Connect with us

ಕೊಡಗು

ಕೊಡಗಿನ ಟಾಟಾ ಕಾಫಿ ಎಸ್ಟೇಟ್ ನಲ್ಲಿ ಚಿನ್ನಾಭರಣವುಳ್ಳ ನಿಧಿ ಪತ್ತೆ

Ad Widget

Ad Widget

ಕೊಡಗು : ಪುರಾತನ ಕಾಲದ ಚಿನ್ನಾಭರಣವುಳ್ಳ ನಿಧಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರದ ಅಮ್ಮತಿ ಮುಖ್ಯ ರಸ್ತೆಯಲ್ಲಿರುವ ಆನಂದಪುರ ಗ್ರಾಮದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಆನಂದಪುರ ಗ್ರಾಮದಲ್ಲಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದಲ್ಲಿ ಪುರಾತನ ಕಾಲದ ಈಶ್ವರ ದೇವಸ್ಥಾನವಿದ್ದು, ಕಾರ್ಮಿಕರು ದೇವಾಲಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಭೂಮಿಯ ಅಡಿಯಲ್ಲಿ ಪ್ರಾಚೀನ ಕಾಲದ ಕೆಲ ವಸ್ತುಗಳು ಪತ್ತೆಯಾದವು.

Ad Widget

Ad Widget

Ad Widget

ಪತ್ತೆಯಾದ ವಸ್ತುಗಳ ಒಳಗೆ ಚಿನ್ನದ ಆಭರಣಗಳು, ಹಳೆಯ ಕಾಲದ ಉಂಗುರ, ಖಡ್ಗ ಸೇರಿದಂತೆ ಪುರಾತನ ಕಾಲದ ಆಭರಣಗಳು ಪತ್ತೆಯಾಗಿವೆ‌. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಹಾಗೂ ತಹಸೀಲ್ದಾರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

ಪತ್ತೆಯಾದ ಆಭರಣಗಳನ್ನು ವಿರಾಜಪೇಟೆ ತಹಸೀಲ್ದಾರ್ ವಶಕ್ಕೆ ನೀಡಲಾಗಿದ್ದು, ಪ್ರಾಚ್ಯವಸ್ತು ಇಲಾಖೆಗೆ ನೀಡಿ ಸಂಶೋಧನೆಯ ಬಳಿಕ ಇದು ಎಷ್ಟು ವರ್ಷಗಳ ಹಿಂದಿನ ಆಭರಣಗಳೆಂಬುದು ಬೆಳಕಿಗೆ ಬರಲಿದೆ.

Ad Widget

Ad Widget
Click to comment

Leave a Reply

ಕೊಡಗು

Komodo dragon: ಮಡಿಕೇರಿ: ಮನೆಯೊಂದರ ಪಕ್ಕ ಪತ್ತೆಯಾಯಿತು ಬೃಹತ್‌ ಗಾತ್ರದ ಉಡ – ಜಗತ್ತಿನಲ್ಲೇ ಅಪರೂಪ ಎನಿಸಿರುವ ಕೊಮೊಡೊ ಡ್ರ್ಯಾಗನ್ ?

Ad Widget

Ad Widget

ಸುಮಾರು 5ರಿಂದ 6 ಅಡಿ ಉದ್ದದ ಬೃಹತ್ ಗಾತ್ರದ ಉಡವೊಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ತಾಲ್ಲೂಕಿನ ಕುಂದಾ ಗ್ರಾಮದಲ್ಲಿ ಪತ್ತೆಯಾಗಿದೆ. ಅಳಿವಿನಂಚಿನಲ್ಲಿರುವ ಜೀವಿ ಎಂದೇ ಪರಿಗಣಿತವಾಗಿರುವ ಉಡಗಳು ಸಾಮಾನ್ಯವಾಗಿ ಕಾಡಿನಲ್ಲಿ ಹಾಗೂ ರಕ್ಷಿತಾರಣ್ಯಗಳಲ್ಲಿ ಕಂಡು ಬರುತ್ತದೆ. ಆದರೇ ಇಲ್ಲಿ ಮಾತ್ರ ಅದು ಮನೆ ಸಮೀಪ ಪತ್ತೆಯಾಗಿದೆ

Ad Widget

Ad Widget

Ad Widget

Ad Widget

ಇಲ್ಲಿನ ಕೊಡಂದೇರ ದಿಲೀಪ್ ಅವರ ಮನೆ ಸಮೀಪ ಕಂಡು ಬಂದ ಈ ಉಡವು ಅವರ ಮನೆಯ ಕಾಂಪೌಂಡ್‌ಗೆ ಕುತ್ತಿಗೆ ಹಾಕಿ ಇಣುಕಿ ನೋಡುತ್ತ ಕೆಲಹೊತ್ತು ನಿಂತಿದೆ. ಬಳಿಕ ಇದು ಕಾಡಿನಲ್ಲಿ ಮರೆಯಾಗಿದೆ. ಇಷ್ಟೊಂದು ದೊಡ್ಡ ಗಾತ್ರದ ಉಡವನ್ನು ಈ ಹಿಂದೆ ಇಲ್ಲಿ ನೋಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Ad Widget

Ad Widget

Ad Widget

ಸ್ಥಳೀಯರು ಉಡದ ಚಲನವಲನದ ವಿಡಿಯೊ ಹಾಗೂ ಚಿ‌ತ್ರವನ್ನು ಸೆರೆ ಹಿಡಿದಿದ್ದಾರೆ. ಇಲ್ಲಿಗೆ ಸಮೀಪದಲ್ಲೇ ಕುಂದಾಬೆಟ್ಟ ಹಾಗೂ ದಟ್ಟವಾದ ಅರಣ್ಯವಿದೆ. ಅಲ್ಲಿ ದೊಡ್ಡ ದೊಡ್ಡ ಗವಿಗಳು ಹಾಗೂ ಬಂಡೆಗಳಿವೆ. ಅಲ್ಲಿಂದ ಈ ಉಡ ಬಂದಿರುವ ಸಾಧ್ಯತೆ ಇದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯ

Ad Widget

ಕೊಡಗಿನಲ್ಲಿ ಉಡಗಳು ಇವೆಯಾದರೂ ಇಷ್ಟೊಂದು ದೊಡ್ಡ ಗಾತ್ರದ ಉಡಗಳು ಅಪರೂಪ. ಬಹಳಷ್ಟು ಉಡಗಳು ಬೇಟೆಗೆ ಬಲಿಯಾಗಿವೆ. ಸದ್ಯ, ಕಾಣಿಸಿಕೊಂಡಿರುವ ಉಡವು ಜಗತ್ತಿನಲ್ಲೇ ಅಪರೂಪ ಎನಿಸುವ ಕೊಮೊಡೊ ಡ್ರ್ಯಾಗನ್ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Ad Widget

Ad Widget

ಈ ಬಗ್ಗೆ ಇಲ್ಲಿನ ಡಿಆರ್‌ಎಫ್‌ಒ ದಿವಾಕರ್ ಪ್ರತಿಕ್ರಿಯಿಸಿ ‘ಇಷ್ಟೊಂದು ದೊಡ್ಡ ಗಾತ್ರದ ಉಡವನ್ನು ನಾನು ಸಹ ಈ ಭಾಗದಲ್ಲಿ ನೋಡಿರಲಿಲ್ಲ. ಆದರೆ, ಇದು ಕೊಮೊಡೊ ಡ್ರ್ಯಾಗನ್‌ ಎಂಬುದು ಖಚಿತವಾಗಿಲ್ಲದೇ ಹೋದರೂ, ಈ ಭಾಗದಲ್ಲಿ ಅಪರೂಪ ಎನಿಸುವಷ್ಟು ದೊಡ್ಡಗಾತ್ರದ ಉಡ ಎಂದು ಹೇಳಬಹುದು. ಈ ಉಡದಿಂದ ಜನರು ಭಯಪಡುವ ಅಗತ್ಯ ಇಲ್ಲ. ಮತ್ತೊಮ್ಮೆ ಕಾಣಸಿಕ್ಕರೆ ವಿಷಯ ತಿಳಿಸುವಂತೆ ಸ್ಥಳೀಯರಿಗೆ ಹೇಳಿದ್ದೇವೆ’ ಎಂದು ತಿಳಿಸಿದರು.

Continue Reading

ಕೊಡಗು

General Thimmayya | ಮಡಿಕೇರಿ ಪೇಟೆಯ ಜನರಲ್ ತಿಮ್ಮಯ್ಯ ಪ್ರತಿಮೆಗೆ ಬಸ್ ಡಿಕ್ಕಿ – ನೆಲಕ್ಕುರುಳಿದ ದಂಡನಾಯಕನ ಪ್ರತಿಮೆ – ಸರ್ಕಲ್ ನಲ್ಲಿದ್ದವ ಪವಾಡಸದೃಶ್ಯ ಪಾರು ವಿಡಿಯೋ ವೈರಲ್

Ad Widget

Ad Widget

ಮಡಿಕೇರಿ ಪಟ್ಟಣದಲ್ಲಿರುವ ಜನರಲ್ ತಿಮ್ಮಯ್ಯ (General Thimmayya) ಪ್ರತಿಮೆಗೆ ರಾತ್ರಿ KSRTC ಬಸ್ ಡಿಕ್ಕಿಯಾಗಿದೆ ಪ್ರತಿಮೆ ನೆಲಕ್ಕುರುಳಿದೆ.

