Connect with us

ಕ್ರೀಡೆ

Mitchell Marsh | ವರ್ಲ್ಡ್ ಕಪ್ ಟ್ರೋಫಿ ಮೇಲೆ ಕಾಲಿಟ್ಟು ಫೋಟೋ ಶೂಟ್ ಮಾಡಿದ ಆಸ್ಟ್ರೇಲಿಯ ಆಟಗಾರ – ಭಾರಿ ಆಕ್ರೋಶ

Ad Widget

Ad Widget

ಅಹಮ್ಮದಾಬಾದ್: ವಿಶ್ವಕಪ್ 2023 ರಲ್ಲಿ (World Cup 2023) ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Ad Widget

Ad Widget

Ad Widget

Ad Widget

ಮಿಚೆಲ್ ಟ್ರೋಫಿ (World Cup Trophy) ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

Ad Widget

Ad Widget

Ad Widget

ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ.

Ad Widget

ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನವೆಂಬರ್ 19 ರ ಭಾನುವಾರ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ (IND Vs AUS) ಆಟವಾಡಿದೆ. ಪಂದ್ಯ ಗೆದ್ದ ಬಳಿ ಆಸ್ಟ್ರೇಲಿಯಾ ತಂಡವು ಹೋಟೆಲ್‍ನಲ್ಲಿ ಆರಾಮವಾಗಿ ಕುಳಿತುಕೊಂಡು ಮಾತನಾಡುತ್ತಿರುವುದು ಫೋಟೋದಲ್ಲಿ ಕಂಡುಬಂದಿದೆ.

Ad Widget

Ad Widget

ವಿಶ್ವಕಪ್ ಗೆಲುವಿನ ಹಂಬಲದಲ್ಲಿದ್ದ ಭಾರತ ಕ್ರಿಕೆಟ್ ತಂಡ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

Continue Reading
Click to comment

Leave a Reply

ಕ್ರೀಡೆ

Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?

Ad Widget

Ad Widget

Jay Shah: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ 2023ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Ad Widget

Ad Widget

Ad Widget

Ad Widget

ಈ ಮಾಹಿತಿಯನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು‘2023 ರ ಸ್ಪೋರ್ಟ್ಸ್ ಬಿಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾದ ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್ ಶಾ ಅವರಿಗೆ ಅಭಿನಂದನೆಗಳು. ಕ್ರೀಡಾ ಆಡಳಿತದಲ್ಲಿ ಈ ವಿಶೇಷ ಗೌರವವನ್ನು ಪಡೆದ ಮೊದಲ ವ್ಯಕ್ತಿ ಜಯ್ ಶಾ. ಅವರು ನಿಜವಾಗಿಯೂ ಈ ಗೌರವಕ್ಕೆ ಅರ್ಹರು ಎಂದು ಬರೆದುಕೊಂಡಿದೆ.

Ad Widget

Ad Widget

Ad Widget

ಬಿಸಿಸಿಐನಲ್ಲಿ ಕಾರ್ಯದರ್ಶಿ ಹುದ್ದೆಯ ಹೊರತಾಗಿ, ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿದ್ದಾರೆ. ಈ ಹುದ್ದೆಗೇರುವ ಮೊದಲು ಅವರು ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು

Ad Widget

2019 ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಆಯ್ಕೆಯಾದರು. ಇತ್ತೀಚೆಗೆ ಮುಕ್ತಾಯಗೊಂಡ 2023ರ ಏಕದಿನ ವಿಶ್ವಕಪ್ ಮತ್ತು ಶ್ರೀಲಂಕಾ ಹಾಗೂ ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದ ಏಷ್ಯಾಕಪ್ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ ಕೀರ್ತಿ ಶಾ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರಿಗೆ 2023ರ ವರ್ಷದ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿ ಒಲಿದಿದೆ.ಮತ್ತು ವರ್ಷದ ಆರಂಭದಲ್ಲಿ ಎಸಿಸಿ ಅಧ್ಯಕ್ಷರಾಗಿಯೂ ಆಯ್ಕೆಯಾದರು.

