ಲೋಕಾಯುಕ್ತ ಹಾಗೂ ಎಸಿಬಿ ಎಸ್‌ಪಿಪಿ ಖ್ಯಾತ ವಕೀಲ ರಾಜೇಶ್ ಭಟ್ ತನ್ ಕಚೇರಿಯಲ್ಲಿ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಎರಡು ಪ್ರತ್ಯೇಕ ದೂರಿನ ಮೇರೆಗೆ ಒಟ್ಟು ನಾಲ್ಕು ಜನರ ವಿರುದ್ದ ಪ್ರಕರಣ ದಾಖಲಾಗಿದೆ. ರಾಜೇಶ್ ಭಟ್ ವಿರುದ್ದ ಸಂತ್ರಸ್ತ ಯುವತಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 376, 376-2, 376-2(ಕೆ) 376 ಸಿ, 511, 354(ಎ), 354(ಬಿ) 354(ಸಿ) 354(ಡಿ) 506, 34, 384, 388, 389 ರಂತೆ ಪ್ರಕರಣ ದಾಖಲಾಗಿದೆ
ಇನ್ನು ಸಂತ್ರಸ್ತ ಯುವತಿ ವಕೀಲನ ವಿರುದ್ದ ಅತ್ಯಾಚಾರ ದೂರು ನೀಡುವ ಕೆಲ ದಿನಗಳ ಹಿಂದೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಉರ್ವ ಪೊಲೀಸ್ ಠಾಣೆಯಲ್ಲಿ ಬಲವಂತವಾಗಿ ಮುಚ್ಚಳಿಕೆ ಬರೆಸಿರುವ ಆರೋಪವೂ ಇದೀಗ ಕೇಳಿಬಂದಿದೆ. ಒಟ್ಟು ಮೂರು ಮಂದಿ ಪ್ರಕರಣ ಮುಚ್ಚಿ ಹಾಕಲು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು ಅವರ ವಿರುದ್ದವೂ FIR ದಾಖಲಿಸಲಾಗಿದೆ
ಲೈಂಗಿಕ ದೌರ್ಜನ್ಯ ಘಟನೆಯೇ ನಡೆದಿಲ್ಲ ಎಂದು ಪ್ರಕರಣ ಮುಚ್ಚಿಹಾಕುವ ಬಗ್ಗೆ ಸಂತ್ರಸ್ತ ಹಾಗೂ ಆಕೆಯ ಸ್ನೇಹಿತೆಯಿಂದ ಕಚೇರಿಯಲ್ಲೇ ಹೇಳಿಕೆ ಬರೆಸಿ ಅವರ ಹೆಬ್ಬೆಟ್ಟು ಸಹಿ ಪಡೆದುಕೊಂಡು ಉರ್ವ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆಸಲಾಗಿದೆ. ಅಲ್ಲಿ ದೂರು ವಾಪಸ್ ಪಡೆಯಲು ಒತ್ತಡ ಹಾಗೂ ಬಲಾತ್ಕಾರ ತಂತ್ರ ಪ್ರಯೋಗಿಸಲಾಗಿದೆ. ಅಲ್ಲದೇ ಮಹಿಳಾ ಸಂಘಟನೆಯವರು ಎಂದು ಪರಿಚಯಿಸಿಕೊಂಡು ಕೌನ್ಸಿಲಿಂಗ್ ಹಾಗೂ ಕಾನೂನಿನ ಸಹಾಯ ಮಾಡುತ್ತೇವೆ ಎಂದು ಹೇಳೀ ದಾರಿ ಮದ್ಯೆ ಮೈದಾನಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಗೂ ಬೇಕಾದ ರೀತಿ ಹೇಳಿಕೆ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಸಂತ್ರಸ್ತೆಯ ಸ್ನೇಹಿತೆ ಮಹಿಳಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣ ಸಂಬಂಧ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಅತ್ಯಾಚಾರ ಯತ್ನ ಹಾಗೂ ವಿಚಾರ ಬಹಿರಂಗ ಪಡಿಸದಂತೆ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿರುವುದು ಸೇರಿ ಎರಡು ಪ್ರಕರಣಗಳು ದಾಖಲಾಗಿವೆ. ಎಸಿಪಿ ರಂಜಿತ್ ಬಂಡಾರು ತನಿಖಾಧಿಕಾರಿಯಾಗಿದ್ದಾರೆಂದು ತಿಳಿಸಿದ್ದಾರೆ.
