Connect with us

ಕ್ರೈಂ

Love Sex Dhokla: ಬಳ್ಳಾರಿ ಸಂಸದ ಹಾಗೂ ಬಿಜೆಪಿ ಮುಖಂಡ ದೇವೇಂದ್ರಪ್ಪನ ಪುತ್ರನಿಂದ ಯುವತಿ ಜತೆ ಲವ್‌ ಸೆಕ್ಸ್‌ ದೋಖಾ – ಸಂತ್ರಸ್ತೆ ದೂರು ನೀಡುತ್ತಾಳೆ ಬ್ಲ್ಯಾಕ್‌ ಮೇಲ್‌ ದೂರು ದಾಖಲಿಸಿದ ಎಂಪಿ ಪುತ್ರ

Ad Widget

Ad Widget

ಬಳ್ಳಾರಿ ಸಂಸದ ಹಾಗೂ ಬಿಜೆಪಿ ಮುಖಂಡ ದೇವೇಂದ್ರಪ್ಪನ ಪುತ್ರನ ವಿರುದ್ದ ಯುವತಿ ಜತೆ ಲವ್‌ ಸೆಕ್ಸ್‌ ದೋಖಾ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿ ಜೀವ ಬೆದರಿಕೆ ಹಾಕಿದ ಗಂಭೀರ ಪ್ರಕರಣ ದಾಖಲಾಗಿದೆ. ಬಿಜೆಪಿ ಸಂಸದ ದೇವೇಂದ್ರಪ್ಪನ ಮಗ ಮೈಸೂರು ಮಹಾರಾಜ ಕಾಲೇಜಿನ ಉಪನ್ಯಾಸಕ ವೈ.ಡಿ.ರಂಗನಾಥ್ (42) ಪ್ರಕರಣದ ಆರೋಪಿ.

Ad Widget

Ad Widget

Ad Widget

Ad Widget

ತನ್ನ ವಿರುದ್ದ ಪ್ರಕರಣ ದಾಖಲಾಗುತ್ತಲೇ, ವೈ.ಡಿ.ರಂಗನಾಥ್ ಕೂಡ ಸಂತ್ರಸ್ತೆಯ ವಿರುದ್ದ ಬ್ಲ್ಯಾಕ್‌ ಮೇಲ್‌ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ. ಎರಡು ದೂರನ್ನು ಸ್ವೀಕರಿಸುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ. ಏತನ್ಮದ್ಯೆ ಸಂತ್ರಸ್ತೆ ಆರೋಪಿಯ ತಂದೆ ಸಂಸದ ದೇವೇಂದ್ರಪ್ಪನ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ. ಅಲ್ಲದೇ, ಪ್ರಕರಣ ಈಗ ರಾಜಕೀಯ ತಿರುವು ಕೂಡ ಪಡೆದಿದ್ದು, ತನ್ನ ಮಗ ಅಮಾಯಕ, ನನ್ನ ರಾಜಕೀಯ ತೇಜೊವಧೆಗಾಗಿ ಎದುರಾಳಿಗಳು ಮಾಡಿದ ಷಡ್ಯಂತ್ರ ಈ ಘಟನೆ ಎಂದು ದೇವೇಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ

Ad Widget

Ad Widget

Ad Widget

ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ 24ರ ಹರೆಯದ ಸಂತ್ರಸ್ತ ಯುವತಿ ದೂರು ನೀಡಿದ್ದಾಳೆ. ಐಪಿಸಿ ಸೆಕ್ಷನ್ 417 (ಮೋಸ), ಐಪಿಸಿ ಸೆಕ್ಷನ್ 1211 (ವಂಚನೆ) ಹಾಗೂ ಐಪಿಸಿ * 3 (ಜೀವ ಬೆದರಿಕೆ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ. .

Ad Widget

2022ರಲ್ಲಿ ಸ್ನೇಹಿತರ ಮೂಲಕ ರಂಗನಾಥ್ ಪರಿಚಯವಾಗಿದ್ದರು. ಬಳಿಕ ಆಗಾಗ ಫೋನ್ ಮಾಡಿ ಮಾತನಾಡುತ್ತಿದ್ದರು. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನಾನು ಮೈಸೂರಿನಲ್ಲಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, ಕೈತುಂಬಾ ಸಂಬಳ ಬರುತ್ತಿದೆ. ನೀನು ನನ್ನನ್ನು ಮದುವೆಯಾದರೆ ಚೆನ್ನಾಗಿ ನೋಡಿಕೊಳ್ಳುವ ಎಂದು ನಂಬಿಸಿದ್ದರು.

Ad Widget

Ad Widget

ಬಳಿಕ ನನ್ನನ್ನು ಹೋಟೆಲ್‌ಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದರು. ಈಗ ಮದುವೆ ಮಾಡಿಕೊಳ್ಳದೆ ಮೋಸ ಮಾಡಿದ್ದಾರೆ. ನನ್ನನ್ನು ಮದುವೆ ಆಗು ಎಂದು ಕೇಳಿದರೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ.

ಮೇಲಿನ ಪ್ರಕರಣಕ್ಕೆ ಪ್ರತಿಯಾಗಿ ಸಂಸದ ದೇವೇಂದ್ರಪ್ಪ ಅವರ ಪುತ್ರ ಪ್ರೊ.ರಂಗನಾಥ್‌ ಮೈಸೂರಿನ ವಿಜಯನಗರ ಠಾಣೆಯಲ್ಲಿ ಯುವತಿ ಸೇರಿ ಇಬ್ಬರ ವಿರುದ್ಧ ಜಾತಿ ನಿಂದನೆ, ಹಣಕ್ಕಾಗಿ ಬೇಡಿಕೆ, ಪ್ರಾಣ ಬೆದರಿಕೆ ದೂರು ದಾಖಲಿಸಿದ್ದಾರೆ, ತಾನು ನಾಯಕ ಸಮುದಾಯಕ್ಕೆ ಸೇರಿದ್ದು, ಸ್ನೇಹಿತ ಕಲ್ಲೇಶ್ ರಿಂದ ಯುವತಿ ಮತ್ತು ಶ್ರೀನಿವಾಸ ಪರಿಚಯವಾಗಿದ್ದರು. ಆಕೆ ನನ್ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದು, ಇದನ್ನು ನಾನು ವಿರೋಧಿಸಿದ್ದೆ, ನಂತರ ಯುವತಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದಾಗ 32,500 ರು. ನೀಡಿದ್ದೆ. ಮತ್ತೆ ಹಣ ಕೊಡಲ್ಲ ಎಂದಾಗ ಶ್ರೀನಿವಾಸನನ್ನು ಕಳುಹಿಸಿದ್ದು, ಆತ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ, ನಿರಾಕರಿಸಿದಾಗ ಕೊಲೆ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ಹಾಗೂ ಶ್ರೀನಿವಾಸ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ

ನನ್ನ ಘನತೆಗೆ ಧಕ್ಕೆ ತರುವ ಯತ್ನ: ದೇವೇಂದ್ರಪ್ಪ

ಪುತ್ರನ ವಿರುದ್ಧ ಕೇಳಿಬಂದಿರುವ ಆರೋಪದ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಕಾನೂನು ಮುಂದೆ ಎಲ್ಲರೂ ಒಂದು. ಯುವತಿ ನನ್ನ ಪುತ್ರನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದಾಳೆ, ಚುನಾವಣೆ ಕಾರಣ ಕೆಲವರು ನನ್ನ ಘನತೆಗೆ ಕುಂದುತರಲು ಈ ರೀತಿಯ ಆರೋಪ ಮಾಡುತ್ತಿದ್ದಾರೆಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಆರೋಪಿಸಿದರು. ದಿಲ್ಲಿಗೆ ತೆರಳಿದ್ದ ನಾನು ರೈಲಲ್ಲಿದ್ದಾಗ ಯುವತಿ ನನಗೆ ಕರೆ ಮಾಡಿದ್ದರು. ಅನ್ಯಾಯ ಆಗಿದ್ದರೆ ದೂರು ನೀಡಿ ಎಂದಿದ್ದೇನೆ, ಆರೋಪ ಕುರಿತು ಮಗನನ್ನು ಕೂಡ ಕೇಳಿದೆ, ಆತ ಆ ಯುವತಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಅಂತ ಹೇಳಿದ್ದಾನೆ ಎಂದರು.

