Connect with us

ಶಿಕ್ಷಣ

Skill on Wheels: ಪುತ್ತೂರು ಬಸ್ಸು ನಿಲ್ದಾಣದಲ್ಲಿ ನಿಷ್ಕ್ರಿಯವಾಗಿ ಬಿದ್ದುಕೊಂಡಿರುವ ‘ಕೌಶಲ್ಯ ರಥ’ -‌ ಆದರೂ ದಾಖಲೆ ಪ್ರಕಾರ ನಡೆಯುತ್ತಿದೆ 15 ಜನರಿಗೆ ತರಬೇತಿ..! ಹಳ್ಳ ಹಿಡಿದ ರಾಜ್ಯದ ಮಹತ್ವಕಾಂಕ್ಷಿ ಯೋಜನೆ

ಮತ್ತೊಂದು ಅಘಾತಕಾರಿ ಸಂಗತಿ ಹೊರ ಬಿದ್ದಿದ್ದು ಬೆಂಗಳೂರಿನ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ದಾಖಲೆ ಪ್ರಕಾರ ಈಗಲೂ 15 ಮಂದಿಗೆ ಇದರಲ್ಲಿ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ…! ಬಸ್ಸು ಹತ್ತದೆಯೇ ತರಬೇತಿ ಕೊಡುವ ಅದ್ಯಾವ ಕೌಶಲ್ಯ ಇಲಾಖೆಗೆ ಸಿಕ್ಕಿದೆ ಎನ್ನುವುದು ತನಿಖೆಯಾಗಬೇಕಾದ ಅಂಶ.

Ad Widget

Ad Widget

ಪ್ರತಿ ಗ್ರಾಮದಲ್ಲಿ ಕೌಶಲ್ಯ ಭರಿತ ಪಡೆ ನಿರ್ಮಿಸಿ ಸ್ವಯಂ ಉದ್ಯೋಗಕ್ಕೆ ಪ್ರೇರೆಪಿಸಲು ಹಾಗೂ ತರಬೇತಾದ ಯುವ ಪಡೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವ ರಾಜ್ಯ ಸರಕಾರದ ಮಹತ್ವಕಾಂಕ್ಷಿ ಯೋಜನೆ ಕೌಶಲ್ಯ ರಥ ಅಥಾವ ’ಸ್ಕಿಲ್ ಆನ್ ವೀಲ್’ ಇಲಾಖೆಯ ಅಧಿಕಾರಿಗಳ ಬೇಜವಬ್ದಾರಿಯಿಂದ ಹಳ್ಳ ಹಿಡಿಯುವಂತಾಗಿದೆ. ಸರಕಾರ ಎಷ್ಟೇ ಒಳ್ಳೆ ಉದ್ದೇಶದಿಂದ ಯೋಜನೆಗಳನ್ನು ಜಾರಿ ಮಾಡಿದರೂ ಅದನ್ನು ಅಡಳಿತಶಾಹಿ ಕುಲಗೆಡಿಸುತ್ತದೆ ಎಂಬ ಆರೋಪ ಇಂದು ನಿನ್ನೆಯದಲ್ಲ.. ಅದಕ್ಕೆ ತಾಜಾ ಉದಾಹರಣೆ ಈ ಕೌಶಲ್ಯ ರಥ.

Ad Widget

Ad Widget

Ad Widget

Ad Widget

ಕೆಲ ತಿಂಗಳುಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರರಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕೌಶಲ್ಯ ರಥ ಅನಾಥವಾಗಿ ನಿಂತಿದೆ. ಆಸಕ್ತ ಅಭ್ಯರ್ಥಿಗಳಿಗೆ ಎಲೆಕ್ಟ್ರಿಷಿಯನ್ ಹಾಗೂ ಬ್ಯುಟೀಷಿಯನ್ ಕೋರ್ಸುಗಳ ತರಬೇತಿ ನೀಡುವ ಘನ ಉದ್ದೇಶದಿಂದ ರಥದಲ್ಲಿ ತರಬೇತಿಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರಾಕ್ಟಿಕಲ್‌ ಹಾಗೂ ಥಿಯರಿ ಎರಡನ್ನು ಕೂಡ ಬಸ್ಸಿನಲ್ಲಿಯೇ ಮಾಡುವ ವ್ಯವಸ್ಥೆ ಈ ರಥ ಮಾದರಿ ಬಸ್ಸುನಲ್ಲಿದೆ.

