Connect with us

ಪುತ್ತೂರು

ಪುತ್ತಿಲ ಪರಿವಾರದ ಕಚೇರಿ ಎದುರು ತಲುವಾರು ಝಳಪಿಸಿದ ಪ್ರಕರಣ : ಬಂಧಿತರಿಗೆ 6 ದಿನಗಳ ನಂತರ ಜಾಮೀನು ಮಂಜೂರು

Ad Widget

Ad Widget

ಪುತ್ತೂರು: ಮುಕ್ರಂಪಾಡಿ ಪುತ್ತಿಲ ಪರಿವಾರ ಕಚೇರಿ ಮುಂಭಾಗ ತಲವಾರು ಝಳಪಿಸಿದ ಪ್ರಕರಣ ಏಳು ಮಂದಿ ಬಂಧಿತರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರುಗೊಳಿಸಿದೆ.

Ad Widget

Ad Widget

Ad Widget

Ad Widget

ಶಾಂತಿಗೋಡು ನಿವಾಸಿ ದಿನೇಶ್ ಪಂಜಿಗ, ನರಿಮೊಗರುವಿನ ಭವಿತ್, ಬೊಳ್ವಾರ್ ನಿವಾಸಿ ಮನ್ವಿತ್, ಚಿಕ್ಕಮುಡ್ನೂರಿನ ಜಯಪ್ರಕಾಶ್, ಚರಣ್, ಬನ್ನೂರಿನ ಮನೀಶ್, ಕಬಕದ ವಿನೀತ್ ಗೆ ಜಾಮೀನು ಮಂಜೂರಾಗಿದೆ.

Ad Widget

Ad Widget

Ad Widget

ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತರಾಗಿದ್ದ ಇಬ್ಬರು ಬಾಲಕರಿಗೆ ಪ್ರಕರಣ ನಡೆದ ದಿನವೇ ಪೋಷಕರಿಗೆ ನೊಟೀಸ್ ನೀಡಿ ಬಿಡುಗಡೆಗೊಳಿಸಲಾಗಿತ್ತು.

Ad Widget

ಸಾಮಾಜಿಕ ಜಾಲತಾಣದ ಬರವಣಿಗೆಯ ವಿಚಾರದಲ್ಲಿ ನ.10ರಂದು ಪುತ್ತೂರಿನ ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಲವಾರು ಪ್ರದರ್ಶಿಸಿ, ಪುತ್ತಿಲ ಪರಿವಾರದ ಪ್ರಮುಖರೋರ್ವರ ಹತ್ಯೆಗೆ ಯತ್ನಿಸಿದ್ದಾರೆ ಎಂದು ಬಂಧನಕ್ಕೊಳಗಾಗಿದ್ದರು. ಈ ಪ್ರಕರಣಕ್ಕೆ ಕಾರಣ ಎನ್ನಲಾದರೋರ್ವರ ಮೇಲೆಯೂ ಪ್ರಕರಣ ದಾಖಲಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಅವರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎನ್ನಲಾಗಿದೆ.

Ad Widget

Ad Widget
Click to comment

Leave a Reply

ದಕ್ಷಿಣ ಕನ್ನಡ

ಈಶ್ವರಮಂಗಲ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಬಸ್ಸು ಹರಿದು ಸಾವು – ಅದೇ ಬಸ್ಸಿನಿಂದ ಇಳಿದಿದ್ದರು..!

Ad Widget

Ad Widget

ಪುತ್ತೂರು : ಈಶ್ವರಮಂಗಲದ ಗಾಳಿಮುಖದಲ್ಲಿ ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 8ರಂದು ಸಂಭವಿಸಿದೆ. ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞಿರಾಮ ಮಣಿಯಾಣಿ ಮೃತಪಟ್ಟವರು.ʼ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Ad Widget

Ad Widget

Ad Widget

Ad Widget

ಗಾಳಿಮುಖಕ್ಕೆ ಬಂದಿದ್ದ ಅವರು ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವಷ್ಟರಲ್ಲಿ ಬಸ್‌ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಹರಿದಿದೆ. ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Ad Widget

Ad Widget

Ad Widget

ಚಾಲಕನ ಮೇಲೆ FIR

Ad Widget

ಕೇರಳ ನೋಂದಣಿಯ ಖಾಸಗಿ ಬಸ್ಸಿನ ಚಾಲಕ ಸುಜೀತ್ ವಿ ಎಂಬವರು  ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ ರಸ್ತೆ ದಾಟುತ್ತಿದ್ದ ಕುಂಞಿರಾಮ ಮಣಿಯಾಣಿ ಯವರಿಗೆ  ಡಿಕ್ಕಿ ಹೊಡೆದಿದ್ದು , ಆಗ ಅವರು  ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ  ಅವರ ಮೇಲೆ ಬಸ್ ಚಲಿಸಿರುತ್ತದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಕುಂಞಿರಾಮ ಮಣಿಯಾಣಿರವರು ಮೃತಪಟ್ಟಿರುತ್ತಾರೆ ಎಂದು ಮೃತರ ಚಿಕ್ಕಪ್ಪನ ಮಗ ಕೃಷ್ಣ ಎ ಎಂಬವರು   ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಐಪಿಸಿ ಕಲಂ : 279,304(A)  ರಂತೆ ಪ್ರಕರಣ ದಾಖಲಾಗಿದೆ.

Ad Widget

Ad Widget
Continue Reading

ದಕ್ಷಿಣ ಕನ್ನಡ

Kidnap and Murder 20 ದಿನಗಳ ಹಿಂದೆ ಪುತ್ತೂರಿನಿಂದ ಅಪಹರಣವಾದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಆಗುಂಬೆ ಘಾಟ್‌ ನಲ್ಲಿ ಪತ್ತೆ- ಅನೈತಿಕ ಸಂಬಂಧದ ಹಿನ್ನಲೆ ಕೊಂದು ಎಸೆದಿರುವ ಶಂಕೆ |‌  ಇಬ್ಬರು ಪೊಲೀಸ್ ವಶ

Ad Widget

Ad Widget

ಪುತ್ತೂರು :20 ದಿನಗಳ ಹಿಂದೆ ಪುತ್ತೂರಿನ ಕುಂಬ್ರದಿಂದ ಅಪಹರಣವಾಗಿದ್ದ (Kidnap) ಯುವಕನ ಮೃತದೇಹ ಆಗುಂಬೆ ಘಾಟ್‌ ನಲ್ಲಿ (Agumbe Ghat) ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತನನ್ನುನ್ನು ಕೊಲೆ (Murder) ಮಾಡಿ ಆಗುಂಬೆ ಘಾಟ್ ನಲ್ಲಿ ಬೀಸಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರು ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.  

Ad Widget

Ad Widget

Ad Widget

Ad Widget

ಬಾಗಲಕೋಟೆ ಜಿಲ್ಲೆ ಬಾದಮಿ ತಾಲೊಕಿನ ಡಾಣಕಶಿರೂರು ನಿವಾಸಿ ಹನುಮಂತ  (22) ಮೃತಪಟ್ಟವರು . ಕುಂಬ್ರದ ಉದ್ಯಮಿ ಮೋಹನ್‌ ದಾಸ್‌ ರೈಯವರ ಟಿಪ್ಪರ್‌ ಚಾಲಕರನಾಗಿ ದುಡಿಯುತ್ತಿದ್ದ ಈತ, ಅಪಹರಣವಾದ 5 ದಿನದ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರ. ‌ ನ 17 ರಂದು ಸಂಜೆ KA-26-B-3833 ನೋಂದಣಿಯ ಮ್ಯಾಕ್ಸಿ ವಾಹನದಲ್ಲಿ ಬಂದ ತಂಡವೊಂದು ಕುಂಬ್ರ ಮಸೀದಿ ಬಳಿಯ ರೂಮ್ ನಿಂದ  ಹನುಮಂತನನ್ನು  ಅಪಹರಿಸಿರುವುದಾಗಿ  ಆತನ ತಾಯಿ ತಾಯಿ ರೇಣವ್ವ ಮಾದರರವರು ಸಂಪ್ಯ ಠಾಣೆಗೆ  ನ 20 ರಂದು ದೂರು ನೀಡಿದ್ದರು

Ad Widget

Ad Widget

Ad Widget

ಅಕ್ರಮ ಸಂಬಂಧ (illicit Relationship) ಹಿನ್ನಲೆಯಲ್ಲಿ ಅಪಹರಣ ಮತ್ತು ಕೊಲೆ ನಡೆದಿದೆಯೆಂದು ಮೇಲ್ನೋಟಕ್ಕೆ ಕಂಡು ಬಂದಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಕರಣದ ಪ್ರಮುಖ ಆರೋಪಿ  ಬಾದಮಿ ತಾಲೂಕಿನ ಶಿವಪ್ಪ (45) ಎಂಬಾತನ ಪತ್ನಿಯ ಜತೆ ಹನುಮಂತ ಅಕ್ರಮ ಸಂಬಂಧ ಹೊಂದಿರುವ ದ್ವೇಷವೇ ಕೊಲೆಗೆ ಕಾರಣವಾಯಿತು ಎನ್ನಲಾಗುತ್ತಿದೆ.

Ad Widget

 ಅಪಹರಣ ನಡೆಯುವುದಕ್ಕೆ  ಕೆಲ ದಿನಗಳ ಹಿಂದೆ ಆರೋಪಿ ಶಿವಪ್ಪನು  ಹನುಮಂತನ ಮಾವ ಮಂಜುನಾಥ ಎಂಬವರ ಬಳಿ ಹನುಮಂತ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದು ,ಅವನನ್ನು ಎಲ್ಲಿಯಾದರೂ ದೂರ ಕಳುಹಿಸು ಎಂದು ಹೇಳಿದ್ದ. ಹೀಗಾಗಿ  ನ 10 ರಂದು ಹನುಮಂತನನ್ನು ಮಂಜುನಾಥರವರು ತನ್ನ ಗೆಳೆಯ  ಸಂತೋಷ್  ಗದ್ದಿ ಗೌಡ್ರನೊಂದಿಗೆ  ಪುತ್ತೂರಿನ  ಕುಂಬ್ರಕ್ಕೆ  ಟಿಪ್ಪರ್‌ ಚಾಲಕನಾಗಿ  ಕಳುಹಿಸಿ ಕೊಟ್ಟಿದ್ದರು.

Ad Widget

Ad Widget

ಇದಾದ ಬಳಿಕನ ನ 17 ರಂದು ಮಂಜುನಾಥನರವರಿಗೆ ಕರೆ ಮಾಡಿದ ಶಿವಪ್ಪ ನಿನ್ನ ಅಕ್ಕನ ಮಗ ಸಿಕ್ಕಲ್ಲಿ ಬಿಡುವುದಿಲ್ಲ ಎಂದು ಬೆದರಿಸಿದ್ದರು. ಇದನ್ನು ಮಂಜುನಾಥನವರು ತನ್ನ ಅಕ್ಕ  ರೇಣವ್ವ ಮಾದರರವರ ಬಳಿ ತಿಳಿಸಿದ್ದಾರೆ.  ಗಾಬರಿಯಾದ ಆಕೆ ಕುಂಬ್ರದಲ್ಲಿರುವ ಸಂತೋಷ್  ಗದ್ದಿ ಗೌಡ್ರರಿಗೆ ಕರೆ ಮಾಡಿ ತಿಳಿಸಿದ್ದು ಅಷ್ಟರಾಗಲೇ ಆರೋಪಿಗಳಾದ ಶಿವಪ್ಪ, ಮಂಜುನಾಥ ಮತ್ತು ದುರ್ಗಾಪ್ಪ ನವರು ಹನುಮಂತನನ್ನು  ಅಪಹರಿಸಿಕೊಂಡು ಹೋಗಿದ್ದರು ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆದರೇ ಸ್ಥಳಿಯ ಮೂಲಗಳ ಪ್ರಕಾರ ನ 17 ರಂದು ಕುಂಬ್ರಕ್ಕೆ ಬಂದಿದ್ದ ಶಿವಪ್ಪ, ಮಂಜುನಾಥ ಮತ್ತು ದುರ್ಗಾಪ್ಪನವರು  ಹನುಮಂತನನ್ನು ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಜತೆಗಿದ್ದವರ ಬಳಿ ತಿಳಿಸಿಯೆ ಕರೆದುಕೊಂಡು ಹೋಗಿದ್ದರು. ಬಂದವರ  ಪೋಟೋ ತೆಗೆದಿರಿಸುವಂತೆ ಟಿಪ್ಪರ್‌ ಮಾಲಕ ಮೋಹನ್‌ದಾಸ ರೈ ಅವರು ತನ್ನ ಕೆಲಸದವರಿಗೆ ಸೂಚಿಸಿದ್ದರು. ಹಾಗಾಗಿ ಕೆಲಸದವರು ಆ ಮೂವರು ಪೋಟೋವನ್ನು ಮೊಬೈಲ್‌ನಲ್ಲಿ ತೆಗೆಸಿ ಇಟ್ಟುಕೊಂಡಿದ್ದರು ಎಂದು ತಿಳಿದು ಬಂದಿದೆ.

ಹನುಮಂತನನ್ನು ಕುಂಬ್ರದಿಂದ ಕರೆದುಕೊಂಡು ಹೋದವರು

ಹನುಮಂತನ ತಾಯಿ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ ಬಳಿಕ  ತನಿಖೆ ಆರಂಭಿಸಿದ ಪೊಲೀಸರಿಗೆ ಈ ಗ್ರೂಫ್‌  ಫೋಟೊವನ್ನು ನೀಡಲಾಗಿತ್ತು. ಇದನ್ನು ಅನುಸರಿಸಿ  ಹನುಮಂತನನ್ನು ಕರೆದುಕೊಂಡು ಹೋಗಿದ್ದ ಇಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಅತನನ್ನು ಕೊಲೆ ಮಾಡಿ ಎಸೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.  ಆಗುಂಬೆ ಘಾಟ್‌ನ ಮೂರನೇ ತಿರುವಿನ ರಸ್ತೆ ಬಳಿ ಮೃತದೇಹ ಪತ್ತೆಯಾಗಿದ್ದು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಕತ್ತು ಹಿಸುಕಿ ಅಥವಾ ಮಾರಕಾಯುಧಗಳಿಂದ ಹೊಡೆದು ಕೊಲೆ ಮಾಡಿರುವ ಶಂಕೆ ಮೂಡಿದೆ.

ಈ ಪ್ರಕರಣದಲ್ಲಿ ಶಿವಪ್ಪ, ಮಂಜುನಾಥ ಪೊಲೀಸ್‌ ವಶದಲ್ಲಿದ್ದು, ದುರ್ಗಾಪ್ಪ ತಲೆ ಮರೆಸಿಕೊಂಡಿರುವುದಾಗಿ ತಿಳಿದು ಬಂದಿದೆ. ಅಪಹರಣ ಹಾಗೂ ಕೊಲೆ ಪ್ರಕರಣ ಹಾಗೂ ಆರೋಪಿಗಳ ಬಂಧನದ ಬಗ್ಗೆ ಪೊಲೀಸ್‌ ಇಲಾಖೆ ಇಲ್ಲಿಯವರೆಗೆ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲದಿರುವುದು ವಿಶೇಷವಾಗಿದೆ.

Continue Reading

ಪುತ್ತೂರು

ಪುತ್ತೂರಲ್ಲಿ 2 ಸಾವಿರ ಉದ್ಯೋಗ ಸೃಷ್ಟಿಸುವ ತನ್ನ ಭರವಸೆಗೆ ಮುನ್ನುಡಿ ಬರೆದ ಅಶೋಕ್ ರೈ – KMF ಹಾಲು ಸಂಸ್ಕರಣ ಘಟಕಕ್ಕೆ ಚಿಕ್ಕಮುಡ್ನೂರಿನಲ್ಲಿ ಜಮೀನು ಮಂಜೂರು ಮಾಡಲು ಡಿಸಿಗೆ ಸರಕಾರದ ಆದೇಶ

Ad Widget

Ad Widget

ಪುತ್ತೂರು: 2 ಸಾವಿರಕ್ಕೂ ಮಿಕ್ಕಿ ಉದ್ಯೋಗ ಕಲ್ಪಿಸುವ ಕೆ ಎಂ ಎಫ್ ನ ಹಾಲು ಸಂಸ್ಕರಣ ಘಟಕಕ್ಕೆ ಅಗತ್ಯ ಜಮೀನು ಮಂಜೂರು ಮಾಡುವ ಕಾರ್ಯ ಪುತ್ತೂರು ಶಾಸಕ ಅಶೋಕ್ ರೈಯವರ ಅವಿರತ ಪ್ರಯತ್ನದ ಫಲದಿಂದ ಆಗಿದೆ.

Ad Widget

Ad Widget

Ad Widget

Ad Widget

ಚಿಕ್ಕಮುಡ್ನೂರು ಗ್ರಾಮದಲ್ಲಿ ಮಂಗಳೂರು ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ 10.10ಎಕರೆ ಜಮೀನು ಮಂಜೂರು ಮಾಡುವಂತೆ ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ದ. ಕ. ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

Ad Widget

Ad Widget

Ad Widget

ಶಾಸಕರಾಗಿ ಆಯ್ಕೆಯಾದ ಬಳಿಕ ಕೆ ಎಂಫ್ ನ ಹಾಲಿನ ಘಟಕವನ್ನು ಪುತ್ತೂರಲ್ಲಿ ಸ್ಥಾಪಿಸಿ ಆ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ಅಶೋಕ್ ರೈ ನೀಡಿದ್ದರು. ಅದರ ಪ್ರಾರಂಭಿಕ ಹಂತವಾಗಿ ಜಮೀನು ಮಂಜೂರು ಪ್ರಕಿಯೆಗೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ

Ad Widget

ದಕ್ಷಿಣ ಕನ್ನಡ ಹಾಲು ಒಕ್ಕೂಟ ನಿಯಮಿತಕ್ಕೆ ಹಾಲು ಸಂಸ್ಕರಣಾ ಘಟಕ ಸ್ಥಾಪಿಸುವ ಉದ್ದೇಶಕ್ಕಾಗಿ ಚಿಕ್ಕಮುಡ್ನೂರು ಗ್ರಾಮದ ಸರ್ವೇ ನಂಬರ್ 41/1ರಲ್ಲಿ 10 ಎಕರೆ 10 ಸೆಂಟ್ಸ್ ವಿಸ್ತೀರ್ಣದ ಜಮೀನಿದೆ. ಈ ಪೈಕಿ 9.20 ಎಕರೆ ಕುಮ್ಕಿಯಾಗಿದೆ. ಈ ಜಮೀನಿನ ಕುರಿತಾಗಿ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರದ ಕಾರಣ ಕುಮ್ಕಿ ವಿರಹಿತ ಗೊಳಿಸಿ ಮಾರುಕಟ್ಟೆ ಮೌಲ್ಯದ ಶೇ.50 ರಷ್ಟು ವಿಧಿಸಿ ಮಂಜೂರು ಮಾಡಲು ಸರ್ಕಾರ ಅನುಮತಿಸಿದೆ ಎಂದು ಪತ್ರದಲ್ಲಿ ತಿಳಿಸಿದೆ.

Ad Widget

Ad Widget

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕಡತದ ಬೆನ್ನು ಬಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೇವಲ 6 ತಿಂಗಳ ಅವಧಿಯಲ್ಲಿ ಜಮೀನು ಮಂಜೂರು ಮಾಡುವಲ್ಲಿ ಸಫಲರಾಗಿದ್ದಾರೆ.

ನಿಖರ ನ್ಯೂಸ್ ಜತೆ ಮಾತನಾಡಿದ ಶಾಸಕ ಅಶೋಕ್ ರೈ , ಮುಂದಿನ ದಿನಗಳಲ್ಲಿ ಮಂಗಳೂರಿನ ಕೆಎಂಎಫ್ ಹಾಲು ಪ್ಯಾಕೇಟ್ ಘಟಕ ಪುತ್ತೂರಿಗೆ ಸಂಪೂರ್ಣ ವರ್ಗಾವಣೆಯಾಗಲಿದೆ. ಆ ಬಳಿಕ ಸ್ಥಳೀಯರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸಿಗಲಿದೆ ಎಂದರು.

ಕೆ ಎಂ ಎಫ್ ಹಾಲಿನ ಘಟಕ ವರ್ಗಾವಣೆಯಾಗಬೇಕಾದರೆ ಅದಕ್ಕೆ 10 ಎಕ್ರೆ ಮೇಲ್ಪಟ್ಟು ಜಮೀನಿನ ಅವಶ್ಯಕತೆಯಿದೆ. ಆಗ ಮಂಜೂರು ಆಗಿರುವ ಜಾಗಕ್ಕೆ ಹೊಂದಿಕೊಂಡಂತಿರುವ 4 ಎಕ್ರೆ ಖಾಸಗಿ ಜಾಗವಿದೆ. ಕೆಎಂಎಫ್ ಸಭೆಯಲ್ಲಿ ಅಂಗೀಕರಿಸಿದ ನಂತರ ಈ ಜಮೀನನ್ನು ಕೂಡ ಕೆ ಎಂ ಎಫ್ ಖರೀದಿ ಮಾಡಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಸಾವಿರಾರು ಉದ್ಯೋಗ ಸೃಷ್ಟಿಸುವ ಹಾಲು ಪ್ಯಾಕೇಟ್ ಘಟಕ ನಿರ್ಮಿಸಲು ಹಲವು ವರ್ಷಗಳ ಪ್ರಯತ್ನದಿಂದ ಆಗದ ಕೆಲಸವನ್ನು ಅಶೋಕ್ ಕುಮಾರ್ ರೈ ಕೆಲವೇ ತಿಂಗಳಲ್ಲಿ ಮಾಡಿ ತೋರಿಸಿದ್ದಾರೆ ಎಂದು ಕೆಎಂಎಫ್ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

Continue Reading

Trending

error: Content is protected !!