Connect with us

ವೈರಲ್‌ ನ್ಯೂಸ್‌

XL 750 | ಬರೋಬ್ಬರಿ 11 ಲಕ್ಷ ಬೆಲೆಬಾಳುವ ಹೋಂಡಾ ‘XL 750 ಟ್ರಾನ್ಸಾಲ್ಪ್’ ಬಿಡುಗಡೆ – ಇಲ್ಲಿದೆ ಈ ಬೈಕ್ ನ ವಿಶೇಷತೆ

Ad Widget

Ad Widget

ನವದೆಹಲಿ: ಹೋಂಡಾ ಮೋಟಾರ್‌ಸೈಕಲ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ತನ್ನ ಹೊಸ ಮೋಟಾರ್‌ಬೈಕ್‌ “XL750 ಟಾನ್ಸಾಲ್ಪ್’ ಅನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Ad Widget

Ad Widget

Ad Widget

Ad Widget

ಹಳೆಯ ತಲೆಮಾರಿನ ಗುಣಮಟ್ಟ ಮತ್ತು ಪ್ರಾತಿನಿಧಿಕ ವಿನ್ಯಾಸದಲ್ಲಿ “XL750 ಟ್ರಾನ್ಸಾಲ್ಪ್” ರಾರಾಜಿಸುತ್ತಿದ್ದು, ವಾಹನದಟ್ಟಣೆಯಲ್ಲಿ ಮಾತ್ರವಲ್ಲದೆ ದೂರದ ಪ್ರವಾಸಕ್ಕೂ ಬಳಕೆ ಸ್ನೇಹಿಯಾಗಿದೆ. ಜಪಾನ್‌ನಲ್ಲಿ ನಿರ್ಮಿತವಾಗಿ (ಸಿಬಿಯು) ಸಿದ್ಧ ಸ್ಥಿತಿಯಲ್ಲಿ ಬಂದಿದ್ದು, ದೇಶದಲ್ಲಿ ಪ್ರೀಮಿಯಂ ಪ್ರತ್ಯೇಕವಾಗಿ ಮಾರಾಟವಾಗಲಿದೆ. ಇದರ ಫಸ್ಟ್ ಎಡಿಷನ್ ಬೆಲೆ 10,99,990 ರೂಪಾಯಿ ಮಾತ್ರ.

Ad Widget

Ad Widget

Ad Widget

ಹೋಂಡಾ ಮೋಟಾರ್‌ ಸೈಕಲ್ ಸ್ಕೂಟರ್ ಇಂಡಿಯಾ ಸೈಕಲ್ ಅಧ್ಯಕ್ಷ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟ್ಸುಟ್ಸುಮ್ ಒಟಾನಿ ಮಾತನಾಡಿ, ಸಾಹಸಮಯ ಮೋಟಾರ್ ಸೈಕಲ್ ವರ್ಗವು ಪ್ರವರ್ಧಮಾನಕ್ಕೆ ಬರುತ್ತಿದ್ದು, ಅವರಿಗೆ ಹಿಂದೆಂದಿಗಿಂತಲೂ ಆರಾಮದಾಯಕವಾಗಿ ಸವಾರಿ ಆನುಭವ ನೀಡಲಿದೆ. ಈ ಬೈಕ್ ಖಂಡಿತವಾಗಿಯೂ ಭಾರತದಲ್ಲಿನ ಸಾಹಸಿಗರನ್ನೂ ಪ್ರಚೋದಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Ad Widget

ಬಣ್ಣಗಳು, ಬೆಲೆ ಮತ್ತು ಲಭ್ಯತೆ: ಸಾಹಸಮಯ ವ್ಯಕ್ತಿತ್ವದವರಿಗೆ ಪೂರಕವಾದ XL 750 ಟ್ರಾನ್ಸಾಲ್ಪ್ ಬೈಕ್ ರಾಸ್ ವೈಟ್ ಮತ್ತು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ.