ಮುಚ್ಚಳಿಕೆ ಬರೆಸಿಕೊಳ್ಳಲು ಆರೋಪಿಗೆ ರಾಜೇಶ್ ಗೆ ಮಂಗಳೂರಿನ ಅಶೋಕ ನಗರದ ಜಾಗೃತ ಮಹಿಳಾ ವೇದಿಕೆಯ ಪವಿತ್ರಾ ಆಚಾರ್ಯ ಸಾಥ್ ನೀಡಿರುವುದಾಗಿ ಆರೋಪಿಸಲಾಗಿದ್ದು ಅವರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಸಂತ್ರಸ್ತೆಯ ಸ್ನೇಹಿತೆ ಬಳಿಯಿಂದ ಬರೆಸಿಕೊಂಡಿರುವ ಮುಚ್ಚಳಿಕೆ ಇದಾಗಿದೆ ಎನ್ನಲಾಗುತ್ತಿದೆ.

ಮುಚ್ಚಳಿಕೆಯಲ್ಲಿ ಏನಿದೆ?
ಮುಚ್ಚಳಿಕೆಯ ಮೊದಲ ಸಾಲಿನಲ್ಲಿ ರಾಜೇಶ್ ಭಟ್ ಬಳಿ ಕ್ಷಮೆ ಕೇಳಲಾಗಿದೆ. ನೀವು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ನಾನು ನಿಮ್ಮನ್ನು ಟಾರ್ಗೆಟ್ ಮಾಡಿದ್ದೆ. ಆಡಿಯೋವನ್ನು ಎಡಿಟ್ ಮಾಡಿ ವಾಟ್ಸಪ್ ಮತ್ತು ಸಿಡಿ ಮಾಡಿಸಿ ಹರಿಬಿಟ್ಟಿದ್ದೆ. ಹಲವಾರು ಜನರಿಗೆ ಇದನ್ನು ನಾನೇ ಕಳುಹಿಸಿದ್ದೆ. ನಿಮ್ಮ ಕುಟುಂಬ ಮತ್ತು ಸಮಾಜದಲ್ಲಿ ಹೆಸರು ಹಾಳು ಮಾಡಲು ಬಯಸಿದ್ದೆ. ಬಾರ್ ಅಸೋಸಿಯೇಶನ್ಗೂ ನಾನೇ ಸಿಡಿ ಕಳಿಸಿಕೊಟ್ಟಿದ್ದೆ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಅಂತ ಯಾವುದೇ ಬೇಷರತ್ ಕ್ಷಮೆ ಕೋರುತ್ತಿದ್ದೇನೆ. ಇನ್ನು ಮುಂದೆ ನಿಮಗೆ ನನ್ನ ಮುಖ ತೋರಿಸುವುದಿಲ್ಲ ಎಂದು ಮುಚ್ಚಳಿಕೆಯಲ್ಲಿ ಬರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ .
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಸಂತ್ರಸ್ತೆಯ ಬಾಯ್ ಫ್ರೆಂಡ್ ಧ್ರುವ ವಿರುದ್ದವೂ ವಕೀಲ ರಾಜೇಶ್ ಗೆ ನೆರವಾದ ಆರೋಪದಡಿ ಎಫ್.ಐ.ಆರ್ ದಾಖಲಾಗಿದೆ ಎಂದು ಕನ್ನಡ ವಾರ್ತಾವಾಹಿನಿ ಟಿವಿ 9 ವರದಿ ಮಾಡಿದೆ . ಸಂತ್ರಸ್ತೆ ಲೈಂಗಿಕ ದೌರ್ಜನ್ಯ ಆದ ಬಳಿಕ ಧ್ರುವನ ರಕ್ಷಣೆ ಕೋರಿದ್ದರು ಎಂದು ತಿಳಿದುಬಂದಿದೆ. ರಕ್ಷಣೆ ನೀಡೋದಾಗಿ ಹೇಳಿ ಬಳಿಕ ರಾಜೇಶ್ ಭಟ್ ಜೊತೆ ಸಂಧಾನ ಮಾಡಿಕೊಂಡಿದ್ದಾರೆ. ನೀನೇ ಸಲುಗೆ ಕೊಟ್ಟಿರಬಹುದು ಎಂದು ಧ್ರುವ ಅನುಮಾನಿಸಿದ್ದಾರೆ. ಬಳಿಕ ಅವರನ್ನು ಎದುರು ಹಾಕಿಕೊಳ್ಳಬೇಡ ಎಂದು ಸಲಹೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಆಡಿಯೋ ವೈರಲ್
ದೂರು ದಾಖಲಾಗುವ ಕೆಲ ದಿನಗಳ ಹಿಂದೆ ಸಂತ್ರಸ್ತ ಯುವತಿ ಹಾಗೂ ನ್ಯಾಯಾವಾದಿ ಅವರು ನಡೆಸಿದ್ದಾರೆ ಎನ್ನಲಾದ 11 ನಿಮಿಷ 55 ಸೆಕೆಂಡ್ ಗಳ ಸಂಭಾಷಣೆಯ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ ಅದರಲ್ಲಿ ಸಂತ್ರಸ್ತೆಯೊಂದಿಗೆ ವಕೀಲ ಮಾತನಾಡುತ್ತಾ ಒಂದೇ ಒಂದು ಬಾರಿ ತಪ್ಪು ಮಾಡಿದ್ದೇನೆ. ನನ್ನನ್ನು ಕ್ಷಮಿಸು. ಮತ್ತೆ ಇಂಟರ್ ಶಿಫ್ ಗಾಗಿ ಕಚೇರಿಗೆ ಬರುವಂತೆ ಒತ್ತಾಯಿಸಿದ್ದು . ಇದಕ್ಕೆ ಸಂತ್ರಸ್ತೆ ನಾನು ನಿಮ್ಮ ಮುಖ ನೋಡೋದಿಲ್ಲ. 2 ಹೆಣ್ಣು ಮಕ್ಕಳ ತಂದೆಯಾಗಿ ನೀವು ಮಾಡಿದ್ದು ತಪ್ಪು ಎಂಬುದಾಗಿ ಮನವಿ ಮಾಡುತ್ತಿರುವ ಸಂಭಾಷಣೆಗಳಿವೆ.
