ಅಂತರ ರಾಜ್ಯ
K Surendran | ಮಂಜೇಶ್ವರ ಚುನಾವಣ ಲಂಚ ಪ್ರಕರಣ – ಕೋರ್ಟ್ ಗೆ ಹಾಜರಾಗಿ ಜಾಮೀನು ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್

ಮಂಜೇಶ್ವರ ಚುನಾವಣಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇರಳ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ (K Surendran) ಸೇರಿದಂತೆ ಎಲ್ಲಾ ಆರೋಪಿಗಳು ಬುಧವಾರ ಕಾಸರಗೋಡು ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು, ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಲಾಗಿದೆ.
ಯುವ ಮೋರ್ಚಾ ರಾಜ್ಯ ಕೋಶಾಧಿಕಾರಿ ಸುನಿಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೆ. ಸುರೇಶ್ ನಾಯ್ಕ್ , ಮಣಿಕಂಠ ರೈ, ಲೋಕೇಶ್ ನೋಂಡಾ ಇತರರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಈ ಹಿಂದೆ ಮೂರು ಬಾರಿ ನ್ಯಾಯಾಲಯ ಹಾಜರಾಗಲು ನೋಟಿಸ್ ನೀಡಿತ್ತು. ಆದರೆ ಆರೋಪಿಗಳು ಹಾಜರಾಗಿರಲಿಲ್ಲ.
ಬುಧವಾರ ನಡೆದ ವಿಚಾರಣೆ ವೇಳೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರ ನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂತೆಗೆಯಲು ಎರಡೂವರೆ ಲಕ್ಷ ರೂ. ಹಾಗೂ ಮೊಬೈಲ್ ಫೋನ್ ನೀಡಿ ನಾಮಪತ್ರ ಹಿಂಪಡೆಯಲಾಗಿತ್ತು. ಚುನಾವಣೆ ಬಳಿಕ ಪ್ರಕರಣ ಬಳಿಕ ಬೆಳಕಿಗೆ ಬಂದಿತ್ತು. ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅಂತರ ರಾಜ್ಯ
Sabarimala | ಶಬರಿಮಲೆಗೆ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತ ಸಾಗರ : ದರ್ಶನ ಸಮಯ ಹೆಚ್ಚಿಸಲು ಸಾಧ್ಯವಿಲ್ಲ ಎಂದ ಪ್ರಧಾನ ತಂತ್ರಿ – ಕಾಲ್ತುಳಿತದಲ್ಲಿ ಮಕ್ಕಳಿಗೆ ಗಾಯ : ತಂತ್ರಿಗಳ ಅಪ್ಪಣೆ ಪಡೆದು ಒಂದು ಗಂಟೆ ಸಮಯ ಹೆಚ್ಚಿಸಿ ದಿನಕ್ಕೆ 90 ಸಾವಿರ ಭಕ್ತರಿಗೆ ಸೀಮಿತಗೊಳಿಸಿದ ಸಿಎಂ ಪಿಣರಾಯಿ

ಪಥನಂತಿಟ್ಟ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಶಬರಿಮಲೆ (Sabarimala)ಯಲ್ಲಿ ಅಯ್ಯಪ್ಪ (Ayyappa Swamy) ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಹಿನ್ನಲೆಯಲ್ಲಿ ದರ್ಶನ ಸಮಯ ಹೆಚ್ಚಿಸಲು ಸಾಧ್ಯವಿಲ್ಲ ಎಂದು ತಂತ್ರಿಗಳು ನೀಡಿದ ಸಲಹೆಯಂತೆ ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸಮಿತಿ ಸಭೆ ನಡೆಸಿ ದರ್ಶನಕ್ಕೆ 1 ಗಂಟೆ ಸಮಯ ಹೆಚ್ಚಿಸಿ, ದೇವಸ್ಥಾನದ ಆಡಳಿತ ಮಂಡಳಿ (Travancore Devaswom Board (TDB)) ದಿನಕ್ಕೆ 90 ಸಾವಿರ ಭಕ್ತರಿಗಷ್ಟೇ ದರ್ಶನ ಅವಕಾಶ ಎಂದು ಹೊಸ ಆದೇಶ ಹೊರಡಿಸಿದೆ.
ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ತಂತ್ರಿಗಳು ನೀಡಿದ ಸಲಹೆಯಂತೆ ದಿನಕ್ಕೆ 90 ಸಾವಿರ ಮಂದಿ ಭಕ್ತರಿಗಷ್ಟೇ ದೇವರ ದರ್ಶನಕ್ಕೆ ಅವಕಾಶ ನೀಡಲು ಕೇರಳ ಸರ್ಕಾರ ಮತ್ತು ದೇಗುಲದ ಆಡಳಿತ ಮಂಡಳಿ ಸೋಮವಾರ ತೀರ್ಮಾನಿಸಿದೆ.
ನೂಕುನುಗ್ಗಲು ಪರಿಗಣಿಸಿ ದರ್ಶನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ಅದನ್ನು ಹೆಚ್ಚಿಸುವುದು ಕಷ್ಟ ಎಂದು ಪ್ರಧಾನ ತಂತ್ರಿ ಕಂದರಾರು ರಾಜೀವರ್ ಹೇಳಿದ್ದಾರೆ.
ಇದು ಈ ಕ್ಷೇತ್ರದ ಅವಧಿಯಲ್ಲಿ ಅತಿ ಹೆಚ್ಚು ಬುಕ್ಕಿಂಗ್ ಆಗಿದ್ದು, ಡಿ.12ರಂದು ದರ್ಶನಕ್ಕೆ 1,07,260 ಮಂದಿ ಬುಕ್ ಆಗಿದ್ದಾರೆ.
ಈ ಮಂಡಲದಲ್ಲಿ ಇದು ಎರಡನೇ ಬಾರಿಗೆ ಭಕ್ತರ ಸಂಖ್ಯೆ ಲಕ್ಷ ದಾಟಿದೆ.
ಮೊನ್ನೆ ಕಾಲ್ತುಳಿತದಲ್ಲಿ ಮಕ್ಕಳು ಗಾಯಗೊಂಡಿದ್ದರಿಂದ, ಹೈಕೋರ್ಟ್ ವಿಶೇಷ ಕಲಾಪ ನಡೆಸಿ ದರ್ಶನವನ್ನು ಒಂದು ಗಂಟೆ ವಿಸ್ತರಿಸುವಂತೆ ಹೇಳಿದೆ.
ಆದರೆ ನಿನ್ನೆ ಒಂದು ಗಂಟೆ ವಿಸ್ತರಣೆ ಮಾಡಿದ್ದರಿಂದ ಮತ್ತೆ ಅದನ್ನು ಹೆಚ್ಚಿಸಲು ಅವಕಾಶವಿಲ್ಲ. ಸನ್ನಿಧಾನಕ್ಕೆ ಆಗಮಿಸುವ ಜನರ ಸಂಖ್ಯೆಯನ್ನು 85 ಸಾವಿರಕ್ಕೆ ಇಳಿಸಬೇಕು ಎಂದು ಪೊಲೀಸರು ಒತ್ತಾಯಿಸಿದ್ದರು.
ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಇದು ಸೇರಿದಂತೆ ವಿಷಯಗಳ ಕುರಿತು ತೀರ್ಮಾನಿಸಲಾಗುವುದು.
ಇದೇ ವೇಳೆ ದೇವರ ದರ್ಶನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದ್ದು, ಇದರೊಂದಿಗೆ, ದೇವಾಲಯದ ಬಾಗಿಲುಗಳು ಭಕ್ತರಿಗಾಗಿ ದಿನಕ್ಕೆ 19 ಗಂಟೆಗಳ ಕಾಲ ಅಂದರೆ ಬೆಳಿಗ್ಗೆ 3 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11.30 ರವರೆಗೆ ತೆರೆದಿರುತ್ತವೆ ಎಂದು TDB ಅಧ್ಯಕ್ಷ ಕೆ ಅನಂತಗೋಪಾಲನ್ ಮಾಹಿತಿ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ‘ಅಷ್ಟಾಭಿಷೇಕ’ ಮತ್ತು ‘ಪುಷ್ಪಾಭಿಷೇಕ’ ಎಂಬ ವಿಶೇಷ ನೈವೇದ್ಯಗಳನ್ನು ಸೀಮಿತಗೊಳಿಸಲಾಗಿದೆ. ಹರಿವರಾಸನ ಪಠಣದ ಸಮಯದಲ್ಲಿ ಭಕ್ತರಿಗೆ ಎಲ್ಲಾ ಸರತಿ ಸಾಲುಗಳ ಮೂಲಕ ಹೋಗಲು ಅವಕಾಶ ನೀಡಲಾಗುವುದು. ‘ಸರಮಕುತಿ’ಯಿಂದ ‘ನಡಪಂಥಲ್’ವರೆಗೆ ನೀರು ಮತ್ತು ಬಿಸ್ಕತ್‌ಗಳನ್ನು ವಿತರಿಸಲಾಗುವುದು.
ನಿಲಕ್ಕಲ್‌ನಲ್ಲಿ ಪಾರ್ಕಿಂಗ್‌ಗೆ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಮತ್ತು ತರಬೇತಿ ಪಡೆದ ಪೊಲೀಸರನ್ನು ‘ಪತಿನೆಟ್ಟಂ ಪಾಡಿ’ (18 ಪವಿತ್ರ ಮೆಟ್ಟಿಲುಗಳು) ನಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನಕ್ಕಾಗಿ ಈಗಾಗಲೇ 19,17,385 ಜನರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದಾರೆ ಮತ್ತು ಕಳೆದ ಭಾನುವಾರದವರೆಗೆ ಒಟ್ಟು 14,98,824 ಜನರು ದೇವಾಲಯಕ್ಕೆ ಭೇಟಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ ಎಂದು ಟಿಡಿಬಿ ಅಧ್ಯಕ್ಷರು ತಿಳಿಸಿದ್ದಾರೆ.
ಭಕ್ತರ ಸಂದಣಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಎಂದು ಕೇರಳ ಹೈಕೋರ್ಟ್ ಭಾನುವಾರ ಪಥನಂತ್ತಿಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ ಬಳಿಕ ಸರ್ಕಾರವು ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
ಅಂತರ ರಾಜ್ಯ
ಮಂಗಳೂರು : ಆತ್ಮಹತ್ಯೆಗೆ ಯತ್ನಿಸಿದ ಸಿಎಸ್ಎಫ್ಐ ಮಹಿಳಾ ಸಬ್ ಇನ್ಸ್‌ಪೆಕ್ಟರ್, ಸ್ಥಿತಿ ಗಂಭೀರ

ಮಂಗಳೂರು, ಅ 12 : ಸಿಐಎಸ್ಎಫ್ ನ ಸಿಬ್ಬಂದಿಯು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಜ್ಯೋತಿ ಬಾಯಿ ಆತ್ಮಹತ್ಯೆಗೆ ಯತ್ನಿಸಿದ ಸಿಐಎಸ್ಎಫ್ ನ ಸಬ್ ಇನ್ಸ್‌ಪೆಕ್ಟರ್.
ಗುಂಡು ಹಾರಿಸಿಕೊಂಡು ಗಂಭೀರವಾಗಿ ಮಂಗಳೂರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೌಟುಂಬಿಕ ಜೀವನದ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ.
ಜ್ಯೋತಿಯವರೇ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ ‘ನನ್ನ ಈ ಸ್ಥಿತಿಗೆ ನಾನೇ ಕಾರಣ’ ಎಂದು ಬರೆದಿತ್ತು.
ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ.
ಅಂತರ ರಾಜ್ಯ
Vande Bharat Express | ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಡಿಕ್ಕಿಯಾದ ಎಮ್ಮೆಗಳ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು : ಮಾಲೀಕರ ಪತ್ತೆಗೆ ಹರಸಾಹಸ ಪಡುತ್ತಿರುವ ಪೊಲೀಸರು – ಅದೇ ರೈಲಿಗೆ ಇಂದು ಗೋವು ಡಿಕ್ಕಿ..!

ಅಹಮದಾಬಾದ್: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯಿಂದ ಲೋಕಾರ್ಪಣೆಗೊಂಡ ಮುಂಬಾಯಿ- ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಎಮ್ಮೆಗಳ ಹಿಂಡು ಡಿಕ್ಕಿ ಹೊಡೆದು ನೂತನ ರೈಲಿಗೆ ಹಾನಿಯಾದ ಘಟನೆಗೆ ಸಂಬಂಧಿಸಿದಂತೆ ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್‌ನಲ್ಲಿ ಪ್ರಕರಣ ದಾಖಲಾಗಿದೆ. ಇಂದು ಮತ್ತೆ ಅದೇ ರೈಲಿಗೆ ಗೋಲು ಒಂದು ಡಿಕ್ಕಿಯಾಗಿದೆ.
ಗುಜರಾತ್‌ನ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್), ಎಮ್ಮೆಗಳ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಗುರುವಾರ ಸಂಭವಿಸಿದ್ದ ಅಪಘಾತದಲ್ಲಿ, ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲಿನ ಮುಂಬದಿಯ ಎಡಭಾಗವು ಕಿತ್ತುಬಂದಿತ್ತು. ಪರಿಣತರ ತಂಡವು ಕೆಲವೇ ಸಮಯದಲ್ಲಿ ಅದನ್ನು ಸರಿಪಡಿಸಿದ್ದರು.
ಇಂದು ಮುಂಬೈ ಸಮೀಪ ಈ ರೈಲಿಗೆ ದನವೊಂದು ಡಿಕ್ಕಿಯಾಗಿ ಸಣ್ಣ ಮಟ್ಟದ ಹಾನಿಯಾಗಿದೆ ಎಂದು ರೈಲ್ವೇ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ ಈ ಎಮ್ಮೆಗಳ ಮಾಲೀಕರು ಯಾರು ಎನ್ನುವುದನ್ನು ಕಂಡುಕೊಳ್ಳುವುದು ರೈಲ್ವೆ ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲದೆ ಹರಸಾಹಸ ಪಡುತಿದ್ದಾರೆ. ಅದಕ್ಕಾಗಿ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.
ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿದ್ದ ಮುಂಬಯಿ ಸೆಂಟ್ರಲ್- ಗಾಂಧಿನಗರ ವಂದೇ ಭಾರತ್ ರೈಲು, ಗುಜರಾತ್‌ನ ವಟ್ವಾ ಮತ್ತು ಮಣಿನಗರ ಸ್ಟೇಷನ್‌ಗಳ ನಡುವೆ ಗುರುವಾರ ಬೆಳಿಗ್ಗೆ 11.18ರ ವೇಳೆಗೆ ಜಾನುವಾರು ಹಿಂಡಿಗೆ ಡಿಕ್ಕಿ ಹೊಡೆದಿತ್ತು.
“ಅಹಮದಾಬಾದ್‌ನ ವಟ್ವಾ ಮತ್ತು ಮಣಿನಗರ ರೈಲ್ವೆ ನಿಲ್ದಾಣಗಳ ನಡುವೆ ವಂದೇ ಭಾರತ್ ರೈಲಿನ ಮಾರ್ಗದಲ್ಲಿ ಅಡ್ಡ ಬಂದ ಎಮ್ಮೆಗಳ ಅಪರಿಚಿತ ಮಾಲೀಕರ ವಿರುದ್ಧ ಆರ್‌ಪಿಎಫ್, ಎಫ್‌ಐಆರ್ ದಾಖಲು ಮಾಡಿದೆ” ಎಂದು ಪಶ್ಚಿಮ ರೈಲ್ವೆಯ ಹಿರಿಯ ವಕ್ತಾರ (ಅಹಮದಾಬಾದ್ ವಿಭಾಗ) ಜಿತೇಂದ್ರ ಕುಮಾರ್ ಜಯಂತ್ ತಿಳಿಸಿದ್ದಾರೆ.
ರೈಲ್ವೇಸ್ ಕಾಯ್ದೆ 1989ರ ಸೆಕ್ಷನ್ 147ರ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ಆರ್‌ಪಿಎಫ್ ಇನ್‌ಸ್ಪೆಕ್ಟರ್ ಪ್ರದೀಪ್ ಶರ್ಮಾ ತಿಳಿಸಿದ್ದಾರೆ. ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಮೃತಪಟ್ಟಿದ್ದವು. ಈ ಎಮ್ಮೆಗಳ ಮಾಲೀಕರು ಯಾರೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ.
-
ಅಪರಾಧ9 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್14 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ13 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ11 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ11 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ18 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ19 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?