ಮಂಗಳೂರು : ಟೈಲ್ಸ್ ಪ್ಯಾಕ್ಟರಿಯ ಮೋರಿಯಲ್ಲಿ ಎಂಟರ ಹರೆಯದ ಬಾಲಕಿಯ ಶವ ಪತ್ತೆ ಪ್ರಕರಣ – ಕಾಮಾಂಧ ರಾಕ್ಷಸರ ಪೈಶಾಚಿಕ ಕೃತ್ಯ ಬಯಲು | ಸಾಮೂಹಿಕ ಅತ್ಯಾಚಾರಗೈದು ಕತ್ತು ಹಿಸುಕಿ ಕೊಲೆ –ಪುತ್ತೂರಿನ ಆರೋಪಿಯೂ ಸೇರಿ ನಾಲ್ವರ ಬಂಧನ | 8ರ ಬಾಲಕಿಯ ಮೇಲೆ ಮೂವರು ಕಾಮುಕರು ಎರಗಿ ಕೊಂದರು – ದ.ಕ ಜಿಲ್ಲೆ ಕಂಡು ಕೇಳರಿಯದ ಕೃತ್ಯ – ಪ್ರಕರಣದ ಇಂಚಿಂಚು ವಿವರ ಇಲ್ಲಿದೆ

rape-accused
Ad Widget

Ad Widget

Ad Widget

ದ.ಕ ಜಿಲ್ಲೆಯ ಇತಿಹಾಸದಲ್ಲೇ ಇಂತಹದೊಂದು ಭೀಭತ್ಸ ಘಟನೆ ಈ ವರೆಗೆ ನಡೆದ ಬಗ್ಗೆ ವರದಿಯಾಗಿಲ್ಲ.  ತಮ್ಮ ಕಾಮ ತೃಷೆ ಪೂರೈಸಲು ಎಂಟರ ಹರೆಯದ ಬಾಲಕಿಯ ಮೇಲೆ ಎರಗಿದ ಮೂವರು ಕೀಚಕರು ಆಕೆಯನ್ನು ಹುರಿದು ಮುಕ್ಕಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ಮೋರಿಯಲ್ಲಿ ಎಸೆದು ಹೋದ ಎದೆ ಜಲ್ಲೆನ್ನುವ, ಊಹಿಸಲು ಅಸಾಧ್ಯವಾದ ಪೈಶಾಚಿಕ ಕೃತ್ಯ ಮೂರು ದಿನಗಳ ಹಿಂದೆ ಮಂಗಳೂರಿನ ರಾಜ್‌ ಟೈಲ್ಸ್‌ ಪ್ಯಾಕ್ಟರಿಯ ಅವರಣದಲ್ಲಿ ನಡೆದಿದೆ.

Ad Widget

ಈ ಅತ್ಯಂತ ಹೇಯ ಕೃತ್ಯದ ತನಿಖೆ  ನಡೆಸಿದ ಮಂಗಳೂರು  ಪೊಲೀಸರು ಇದು ಮದ್ಯಪ್ರದೇಶ ಹಾಗೂ ಜಾರ್ಖಂಡ್‌  ರಾಜ್ಯದಿಂದ  ದ.ಕ. ಜಿಲ್ಲೆಗೆ  ಕೆಲಸಕ್ಕೆಂದು ಬಂದ ಕಾಮುಕರ ತಂಡದ ಕೃತ್ಯ ಎಂದು ಪತ್ತೆ ಹಚ್ಚಿದ್ದು,  ಕೃತ್ಯದಲ್ಲಿ ನೇರ ಭಾಗಿಯಾದ ಮೂವರನ್ನು ಹಾಗೂ ದುಷ್ಕೃತ್ಯಕ್ಕೆ ನೆರವಾದ ಓರ್ವನನ್ನು ಬಂಧಿಸಿದ್ದಾರೆ.  ತನ್ನ ಸಹೋದರ ಸಹೋದರಿಯರ ಜತೆ ಆಟವಾಡುತ್ತಿದ್ದ ಕಂದಮ್ಮನನ್ನು ಅಪಹರಿಸಿ, ಹತ್ತಿರದ ಕಾರ್ಖಾನೆ ಸಮೀಪ ಅತ್ಯಾಚಾರ ಎಸಗಿರುವುದು ತನಿಖೆಯಿಂದ ಬಹಿರಂಗವಾಗಿದೆ.

Ad Widget

Ad Widget

 ಮಧ್ಯಪ್ರದೇಶ ಜಿಲ್ಲೆಯ ಪನ್ನಾ ಜಿಲ್ಲೆಯ 21 ರ ಹರೆಯದ ಜಯ್ ಸಿಂಗ್  (ಎ 1 )ಆರೋಪಿಯಾಗಿದ್ದು, ಮಧ್ಯಪ್ರದೇಶ ಜಿಲ್ಲೆಯ ಪನ್ನಾ ಜಿಲ್ಲೆಯ 20 ವರ್ಷ ಪ್ರಾಯದ ಇಬ್ಬರು ಯುವಕರು ಕ್ರಮವಾಗಿ ಮುಕೇಶ್ ಸಿಂಗ್ (ಎ2 ) ಮತ್ತು ಮುನೀಮ್ ಸಿಂಗ್ (ಎ4) ಆರೋಪಿಗಳಾಗಿದ್ದಾರೆ. ಜಾರ್ಖಂಡ್‌ ರಾಜ್ಯದ ರಾಂಚಿ  ಜಿಲ್ಲೆಯ 33ರ ಹರೆಯದ ಯುವಕ ಮನೀಶ್ ತಿರ್ಕಿ ಎ3 ಆರೋಪಿಯಾಗಿದ್ದಾನೆ.  

Ad Widget

ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನೀಶ್ ತಿರ್ಕಿ ಪರಾರಿಯಲ್ಲಿರುವ  ರಾಜ್‌  ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಾಗಿದ್ದರೆ, ಮುನೀಮ್ ಸಿಂಗ್ (20)  ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ . ಆರೋಪಿಗಳ ಪೈಕಿ ಈತ ಬಾಲಕಿಯ ಅತ್ಯಾಚಾರಗೆಯ್ಯುವ ಮೊದಲೇ ಬಾಲಕಿ ಮೃತಪಟ್ಟಿದ್ದಳು . ಉಳಿದ ಮೂವರು ಪೈಶಾಚಿಕವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಆರೋಪಿಗಳ ವಿರುದ್ದ  ಮಂಗಳೂರು ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಪೋಕ್ಸೋ ಕಾಯ್ದೆ. ಹಾಗೂ ಐಪಿಸಿ ಕಲಂ 376 ಹಾಗೂ  302ರಂತೆ ಪ್ರಕರಣ ದಾಖಲಾಗಿದೆ. ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

ಮೂಲತ : ಜಾರ್ಖಂಡ ರಾಜ್ಯದ, ಸಿಂಡೇಗಾ ಜಿಲ್ಲೆಯವರಾದ ಮೃತ ಬಾಲಕಿಯ ತಂದೆ ( 35 ವರ್ಷ  ) ಹಾಗೂ ತಾಯಿ (28 ವರ್ಷ ಪ್ರಾಯ ) ಕಳೆದ  , ಸುಮಾರು 2 ವರ್ಷಗಳಿಂದ ರಾಜ್, ಟೈಲ್ಸ್ ಪ್ಯಾಕ್ಟರಿಯಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ . ಈ ದಂಪತಿಗಳಿಗೆ ಒಟ್ಟು ನಾಲ್ಕು ಮಕ್ಕಳಿದ್ದು  ಅವರ ದೊಡ್ಡವಳು 8 ವರ್ಷ ಪ್ರಾಯದ  ಮೃತ ಬಾಲಕಿ

ಆರೋಪಿಗಳಾದ  ಜಯ್ ಸಿಂಗ್ ಮತ್ತು ಮುಕೇಶ್ ಸಿಂಗ್ ಹೆಚ್ಚಾಗಿ ಒಂದೇ ರೂಮಿನಲ್ಲಿ ವಾಸಿಸುತ್ತಿದ್ದುಮೃತ ಬಾಲಕಿಯನ್ನು ಈ ಹಿಂದೆ ಅನೇಕ ಬಾರಿ ರೂಮಿಗೆ ಬರಮಾಡಿಕೊಂಡು ಅನುಚಿತ ವರ್ತನೆ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವುದು ತನಿಖೆಯಿಂದ ಬಹಿರಂಗವಾಗಿದೆ