Ad Widget

Ad Widget

ಹರಿಯಾಣದ ಗುರುಗ್ರಾಮ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಕೋಲ್ಕತ್ತದಲ್ಲಿರುವ ಎಚ್‌ಎಂಎಸ್‌ಐನ ವಿಶೇಷ ಬಿಗ್‌ವಿಂಗ್‌’ ಟಾಪ್‌ಲೈನ್‌ ಡೀಲರ್‌ಪ್‌ಗಳಲ್ಲಿ ಮೊದಲ 100 ಮೋಟಾರ್ ಗ್ರಾಹಕರಿಗೆ ಬುಕಿಂಗ್‌ಗಳು ಈಗ ತೆರೆದಿವೆ. ವಾಹನಗಳ ವಿತರಣೆ ನವೆಂಬರ್‌ನಿಂದ ಆರಂಭವಾಗಲಿದೆ.

ವೈರಲ್‌ ನ್ಯೂಸ್‌

Arjuna Elephant | ಅರ್ಜುನನಿಗೆ ತಪ್ಪಾಗಿ ಗುಂಡೇಟು ಬಿದ್ದದ್ದಲ್ಲ ಕಾದಾಡುವಾಗ ಚೂಪಾದ ಮರದ ತುಂಡು ಚುಚ್ಚಿ ಗಾಯವಾಗಿದ್ದು : ಅರಣ್ಯ ಇಲಾಖೆ ಸ್ಪಷ್ಟನೆ

Ad Widget

Ad Widget

ಹಾಸನ: ವಿಶೇಷ ಕಾರ್ಯಾಚರಣೆ ವೇಳೆ ಭೀಕರ ಕಾಳಗದಲ್ಲಿ ದಸರಾ ಹಬ್ಬ ಖ್ಯಾತಿಯ ಅರ್ಜುನ ಆನೆ ಮೃತಪಟ್ಟಿದ್ದು (Arjuna Elephant) ಇಡೀ ರಾಜ್ಯವೇ ಮರುಕಪಟ್ಟಿದೆ.

Ad Widget

Ad Widget

Ad Widget

Ad Widget

ಅರ್ಜುನ ಆನೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ತಪ್ಪಾದ ಗುಂಡೇಟಿಗೆ ಬಲಿಯಾಗಿದೆ ಎಂಬ ಆರೋಪ ಎಲ್ಲೆಡೆ ಕೇಳಿಬಂದಿತ್ತು. ಆದರೆ, ಅರಣ್ಯ ಇಲಾಖೆಯು ಈ ಆರೋಪವನ್ನು ಅಲ್ಲಗಳೆದಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಒಂಟಿ ಕಾಡಾನೆ ಸೆರೆ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದ ನಾನು ಅದಕ್ಕೆ ರೇಡಿಯೊ ಕಾಲರ್‌ಗಳನ್ನು ಸರಿಪಡಿಸುತ್ತಿದ್ದ ವೇಳೆ ಅರ್ಜುನನ ಬಲಭಾಗ ದೊಡ್ಡ ಗಾಯವಾಗಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದುದನ್ನು ಗಮನಿಸಿದ್ದೆ ಎಂದು ಹೇಳಿದ್ದಾರೆ.

Ad Widget

Ad Widget

Ad Widget

ಕಾಡಾನೆಯೊಂದಿಗೆ ಕಾದಾಡುವಾಗ ಚೂಪಾದ ಮರದ ತುಂಡನ್ನು ತುಳಿದು ಆನೆ ಗಾಯಗೊಂಡಿದೆ. ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದರೂ ಅದು ತೀವ್ರವಾಗಿ ಹೋರಾಡುತ್ತಿತ್ತು. ಕಾರ್ಯಾಚರಣೆಯ ಸಮಯದಲ್ಲಿ ತಪ್ಪಾಗಿ ಗುಂಡೇಟು ಬಿದ್ದು ಅರ್ಜುನ ಆನೆ ಗಾಯಗೊಂಡು ಮೃತಪಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಿದರು.

Ad Widget

ಕಾರ್ಯಾಚರಣೆ ವೇಳೆ ಅರಣ್ಯ ಅಧಿಕಾರಿಯೊಬ್ಬರು ದೂರದಲ್ಲಿ ನಿಂತು, ಕಾಡಾನೆಯನ್ನು ಭಯಪಡಿಸಲು ಗಾಳಿಯಲ್ಲಿ ಗುಂಡು ಹಾರಿಸಿದರು, ಆಗ ಅರ್ಜುನ ಆನೆ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿತು ಎನ್ನುತ್ತಾರೆ.

Ad Widget

Ad Widget

ಇಂತಹ ಕಾರ್ಯಾಚರಣೆಯ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಡಬಲ್ ಬ್ಯಾರಲ್ ಗನ್ ನ್ನು ಮಾತ್ರ ಕೊಂಡೊಯ್ಯುತ್ತಾರೆ. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅರ್ಜುನನ ದೇಹದ ಯಾವುದೇ ಭಾಗದಲ್ಲಿ ಮದ್ದುಗುಂಡಿನ ಗಾಯಗಳು ವೈದ್ಯರಿಗೆ ಕಂಡುಬಂದಿಲ್ಲ ಎಂದು ಹೇಳಿದರು.

ಕ್ರಮಕ್ಕೆ ಆಗ್ರಹ: ಅರ್ಜುನನ ಮಾವುತ ವಿನು ನೀಡಿದ್ದ ಹೇಳಿಕೆಯ ನಂತರ ಕಾಡಾನೆಯೊಂದಿಗೆ ಕಾಳಗದ ವೇಳೆ ಅರಣ್ಯಾಧಿಕಾರಿಗಳ ಗುಂಡೇಟಿಗೆ ತೀವ್ರ ಗೊಯಗೊಂಡು ಮೃತಪಟ್ಟಿದೆ ಎಂದು ಪ್ರಾಣಿ ಪ್ರೇಮಿಗಳು ಆರೋಪಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

Continue Reading

ಬಿಗ್ ನ್ಯೂಸ್

Bride refuses Marriage in hall ತಾಳಿ ಕಟ್ಟುವ ವೇಳೆ ವರನ ಕೈಗೆ ಅಡ್ಡ ಹಿಡಿದು ಸಿನಿಮೀಯ ಶೈಲಿಯಲ್ಲಿ  ಮದುವೆ ನಿರಾಕರಿಸಿದ ವಧು

Ad Widget

Ad Widget

Bride refuses Marriage in hall ಚಿತ್ರದುರ್ಗ: ನಿಗದಿಯಾಗಿದ ಮದುವೆಗಳು ಮುರಿದು ಬೀಳುವುದು ಸಹಜ . ಆದರೇ ಮದುವೆ ಮಟಂಪದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಾಗ ಮದುವೆಗಳು ಮುರಿದು ಬೀಳುವುದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಾತ್ರ. ಆದರೇ ಇಂತಹದೊಮದು ಸಿನಿಮೀಯ ಘಟನೆ ಚಿತ್ರದುರ್ಗಾದಿಂದ ವರದಿಯಾಗಿದೆ. ಈ ಘಟನೆ ನೋಡಿ ಮದುವೆ ಬಂದವರು ಹೌಹಾರಿದ್ದಾರೆ.

Ad Widget

Ad Widget

Ad Widget

Ad Widget

ಇನ್ನೇನು ವರ  ವಧುವಿನ ಕುತ್ತಿಗೆಗೆ ತಾಳಿ ಕಟ್ಟಬೇಕು ಎನ್ನುವಾಗ  ವಧು ತೆಗೆದುಕೊಂಡ  ಈ ನಿರ್ಧಾರದಿಂದ ಮದುವೆ ಮನೆಯಲ್ಲಿ ಸೇರಿದ್ದ ಜನರಿಗೆ ಎಲ್ಲರಿಗೂ ಒಂದು ರೀತಿಯ ಶಾಕ್ ನೀಡಿದಂತೆ ಆಗಿದೆ.  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ (Hosadurga Taluku) ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ತಾಳಿ ಕಟ್ಟಿಸಿಕೊಳ್ಳಲು ವಧು ವಿವಾಹವಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮದುವೆ ಕ್ಯಾನ್ಸಲ್ ಆಗಿದೆ. ವರ ತಾಳಿ ಕಟ್ಟುವಾಗ ವಧು  ತಾಳಿಗೆ ಕೈ ಅಡ್ಡ ಹಿಡಿದು ತಡೆದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Ad Widget

Ad Widget

Ad Widget

ವಧುವಿಗೆ ಮದುವೆಗೆ ಇಷ್ಟವಿರಲಿಲ್ಲ .ಮನೆಯವರ ಒತ್ತಾಯಕ್ಕೆ ಮಣಿದು ಆಕೆ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾಳೆ ಅದರೆ ಮುಹೂರ್ತದ ವೇಳೆ ಮನ ಬದಲಾಯಿಸಿದ ವಧು ತಾಳಿ ಕಟ್ಟುವ ವೇಳೆ ಕಯ ಅಡ್ಡ ಹಿಡಿದು ತನ್ನ ಅಸಮ್ಮತಿ ಸೂಚಿಸಿದ್ದಾಳೆ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ಕೈ ಕೊಟ್ಟ ವಧುವಿನ ಬಗ್ಗೆ ವರನ ಮನೆಯವರಿಗೆ ಸಿಕ್ಕಾಪಟ್ಟೆ ಕೋಪ ಬಂದಿದೆ.

Ad Widget

ಹುಡುಗಿ ಮದುವೆಗೊಪ್ಪದಿರುವದನ್ನು ಗಮನಿಸಿದ ಎರಡು  ಕಡೆಯ ಸಂಬಂಧಿಗಳು ವಧುವಿನ ಮನವೊಲಿಸಲು ಯತ್ನಿಸಿದ್ದಾರೆ. ಆದರೇ ಗಟ್ಟಿ ಮನಸ್ಸು ಮಾಡಿದ ವಧು  ಮದುವೆಯಾಗಲು ನಿರಾಕರಿಸಿದ್ದಾಳೆ.   ಹೀಗಾಗಿ  ಮದುವೆಗೆ ಆಗಮಿಸಿದ ಜನರು, ಸಂಬಂಧಿಗಳು ವಧುಗೆ ಹಿಡಿಶಾಪ ಹಾಕಿದ್ದಾರೆ. ವರನ ಕನಸು ನುಚ್ಚು ನೂರು ಮಾಡಿದಳು. ಮೊದಲೇ ತಿಳಿಸಿದ್ರೆ ಸಮಸ್ಯೆ ಎದುರಾಗ್ತಿರಲಿಲ್ಲ ಅಂತ ಹಿಡಿಶಾಪ ಹಾಕಿದ್ದಾರೆ.

Ad Widget

Ad Widget

ಮದುವೆ ನಿರಾಕರಣೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಗೆ ಯುವತಿ ಸಮ್ಮತಿಸಿದ್ದು, ಆಕೆ ತಾಳಿಕಟ್ಟುವ ವೇಳೆ ಧೈರ್ಯ ಮಾಡಿ ವಿವಾಹ ನಿರಾಕರಿಸಿದ್ದಾಳೆಂಬ ಮಾತುಗಳು ಕೇಳಿಬಂದಿವೆ. ಸದ್ಯ ಪ್ರಕರಣ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

Continue Reading

ಜೀವನಶೈಲಿ

2024 Maruti swift Car: ಮಾರುತಿ ಸುಜುಕಿ ಕಂಪನಿಯಿಂದ ಸಿಹಿಸುದ್ದಿ: ಹೊಸ ಎಂಜಿನ್‌ ಮಹಿಮೆ – 40 ಕಿ. ಮೀ ಮೈಲೇಜ್  ಕೊಡುವ ಹೊಸ ಸ್ವಿಫ್ಟ್ ಬಿಡುಗಡೆ ಕ್ಷಣಗಣನೆ – ಬೆಲೆ ಎಷ್ಟಿದೆ ಗೊತ್ತೆ?  

Ad Widget

Ad Widget

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ತಲೆಮಾರಿನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

Ad Widget

Ad Widget

Ad Widget

Ad Widget

ದೇಶದ ಪ್ರಸಿದ್ಧ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ತನ್ನ ಬಹುನೀರಿಕ್ಷಿತ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದ್ದು, ಹೊಸ ಕಾರು ಮಾದರಿಯು  ಭರ್ಜರಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ. 