Ad Widget

Ad Widget

ಜಯ್ ಶಾ ಅವರು ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ಶಾ ಪ್ರಮುಖ ಪಾತ್ರ ವಹಿಸಿದ್ದಾರೆ.ಕ್ರಿಕೆಟ್‌ಗೆ ಅವರ ಕೊಡುಗೆಯನ್ನು ಗುರುತಿಸಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಅವರನ್ನು ಅತ್ಯುತ್ತಮ ಕ್ರೀಡಾ ಉದ್ಯಮ ನಾಯಕ ಎಂದು ಗುರುತಿಸಿದೆ.

Continue Reading

ಕ್ರೀಡೆ

Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್‌ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್‌ – ಆದರೇ ಮುಂದೇನಾಯಿತು ?

Ad Widget

Ad Widget

ಬೆಂಗಳೂರು : Bangalore: Bomb Threat ಪತಿ ಹಾಗೂ ಪತ್ನಿ ನಡುವೆ ಮತ್ತೊಬ್ಬ ಎಂಟ್ರಿ ಕೊಟ್ಟ ಬಳಿಕ ಉಂಟಾದ ಮನಸ್ತಾಪ ಬಾಂಬ್‌ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಬೆಳೆದಿದೆ. ಪ್ರಿಯಕರನ ಮಾತು ಕೇಳಿ ಗಂಡನನ್ನು ಕೇಸಿನಲ್ಲಿ ಫಿಟ್‌ ಮಾಡಲು ಹೋಗಿ ಸ್ವತ: ಪತ್ನಿಯೇ ಜೈಲು ಸೇರಿದ ಘಟನೆ ಬೆಂಗಳುರಿನ ಹೊರ ವಲಯ ಆನೇಕಲ್‍ನಲ್ಲಿ ಬೆಳಿಕಗೆ ಬಂದಿದೆ

Ad Widget

Ad Widget

Ad Widget

Ad Widget

ಆನೇಕಲ್‍ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ (Uttara Karnataka) ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ವಾಸವಿದ್ದರು.  ಇತ್ತೀಚೆಗಿನ ದಿನಗಳಲ್ಲಿ ಒಳ್ಳೊಳ್ಳೆ ಸಂಸಾರಕ್ಕೆ ಹುಳಿ ಹಿಂಡುತ್ತಿರುವ ಸೋಷಿಯಲ್‌ ಮೀಡಿಯಾ  ಇಲ್ಲೂ ಕೂಡ ತನ್ನ ಆಟ ಆಡಿದೆ. ವಿದ್ಯಾರಾಣಿಗೆ ಸೋಷಿಯಲ್‌ ಮೀಡಿಯಾ ಬಳಸುವ ಖಯಾಲಿ. ಅದರಲ್ಲಿ ಅವರಿಗೆ ರಾಮ್‌ ಪ್ರಸಾದ್‌ ಎಂಬಾತ ಗಂಟು ಬಿದ್ದಿದ್ದಾನೆ. ಇಬ್ಬರ ಮಧ್ಯೆ  ಫೋನ್‌ ನಲ್ಲಿ ಸರಸ ಸಲ್ಲಾಪ ಶುರುವಾಗಿದೆ . ನಿತ್ಯ ನಿರಂತರ ಚ್ಯಾಟಿಂಗ್‌ ನಲ್ಲಿ ತೊಡಗಿಸಿಕೊಂಡಿದ್ದಾರೆ

Ad Widget

Ad Widget

Ad Widget

ಸ್ವಲ್ಪ ದಿನದಲ್ಲೆ ಇದು ವಿದ್ಯಾಳ ಗಂಡ ಕಿರಣ್‌ ಗೆ ಗೊತ್ತಾಗಿದೆ. ಸಿಟ್ಟುಗೊಂಡ ಆತ ವಿದ್ಯಾಳ ಫೊನನ್ನು ತೆಗೆದು ಎಸೆದಿದ್ದಾನೆ ಅದು ಹುಡಿ ಹುಡಿಯಾಗಿದೆ. ಗಂಡ ಅತ್ತ ಕೆಲಸಕ್ಕೆ ಹೋಗುತ್ತಲೇ ವಿದ್ಯಾ ಇನ್ನೊಂದು ಫೊನ್‌ ಮೂಲಕ ಪ್ರಿಯಕರನನ್ನು ಸಂಪರ್ಕಿಸಿ  ಗಂಡ ಮೊಬೈಲ್‌ ಒಡೆದು ಹಾಕಿದ ವಿಷಯ ತಿಳಿಸಿದ್ದಾಳೆ.

Ad Widget
Ad Widget

Ad Widget

ತಕ್ಷಣ ತನ್ನ ಪ್ರಿಯತಮೆಯ ಗಂಡನಿಗೆ ಬುದ್ದಿ ಕಳುಹಿಸಲು ಜತೆಗೆ ಆತನನ್ನು ಜೈಲಿಗೆ ಕಳುಹಿಸಲು ರಾಮ್‌ ಪ್ರಸಾದ್‌ ಮಾಸ್ಟರ್‌ ಪ್ಲ್ಯಾನ್‌ ಹೆಣೆದಿದ್ದಾನೆ. ಅದರಂತೆ ಡಿಸೆಂಬರ್ 5ರಂದು  RDX  ಬಾಂಬ್ ಹಾಕುವುದಾಗಿ ಬೆದರಿಕೆ ಹಾಕುವ ಮೆಸೇಜ್ ವೊಂದನ್ನು ಬರೆದು ವಿದ್ಯಾಳ ಮೊಬೈಲ್‌ ಗೆ  ಫಾರ್ವಾರ್ಡ್‌ ಮಾಡಿದ್ದಾನೆ. ಇದನ್ನು ಗಂಡನ ಮೊಬೈಲ್‌ ಗೆ ಫಾರ್ವಾಡ್‌ ಮಾಡುವಂತೆ ತಿಳಿಸಿದ ಆತ ಬಳಿಕ ಅದನ್ನು  ಗಂಡನ ನಂಬರ್‍ನಿಂದ ಪೊಲೀಸ್‌ ಅಧಿಕಾರಿಗಳಿಗೆ ಸೆಂಡ್‌ ಮಾಡುವಂತೆ ತಿಳಿಸಿದ್ದ.

 ಪ್ರಿಯಕರನ ಮಾತನ್ನು ನಂಬಿದ ವಿದ್ಯಾರಾಣಿ ಖುದ್ದು ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೆ ಕಳುಹಿಸಿದ್ದಳು. ಬಳಿಕ ಗಂಡನ ಮೊಬೈಲ್‍ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಇತ್ತ ಮೆಸೇಜ್ ಬಂದಿದ್ದ ನಂಬರ್ ನ ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು, ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Continue Reading

ಕ್ರೀಡೆ

PKL 2023: ಪ್ರೊ ಕಬಡ್ಡಿ ಲೀಗ್: ವಿಜಯ ಪತಾಕೆ ಹಾರಿಸಿದ ಗುಜರಾತ್ ಜೈಂಟ್ಸ್ – ರಣ ರೋಚಕ ಪಂದ್ಯದಲ್ಲಿ ಯು ಮುಂಬಾಕ್ಕೆ ಜಯ

Ad Widget

Ad Widget

ಅಹಮದಾಬಾದ್: ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‍ನ 10ನೇ ಸೀಸನ್ ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.

Ad Widget

Ad Widget

Ad Widget

Ad Widget

ಸೋನು ಅವರ ಉತ್ತಮ ರೈಡಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್ ತಂಡ, ಶನಿವಾರ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 38–32 ಪಾಯಿಂಟ್ಸ್‌ಗಳಿಂದ ಸೋಲಿಸಿತು. ಗುಜರಾತ್ ಜೈಂಟ್ಸ್ ಪರ ಅದ್ಭುತ ರೈಡಿಂಗ್ ಪ್ರದರ್ಶಿಸಿದ ಸೋನು ಜಗ್ಲಾನ್ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಕಲೆಹಾಕಿದರು. ಒಟ್ಟು 11 ಬಾರಿ ದಾಳಿ ಮಾಡಿದ ಸೋನು ಜಗ್ಲಾನ್ 11 ಅಂಕಗಳನ್ನು ತಂದುಕೊಡುವಲ್ಲಿ ಯಶಸ್ವಿಯಾದರು. ಮತ್ತೊಂದೆಡೆ ಸೋನುಗೆ ಉತ್ತಮ ಸಾಥ್ ನೀಡಿದ ರಾಕೇಶ್ ಸುಂಗ್ರೋಯಾ 5 ರೈಡ್ ಗಳ ಮೂಲಕ 5 ಅಂಕ ಗಳಿಸಿದರು.