ಕರೆ ಮಾಡಿ ವಿವರಣೆ ಕೇಳಿದ ಪಕ್ಷಾಧ್ಯಕ್ಷ ನಡ್ಡಾ

ದಾವಣಗೆರೆ: ಯುವತಿ ಆರೋಪದ ಬಗ್ಗೆ ಸಂಸದ ದೇವೇಂದ್ರಪ್ಪಗೆ ಕರೆ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಕರಣದ ಕುರಿತು ವಿವರಣೆ ನೀಡುವಂತೆ ಹೇಳಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಇದರ ಹಿಂದೆ ಭರಮಸಾಗರ ತಾಲೂಕಿನ ವ್ಯಕ್ತಿ ಹಾಗೂ ಬೆಂಗಳೂರಿನ ಗ್ಯಾಂಗ್ ಇದೆಯೆಂಬ ಅಂಶವನ್ನು ಸಂಕ್ಷಿಪ್ತವಾಗಿ ಹೇಳಿರುವ ದೇವೇಂದ್ರಪ್ಪ, ಡಿ.4ರಂದು ದೆಹಲಿಗೆ ತೆರಳಿದಾಗ ವಿಶ್ವತವಾಗಿ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ ?

42 ವರ್ಷದ ರಂಗನಾಥ್‌ಗೆ 24 ವರ್ಷದ ಮಹಿಳೆ ಜೊತೆ ಪ್ರೇಮ ಉಂಟಾಗಿದೆ. ಪಾರ್ಟಿ ಒಂದರಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡ ರಂಗನಾಥ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಮಹಿಳೆ ಮದುವೆಯಾಗುವಂತೆ ರಂಗನಾಥ್ ಅವರನ್ನು ಕೇಳಿದ್ದಾರೆ. ಈ ವೇಳೆ ರಂಗನಾಥ್ ಮಹಿಳೆಯನ್ನು ಕಡೆಗಣಿಸಲು ಪ್ರಾರಂಭಿಸಿದ್ದು, ಮದುವೆ ಆಗಲ್ಲ ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದಿದ್ದಾರೆ. ನಂತರ ಮಹಿಳೆ ಈ ವಿಚಾರವನ್ನು ಎಂಪಿ ದೇವೇಂದ್ರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಆದರೆ ದೇವೇಂದ್ರಪ್ಪ ಮಹಿಳೆಯ ವಿರುದ್ಧ ಗರಂ ಆಗಿದ್ದಾರೆ.

Click to comment

Leave a Reply

ಸುಳ್ಯ

HIt And Run ಶಿರಾಡಿ ಘಾಟ್ ನಲ್ಲಿ ಹಿಟ್‌ ಅಂಡ್‌ ರನ್‌ – ಇಬ್ಬರು ಮೃತ್ಯು

Ad Widget

Ad Widget

ನೆಲ್ಯಾಡಿ, ಡಿ.06. ಶಿರಾಡಿ ಘಾಟ್ ನ ಗುಂಡ್ಯ ಕೆಂಪು ಹೊಳೆ ಸಮೀಪ ವಾಹನವೊಂದು ಗೂಡ್ಸ್‌ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.

Ad Widget

Ad Widget

Ad Widget

Ad Widget

ಅಪಘಾತವು ಬುಧವಾರ ಬೆಳಗಿನ ಜಾವ ನಡೆದಿದ್ದು, ಮೃತಪಟ್ಟ ಇಬ್ಬರೂ ಗೂಡ್ಸ್‌ ಟೆಂಪೋದಲ್ಲಿದ್ದವರು ಎಂದು ತಿಳಿದು ಬಂದಿದೆ.

