Connect with us

ಉಡುಪಿ

ಬಂಟರು ಉದ್ಯಮ ಸಾಹಸಿಗಳು – ವಿಶ್ವದೆಲ್ಲೆಡೆ ಬಂಟರು ಬೆರೆಯುತ್ತಾರೆ : ಹೋದಲ್ಲೆಲ್ಲ ಮಾತೃಭಾಷೆ ತುಳು ಹಾಗೂ ಇಲ್ಲಿನ ಸಂಸ್ಕೃತಿಯನ್ನು ಹರಡಿಸಿದ್ದಾರೆ : ವಿಶ್ವ ಬಂಟರ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ

Ad Widget

Ad Widget

ತುಳು ಭಾಷೆಯಲ್ಲಿ ಮಾತು ಆರಂಭಿಸಿ-ಅಭಿನಂದಿಸಿ ಸಭಿಕರನ್ನು ಥ್ರಿಲ್ಲಾಗಿಸಿದ ಸಿಎಂ : ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ: ಬಂಟರು ಮತ್ತು ಮಂಗಳೂರು-ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು : ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ : ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮುದಾಯ ಆಚರಿಸುತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Ad Widget

Ad Widget

Ad Widget

Ad Widget

ಉಡುಪಿ ಅ 28: ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮುದಾಯ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

Ad Widget

Ad Widget

Ad Widget

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ ಸಮಯದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮ ಆರಂಭಿಸಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಬಂಟ ಸಮುದಾಯ ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದೆ. ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Ad Widget

ಬಂಟರು ಮತ್ತು ಮಂಗಳೂರು-ಉಡುಪಿ ಜಿಲ್ಲೆಯವರು ಉದ್ಯಮ ಸಾಹಸಿಗಳು. ವಿಶ್ವದ ಎಲ್ಲಾ ಕಡೆ ಹರಿಡಿದ್ದು ತಾವು ಹೋಗುವ ವಿಶ್ವದ ಎಲ್ಲಾ ಕಡೆ ಎಲ್ಲರ ಜತೆಗೂ ಬೆರೆತು, ಸಹೃದಯತೆಯಿಂದ ಬೆರೆಯುತ್ತಾರೆ. ಇದು ಬಂಟರ ಸಮುದಾಯದ ಹೆಗ್ಗಳಿಕೆ ಎಂದರು. ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಾಪು ಮೂಡಿಸಿದ್ದಾರೆ.

Ad Widget

Ad Widget

ಎಲ್ಲೇ ಹೋದರು ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮಗಳ ಪ್ರೇಮ ಮತ್ತು ಅಕ್ಕರೆ ಅನುಕರಣೀಯ. ಇದು ಹೆಮ್ಮೆಯ ವಿಚಾರ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.

ಬಂಟ ಸಮಾಜ ಜಾತ್ಯತೀತ ಸಮುದಾಯ. ಸರ್ವರನ್ನೂ ಸಮಾನ ಪ್ರೀತಿಯಿಂದ ಕಾಣುವ ಮಾನವೀಯ ಮೌಲ್ಯವನ್ನು ಆಚರಿಸುತ್ತಿದೆ. ಇದು ಹೆಮ್ಮೆಯ ಸಂಗತಿ. ಮನುಷ್ಯ ದ್ವೇಷವನ್ನು ಬಂಟ ಸಮುದಾಯ ಯಾವತ್ತೂ ಬೆಂಬಲಿಸುವುದಿಲ್ಲ. ಇದು ಅತ್ಯಂತ ಶ್ಲಾಘನೀಯ ಎಂದರು.‌

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಯಶಪಾಲ್ ಸುವರ್ಣ , ಗಣೇಶ್ ಹುಕ್ಕೇರಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಡಾ.ಪಿ.ವಿ.ಶೆಟ್ಟಿ, ಸಂತೋಷ್ ಗುರು, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು.

Continue Reading
Click to comment

Leave a Reply

ಉಡುಪಿ

Bangalore Kambala ಬೆಂಗಳೂರು  ಕಂಬಳದಲ್ಲಿ  ಭಾಗವಹಿಸುವ   ಕೋಣಗಳಿಗೆ ಮಂಗಳೂರಿಂದಲೇ ಕುಡಿಯುವ ನೀರು – ಯಾಕೆ ಗೊತ್ತಾ?

Ad Widget

Ad Widget

ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಆಚರಣೆಯಾದ ಕಂಬಳವನ್ನು  ಆಚರಿಸುವುದು ವಿಶೇಷವಾಗಿದೆ.ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ. 

Ad Widget

Ad Widget

Ad Widget

Ad Widget

ಬೆಂಗಳೂರಿನಲ್ಲಿ ನಡೆಯಲಿರವ ಕಂಬಳಕ್ಕೆ  ಕೋಣಗಳು ಆಗಮಿಸಲಿದ್ದು ಊರು ಬಿಟ್ಟು ಮತ್ತೊಂದು ಊರಿಗೆ ಕಂಬಳದ ಕೋಣಗಳು ಬರಲಿರುವುದರಿಂದ ಕೋಣಗಳ ಬಗ್ಗೆ ಮಾಲೀಕರು ವಿಶೇಷ ಮುತುವರ್ಜಿಯನ್ನು ವಹಿಸಲಿದ್ದಾರೆ. ಕಂಬಳದ ಕೋಣಗಳಿಗೆ ಕುಡಿಯಲು ನೀರು ಸಹ ಮಂಗಳೂರಿನಿಂದಲೇ ಬರಲಿದೆ. ಕಂಬಳದ ಕೋಣಗಳನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯಿಂದ ಸಾಕುವುದರಿಂದ ಅದಕ್ಕೆ ಹಾಕುವ ಆಹಾರದಿಂದ ಹಿಡಿದು ಕುಡಿಯುವ ನೀರಿನ ತನಕ ಮಾಲೀಕರು ಹೆಚ್ಚು ಹೆಚ್ಚು ಎಚ್ಚರಿಕೆಯಿಂದ ಇರುತ್ತಾರೆ ಕೋಣಗಳ ಮಾಲೀಕರು.

Ad Widget

Ad Widget

Ad Widget

ಮಂಗಳೂರಿನಿಂದ ಕೋಣಗಳಿಗೆ ನೀರು ತರುವುದರ ಹಿಂದಿನ ಕಾರಣ:

Ad Widget

ಕರಾವಳಿ ಮತ್ತು ಬೆಂಗಳೂರಿನ ವಾತಾವರಣ, ಜೀವನ ಶೈಲಿ, ಆಹಾರ ಪದ್ಧತಿ, ನೀರಿನಲ್ಲಿ ಸಾಕಷ್ಟು ವ್ಯತ್ಯಾಸ ಇರುವುದರಿಂದ ಬೆಂಗಳೂರಿನ ಆಹಾರ, ನೀರು ಕೊಡುವುದರಿಂದ ಕೋಣಗಳ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೀಗಾಗಿ ಕುಡಿಯಲು ನೀರನ್ನು ಸಹ ಕರಾವಳಿಯಿಂದಲೇ ತರಲು ಉದ್ದೇಶಿಸಲಾಗಿದೆ.

Ad Widget

Ad Widget

ಕಂಬಳದ ಕೋಣಗಳಿಗೆ ಬಾವಿ ನೀರು: ಕಂಬಳದ ಕೋಣಗಳಿಗೆ ಕುಡಿಯಲು ಮಾಲೀಕರ ಬಾವಿಯ ನೀರನ್ನೇ ನೀಡಲಾಗುತ್ತದೆ. ಕರಾವಳಿಯಲ್ಲಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಿದಾಗ ನೀರು ಬದಲಾದರೂ ಭೇದಿ ಆರಂಭವಾಗುತ್ತದೆ. ಹೀಗಾಗಿ ಬೆಂಗಳೂರಿಗೆ ಕರಾವಳಿಯ ಬಾವಿ ನೀರನ್ನೇ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ. ಕೋಣಗಳನ್ನು ಕರೆದುಕೊಂಡು ಹೋಗುವಾಗ ನೀರು ತುಂಬಿದ ಟ್ಯಾಂಕರ್‌ಗಳು ಕೂಡ ಜೊತೆಯಲ್ಲಿ ಸಾಗಲಿವೆ. ವರ್ಷಗಟ್ಟಲೆ ಒಂದೇ ಬಾವಿಯ ನೀರು ಕುಡಿದ ಕೋಣಗಳಿಗೆ ಇಲ್ಲಿನ ನದಿ ನೀರು ಕುಡಿದರೂ ತೊಂದರೆಯಾಗುತ್ತದೆ. ಹುರುಳಿ, ಬೈ ಹುಲ್ಲಿನ ಸಮಸ್ಯೆ ಇಲ್ಲ. ನೀರಿನ ವಿಷಯದಲ್ಲಿ ಅತಿಸೂಕ್ಷ್ಮವಾಗಿ ಇರಬೇಕು’ ಎಂದು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ.

ಕಂಬಳದ ಕೋಣಗಳಿಗೆ ಯಾವುದೇ ಸಮಸ್ಯೆ ಆಗದಂತೆ ಊರಿನಿಂದಲೇ 8 ಟ್ಯಾಂಕರ್‌ನಷ್ಟು ನೀರು ತರಲು ನಿರ್ಧರಿಸಲಾಗಿದೆ. ಅವುಗಳಿಗೆ ಬೇಕಾದ ಆಹಾರವನ್ನೂ ಕರಾವಳಿಯಿಂದಲೇ ತರಿಸಲಾಗುತ್ತದೆ.

Continue Reading

ಉಡುಪಿ

Bangalore Kambala : ಸಿಲಿಕಾನ್ ಸಿಟಿಯಲ್ಲಿ ನಡೆಯುವ ಕಂಬಳದಲ್ಲಿ ಗೆಲ್ಲುವ ಕೋಣಗಳಿಗೆ ಸಿಗಲಿದೆ ಭರ್ಜರಿ ಬಹುಮಾನ – ಇಲ್ಲಿದೆ ಬಹುಮಾನದ ವಿವರ

Ad Widget

Ad Widget

ಇದೇ ಮೊದಲ ಬಾರಿಗೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ.
.25ರಂದು ಬೆಳಗ್ಗೆ 10.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಕಂಬಳ ಉದ್ಘಾಟಿಸಲಿದ್ದಾರೆ. ಕಂಬಳ ಮಹೋತ್ಸವದಲ್ಲಿ ಗೆಲ್ಲುವ ಕೋಣಗಳಿಗೆ ಭಾರೀ ಮೊತ್ತದ ನಗದು ಹಾಗೂ ಚಿನ್ನವನ್ನು ನೀಡಲಾಗುತ್ತದೆ.

Ad Widget

Ad Widget

Ad Widget

Ad Widget

ಕಂಬಳ ವಿಜೇತರ ಬಹುಮಾನ ವಿವರ ಹೀಗಿದೆ: ಬೆಂಗಳೂರು ಕಂಬಳದಲ್ಲಿ ವಿಜೇತರಾಗುವ ಕೋಣದ ಮಾಲೀಕರಿಗೆ 1 ಲಕ್ಷ ರೂ. ನಗದು, 16 ಗ್ರಾಂ ಸ್ವರ್ಣ ಕೊಡಲಾಗುತ್ತದೆ. ದ್ವಿತೀಯ ಸ್ಥಾನ ಗಳಿಸಿದವರಿಗೆ 50,000 ರೂ. ಜತೆಗೆ 8 ಗ್ರಾಂ ಚಿನ್ನ ಮತ್ತು ತೃತೀಯ ಸ್ಥಾನ ಪಡೆದವರಿಗೆ 25,000 ರೂ. ನಗದು ಹಾಗೂ 4 ಗ್ರಾಂ ಬಂಗಾರದ ಪದಕವನ್ನು ಬಹುಮಾನವಾಗಿ ನೀಡಲಾಗುತ್ತದೆ.

Ad Widget

Ad Widget

Ad Widget

ಬೆಂಗಳೂರು ಕರಾವಳಿ ಕರ್ನಾಟಕದ 18 ಲಕ್ಷ ಜನರಿಗೆ ನೆಲೆಯಾಗಿದೆ. ಅವರಲ್ಲಿ ಸುಮಾರು ಎಂಟು ಲಕ್ಷ ಜನರು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಗಳಿವೆ. ಕಂಬಳದ ವೇಳೆ ಆಹಾರ, ಕಲಾಕೃತಿಗಳು ಮತ್ತು ಇತರ ವಸ್ತುಗಳ 150 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ.

Ad Widget

ಆರು ವಿಭಾಗಗಳಲ್ಲಿ ನಡೆಯಲಿದೆ ಬೆಂಗಳೂರು ಕಂಬಳ: ಕನೆಹಲಗೆ, ಅಡ್ಡಹಲಗೆ, ನೇಗಿಲು ಹಿರಿಯ ಮತ್ತು ಕಿರಿಯ ಜೊತೆಗೆ ಹಗ್ಗ ಹಿರಿಯ ಮತ್ತು ಕಿರಿಯ ಎಂಬ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.‌

Ad Widget

Ad Widget

ಕಂಬಳಕ್ಕೆ ಸಾರ್ವಜನಿಕರಿಗೆ ಫ್ರೀ:ಹೌದು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ಯಾವುದೇ ಟಿಕೆಟ್‌ ಆಗಲಿ ಪಡೆದುಕೊಳ್ಳಲುವ ಅವಕಾಶ ಇಲ್ಲ. ಸಾರ್ವಜನಿಕರಿಗೆ ಪಾಸ್‌ ತೋರಿಸುವ ಅಗತ್ಯವೂ ಇಲ್ಲ. ಬದಲಾಗಿ ವಿಐಪಿಗಳಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು 24 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವೀಕ್ಷಕರಿಗೆ ನೋಡಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಇದರಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು

ನ. 24 ರಂದು ಶುಕ್ರವಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್, ಬಸವರಾಜ್ ಬೊಮ್ಮಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಶಾಸಕರು, ಸಚಿವರುಗಳು ಬರಲಿದ್ದಾರೆ. ಸರ್ಕಾರದಿಂದ ಒಂದು ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ 7 ರಿಂದ 8 ಕೋಟಿ ಖರ್ಚಾಗುತ್ತಿದೆ. ಉಳಿದ ಹಣವನ್ನ ಸಂಘ- ಸಂಸ್ಥೆಗಳಿಂದ ಸಂಗ್ರಹಿಸಲಾಗಿದೆ.

ಕಂಬಳಕ್ಕೆ ತಾರಾ ಮೆರಗು: ಮಂಗಳೂರಿನ 80 % ರಷ್ಟು ಸಿನಿಮಾ ನಟಿ – ನಟಿಯರು ಕಂಬಳಕ್ಕೆ ಬರಲಿದ್ದಾರೆ. ಅನುಷ್ಕ ಶೆಟ್ಟಿ ಬರ್ತಾರೆ. ಶಿವಣ್ಣ, ಸುದೀಪ್, ಉಪೇಂದ್ರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಬರ್ತಾರೆ.

Continue Reading

ಉಡುಪಿ

Bangalore Kambala Traffic guidlines; ಬೆಂಗಳೂರು ಕಂಬಳ: ವಾಹನಗಳ ನಿಲುಗಡೆ ಸಂಚಾರ ಬದಲಾವಣೆ: ವಾಹನಗಳ ಪ್ರವೇಶ ಮತ್ತು ನಿರ್ಗಮನದ ಬಗ್ಗೆ ಟ್ರಾಫಿಕ್ ಪೊಲೀಸರಿಂದ ಮಾರ್ಗಸೂಚಿ ಬಿಡುಗಡೆ – ಇದರ ಬಗ್ಗೆ ವಿವರ ಇಲ್ಲಿದೆ ನೋಡಿ

Ad Widget

Ad Widget

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ಶನಿವಾರ ಕಂಬಳವನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. 10.30 ಕ್ಕೆ ಉದ್ಘಾಟನೆಗೊಂಡ ಕಂಬಳ ಎರಡು ದಿನಗಳ ಕಾಲ ನಡೆಯಲಿದೆ. ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಎಂಟ್ರಿ ಇದೆ. ಉಳಿದಂತೆ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳ ಫನ್ ವರ್ಲ್ಡ್‌ ಕಡೆಯಿಂದ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗಿದೆ.

Ad Widget

Ad Widget

Ad Widget

Ad Widget

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯಲಿರುವ ಕಂಬಳದ (Bengaluru Kambala) ಪ್ರಯುಕ್ತ ವಾಹನ ನಿಲುಗಡೆ, ಸಂಚಾರ ಬದಲಾವಣೆ, ಪ್ರವೇಶ ಮತ್ತು ನಿರ್ಗಮನ ವಿಚಾರವಾಗಿ ಟ್ರಾಫಿಕ್ ಪೊಲೀಸರು ಗುರುವಾರ ಮಾರ್ಗಸೂಚಿ (Traffic Advisory) ಬಿಡುಗಡೆ ಮಾಡಿದ್ದಾರೆ. 25ಮತ್ತು 26ರಂದು ಸುಗಮ ಸಂಚಾರಕ್ಕಾಗಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

Ad Widget

Ad Widget

Ad Widget


ಪ್ರವೇಶ ಮತ್ತು ವಾಹನ ನಿಲುಗಡೆ ಸ್ಥಳಗಳು ಹೀಗಿವೆ

Ad Widget

*ಪ್ರವೇಶ ಮತ್ತು ವಾಹನ ನಿಲುಗಡೆ: ಸಿಬಿಡಿ ಏರಿಯಾ ದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಕ್ರಿ ಸರ್ಕಲ್ ಬಳಿ ಯು ತಿರುವು ಪಡೆದು ಮೇಕ್ರಿ ಸರ್ಕಲ್ ಗೇಟ್ ನಂ-01 (ಕೃಷ್ಣವಿಹಾರ್) ರಲ್ಲಿ ಪ್ರವೇಶಿಸಿ, ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗಲು ಸೂಚಿಸಲಾಗಿದೆ. ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಕ್ರಿ ಸರ್ಕಲ್ ಅಂಡರ್ ಪಾಸ್ ನಲ್ಲಿ ಬಂದು ಗೇಟ್ ನಂ-01 ಕೃಷ್ಣವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳವನ್ನು ನಡೆದು ತಲುಪುವುದು.

Ad Widget

Ad Widget

ಯಶವಂತಪುರ ಕಡೆಯಿಂದ ಬರುವ ವಾಹನಗಳು ಜಂಕ್ಷನ್-ಮೇಕ್ರಿ ಸರ್ಕಲ್ ಬಲ ತಿರುವು ಪಡೆದು ಗೇಟ್ ನಂ-01 ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳ ತಲುಪುವುದು. ಕ್ಯಾಬ್ ಸೇವೆಯನ್ನು ಬಳಸಿಕೊಳ್ಳುವವರು ಗೇಟ್ ನಂ-02 ರಲ್ಲಿ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್ ನಂ-03 ಮುಖಾಂತರ ಕ್ಯಾಬ್‌ಗಳು ಹೊರ ಹೋಗಬಹುದಾಗಿದೆ. ಕಾರ್ಯಕ್ರಮದಿಂದ ವಾಪಸ್ಸು ಹೋಗುವಾಗ ಎಲ್ಲಾ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ನಿರ್ಗಮಿಸುವಂತೆ ಸೂಚನೆ ನೀಡಲಾಗಿದೆ.

*ಬದಲೀ ಮಾರ್ಗದ ಮಾಹಿತಿ: ಕಾರ್ಯಕ್ರಮವನ್ನು ಹೊರತುಪಡಿಸಿ, ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಈ ಕೆಳಕಂಡ ರಸ್ತೆಗಳನ್ನು ಬಳಸದೇ ಬದಲೀ ಮಾರ್ಗದಲ್ಲಿ ಸಂಚರಿಸಲು ಕೋರಿದೆ.

ಅರಮನೆ ರಸ್ತೆ: ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್ ಪಾಸ್‌ವರೆಗೆ.
ಎಂ.ವಿ ಜಯರಾಮ ರಸ್ತೆ : ಅರಮನೆ ರಸ್ತೆ, ಬಿ.ಡಿ.ಎ. ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್‌ಪಾಸ್ ನಿಂದ ಹಳೆ ಉದಯ ಟಿವಿ ಜಂಕ್ಷನ್‌ವರೆಗೆ (ಎರಡು ದಿಕ್ಕಿನಲ್ಲಿ).
ಬಳ್ಳಾರಿ ರಸ್ತೆ: ಮೇಕ್ರಿ ವೃತ್ತ ದಿಂದ ಎಲ್.ಆರ್.ಡಿ.ಇ ಜಂಕ್ಷನ್‌ವರೆಗೆ
ಕನ್ನಿಂಗ್‌ಹ್ಯಾಂ ರಸ್ತೆ: ಬಾಳೇಕುಂದ್ರಿ ಸರ್ಕಲ್ ನಿಂದ ಲೀ-ಮೆರಿಡಿಯನ್ ಅಂಡರ್ ಪಾಸ್‌ವರೆಗೆ.
ಮಿಲ್ಲರ್ಸ್ ರಸ್ತೆ: ಹಳೆ ಉದಯ ಟಿ.ವಿ ಜಂಕ್ಷನ್ ನಿಂದ ಎಲ್.ಆರ್.ಡಿ.ಇ ಜಂಕ್ಷನ್ ವರೆಗೆ.
ಜಯಮಹಲ್ ರಸ್ತೆ: ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆ ಸುತ್ತಮುತ್ತಲ ರಸ್ತೆಗಳು.

ಪಾರ್ಕಿಂಗ್ ನಿಷೇಧಿಸಿರುವ ರಸ್ತೆಗಳು: ಪ್ಯಾಲೇಸ್ ರಸ್ತೆ, ವಸಂತನಗರ ರಸ್ತೆ, ನಂದಿದುರ್ಗ ರಸ್ತೆ, ಎಂ.ವಿ ಜಯರಾಮ್ ರಸ್ತೆ, ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ, ಸಿ.ವಿ.ರಾಮನ್‌ರಸ್ತೆ, ರಮಣ ಮಹರ್ಷಿ ರಸ್ತೆ, ತರಳಬಾಳು ರಸ್ತೆ, ಮೌಂಟ್ ಕಾರ್ಮಲ್ ಕಾಲೇಜು ರಸ್ತೆ. ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ & ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಂಟೋನ್ ಮೆಂಟ್ ರೈಲ್ವೆ ಸ್ಟೇಷನ್, ಹೆಬ್ಬಾಳ ಜಂಕ್ಷನ್, ಕಾವೇರಿ ಥಿಯೇಟರ್ ಜಂಕ್ಷನ್, ಬಿ.ಹೆಚ್.ಇ.ಎಲ್, ಐಐಎಸ್ಸಿ ಜಂಕ್ಷನ್, ಬಸವೇಶ್ವರ ಜಂಕ್ಷನ್ ನಲ್ಲಿ ಭಾರೀ ಸರಕು ಸಾಗಾಣಿಕಾ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗುತ್ತದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

Continue Reading

Trending

error: Content is protected !!