Connect with us

ವಿಟ್ಲ

Agniveer ವಿಟ್ಲ : ಪಿಯುಸಿಯಲ್ಲಿ ಫೇಲ್‌ ಆಗಿ ಶಾಮಿಯಾನದ ಕೆಲಸ ಮಾಡುತ್ತಿದ್ದ ಬಡಕುಟುಂಬದ ಯುವಕ ಈಗ ಅಗ್ನಿವೀರ್‌

Ad Widget

Ad Widget

ವಿಟ್ಲ: ಮಂಗಲಪದವು ಕೈಂತಿಲ ನಿವಾಸಿ ಮಿಥುನ್ ಕುಮಾರ್ ಅಗ್ನಿವೀರ್ ಮೂಲಕ ಭಾರತದ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ. ಕಡು ಬಡತನದಲ್ಲಿ ಬೆಳೆದ ಮಿಥುನ್ ಕುಮಾರ್ ಅವರು ನಿರಂತರ ನಡೆಸಿದ ಫಲವಾಗಿ ಈಗ ಭಾರತದ ಸೇನೆಯ ಭಾಗವಾಗಿದ್ದಾರೆ.

Ad Widget

Ad Widget

Ad Widget

Ad Widget

ಮಿಥುನ್ ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ಅನುತ್ತೀರ್ಣರಾದರು. ಈ ಬಳಿಕ ತಾನು ಭಾರತೀಯ ಸೇನೆಗೆ ಸೇವೆಯನ್ನು ಸಲ್ಲಿಸಬೇಕೆಂಬ ಕನಸನ್ನು ಕಂಡರು. ಇದಕ್ಕೆ ಬೇಕಾದ ಆರ್ಹತೆಯನ್ನು ಗಿಟ್ಟಿಸಲು ಅಗತ್ಯ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ.

Ad Widget

Ad Widget

Ad Widget

ಮೊದಲ ಬಾರಿ ಅಗ್ನಿವೀರ್ ಆಯ್ಕೆಯಲ್ಲಿ ವಿಫಲಗೊಂಡಾಗ ನಿರಾಸೆಗೊಳ್ಳದೆ ಮತ್ತೊಮ್ಮೆ ಪ್ರಯತ್ನವನ್ನು ಮಾಡಿ ಕಠಿಣ ಅಭ್ಯಾಸ, ಪರಿಶ್ರಮದ ಮೂಲಕ ಎರಡನೆಯ ಪ್ರಯತ್ನದಲ್ಲಿ ಸಫಲಗೊಂಡು ಇದೀಗ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದಾರೆ.ಇವರ ಟ್ರೈನಿಂಗ್ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿದೆ.

Ad Widget

ಪಿಯುಸಿ ವಿದ್ಯಾಭ್ಯಾಸ ಅನುತ್ತೀರ್ಣ ಆದ ನಂತರ ತನ್ನ ಜೀವನಕ್ಕಾಗಿ ಶಾಮಿಯಾನದ ಕೆಲಸವನ್ನು ಮಾಡಿಕೊಂಡಿದ್ದ ಯುವಕ ಇಂದು ಅಗ್ನಿವೀರ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರ ತಾಯಿ ಶಶಿಕಲಾ ಕೂಲಿ ಕೆಲಸ ಮಾಡಿಕೊಂಡು ತಮ್ಮ ಮಗನ ಆಸೆಗೆ ಪೂರಕವಾಗಿ ಬೆಳೆಸಿದ್ದಾರೆ ಇಂದು ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ

Ad Widget

Ad Widget
Click to comment

Leave a Reply

ದಕ್ಷಿಣ ಕನ್ನಡ

ವಿಟ್ಲ : ಅಡಿಕೆ ಮರ ಮುರಿದು ಬಿದ್ದು ಮಹಿಳೆ ಸಾವು

Ad Widget

Ad Widget

ವಿಟ್ಲ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಮುರಿದು ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಸಾಲೆತ್ತೂರು‌ ಸಮೀಪ ನಡೆದಿದೆ.

Ad Widget

Ad Widget

Ad Widget

Ad Widget

ಸಾಲೆತ್ತೂರು ನಿವಾಸಿ ಗುಲಾಬಿ(48 ವ.) ಮೃತ ದುರ್ದೈವಿ ಮಹಿಳೆ. ಗುಲಾಬಿರವರು ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಡಿಕೆ ಮರವೊಂದು ಆಕಸ್ಮಿಕವಾಗಿ ಮುರಿದು ಬಿದ್ದು ಅವರ ತಲೆಯ ಭಾಗಕ್ಕೆ ತೀವ್ರ ತರಹದ ಪೆಟ್ಟಾಗಿತ್ತು.

Ad Widget

Ad Widget

Ad Widget

ತಕ್ಷಣ ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Ad Widget
Continue Reading

ಅಪರಾಧ

ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

Ad Widget

Ad Widget

ಪುತ್ತೂರು: ಕೆದಿಲದಲ್ಲಿ ನವೆಂಬರ್ 22 ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ 4 ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು , ಇಂದು(ಮಂಗಳವಾರ) ಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಂಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Ad Widget

Ad Widget

Ad Widget

Ad Widget

ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ ಸಂಖ್ಯೆ 112 ಮತ್ತು 113ರಂತೆ ಪ್ರಕರಣ ದಾಖಲಾಗಿತ್ತು.

Ad Widget

Ad Widget

Ad Widget

ಸಿಕ್ಕಿಬಿದ್ದದ್ದು ಹೀಗೆ

Ad Widget

ಈ ಪೈಕಿ ಆರೋಪಿಯು ಕಳವು ಗೈದ ದ್ವಿಚಕ್ರವಾಹನ ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ. ಅದನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಅಬೂಬ್ಬಕರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಉಂಟಾಗಿದೆ. ಅವರು ಆತನ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

Ad Widget

Ad Widget

ಈತ ಅಲ್ಲಿಂದ ತಾನು ಬೈಕ್ ಅಡಗಿಸಿಟ್ಟಿದ್ದ ಗುಡ್ಡಕ್ಕೆ ತೆರಳಿದ್ದು ಈ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ. ಈವೇಳೆ ಆತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಒಂದೇ ದಿನ ಎರಡು ಕಳ್ಳತನ

ರಮ್ಲ ಕುಂಞಿ ಬೆಂಗಳೂರು ಕಂಬಳಕ್ಕೆ ವ್ಯಾಪಾರಕ್ಕೆಂದು ನ.22ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಕೆದಿಲ ಮಿತ್ತಪಡ್ಪು ನಿವಾಸಿ ಹಮೀದ್ ನ.23 ರಂದು ಬೆಳಗ್ಗೆ ಹೋಗಿ ನೋಡುವ ಸಂದರ್ಭದಲ್ಲಿ ಬೀಗ ಮುರಿದಿದ್ದು ಪತ್ತೆಯಾಗಿತ್ತು, ಕಪಾಟಿನಲ್ಲಿದ್ದ ಸುಮಾರು ೨ಲಕ್ಷ ಕಳವಾಗಿತ್ತು. ಇದರ ಜತೆಗೆ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರಿಗೆ ಸೇರಿದ ದ್ವಿಚಕ್ರವಾಹನ ಮನೆಯ ಅಂಗಳದಿಂದ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.

ಇತ್ತೆ ಬರ್ಪೆ ಹೆಸರು ಬಂದದ್ದು ಹೇಗೆ :

ಟ್ಲದಲ್ಲಿ ಅಟೋ ರಿಕ್ಷಾ ಹೊಂದಿದ್ದ ಅಬೂಬಕ್ಕರ್ ರಿಕ್ಷಾ ಹಿಂಭಾಗದಲ್ಲಿ ಇತ್ತೆ ಬರ್ಪೆ ಎಂದು ಬರೆದಿಕೊಂಡಿದ್ದರು. ಇದರಿಂದ ಆ ಹೆಸರಿನಲ್ಲೇ ಜನರಿಗೆ ಚಿರಪರಿಚಿತರಾಗಿದ್ದರು. ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿತ್ತು.

Continue Reading

ಸ್ಥಳೀಯ

ವಿಟ್ಲ : ವ್ಯಕ್ತಿಯೊಬ್ಬನ ಮೇಲೆ ಇಬ್ಬರಿಂದ ಹಲ್ಲೆ – ತಡೆಯಲು  ಹೋದ ತಾಯಿ ಮತ್ತು ಪತ್ನಿ ಮೇಲೂ ಹಲ್ಲೆಗೆ ಯತ್ನ

Ad Widget

Ad Widget

ವಿಟ್ಲ: ಪೂರ್ವ ದ್ವೇಷದಿಂದ  ಇಬ್ಬರ ತಂಡ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ, ಈ ಬಗ್ಗೆ ಕೇಳಲು ಹೋದ ತಾಯಿ ಮತ್ತು ಪತ್ನಿಗೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ , ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಉಬೈದುಲ್ಲಾ (35) ಎಂಬವರು ಹಲ್ಲೆಗೊಳಗಾದ ವ್ಯಕ್ತಿ.

Ad Widget

Ad Widget

Ad Widget

Ad Widget

ಉಬೈದುಲ್ಲ ಅವರು ಕೊಳ್ನಾಡು ಗ್ರಾಮದ ಸಾಲೆತ್ತೂರು ಮೈದಾನದ ಬಳಿ ತನ್ನ ಸಂಬಂದಿಕರ ಬಳಿ ತೆರಳಿದಾಗ ಘಟನೆ ನಡೆದಿದೆ. ಆ ವೇಳೆ  ಅಲ್ಲಿದ್ದ ಆರೋಪಿಗಳಾದ ಅಬ್ದುಲ್‌ ಖಾದರ್‌ ಮತ್ತು ಬಶೀರ್‌ ಎಂಬವರು ಹಳೆ ದ್ವೇಷದಿಂದ ಉಬೈದುಲ್ಲ ಅವರ ಕಾಲರ್ ಪಟ್ಟಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಎದೆಗೆ ಹಲ್ಲೆ ನಡೆಸಿದ್ದಾರೆ.,

Ad Widget

Ad Widget

Ad Widget

ಅಬ್ದುಲ್‌ ಖಾದರ್‌ ಮತ್ತು ಬಶೀರ್ ರವರಲ್ಲಿ, ತನ್ನ ಮಗನಿಗೆ ಯಾಕೆ ಬೈದು ಹಲ್ಲೆ ಮಾಡಿದ್ದು ಎಂದು ಉಬೈದುಲ್ಲನ ತಾಯಿ   ಕೇಳಿದ್ದು,  ಆರೋಪಿಗಳ ಪೈಕಿ  ಬಶೀರ್  ಅವ್ಯಾಚವಾಗಿ ಬೈದು, ನಿನ್ನ ಮಗನನ್ನು ಕೊಲ್ಲುತ್ತೇವೆ ಎಂದು ಹೇಳಿ ಹೊಡೆಯಲು ಮುಂದಾಗಿರುವುದಾಗಿ ಆರೋಪಿಸಲಾಗಿದೆ.

Ad Widget

ಈ ವೇಳೆ ಉಬೈದುಲ್ಲಾ , ಆತನ ಪತ್ನಿ ತಾಯಿಗೆ ಹೊಡೆಯುವುದನ್ನು ತಡೆಯಲು ಹೋದಾಗ, ಬಶೀರ್‌ ನು ಉಬೈದುಲ್ಲಾ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿರುತ್ತದೆ

Ad Widget

Ad Widget
Continue Reading

Trending

error: Content is protected !!