Connect with us

ಪುತ್ತೂರು

ಅಂತರಾಷ್ಟ್ರೀಯ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ಚಾಂಪಿಯನ್ಸ್ ಆದ ಪುತ್ತೂರಿನ ವಿದ್ಯಾಮಾತದ ವಿದ್ಯಾರ್ಥಿಗಳು – ಕಿರುತೆರೆ ಕಲಾವಿದ ದಂಪತಿ ಸುರೇಶ್ ರೈ – ಭವ್ಯ ಪುತ್ರ ಸುಪ್ರಭಂ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡನೇ ರ್‍ಯಾಂಕ್

Ad Widget

Ad Widget

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ 5 ವರ್ಷದಿಂದ 40 ವರ್ಷದವರೆಗಿನವರಿಗೆ ವಿವಿಧ ಹಂತಗಳಲ್ಲಿ ನಾನಾ ನೇಮಕಾತಿಗಳಿಗೆ ಹಾಗೂ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು, ಉದ್ಯೋಗ ಕೌಶಲ್ಯತೆ, ವ್ಯಕ್ತಿತ್ವ ವಿಕಾಸನ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ತರಬೇತಿಗೊಳಿಸಿ ಇದರಲ್ಲಿ ಯಶಸ್ಸು ಕಂಡಿದೆ.

Ad Widget

Ad Widget

Ad Widget

Ad Widget

ಕಳೆದ ಎರಡುವರೆ ವರ್ಷಗಳಿಂದ ವಿದ್ಯಾಮಾತಾ ಅಕಾಡೆಮಿಯು ಈ ನಿಟ್ಟಿನಲ್ಲಿ ಸಂಪೂರ್ಣ ಯಶಸ್ಸನ್ನು ಗಳಿಸಿದೆ ಅಂತಾನೆ ಹೇಳಬಹುದು.
ಐದು ವರ್ಷದಿಂದ ಹದಿನೈದು ವರ್ಷದವರೆಗಿನ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು, ಗಣಿತ ಜ್ಞಾನವನ್ನು ,ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವ ಅಬಕಾಸ್ /ವೇದಗಣಿತ/ ಮಾನಸಿಕ ಸಾಮರ್ಥ್ಯ ತರಗತಿಗಳನ್ನು ಪ್ರಾರಂಭಿಸಲಾಗಿದ್ದು, ಕಳೆದ ವರುಷ ತರಬೇತಿ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ “ಚಾಂಪಿಯನ್ಸ್” ಆಗಿ ಹೊರಹೊಮ್ಮಿದ್ದಾರೆ.

Ad Widget

Ad Widget

Ad Widget

ಈ ವರ್ಷ ತರಬೇತಿಗೊಂಡ ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಅಬಾಕಾಸ್ ಒಲಂಪಿಯಡ್ 2023 ಸ್ಪರ್ಧೆಯಲ್ಲಿ ವಿದ್ಯಾಮಾತಾ ಅಕಾಡೆಮಿಯು ಪಾಲ್ಗೊಳ್ಳಲು ಅವಕಾಶ ಮಾಡಿ ಕೊಟ್ಟಿದ್ದು, ಇಲ್ಲಿನ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ “ಚಾಂಪಿಯನ್” ಆಗಿ ವಿದ್ಯಾರ್ಥಿಗಳು ಹೊರ ಹೊಮ್ಮಿದ್ದಾರೆ.

Ad Widget

ಒಟ್ಟು 16 ವಿದ್ಯಾರ್ಥಿಗಳು ಇಂಟರ್ ನ್ಯಾಷನಲ್ ಅಬಾಕಸ್ ಒಲಂಪಿಯಡ್ ನಲ್ಲಿ ಭಾಗವಹಿಸಿದ್ದು 16 ವಿದ್ಯಾರ್ಥಿಗಳು ಕೂಡಾ ಉತ್ತಮ ಸಾಧನೆಗೈದಿದ್ದಾರೆ.

Ad Widget

Ad Widget

ಖ್ಯಾತ ಚಲನಚಿತ್ರ ಕಿರುತರೆ ಕಲಾವಿದ ದಂಪತಿಗಳಾದ ಸುರೇಶ್ ರೈ ಮತ್ತು ಶ್ರೀಮತಿ ಭವ್ಯಶ್ರೀ ರೈ ರವರ ಪುತ್ರನಾದ ಪ್ರಸ್ತುತ ಡಫೋಡಿಲ್ಸ್ ಫೌಂಡೇಶನ್ ಫಾರ್ ಲರ್ನಿಂಗ್ ಸಂಜಯ್ ನಗರ ಬೆಂಗಳೂರುನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಪ್ರಭಂ ರೈ ಅಂತರಾಷ್ಟ್ರೀಯ ಮಟ್ಟದಲ್ಲಿ ಎರಡನೇ ರ್‍ಯಾಂಕನ್ನು ಪಡೆದಿದ್ದಾನೆ.

ಪ್ರಥಮ ರಾಂಕ್ ಅನ್ನು ಕೆನಡಾ ದೇಶದ ನಿವಿಯಾ ಒಂಟಾರಿಯೋ ಎಂಬ ವಿದ್ಯಾರ್ಥಿನಿ ಪಡೆದುಕೊಂಡಿರುತ್ತಾರೆ .ಈ ಮೂಲಕ ಸುಪ್ರಭಂ ರೈ ಕೇವಲ ಎರಡು ಸೆಕೆಂಡುಗಳ ಅಂತರದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು ಇದು ಭಾರತಕ್ಕೆ ಕೀರ್ತಿ ತರುವ ವಿಷಯವಾಗಿದೆ.

ಅತ್ಯುತ್ತಮ ಸಾಧಕರ ಪಟ್ಟಿಯಲ್ಲಿ ಮಂಗಳೂರು ಕೊಲ್ಯದ ಸದ್ಯ ಶಾರ್ಜಾದಲ್ಲಿ ಉದ್ಯೋಗದಲ್ಲಿರುವ ಸತೀಶ್ ಪೂಜಾರಿ ಮತ್ತು ಸಂಕೊಳಿಗೆ ಕೊಲ್ಯ ಇಲ್ಲಿ ಭಗವತಿ ವಿದ್ಯಾಲಯದಲ್ಲಿ ಶಿಕ್ಷಕಿಯಾಗಿರುವ ವಿನುತ ಸತೀಶ್ ದಂಪತಿಗಳ ಪುತ್ರಿ ಸದ್ಯ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಬೀರಿ ಕೋಟೆಕಾರ್ ಇಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಅವಿಷ್ಕಾ ಸುವರ್ಣ ಕೆ ರವರು ಪಡೆದುಕೊಂಡಿದ್ದಾರೆ.

100% ರಿಸಲ್ಟ್: ಪುತ್ತೂರಿನ ತೆಂಕಿಲದ ಹರೀಶ್ ಮತ್ತು ಶ್ರೀಮತಿ ರಮ್ಯಶ್ರೀ ದಂಪತಿಗಳ ಪುತ್ರ ಸುದಾನ ವಸತಿಯುತ ಶಾಲೆ ಪುತ್ತೂರು ಇಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಅನಿಶ್ ಎಂ ಎಚ್, ಕೈಕಾರದ ಬೋಟ್ಯಾಡಿಗುತ್ತು ಉದಯ ರೈ ಮತ್ತು ಶ್ರೀಮತಿ ಸುಚೇತಾ ಯು ರೈ ದಂಪತಿಗಳ ಪುತ್ರಿ ಸಾಂದೀಪನಿ ಶಿಕ್ಷಣ ಸಂಸ್ಥೆ ನರಿಮೊಗರು ಇಲ್ಲಿ ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಧೃತಿ ಯು ರೈ, ಬೀರಿ ಮಾಡೂರಿನ ಸತೀಶ್ ಪಿ ಮತ್ತು ಶ್ರೀಮತಿ ದಿವ್ಯ ಇವರ ಪುತ್ರನಾದ ಪ್ರಸ್ತುತ ಭಗವತಿ ಆಂಗ್ಲ ಮಾಧ್ಯಮ ಶಾಲೆ ಸಂಕೊಳಿಗೆ ಇಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಜಿಶಾನ್ ಎಸ್, ಪುತ್ತೂರಿನಲ್ಲಿ ಎಸ್.ವಿ ಫ್ಯಾಷನ್ ವಸ್ತ್ರ ಮಲ್ಲಿಗೆಯ ಮಾಲಕರಾದ ವೀರಪ್ಪ ಮತ್ತು ಶ್ರೀಮತಿ ಶ್ವೇತಾ ಹೆಚ್ ಸಿ ಇವರ ಪುತ್ರ ಪ್ರಸ್ತುತ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿ ವೈಷ್ಣವ್, ಚಾಕೋಟೆ ಮನೆ ಕಾವು ಮಾಡ್ನೂರು ಗ್ರಾಮದ ಶ್ರೀ ಗಿರಿಧರ ಗೌಡ ಮತ್ತು ಶ್ರೀಮತಿ ನಳಿನಾಕ್ಷಿ ದಂಪತಿಗಳ ಪುತ್ರನಾದ ಪ್ರಸ್ತುತ ಸಾಂದೀಪನಿ ವಿದ್ಯಾಲಯ ನರಿಮೊಗರು ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾಂತ್ ಸಿ .ಜಿ, ಮಂಗಳೂರಿನ ಬೋಂದೆಲ್ ಪ್ರಕಾಶ್ ಬಿ ಮತ್ತು ಶ್ರೀಮತಿ ಅಶ್ವಿನಿ ದಂಪತಿಗಳ ಪುತ್ರನಾದ ಪ್ರಸ್ತುತ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ಮಂಗಳೂರು ಇಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಶಸ್ತ್ ಪ್ರಕಾಶ, ಪುತ್ತೂರು ತಾಲೂಕಿನ ಕುಂಜೂರು ಪಂಜದ ಶ್ರೀನಿವಾಸಮಯ್ಯ ಮತ್ತು ಶ್ರೀಮತಿ ಜಯಲಕ್ಷ್ಮಿ ಮಯ್ಯ ದಂಪತಿಗಳ ಪುತ್ರಿ ಪ್ರಸ್ತುತ ಅಂಬಿಕಾ ವಿದ್ಯಾಲಯ ಪುತ್ತೂರು ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಇಂಚರ ಮಯ್ಯ ಈ ವಿದ್ಯಾರ್ಥಿಗಳು 100 % ನಲ್ಲಿ ಪಾಸಾದ ವಿದ್ಯಾರ್ಥಿಗಳಾಗಿದ್ದಾರೆ .

ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಕಾಸರಗೋಡಿನ ಬೇಲದ ಪ್ರದೀಪ್ ಶೆಟ್ಟಿ ಮತ್ತು ಶ್ರೀಮತಿ ಅಶ್ವಿನಿ ಪ್ರದೀಪ್ ಶೆಟ್ಟಿ ದಂಪತಿಗಳ ಪುತ್ರಿ ಪ್ರಸ್ತುತ ಅನುದಾನಿತ ಜೂನಿಯರ್ ಶಾಲೆ ಪುತ್ತಿಗೆ ಇಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಾಪ್ತಿ ಶೆಟ್ಟಿ, ತಮಿಳುನಾಡಿನ ಚೆನ್ನೈ ಕಾಂಚಿಪುರಂ ದೀಪಕ್ ಶೆಟ್ಟಿ ಮತ್ತು ಶ್ರೀಮತಿ ದೀಪ್ತಿ ಶೆಟ್ಟಿ ದಂಪತಿಗಳ ಪುತ್ರಿ ಪ್ರಸ್ತುತ ಶ್ರೀ ಚೈತನ್ಯ ಟೆಕ್ನೋ ಚೆನ್ನೈನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನ್ವಿತಾ ದೀಪಕ್ ಶೆಟ್ಟಿ ,ಮಂಗಳೂರಿನ ತೊಕ್ಕಟ್ ನಿವಾಸಿ ಉಮೇಶ್ ಮತ್ತು ಶ್ರೀಮತಿ ಅಮಿತಾ ದಂಪತಿಗಳ ಪುತ್ರನಾದ ಪ್ರಸುತ್ತ ಆಸ್ಸಿಸಿ ಸೆಂಟ್ರಲ್ ಸ್ಕೂಲ್ ದೇರಳಕಟ್ಟೆ ಮಂಗಳೂರು ಇಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸೋಹನ್ ಯು .ಕೆ , ಪ್ರಸ್ತುತ ಲಂಡನ್ ನಲ್ಲಿ ನೆಲೆಸಿರುವ ಸಂದೀಪ್ ಶೆಟ್ಟಿ ಮತ್ತು ಶ್ರೀಮತಿ ಶ್ವೇತಾ ಸಂದೀಪ್ ಶೆಟ್ಟಿ ದಂಪತಿಗಳ ಪುತ್ರನಾದ ಮಾರ್ಶಗೇಟ್ ಪ್ರೈಮರಿ ಸ್ಕೂಲ್ ಲಂಡನ್ ಇಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಥರ್ವ್ ಶೆಟ್ಟಿ . ಪುತ್ತೂರಿನ ಬನ್ನೂರಿನ ವಸಂತಗೌಡ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಗಳ ಪುತ್ರಿ ಪ್ರಸ್ತುತ ಅಂಬಿಕ ವಿದ್ಯಾಲಯ ಪುತ್ತೂರು ಇಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಯಾ ವಿ.ಎಂ ಪ್ರಥಮ ಶ್ರೇಣಿಯಲ್ಲಿ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇರ್ಲ ಶಿವ ಶ್ರೀ ರಂಜನ್ ರೈ ಮತ್ತು ಶ್ರೀಮತಿ ಪ್ರತಿಭಾ ರೈ ಹೆಚ್ ದಂಪತಿಗಳ ಪುತ್ರ ಪ್ರಸ್ತುತ ವಿವೇಕಾನಂದ ಆಂಗ್ಲ ಮಾಧ್ಯಮದ ಶಾಲೆ ಪುತ್ತೂರು ಇಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅನುದೀಪ್ ರೈ.ಡಿ, ಪುತ್ತೂರಿನ ಜಿಡೆಕಲ್ಲು ನೆಲ್ಸನ್ ರೋಶನ್ ಡಿಸಿಲ್ವ ಮತ್ತು ಶ್ರೀಮತಿ ಸೋನಿಯಾ ಮೆನೆಝೆಸ್ ದಂಪತಿಗಳ ಪುತ್ರಿ ಪ್ರಸ್ತುತ ವಿವೇಕಾನಂದ ಸೆಂಟ್ರಲ್ ಸ್ಕೂಲ್ ಪುತ್ತೂರು ಇಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವೀನಲ್ ಡಿಸಿಲ್ವ ಇವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇದರ ಪ್ರಶಸ್ತಿ ಪ್ರದಾನ ಸಮಾರಂಭವು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ನಡೆಯಿತು. ಈ ಸಮಾರಂಭವನ್ನು ಪುತ್ತೂರು ತಾಲೂಕು ವರ್ತಕರ ಸಂಘದ ಅಧ್ಯಕ್ಷರಾದ ವಾಮನ ಪೈರವರು ಉದ್ಘಾಟಿಸಿ, ವಿದ್ಯಾಮಾತಾ ಅಕಾಡೆಮಿಯ ಸಾಧನೆಗೆ ಅಭಿನಂದಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ರಾಮಕುಂಜೇಶ್ವರ ಹೈಸ್ಕೂಲ್ ನ ಮುಖ್ಯ ಗುರುಗಳಾದ ಸತೀಶ್ ಆರ್ ಭಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ ಹೇಮನಾಥ ಶೆಟ್ಟಿ, ನಗರಸಭಾ ಸದಸ್ಯೆ ಶಶಿಕಲಾ ಸಿ.ಎಸ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇಂಟರ್ನ್ಯಾಷನಲ್ ಅಬಾಕಸ್ ಸೆಕೆಂಡ್ ರ್ಯಾಂಕ್ ವಿನ್ನರ್ ಸುಪ್ರಭಮ್ ರೈ ರವರ ಪೋಷಕರಾದ ಖ್ಯಾತ ಚಲನಚಿತ್ರ ತಾರಾ ದಂಪತಿಗಳಾದ ಶ್ರೀ ಸುರೇಶ್ ರೈ, ಶ್ರೀಮತಿ ಭವ್ಯಶ್ರೀ ರೈ ರವರು ಮಾಧ್ಯಮದೊಂದಿಗೆ ಸಂತಸವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಮಾತನಾಡಿದರು. ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಸಾಧನೆ ತೋರಿದ ವಿದ್ಯಾರ್ಥಿಗಳು, ತರಬೇತುದಾರರನ್ನು ಗೌರವಿಸಲಾಯಿತು, ವಿದ್ಯಾಮಾತಾ ಅಕಾಡೆಮಿಯ ಸಂಚಾಲಕಿ, ಅಬಾಕಸ್ ಮತ್ತು ವೇದಗಣಿತ ತರಬೇತುದಾರೆ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ರವರು ಅಭಿನಂದಿಸಿದರು.

Continue Reading
Click to comment

Leave a Reply

ಅಪರಾಧ

ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

Ad Widget

Ad Widget

ಪುತ್ತೂರು: ಕೆದಿಲದಲ್ಲಿ ನವೆಂಬರ್ 22 ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ 4 ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು , ಇಂದು(ಮಂಗಳವಾರ) ಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಂಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Ad Widget

Ad Widget

Ad Widget

Ad Widget

ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ ಸಂಖ್ಯೆ 112 ಮತ್ತು 113ರಂತೆ ಪ್ರಕರಣ ದಾಖಲಾಗಿತ್ತು.

Ad Widget

Ad Widget

Ad Widget

ಸಿಕ್ಕಿಬಿದ್ದದ್ದು ಹೀಗೆ

Ad Widget

ಈ ಪೈಕಿ ಆರೋಪಿಯು ಕಳವು ಗೈದ ದ್ವಿಚಕ್ರವಾಹನ ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ. ಅದನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಅಬೂಬ್ಬಕರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಉಂಟಾಗಿದೆ. ಅವರು ಆತನ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

Ad Widget

Ad Widget

ಈತ ಅಲ್ಲಿಂದ ತಾನು ಬೈಕ್ ಅಡಗಿಸಿಟ್ಟಿದ್ದ ಗುಡ್ಡಕ್ಕೆ ತೆರಳಿದ್ದು ಈ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ. ಈವೇಳೆ ಆತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಒಂದೇ ದಿನ ಎರಡು ಕಳ್ಳತನ

ರಮ್ಲ ಕುಂಞಿ ಬೆಂಗಳೂರು ಕಂಬಳಕ್ಕೆ ವ್ಯಾಪಾರಕ್ಕೆಂದು ನ.22ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಕೆದಿಲ ಮಿತ್ತಪಡ್ಪು ನಿವಾಸಿ ಹಮೀದ್ ನ.23 ರಂದು ಬೆಳಗ್ಗೆ ಹೋಗಿ ನೋಡುವ ಸಂದರ್ಭದಲ್ಲಿ ಬೀಗ ಮುರಿದಿದ್ದು ಪತ್ತೆಯಾಗಿತ್ತು, ಕಪಾಟಿನಲ್ಲಿದ್ದ ಸುಮಾರು ೨ಲಕ್ಷ ಕಳವಾಗಿತ್ತು. ಇದರ ಜತೆಗೆ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರಿಗೆ ಸೇರಿದ ದ್ವಿಚಕ್ರವಾಹನ ಮನೆಯ ಅಂಗಳದಿಂದ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

ಇತ್ತೆ ಬರ್ಪೆ ಹೆಸರು ಬಂದದ್ದು ಹೇಗೆ :

ಟ್ಲದಲ್ಲಿ ಅಟೋ ರಿಕ್ಷಾ ಹೊಂದಿದ್ದ ಅಬೂಬಕ್ಕರ್ ರಿಕ್ಷಾ ಹಿಂಭಾಗದಲ್ಲಿ ಇತ್ತೆ ಬರ್ಪೆ ಎಂದು ಬರೆದಿಕೊಂಡಿದ್ದರು. ಇದರಿಂದ ಆ ಹೆಸರಿನಲ್ಲೇ ಜನರಿಗೆ ಚಿರಪರಿಚಿತರಾಗಿದ್ದರು. ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿತ್ತು.

Continue Reading

ಶಿಕ್ಷಣ

Philomina Pu College: ಫಿಲೋಮಿನಾ ಪ. ಪೂ ಕಾಲೇಜಿನ ವಿಂಧ್ಯಾಶ್ರೀ ರೈ ರಾಜ್ಯ ಮಟ್ಟಕ್ಕೆ ಆಯ್ಕೆ

Ad Widget

Ad Widget


ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಕೊಮ್ಮೇರಹಳ್ಳಿ, ಮಂಡ್ಯ ಇಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾಶ್ರೀ ರೈ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget


ಇವರು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಇವರು ಶ್ರೀ ಮದ್ ಭಗವದ್ಗೀತಾ ಜಯಂತಿ ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget

Ad Widget

Ad Widget


ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಹಾಗೂ ದೇಶಭಕ್ತಿಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget


ಇವರು ಕುರಿಯ ನಿವಾಸಿಯಾದ ಉಮೇಶ್ ರೈ ಮತ್ತು ಶೋಭಾವತಿ. ಯು.ರೈ ದಂಪತಿಗಳ ಪುತ್ರಿ . ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಯನ್ನೂ ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನ ರಾವ್, ರಶ್ಮಿ ಪಿ ಎಸ್, ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.

Ad Widget

Ad Widget
Continue Reading

ದಕ್ಷಿಣ ಕನ್ನಡ

ಪುತ್ತೂರು : ಕೊಳೆತ ಸ್ಥಿತಿಯಲ್ಲಿ ಮದ್ಯವಯಸ್ಕನ  ಮೃತದೇಹ ಮನೆಯೊಳಗಡೆ ಪತ್ತೆ

Ad Widget

Ad Widget

ಪುತ್ತೂರು :  ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ಮೇರ್ಲ ಎಂಬಲ್ಲಿನ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ  ಭಾನುವಾರ  ನ 3 ರಂದು ಪತ್ತೆಯಾಗಿದೆ.

Ad Widget

Ad Widget

Ad Widget

Ad Widget

ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಪ್ರಕಾಶ್ ಶೆಟ್ಟಿ(46) ಮೃತ ವ್ಯಕ್ತಿ. ಅವರು  ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ
ಮಾಡಿಕೊಂಡಿರುವ  ಶಂಕೆ ವ್ಯಕ್ತವಾಗಿದೆ.

Ad Widget

Ad Widget

Ad Widget

ಪ್ರಕಾಶ್ ಅವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಮನೆ ಮಂದಿ ಬೇರೆಡೆಗೆ ತೆರಳಿದ್ದ ಸಂದರ್ಭದಲ್ಲಿ ಅವರು ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Ad Widget

ಮನೆಮಂದಿ ಮರಳಿ ಮನೆಗೆ ಬಂದ ವೇಳೆ ಈ ಘಟನೆ ಅವರ ಅರಿವಿಗೆ ಬಂದಿದೆ. ಎರಡು ದಿನಗಳ ಹಿಂದೆಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಲಾಗಿದೆ.

Ad Widget

Ad Widget
Continue Reading

Trending

error: Content is protected !!