Connect with us

ಆರೋಗ್ಯ

Herat attack: ಹೃದಯಾಘಾತಕ್ಕೂ ಕೊರೊನಾಕ್ಕೂ ಲಿಂಕ್‌ ಇದೆಯೆಂದ ಕೇಂದ್ರ ಆರೋಗ್ಯ ಸಚಿವರು – ಈ ಹಿಂದೆ ಕೋವಿಡ್‌ಗೆ ತುತ್ತಾದವರಿಗೆ ಅವರು ನೀಡಿದರು ಬಿಗ್‌ ಟಿಪ್ಸ್‌

Ad Widget

Ad Widget

ಗಾಂಧಿನಗರ, ಅ. 30: ದೇಶದಲ್ಲಿ ಯುವ ಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೂ ಕೊರೊನಾಕ್ಕೂ ಸಂಬಂಧವಿರುವ ಕುರಿತು ಕೇಂದ್ರ ಆರೋಗ್ಯ ಸಚಿವರು ಸುಳಿವು ನೀಡಿದ್ದಾರೆ. ಗುಜರಾತ್‌ನಲ್ಲಿ ನವರಾತ್ರಿ ಹಬ್ಬದ ಸಂದರ್ಭ ನಡೆಯುವ ಗಾರ್ಭ ನೃತ್ಯ ಮಾಡುತ್ತ 11 ಮಂದಿ ಹೃದಯಘಾತದಿಂದ ಸಾವನೃಪ್ಪಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು “ಕೋವಿಡ್‌ ಪೀಡಿತರು ಕನಿಷ್ಠ ಒಂದೆರಡು ವರ್ಷ ಅತಿಯಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದಿತ್ತು. ಇದರಿಂದ ಹಠಾತ್ ಹೃದಯಾಘಾತ ಹಾಗೂ ಹೃದಯಸ್ತಂಭನ ತಪ್ಪಿಸಬಹುದಿತ್ತು’ ಎಂದು ಹೇಳಿದ್ದರು

Ad Widget

Ad Widget

Ad Widget

Ad Widget

ಗುಜರಾತಿ ಭಾಷೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, ತೀವ್ರತರವಾದ ಕೋವಿಡ್‌ನಿಂದ ಬಳಲುತ್ತಿರುವ ಜನರು, ಹಠಾತ್ ಹೃದಯ ಸ್ತಂಭನಕ್ಕೆ ಒಳಗಾಗಿ ಬಲಿಯಾಗುವುದನ್ನು ತಪ್ಪಿಸಲು 1 ರಿಂದ 2 ವರ್ಷಗಳ ಕಾಲ ಕಠಿಣ ವ್ಯಾಯಾಮ ಅಥವಾ ಅತಿಯಾದ ಕೆಲಸದಿಂದ ದೂರವಿರಬೇಕು ಎಂಬ ಅಂಶವು ICMR ನ ವಿವರವಾದ ಅಧ್ಯಯನದಿಂದ ಕಂಡು ಬಂದಿದೆ ಎಂದು ಹೇಳಿದರು.

Ad Widget

Ad Widget

Ad Widget

ಗುಜರಾತ್‌ನಲ್ಲಿ ‘ಗರ್ಬಾ’ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ 24 ಗಂಟೆಗಳಲ್ಲಿ 11 ಜನ ಪ್ರಾಣ ಕಳೆದುಕೊಂಡಿದ್ದು ಮೃತಪಟ್ಟವರು ಹದಿಹರೆಯದವರು ಮತ್ತು ಮಧ್ಯವಯಸ್ಕರಾಗಿದ್ದರು. ಅದರಲ್ಲಿ 13 ವರ್ಷದ ಬಾಲಕನೂ ಸೇರಿದ್ದಾನೆ.

Ad Widget

ಲಸಿಕೆ ಕಾರಣವಲ್ಲ

Ad Widget

Ad Widget

18-45 ವರ್ಷದ ಒಳಗಿನವರ ಹಠಾತ್‌ ಸಾವಿಗೆ ಕೊರೊನಾ ಲಸಿಕೆ ಕಾರಣವಲ. ಕೋವಿಡ್ ಲಸಿಕೆಯಿಂದ ದೇಶದಲ್ಲಿ 18 ರಿಂದ 45 ವರ್ಷದ ವಯೋಮಾನದವರಲ್ಲಿ ಹಠಾತ್ ಸಾವಿನ ಅಪಾಯದ ಸಾಧ್ಯತೆ ಹೆಚ್ಚಾಗಿಲ್ಲ. ಇಂಥ ಪ್ರಕರಣಗಳನ್ನು ಪರಿಶೀಲಿಸಿದಾಗ ಅವರು ಈ ಹಿಂದೆ ಸೋಂಕು ದೃಢ ಪಟ್ಟವರೆಂದು ತಿಳಿದುಬಂದಿದೆ. ಆದರೆ ಸಾವಿಗೆ ಸ್ವಲ್ಪ ಸಮಯ ಮುನ್ನ ಮದ್ಯಪಾನ, ತೀವ್ರವಾದ ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು  ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್) ಅಧ್ಯಯನ ಹೇಳಿದೆ

ಕೊರೊನೋತ್ತಾರ ಕಾಲಘಟ್ಟದಲ್ಲಿ, ಆರೋಗ್ಯವಂತ ಯುವಜನರು ಹೃದಯಘಾತಕ್ಕೆ ತುತ್ತಾಗಿ ಅಕಾಲಿಕ ಮರಣವನ್ನಪ್ಪುವ ಕುರಿತು ಕಳವಳ ಕೇಳಿಬಂದಿತ್ತು. ಕೋವಿಡ್ ಲಸಿಕೆಯು ಇದಕ್ಕೆ ಕಾರಣ ಇರಬಹುದು ಎಂಬ ಶಂಕೆಯೂ ಮೂಡಿತ್ತು. ಹೀಗಾಗಿ ಈ ಹಠಾತ್ ಸಾವುಗಳ ಕುರಿತಾಗಿ ವಸ್ತುಸ್ಥಿತಿ ತನಿಖೆಗೆ ಸಂಶೋಧಕರು ಮುಂದಾಗಿದ್ದರು.

ಆರೋಗ್ಯವಂತ ಯುವಜನರ ಹಠಾತ್ ಸಾವುಗಳಿಗೆ ಕಾರಣ ತಿಳಿಯಲು ಈ ಅಧ್ಯಯನ ನಡೆಸಲಾಗಿತ್ತು. 2021ರ ಅ.1 ಮತ್ತು 2023ರ ಮಾರ್ಚ್ 31ರ ನಡುವೆ ಸಂಭವಿಸಿದ್ದ 18ರಿಂದ 45 ವರ್ಷ ವಯೋಮಾನದ, ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ವ್ಯಕ್ತಿಗಳ ಅಕಾಲಿಕ ಸಾವಿನ ಪ್ರಕರಣಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು.

ವಯಸ್ಸು, ಲಿಂಗ, ಸ್ಥಳ ಕುರಿತ ಅಂಶಗಳ ಆಧಾರದಲ್ಲಿ 729 ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಾಗಿತ್ತು. ಮೃತರ ವೈದ್ಯಕೀಯ ಹಿನ್ನೆಲೆ, ವರ್ತನೆ (ಧೂಮಪಾನ, ಮದ್ಯಪಾನ, ಅತಿಯಾದ ದೈಹಿಕ ಶ್ರಮ), ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರೆ ಹಾಗೂ ಅವರಿಗೆ ಕೋವಿಡ್ ಲಸಿಕೆ ನೀಡಲಾಗಿತ್ತೆ ಎಂಬ ವಿವರಗಳನ್ನು ಕಲೆಹಾಕಲಾಗಿತ್ತು.

ಅಂತಿಮವಾಗಿ, ಭಾರತದಲ್ಲಿ ಈ ವಯೋಮಾನದವರಲ್ಲಿ ಹಠಾತ್ ಸಾವಿನ ಸಾಧ್ಯತೆ ಹೆಚ್ಚಳಕ್ಕೆ ಕೋವಿಡ್ ಲಸಿಕೆಯು ಕಾರಣವಾಗಿಲ್ಲ. ವಾಸ್ತವವಾಗಿ ಕೋವಿಡ್ ಲಸಿಕೆಯು ವಯಸ್ಕರಲ್ಲಿ ಸಾವಿನ ಸಾಧ್ಯತೆಗಳನ್ನು ಕುಗ್ಗಿಸಿದೆ ಎಂದು ಅಧ್ಯಯನ ವರದಿ ಅಭಿಪ್ರಾಯಪಟ್ಟಿದ್ದಾರೆ.

Continue Reading
Click to comment

Leave a Reply

ಆರೋಗ್ಯ

Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

Ad Widget

Ad Widget

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಬಗ್ಗೆ ಹೇಳುವುದಾದರೆ ತುಪ್ಪ ಬಹಳ ಮಹತ್ವದ ಆಹಾರವಾಗಿದೆ. ಅದು ಚಳಿಗಾಲದಲ್ಲಿ ನಮ್ಮನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ತುಪ್ಪವನ್ನು ಚಳಿಗಾಲದಲ್ಲಿ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆ, ಒಡೆದ ಹಿಮ್ಮಡಿ, ಕಡಿಮೆ ರೋಗನಿರೋಧಕ ಶಕ್ತಿ ಮುಂತಾದವುಗಳಿಗೆ ತುಪ್ಪ ಸೇವನೆ ಉತ್ತಮ ಪರಿಹಾರ. ಹಾಗಾಗಿ ದಿನನಿತ್ಯದ ಆಹಾರದಲ್ಲಿ ತುಪ್ಪ ಸೇವಿಸುವುದರಿಂದ ಪ್ರಯೋಜನ ಪಡೆದುಕೊಳ್ಳಿ..
*ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ:ಚಳಿಗಾಲದಲ್ಲಿ ತುಪ್ಪ ತಿನ್ನುವುದರಿಂದ ದೇಹವು ಒಳಗಿನಿಂದ ಬೆಚ್ಚಗಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಅಡುಗೆಯಲ್ಲಿ ತುಪ್ಪವನ್ನು ಬಳಸುವುದು ಸೂಕ್ತವಾಗಿದೆ. ಇದು ತನ್ನದೇ ಆದ ವಿಶಿಷ್ಟ ಪರಿಮಳವನ್ನು ಹೊಂದಿದೆ, ಅದು ಯಾವುದೇ ಊಟದ ರುಚಿಯನ್ನು ಹೆಚ್ಚಿಸುತ್ತದೆ.
*ತುಪ್ಪದ ಬಳಕೆಯಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ:
ತುಪ್ಪವು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಕೆಮ್ಮು ಮತ್ತು ಶೀತದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ. ಶುದ್ಧ ಹಸುವಿನ ತುಪ್ಪದ ಕೆಲವು ಬೆಚ್ಚಗಿನ ಹನಿಗಳನ್ನು ಮೂಗಿನಲ್ಲಿ ಹಾಕಿದರೆ ಶೀತ ಮತ್ತು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.
*ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ:
ತುಪ್ಪವು ನಿಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು, ಏಕೆಂದರೆ ಇದು ನೈಸರ್ಗಿಕ ಉತ್ಪನ್ನವಾಗಿರುವುದರಿಂದ, ಇದು ನಿಮ್ಮ ಮುಖದ ಮೇಲಿನ ಚರ್ಮದ ವಿನ್ಯಾಸ ಮತ್ತು ಹೊಳಪನ್ನು ಸುಧಾರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಇದನ್ನು ನೇರವಾಗಿ ಮುಖದ ಮೇಲಿನ ಚರ್ಮಕ್ಕೆ ಹಚ್ಚಿಕೊಳ್ಳಬಹುದು.
*ಕರುಳಿನ ಆರೋಗ್ಯ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು:ಪೌಷ್ಟಿಕಾಂಶಗಳನ್ನು ಅಪಾರವಾಗಿ ಒಳಗೊಂಡಿರುವ ತುಪ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನೆರವಾಗುತ್ತದೆ.
ಅಂದ್ರೆ ನಾವು ಸೇವಿಸಿದ ಆಹಾರ ನಮ್ಮ ದೇಹದಲ್ಲಿ ಚೆನ್ನಾಗಿ ಜೀರ್ಣ ವಾಗುವಂತೆ ಮಾಡುತ್ತದೆ ನೀವು ನಿಮ್ಮ ಆಹಾರ ಪದ್ಧತಿಯಲ್ಲಿ ತುಪ್ಪ ವನ್ನು ಬಳಸುವ ಅಭ್ಯಾಸ ಮಾಡಿಕೊಳ್ಳಿ
*ಕಟ್ಟಿದ ಮೂಗಿಗೂ ಇದು ಒಳ್ಳೆಯದು
ಶೀತದಿಂದ ನಿಮ್ಮ ಮೂಗು ಮುಚ್ಚಿದ್ದರೆ ಅಥವಾ ಕಟ್ಟಿದ್ದರೆ ಸಹ ಅದನ್ನು ನಿವಾರಿಸಿಕೊಳ್ಳಲು ತುಪ್ಪವು ತುಂಬಾನೇ ಪ್ರಯೋಜನಕಾರಿಯಾಗಿದೆ. ನಿಮಗೆ ಉಸಿರಾಟದ ತೊಂದರೆ ಆದರೆ, ನಿಮ್ಮ ರುಚಿ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ. ತಲೆನೋವು ಮತ್ತು ದಣಿವನ್ನು ಈ ತುಪ್ಪವು ನಿವಾರಿಸುತ್ತದೆ

Ad Widget

Ad Widget

Ad Widget

Ad Widget
Continue Reading

ಆರೋಗ್ಯ

Heart Attack deaths Increased in India ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಭಾರೀ ಏರಿಕೆ – ಇಲ್ಲಿದೆ ಎನ್​ಸಿಆರ್​ಬಿ ವರದಿ ವಿವರ; Heart attack ಹೆಚ್ಚಳದ ಹಿಂದಿದೆ ಈ ಕಾರಣ

Ad Widget

Ad Widget

Heart Attack deaths Increased in India ನವದೆಹಲಿ: ಕೊರೊನಾ ಬಾಧಿಸಿದ (Corona panadamic)  ಕಳೆದ  3 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೃದಯಾಘಾತ (Heart Attack) ಪ್ರಕರಣಗಳಲ್ಲಿ  ಭಾರಿ ಹೆಚ್ಚಳ ಕಂಡು ಬಂದಿದೆ. ಅದರಲ್ಲೂ 2022ನೇ ಸಾಲಿನಲ್ಲಿ  ಹೃದಯಾಘಾತವಾಗಿ ಸಾಯುವವರ ಸಂಖ್ಯೆಯಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದಾಗ 12.5% ಏರಿಕೆಯಾಗಿದೆ. ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋ (National Crime Record Bureau) (ಎನ್​ಸಿಆರ್​ಬಿ)​ ದೇಶದಲ್ಲಿ ಹೆಚ್ಚಳ ವಾಗುತ್ತಿರುವ ಹೃದಯಘಾತ ಸಂಬಂದಿ ಸಾವಿನ ಅಂಕಿ ಅಂಶಗಳನ್ನು ( Heart Attack death percentage) ಬಿಡುಗಡೆ (ncrb report on Heart Attack) ಮಾಡಿದೆ. ಈ ವರದಿಯ ಬಳಿಕ  ಸಾಂಕ್ರಾಮಿಕ ರೋಗಕ್ಕೂ ಹೃದಯಘಾತಕ್ಕೂ ಸಂಬಂಧವಿದೆ ಈ ಬಗ್ಗೆ ವಿಸ್ತ್ರತ ತನಿಖೆ ನಡೆಯಬೇಕು ಎಂದು ತಜ್ಙರು ಆಗ್ರಹಿಸುತ್ತಿದ್ದಾರೆ

Ad Widget

Ad Widget

Ad Widget

Ad Widget

ಎನ್​ಸಿಆರ್​ಬಿ​  ವರದಿ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. 2022ರಲ್ಲಿ  32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.   2021ರಲ್ಲಿ ದಾಖಲಾದ ಹೃದಯಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ  28,413. ಈ ಅಂಕಿ ಅಂಶ ಕಳೆದ ಒಂದು ವರ್ಷಗಳ ಅವಧಿಯಲ್ಲಿ ಹೃದಯಘಾತದಿಂದ ಆಗುವ ಸಾವಿನ ಪ್ರಮಾಣದಲ್ಲಿ  ಗಮನಾರ್ಹ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. 2020ರಲ್ಲಿ 28579 ಮಂದಿ ಹಾರ್ಟ್‌ ಅಟ್ಯಾಕ್‌ (Heart attack ) ನಿಂದ ಮೃತಪಟ್ಟಿದ್ದಾರೆ.

Ad Widget

Ad Widget

Ad Widget

ಹಠಾತ್ ಸಾವಿನ ಪ್ರಮಾಣದಲ್ಲೂ ಏರಿಕೆ

Ad Widget

ಹಠಾತ್ ಸಾವುಗಳ (sudden death) ಒಟ್ಟಾರೆ ಸಂಖ್ಯೆಯಲ್ಲೂ ದೇಶದಲ್ಲಿ ಗಮನಾರ್ಹ ಏರಿಕೆ ಕಾಣಿಸಿದೆ.  ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್​ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳ  ಕಂಡು ಬಂದಿದೆ.  ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್‌ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವನ್ನು ಎನ್‌ಸಿಆರ್‌ಬಿ ಹಠಾತ್ ಮರಣದ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

Ad Widget

Ad Widget

ತಜ್ಞರು ಏನೂ ಹೇಳುತ್ತಾರೆ

 ಹೃದಯದ ಆರೋಗ್ಯದ ಮೇಲೆ ಇದ್ದಕ್ಕಿದಂತೆ ಆಗಾಧ ಪರಿಣಾಮ ಬೀರುತ್ತಿರುವುದರ  ಹಿಂದೆ ಸಾಂಕ್ರಮಿಕ ರೋಗದ ಬಳಿಕ ಉದ್ಭವಿಸಿದ ಪರಿಣಾಮಗಳು ಕಾರಣ ಎಂಬ ಅಭಿಪ್ರಾಯ ವೈದಕೀಯ ಲೋಕದಿಂದ ಕೇಳಿ ಬರುತ್ತಿದೆ. ವೈದಕೀಯ ಜಗತ್ತಿನ ಒಂದು ವರ್ಗದ ಪ್ರಕಾರ ಕೊರೊನಾ ಬಾಧಿಸಿದ ಸಂದರ್ಭ ಹಾಗೂ ಕೊರೊನೋತ್ತರ ಕಾಲದಲ್ಲಿ ಉಂಟಾದ ಆರ್ಥಿಕ ಹಾಗೂ ಮಾನಸಿಕ ಒತ್ತಡವು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೆಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನೊಂದು ವರ್ಗದ ಪ್ರಕಾರ ಕೊರೊನಾ ಲಸಿಕೆಯ ಪರಿಣಾಮವು ಇದಾಗಿರಬಹುದು.  ಹೀಗಾಗಿ  ಈ ಸಾವಿನ ಹೆಚ್ಚಳದ ಹಿಂದಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯ ಸರಕಾರ ಮಾಡಬೇಕು . ಇದರ ಜತೆಗೆ  ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.

ಜೀವನ ಶೈಲಿ ಬದಲಾಯಿಸಿ

ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚಳವಾಗಲು  ಬದಲಾದ  ಜೀವನ ಶೈಲಿಯು ಒಂದು ಕಾರಣ. ದೈಹಿಕ ವ್ಯಾಯಮವಿಲ್ಲದ ಉದ್ಯೋಗಗಳು ಹೆಚ್ಚಾಗಿರುವುದು ಒಂದು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ  ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.

Continue Reading

ಆರೋಗ್ಯ

Health Benefits of Pomegranates: ಪುರುಷರಿಗೆ ಪ್ರಯೋಜನಕಾರಿ ದಾಳಿಂಬೆ – ಇದರಲ್ಲಿದೆ  ಹಲವು ಆರೋಗ್ಯವರ್ಧಕ ಅಂಶಗಳು

Ad Widget

Ad Widget

ದಾಳಿಂಬೆ ಆರೋಗ್ಯಕರ ಹಣ್ಣುಗಳಲ್ಲಿ ಒಂದಾಗಿದೆ. ಪ್ರೋಟೀನ್, ಫೈಬರ್, ವಿಟಮಿನ್, ಫೋಲೇಟ್ ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಆಂಟಿ-ಆಕ್ಸಿಡೆಂಟ್, ಆಂಟಿ-ವೈರಲ್ ಮತ್ತು ಆಂಟಿ-ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ.

Ad Widget

Ad Widget

Ad Widget

Ad Widget

ಅಷ್ಟೇ ಅಲ್ಲ ಈ ಕೆಂಪು ಹಣ್ಣಿನಲ್ಲಿ ವೈನ್ ಅಥವಾ ಗ್ರೀನ್ ಟೀಗಿಂತ ಮೂರು ಪಟ್ಟು ಹೆಚ್ಚಿನ ಆಂಟಿ-ಆಕ್ಸಿಡೆಂಟ್ ಗಳು ಇರುತ್ತವೆ. ಹಾಗಾದರೆ ದಾಳಿಂಬೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ..