ವೈರಲ್ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ :
ವಕೀಲರಿಂದ ಬ್ಲಾಕ್ʼಮೇಲ್ ಆರೋಪ
ಈ ಮಧ್ಯೆ ತನ್ನನ್ನು ಬ್ಲಾಕ್ʼಮೇಲ್ ಮಾಡಿ ಹಣ ಕೀಳಲು ಯತ್ನಿಸಿದ್ದಾಗಿ ಪೊಲೀಸರಿಗೆ ವಕೀಲ ಪ್ರತ್ಯೇಕ ದೂರು ನೀಡಿದಾರೆ., ಇದು ನನ್ನ ಇಮೇಜ್ ಡ್ಯಾಮೇಜ್ ಮಾಡಲು ಯತ್ನಿಸುವ ಪ್ರಯತ್ನವಾಗಿದೆ. ನನ್ನನ್ನು ಲೋಕಾಯುಕ್ತ ಅಭಿಯೋಜಕ ಹುದ್ದೆಯಿಂದ ತೆರವುಗೊಳಿಸಲು ಕೆಲವು ವಕೀಲರೇ ಸೇರಿಕೊಂಡು ಈ ಕೆಲಸ ಮಾಡಿದ್ದಾರೆ. ಆ ಆಡಿಯೋ ತನ್ನದಲ್ಲ, ಯಾರೋ ನಕಲಿ ಮಾಡಿದ್ದಾರೆ ಎಂದು ಅಜ್ಙಾತ ಸ್ಥಳದಿಂದ ಅಡಿಯೋ ಬಿಡುಗಡೆ ಮಾಡಿ ವಕೀಲ ರಾಜೇಶ್ ಸ್ಪಷ್ಟನೆ ನೀಡಿದ್ದಾರೆ.
ಏನಿದು ಪ್ರಕರಣ
ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ ಮಹರಾಷ್ಟ್ರ ಮೂಲದ ಸಂತ್ರಸ್ತ ಕಳೆದ ಆಗಸ್ಟ್ 8ರಂದು ವಕೀಲರಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದಳು. ಈ ನಡುವೆ ವಕೀಲರು ಯುವತಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕಳೆದ ಸೆ.25 ರಂದು ತನ್ನ ಕಚೇರಿ ಒಳಗೆ ಕರೆದು ಅಸಭ್ಯವಾಗಿವರ್ತಿಸಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಲೈಂಗಿಕ ಕಿರುಕುಳ ಹಾಗೂ ಪ್ರಕರಣ ಮುಚ್ಚಿಹಾಕಲು ಒತ್ತಡ ಹಾಕಿದ ಬಗ್ಗೆ ಎರಡು ಪ್ರತ್ಯೇಕ ಕೇಸು ದಾಖಲಾಗಿದೆ. ಅಲ್ಲದೆ ವಕೀಲ ನೀಡಿದ ದೂರಿನ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗದಿದ್ದರೆ ಅವರು ವಕೀಲರಿದ್ದಾರೆ, ಅವರಿಗೆ ಮುಂದಿನ ದಾರಿ ನೋಡಬಹುದಿತ್ತು. ಈಗ ತಲೆಮರೆಸಿರುವ ಆರೋಪಿಗಳ ಬಂಧನ ಬಗ್ಗೆ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ
ಪೊಲೀಸ್ ಆಯುಕ್ತ ಶಶಿಕುಮಾರ್
ಚೈತ್ರಾ ಕುಂದಾಪುರ ವಿರುದ್ದ ಹರಿಹಾಯ್ದ ಮಾಜಿ ಶಕುಂತಲಾ ಶೆಟ್ಟಿ – ವಿಡಿಯೋ ನೊಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ :