ಲೇಖನಗಳು
Honda CB350 BABT Motorcycle: ಹೋಂಡಾ ಕಂಪೆನಿಯ ಹೊಸ ಬೈಕ್ ಅನಾವರಣ! ರಾಯಲ್ ಎನ್ ಫಿಲ್ಡ್ ಗೆ ಪೈಪೋಟಿ ನೀಡಲು ಬರುತ್ತಿರುವ ಸಿಬಿ 350 ಬಾಬ್ಟ್ ಬೈಕ್ ನ ವಿಶೇಷತೆ, ದರ ಇಲ್ಲಿದೆ ನೋಡಿ……

ಹೋಂಡಾ ಕಂಪೆನಿಯು ಸಿಬಿ350 ಬಾಬ್ಟ್ ಬೈಕ್ (Honda CB350 BABT Classic Motorcycle) ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಹೋಂಡಾ ಮೋಟಾರ್ ಸೈಕಲ್ (Honda Motorcycle) ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಪ್ರೀಮಿಯಂ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇದೀಗ ಸಿಬಿ 350 ಆಧರಿಸಿರುವ ಹೊಸ ಸಿಬಿ 350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದೆ.
ಹೊಸ ಸಿಬಿ350 ಬಾಬ್ಟ್ ಕಫೆ ರೇಸರ್ ಬೈಕ್ ಮಾದರಿಯ ಮೊದಲ ಟೀಸರ್ ಹಂಚಿಕೊಂಡಿರುವ ಹೋಂಡಾ ಮೋಟಾರ್ ಸೈಕಲ್ ಕಂಪನಿಯು ರಾಯಲ್ ಎನ್ಫೀಡ್ ಕ್ಲಾಸಿಕ್ 350 ಮತ್ತು ಬುಲೆಟ್ 350 ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಿದೆ
ಸಿಬಿ350 ಬಾಬ್ಟ್ ಬೈಕ್ ನ ವಿಶೇಷತೆ:
ವಿಶೇಷ ವಿನ್ಯಾಸ ಮತ್ತು ತಂತ್ರಜ್ಞಾನ ಪ್ರೇರಣೆ ಹೊಂದಲಿರುವ ಹೊಸ ಸಿಬಿ350 ಬಾಬ್ಟ್ ಬೈಕ್ ಮಾದರಿಯು ಹೈನೆಸ್ ಸಿಬಿ350 ಬೈಕ್ ಮಾದರಿಯಿಂದ ಎರವಲು ಪಡೆಯಲಾದ 350 ಸಿಸಿ ಎಂಜಿನ್ ನೊಂದಿಗೆ ಮತ್ತಷ್ಟು ಕ್ಲಾಸಿಕ್ ಆಗಿ ನಿರ್ಮಾಣಗೊಳ್ಳುತ್ತಿದೆ. ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 21 ಹಾರ್ಸ್ ಪವರ್ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಇದು ದಿನನಿತ್ಯದ ಬಳಕೆಯ ಜೊತೆಗೆ ಅಡ್ವೆಂಚರ್ ಚಾಲನಾ ಉದ್ದೇಶಕ್ಕೂ ಉತ್ತಮ ಆಯ್ಕೆಯಾಗಲಿದೆ.

ಹೊಸ ಬೈಕಿನಲ್ಲಿ ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ ಜೊತೆಗೆ ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂ, ಎಲ್ಇಡಿ ಲೈಟ್ಸ್, ಅಸಿಸ್ಟ್ ಅಂಡ್ ಸ್ಲಿಪ್ಪರ್ ಕ್ಲಚ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಅಪ್ ಮತ್ತು ಗೇರ್ ಪೊಸಿಷನ್ ಇಂಡಿಕೇಟರ್ ಸೌಲಭ್ಯಗಳಿರಲಿವೆ ಎನ್ನಲಾಗಿದೆ
ಬೆಲೆ (Price)
ಬುಲೆಟ್ 350 ಮತ್ತು ಕ್ಲಾಸಿಕ್ 350 ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲು ಹೊಚ್ಚ ಹೊಸ ಸಿಬಿ350 ಬಾಬ್ಟ್ ಬಿಡುಗಡೆ ಮಾಡಲಾಗುತ್ತಿದ್ದು, ಇದು ರೂ. 2.20 ಲಕ್ಷದಿಂದ ರೂ. 2.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಲಿದೆ.