Ad Widget

Ad Widget

Ad Widget

ಹೊಸ ತಲೆಮಾರಿನ ಸ್ವಿಫ್ಟ್ ಕಾರು ಮಾದರಿಯು ಜಪಾನಿನ ಟೋಕಿಯೋ ಶೋದಲ್ಲಿ ಬಿಡುಗಡೆಯಾಗಿದ್ದು, ಭಾರತದಲ್ಲಿ ಇದು ಮುಂಬರುವ 2024ರ ಮೊದಲ ತ್ರೈಮಾಸಿಕ ಅಂತ್ಯಕ್ಕೆ ಬಿಡುಗಡೆಯಾಗಲಿದೆ. 

Ad Widget

ಮುಂಬರಲಿರುವ ಮಾರುತಿ ಸ್ವಿಫ್ಟ್ ಹೆಚ್ಚಾಗಿ ಸದ್ದು ಮಾಡುತ್ತಿರುವುದು ಅದರ ಮೈಲೇಜ್‌ನಿಂದಾಗಿಯೇ, ಮೂಲಗಳ ಪ್ರಕಾರ ಈ ಕಾರು ಪರೀಕ್ಷೆಯಲ್ಲಿ ಬರೋಬ್ಬರಿ 40km/l ಮೈಲೇಜ್ ಅನ್ನು ಹಿಂದಿರುಗಿಸಿದೆ ಎಂದು ವರದಿಯಾಗಿದೆ. ಮಾರುತಿ ಸ್ವಿಫ್ಟ್‌ನ ಈ ಬೆರಗುಗೊಳಿಸುವ ಮೈಲೇಜ್‌ಗೆ ಪ್ರಮುಖ ಕಾರಣವೆಂದರೆ ಅದರ ಹೊಸ ಪವರ್‌ಟ್ರೇನ್.

Ad Widget

Ad Widget

Arecanut Smuggling | ಮ್ಯಾನ್ಮಾರ್‌ನಿಂದ ಕಳ್ಳಸಾಗಣಿಕೆಯ ಮೂಲಕ  11500 ಕೆ.ಜಿ ಅಡಿಕೆ ಬೆಂಗಳೂರು ಏರ್ ಪೋರ್ಟ್ ನಲ್ಲಿ ವಶಕ್ಕೆ – ಕೆ.ಜಿ ರೇಟ್ ಕೇಳಿದರೆ ಅಚ್ಚರಿ..!

ಜಪಾನ್ ನಲ್ಲಿ ಬಿಡುಗಡೆಯಾಗಿರುವ ಹೊಸ ಸ್ವಿಫ್ಟ್ ನಲ್ಲಿ ಜೆಡ್ ಸೀರಿಸ್ ನಲ್ಲಿರುವ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಪ್ಯೂರ್ ಪೆಟ್ರೋಲ್ ಮತ್ತು ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪ್ಯೂರ್ ಪೆಟ್ರೋಲ್ ಮಾದರಿಯು 82 ಹಾರ್ಸ್ ಪವರ್ ಮತ್ತು 108 ಎನ್ಎಂ ಟಾರ್ಕ್ ಉತ್ಪಾದಿಸಿದರೆ ಮೈಲ್ಡ್ ಹೈಬ್ರಿಡ್ ಮಾದರಿಯು ಪ್ಯೂರ್ ಪೆಟ್ರೋಲ್ ಮಾದರಿಗಿಂತ ಹೆಚ್ಚುವರಿಯಾಗಿ 3 ಹಾರ್ಸ್ ಪವರ್ ಮತ್ತು 60 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಿಂದಿನ ಸ್ವಿಫ್ಟ್ ಮಾದರಿಯಲ್ಲಿದ್ದ ಕೆ12 1.2ಡ್ ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಸ ತಂತ್ರಜ್ಞಾನ ಪ್ರೇರಿತ ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಗೆ ಬದಲಾಯಿಸಲಾಗಿದ್ದು, ಇದು ಹಿಂದಿನ ಮಾದರಿಗಿಂತಲೂ ತುಸು ಕಡಿಮೆ ಹಾರ್ಸ್ ಪವರ್ ಹೊಂದಿದ್ದರೂ ಇಂಧನ ದಕ್ಷತೆಯಲ್ಲಿ ಸಾಕಷ್ಟು ಸುಧಾರಿಸಿದೆ.

