ ಲೈಂಗಿಕ ಶಿಕ್ಷಣದ ಅಗತ್ಯತೆ ಮತ್ತು ಸಾಧಕ ಕುರಿತು ಚರ್ಚಿಸಲು ಶಿಕ್ಷಣ ಕ್ಷೇತ್ರದ ಸಂಘಟನೆಗಳು, ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಭೆಯನ್ನು ಆಯೋಜಿಸಬೇಕು ಎಂದು ಸಮಿತಿಯ ಅಧ್ಯಕ್ಷ ಬಿ.ಎನ್. ಯೋಗಾನಂದ ಒತ್ತಾಯಿಸಿದ್ದಾರೆ.

ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು, ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗೂ ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನೇ ವಿರೋಧಿಸಿದವು ಎಂದೂ ಪ್ರಗತಿಪರ ಶಿಕ್ಷಣ ತಜ್ಞರು ದೂರಿದ್ದಾರೆ

Ad Widget

Leave a Reply

Recent Posts

error: Content is protected !!
%d bloggers like this: