ರಾಷ್ಟ್ರೀಯ
B Y Vijayendra ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ನೇಮಕ

ಬೆಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ ಬಿಜೆಪಿ ಹೈಕಮಾಂಡ್ ಆದೇಶ ಹೊರಡಿಸಿದೆ. ಈ ಕೂಡಲೇ ಜಾರಿಯಾಗುವಂತೆ ರಾಜ್ಯಾದ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೂಲಕ, ಈವರೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅಧಿಕಾರಾವಧಿ ಅಂತ್ಯವಾಗಿದೆ.
ಈ ಮೂಲಕ, ಕೆಲವು ತಿಂಗಳುಗಳಿಂದ ಕುತೂಹಲಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಚುನಾವಣೆಗೂ ಮುನ್ನ ಬಿ.ಎಸ್. ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿದ ಆರೋಪಕ್ಕೆ ಹಾಗೂ ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದ ತಪ್ಪುಗಳನ್ನು ಈಗ ಈ ಒಂದೇ ನೇಮಕಾತಿಯಿಂದ ಸರಿಪಡಿಸಿಕೊಳ್ಳಲು ಬಿಜೆಪಿ ಯತ್ನಿಸಿದೆ.
ಆರೋಗ್ಯ
Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್‌ಸಿಆರ್‌ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Heart Attack deaths Increased in India ನವದೆಹಲಿ: ಕೊರೊನಾ ಬಾಧಿಸಿದ (Corona panadamic) ಕಳೆದ 3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದಯಾಘಾತ (Heart Attack) ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ 2022ನೇ ಸಾಲಿನಲ್ಲಿ ಹೃದಯಾಘಾತವಾಗಿ ಸಾಯುವವರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ 12.5% ಏರಿಕೆಯಾಗಿದೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (National Crime Record Bureau) (ಎನ್‌ಸಿಆರ್‌ಬಿ) ದೇಶದಲ್ಲಿ ಹೆಚ್ಚಳ ವಾಗುತ್ತಿರುವ ಹೃದಯಘಾತ ಸಂಬಂದಿ ಸಾವಿನ ಅಂಕಿ ಅಂಶಗಳನ್ನು ( Heart Attack death percentage) ಬಿಡುಗಡೆ (ncrb report on Heart Attack) ಮಾಡಿದೆ. ಈ ವರದಿಯ ಬಳಿಕ ಸಾಂಕ್ರಾಮಿಕ ರೋಗಕ್ಕೂ ಹೃದಯಘಾತಕ್ಕೂ ಸಂಬಂಧವಿದೆ ಈ ಬಗ್ಗೆ ವಿಸ್ತ್ರತ ತನಿಖೆ ನಡೆಯಬೇಕು ಎಂದು ತಜ್ಙರು ಆಗ್ರಹಿಸುತ್ತಿದ್ದಾರೆ
ಎನ್‌ಸಿಆರ್‌ಬಿ ವರದಿ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. 2021ರಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ 28,413. ಈ ಅಂಕಿ ಅಂಶ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣದಲ್ಲಿ ಗಮನಾರ್ಹ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 2020ರಲ್ಲಿ 28579 ಮಂದಿ ಹಾರ್ಟ್ ಅಟ್ಯಾಕ್ (Heart attack ) ನಿಂದ ಮೃತಪಟ್ಟಿದ್ದಾರೆ.
ಹಠಾತ್ ಸಾವಿನ ಪ್ರಮಾಣದಲ್ಲೂ ಏರಿಕೆ
ಹಠಾತ್ ಸಾವುಗಳ (sudden death) ಒಟ್ಟಾರೆ ಸಂಖ್ಯೆಯಲ್ಲೂ ದೇಶದಲ್ಲಿ ಗಮನಾರ್ಹ ಏರಿಕೆ ಕಾಣಿಸಿದೆ. ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳ ಕಂಡು ಬಂದಿದೆ. ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್‌ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವನ್ನು ಎನ್‌ಸಿಆರ್‌ಬಿ ಹಠಾತ್ ಮರಣದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ ಹಲವು ಆರೋಗ್ಯವರ್ಧಕ ಅಂಶಗಳು
ತಜ್ಞರು ಏನೂ ಹೇಳುತ್ತಾರೆ
ಹೃದಯದ ಆರೋಗ್ಯದ ಮೇಲೆ ಇದ್ದಕ್ಕಿದಂತೆ ಆಗಾಧ ಪರಿಣಾಮ ಬೀರುತ್ತಿರುವುದರ ಹಿಂದೆ ಸಾಂಕ್ರಮಿಕ ರೋಗದ ಬಳಿಕ ಉದ್ಭವಿಸಿದ ಪರಿಣಾಮಗಳು ಕಾರಣ ಎಂಬ ಅಭಿಪ್ರಾಯ ವೈದಕೀಯ ಲೋಕದಿಂದ ಕೇಳಿ ಬರುತ್ತಿದೆ. ವೈದಕೀಯ ಜಗತ್ತಿನ ಒಂದು ವರ್ಗದ ಪ್ರಕಾರ ಕೊರೊನಾ ಬಾಧಿಸಿದ ಸಂದರ್ಭ ಹಾಗೂ ಕೊರೊನೋತ್ತರ ಕಾಲದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದು ವರ್ಗದ ಪ್ರಕಾರ ಕೊರೊನಾ ಲಸಿಕೆಯ ಪರಿಣಾಮವು ಇದಾಗಿರಬಹುದು. ಹೀಗಾಗಿ ಈ ಸಾವಿನ ಹೆಚ್ಚಳದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡಬೇಕು . ಇದರ ಜತೆಗೆ ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.
Bitter Gourd health benefits: ಹಾಗಲಕಾಯಿ ನಾಲಿಗೆಗೆ ಕಹಿ – ಉದರಕ್ಕೆ ಸಿಹಿ… ಇಲ್ಲಿದೆ ಅದರ ಆರೋಗ್ಯ ಪ್ರಯೋಜನಗಳು
ಜೀವನ ಶೈಲಿ ಬದಲಾಯಿಸಿ
ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚಳವಾಗಲು ಬದಲಾದ ಜೀವನ ಶೈಲಿಯು ಒಂದು ಕಾರಣ. ದೈಹಿಕ ವ್ಯಾಯಮವಿಲ್ಲದ ಉದ್ಯೋಗಗಳು ಹೆಚ್ಚಾಗಿರುವುದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.
ರಾಷ್ಟ್ರೀಯ
IAF Plane Crash ತೆಲಂಗಾಣ: ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನದಿಂದ ಇಬ್ಬರು ಪೈಲೆಟ್ಗಳ ಸಾವು

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.ಘಟನೆಯ ಬಗ್ಗೆ ಭಾರತೀಯ ವಾಯುಪಡೆ ಮಾಹಿತಿ ನೀಡಿದ್ದು ಬೆಳಗ್ಗೆ 8.55ಕ್ಕೆ ಈ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಪಿಸಿ 7 ಎಂಕೆ II ವಿಮಾನವು ವಾಡಿಕೆಯ ತರಬೇತಿ ವೇಳೆ ಅಪಘಾತಕ್ಕೀಡಾಗಿದೆ ಎಂದು ವಾಯುಪಡೆ ತಿಳಿಸಿದೆ. ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್ ಗಳು ಗಂಭೀರವಾಗಿ ಗಾಯಗೊಂಡಿದ್ದು, ನಂತರ ಮೃತಪಟ್ಟಿದ್ದಾರೆ.
ದಿಂಡುಗಲ್‌ನ ಏರ್ ಫೋರ್ಸ್ ಅಕಾಡೆಮಿ ತರಬೇತಿ ವೇಳೆ ಈ ಅವಘಡ ಸಂಭವಿಸಿದೆ. ಸತ್ತವರಲ್ಲಿ ಒಬ್ಬ ಇನ್ಸ್ಟ್ರಕ್ಟರ್ ಮತ್ತು ಕೆಡೆಟ್ ಸೇರಿದ್ದಾರೆ. ಪೊಲೀಸರ ಪ್ರಕಾರ, ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿ ಇಬ್ಬರು ಭಾರತೀಯ ವಾಯುಪಡೆ ಅಧಿಕಾರಿಗಳು ಇದ್ದರು. ಈ ಅಪಘಾತ ಸಂಭವಿಸಿದಾಗ ವಿಮಾನ ತೂಪ್ರಾನ್ ಪ್ರದೇಶದಲ್ಲಿತ್ತು. ಏರ್ ಫೋರ್ಸ್ ಅಕಾಡೆಮಿ ದುಂಡಿಗಲ್‌ನಿಂದ ವಿಮಾನ ಟೇಕಾಫ್ ಆಗಿತ್ತು.
ಗುಡ್ಡಗಾಡು ಪ್ರದೇಶದಲ್ಲಿ ವಾಯುಪಡೆ ವಿಮಾನ ಪತನವಾಗುತ್ತಲೇ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ
ಘಟನೆ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೈಲಟ್‌ಗಳ ಸಾವಿಗೆ ಸಂತಾಪ ಸೂಚಿಸಿದ್ದಾರೆ
ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿರುವುದು ಬೇಸರ ತಂದಿದೆ ಎಂದಿದ್ದಾರೆ.
ಅಪರಾಧ
Shabarimala ಶಬರಿಮಲೆ ಅಯ್ಯಪ್ಪ ಭಕ್ತರ ವೇಷ ಧರಿಸಿ ಕಾರಿನಲ್ಲಿ ಕೋಟ್ಯಂತರ ಮೌಲ್ಯದ ಅಂಬರ್ ಗ್ರೀಸ್ ಸಾಗಾಟ; ಮೂವರ ಬಂಧನ

ಗುರುವಾಯೂರು: ಶಬರಿಮಲೆ ಅಯ್ಯಪ್ಪ ಭಕ್ತರ ಸೋಗಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತ ಕೋಟ್ಯಂತರ ಮೌಲ್ಯದ ತಿಮಿಂಗಿಲದ ವಿಸರ್ಜನೆ ಅಂಬರ್ ಗ್ರೀಸ್ ಅಕ್ರಮ ಸಾಗಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಕೊಯಿಲಾಂಡಿ ಮರಕ್ಕಾಟ್ಟುಪೊಯಿಲ್ ನ ಬಾಜಿನ್ (31), ಕೊಯಿಲಾಂಡಿ ವಟ್ಟಕಂಡಿಯ ರಾಹುಲ್ (26), ಕೋಝಿಕ್ಕ್ಕೋಡ್ ಅರಿಕ್ಕುಳಂ ರಾಮಪಾಟ್ಕಂಡಿಯ ಅರುಣ್ ದಾಸ್ (30) (30) ಬಂಧಿತರು. ಈ ಮೂವರು ಆಯ್ಯಪ್ಪ ವರತಧಾರಿಗಳಂತೆ ವೇಷ ಧರಿಸಿದ್ದರು.
ಆರೋಪಿಗಳನ್ನು ತ್ರಿಶೂರ್ ನಗರ ಪೊಲೀಸ್ ಕಮಿಷನರ್ ನೇತೃತ್ವದ ಶ್ಯಾಡೋ ಪೊಲೀಸ್ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಗುರುವಾಯೂರ್ ದೇಗುಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.1972ರ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ದೇಶದಲ್ಲಿ ತಿಮಿಂಗಿಲದ ವಿಸರ್ಜನೆ ಹೊಂದಿರುವುದು ಸಾಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂಬರ್ ಗ್ರೀಸ್ ಖರೀದಿಸಲು ಬಂದ ಮಧ್ಯವರ್ತಿಗಳ ಸೋಗಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇವರು ಅಯ್ಯಪ್ಪ ವೃತಧಾರಿಗಳು ಬಳಸುವ ಕಪ್ಪು ವಸ್ತ್ರ ಧರಿಸಿದ್ದು, ಮೈಯೆಲ್ಲ ಆಯ್ಯಪ್ಪ ಭಕ್ತರಂತೆ ವಿಭೂತಿ ಬಳಿದುಕೊಂಡಿದ್ದರು. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ನಾಟಕವಾಡಿದರು ಎಂದು ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರಿನಿಂದ ಐದು ಕೆಜಿ ಅಂಬರ್ ಗ್ರೀಸ್ ಮತ್ತು ಐಷಾರಾಮಿ ಕಾರನ್ನು ವಶಪಡಿಸಲಾಗಿದೆ. ಗುರುವಾಯೂರು ದೇಗುಲ ಠಾಣೆಯ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಗುರುವಾಯೂರು ಎಸಿಪಿ ಕೆ.ಜಿ.ಸುರೇಶ್, ದೇಗುಲ ಠಾಣೆಯ ಎಚ್ ಒಸಿ. ಪ್ರೇಮಾನಂದ ಕೃಷ್ಣನ್, ಎಸ್ಐ ವಿ.ಪಿ.ಅಶ್ರಫ್, ಸೀನಿಯರ್ ಸಿಪಿಒ ಎನ್.ರಜಿತ್, ಶ್ಯಾಡೋ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎನ್.ಜಿ. ಸುವ್ರತಕುಮಾರ್, ಸಿಪಿಒಗಳಾದ ಪಿ.ಎಂ. ರಫಿ, ಎಂ.ಎಸ್. ಲಿಗೇಶ್, ಎಸ್. ಶರತ್, ಸಿಂಪ್ಸನ್ ಮತ್ತು ಪ್ರದೀಪ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್13 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ10 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?