Ad Widget

Ad Widget

Ad Widget

ಆದರೇ ಗ್ರಾಮ ಪಂಚಾಯತ್‌ಗಳಿಗೆ ತೆರಳಿ ಅಲ್ಲಿ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕಾದ ಕೌಶಲ್ಯ ರಥ ಪುತ್ತೂರಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಗೂಟ ಹೊಡೆದು ನಿಂತಿರುವುದು ಮತ್ತು ಆ ಬಸ್ಸಿನತ್ತ ತಿಂಗಳಿನಿಂದ ಯಾರೂ ಸುಳಿಯದಿರುವುದು ಯೋಜನೆಯ ಉದ್ದೇಶವನ್ನು ಮಣ್ಣು ಪಾಲು ಮಾಡಿದೆ. ಇದಲ್ಲೆದರ ಮಧ್ಯೆ ಮತ್ತೊಂದು ಅಘಾತಕಾರಿ ಸಂಗತಿ ಹೊರ ಬಿದ್ದಿದ್ದು ಬೆಂಗಳೂರಿನ ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ದಾಖಲೆ ಪ್ರಕಾರ ಈಗಲೂ 15 ಮಂದಿಗೆ ಇದರಲ್ಲಿ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ…! ಬಸ್ಸು ಹತ್ತದೆಯೇ ತರಬೇತಿ ಕೊಡುವ ಅದ್ಯಾವ ಕೌಶಲ್ಯ ಇಲಾಖೆಗೆ ಸಿಕ್ಕಿದೆ ಎನ್ನುವುದು ತನಿಖೆಯಾಗಬೇಕಾದ ಅಂಶ.

Ad Widget
ಖಾಸಗಿ ಬಸ್ಸು ನಿಲ್ದಾಣದಲ್ಲಿ ನಿಲ್ಲಿಸಿರುವ ಕೌಶಲ್ಯ ಬಸ್ಸಿನ ಸುತ್ತ ಹುಲ್ಲು ಬೆಳೆದಿರುವುದು

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಮೂಲಕ ಗ್ರಾಮೀಣ ಭಾಗ ಮತ್ತು ಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವ ಜನತೆಗೆ ಜೀವನೋಪಾಯ ಒದಗಿಸುವ ಉದ್ದೇಶದಿಂದಸರ್ಕಾರ ’ಸ್ಕಿಲ್ ಆನ್ ವೀಲ್’ ಜಾರಿಗೆ ತಂದಿದೆ. 2022ರ ಏಪ್ರಿಲ್ 22ರಂದು ಕಲಬುರಗಿಯಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೌಶಲ ರಥಕ್ಕೆ ಚಾಲನೆ ನೀಡಿದ್ದರು.

Ad Widget

Ad Widget

ಸ್ಕಿಲ್ ಆನ್ ವೀಲ್’ ಮೊಬೈಲ್ ಟ್ರೈನಿಂಗ್‌ ಸೆಂಟರ್ ಮೂಲಕ ರಾಜ್ಯದ ಪ್ರತಿ ಗ್ರಾಮದಲ್ಲಿ ತರಬೇತಿ ನೀಡುವ ಯೋಜನೆ ಹೊಂದಲಾಗಿತ್ತು. ಮೊದಲ ಹಂತದಲ್ಲಿ ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ನೀಡುವ ವಾಹನ ಬೀದರ್ ಹಾಗೂ ರಾಯಚೂರು ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಚರಿಸಲಿದೆ. ಬ್ಯೂಟಿ ಥೆರಪಿಸ್ಟ್ ತರಬೇತಿ ವಾಹನ ಯಾದಗಿರಿ ಹಾಗೂ ಹಾವೇರಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಸಂಚರಿಸಲಿದೆಯೆಂದು ಇಲಾಖೆ ಹೇಳಿಕೊಂಡಿತ್ತು.

ಯೋಜನೆಗೆ ಚಾಲನೆ ನೀಡುವ ಸಂದರ್ಭ ಸರ್ಕಾರ ನಾಲ್ಕು ರಥಗಳು ರಾಜ್ಯದ ವಿವಿಧ ಕಡೆ ಸಂಚರಿಸುವುದಾಗಿ ತಿಳಿಸಿತ್ತು. ಆದರೆ ವಾಸ್ತವದಲ್ಲಿ ರಾಜ್ಯದ ಗ್ರಾಮೀಣ ಭಾಗ ತಲುಪಿರುವುದು ಕೇವಲ ಎರಡು ರಥ ಮಾತ್ರ ಎನ್ನುತ್ತಾರೆ ಇಲಾಖೆಯ ಉನ್ನತ ಅಧಿಕಾರಿಗಳು. 18ರಿಂದ 35 ವಯಸ್ಸಿನ ಕನಿಷ್ಠ 8ನೇ ತರಗತಿ ಓದಿದವರಿಗೆ ಹೈಟೆಕ್ ವಾಹನದಲ್ಲಿ 208 ತಾಸಿನ ಬ್ಯೂಟಿ ಥೆರಪಿಸ್ಟ್, ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ನೀಡಬೇಕಿತ್ತು. ವಾಹನದಲ್ಲಿ ಒಬ್ಬ ಮೊಬಿಲೈಸರ್, ಒಬ್ಬ ಕೌನ್ಸೆಲರ್, 2 ಟ್ರೇನರ್ ಇರುತ್ತಾರೆಂದು ಇಲಾಖೆ ಹೇಳಿದೆ.

ಇಲಾಖೆಯ ದಾಖಲೆ ಹೇಳುವುದೇನು ?

ಈ ರಥದ ಮೂಲಕ ರಾಯಚೂರಿನಲ್ಲಿ 75 ಮಂದಿಗೆ ಎಲೆಕ್ಟ್ರಿಕಲ್ ಟೆಕ್ನೀಷಿಯನ್ ತರಬೇತಿ ಹಾಗೂ ಯಾದಗಿರಿಯಲ್ಲಿ 75 ಮಂದಿಗೆ ಬ್ಯೂಟಿ ಥೆರಪಿಸ್ಟ್ ತರಬೇತಿ ನೀಡಲಾಗಿದೆ. ಬಳಿಕ ಬ್ಯೂಟಿ ಥೆರಪಿಸ್ಟ್ ವಾಹನ ಉಡುಪಿಗೆ ಆಗಮಿಸಿದ್ದು, 30 ಮಂದಿಗೆ ತರಬೇತಿ ಪೂರ್ಣಗೊಳಿಸಿ, ಇನ್ನೂ 15 ಮಂದಿಗೆ ತರಬೇತಿ ನೀಡುತ್ತಿದೆ. ಎಲೆಕ್ಟ್ರಿಕಲ್ ಟೆಕ್ನೀಷಿಯನ್ ವಾಹನ ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದು, 15 ಮಂದಿಗೆ ತರಬೇತಿ ಪೂರ್ಣಗೊಳಿಸಿ, ಮತ್ತೆ 15 ಮಂದಿಗೆ ತರಬೇತಿ ನೀಡುತ್ತಿರುವುದಾಗಿ ದಾಖಲೆಯಲ್ಲಿ ಹೇಳಿಕೊಂಡಿದೆ.

‌ ಪಾಸ್ಟ್‌ ಫುಡ್ ಗೆ ಕೊಡುತ್ತಾರ?

ಆದರೆ, ವಾಸ್ತವದಲ್ಲಿ ರಥ ರಸ್ತೆ ಬದಿ ಅನಾಥವಾಗಿದೆ. ತರಬೇತಿಗಾಗಿ ನಿಯೋಜಿಸಿದ ಉನ್ನತ ಬೋಧಕರು ನಾಪತ್ತೆಯಾದಂತೆ ಗೋಚರಿಸುತ್ತಿದೆ. ಪ್ರಸ್ತುತ ಸೂಕ್ತ ಭದ್ರತೆಯಿಲ್ಲದೆ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಿಂತಿರುವ ರಥದಲ್ಲಿರುವ ತರಬೇತಿ ವಸ್ತುಗಳು, ವಾಹನದ ಭಾಗಗಳು ಕಳ್ಳರ ಪಾಲಾಗುವ ಆತಂಕವಿದೆ. ನಿರುಪಯುಕ್ತವಾಗಿ ವಾಹನ ನಿಂತಿರುವ ಕಾರಣ ಅದನ್ನು ಗೂಂಡಗಡಿ ಮಾಡಿಯಾದರೂ ಬಳಸಬಹುದು ಎಂದು ಸ್ಥಳೀಯರು ಕಟಕಿಯಾಡುತ್ತಿದ್ದಾರೆ. ಇನ್ನು ಕೆಲವರು ಪಾಸ್ಟ್‌ ಫುಡ್ ಅಂಗಡಿಯಿಡಲು ಈ ರಥವನ್ನು ನೀಡುತ್ತಾರೆಯೇ ಎಂದೂ ವಿಚಾರಿಸಿ ಕೂಡ ಹೋಗಿದ್ದಾರೆ!

ಸ್ಕಿಲ್ ಆನ್ ವೀಲ್ ಹಿಂದಿನ ಹಣಕಾಸು ಯೋಜನೆಯ ಕಾರ್ಯಕ್ರಮವಾಗಿದ್ದು, ಎರಡು ವಾಹನಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಸದ್ಯ ಉಡುಪಿಯ 15 ಮಂದಿ ಹಾಗೂ ದಕ್ಷಿಣ ಕನ್ನಡದಲ್ಲಿ 15 ಜನರಿಗೆ ತರಬೇತಿ ನಡೆಯುತ್ತಿದೆ. ಈ ವಿಚಾರವನ್ನು ನಿಭಾಯಿಸುತ್ತಿದ್ದವರು ಸದ್ಯ ಇಲ್ಲ. ನಿರ್ದಿಷ್ಟವಾಗಿ ಯಾವ ಸ್ಥಳ ಎಂಬ ಮಾಹಿತಿ ಪಡೆದುಕೊಂಡು ನೀಡಬೇಕಾಗಿದೆ. ಸರ್ಕಾರದ ಮೊದಲ ಯೋಜನೆಯಾದ ಕಾರಣ ಜನರಿಂದ ಸಿಗುವ ಪ್ರತಿಕ್ರಿಯೆಯ ಮೇಲೆ ಮುಂದಿನ ತರಬೇತಿ ನಡೆಯಲಿದೆ.

| ಕವಿತಾ ಗೌಡ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ
Click to comment

Leave a Reply

ಶಿಕ್ಷಣ

Ambika Vidyaalaya: ಯುವಕರು ಜಾಗೃತರಾದರೆ ಭಾರತವನ್ನು ತಡೆಯುವ ಮತ್ತೊಂದು ಶಕ್ತಿಯಿಲ್ಲ : ಸುಬ್ರಹ್ಮಣ್ಯ ನಟ್ಟೋಜ

Ad Widget

Ad Widget


ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಸ್ವಾತಂತ್ರಾö್ಯನAತರದ ಏಳು ದಶಕಗಳ ಬಳಿಕವೂ ನಾವು ಬ್ರಿಟಿಷರ ಮಾನಸಿಕತೆಯಿಂದ ಹೊರಬಂದಿಲ್ಲ. ಅನೇಕರು ತಾವು ಭಾರತೀಯರು ಎಂಬ ಕಲ್ಪನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಉತ್ಕೃಷ್ಟವಾದ ಭಾರತೀಯ ವಿಚಾರಧಾರೆಗಳು, ಪರಂಪರೆಗಳು ಕಣ್ಣ ಮುಂದಿದ್ದರೂ ವಿದೇಶೀ ವಿಚಾರಗಳೆಡೆಗೆ ಆಕರ್ಷಿತರಾಗುತ್ತಿದ್ದೇವೆ. ಯುವಮನಸ್ಸುಗಳಿಗೆ ಒಮ್ಮೆ ನಮ್ಮ ಪಾರಂಪರಿಕವಾದ ಸಂಗತಿಗಳ ಶ್ರೇಷ್ಟತೆ ಅರಿವಾದರೆ ಮತ್ತೆ ಭಾರತವನ್ನು ತಡೆಯುವ ಶಕ್ತಿ ಜಗತ್ತಿನಲ್ಲಿಲ್ಲ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ‘ರಾಷ್ಟಿçÃಯ ಚಿಂತನೆಗಳು ಹಾಗೂ ಯುವಶಕ್ತಿ’ ವಿಚಾರವಾಗಿ ಮಾತನಾಡಿದರು.
ನಮ್ಮ ಋಷಿ ಮುನಿಗಳ ಕಾಲದಿಂದಲೂ ಸಾಧನೆಯೆಡೆಗಿನ ಹಾದಿಯ ಬಗೆಗೆ ಮಾರ್ಗದರ್ಶನಗಳು ನಿರಂತರವಾಗಿ ಒದಗಿ ಬಂದಿವೆ. ಭೋಗ ಸುಖಕ್ಕೆ ಆದ್ಯತೆ ನೀಡದೆ ಹಠ ಸಾಧನೆಗೆ ಮಹತ್ವ ನೀಡಲಾಗಿದೆ. ಮನುಷ್ಯನೊಳಗೆ ಒಮ್ಮೆ ಸಾಧಿಸುವ ಹಠ ಮೂಡಿದರೆ ಅದ್ಭುತವಾದದ್ದನ್ನು ಸಾಕಾರಗೊಳಿಸುವುದಕ್ಕೆ ಸಾಧ್ಯ. ನಮ್ಮ ದೇಹವನ್ನು ಸಾಧನಾಪಥಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕೆಂಬ ದಾರಿಯನ್ನು ನಮ್ಮ ಹಿರಿಯರೇ ಆಚರಿಸಿ ತೋರಿದ್ದಾರೆ. ಅವರ ಹಾದಿಯನ್ನು ಅನುಸರಿಸುವುದಷ್ಟೇ ನಮ್ಮ ಮುಂದಿರುವ ಜವಾಬ್ದಾರಿ ಎಂದರು.
ಯೋಗ – ಧ್ಯಾನಗಳಂತಹ ಮಹತ್ತರವಾದ ಕೊಡುಗೆಯನ್ನು ನಮ್ಮ ಪರಂಪರೆ ನಮಗೆ ನೀಡಿದೆ. ದಿನವೊಂದಕ್ಕೆ ಅದಕ್ಕಾಗಿ ಮೀಸಲಿಡುವ ಹತ್ತು – ಹದಿನೈದು ನಿಮಿಷಗಳು ನಮ್ಮನ್ನು ತೇಜಸ್ವೀ ಮನುಷ್ಯರನ್ನಾಗಿಸುತ್ತವೆ. ಹಿಂದೂ ಧರ್ಮ ನಮಗೆ ನೀಡಿರುವ ಮಹಾನ್ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸುವ ಕಾರ್ಯ ಆಗಬೇಕಿದೆ. ಯಾರು ಧರ್ಮವನ್ನು ರಕ್ಷಿಸುತ್ತಾನೋ ಅಂಥಹವನನ್ನು ಧರ್ಮವೇ ರಕ್ಷಿಸುತ್ತದೆ ಎಂಬುದು ಬಾಯಿಮಾತಲ್ಲ. ಅದರ ಹಿಂದಿರುವ ಅರ್ಥಗಳನ್ನು ಗ್ರಹಿಸಿ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಎ, ಶಶಿಕಲಾ ವರ್ಕಾಡಿ, ಅನನ್ಯಾ ವಿ, ಜಯಂತಿ ಪಿ, ಸಂಧ್ಯಾ ಎಂ, ಗಿರೀಶ ಭಟ್ ಕುವೆತ್ತಂಡ, ಹರ್ಷಿತ್ ಪಿಂಡಿವನ, ವೀಣಾ ಶಾರದಾ, ಕಚೇರಿ ಉದ್ಯೋಗಿಗಳಾದ ಗಾಯತ್ರೀದೇವಿ ಹಾಗೂ ಪ್ರಮೋದ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿ, ಮನಃಶಾಸ್ತç ವಿಭಾಗದ ಮುಖ್ಯಸ್ಥ ಚಂದ್ರಕಾAತ ಗೋರೆ ವಂದಿಸಿದರು.

Ad Widget

Ad Widget

Ad Widget

Ad Widget
Continue Reading

ಶಿಕ್ಷಣ

Ambika Vidyalaya: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಮೈತ್ರಿ 2023 ಪಂದ್ಯಾಟಕ್ಕೆ ತೆರೆ – ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ : ರಾಜೇಂದ್ರ ಪ್ರಸಾದ್

Ad Widget

Ad Widget


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಾಲಿಬಾಲ್ ಹಾಗೂ ಥ್ರೋ ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪುರುಷರ ವಾಲಿಬಾಲ್ ತಂಡ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಮಹಿಳಾ ಥ್ರೋ ಬಾಲ್ ತಂಡ ಕ್ರಮವಾಗಿ ಚಾಂಪಿಯನ್ಸ್ ಟ್ರೋಫಿ ತಮ್ಮದಾಗಿಸಿಕೊಂಡರು.

Ad Widget

Ad Widget

Ad Widget

Ad Widget


ಅಂತೆಯೇ ಪುರುಷರ ವಾಲಿ ಬಾಲ್ ಪಂದ್ಯಾಟದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪುರುಷ ತಂಡ ರನ್ರ್ಸ್ ಟ್ರೋಫಿ ಪಡೆದರೆ ಥ್ರೋಬಾಲ್ ಪಂದ್ಯಾಟದಲ್ಲಿ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮಹಿಳಾ ತಂಡ ರನ್ರ್ಸ್ ಟ್ರೋಫಿ ಪಡೆದರು.

Ad Widget

Ad Widget

Ad Widget

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಸೋಲು ಗೆಲುವಿನ ಹಂಗಿಲ್ಲದೆ ಕೇವಲ ಆಡುವ ದೃಷ್ಟಿಕೋನದಿಂದ ಅಂಗಳಕ್ಕಿಳಿದಾಗ ಮನಸ್ಸಿಗೆ ಮುದ ದೊರಕುವುದಕ್ಕೆ ಸಾಧ್ಯ. ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಕ್ರೀಡೆಯನ್ನು ಆಯೋಜಿಸುವುದು ಅತ್ಯಂತ ಮುಖ್ಯ ಹಾಗೂ ಪರಿಣಾಮಕಾರಿ ಎಂದರು.

Ad Widget


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಉಪಸ್ಥಿತರಿದ್ದರು. ಅಂಬಿಕಾ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಟಗಳನ್ನು ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ದೈಹಿಕ ಶಿಕ್ಷಕರಾದ ಸುಚಿತ್ರಾ ಹಾಗೂ ಮಹೇಶ್ ನಡೆಸಿಕೊಟ್ಟರು

Ad Widget

Ad Widget
Continue Reading

ಶಿಕ್ಷಣ

Philomina Pu College: ಫಿಲೋಮಿನಾ ಪ. ಪೂ ಕಾಲೇಜಿನ ವಿಂಧ್ಯಾಶ್ರೀ ರೈ ರಾಜ್ಯ ಮಟ್ಟಕ್ಕೆ ಆಯ್ಕೆ

Ad Widget

Ad Widget


ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಕೊಮ್ಮೇರಹಳ್ಳಿ, ಮಂಡ್ಯ ಇಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾಶ್ರೀ ರೈ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget


ಇವರು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಇವರು ಶ್ರೀ ಮದ್ ಭಗವದ್ಗೀತಾ ಜಯಂತಿ ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget

Ad Widget

Ad Widget


ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಹಾಗೂ ದೇಶಭಕ್ತಿಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget


ಇವರು ಕುರಿಯ ನಿವಾಸಿಯಾದ ಉಮೇಶ್ ರೈ ಮತ್ತು ಶೋಭಾವತಿ. ಯು.ರೈ ದಂಪತಿಗಳ ಪುತ್ರಿ . ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಯನ್ನೂ ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನ ರಾವ್, ರಶ್ಮಿ ಪಿ ಎಸ್, ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.

Ad Widget

Ad Widget
Continue Reading

Trending

error: Content is protected !!