ಕಾರ್ಕಳ
ಪರಶುರಾಮ್ ಥೀಮ್ ಪಾರ್ಕ್ ಹಗರಣ: ತನಿಖೆಗೆ ಸಿದ್ದರಾಮಯ್ಯ ಆದೇಶ – ಮಾಜಿ ಸಚಿವ ಸುನೀಲ್ ಕುಮಾರ್ ಕಾರ್ಕಳ ಗೆ ಸಂಕಟ

ಉಡುಪಿ: ಪರಶುರಾಮ್ ಥೀಂ ಪಾರ್ಕ್ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಕೊನೆಗೂ ಸಿಎಂ ಸಿದ್ದರಾಮಯ್ಯ ತನಿಖೆಗೆ ಆದೇಶ ನೀಡಿದ್ದಾರೆ. ಈ ಬಗ್ಗೆ ಸಮಗ್ರ ನಡೆಸುವಂತೆ ಅವರು ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.
ಈ ಕುರಿತು ವಿವರಗಳನ್ನು ನೀಡಿದ MLC ಮಂಜುನಾಥ್ ಭಂಡಾರಿ, ಪರಶುರಾಮ್ ಥೀಮ್ ಪಾರ್ಕ್ ಧಾರ್ಮಿಕ ಸ್ಥಳವೋ ಅಥವಾ ಪ್ರವಾಸಿ ತಾಣವೋ ಎಂಬ ಗೊಂದಲವಿದೆ. ಸಿಎಂ ಆಗಿದ್ದ ಬೊಮ್ಮಾಯಿ ಬಂದು ಉದ್ಘಾಟಿಸಿದ ಪ್ರತಿಮೆ ದಿಢೀರ್ ಕಣ್ಮರೆಯಾಗಿದೆ. ಈ ವಿಷಯ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಗಮನಕ್ಕೆ ಬಂದಿದೆ.
ಅವರು ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಪರಶುರಾಮ್ ಪ್ರತಿಮೆಯ ಸೊಂಟದ ಮೇಲಿನ ಭಾಗವು ಕಾಣೆಯಾಗಿದೆ. ಅಧಿಕಾರಿಗಳನ್ನು ಕೇಳಿದಾಗ ವಿನ್ಯಾಸ ಬದಲಾವಣೆಗೆ ಕಳುಹಿಸಲಾಗಿದೆ ಎನ್ನುತ್ತಾರೆ. ಆದರೆ ಈ ಸ್ಥಳವು ಗೋಮಾಳ ಭೂಮಿಯಾಗಿದೆ.
ಅಲ್ಲಿ ಪಾರ್ಕ್ ನಿರ್ಮಿಸದಂತೆ ಸರ್ಕಾರ ಹಿಂದೆಯೇ ಆದೇಶ ನೀಡಿತ್ತು ಎಂದು ಭಂಡಾರಿ ಮಾಹಿತಿ ನೀಡಿದರು.ಒಮ್ಮೆ ಮುಖ್ಯಮಂತ್ರಿ ಪ್ರತಿಮೆ ಉದ್ಘಾಟಿಸಿದ ಬಳಿಕ ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಅದನ್ನು ಸ್ಥಳಾಂತರ ಮಾಡಲಾಗಿದೆ ಎಂದರೆ ಏನರ್ಥ?
ಇದೀಗ ಸಿಎಂ ಸಿದ್ದರಾಮಯ್ಯ ಪ್ರವಾಸೋದ್ಯಮ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪ್ರತಿಮೆ ಉದ್ಘಾಟನೆ ವೇಳೆ ಅದರ ಸೊಂಟದ ಮೇಲ್ಭಾಗದಲ್ಲಿ ಏನಿತ್ತು ಎಂಬ ಸತ್ಯ ಹೊರಬರಬೇಕಾಗಿದೆ. ಧಾರ್ಮಿಕ ಕೇಂದ್ರವೋ ಅಥವಾ ಪ್ರವಾಸಿ ತಾಣವೋ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ್‌ಕುಮಾರ್, ಅಂದಿನ ಮುಖ್ಯಮಂತ್ರಿಗಳು ಈ ಪಾರ್ಕ್ ಉದ್ಘಾಟನೆಗೂ ಮುನ್ನ ಸೂಕ್ತ ಮಾಹಿತಿ ಪಡೆಯಬೇಕಿತ್ತು ಎಂದರು. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪರಶುರಾಮನಿಗೆ ಅವಮಾನ ಮಾಡಿದೆ. ತರಾತುರಿಯಲ್ಲಿ ಪ್ರತಿಮೆಯನ್ನು ಏಕೆ ನಿರ್ಮಿಸಲಾಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಕಳ
ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನಾಪತ್ತೆ – ಯುವತಿ ಕಂಡು ಬಂದಲ್ಲಿ ತಿಳಿಸುವಂತೆ ಪೊಲೀಸ್ ಪ್ರಕಟನೆ

