ಮಂಗಳೂರು: ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಲು ನಿರ್ಧರಿಸಿದ ಬಗ್ಗೆ ಮಾಹಿತಿ ಪಡೆದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಯವರ ನೇತ್ರತ್ವದಲ್ಲಿ ಹಿಂದೂ ಪರಿವಾರ ಸಂಘಟನೆಗಳ ಮುಖಂಡರು ಯುವತಿಯ ಮನೆಗೆ ನ .20 ರಂದು ಭೇಟಿ ನೀಡಿದರು.
ಯುವತಿ ಮನೆಗೆ ಭೇಟಿ ನಂತರ ವಜ್ರದೇಹಿ ಶ್ರೀಗಳ ಹೇಳಿಕೆ: Exclusive video
ವೈದ್ಯಕೀಯ ಶಿಕ್ಷಣ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವ ಯುವತಿ ಮೇಘಾ ಜತೆ ಆಕೆಯ ತಂದೆ ತಾಯಿ ಹಾಗೂ ಚಿಕ್ಕಮ್ಮನ ಸಮ್ಮುಖ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಇತರೆ ಮುಖಂಡರು ಮಾತುಕತೆ ನಡೆಸಿದರು.
ಗಂಟೆಗಳ ಕಾಲ ಯುವತಿ ಹಾಗೂ ಮನೆಯವರ ಜತೆ ವಿಚಾರ ವಿನಿಮಯವನ್ನು ಸ್ವಾಮೀಜಿಯವರು ನಡೆಸಿದ್ದಾರೆ.ಈ ವೇಳೆ ಮುಸ್ಲಿಂ ಯುವಕನನ್ನು ಮದುವೆಯಾದರೆ. ಆ ಬಳಿಕ ಹಿಂದೂ ಧರ್ಮದ ಅಚರಣೆ ಸಂಪ್ರದಾಯವನ್ನು ಬಿಟ್ಟು ಹೋಗಬೆಕಾದ ಆನಿವಾರ್ಯತೆ, ಆ ಬಳಿಕ ಜೀವನದಲ್ಲಿ ಎದುರಿಸಬೇಕಾದ ತೊಳಲಾಟ, ಧಾರ್ಮಿಕ ಸಂದಿಗ್ದತೆಗಳು, ಲೌಕಿಕ ಹಾಗೂ ಅದ್ಯಾತ್ಮಿಕ ಬದುಕಿನಲ್ಲಿ ಉಂಟಾಗಬಹುದಾದ ಸಂಘರ್ಷಗಳು , ಇದರಿಂದ ದೇಹ ಹಾಗೂ ಮನಸ್ಸಿನ ಮೇಲಾಗುವ ಘಾತಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ವಾಮಿಗಳ ಮನವೊಲಿಕೆಯ ಬಳಿಕ ಯುವತಿ ಹಾಗೂ ಮನೆಯವರು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುವತಿಯ ಹಾಗೂ ಮನೆಯವರ ಮನವೊಲಿಕೆ ನಡೆಸಿದ ಬಳಿಕ ‘ನಿಖರ ನ್ಯೂಸ್’ ಗೆ ವಿಡಿಯೋ ಬಿಡುಗಡೆ ಮಾಡಿರುವ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು “ ದೇವರ ಅನುಗ್ರಹದಿಂದ ಮನವೊಲಿಕೆಯ ಕಾರ್ಯ ಯಶಸ್ವಿಯಾಗಿದೆ. ಪ್ರತಿಷ್ಟಿತ ಹಿಂದೂ ಕುಟುಂಬವೊಂದು ಹಿಂದೂ ಧರ್ಮದಲ್ಲಿಯೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ನಾವು ಹಾಗೂ ಪರಿವಾರ ಸಂಘಟನೆಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡೆವು . ಯುವತಿ ಮೇಘಾ ಒಳ್ಳೆ ಗುಣ, ಒಳ್ಳೆ ನಡತೆ ಹೊಂದಿದ್ದು ಆಕೆಯ ಜತೆಗಿನ ಮಾತುಕತೆ ಫಲಪ್ರದವಾಗಿದೆ ” ಎಂದು ಹೇಳಿದ್ದಾರೆ.
ಯುವತಿ ಮನೆಗೆ ಭೇಟಿ ನಂತರ ವಜ್ರದೇಹಿ ಶ್ರೀಗಳ ಹೇಳಿಕೆ: exclusive video