Ad Widget

Ad Widget

Ad Widget

Ad Widget

ಮಡಿಕೇರಿಯ ಜನರಲ್ ತಿಮ್ಮಯ್ಯ ವೃತದಲ್ಲಿರುವ ವೀರ ಸೇನಾನಿಯ ಪ್ರತಿಮೆಗೆ ನಿಯಂತ್ರಣ ತಪ್ಪಿ ಬಸ್ ಡಿಕ್ಕಿಯಾದ ಪರಿಣಾಮ ಪ್ರತಿಮೆ ನೆಲಕ್ಕೆ ಬಿದ್ದಿದ್ದು, ಮಡಿಕೇರಿ ಡಿಪ್ಪೊದಿಂದ ಬಸ್ ಸ್ಟ್ಯಾಂಡ್ ಗೆ ಹೊರಟ್ಟಿದ್ದ ಬಸ್ ಪಿಕಪ್ ವಾಹನಕ್ಕೆ ಅಪಘಾತ ಆಗುವುದನ್ನು ತಪ್ಪಿಸಲು ಹೋಗಿ ಪ್ರತಿಮೆಗೆ ಡಿಕ್ಕಿಯಾಗಿದೆ. ಅಪಘಾತ ಸಂದರ್ಭ ಸರ್ಕಲ್ ಬಳಿ ಇದ್ದ ವ್ಯಕ್ತಿಯೊಬ್ಬರು ಪವಾಡ ರೀತಿ ಪಾರದ ಸಿಸಿಟಿವಿಯ ದೃಶ್ಯ ವೈರಲ್ ಆಗಿದೆ.

Ad Widget

Ad Widget

Ad Widget

ಅಪಘಾತದಿಂದ ಚಾಲಕ ನಿರ್ವಾಹಕ ಪುಟ್ಟಗಾಯಗಳಾಗಿದೆ.ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

Ad Widget

ಪದ್ಮ ಭೂಷಣ ಜನರಲ್ ಕೆ ಎಸ್ ತಿಮ್ಮಯ್ಯ ಅವರು ಭಾರತದ ಭೂಸೇನೆಯ ದಂಡನಾಯಕರಾಗಿದ್ದರು. ಅವರ ಪ್ರತಿಮೆಯನ್ನು 21 ಏಪ್ರಿಲ್ 1973 ರಲ್ಲಿ ಫೀಲ್ಡ್ ಮಾರ್ಷಲ್ ಸ್ಯಾಮ್ ಮನಿಕ್ಷಾ ಅವರು ಉದ್ಘಾಟಿಸಿದ್ದರು.

Ad Widget

Ad Widget
Continue Reading

ಕ್ರೈಂ

ಕೊಡಗು : ಬೈಕ್‌ ಮಧ್ಯೆ ಮುಖಾಮುಖಿ ಢಿಕ್ಕಿ – ಕೆನರಾ ಬ್ಯಾಂಕ್‌ ಉದ್ಯೋಗಿ ಮೃತ್ಯು

Ad Widget

Ad Widget

ಕೊಡಗು (ಆ.19): ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬ್ಯಾಂಕ್‌ ಉದ್ಯೋಗಿ ಒಬ್ಬರು ಸಾವಿಗೀಡಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿಯಲ್ಲಿ ತಡರಾತ್ರಿ ನಡೆದಿದೆ.

Ad Widget

Ad Widget

Ad Widget

Ad Widget

ಅಮೃತ(24) ಮೃತ ದುರ್ದೈವಿ. ಮೂಲತಃ ಕೇರಳದ ಶ್ರೀಶೂರಿನವರಾದ ಅಮೃತ ಕೆನರಾ ಬ್ಯಾಂಕ್‌ ಉದ್ಯೋಗಿಯಾಗಿದ್ದರು. ಎರಡೂ ಬೈಕ್‌ಗಳು ರಭಸವಾಗಿ ಡಿಕ್ಕಿಯಾಗಿರುವ ಪರಿಣಾಮ ಅಮೃತ ತೀವ್ರ ಗಾಯಗೊಂಡಿದ್ದಳು.

Ad Widget

Ad Widget

Ad Widget

ಅಪಘಾತದಲ್ಲಿ ಗಾಯಗೊಂಡಿದ್ದ ಅಮೃತಾಳನ್ನು ಮೈಸೂರು ಅಪೊಲೋ ಆಸ್ಪತ್ರೆಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಮೃತ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget
Continue Reading

Trending

error: Content is protected !!