ಕಾರ್ಕಳದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರ ಹೋಗಿ ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಂದಳಿಕೆ ಗ್ರಾಮದ ಮಾವಿನಕಟ್ಟೆ ದರ್ಖಾಸು ನಿವಾಸಿ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎ ವಿದ್ಯಾರ್ಥಿನಿ ದೀಪಾ (21) ಕಾಣೆಯಾದವರು. ಈಕೆ ನ. 6ರಂದು ಬೆಳಗ್ಗೆ ಕಾಲೇಜಿಗೆಂದು ಹೋದವಳು ಮನೆಗೆ ವಾಪಸ್ ಬಂದಿಲ್ಲ. ಆದ್ರೆ ಕಾಲೇಜಿಗೂ ಹೋಗದೆ ಅತ್ತ ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿದ್ದಳೆ
ಆಕೆಯನ್ನು ಸಂಬಂಧಿಕರ ಮನೆಯಲ್ಲೆಲ್ಲ ಹುಡುಕಾಡಿದ್ದು ಪತ್ತೆಯಾಗದ ಹಿನ್ನೆಲೆಯಲ್ಲಿ ನಾಪತ್ತೆ ಬಗ್ಗೆ ದೂರು ಸಲ್ಲಸಲಾಗಿದೆ. ನೀಲಿ ಬಣ್ಣದ ಚೂಡಿ ಧರಿಸಿದ್ದು, ಕಪ್ಪು ಬಿಳುಪು ಗೋಧಿ ಮೈಬಣ್ಣ ಕೋಲು ಮುಖದ ಚಹರೆ ಹೊಂದಿದ್ದಾಳೆ. ತಂಗಿ ನಾಪತ್ತೆಯಾಗಿರುವ ಬಗ್ಗೆ ದೀಪಾಳ ಅಣ್ಣ ದಿಲೀಪ್ ಪೂಜಾರಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಈ ಚಹರೆಯ ಹುಡುಗಿ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ
ಐದು ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಕಾರ್ಕಳ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶವವಾಗಿ ಪತ್ತೆ

ಉಡುಪಿ : 5 ದಿನಗಳ ಹಿಂದೆ ನಿಗೂಢವಾಗಿ ಕಾಣೆಯಾಗಿದ್ದ ಕಾರ್ಕಳ ನಗರ ಠಾಣೆ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಶವವಾಗಿ ಪತ್ತೆಯಾಗಿದ್ದಾರೆ. ಕಾಪು ಜನಾರ್ದನ ದೇವಸ್ಥಾನ ಬಳಿಯ ಅಂಗಡಿಮನೆ ನಿವಾಸಿ ಹೆಡ್ ಕಾನ್ಸ್‌ಟೇಬಲ್ ಶೃತಿನ್ ಶೆಟ್ಟಿ (35) ಮೃತ ಪಟ್ಟವರು. ಅವರ ಮೃತದೇಹ ಕಾರ್ಕಳದ ಲಕ್ಷ್ಮೀದೇವಿ ಕಲ್ಯಾಣ ಮಂಟಪ ಸಮೀಪ ಬಾವಿಯಲ್ಲಿ ಪತ್ತೆಯಾಗಿದೆ.
ಅಕ್ಟೋಬರ್ 19 ಕ್ಕೆ ಶೃತಿನ್ ಶೆಟ್ಟಿ ನಾಪತ್ತೆಯಾಗಿದ್ದರು. ಈ ಕುರಿತು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ಪೂಜಾ ಶೆಟ್ಟಿ ಶುಕ್ರವಾರದಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೃತಿನ್ ಗಾಗಿ ಹುಡುಕಾಟ ನಡೆಸಿದ್ದರು.
2008ರ ಬ್ಯಾಚಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದ ಶೃತಿನ್ ಶೆಟ್ಟಿ ಎರಡು ತಿಂಗಳ ಹಿಂದೆಯಷ್ಟೇ ಭಡ್ತಿಗೊಂಡು ಕಾರ್ಕಳ ನಗರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಕ್ಟೋಬರ್ 16ರಂದು ರಾತ್ರಿ 7.30ಕ್ಕೆ ಪತ್ನಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರು. ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.
ಅ.18ರಂದು ವಾರದ ರಜೆ ಪಡೆದಿದ್ದ ಶೃತಿನ್ ಅ.19ರಂದು ಸಿಎಲ್ ಪಡೆದಿದ್ದರು. ಬಳಿಕ ನಾಪತ್ತೆಯಾಗಿದ್ದರು. ಮೃತ ದೇಹ ಸಿಕ್ಕ ಬಳಿಕ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಬಹುದಾಗಿದೆ.
ಕಾರ್ಕಳ
Parashurama Statue | ಕಾರ್ಕಳ : ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ ಉದ್ಘಾಟನೆಗೊಂಡ ಪರಶುರಾಮ ಪ್ರತಿಮೆಯಲ್ಲಿ ಈಗ ಇರೋದು ಕೇವಲ ಪಾದದಿಂದ ಗಂಟಿನವರೆಗೆ ಮಾತ್ರ..! ಡ್ರೋನ್ ಕ್ಯಾಮರದಲ್ಲಿ ಹೊರ ಬಿತ್ತು ರಹಸ್ಯ

ಕಾರ್ಕಳ: ಶಾಸಕ ಆಗಿನ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ 14.42 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಕೈಯಲ್ಲಿ ಉದ್ಘಾಟನೆಗೊಂಡ ಕಾರ್ಕಳದ ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ಪರಶುರಾಮನ (Parashurama Statue) ಮೂರ್ತಿಯ ರಹಸ್ಯ ಡ್ರೋನ್ ಕ್ಯಾಮರದಲ್ಲಿ ಹೊರ ಬಿದ್ದಿದೆ.
ಸಿಎಂ ಬೊಮ್ಮಯಿ ಸಮ್ಮುಖದಲ್ಲೇ ಪ್ರತಿಮೆ ನಿರ್ಮಿಸಿದವರಿಗೆ ಸನ್ಮಾನ ಎಂದ ಮಾಜಿ ಸಚಿವ ಸುನೀಲ್ ಕುಮಾರ್ ಭಾಷಣ ಇದೀಗ ವೈರಲ್ ಆಗ್ತಿದೆ. ಆದರೆ ಚುನಾವಣೆಯ ತುರತುರಿಯಲ್ಲಿ ಮೂರ್ತಿ ಉದ್ಘಾಟಿಸಿದ ಶಾಸಕ ಸುನೀಲ್ ಕುಮಾರ್ ವಿರುದ್ಧ ಕಾಂಗ್ರೇಸ್‍ನವರ ಮೌನದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ .
ಮೂರ್ತಿ ಕಾಮಗಾರಿ ನಡೆಯುತ್ತಿರುವ ಜಾಗಕ್ಕೆ ಕಾಂಗ್ರೆಸ್ ನಾಯಕರು ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಕಾಂಗ್ರೆಸ್ ನಾಯಕ ಉದಯ್ ಶೆಟ್ಟಿ ಮುನಿಯಾಲು ಮಾತನಾಡಿ, ಪರಶುರಾಮನ ಪಾದ ಹಾಗೂ ಗಂಟಿನ ತನಕದ ಭಾಗ ಮಾತ್ರ ಇಲ್ಲಿ ಉಳಿದಿದೆ. ಬೇರೆ ಯಾವ ಅಂಗವೂ ಇಲ್ಲಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ 15 ಟನ್ ಭಾರ ಹಾಗೂ 33 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಕನಿಷ್ಠ 2 ವರ್ಷ ಬೇಕಾಗುತ್ತದೆ. ಆದರೆ ಇದು ಕೇವಲ ಮೂರು ತಿಂಗಳಲ್ಲಿ ಆದ ಮೂರ್ತಿಯಾಗಿದೆ.
ನವೆಂಬರ್ 30ರೊಳಗೆ ಕಾಮಗಾರಿ ಮುಗಿಸಲಿಕ್ಕೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಆದರೆ ನಮಗೆ ಯಾವುದೇ ಅವಸರವಿಲ್ಲ. ನಿಧಾನಗತಿಯಲ್ಲಿ ಹಂತ ಹಂತವಾಗಿ ಕಾಮಗಾರಿ ನಡೆದು ನಿಜವಾದ ಕಂಚಿನ ಮೂರ್ತಿಯ ನಿರ್ಮಾಣವಾಗಲಿ ಎಂದು ಆಗ್ರಹಿಸಿದ್ದಾರೆ.
ಬೈಲೂರಿನಲ್ಲಿ ಪ್ರವಾಸೋದ್ಯಮ ಬೆಳೆಯಬೇಕು, ಕಂಚಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪನೆ ಆಗಬೇಕು, ಅನ್ಯ ರಾಜ್ಯದ ಜನರು ಬಂದು ಪರಶುರಾಮರ ಪ್ರತಿಮೆಯನ್ನು ನೋಡಬೇಕು ಎನ್ನುವುದು ನಮ್ಮ ಆಸೆ ಕೂಡ ಎಂದವರು ತಿಳಿಸಿದರು.
ಉಡುಪಿಯ ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ವಹಿಸಿಕೊಂಡಿದೆ. ಆದರೆ ಅವರು ತಾಂತ್ರಿಕವಾಗಿ ಯೋಗ್ಯರಲ್ಲ. ಹಾಗಾಗಿ ಏಜೆನ್ಸಿಯನ್ನು ಬದಲಾಯಿಸಿ ಎಂದರು.
ಊರಿನವರು ಹಾಗೂ ಹಿರಿಯರ ಜತೆ ಸೇರಿಕೊಂಡು ಸತ್ಯ ಶೋಧನ ತಂಡವನ್ನು ರಚಿಸಿ ಅದರ ಮೂಲಕ ಕಾಮಗಾರಿಯಾಗಲಿ ಎಂದವರು ಆಗ್ರಹಿಸಿದರು.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