Ad Widget

Ad Widget

Ad Widget

*ಅಪಾರವಾದ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ:ದಾಳಿಂಬೆ ಹಣ್ಣನ್ನು ತಿನ್ನಬೇಕು ಎನ್ನುವುದಕ್ಕೆ ಮುಖ್ಯ ಕಾರಣವೇ ಇದು. ದಾಳಿಂಬೆ ಹಣ್ಣಿನ ಬೀಜಗಳಲ್ಲಿ ಶಕ್ತಿಯುತವಾದ ಆಂಟಿಆಕ್ಸಿಡೆಂಟ್ ಅಂಶಗಳು ಪಾಲಿಫಿನಾಲ್ ರೂಪದಲ್ಲಿ ಸಿಗುತ್ತದೆ.

Ad Widget

ಬೇರೆ ಯಾವುದೇ ಹಣ್ಣುಗಳಿಗೆ ಹೋಲಿಸಿದರೆ ದಾಳಿಂಬೆ ಹಣ್ಣುಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ದೇಹದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯನ್ನು ತಪ್ಪಿಸಲು ಇವು ನೆರವಾಗುತ್ತವೆ.

Ad Widget

Ad Widget

*ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡಲಿದೆ:

ಬಹಳಷ್ಟು ಜನರಿಗೆ ಕರುಳಿನ ಭಾಗದಲ್ಲಿ ಉಂಟಾಗುವ ಉರಿಯೂತದ ಸಮಸ್ಯೆಯಿಂದ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಆದರೆ ಈ ಸಮಸ್ಯೆಯನ್ನು ದಾಳಿಂಬೆ ಹಣ್ಣು ತಪ್ಪಿಸುತ್ತದೆ.

ಬಹಳಷ್ಟು ಮಹಿಳೆಯರು ಇನ್ಫಾಮೇಟರಿ ಬೋವಲ್ ಸಿಂಡ್ರೋಮ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ದಾಳಿಂಬೆ ಹಣ್ಣು ಮತ್ತು ಅದರ ಒಂದು ವರದಾನ ಎಂದು ಹೇಳಬಹುದು.

*ಪುರುಷರಿಗೆ ಪ್ರಯೋಜನಕಾರಿ:

 ದಾಳಿಂಬೆ ಸೇವನೆಯು ದೈಹಿಕ ದೌರ್ಬಲ್ಯ, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಪ್ರತಿದಿನ ದಾಳಿಂಬೆಯನ್ನು ಸೇವಿಸಬೇಕು.

*ಕ್ಯಾನ್ಸರ್ ತಡೆಯಲು ಸಹಕಾರಿ:

ತಜ್ಞರ ಪ್ರಕಾರ, ನೀವು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಸೇವಿಸಿದರೆ, ನೀವು ಕ್ಯಾನ್ಸರ್ ನಂತಹ ರೋಗಗಳನ್ನು ತಪ್ಪಿಸಬಹುದು. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ದೇಹದಲ್ಲಿರುವ ಫ್ರೀ ರಾಡಿಕಲ್ ಗಳನ್ನು ತೆಗೆದುಹಾಕಲು ಹಾಗೂ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

*ಅಜೀರ್ಣ ಸಮಸ್ಯೆಗೆ ಪರಿಹಾರ: ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ  ಹಣ್ಣನ್ನು ತಿನ್ನುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

*ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ದಾಳಿಂಬೆಯಲ್ಲಿ ಫೈಬರ್ ಪ್ರಮಾಣವು ಕಂಡುಬರುತ್ತದೆ, ಇದರೊಂದಿಗೆ, ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ವೈದ್ಯರು ಸಹ ಹೃದ್ರೋಗದಲ್ಲಿ ದಾಳಿಂಬೆಯನ್ನು ಸೇವಿಸಲು ಶಿಫಾರಸು ಮಾಡುತ್ತಾರೆ

*ರಕ್ತಹೀನತೆಯಲ್ಲಿ ಪ್ರಯೋಜನಕಾರಿ:

ರಕ್ತಹೀನತೆ, ಕಾಮಾಲೆ, ರಕ್ತಹೀನತೆ ಮುಂತಾದ ರೋಗಗಳನ್ನು ಹೊಂದಿರುವ ಜನರು ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆಯಲ್ಲಿ ಕಬ್ಬಿಣ ಕಂಡುಬರುತ್ತದೆ, ಇದು ರಕ್ತದ ಕೊರತೆಯನ್ನು ನಿವಾರಿಸುತ್ತದೆ.

Continue Reading

Trending

error: Content is protected !!