ದಕ್ಷಿಣ ಕನ್ನಡ
Police Failure: ಪುತ್ತೂರು : ಜನಸಂದಣಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಬೀಭತ್ಸ ಕೊಲೆಗಳು – ಪೇಟೆಗೆ ಬರಲು ಜನರಿಗೆ ಭಯ..! ಪೊಲೀಸರು ಎಚ್ಚರಿಕೆ ವಹಿಸಿದ್ರೆ ಈ 5 ಕೊಲೆಗಳನ್ನು ತಡೆಯಬಹುದಿತ್ತು

ಕಳೆದ ಕೆಲ ವರ್ಷಗಳಲ್ಲಿ ಹುಲಿ ಕುಣಿತ ವೇಷ ತಂಡದಲ್ಲಿ ಭಾರೀ ಖ್ಯಾತಿಯನ್ನು ಸಂಪಾದಿಸಿದ ಕಲ್ಲೇಗ ಟೈಗರ್ಸ್ ನ ಅಕ್ಷಯ್ (26) ಹತ್ಯೆಯ ರೀತಿ ಮತ್ತು ಕಾರಣ ಜನಮಾನಸದಲ್ಲಿ ಭೀತಿ ಸೃಷ್ಟಿಸಿದ್ದು, ಪುತ್ತೂರು ನಗರದಾದ್ಯಂತ ಭಯದ ವಾತವಾರಣ ಉಂಟು ಮಾಡಿದೆ. ಕೋಮು ವಿಷಯ ಹೊರತು ಪಡಿಸಿ ಪುತ್ತೂರು ಪೇಟೆ ಅತ್ಯಂತ ಶಾಂತ ಹಾಗೂ ನೆಮ್ಮದಿಯ ಪ್ರದೇಶ ಎಂದೆ ಬಿಂಬಿತವಾಗಿತ್ತು. ಕೋಮು ವಿಚಾರದಲ್ಲೂ ಕಳೆದೆರಡು ದಶಕಗಳಲ್ಲಿ ಹೇಳಿಕೊಳ್ಳುವಂತಹ ಗಲಾಟೆ, ಗಲಭೆ ನಡೆದದ್ದಿಲ್ಲ.
1980ರಿಂದ 90ರ ದಶಕದವರೆಗೆ ಪುತ್ತೂರು ಪೇಟೆಯಲ್ಲಿ ಗೂಂಡಾಗಳ ಕಾರುಬಾರು ಇದ್ದಿದ್ದು ನಿಜ . ಬೊಳ್ವಾರು ಹಾಗೂ ದರ್ಭೆ ಎಂಬ ಎರಡು ಗ್ಯಾಂಗ್ ಗಳು ಪರಸ್ಪರ ಇಲ್ಲಿ ಕಾದಾಟ ನಡೆಸುತ್ತಿದ್ದವು. ಈ ಸಂದರ್ಭ ಮಚ್ಚಿನೆಟ್ಟಿಗೆ , ಗುಂಡಿನ ದಾಳಿಗೆ ಕೆಲ ಹೆಣಗಳು ಇಲ್ಲಿ ಉರುಳಿದ್ದವು. ಬಳಿಕದ ದಿನಗಳಲ್ಲಿ
ಬಾಬ್ರಿ ಮಸೀದಿ ವಿವಾದ ಸೌಮ್ಯ ಭಟ್ ಹಾಗೂ ಅಕ್ಷತ್ ಕೊಲೆ ಪ್ರಕರಣ ಸಂದರ್ಭ ಪುತ್ತೂರು ಉದ್ವೀಗ್ನ ದಿನಗಳನ್ನು ಕಂಡಿತಾದರೂ ಬಳಿಕದ ದಿನಗಳಲ್ಲಿ ಇಲ್ಲಿ ಶಾಂತಿ ನೆಲೆಸಿತ್ತು, ನೆಮ್ಮದಿ ಕಾಣಿಸಿತ್ತು.
