ಕ್ರೈಂ
ದೈಹಿಕ ಸಂಬಂಧ ಬೆಳೆಸಲು ನಿರಾಕರಿಸಿದ ಭಕ್ತೆಯ ಹತ್ಯೆ : ಅರ್ಚಕ ಬಂಧನ

ಸೇಲಂ: ಇಲ್ಲಿ 28 ವರ್ಷದ ಮಹಿಳಾ ಭಕ್ತೆಯೊಬ್ಬರನ್ನು ಹತ್ಯೆ ಮಾಡಿದ ಆರೋಪದ ಮೇಲೆ 42 ವರ್ಷದ ಅರ್ಚಕನನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆಯನ್ನು ಸೆಲ್ವಿ ಎಂದು ಗುರುತಿಸಲಾಗಿದೆ. ಬಂಧಿತ ಅರ್ಚಕನನ್ನು ಸೇಲಂನ ಶಿವತಪುರಂ ಬಳಿಯ ಪೆರುಮಾಂಪಟ್ಟಿಯ ವಿ. ಕುಮಾರ್ ಎಂದು ಗುರುತಿಸಲಾಗಿದೆ.
ಈತ 20 ವರ್ಷಗಳ ಹಿಂದೆ ತಮ್ಮ ಕೃಷಿ ಭೂಮಿಯಲ್ಲಿ ಪೆರಿಯಾಂಡಿಚಿ ಅಮ್ಮನ್ ದೇವಸ್ಥಾನವನ್ನು ನಿರ್ಮಿಸಿ ಅರ್ಚಕರಾಗಿಯೂ ಕೆಲಸ ಮಾಡುತ್ತಿದ್ದ.ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ಅರ್ಚಕ ಬಯಸಿದ್ದು, ಮರ್ಯಾದಸ್ಥ ಕುಟುಂಬದ ಸಾತ್ವಿಕ ಹೆಣ್ಣು ಮಗಳಾದ ಸೆಲ್ವಿ ತಿರಸ್ಕರಿಸಿರುವ ಕಾರಣ ಹತ್ಯೆ ನಡೆಸಲಾದ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಲ್ವಿ ಮತ್ತು ಆಕೆಯ ಪತಿ ವಿ. ಪಸುವರಾಜ್ ಕ 9 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ದಂಪತಿಗೆ ಮಗುವಾಗಿರಲಿಲ್ಲ. ಮಗುವಿಗಾಗಿ ಹಂಬಲಿಸಿದ ದೈವಭಕ್ತೆ ಸೆಲ್ವಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪ್ರಾರ್ಥಿಸುತ್ತಿದ್ದರು. ಅಕ್ಟೋಬರ್ 15 ರಂದು ಸೇಲಂ ಜಿಲ್ಲೆಯ ಎಲಂಪಿಳ್ಳೈ ಎಂಬಲ್ಲಿಗೆ ಸ್ನೇಹಿತನನ್ನು ಭೇಟಿ ಮಾಡಲು ಹೋಗುವುದಾಗಿ ಸೆಲ್ವಿ ಮನೆಯಿಂದ ಹೊರಟು ಹೋಗಿದ್ದವಳು ನಾಪತ್ತೆಯಾಗಿದ್ದು, ಆಕೆಯ ಮೊಬೈಲ್ ಫೋನ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.
ಆತಂಕಗೊಂಡ ಪಸುವರಾಜ್ ಗುರುವಾರ ತಾರಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶೋಧನೆಗಿಳಿದ ಪೊಲೀಸರಿಗೆ ಕುಮಾರ್ ಒಡೆತನದ ದೇವಸ್ಥಾನದ ಬಳಿಯ ಪೊದೆಯಿಂದ ಸೆಲ್ವಿ ಶವ ಪತ್ತೆಯಾಗಿದೆ. ವಿಚಾರಣೆ ವೇಳೆ ಸೆಲ್ವಿ ಒಂದು ವಾರಕ್ಕೂ ಹೆಚ್ಚು ಕಾಲ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.