ಲೇಖನಗಳು
Best smartphone: 25000ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಅತ್ಯುತ್ತಮ ಸ್ಮಾರ್ಟ್ ಫೋನ್ ಗಳ ಬಗ್ಗೆ ವಿವರ ಇಲ್ಲಿದೆ ನೋಡಿ

Best smartphones under 25000: 25 ಸಾವಿರ ರೂಪಾಯಿಗಳ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದೀರಾ? ಬೆಸ್ಟ್ ಸ್ಮಾರ್ಟ್ ಫೋನ್ ಗಳ ಲಿಸ್ಟ್ ಇಲ್ಲಿದೆ ನೋಡಿ
ಮೊಟೊರೊಲಾ ಎಡ್ಜ್ 40 ನಿಯೋ 5G ಫೋನ್ – 25,000 ರೂಪಾಯಿಗಿಂತ ಕಡಿಮೆ ಬೆಲೆ
ಮೊಟೊರೊಲಾ ಎಡ್ಜ್ 40 ನಿಯೋ 5G ಫೋನ್ : ಈ ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಪೋಲೆಡ್ ಡಿಸ್‌ಪ್ಲೇ ಪಡೆದಿದೆ. -ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7030 SoC ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಬೆಂಬಲ ದೊಂದಿಗೆ ಕೆಲಸ ನಿರ್ವಹಿಸಲಿದೆ. -ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಆಗಿದೆ. -ಸೆಕೆಂಡರಿ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ.
*ಐಕ್ಯೂ Z7 ಪ್ರೊ 5G:
-ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ 25,000 ಕ್ಕಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ.
-ಈ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
-ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್ ವೇಗವನ್ನು ಹೊಂದಿದೆ.
– ಸ್ಮಾರ್ಟ್‌ಫೋನ್ ಕ್ಯಾಮೆರಾ ಐಕ್ಯೂ Z7 ಪ್ರೊ 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. -ಸ್ಮಾರ್ಟ್‌ಫೋನ್ 4,600mAh ಸಾಮರ್ಥ್ಯವನ್ನು ಹೊಂದಿದೆ. ಇದು 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

*ಸ್ಯಾಮ್‌ಸಂಗ್ ಗ್ಯಾಲಕ್ಸಿ M34 5G:
ಸ್ಯಾಮ್‌ಸಂಗ್ ಗ್ಯಾಲಕ್ಸಿ M34 -5Gಸ್ಮಾರ್ಟ್‌ಫೋನ್ ಸಹ ಮಿಡ್‌ರೇಂಜ್ ಪ್ರೈಸ್‌ಟ್ಯಾಗ್‌ನಲ್ಲಿ ಸಿಗಲಿದೆ.
-ಈ ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್ ಅಮೊಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ.
-ಇದು ಆಕ್ಟಾ-ಕೋರ್ Exynos 1280 SoC ಪ್ರೊಸೆಸರ್ ನಲ್ಲಿ ಕೆಲಸ ಮಾಡಲಿದ್ದು, ಜೊತೆಗೆ ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಹೊಂದಿದೆ.
-ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಆಗಿದೆ.
-ಈ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ.
– 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಸಹ ಒಳಗೊಂಡಿದೆ.
*ಒನ್‌ಪ್ಲಸ್ ನಾರ್ಡ್ CE 3 5G:
-ಒನ್‌ಪ್ಲಸ್ ನಾರ್ಡ್ CE 3 5G ಸ್ಮಾರ್ಟ್‌ಫೋನ್ 24,999ರೂ. ದೊರೆಯುತ್ತದೆ.
-ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇಯನ್ನು ಹೊಂದಿದ. ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 782G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. -ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಹೊಂದಿದೆ.
– ಈ ಫೋನ್ ನೈಟ್‌ಸ್ಕೇಪ್ ಅಲ್ಟ್ರಾ, ನೈಟ್ ಪೋರ್ಟ್ರೇಟ್, ಒಐಎಸ್ ನಂತಹ ಕೆಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಲೇಖನಗಳು
Flipkart Mobiles Bonanza Sale: ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಕೆಲವು ಫೋನ್ಗಳ ಮೇಲೆ ಆಫರ್ ಗಳ ಸುರಿಮಳೆ … ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್ಸ್ ಬೊನಾಂಜಾ ಸೇಲ್ ನಡೆಸುತ್ತಿದೆ. ಈ ಸೇಲ್ ಮೂಲಕ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಆಫರ್ ಅನ್ನು ನೀಡುತ್ತಿದೆ. ಇದರಲ್ಲಿ ವಿವಿಧ ಬೆಲೆ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಕೂಡ ಸೇರಿವೆ. ಆದರಿಂದ ಸ್ಮಾರ್ಟ್‌ಫೋನ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಲು ಬಯಸುವವರಿಗೆ ಇದು ಸೂಕ್ತ ಸಮಯವಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಮೊಬೈಲ್ ಫೋನ್ಸ್ ಬೊನಾಂಜಾ ಸೇಲ್‌ನಲ್ಲಿ ಡಿಸ್ಕೌಂಟ್ ಪಡೆದುಕೊಂಡಿರುವ ಸ್ಮಾರ್ಟ್‌ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.
ಫ್ಲಿಪ್‌ಕಾರ್ಟ್ನಲ್ಲಿ ಬೊನಾಂಜಾ ಸೇಲ್ಫೋನ್‌ಗಳಿಗೆ ಆಕರ್ಷಕವಾದ ರಿಯಾಯಿತಿಗಳನ್ನು ನೀಡಲಾಗಿದೆ. ನಥಿಂಗ್ ಫೋನ್ (2), ಸ್ಯಾಮ್ಸಂಗ್ ಗ್ಯಾಲಕ್ಸಿ M14, ಪೋಕೋ X5 ಪ್ರೊ ಸೇರಿದಂತೆ ಅನೇಕ ಫೋನುಗಳ ಮೇಲೆ ಡಿಸ್ಕೌಂಟ್ ಇದೆ.
*ಪೋಕೋ X5 ಪ್ರೊ ಫೋನ್: ಭಾರತದಲ್ಲಿ ಮೂಲತಃ 22,999 ರೂ. ಬೆಲೆಗೆ ಬಿಡುಗಡೆಯಾದ ಪೋಕೋ X5 ಪ್ರೊ, ಫ್ಲಿಪ್‌ಕಾರ್ಟ್ ಮೊಬೈಲ್ ಬೊನಾಂಜಾ ಮಾರಾಟದ ಸಮಯದಲ್ಲಿ ಭಾರಿ ಬೆಲೆ ಇಳಿಕೆಯನ್ನು ಪಡೆದುಕೊಂಡಿದೆ. ಇದು ರೂ. 18,999 ಕ್ಕೆ ಸೇಲ್ ಆಗುತ್ತಿದೆ. ಅಂದರೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ರೂ. 4,000 ರಿಯಾಯಿತಿಯನ್ನು ನೀಡುತ್ತಿದೆ. ಇದು ಪ್ರಸ್ತುತ ರೂ. 20,000 ಕ್ಕಿಂತ ಕಡಿಮೆ ಇರುವ ಅತ್ಯುತ್ತಮ 5G ಫೋನ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಉನ್ನತ-ಮಟ್ಟದ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ನೀಡಲಾಗಿದೆ.
*ಮೊಟೊರೊಲಾ ಎಡ್ಜ್ 40 ಫೋನ್ : 30,000 ಕ್ಕಿಂತ ಈ ಕಡಿಮೆ 5G ಫೋನ್ ಇದಾಗಿದೆ. ಈ ಫೋನನ್ನು ಗ್ರಾಹಕರು 26,999 ರೂ. ಗೆ ಖರೀದಿಸಬಹುದು. ಪ್ರೀಮಿಯಂ ಲೆದರ್ ಬ್ಯಾಕ್ ಪ್ಯಾನೆಲ್ ಅನ್ನು ಸಹ ಹೊಂದಿದೆ.
*ನಥಿಂಗ್ ಫೋನ್ : ಫ್ಲಿಪ್‌ಕಾರ್ಟ್ ಮೂಲಕ ರೂ. 39,999 ಗೆ ಖರೀದಿಸಬಹುದು. 5G ಫೋನ್ ಈ ವರ್ಷದ ಆರಂಭದಲ್ಲಿ ರೂ. ಇದರ ಬೆಲೆ39,999 ಗೆ ಖರೀದಿಸಬಹುದು. ಈ ಫೋನ್ ಮೇಲೆ ರೂ. 5,000 ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು. ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯೂ ಇದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M14 ಫೋನ್:ಇದು 4GB RAM + 128GB ಸ್ಟೋರೇಜ್ ಮಾದರಿಗಾಗಿ 13,399 ರೂ. ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಈ ಸ್ಯಾಮ್‌ಸಂಗ್ ಫೋನ್ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದೆ. ಅಲ್ಲದೆ, ನಿಮ್ಮ ಬಜೆಟ್ 15,000 ರೂ. ಗಿಂತ ಕಡಿಮೆಯಿದ್ದರೆ ಇದು ಪ್ರಸ್ತುತ ಅತ್ಯುತ್ತಮ ಫೋನ್ ಡೀಲ್‌ಗಳಲ್ಲಿ ಒಂದಾಗಿದೆ.
ಬಿಗ್ ನ್ಯೂಸ್
Jonathan Tortoise: ಸೇಂಟ್ ಹೆಲೆನಾ ದ್ವೀಪದಲ್ಲಿದೆ ಪ್ರಪಂಚದ ಅತ್ಯಂತ ಹಳೆಯ ಪ್ರಾಣಿ – ಐಫೆಲ್ ಟವರ್‌ಗಿಂತಲೂ ಹಳೆಯದಾದ ಇದರ ಬಗ್ಗೆ ನಿಮಗೆಷ್ಟು ಗೊತ್ತು ?

ಜೊನಾಥನ್( Jonathan) ಎಂಬ ಸೀಶೆಲ್ಸ್ ದೈತ್ಯ ಆಮೆ(Seychelles giant Tortoise) ಬಹುಶಃ ವಿಶ್ವದಲ್ಲಿ ಬದುಕಿರುವ ಅತೀ ಹಿರಿಯ ಆಮೆ ಎಂದು ಹೇಳಲಾಗಿದೆ. ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿ ಜೊನಾಥನ್ ವಾಸಿಸುತ್ತಿದೆ.
ಮೂಲತಃ ಈ ಆಮೆ ಹಿಂದೂ ಮಹಾಸಾಗರದ ಸೀಶೆಲ್ಸ್ ನದು. ಅದಕ್ಕೆ 50 ವರ್ಷ ವಯಸ್ಸಾದಾಗ 1882ರಲ್ಲಿ ಇನ್ನೂ 3 ಆಮೆಗಳೊಂದಿಗೆ ದಕ್ಷಿಣ ಅಟ್ಲಾಂಟಿಕ್ ದ್ವೀಪಕ್ಕೆ ಕರೆತರಲಾಯಿತು. 1930ರಲ್ಲಿ ಸೇಂಟ್ ಹೆಲೆನಾ ಗವರ್ನರ್ ಸರ್ ಸ್ಪೆನ್ಸರ್ ಡೇವಿಸ್ ಈ ಆಮೆಗೆ ಜೊನಾಥನ್ ಎಂಬ ಹೆಸರು ನೀಡಿದರು ಮತ್ತು ಈಗ ಅದಕ್ಕೆ 191 ವರ್ಷ ವಯಸ್ಸು ಎಂದು ಹೇಳಲಾಗಿದೆ.
ಸೀಶೆಲ್ಸ್ ದೈತ್ಯ ಆಮೆ, ಜೊನಾಥನ್ ಸೇಂಟ್ ಹೆಲೆನಾ ರಾಜ್ಯಪಾಲರ ಅಧಿಕೃತ ನಿವಾಸವಾದ ಪ್ಲಾಂಟೇಶನ್ ಹೌಸ್‌ನ ಮೈದಾನದಲ್ಲಿ ವಾಸಿಸುತ್ತಿದೆ. ಈ ಆಮೆ ಒಂದು ಮತ್ತು ಎರಡನೇ ವಿಶ್ವ ಯುದ್ಧಗಳನ್ನು ಕಂಡಿದೆ. ಇದಲ್ಲದೆ, ರಷ್ಯಾದ ಕ್ರಾಂತಿ ಮತ್ತು 39 ಅಮೇರಿಕಾದ ಅಧ್ಯಕ್ಷರು, ಏಳು ಬ್ರಿಟಿಷ್ ದೊರೆಗಳ ಆಳ್ವಿಕೆಯನ್ನು ನೋಡಿದ ಆಮೆ ಇದು. ಸದ್ಯ ಇಡೀ ವಿಶ್ವವನ್ನು ನಡುಗಿಸುತ್ತಿರುವ ಕೊರೊನಾ ವೈರಸ್‌ನ ಹಾವಳಿಗೂ ಈ ಆಮೆ ಸಾಕ್ಷಿಯಾಗಿದೆ.
Gold price hike ಜೆಟ್ ವೇಗದಲ್ಲಿ ಏರಿದ ಚಿನ್ನದ ಬೆಲೆ- ಇಳಿಯುವ ಸಾಧ್ಯತೆ ಇದೆಯಾ?

ಜೊನಾಥನ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಕಾಣಿಸಿಕೊಂಡಿದ್ದು, ಸುಮಾರು 1832ರಲ್ಲಿ ಜನಿಸಿದ ಆಮೆಯು 1887ರಲ್ಲಿ ಪೂರ್ಣಗೊಂಡ ಐಫೆಲ್ ಟವರ್‌ಗಿಂತಲೂ ಹಳೆಯದು. ಜೊನಾಥನ್ ಅಲ್ಡಬ್ರಾ ದೈತ್ಯ ಆಮೆಯ ಉಪಜಾತಿಗೆ ಸೇರಿದ್ದು, ಈ ಜಾತಿಯ ಆಮೆಗಳು ನಾಶವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, IUCN ಪ್ರಕಾರ ಜಾಗತಿಕವಾಗಿ ಈ ಜಾತಿಯ ಸುಮಾರು 80 ಆಮೆಗಳಿವೆ ಎಂದು ತಿಳಿದುಬಂದಿದೆ.
Health Tips ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಕ್ಷೇಮವೇ ? ಇಲ್ಲಿದೆ ಮಾಹಿತಿ

ಜೊನಾಥನ್ ತನ್ನ ಸಾಮಾನ್ಯ ಸರಾಸರಿ 150 ವರ್ಷಗಳ ಜೀವಿತಾವಧಿ ಮೀರಿದ್ದರೂ, ಕೆಲವು ವಯೋಸಹಜ ಸಮಸ್ಯೆಗಳ ಹೊರತಾಗಿ ಈ ಇನ್ನೂ ತುಂಬಾ ಆರೋಗ್ಯಕರವಾಗಿದೆ ಎಂದು ಅದರ ಪಶುವೈದ್ಯರು ಹೇಳುತ್ತಾರೆ. ಕಣ್ಣಿನಲ್ಲಿ ಪೊರೆಯಿಂದಾಗಿ ಕಣ್ಣುಗಳು ಬಹುತೇಕ ಕುರುಡಾಗಿದೆ ಮತ್ತು ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿರಬಹುದು, ಆದರೆ ಇನ್ನೂ ಉತ್ತಮ ಶ್ರವಣ ಕೌಶಲ್ಯ ಹೊಂದಿದೆ ಎಂದೂ ಹೇಳಲಾಗಿದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು23 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್24 hours ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