ಆದರೇ ಕಳೆದ ಕೆಲ ವರ್ಷಗಳಲ್ಲಿ ಇಲ್ಲಿ ಉತ್ತರ ಭಾರತದ ಮಾದರಿ ಕೊಲೆಗಳು ನಡೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ.

ಕೌಟುಂಬಿಕ ಕಲಹಕ್ಕೂ , ವೈಯುಕ್ತಿಕ ದ್ವೇಷಕ್ಕೂ ಕೊಲೆಗಳು ಎಲ್ಲ ಕಡೆಗಳಲ್ಲಿ ನಡೆಯುವುದು ಸಾಮಾನ್ಯ . ಪ್ರತಿ ಠಾಣೆಯಲ್ಲಿ ಪ್ರತಿ ವರ್ಷವು ಈ ರೀತಿಯ ಕನಿಷ್ಟ ಒಂದಾದರೂ ಪ್ರಕರಣ ದಾಖಲಾಗುತ್ತಿರುತ್ತದೆ. ಆದರೇ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ಸಿನಿಮೀಯ ಶೈಲಿ ಕೊಲೆಗಳು. ಜನನಿಬಿಡ ಪ್ರದೇಶದಲ್ಲಿ ಮಾರಕಾಯುಧಗಳನ್ನು ಬಳಸಿ ಅತ್ಯಂತ ಬರ್ಬರವಾಗಿ, ಬೀಭತ್ಸವಾಗಿ, ಅಟ್ಟಾಡಿಸಿ ಹತ್ಯೆ ಮಾಡಲಾಗುತ್ತಿದೆ.
4 ವರ್ಷದಲ್ಲಿ 5 ಬೀಭತ್ಸ ಹತ್ಯೆ
2019ರಲ್ಲಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಂಪ್ಯ ಠಾಣೆಯ ಕೂಗಳತೆ ದೂರದಲ್ಲಿ ನೂರಾರು ಜನರ ಸಮ್ಮುಖ ಹಿಂದೂ ಸಂಘಟನೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆ ನಡೆಸಲಾಗಿತ್ತು. ಕಿರಣ್, ಚರಣ್ ಹಾಗೂ ಪ್ರಿತೇಶ್ ಎಂಬವರು ಹಲವು ಬಾರಿ ಇರಿದು ಹತ್ಯೆ ಮಾಡಿದ್ದರು. ಈ ಹತ್ಯೆಯ ಕಾರಣವಾಗಿ ಹಲವು ಊಹಾಪೋಹಗಳು ಸೃಷ್ಟಿಯಾಗಿತ್ತಾದರೂ ಪೊಲೀಸರು ನಿಖರ ಕಾರಣ ಇವತ್ತಿನವರೆಗೆ ತಿಳಿಸಿಲ್ಲ. ಈ ಹತ್ಯೆ ನಡೆವ ಕೆಲ ತಿಂಗಳುಗಳ ಹಿಂದೆ ನಡೆದ ಹಲ್ಲೆ ಪ್ರಕರಣವೊಂದರ ಮುಂದುವರಿದ ಭಾಗವಾಗಿ ಕಾರ್ತಿಕ್ ಹತ್ಯೆ ನಡೆದಿತ್ತು ಎಂದು ಹೇಳಲಾಗಿತ್ತಾದರೂ, ಆ ಹಲ್ಲೆ ಪ್ರಕರಣದ ಸಂದರ್ಭ ಕಾರ್ತಿಕ್ ಸ್ಥಳದಲ್ಲೆ ಇರಲಿಲ್ಲ ಎನ್ನುವುದು ವಿಶೇಷ.

2022ರ ಜೂನ್ ತಿಂಗಳಿನಲ್ಲಿ ತನ್ನ ಅಂಗಡಿಯ ಶುಭಾರಂಭದ ಸಿದ್ದತೆಯಲ್ಲಿ ತೊಡಗಿಸಿಕೊಂಡಿದ್ದ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರೈಯನ್ನು ಹಾಡುಹಗಲೇ ಪುತ್ತೂರು ತಾಲೂಕಿನ ಗ್ರಾಮೀಣ ಭಾಗವಾದ ಪೆರ್ಲಂಪಾಡಿಯ ಪೇಟೆಯಲ್ಲಿ ಜನರ ಸಮ್ಮುಖವೇ ಅಟ್ಟಾಡಿಸಿ ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿತ್ತು. ಕಾರ್ತಿಕ್ ಮೇರ್ಲ ಸಂಬಂಧಿ ಕಿಶೋರ್ ಹಾಗೂ ಸಹಚರರು ಕೃತ್ಯ ಎಸಗಿದ್ದರು.

2022ರ ಜುಲೈ ತಿಂಗಳ ಅಂತ್ಯದಲ್ಲಿ ಕೋಳಿ ಅಂಗಡಿಯ ಮಾಲೀಕ ಹಾಗೂ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ನನ್ನು ಬೈಕ್ ನಲ್ಲಿ ಬಂದ ಮೂವರು ಬೆಳ್ಳಾರೆ ಪೇಟೆಯಲ್ಲಿದ್ದ ಆತನ ಅಂಗಡಿಯ ಮುಂಭಾಗವೇ ರಾತ್ರಿ 8 ಗಂಟೆ ಸುಮಾರಿಗೆ ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಈ ವೇಳೆ ಪ್ರವೀಣ್ ಅಂಗಡಿಯ ಕೆಲಸದಾತ ಅಂಗಡಿಯ ಒಳಗಡೆಯೇ ಇದ್ದರು. ಬೆಳ್ಳಾರೆ ಪೇಟೆಯಲ್ಲಿ ಆ ವೇಳೆ ಜನ ಸಂಚಾರವಿತ್ತು.

2023ರ ಅಗಷ್ಟ್ ತಿಂಗಳ ಅಂತ್ಯದಲ್ಲಿ ಪುತ್ತೂರು ಬಸ್ಸು ನಿಲ್ದಾಣದ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ವಿಟ್ಲದ ಯುವತಿ ಗೌರಿಯನ್ನು ಪುತ್ತೂರು ಮಹಿಳಾ ಠಾಣೆಯ ಮುಂಭಾಗ ಪಾಗಲ್ ಪ್ರೇಮಿ ಪದ್ಮರಾಜ್ ಚೂರಿಯಿಂದ ಹಲವು ಬಾರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಹತ್ಯೆ ನಡೆದ ಸಂದರ್ಭವು ಆ ಪ್ರದೇಶದಲ್ಲಿ ಜನ ಸಂಚಾರವಿತ್ತು.

ಕಾಲೇಜ್ ರಸ್ತೆಯಲ್ಲೆ ಹತ್ಯೆ
ಇದೀಗ ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪುತ್ತೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಗೆ ತೆರಳುವ ರಸ್ತೆ ಮಧ್ಯೆ ಅಕ್ಷಯ್ ಕಲ್ಲೇಗ ರನ್ನು ಅವರ ಇಬ್ಬರು ಸ್ನೇಹಿತರ ಸಮ್ಮುಖವೇ ರಾತ್ರಿ 11.30ರ ಸುಮಾರಿಗೆ ಹತ್ಯೆ ಮಾಡಲಾಗಿದೆ. ಪ್ರಖರ ಬೀದಿ ದೀಪದ ಬೆಳಕಿನಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೆ ಅಟ್ಟಾಡಿಸಿ ಹತ್ಯೆ ಮಾಡಲಾಗಿದ್ದು, ಮೃತನ ದೇಹದ ಮೇಲೆ ೫೨ ಗಾಯದ ಗುರುತುಗಳಿದ್ದವು. ಹತ್ಯೆ ನಡೆದ ಪಕ್ಕದಲ್ಲೆ ಹೊಟೇಲ್ ಇದ್ದು ಅಲ್ಲಿ ರಾತ್ರಿ ತಂಗುವ ಕೆಲಸಗಾರರಿದ್ದರು. ಈ ಹತ್ಯೆಯ ಕುರಿತಾಗಿ ಪೊಲೀಸ್ FIRನಲ್ಲಿ ದಾಖಲಾದ ಕಾರಣಗಳು ಅಸ್ಪಷ್ಟವಾಗಿದೆ. ಕೃತ್ಯ ನಡೆದ ಸ್ಥಳ ಪುತ್ತೂರು ನಗರ ಠಾಣೆಯಿಂದ ಕೇವಲ ಒಂದೂವರೆ ಕಿಮೀ ದೂರದಲ್ಲಿದೆ.

ಇಷ್ಟು ಕೊಲೆಗಳ ಸಂದರ್ಭ ಹಂತಕರು ಸಾರ್ವಜನಿಕರು ಹಾಗೂ ಪೊಲೀಸರನ್ನು ಲೆಕ್ಕಿಸದೆ ಯಾವುದೇ ಭಯ ಭಿಡೆ ಇಲ್ಲದೇ ಕೃತ್ಯ ಎಸಗಿರುವುದು ಸ್ಪಷ್ಟ. ಕಾನೂನು ಹಾಗೂ ಪೊಲೀಸರ ಬಗ್ಗೆ ಭಯ ರಹಿತ ವಾತಾವರಣವಿದ್ದಾಗವಷ್ಟೆ ಈ ರೀತಿಯ ಕೊಲೆಗಳು ನಡೆಯಲು ಸಾಧ್ಯ . ತಾಲೂಕಿನಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿರುವುದು, ಪೊಲೀಸ್ ಇಂಟೆಲಿಜೆನ್ಸ್ ನಿದ್ರೆಗೆ ಜಾರಿರುವುದು, ನಗರ ಪ್ರದೇಶದಲ್ಲೂ, ಅದು ಕೂಡ ಅಯಕಟ್ಟಿನ ಪ್ರದೇಶದಲ್ಲಿ ಸಿಸಿಟಿವಿ ಇಲ್ಲದಿರುವುದು ಕಾನೂನು ಭಂಜಕರಿಗೆ ವರದಾನವಾಗಿ ಪರಿಣಮಿಸಿದೆ.
5 ಕೊಲೆಗಳಲ್ಲೂ ಪೊಲೀಸ್ ವೈಫಲ್ಯವಿದೆ
ಕಾರ್ತಿಕ್ ಮೇರ್ಲ ಕೊಲೆಗೆ ಕೆಲ ತಿಂಗಳ ಹಿಂದೆ ಎರಡು ತಂಡದ ಮಧ್ಯೆ ಗಲಾಟೆ ನಡೆದು ಪೊಲೀಸ್ ಠಾಣೆ ಮೆಟ್ಟೀಲೆರಿತ್ತು. ಈ ವೇಳೆ ಪೊಲೀಸರು ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಎರಡು ತಂಡಕ್ಕೂ ಸೂಕ್ತ ಎಚ್ಚರಿಕೆ ನೀಡಿ ಅವರ ಮೇಲೆ ಒಂದು ಕಣ್ಣಿಟ್ಟಿದ್ದರೇ ಮೇರ್ಲ ಹತ್ಯೆ ತಡೆಯಬಹುದಿತ್ತು. ಇನ್ನು ಈ ಪ್ರಕರಣದ ಆರೋಪಿಗಳು ಪೊಲೀಸರ ಗಳಸ್ಯ ಕಂಠಸ್ಯರಾಗಿದ್ದರು.
ಇನ್ನು ಚರಣ್ ಮೇಲೆ ಕೊಲೆಯ ತೂಗುಕತ್ತಿ ಬೀಸುತಿತ್ತು ಮತ್ತು ಆಪಾಯ ಯಾರಿಂದ ಇತ್ತು ಎನ್ನುವುದು ಪೊಲೀಸರಿಗೆ ಹಾಗೂ ಸಾರ್ವಜನಿಕರಿಗೆ ಸ್ಪಟಿಕದಷ್ಟು ನಿಚ್ಚಳವಾಗಿತ್ತು. ಕೊಲೆಗೆ ಕೆಲ ತಿಂಗಳುಗಳ ಹಿಂದೆ ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ನಡೆದ ವಿದ್ಯಮಾನ ಇದಕ್ಕೆ ಸ್ಪಷ್ಟ ಉದಾಹರಣೆ. ಇಷ್ಟಾದರೂ ಪೊಲೀಸರು ನಿಗಾ ವಹಿಸದ್ದು ವಿಪರ್ಯಾಸ
ಪ್ರವೀಣ್ ನೆಟ್ಟಾರ್ ಹತ್ಯೆ ಬೆಳ್ಳಾರೆಯ ಮಸೂದು ಹತ್ಯೆಯ 20 ದಿನಗಳ ಬಳಿಕ ಪ್ರತಿಕಾರದ ರೂಪದಲ್ಲಿ ನಡೆದಿತ್ತು. ಮಸೂದ್ ಹತ್ಯೆಯ ಬಳಿಕ ಸಂಘಟನೆಯೊಂದು ನಿಗಿ ನಿಗಿ ಕೆಂಡದಂತಾಗಿತ್ತು ಹಾಗು ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನೊಬ್ಬನ ಹತ್ಯೆಗೆ ಹಾತೊರೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು. ಹಾಗಾಗಿಯೂ ಬೆಳ್ಳಾರೆಯಲ್ಲೆ ಹತ್ಯೆ ನಡೆಯಲು ಎಡೆ ಮಾಡಿಕೊಟ್ಟದ್ದು ಪೊಲೀಸ್ ವೈಫಲ್ಯವಲ್ಲದೇ ಮತ್ತೇನು ?
ವಿಟ್ಲದ ಯುವತಿ ಗೌರಿಯ ತಾಯಿ ಆಕೆಯ ಕೊಲೆಗಾರ ಪದ್ಮರಾಜ್ ಮಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಹಲವು ಬಾರಿ ವಿಟ್ಲ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪೊಲೀಸರು ಎಚ್ಚೆತ್ತುಕೊಂಡು ಪದ್ಮರಾಜ್ ಗೆ ಬಿಸಿ ಮುಟ್ಟಿಸುತ್ತಿದ್ದರೇ ಗೌರಿ ಬದುಕಿ ಉಳಿಯುತ್ತಿದ್ದಳು.
ಅಕ್ಷಯ್ ಕೊಲೆಯೂ ತಪ್ಪಿಸಬಹುದಿತ್ತು…!
ಕೆಲ ತಿಂಗಳುಗಳ ಹಿಂದೆ ಕಾಂಗ್ರೆಸ್ ಮುಖಂಡ ಪ್ರದೀಪ್ ರೈ ಪಾಂಬಾರು ಎಂಬವರು ಕಲ್ಲೇಗದ ಯುವಕರು ವಾಹನ ಅಪಘಾತದ ವಿಚಾರದ ಗಲಾಟೆ ಎಬ್ಬಿಸಿ ಪರ್ಸು ಹಾಗೂ ಚಿನ್ನದ ಸರವನ್ನು ಎಳೆದುಕೊಂಡಿದ್ದರು ಎಂದು ದೂರು ನೀಡಿದ್ದರು. ಇದೀಗ ಕಲ್ಲೇಗದ ಯುವಕನ ಹತ್ಯೆ ವಾಹನ ಅಪಘಾತ ಹಾಗೂ ಹಣದ ವಿಚಾರವಾಗಿ ನಡೆದಿತ್ತು. ಈ ಎರಡು ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇ ಆದರೇ ಒಬ್ಬ ವ್ಯಕ್ತಿ ಈ ಎರಡು ಪ್ರಕರಣದಲ್ಲಿ ʼಕಾಮನ್ʼ ಆಗಿದ್ದ. ಆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಂತೆ ʼಓರ್ವ ಪೊಲೀಸ್ʼ ರಕ್ಷಣೆಗೆ ನಿಂತಿದ್ದರು. ಈ ಘಟನೆಯ ಬಳಿಕ ಆ ಪೊಲೀಸ್ ವರ್ಗಾವಣೆಗೊಂಡಿದ್ದರು.