ಚಂದದ ಬದುಕಿಗಾಗಿ ಮಗುವೊಂದನ್ನು ಬಯಸಿ ದೇವಸ್ಥಾನಗಳಿಗೆ ಸಂದರ್ಶಿಸುತ್ತಿರಿವ ಭಕ್ತೆಯೊಬ್ಬರು ದೇವಸ್ಥಾನದ ಅರ್ಚಕರಿಂದಲೇ ಕೊಲೆಯಾಗಿ ಇಡೀ ಕುಡುಂಬ ಛಿದ್ರವಾಗಿರುವುದು ದುರಂತ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಅರ್ಚಕ ಕುಮಾರ್‌ನ್ನು ಬಂಧಿಸಿದ್ದಾರೆ.
ಸುಳ್ಯ
HIt And Run ಶಿರಾಡಿ ಘಾಟ್ ನಲ್ಲಿ ಹಿಟ್ ಅಂಡ್ ರನ್ – ಇಬ್ಬರು ಮೃತ್ಯು

ನೆಲ್ಯಾಡಿ, ಡಿ.06. ಶಿರಾಡಿ ಘಾಟ್ ನ ಗುಂಡ್ಯ ಕೆಂಪು ಹೊಳೆ ಸಮೀಪ ವಾಹನವೊಂದು ಗೂಡ್ಸ್ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅಪಘಾತವು ಬುಧವಾರ ಬೆಳಗಿನ ಜಾವ ನಡೆದಿದ್ದು, ಮೃತಪಟ್ಟ ಇಬ್ಬರೂ ಗೂಡ್ಸ್ ಟೆಂಪೋದಲ್ಲಿದ್ದವರು ಎಂದು ತಿಳಿದು ಬಂದಿದೆ.
ಯಾವುದೋ ಅಪರಿಚಿತ ಘನ ವಾಹನ ಗೂಡ್ಸ್ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗೂಡ್ಸ್ ವಾಹನದ ಚಾಲಕ ಹಾಗೂ ಆ ವಾಹನದಲ್ಲಿದ್ದ ಇನ್ನೊರ್ವ ಮೃತಪಟ್ಟಿದ್ದು ಇಬ್ಬರು ಹಾಸನ ಜಿಲ್ಲೆಯವರು ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಗೂಡ್ಸ್ ಟೆಂಪೋ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿ ಹೊಡೆದು ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕ್ರೈಂ
Acid Attack ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದೇ ತಪ್ಪಾಯ್ತಾ? ಮಾಲೀಕನ ಮೇಲೆ ಆಸಿಡ್ ದಾಳಿ

ಚಿಕ್ಕಮಗಳೂರು: ನಾಯಿ ಬೊಗಳಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ನಾಯಿಯ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಆಸಿಡ್ ದಾಳಿಗೊಳಗಾದ ವ್ಯಕ್ತಿಯನ್ನು ಕುರಗುಂದ ನಿವಾಸಿ ಸುಂದರ್ ರಾಜ್ ಎಂದು ಗುರುತಿಸಲಾಗಿದೆ.
ತಾನು ಸಾಕುತ್ತಿರುವ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ್ ನಾಯಿಗೆ ಬೈಯ್ಯುತ್ತಿದ್ದ. ಆದರೆ ಜೇಮ್ಸ್ ಎನ್ನುವ ವ್ಯಕ್ತಿ ತನಗೆ ಬೈಯುತ್ತಿದ್ದಾನೆ ಎಂದು ಅಪಾರ್ಥ ಮಾಡಿಕೊಂಡು ನೆರೆಮನೆಯ ನಿವಾಸಿ ಸುಂದರ್ ರಾಜ್ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?
ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಡಗಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ನಾಯಿ ಹೆಸರಿನಲ್ಲಿ ತನಗೆ ಬಯ್ಯುತ್ತಿರುವುದಾಗಿ ಜೇಮ್ಸ್ ಆರೋಪಿಸಿದ್ದು, ಈತನ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೈಂ
BJP Ticket Deal: ಹಿಂದೂತ್ವದ ಪ್ರಖರ ವಾಗ್ಮಿ ಚೈತ್ರಾ 84 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ – ಜಾಮೀನು ಮಂಜೂರು

chaitra Got Bail ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ (BJP Ticket Deal) ಹೋಟೆಲ್ ಉದ್ಯಮಿ ಗೋವಿಂದಬಾಬು ಪೂಜಾರಿಗೆ (Govinda Babu poojary) ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನಕ್ಕೀಡಾಗಿದ್ದ ಹಿಂದೂತ್ವದ ಪ್ರಖರ ವಾಗ್ಮಿ ಚೈತ್ರಾ (Infamous Hindutva Orator) ಸಹಿತ ಇಬ್ಬರಿಗೆ ಕೊನೆಗೂ ಜಾಮೀನು (chaitra Got Bail) ಮಂಜೂರಾಗಿದೆ. ಇಬ್ಬರಿಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸರಿ ಸುಮಾರಿ 82 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಚೈತ್ರಾ (chaitra) ಕೊನೆಗೂ ಡಿ 5 ರಂದು ಬಿಡುಗಡೆಯಾಗಲಿದ್ದಾರೆ
ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಚೈತ್ರಾ ಪ್ರಥಮ ಆರೋಪಿಯಾಗಿದ್ದಾರೆ, ಹಾಲಶ್ರೀ ಸ್ವಾಮೀಜಿ ಮೂರನೇ ಆರೋಪಿಯಾಗಿದ್ದರು . ಹಾಲಶ್ರೀಗೆ ಕೆಲ ದಿನಗಳ ಹಿಂದೆಯೇ ಜಾಮೀನು ದೊರಕಿತ್ತು.
ಚೈತ್ರಾ ಹಾಗೂ ಸಹಚರರು ಒಟ್ಟು 5 ಕೋಟಿ ರೂಪಾಯಿಯಷ್ಟು ಹಣ ಪಡೆದು ಬಳಿಕ ವಂಚಿಸಿದ್ದರು ಎಂದು ಗೋವಿಂದ ಬಾಬು ಆರೋಪಿಸಿದ್ದರು. ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಸೆ 12 ರಂದು ರಾತ್ರಿ ಚೈತ್ರಾ, ಗಗನ್ ಕಡೂರು ಬಂದಿಸಿದ್ದರು.
ಪ್ರಕರಣ ಬೆಳಕಿಗೆ ಬರುತ್ತಲೇ ತಲೆ ಮರೆಸಿಕೊಂಡಿದ್ದ ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿಯನ್ನು ವಾರಗಳ ಹುಡುಕಾಟದ ಬಳಿಕ ಒಡಿಸ್ಸಾದಲ್ಲಿ ಬಂಧಿಸಲಾಗಿತ್ತು. ಏತನ್ಮಧ್ಯೆ ಉಳಿದ ಆರೋಪಿಗಳಾದ ಚೈತ್ರಾ ಬರೆದ ಸ್ಕ್ರಿಪ್ಟ್ ನ ಪಾತ್ರದಾರಿಗಳಾದ ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ ಓಟ್ಟು 9 ಮಂದಿಯನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು.
ಆರೋಪಿಗಳು ಅಕ್ರಮ ಹಣದಿಂದ ಸಂಪಾದಿಸಿದ್ದ ಲಕ್ಷಾಂತರ ರೂ. ನಗದು ಹಾಗೂ ಕೆಲ ಆಸ್ತಿಗಳ ಪತ್ರಗಳು ಸೇರಿ 4 ಕೋಟಿ ರೂ. ಅಧಿಕ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಚೈತ್ರಾ ಬಳಿ 81 ಲಕ್ಷ ರೂ. ನಗದು ಹಾಗೂ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್ನಲ್ಲಿ 1.08 ಕೋಟಿ ಮೌಲ್ಯದ ಭದ್ರತಾ ಠೇವಣಿ. ಇದರ ಜತೆಗೆ 12 ಲಕ್ಷ ರೂ. ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದರು.
ಇನ್ನು ಚೈತ್ರಾ ಸಹಚರರಾದ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಭಿನವ ಹಾಲಾಶ್ರೀ ಬಳಿ 56 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಲಾಗಿತ್ತು. ಅಲ್ಲದೆ, ತನಿಖೆ ಪೂರ್ಣಗೊಳಿಸಿ ಇತ್ತೀಚೆಗಷ್ಟೇ 9 ಮಂದಿ ಆರೋಪಿಗಳ ವಿರುದ್ಧ ಕೋರ್ಟ್ಗೆ ಸಿಸಿಬಿ ಆರೋಪಪಟ್ಟಿ ಕೂಡ ಸಲ್ಲಿಸಿತ್ತು.
ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್ಗೆ 3ನೇ ಎಸಿಎಂಎಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು2 days ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು1 day ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