KFD Recruitment 2023: ಅರಣ್ಯ ಇಲಾಖೆಯಿಂದ ಫಾರೆಸ್ಟ್ ಗಾರ್ಡ್ 540 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ : ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಹೊಸ ಸ್ವಿಫ್ಟ್ ಮಾದರಿಯಲ್ಲಿನ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ 23.04 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಮಾದರಿಯು ಪ್ರತಿ ಲೀಟರ್ ಗೆ 24.05 ಕಿ.ಮೀ ಮೈಲೇಜ್ ನೀಡಲಿದ್ದು, ಶೀಘ್ರದಲ್ಲಿಯೇ ಇದು ಆಯ್ದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ 4×4 ಡ್ರೈವ್ ಸಿಸ್ಟಂ ಆಯ್ಕೆಯನ್ನು ಸಹ ಪಡೆದುಕೊಳ್ಳುತ್ತಿದೆ.

ಪರೀಕ್ಷಾ ಪರಿಸ್ಥಿತಿಗಳಲ್ಲಿ ಝಡ್-ಸೀರಿಸ್ ಎಂಜಿನ್  ಸುಮಾರು 40 ಕಿ.ಮೀ ಮೈಲೇಜ್ ನೀಡಿದೆ ಎನ್ನಲಾಗಿದ್ದು  ಅಸ್ತಿತ್ವದಲ್ಲಿರುವ ಸ್ವಿಫ್ಟ್ ಎಂಜಿನ್ ಗಿಂತ ಇದು ಗಮನಾರ್ಹ ಸುಧಾರಣೆಯಾಗಿದೆ. ಪ್ರಸ್ತುತ ಸ್ವಿಫ್ಟ್ ನ ಎಂಜಿನ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ 22.38 ಕಿ.ಮೀ ಮತ್ತು ಎಜಿಎಸ್ (ಆಟೋ ಗೇರ್ ಶಿಫ್ಟ್) ನೊಂದಿಗೆ 22.56 ಕಿ.ಮೀ ಮೈಲೇಜ್ ನೀಡುತ್ತದೆ.

ಆದರೆ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ವಿಫ್ಟ್ ಮಾದರಿಯು ಜೆಡ್12ಇ 1.2 ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ನೊಂದಿಗೆ ಮೈಲ್ಡ್ ಹೈಬ್ರಿಡ್ ಆಯ್ಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎಎಂಟಿ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ಸ್ವಿಫ್ಟ್ ಸಹ ಜಪಾನ್ ಮಾರುಕಟ್ಟೆಯಲ್ಲಿನ ಮಾದರಿಯೆಂತೆಯೇ ಮೈಲೇಜ್ ನೀಡಲಿದ್ದು, ಇದು ಫ್ರಂಟ್ ಡ್ರೈವ್ ಸಿಸ್ಟಂ ಆಯ್ಕೆ ಮಾತ್ರ ಹೊಂದಿರಲಿದೆ.

ಇನ್ನು ಈ ಕಾರಿನಲ್ಲಿ  ಮರುವಿನ್ಯಾಸಗೊಳಿಸಲಾದ ಬಾನೆಟ್, ಮತ್ತಷ್ಟು ಸ್ಪೋರ್ಟಿಯಾಗಿರುವ ಹನಿಕೊಬ್ ಬಂಪರ್, ಹೊಸ ವಿನ್ಯಾಸದ ಎಲ್ಇಡಿ ಹೆಡ್ ಲ್ಯಾಂಪ್ಸ್, ಹೊಸ ಫಾಗ್ ಲ್ಯಾಂಪ್ಸ್ ಮತ್ತು ಆಕರ್ಷಕವಾದ ಸೈಡ್ ಪ್ರೊಫೈಲ್ ಹೊಂದಿದೆ. ಹೀಗಾಗಿ ಬೆಲೆಯಲ್ಲಿ ತುಸು ದುಬಾರಿಯಾಗಲಿರುವ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 6.50 ಲಕ್ಷದಿಂದ ರೂ. 10 ಲಕ್ಷ ರೂ ಬೆಲೆ ಇರಲಿದೆ.

Continue Reading

Trending

error: Content is protected !!