ಇನ್ನೂ ಆ ಪ್ರದೇಶದಲ್ಲಿ ಆಗಾಗ ಸಣ್ಣ ಅಪಘಾತಗಳು ನಡೆಯುವುದು ಬಳಿಕ ಹಣಕಾಸಿನ ವಿಚಾರವಾಗಿ ಹಲವು ಬಾರಿ ʼಕಿರಿಕ್ʼ ಆಗಿ ರಾಜಿಯಲ್ಲಿ ಮುಕ್ತಾಯವಾದ ಘಟನೆಗಳು ನಡೆದಿರುವುದು ಈಗ ಒಂದೊಂದಾಗಿ ಹೊರ ಬರುತ್ತಿದೆ. ಪ್ರತಿ ಬಾರಿಯೂ ಈ ವಿಷಯ ಪೊಲೀಸರ ಗಮನಕ್ಕೆ ಬರುತಿತ್ತು ಹಾಗೂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಅಥಾವ ಈ ರೀತಿಯ ಪ್ರಕರಣದ ಪೋಷಕರಾಗಿದ್ದರು ಎಂಬ ಮಾತುಗಳು ನಗರದ ಸಂದಿ ಸಂದಿಯಲ್ಲಿ ಕೇಳಿ ಬರುತ್ತಿದೆ.
ಮಾದಕ ಪದಾರ್ಥ ಮಾರಾಟದ ಅಡ್ಡೆ
ಇನ್ನೂ ಹತ್ಯೆ ನಡೆದ ಕಾಲೇಜು ರಸ್ತೆಯಲ್ಲಿ ರಾತ್ರಿ ಓಡಾಡಲು ಜನರು ಹೆದರುವ ಪರಿಸ್ಥಿತಿಯಿದೆ. ಅಲ್ಲಿ ಕೆಲ ಅಯಕಟ್ಟಿನ ಸ್ಥಳಗಳಲ್ಲಿ ಮಾದಕ ಪದಾರ್ಥ ಮಾರಾಟ ಮಾಡಲಾಗುತ್ತಿದೆ. ಇದನ್ನು ಅಲ್ಲೇ ಸೇವಿಸಿ ನಶೆಯ ಮತ್ತಿನಲ್ಲಿ ಹೋಗಿ ಬರುವವರಿಗೆ ಕಿರಿಕ್ ಮಾಡುತ್ತಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದರೂ ಸ್ಥಳೀಯ ಪೊಲೀಸರು ಈ ಕುರಿತು ನಿಗಾ ವಹಿಸದ್ದು ಯಾಕೇ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರಾತ್ರಿ ವೇಳೆ ಒಂದು ಪೊಲೀಸ್ ಇರಲಿಲ್ಲ ಎನ್ನುವುದು ಆಘಾತಕಾರಿ ವಿಷಯ. ಇನ್ನೂ ಕೊಲೆ ನಡೆದ ಸ್ಥಳದಲ್ಲಿ ಕೆಲ ವರ್ಷಗಳ ಹಿಂದಿನವರೆಗೂ ಸಿಸಿಟಿವಿ ಕಾರ್ಚರಿಸುತಿತ್ತು. ಆದರೇ ಅಕ್ರಮ ದಂಧೆಗಳಿಗೆ ಇದು ಅಡ್ಡಿಯಾಗದಂತೆ ಅದು ಕೆಲಸ ಮಾಡದಂತೆ ನೋಡಿಕೊಳ್ಳಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಪುತ್ತೂರು
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಡಿಸೆಂಬರ್ 8ರಿಂದ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ. ಗ್ರಾಹಕರು ಪ್ರಾಚಿ ಆ್ಯಂಟಿಕ್ ಚಿನ್ನಾಭರಣಗಳ ಖರೀದಿಗೆ ವಿಶೇಷ ರಿಯಾಯಿತಿ ಹಾಗೂ ಅಚ್ಚರಿಯ ಕೊಡುಗೆಗಳನ್ನು ಪಡೆಯುವ ಅವಕಾಶವಿದೆ.
1957 ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆ್ಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.
ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಕ್ಷಿಣ ಕನ್ನಡ
ಧರ್ಮಸ್ಥಳ ಲಕ್ಷದೀಪೋತ್ಸವ : ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ – ಪಾದಯಾತ್ರಿಗಳಿಂದ ಭೀಷ್ಮ ಪ್ರತಿಜ್ಞೆ : ಹೆಗ್ಗಡೆಯವರ ಸಂಸದರ ನಿಧಿಯಿಂದ ಬೀದರ್ ನಲ್ಲಿ ಕ್ಷೀರಕ್ರಾಂತಿ

ಉಜಿರೆ: ಹೃದಯ ಪರಿವರ್ತನೆಯಿಂದ ಅದ್ಭುತ ಪ್ರಗತಿ ಸಾಧ್ಯವಾಗುತ್ತದೆ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಅಭಿನಂದಿಸಿ ಮಾತನಾಡಿದರು.

ನಾವು ಎಲ್ಲರಲ್ಲಿಯೂ ಒಳ್ಳೆಯತನವನ್ನು ಕಾಣಬೇಕು. ದೋಷವನ್ನು ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೆ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕಕಲ್ಯಾಣವಾಗುತ್ತದೆ.
ಎಲ್ಲರಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲಾ ಅವಕಾಶಗಳನ್ನು ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿAತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.

ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಸಂಸದರ ನಿಧಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.
ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ: ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.
ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್‌ವರ್ಮ, ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ.ಎಸ್. ಸತೀಶ್ಚಂದ್ರ, ಎಸ್.ಡಿ.ಎಮ್. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಎಮ್. ಜನಾರ್ದನ ಸಿ.ಒ.ಒ. ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.
ದಕ್ಷಿಣ ಕನ್ನಡ
ಈಶ್ವರಮಂಗಲ ರಸ್ತೆ ದಾಟುತ್ತಿದ್ದ ವ್ಯಕ್ತಿಯ ಮೇಲೆ ಬಸ್ಸು ಹರಿದು ಸಾವು – ಅದೇ ಬಸ್ಸಿನಿಂದ ಇಳಿದಿದ್ದರು..!

ಪುತ್ತೂರು : ಈಶ್ವರಮಂಗಲದ ಗಾಳಿಮುಖದಲ್ಲಿ ಖಾಸಗಿ ಬಸ್ಸಿನಡಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 8ರಂದು ಸಂಭವಿಸಿದೆ. ಮುಳ್ಳೇರಿಯಾದ ಕೋಳಿಕಾಲ ನಿವಾಸಿ, ಕೃಷಿಕ ಕುಂಞಿರಾಮ ಮಣಿಯಾಣಿ ಮೃತಪಟ್ಟವರು.ʼ ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಗಾಳಿಮುಖಕ್ಕೆ ಬಂದಿದ್ದ ಅವರು ಬಸ್ಸಿನಿಂದ ಇಳಿದು ರಸ್ತೆ ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹಿಂಬದಿ ಬಾಗಿಲಿನಿಂದ ಇಳಿದಿದ್ದ ಕುಂಞಿರಾಮ ಮಣಿಯಾಣಿ ಅವರು, ಇನ್ನೊಂದು ಬದಿಗೆ ದಾಟುವಷ್ಟರಲ್ಲಿ ಬಸ್ ಚಲಿಸಿದ್ದು, ಬಸ್ಸಿನ ಮುಂಭಾಗದ ಚಕ್ರ ಕುಂಞಿರಾಮ ಅವರ ಎದೆಯ ಭಾಗದಿಂದ ಹರಿದಿದೆ. ಸಂಪ್ಯ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಚಾಲಕನ ಮೇಲೆ FIR
ಕೇರಳ ನೋಂದಣಿಯ ಖಾಸಗಿ ಬಸ್ಸಿನ ಚಾಲಕ ಸುಜೀತ್ ವಿ ಎಂಬವರು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ ರಸ್ತೆ ದಾಟುತ್ತಿದ್ದ ಕುಂಞಿರಾಮ ಮಣಿಯಾಣಿ ಯವರಿಗೆ ಡಿಕ್ಕಿ ಹೊಡೆದಿದ್ದು , ಆಗ ಅವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು, ಈ ವೇಳೆ ಅವರ ಮೇಲೆ ಬಸ್ ಚಲಿಸಿರುತ್ತದೆ. ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಕುಂಞಿರಾಮ ಮಣಿಯಾಣಿರವರು ಮೃತಪಟ್ಟಿರುತ್ತಾರೆ ಎಂದು ಮೃತರ ಚಿಕ್ಕಪ್ಪನ ಮಗ ಕೃಷ್ಣ ಎ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಕಲಂ : 279,304(A) ರಂತೆ ಪ್ರಕರಣ ದಾಖಲಾಗಿದೆ.
-
ರಾಷ್ಟ್ರೀಯ2 days ago
Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?
-
ಅಪರಾಧ2 days ago
Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?
-
ಸುಳ್ಯ2 days ago
Arecanut Yellow leaf diseases ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದತ್ತ ಮಹತ್ವದ ಹೆಜ್ಜೆ – ಸಂಪಾಜೆಯಲ್ಲಿ ಇಂದೋರ್ ಕಂಪೆನಿಯ ಔಷಧಿ ಪ್ರಯೋಗಕ್ಕೆ ಆರಂಭಿಕ ಗೆಲುವು – ರೋಗವಿದ್ದ ಪ್ರದೇಶದಲ್ಲಿ ನಳನಳಿಸುತ್ತಿದೆ ಫಸಲು
-
ಮಂಗಳೂರು1 day ago
ಕುಡುಪು ಷಷ್ಟಿ ಮಹೋತ್ಸವ ಜಾತ್ರೆ – ಸಂತೆ ವ್ಯಾಪಾರದಲ್ಲಿ ಹಿಂದೂಯೇತರರಿಗಿಲ್ಲ ಅವಕಾಶ: ವ್ಯಾಪಾರಿಗಳ ಸಮನ್ವಯ ಸಮಿತಿ ಆಕ್ರೋಶ – ದೇವಸ್ಥಾನದ EOರಿಂದ ತಿರುಗೇಟು – ಕರಾವಳಿಯಲ್ಲಿ ನಿಲ್ಲೋದಿಲ್ವಾ ಧರ್ಮ ದಂಗಲ್ ?
-
ರಾಷ್ಟ್ರೀಯ2 days ago
Pancard latest update : ಪ್ಯಾನ್ ಕಾರ್ಡ್ ಕುರಿತು ಮಹತ್ವದ ಮಾಹಿತಿ – ಈ ತಪ್ಪು ಮಾಡಿದರೆ 10,000 ರೂ ದಂಡ ಗ್ಯಾರಂಟಿ
-
ಮಂಗಳೂರು24 hours ago
Interfaith Marriage ಮಂಗಳೂರು : ಭಿನ್ನಕೋಮಿನ ಜೋಡಿ ವಿವಾಹ?
-
ಬಿಗ್ ನ್ಯೂಸ್1 day ago
Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ ಮದುವೆ ನಿರಾಕರಿಸಿದ ವಧು
-
ಸಿನೆಮಾ2 days ago
Pooja gandhi : ಕುವೆಂಪು ಪರಿಕಲ್ಪನೆಯ ’ಮಂತ್ರ ಮಾಂಗಲ್ಯ’ ಪದ್ದತಿಯಲ್ಲಿ ವಿವಾಹವಾದ ಪೂಜಾ ಗಾಂದಿ ದಂಪತಿಯಿಂದ ಕವಿ ಶೈಲ ಭೇಟಿ – ಹುಟ್ಟಿದ್ದು ಪಂಜಾಬಿನಲ್ಲಾದರೂ ಕನ್ನಡದ ಬಗೆಗಿನ ನಟಿಯ ಪ್ರೀತಿಗೆ ವ್ಯಾಪಕ ಮೆಚ್ಚುಗೆ