ಹತ್ಯೆ  ನಡೆಯುವ ನಾಲೈದು ದಿನಗಳ ಹಿಂದೆ ಆರೋಪಿಗಳಾದ  ಜಯ್ ಸಿಂಗ್‌ , ಮುಕೇಶ್ ಸಿಂಗ್ ರವರು  ಮನೀಶ್ ತಿರ್ಕಿ ರವರ ರೂಮಿನಲ್ಲಿ  ಮಧ್ಯಪಾನ ಮಾಡುತ್ತಿದ್ದ ವೇಳೆ  ಬಾಲಕಿಯ ಬಗ್ಗೆ  ಪ್ರಸ್ತಾಪ ಬಂದಿದೆ .  ರವಿವಾರ ದಿನ  ಟೈಲ್ಸ್‌ ಕಂಪೆನಿಗೆ  ರಜೆ ಇರುವುದರಿಂದ  ಕಾರ್ಮಿಕರು ಯಾರು ಇರುವುದಿಲ್ಲ. ಬಾಲಕಿಯ ತಂದೆ-ತಾಯಿಯವರು ಕೂಡಾ ಮದ್ಯದ  ನಶೆಯಲ್ಲಿರುತ್ತಾರೆ. ಹೀಗಾಗಿ ರವಿವಾರ ಆಕೆಯನ್ನು ಬಳಸಿಕೊಳ್ಳುವ ಬಗ್ಗೆ ಆರೋಪಿಗಳು  ಮಾತನಾಡಿಕೊಂಡಿದ್ದಾರೆ. ನಾಲ್ಕನೇ ಆರೋಪಿ ಮುನೀಮ್ ಸಿಂಗ್ ಪುತ್ತೂರಿನಿಂದ ಮುಕೇಶ್ ಸಿಂಗ್  ಮನೆಗೆ ಶನಿವಾರ  ಬಂದಿದ್ದು ಆತನ ಬಳಿ ಕೂಡ ಬಾಲಕಿಯ ವಿಚಾರ ಪ್ರಸ್ತಾಪವಾಗಿದೆ.

  

ಕೃತ್ಯ ನಡೆದ ದಿನ :

ರವಿವಾರ ನ .21 ರಂದು ಸುಮಾರು ಮಧ್ಯಾಹ್ನ 1-10 ರ ವೇಳೆಗೆ ಬಾಲಕಿಯು ತನ್ನ ಸಹೋದರ, ಸಹೋದರಿಯವರೊಂದಿಗೆ ಪ್ಯಾಕ್ಟರಿಯ ಕಂಪೌಂಡಿನ ಒಳಗಡೆ ಇರುವ ನೀರಿನ ಟ್ಯಾಂಕ್ ಬಳಿ ಆಟವಾಡುತ್ತಿದ್ದಾಗ  ನಾಲ್ವರು ಆರೋಪಿಗಳು  ಬಾಲಕಿಯ ಬಾಯಿನ್ನು ಕೈಯಿಂದ ಮುಚ್ಚಿ ಎತ್ತಿಕೊಂಡು ರೂಮಿನೊಳಗೆ ಹೋಗಿದ್ದಾರೆ.

 ನಂತರ ಎ2 ಆರೋಪಿಯ ಬಾಲಕಿಯ ಒಳವಸ್ತ್ರವನ್ನು ತೆಗೆದು ಲೈಂಗಿಕ ದೌರ್ಜನ್ಯ ನಡೆಸಿದ್ದು, ನಂತರ ಎ3 ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ನಂತರ ಎ1 ಆರೋಪಿಯು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು ಆ ವೇಳೆಗೆ ಬಾಲಕಿ ರಕ್ತ ಸಾವದಿಂದ ಮತ್ತು ನೋವಿನಿಂದ ಬಳಲಿ ಕಿರುಚಾಡಿದ್ದಾಳೆ.  ಆ ನಂತರ ಎl ಆರೋಪಿಯು ಬಾಲಕಿಯ ಕತ್ತು ಹಿಚುಕಿ ಸಾಯಿಸಿರುತ್ತಾನೆ.

