Connect with us

ಬಿಗ್ ನ್ಯೂಸ್

Bangalore Kambala | ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ʼಗೆ ಬೆಂಗಳೂರು ಕಂಬಳ ಕೂಟಕ್ಕೆ ಆಹ್ವಾನ ವಿವಾದ – ಆಯೋಜಕ ಶಾಸಕ ಅಶೋಕ್‌ ರೈ ನೀಡಿದ ಸ್ಪಷ್ಟನೆಯೇನು..?

Ad Widget

Ad Widget

ಮೊಟ್ಟ ಮೊದಲ ಬಾರಿಗೆ ರಾಜ್ಯ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಂಬಳ ಕೂಟ (Bangalore Kambala) ನಡೆಯಲಿದ್ದು, ಈ ಕಾರ್ಯಕ್ರಮಕ್ಕೆಸಂಘಟಕರು ಬಿಜೆಪಿ ಸಂಸದ ಬ್ರಿಜ್ ಭೂಷಣ್ (BJP MLA Brij Bhushan) ಅವರನ್ನು ಆಹ್ವಾನಿಸಿರೊದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Ad Widget

Ad Widget

Ad Widget

Ad Widget

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವು ನಖಶಿಖಾಂತ ವಿರೋಧಿಸಿದ ವ್ಯಕ್ತಿಯನ್ನು ಕಾಂಗ್ರೆಸ್‌ ಶಾಸಕರೊಬ್ಬರು ಆಯೋಜಿಸಿದ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಕಾರ್ಯಕ್ರಮದ ಆಯೋಜಕ ಶಾಸಕ ಅಶೋಕ್‌ ರೈಯವರು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಕಾರ್ಯ ಮಾಡಿದ್ದಾರೆ.

Ad Widget

Ad Widget

Ad Widget


ಬೆಂಗಳೂರು ಕಂಬಳ ನ.25 ಮತ್ತು 26 ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದು ಅದರಲ್ಲಿ ಅತಿಥಿಗಳ ಪಟ್ಟಿಯಲ್ಲಿ ಬ್ರಿಜ್ ಭೂಷಣ್ ಹೆಸರಿತ್ತು. ನವೆಂಬರ್ 25ರಂದು ಬೆಂಗಳೂರಿಗೆ ಆಗಮಿಸಲಿರುವ ಬ್ರಿಜ್ ಭೂಷಣ್ ಕಂಬಳ ಕೂಟದಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ಕ್ರೀಡಾಪಟುಗಳನ್ನು ಅಭಿನಂಧಿಸಲಿದ್ದಾರೆ ಎಂದು ಹೇಳಲಾಗಿತ್ತು.

Ad Widget


ಬ್ರಿಜ್ ಭೂಷಣ್ ಮೇಲೆ ಕುಸ್ತಿ ಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವಿದೆ. ಭಾರತದ ಪ್ರಖ್ಯಾತ ಹಾಗು ಒಲಂಪಿಕ್‌ ಪ್ರಶಸ್ತಿ ವಿಜೇತ ಮಹಿಳಾ ಕುಸ್ತಿ ಪಟುಗಳು ಬ್ರಿಜ್‌ ಭೂಷಣ್‌ ವಿರುದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದ್ದರು.

Ad Widget

Ad Widget


ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪೂನಿಯಾ ಮತ್ತು ಸಂಗೀತಾ ಫೋಗಟ್, ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತ ಅಪ್ರಾಪ್ತ ವಯಸ್ಕರು ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪ್ರತಿಭಟನೆ ವೇಳೆ ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದರು.

ಅಲ್ಲದೇ ಇವರ ಪೈಕಿ ಮೂವರು ಮಹಿಳಾ ಕುಸ್ತಿ ಪಟುಗಳು ಬ್ರಿಜ್ ಭೂಷಣ್ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಾರೆ ತಮಗೆ ಒಲಂಪಿಕ್ಸ್‌ ನಲ್ಲಿ ದೊರೆತ ಪದಕವನ್ನು ಗಂಗಾನದಿಯಲ್ಲಿ ತೇಲಿ ಬಿಡುವುದಾಗಿ ಬೆದರಿಕೆ ಒಡ್ಡಿದ್ದರು. ಮಾತ್ರವಲ್ಲದೇ ಕೇಂದ್ರ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗದಿದ್ದಾಗ, ಗಂಗಾನದಿಯಲ್ಲಿ ಪದಕ ತೇಲಿ ಬಿಡಲು ನದಿ ತೀರಕ್ಕೂ ತೆರಳಿದ್ದರು. ಈ ವೇಳೆ ಅವರನ್ನು ಖ್ಯಾತ ರೈತ ಹೋರಾಟಗಾರ ರಾಕೇಶ್‌ ಟಿಕಾಯತ್‌ ಅವರನ್ನು ತಡೆದಿದ್ದರು.