Ad Widget

Ad Widget

Ad Widget


ಯಾವುದೋ ಅಪರಿಚಿತ ಘನ ವಾಹನ ಗೂಡ್ಸ್‌ ಟೆಂಪೋಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗೂಡ್ಸ್‌ ವಾಹನದ ಚಾಲಕ ಹಾಗೂ ಆ ವಾಹನದಲ್ಲಿದ್ದ ಇನ್ನೊರ್ವ ಮೃತಪಟ್ಟಿದ್ದು ಇಬ್ಬರು ಹಾಸನ ಜಿಲ್ಲೆಯವರು ಎನ್ನಲಾಗಿದೆ.

Ad Widget

Arecanut price ಚೇತರಿಕೆ ಕಾಣದ ಅಡಿಕೆ ಧಾರಣೆ -ದರ ಕುಸಿತದ ಹಿಂದಿದೆ ಈ ಕಾರಣಗಳು – ಡೋಲಾಯಮಾನ ಸ್ಥಿತಿಯಲ್ಲಿ ಅಡಿಕೆ ಭವಿಷ್ಯ

Ad Widget

Ad Widget


ಅಪಘಾತದ ತೀವ್ರತೆಗೆ ಗೂಡ್ಸ್‌ ಟೆಂಪೋ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಸಕಲೇಶಪುರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಢಿಕ್ಕಿ ಹೊಡೆದು ಪರಾರಿಯಾಗಿರುವ ವಾಹನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್​ಸಿಆರ್​ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Continue Reading

ಕ್ರೈಂ

Acid Attack ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದೇ ತಪ್ಪಾಯ್ತಾ? ಮಾಲೀಕನ ಮೇಲೆ ಆಸಿಡ್ ದಾಳಿ

Ad Widget

Ad Widget

ಚಿಕ್ಕಮಗಳೂರು: ನಾಯಿ ಬೊಗಳಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ನಾಯಿಯ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಆಸಿಡ್ ದಾಳಿಗೊಳಗಾದ ವ್ಯಕ್ತಿಯನ್ನು ಕುರಗುಂದ ನಿವಾಸಿ ಸುಂದರ್ ರಾಜ್ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ತಾನು ಸಾಕುತ್ತಿರುವ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ್ ನಾಯಿಗೆ ಬೈಯ್ಯುತ್ತಿದ್ದ. ಆದರೆ ಜೇಮ್ಸ್ ಎನ್ನುವ ವ್ಯಕ್ತಿ ತನಗೆ ಬೈಯುತ್ತಿದ್ದಾನೆ ಎಂದು ಅಪಾರ್ಥ ಮಾಡಿಕೊಂಡು ನೆರೆಮನೆಯ ನಿವಾಸಿ ಸುಂದರ್ ರಾಜ್ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

ಸದ್ಯ ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

Ad Widget

Ad Widget

ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಡಗಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ನಾಯಿ ಹೆಸರಿನಲ್ಲಿ ತನಗೆ ಬಯ್ಯುತ್ತಿರುವುದಾಗಿ ಜೇಮ್ಸ್ ಆರೋಪಿಸಿದ್ದು, ಈತನ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೈಂ

BJP Ticket Deal: ಹಿಂದೂತ್ವದ ಪ್ರಖರ ವಾಗ್ಮಿ ಚೈತ್ರಾ 84 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ – ಜಾಮೀನು ಮಂಜೂರು

Ad Widget

Ad Widget

chaitra Got Bail ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಕೊಡಿಸುವುದಾಗಿ (BJP Ticket Deal) ಹೋಟೆಲ್ ಉದ್ಯಮಿ ಗೋವಿಂದಬಾಬು ಪೂಜಾರಿಗೆ (Govinda Babu poojary) ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನಕ್ಕೀಡಾಗಿದ್ದ ಹಿಂದೂತ್ವದ ಪ್ರಖರ ವಾಗ್ಮಿ  ಚೈತ್ರಾ (Infamous Hindutva Orator) ಸಹಿತ ಇಬ್ಬರಿಗೆ ಕೊನೆಗೂ ಜಾಮೀನು (chaitra Got Bail) ಮಂಜೂರಾಗಿದೆ.  ಇಬ್ಬರಿಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸರಿ ಸುಮಾರಿ 82 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಚೈತ್ರಾ (chaitra) ಕೊನೆಗೂ ಡಿ 5 ರಂದು ಬಿಡುಗಡೆಯಾಗಲಿದ್ದಾರೆ

Ad Widget

Ad Widget

Ad Widget

Ad Widget

 ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಚೈತ್ರಾ ಪ್ರಥಮ ಆರೋಪಿಯಾಗಿದ್ದಾರೆ, ಹಾಲಶ್ರೀ ಸ್ವಾಮೀಜಿ   ಮೂರನೇ ಆರೋಪಿಯಾಗಿದ್ದರು . ಹಾಲಶ್ರೀಗೆ ಕೆಲ ದಿನಗಳ ಹಿಂದೆಯೇ ಜಾಮೀನು ದೊರಕಿತ್ತು.

Ad Widget

Ad Widget

Ad Widget

ಚೈತ್ರಾ ಹಾಗೂ ಸಹಚರರು ಒಟ್ಟು 5 ಕೋಟಿ ರೂಪಾಯಿಯಷ್ಟು ಹಣ ಪಡೆದು ಬಳಿಕ ವಂಚಿಸಿದ್ದರು ಎಂದು ಗೋವಿಂದ ಬಾಬು ಆರೋಪಿಸಿದ್ದರು.  ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಸೆ 12 ರಂದು ರಾತ್ರಿ  ಚೈತ್ರಾ, ಗಗನ್ ಕಡೂರು ಬಂದಿಸಿದ್ದರು.

Ad Widget
Ad Widget

Ad Widget

ಪ್ರಕರಣ ಬೆಳಕಿಗೆ ಬರುತ್ತಲೇ ತಲೆ ಮರೆಸಿಕೊಂಡಿದ್ದ  ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿಯನ್ನು ವಾರಗಳ ಹುಡುಕಾಟದ ಬಳಿಕ ಒಡಿಸ್ಸಾದಲ್ಲಿ ಬಂಧಿಸಲಾಗಿತ್ತು. ಏತನ್ಮಧ್ಯೆ ಉಳಿದ ಆರೋಪಿಗಳಾದ ಚೈತ್ರಾ ಬರೆದ ಸ್ಕ್ರಿಪ್ಟ್‌ ನ ಪಾತ್ರದಾರಿಗಳಾದ  ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ ಓಟ್ಟು  9 ಮಂದಿಯನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು.

ಆರೋಪಿಗಳು ಅಕ್ರಮ ಹಣದಿಂದ ಸಂಪಾದಿಸಿದ್ದ ಲಕ್ಷಾಂತರ ರೂ. ನಗದು ಹಾಗೂ ಕೆಲ ಆಸ್ತಿಗಳ ಪತ್ರಗಳು ಸೇರಿ 4 ಕೋಟಿ ರೂ. ಅಧಿಕ ವಶಕ್ಕೆ  ಪಡೆದುಕೊಳ್ಳಲಾಗಿತ್ತು.   ಚೈತ್ರಾ ಬಳಿ 81 ಲಕ್ಷ ರೂ. ನಗದು ಹಾಗೂ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್ನಲ್ಲಿ 1.08 ಕೋಟಿ ಮೌಲ್ಯದ ಭದ್ರತಾ ಠೇವಣಿ. ಇದರ ಜತೆಗೆ 12 ಲಕ್ಷ ರೂ. ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದರು.

ಇನ್ನು ಚೈತ್ರಾ ಸಹಚರರಾದ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಭಿನವ ಹಾಲಾಶ್ರೀ ಬಳಿ 56 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಲಾಗಿತ್ತು. ಅಲ್ಲದೆ, ತನಿಖೆ ಪೂರ್ಣಗೊಳಿಸಿ ಇತ್ತೀಚೆಗಷ್ಟೇ 9 ಮಂದಿ ಆರೋಪಿಗಳ ವಿರುದ್ಧ ಕೋರ್ಟ್ಗೆ ಸಿಸಿಬಿ ಆರೋಪಪಟ್ಟಿ ಕೂಡ ಸಲ್ಲಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್ಗೆ 3ನೇ ಎಸಿಎಂಎಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.

Continue Reading

Trending

error: Content is protected !!