 ಆರೋಪಿಗಳು ಒಬ್ಬರ ಬಳಿಕ  ಒಬ್ಬರು ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ ಎಸಗುವಾಗ ಉಳಿದ ಆರೋಪಿಗಳು ಯಾರಾದರೂ ನೋಡುತ್ತಾರೆ ಎಂದು ಕಾವಲು ಕಾಯುತಿದ್ದರು.  ನಂತರ  ಆರೋಪಿ ಜಯಸಿಂಗ್‌ ಹಾಗೂ ಇತರರು ಸುತ್ತ ಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮೃತ ಬಾಲಕಿಯನ್ನು ಮೋರಿಯ  ಒಳಗಡೆ ಬಿಸಾಡಿರುತ್ತಾರೆ.   ಎ4  ಆರೋಪಿಯೂ  ಇತರ ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದಾಗ ಯಾರಾದರೂ ಬರುತ್ತಿರುತ್ತಾರೆಯೇ ಎಂಬುದರ ಬಗ್ಗೆ ನೋಡಿಕೊಳ್ಳುತ್ತಿದ್ದ  ಹಾಗೂ ಬಾಲಕಿಯು ಮೃತ ಪಟ್ಟ ಹಿನ್ನಲೆಯಲ್ಲಿ  ಈತನಿಗೆ  ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ  ಎಸಗಲು ಅವಕಾಶ ಸಿಕ್ಕಿರಲಿಲ್ಲ.

ನಂತರ ಆರೋಪಿಗಳು ಈ ವಿಷಯವನ್ನು ಯಾರಿಗೂ ಹೇಳದಿರುವ ನಿರ್ಧಾರಕ್ಕೆ ಬರುತ್ತಾರೆ.  ಆರೋಪಿಗಳು  ಕೃತ್ಯ ಎಸಗಿರುವ ಸ್ಥಳದಲ್ಲಿ  ಯಾವುದೇ ಸಿಸಿ ಕ್ಯಾಮರಾ ಇರುವುದಿಲ್ಲ ಎನ್ನುವುದು ಕೂಡ ಅವರ ಧೈರ್ಯಕ್ಕೆ ಕಾರಣವಾಗಿರುತ್ತದೆ.  ಆರೋಪಿಗಳಾದ  ಮುಕೇಶ್ ಸಿಂಗ್ (ಎ2 ) ಮತ್ತು ಮುನೀಮ್ ಸಿಂಗ್ (ಎ4) ಪುತ್ತೂರಿಗೆ ಹೋಗುವುದಾಗಿಯೂ  ಹಾಗೂ ಜಯಸಿಂಗ್‌ ಮತ್ತು   ಮನೀಶ್ ತಿರ್ಕಿ ಪ್ಯಾಕ್ಟರಿಯಲ್ಲಿದ್ದು,  ಯಾರಿಗೂ ಸಂಶಯ ಬಾರದ ರೀತಿಯಲ್ಲಿ ನಡೆದುಕೊಳ್ಳುವುದಾಗಿಯೂ  ಮಾತನಾಡಿಕೊಂಡು ಅಲ್ಲಿಂದ ಹೊರಟಿರುತ್ತಾರೆ.

ಶವ ಎಸೆದ ಮೋರಿ

ಏನಿದು ಪ್ರಕರಣ ?

ನ 21  ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ಮನೆಯಲ್ಲಿ  ಊಟ ಮಾಡಿದ ಮೃತ ಬಾಲಕಿಯೂ  ತನ್ನ ಸಹೋದರ ಸಹೋದರಿಯವರೊಂದಿಗೆ ಆಟವಾಡಲು ಹೋಗಿದ್ದಾಳೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ  ವಾಪಾಸು ಮನೆಗೆ ಮೂರು ಮಕ್ಕಳು ಮಾತ್ರ ವಾಪಸ್ಸು ಮನೆಗೆ  ಬಂದಿದ್ದು,  ದೊಡ್ಡ ಮಗಳು ಬಂದಿರುವುದಿಲ್ಲ . ಬಾಲಕಿಯು ಬಾರದೇ ಇದ್ದಾಗ,  ತಂದೆ ತಾಯಿ ಆಕೆಗಾಗಿ ಅಕ್ಕಪಕ್ಕದವರಲ್ಲಿ ವಿಚಾರಿಸಿದ್ದಾರೆ. ಫ್ಯಾಕ್ಟರಿಯ ಹೊರಗಡೆ ಇರುವ ಮನೆಯವರನ್ನು, ಅಲ್ಲಿ ಇರುವ ಉಳಿದ ಕಾರ್ಮಿಕರನ್ನು ವಿಚಾರಿಸಿದ್ದು, ಬಾಲಕಿಯೂ ಸಿಕ್ಕಿರುವುದಿಲ್ಲ .  ಕೆಲವೊಂದು  ಬಾರಿ ಮಕ್ಕಳು ಅಡಗಿಕೊಳ್ಳುವ ಆಟವಾಡುವುದ್ದುದರಿಂದ ಪ್ಯಾಕ್ಟರಿಯ  ಮೂಲೆ ಮೂಲೆಯಲ್ಲೂ  ತಂದೆ-ತಾಯಿ ಮತ್ತು ಅಕ್ಕಪಕ್ಕದ ಜನರು ಹುಡುಕಾಟ ನಡಸಿದ್ದಾರೆ,  ಸಂಜೆ 6-00 ಗಂಟೆ ಸುಮಾರಿಗೆ ಫ್ಯಾಕ್ಟರಿ ಒಳಗಡೆ ಇರುವ ತೋಡಿನ ಒಳಗಡೆ ಬಾಲಕಿ ಬಿದ್ದಿರುವುದನ್ನು ವಿಶ್ವನಾಥ ಎಂಬವರಿಗೆ ಕಾಣಿಸಿದೆ. ಬಾಲಕಿ ಆಕಸ್ಮಿಕವಾಗಿ  ಮೋರಿಗೆ ಬಿದ್ದಿರಬಹುದು ಎಂದು ಮೇಲಕ್ಕೆತ್ತಿ ಮಲಗಿಸಿ ನೋಡಿದಾಗ ಆಕೆ  ಮೃತಪಟ್ಟಿರುವುದು ಗೋಚರವಾಗಿದೆ.