ಈ ಎಲ್ಲ ಹೋರಾಟದ ವೇಳೆ ಕುಸ್ತಿ ಪಟುಗಳಿಗೆ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಬೆಂಬಲವಾಗಿ ನಿಂತಿದ್ದರು . ಬ್ರಿಜ್‌ ಭೂಷಣ್‌ ಅವರು ಗೃಹ ಸಚಿವ ಅಮಿತ್‌ ಶಾ ರವರ ಆಪ್ತರಾಗಿರುವುದೇ ಅವರ ಮೇಲೆ ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಇಂತಹ ಕಳಕಿಂತ ವ್ಯಕ್ತಿಯನ್ನು ಕಾಂಗ್ರೆಸ್‌ ಶಾಸಕ ಅಶೋಕ್‌ ಕುಮಾರ್‌ ಸಾರಥ್ಯದಲ್ಲಿ ನಡೆಯುವ ಕಂಬಳ ಕೂಟಕ್ಕೆ ಅಹ್ವಾನಿಸಿರುವುದು ಕಾಂಗ್ರೆಸ್‌ ಕಾರ್ಯಕರ್ತರ ಹಾಗೂ ಮುಖಂಡರ ಕೆಂಗಣ್ಣಿಗೆ ಕಾರಣವಾಗಿತ್ತು. ಬೆಂಗಳೂರಿನ ಕಂಬಳ ಕೂಟಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ 1 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದೆ. ಹೀಗಿರುವಾಗ ಸರಕಾರದ ಖರ್ಚಿನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಹ್ವಾನಿಸಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.


ಕಾರ್ಯಕ್ರಮದ ಆಯೋಜಕರ ಸ್ಪಷ್ಟನೆ
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ತಾರಕಕ್ಕೆರುತ್ತಲೇ ಪ್ರಕರಣ ರಾಷ್ಟ್ರೀಯ ಮಾದ್ಯಮಗಳ ಗಮನ ಕೂಡ ಸೆಳೆಯಿತು. ಕಾಂಗ್ರೆಸ್‌ ನ ರಾಷ್ಟ್ರ ಮುಖಮಡರು ಈ ಬೆಳವಣಿಗೆಯಿಂದ ಮುಜುಗರಕ್ಕೆ ಒಳಗಾದರು ಎನ್ನಲಾಗಿದೆ. ಇದಾಗುತ್ತಲೇ ಡ್ಯಾಮೇಜ್‌ ಕಂಟ್ರೋಲ್‌ ಗೆ ಮುಂದಾದ ಶಾಸಕ ಅಶೋಕ್‌ ರೈಯವರು ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ

ಕರ್ನಾಟಕದ ಕುಸ್ತಿಪಟುಗಳಿಗೆ ಫೆಡರೇಷನ್ ನಿಂದ ಅವಕಾಶ ಸಿಕ್ಕಿತ್ತು. ವಿಜೇತರನ್ನು ಅಭಿನಂದಿಸಲು ಬ್ರಿಜ್ ಭೂಷನ್ ಬಯಸಿದ್ದರು. ಸಿದ್ದಿ ಜನಾಂಗದ ಸಂಘಟನೆ ಬ್ರಿಜ್ ಭೂಷಣ್ ಅವರನ್ನು ಆಹ್ವಾನಿಸಲು ಮನವಿ ಮಾಡಿಕೊಂಡಿತ್ತು.

ಸಂಘಟನೆ ಒತ್ತಾಯಿಸಿದಂತೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ವೇದಿಕೆಗೆ ಇಡಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯದ ನಾಯಕರನ್ನು ಆಹ್ವಾನಿಸಲಾಗಿದೆ. ಅದೇ ರೀತಿ ಬ್ರಿಜ್ ಭೂಷನ್ ಅವರಿಗೂ ಆಹ್ವಾನ ಕಳುಹಿಸಲಾಗಿತ್ತು ಎಂದು ತಿಳಿಸಿದ್ದರು.

ಮುಂದುವರಿದು: ಬೂಷಣ್ ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರೋದಿಲ್ಲ ಅಂತ ಹೇಳಿದ್ದಾರೆ. ಆಹ್ವಾನ ಪತ್ರಿಕೆಯನ್ನು ಕೂಡ ನಾವು ಬದಲು ಮಾಡುತ್ತೇವೆ” ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.

Click to comment

Leave a Reply

ಸಿನೆಮಾ

  Lakshmika Sajeevan ಹಠಾತ್‌ ಹೃದಯಾಘಾತ – 24ರ ಹರೆಯದ  ಮಲಯಾಳಂ ನಟಿ ಲಕ್ಷ್ಮಿಕಾ  ಸಜೀವನ್ ಮೃತ್ಯು

Ad Widget

Ad Widget

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.

Ad Widget

Ad Widget

Ad Widget

Ad Widget

ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

Ad Widget

Ad Widget

Ad Widget

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Ad Widget

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

Ad Widget

Ad Widget
Continue Reading

ಸುಳ್ಯ

 Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ :  ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ,  ವ್ಯತ್ಯಯ – ಇಲ್ಲಿದೆ ಮಾಹಿತಿ

Ad Widget

Ad Widget

ಶ್ರೀ ಕ್ಷೇತ್ರದ  ಜಾತ್ರೋತ್ಸವದ ಹಿನ್ನಲೆ ಇಲ್ಲಿನ  ಪ್ರಧಾನ ಸೇವೆಗಳಲ್ಲಿ  ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.  

Ad Widget

Ad Widget

Ad Widget

Ad Widget

ಪ್ರಾರ್ಥನೆ, ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:

Ad Widget

Ad Widget

Ad Widget

ಲಕ್ಷದೀಪೋತ್ಸವ (ಡಿ.12), ಚೌತಿ (ಡಿ.16), ಪಂಚಮಿ (ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

Ad Widget

 ಲಕ್ಷದೀಪೋತ್ಸವ (ಡಿ.12), ಚೌತಿ  (ಡಿ.16), ಪಂಚಮಿ (ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ (ಡಿ.24) ದಂದು ಮಹಾಭಿಷೇಕ ಸೇವೆ ನಡಯುವುದಿಲ್ಲ. ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

Ad Widget

Ad Widget

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

ಚಂಪಾಷಷ್ಠಿ ಜಾತ್ರೋತ್ಸವವು ಡಿ.10 ರಿಂದ 24ರ ತನಕ ನಡೆಯಲಿದ್ದು, ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.9 ದರುಶನದಲ್ಲಿ ವ್ಯತ್ಯಯ: ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯು ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ, 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Continue Reading

ಸುಳ್ಯ

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

Ad Widget

Ad Widget

Kukke Shri Subrahmanya Temple ಡಿಸೆಂಬರ್ 06;  ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವಾರಾಂತ್ಯದಲ್ಲಿ  ದರ್ಶನ ಮತ್ತು ವಿವಿಧ ಸೇವೆಗಳು ಅರ್ಧ ದಿನದ ಕಾಲ ಲಭ್ಯವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

Ad Widget

Ad Widget

Ad Widget

Ad Widget

ದೇವಳದಲ್ಲಿ 2023-24ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರಕವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ಇರಲಿದೆ. ಈ ಹಿನ್ನಲೆಯಲ್ಲಿ ಆ ದಿನ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Ad Widget

Ad Widget

Ad Widget

ಕುಕ್ಕೆ ಸುಬ್ರಮಣ್ಯದಲ್ಲಿ “ಮೂಲಮೃತಿಕಾ” ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಮೂಲಸ್ಥಾನವಾದ ಕುಕ್ಕೆ ಸುಬ್ರಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಪ್ರಸಾದ. ಯಾವುದೇ ದೇವಾಲಯದಲ್ಲಿ ಸಹ ಈ ಮಾದರಿ ಪ್ರಸಾದ ಸಿಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಪ್ರಸಾದ ತೆಗೆಯಲಾಗುತ್ತದೆ.

Ad Widget

ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೂಲಮೃತಿಕಾ ಪ್ರಸಾದವನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.  ಈ ಮೃತ್ತಿಕೆ ಪ್ರಸಾದ ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

Ad Widget

Ad Widget

ಸಾವಿರಾರು ಭಕ್ತರು ಮೂಲಮೃತಿಕಾ ಪ್ರಸಾದವನ್ನು ತೆಗೆದುಕೊಂಡು ಹೋಗಲು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶುಭ ಕಾರ್ಯಗಳ ಸಂದರ್ಭದಲ್ಲಿ, ರೋಗಗಳ ನಿವಾರಣೆಗೆ ಸಹ ಈ ಪ್ರಸಾದವನ್ನು ಬಳಕೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಸುಬ್ರಹ್ಮಣ್ಯಂ ಗ್ರಾಮದಲ್ಲಿ ಬರುತ್ತದೆ. ಪ್ರಕೃತಿಯ ಸೌಂದರ್ಯದಲ್ಲಿ ನೆಲೆಸಿರುವ ಈ ಭವ್ಯವಾದ  ದೇವಾಲಯವು ಗ್ರಾಮದ ಹೃದಯಭಾಗದಲ್ಲಿದೆ. ಪ್ರಕೃತಿ ನದಿಗಳು, ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಅನನ್ಯ ಸೌಂದರ್ಯವನ್ನು ಬಹಿರಂಗಪಡಿಸುತ್ತದೆ .ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Continue Reading

Trending

error: Content is protected !!