Ad Widget

Ad Widget

Ad Widget

ಮೊದಲಾರ್ಧದಲ್ಲಿ ತೆಲುಗು ಟೈಟಾನ್ಸ್ ತಂಡವು 16 ಅಂಕಗಳಿಸಿದರೆ, ಗುಜರಾತ್ ಜೈಂಟ್ಸ್​ ತಂಡ 13 ಪಾಯಿಂಟ್ಸ್​ ಕಲೆಹಾಕಿತು. ಆದರೆ ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್​ ತಂಡವು ಉತ್ತಮ ಕಂಬ್ಯಾಕ್ ಮಾಡಿತು.

Ad Widget

ದ್ವಿತೀಯಾರ್ಧದಲ್ಲಿ ಗುಜರಾತ್ ಜೈಂಟ್ಸ್ 22 ಹಾಗೂ ಟೈಟಾನ್ಸ್‌ 16 ಅಂಗ ಗಳಿಸಿದರು. ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವು 10 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿದರೆ, ತೆಲುಗು ಟೈಟಾನ್ಸ್ 9 ಟ್ಯಾಕ್ಲ್ ಪಾಯಿಂಟ್ಸ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ 38-32 ಅಂತರದಿಂದ ತೆಲುಗು ಟೈಟಾನ್ಸ್ ವಿರುದ್ಧ ಗುಜರಾತ್ ಜೈಂಟ್ಸ್ ತಂಡವು ಭರ್ಜರಿ ಜಯ ಸಾಧಿಸಿತು.

Ad Widget

Ad Widget

ಯು ಮುಂಬಾಕ್ಕೆ ಜಯ:

ದಿನದ ಎರಡನೇ ಪಂದ್ಯದಲ್ಲಿ ಯು ಮುಂಬಾ ತಂಡ 34–31 ಪಾಯಿಂಟ್‌ಗಳಿಂದ ಯು.ಪಿ ಯೋಧಾಸ್ ತಂಡವನ್ನು ಸೋಲಿಸಿತು.ರಣರೋಚಕ ಹೋರಾಟದಲ್ಲಿ ಒಂದು ಹಂತದಲ್ಲಿ ಉಭಯ ತಂಡಗಳು 30-30 ಅಂಕ ಸಂಪಾದಿಸಿ ಸಮಬಲದ ಹೋರಾಟ ನೀಡಿತ್ತು.

ಯು ಮುಂಬಾ ಪರ ಅಮಿರ್ ಮೊಹಮ್ಮದ್ 6 ರೇಡ್ ಪಾಯಿಂಟ್ಸ್, 5 ಬೋನಸ್ ಹಾಗೂ 1 ಟ್ಯಾಕ್ಲ್​ ಪಾಯಿಂಟ್​ನೊಂದಿಗೆ 12 ಅಂಕಗಳಿಸಿದರು.ಅವರಿಗೆ ಉತ್ತಮ ಬೆಂಬಲ ನೀಡಿದ ರಿಂಕು 6 ಪಾಯಿಂಟ್ಸ್ ಕಲೆಹಾಕಿದರು. ಇನ್ನು ಯುಪಿ ಯೋಧ ಪರ ಸುರೇಂದರ್ ಗಿಲ್ ಹಾಗೂ ಅನಿಲ್ ಕುಮಾರ್ ತಲಾ 7 ಅಂಕ ಗಳಿಸಿದರು.

Continue Reading

Trending

error: Content is protected !!