ಬಾಲಕಿಯೂ ಕಾಣೆಯಾದ ಬಗ್ಗೆ ಮನೆಯವರು ಹುಡುಕಾಟ ನಡೆಸಿದಾಗ ಅಲ್ಲಿಯೆ ಇದ್ದ ಆರೋಪಿಗಳಾದ ಜಯಸಿಂಗ್‌ ಮತ್ತು   ಮನೀಶ್ ತಿರ್ಕಿ ಕೂಡಾ ಬಾಲಕಿಯನ್ನು ಹುಡುಕುವಂತೆ ನಟಿಸಿದ್ದಾರೆ.    

ತನಿಖೆ :

ಇದೊಂದು ಗಂಭೀರ  ಪ್ರಕರಣವಾಗಿರುವುದರಿಂದ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು,  ಡಿಸಿಪಿ(ಕಾ.ಸು), ಡಿಸಿಪಿ (ಅಪರಾಧ). ಎಸಿಪಿ(ದಕ್ಷಿಣ), ಎಸಿಪಿ(ಕೇಂದ್ರ) ಎಸಿಪಿ(ಉತ್ತರ), ಎಸಿಪಿ(ಸಿಸಿಆರ್‌ಬಿ)  ಅವರ ನೇತ್ರತ್ವದಲ್ಲಿ  (1) ಕೃತ್ಯದ ಬಗ್ಗೆ (2) ಆರೋಪಿತರ ಪತ್ತೆಯ ಬಗ್ಗೆ,  (3) ಸಂಶಯಾಸ್ಪದ ಆರೋಪಿಗಳ ವಿಚಾರಣೆಯ ಬಗ್ಗೆ (4) ತಾಂತ್ರಿಕ ಮಾಹಿತಿಯನ್ನು ಕಲೆ ಹಾಕಲು  ನಾಲ್ಕು ತಂಡಗಳನ್ನು ನೇಮಕ ಮಾಡಲಾಗಿತ್ತು.

 ಸಿ.ಸಿ.ಟಿ.ವಿ. ಪೂಟೇಜ್, ಸಿ.ಡಿ.ಆರ್. ವಿಶ್ಲೇಷಣೆ, ಪ್ರತ್ಯಕ್ಷ ಸಾಕ್ಷಿಗಳು, ಸಾಂಧರ್ಬಿಕ ಸಾಕ್ಷಿಗಳು, ಆರೋಪಿಗಳ ತಪ್ಪೂಪಿಗೆ ಹೇಳಿಕೆಗಳ ಅಧಾರದಲ್ಲಿ ನಾಲ್ಕು ಜನ ಆರೋಪಿಗಳು ಭಾಗಿಯಾಗಿರುವುದು ಪತ್ತೆಯಾಗಿದೆಯೆಂದು ಮಂಗಳೂರು ಪೊಲೀಸ್‌ ಆಯುಕ್ತರಾದ ಎನ್‌ ಶಶಿಕುಮಾರ್‌ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು

Leave a Reply

Recent Posts

error: Content is protected !!
%d bloggers like this: