Connect with us

ವಿದೇಶ

ಗಾಜಾ ಪಟ್ಟಿಗೆ ನುಗ್ಗಿ ಹಮಾಸ್ ಉಗ್ರರ ಮೇಲೆ ಹುಡುಕಿ ಹುಡುಕಿ ದಾಳಿ ಪ್ರಾರಂಭಿಸಿದ ಇಸ್ರೇಲ್ ಸೇನೆ – ಸ್ವತಂತ್ರ ಪ್ಯಾಲೆಸ್ತಿನ್ ದೇಶ ರಚನೆಗೆ ಭಾರತ ಬೆಂಬಲ ಘೋಷಣೆ : ಕೇಂದ್ರದ ನಿರ್ಧಾರ ಘೋಷಣೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

Ad Widget

Ad Widget

ಹೊಸದಿಲ್ಲಿ: ಸಾರ್ವಭೌಮ ಫೆಲೆಸ್ತೀನಿ ದೇಶವನ್ನು ರಚಿಸುವ ಅಗತ್ಯವನ್ನು ಭಾರತ ಒತ್ತಿ ಹೇಳಿದೆಯಲ್ಲದೆ ಮಾನವೀಯ ತತ್ವಗಳನ್ನು ಎತ್ತಿ ಹಿಡಿಯುವ ಬದ್ಧತೆಯಿದೆ ಎಂದು ಹೇಳಿದೆ.

Ad Widget

Ad Widget

Ad Widget

Ad Widget

ಸುದ್ದಿಗಾರರ ಜೊತೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ನಿ ಭಾರತ ಎಲ್ಲಾ ಸಂಬಂಧಿತರ ಜೊತೆ ಸಂಪರ್ಕದಲ್ಲಿದೆ ಎಂದು ಹೇಳಿದರು.

Ad Widget

Ad Widget

Ad Widget

“ಇಸ್ರೇಲ್ ಪಕ್ಕದಲ್ಲಿಯೇ ಭದ್ರ ಮತ್ತು ಮಾನ್ಯತೆ ಪಡೆದ ಗಡಿಗಳೊಳಗೆ ಸಾರ್ವಭೌಮ, ಸ್ವತಂತ್ರ ಪ್ಯಾಲೇಸ್ತಿನ್ ದೇಶ ರಚನಗೆ ಭಾರತ ಯಾವತ್ತೂ ಒತ್ತು ನೀಡಿದೆ’ ಎಂದು ಅವರು ಹೇಳಿದರಲ್ಲದೆ ಫೆಲೆಸ್ತೀನ್ ಕುರಿತಂತೆ ಭಾರತದ ನಿಲುವು ಸ್ಥಿರವಾಗಿದೆ ಹಾಗೂ ಆ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದಿದ್ದಾರೆ. ಹಮಾಸ್ ದಾಳಿಯಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರು ಕಳೆದ ಶನಿವಾರ ಗಾಯಗೊಂಡಿದ್ದಾರೆ ಹಾಗೂ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

Ad Widget

ಇಸ್ರೇಲ್ ಮೇಲಿನ ಹಮಾಸ್ ದಾಳಿಯು ಒಂದು ಉಗ್ರ ದಾಳಿ ಎಂದು ಭಾರತ ನಂಬಿದೆ ಎಂದು ಅವರು ಹೇಳಿದರು.

Ad Widget

Ad Widget

ಮಾನವೀಯ ಕಾನೂನನ್ನು ಎತ್ತಿ ಹಿಡಿಯುವ ಅಗತ್ಯತೆ ಇದೆ, ಅದೇ ಸಮಯ ಅಂತರರಾಷ್ಟ್ರೀಯ ಉಗ್ರವಾದದ ವಿರುದ್ಧ ಹೋರಾಡುವ ಅಗತ್ಯವೂ ಇದೆ ಎಂದು ಅವರು ಹೇಳಿದರು

ಗಾಜಾ ಪಟ್ಟಿಗೆ ನುಗ್ಗಿದ ಇಸ್ರೇಲ್ ಸೇನೆ :
ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನೆ ಆರಂಭಿಸಿರುವ ಯುದ್ಧ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಇಸ್ರೇಲ್ ನ ಭೂದಳ ಇದೀಗ ಗಾಜಾಪಟ್ಟಿಗೆ ನುಗ್ಗಿದೆ.

ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ಮಾಹಿತಿ ನೀಡಿದ್ದು, ಗಾಜಾದಲ್ಲಿ ತನ್ನ ಸೇನೆ ನುಗ್ಗಿದೆ. ಹಮಾಸ್ ಉಗ್ರರ ವಿರುದ್ಧ ತನ್ನ ಟ್ಯಾಂಕರ್ ಗಳ ಮೂಲಕ ದಾಳಿ ನಡೆಸುತ್ತಿದ್ದು, ಹಮಾಸ್ ಉಗ್ರರನ್ನು ಹುಡುಕಿ-ಹುಡುಕಿ ದಾಳಿ ನಡೆಸುತ್ತಿದೆ ಎಂದು ತಿಳಿಸಿದೆ.

“ಕಳೆದ 24 ಗಂಟೆಗಳಲ್ಲಿ, IDF (ಇಸ್ರೇಲಿ ಮಿಲಿಟರಿ) ಪಡೆಗಳು ಭಯೋತ್ಪಾದಕರು ಮತ್ತು ಶಸ್ತ್ರಾಸ್ತ್ರಗಳ ಪ್ರದೇಶವನ್ನು ಶುದ್ಧೀಕರಿಸುವ ಪ್ರಯತ್ನವನ್ನು ಪೂರ್ಣಗೊಳಿಸಲು ಗಾಜಾ ಪಟ್ಟಿಯ ಪ್ರದೇಶದೊಳಗೆ ಸ್ಥಳೀಯ ದಾಳಿಗಳನ್ನು ನಡೆಸಿತು” ಎಂದು ಸೇನೆಯ ಹೇಳಿಕೆ ತಿಳಿಸಿದೆ.

“ಈ ಕಾರ್ಯಾಚರಣೆಗಳ ಸಮಯದಲ್ಲಿ, ಇಸ್ರೇಲ್ ನ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚುವ ಪ್ರಯತ್ನವೂ ಇತ್ತು ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಅಂತೆಯೇ ಹಮಾಸ್ ಉಗ್ರಗಾಮಿಗಳೊಂದಿಗೆ ಹೋರಾಡಲು, ಅವರ ಶಸ್ತ್ರಾಸ್ತ್ರಗಳನ್ನು ನಾಶಮಾಡಲು ಮತ್ತು ಹಮಾಸ್ ಹಿಡಿದಿರುವ ನಾಪತ್ತೆಯಾದ ಒತ್ತೆಯಾಳುಗಳ ಬಗ್ಗೆ ಪುರಾವೆಗಳನ್ನು ಹುಡುಕಲು ಗಾಜಾವನ್ನು ಪ್ರವೇಶಿಸಿದೆ’ ಎಂದು ಸೇನೆ ಹೇಳಿದೆ.

ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ನಲ್ಲಿ ಸಮುದಾಯಗಳ ಮೇಲೆ ದಾಳಿ ಮಾಡಿ 1,300 ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, ಅವರಲ್ಲಿ ಹೆಚ್ಚಿನವರು ನಾಗರಿಕರರಾಗಿದ್ದಾರೆ. ಈ ದಾಳಿ ಬೆನ್ನಲ್ಲೇ ಶನಿವಾರದಂದು ಎರಡು ಕಡೆಯ ನಡುವೆ ಯುದ್ಧ ಪ್ರಾರಂಭವಾಯಿತು. ಉಗ್ರರು ಅಂದಾಜು 150 ಇಸ್ರೇಲಿಗಳು ಮತ್ತು ವಿದೇಶಿಯರನ್ನು ಅಪಹರಿಸಿದ್ದಾರೆ. ಇಸ್ರೇಲಿ ಸೇನೆಯು ಹೆಚ್ಚಿನ ವಿವರಗಳನ್ನು ನೀಡದೆ, ಗಾಜಾದ ಮೇಲಿನ ದಾಳಿಯ ಸಮಯದಲ್ಲಿ ಪಡೆಗಳು “ಒತ್ತೆಯಾಳುಗಳನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿ ಸಹಾಯ ಮಾಡುವ ಪುರಾವೆಗಳನ್ನು ಸಂಗ್ರಹಿಸಿದೆ” ಎಂದು ಹೇಳಿದರು.

ಅಲ್ಲದೆ ಇಸ್ರೇಲಿ ಪ್ರದೇಶದ ಕಡೆಗೆ ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಹಾರಿಸಿದ ಹಮಾಸ್ ಸೆಲ್ ಸೇರಿದಂತೆ ಇಸ್ರೇಲಿ ಸೈನಿಕರು ಆ ಪ್ರದೇಶದಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಕೋಶಗಳು ಮತ್ತು ಮೂಲಸೌಕರ್ಯಗಳನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿಕೆ ಸೇರಿಸಲಾಗಿದೆ.

ಏತನ್ಮಧ್ಯೆ, ಗಾಜಾ ನಗರದಿಂದ ಪಲಾಯನ ಮಾಡುತ್ತಿರುವ ಬೆಂಗಾವಲು ಪಡೆಗಳ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 70 ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ಆರೋಪಿಸಿದ್ದಾರೆ.

ಬಿಗ್ ನ್ಯೂಸ್

Jonathan Tortoise: ಸೇಂಟ್ ಹೆಲೆನಾ ದ್ವೀಪದಲ್ಲಿದೆ ಪ್ರಪಂಚದ ಅತ್ಯಂತ ಹಳೆಯ ಪ್ರಾಣಿ –  ಐಫೆಲ್ ಟವರ್‌ಗಿಂತಲೂ ಹಳೆಯದಾದ ಇದರ ಬಗ್ಗೆ ನಿಮಗೆಷ್ಟು ಗೊತ್ತು ?

Ad Widget

Ad Widget

 ಜೊನಾಥನ್( Jonathan) ಎಂಬ ಸೀಶೆಲ್ಸ್ ದೈತ್ಯ ಆಮೆ(Seychelles giant Tortoise) ಬಹುಶಃ ವಿಶ್ವದಲ್ಲಿ ಬದುಕಿರುವ ಅತೀ ಹಿರಿಯ ಆಮೆ ಎಂದು ಹೇಳಲಾಗಿದೆ. ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದ ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿ  ಜೊನಾಥನ್ ವಾಸಿಸುತ್ತಿದೆ.

Ad Widget

Ad Widget

Ad Widget

Ad Widget

 ಮೂಲತಃ ಈ ಆಮೆ  ಹಿಂದೂ ಮಹಾಸಾಗರದ ಸೀಶೆಲ್ಸ್‌ ನದು. ಅದಕ್ಕೆ 50 ವರ್ಷ ವಯಸ್ಸಾದಾಗ 1882ರಲ್ಲಿ ಇನ್ನೂ 3 ಆಮೆಗಳೊಂದಿಗೆ ದಕ್ಷಿಣ ಅಟ್ಲಾಂಟಿಕ್ ದ್ವೀಪಕ್ಕೆ ಕರೆತರಲಾಯಿತು.  1930ರಲ್ಲಿ ಸೇಂಟ್ ಹೆಲೆನಾ ಗವರ್ನರ್ ಸರ್ ಸ್ಪೆನ್ಸರ್ ಡೇವಿಸ್ ಈ ಆಮೆಗೆ ಜೊನಾಥನ್‌ ಎಂಬ ಹೆಸರು ನೀಡಿದರು ಮತ್ತು ಈಗ ಅದಕ್ಕೆ 191 ವರ್ಷ ವಯಸ್ಸು ಎಂದು ಹೇಳಲಾಗಿದೆ.

Ad Widget

Ad Widget

Ad Widget

ಸೀಶೆಲ್ಸ್ ದೈತ್ಯ ಆಮೆ, ಜೊನಾಥನ್ ಸೇಂಟ್ ಹೆಲೆನಾ ರಾಜ್ಯಪಾಲರ ಅಧಿಕೃತ ನಿವಾಸವಾದ ಪ್ಲಾಂಟೇಶನ್ ಹೌಸ್‌ನ ಮೈದಾನದಲ್ಲಿ ವಾಸಿಸುತ್ತಿದೆ. ಈ ಆಮೆ ಒಂದು ಮತ್ತು ಎರಡನೇ ವಿಶ್ವ ಯುದ್ಧಗಳನ್ನು ಕಂಡಿದೆ. ಇದಲ್ಲದೆ, ರಷ್ಯಾದ ಕ್ರಾಂತಿ ಮತ್ತು 39 ಅಮೇರಿಕಾದ ಅಧ್ಯಕ್ಷರು, ಏಳು ಬ್ರಿಟಿಷ್ ದೊರೆಗಳ ಆಳ್ವಿಕೆಯನ್ನು ನೋಡಿದ ಆಮೆ ಇದು. ಸದ್ಯ ಇಡೀ ವಿಶ್ವವನ್ನು ನಡುಗಿಸುತ್ತಿರುವ ಕೊರೊನಾ ವೈರಸ್‌ನ ಹಾವಳಿಗೂ ಈ ಆಮೆ ಸಾಕ್ಷಿಯಾಗಿದೆ.

Ad Widget

Gold price hike ಜೆಟ್ ವೇಗದಲ್ಲಿ ಏರಿದ ಚಿನ್ನದ ಬೆಲೆ- ಇಳಿಯುವ ಸಾಧ್ಯತೆ ಇದೆಯಾ?

Ad Widget

Ad Widget

ಜೊನಾಥನ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಕಾಣಿಸಿಕೊಂಡಿದ್ದು, ಸುಮಾರು 1832ರಲ್ಲಿ ಜನಿಸಿದ ಆಮೆಯು 1887ರಲ್ಲಿ ಪೂರ್ಣಗೊಂಡ ಐಫೆಲ್ ಟವರ್‌ಗಿಂತಲೂ ಹಳೆಯದು. ಜೊನಾಥನ್ ಅಲ್ಡಬ್ರಾ ದೈತ್ಯ ಆಮೆಯ ಉಪಜಾತಿಗೆ ಸೇರಿದ್ದು, ಈ ಜಾತಿಯ ಆಮೆಗಳು ನಾಶವಾಗಿದೆ ಎಂದು ಭಾವಿಸಲಾಗಿತ್ತು. ಆದರೆ, IUCN ಪ್ರಕಾರ ಜಾಗತಿಕವಾಗಿ ಈ ಜಾತಿಯ ಸುಮಾರು 80 ಆಮೆಗಳಿವೆ ಎಂದು ತಿಳಿದುಬಂದಿದೆ.

Health Tips ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಕ್ಷೇಮವೇ ? ಇಲ್ಲಿದೆ ಮಾಹಿತಿ

ಜೊನಾಥನ್ ತನ್ನ ಸಾಮಾನ್ಯ ಸರಾಸರಿ 150 ವರ್ಷಗಳ ಜೀವಿತಾವಧಿ ಮೀರಿದ್ದರೂ, ಕೆಲವು ವಯೋಸಹಜ ಸಮಸ್ಯೆಗಳ ಹೊರತಾಗಿ ಈ  ಇನ್ನೂ ತುಂಬಾ ಆರೋಗ್ಯಕರವಾಗಿದೆ ಎಂದು ಅದರ ಪಶುವೈದ್ಯರು ಹೇಳುತ್ತಾರೆ. ಕಣ್ಣಿನಲ್ಲಿ ಪೊರೆಯಿಂದಾಗಿ ಕಣ್ಣುಗಳು ಬಹುತೇಕ ಕುರುಡಾಗಿದೆ ಮತ್ತು ವಾಸನೆಯ ಪ್ರಜ್ಞೆಯನ್ನು ಕಳೆದುಕೊಂಡಿರಬಹುದು, ಆದರೆ ಇನ್ನೂ ಉತ್ತಮ ಶ್ರವಣ ಕೌಶಲ್ಯ ಹೊಂದಿದೆ ಎಂದೂ ಹೇಳಲಾಗಿದೆ.

Continue Reading

ವಿದೇಶ

Turkey Earthquake | ಟರ್ಕಿ ಹಾಗೂ ಸಿರಿಯಾದಲ್ಲಿ ಪ್ರಬಲ ಭೂಕಂಪ : ಸಾವಿನ ಸಂಖ್ಯೆ 2300ಕ್ಕೆ ಏರಿಕೆ – ಕುಸಿದ ಮನೆಯಡಿ ಸಿಲುಕಿಕೊಂಡ ಮಗುವಿನ ಕೈಯನ್ನು ಹಿಡಿದು ಕೂಗುವ ನಾಯಿಯ ಮನಕಲಕುವ ದೃಶ್ಯ ವಿಶ್ವದಾದ್ಯಂತ ವೈರಲ್

Ad Widget

Ad Widget

ಇಸ್ತಾಂಬುಲ್: ಟರ್ಕಿ ಹಾಗೂ ಸಿರಿಯಾದಲ್ಲಿ ಸೋಮವಾರ ಮುಂಜಾನೆ 7.8 ತೀವ್ರತೆಯ ಭೂಕಂಪ (Turkey Earthquake) ಸಂಭವಿಸಿದ್ದು, ನೂರಾರು ಜನರು ಮಲಗಿದ್ದಾಗ ಸಾವನ್ನಪ್ಪಿದ್ದಾರೆ. ಇದೀಗ ಮೃತರ ಸಂಖ್ಯೆ 2300 ಕ್ಕೆ ಏರಿಕೆಯಾಗಿದೆ. ಭೂಕಂಪದಿಂದ ಕುಸಿದ ಮನೆಯಡಿ ಬಿದ್ದ ಮಗುವಿನ ಕೈಯನ್ನು ಹಿಡಿದು ಕೂತ ನಾಯಿಯ ಮನಕಲಕುವ ದೃಶ್ಯ ವಿಶ್ವದಾದ್ಯಂತ ವೈರಲ್ ಆಗಿದೆ.

Ad Widget

Ad Widget

Ad Widget

Ad Widget

ಆರೋಗ್ಯ ಸಚಿವಾಲಯ ಹಾಗೂ  ಸ್ಥಳೀಯ ಆಸ್ಪತ್ರೆಯ ಪ್ರಕಾರ, ಸಿರಿಯಾದ ಸರಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಮತ್ತು ಟರ್ಕಿಶ್ ಪರ ಬಣಗಳ ಹಿಡಿತವಿರುವ ಉತ್ತರದ ಪ್ರದೇಶಗಳಲ್ಲಿ ಕನಿಷ್ಠ 810 ಜನರು ಸಾವನ್ನಪ್ಪಿದ್ದಾರೆ.

Ad Widget

Ad Widget

Ad Widget
ಟರ್ಕಿ ಭೂಕಂಪದ ದೃಶ್ಯ

ಟರ್ಕಿಯಲ್ಲಿ ಕನಿಷ್ಠ 1490 ಜನರು ಸಾವನ್ನಪ್ಪಿದ್ದಾರೆ ಎಂದು ಉಪಾಧ್ಯಕ್ಷ ಫುಟ್ ಒಕ್ಟೇ ಸೋಮವಾರ ಹೇಳಿದ್ದಾರೆ.  8000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ,  ಹಲವಾರು ಪ್ರಮುಖ ನಗರಗಳಲ್ಲಿ ಹುಡುಕಾಟ ಹಾಗೂ  ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.

Ad Widget

ಪುಟ್ಟ ಮಕ್ಕಳನ್ನು ರಕ್ಷಿಸುವ ದೃಶ್ಯಗಳು ಮನ ಮಿಡಿಯುತ್ತವೆ. ಬಿದ್ದ ಮನೆಗಳ ನಡುವೆ ನಾಯಿಗಳು ತಮ್ಮ ಮನೆಯ ಯಜಮಾನರನ್ನು ಹುಡುಕುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Ad Widget

Ad Widget

ಟರ್ಕಿ ಹಾಗೂ ಸಿರಿಯಾದ ಸೇನಾ ಪಡೆ , ಆರೋಗ್ಯ ಇಲಾಖೆ ತುರ್ತು ಸೇವೆ ಸಲ್ಲಿಸುತ್ತಿದೆ . ಭಾರತ ಸೇರಿದಂತೆ ಹಲವು ದೇಶಗಳು ರಕ್ಷಣಾ ತಂಡ, ಆರೋಗ್ಯ ತಂಡ ಹಾಗೂ ಔಷಧಿಗಳನ್ನು ಕಳುಹಿಸಿಕೊಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಭೂಕಂಪ ತುತ್ತಾದ ದೇಶಗಳಿಗೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.

Continue Reading

ವಿದೇಶ

Green Composting | ಮಾನವ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ‘ಹಸಿರು ಅಂತ್ಯಕ್ರಿಯೆ’ಗೆ ಅಮೇರಿಕಾ ಚಾಲನೆ

Ad Widget

Ad Widget

ನ್ಯೂಯಾರ್ಕ್: ಮಾನವ ದೇಹವನ್ನು ಗೊಬ್ಬರವನ್ನಾಗಿ (Human Body) ಪರಿವರ್ತಿಸುವ ‘ಹಸಿರು ಅಂತ್ಯಕ್ರಿಯೆ’ಗೆ (Green Composting) ಅಮೆರಿಕ ನ್ಯೂಯಾರ್ಕ್ ರಾಜ್ಯ ಒಪ್ಪಿಗೆ ನೀಡಿದೆ. ಆ ಮೂಲಕ ಮಾನವನ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಟ್ಟ ಅಮೆರಿಕ ಆರನೇ ರಾಜ್ಯ ಎನಿಸಿಕೊಂಡಿದೆ. ಈ ಕ್ರಿಯೆಯನ್ನು ‘ಹೂಮನ್ ಕಾಂಪೋಸ್ಟಿಂಗ್’ ಎನ್ನಲಾಗುತ್ತದೆ.

Ad Widget

Ad Widget

Ad Widget

Ad Widget

ಒಬ್ಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವ ಕ್ರಿಯೆಗೆ ಹೂಮನ್ ಕಾಂಪೋಸ್ಟಿಂಗ್ ಎನ್ನಲಾಗುತ್ತದೆ. ಬಳಿಕ ಆ ಮಣ್ಣನ್ನು ಸಸಿಗಳಿಗೆ ಗೊಬ್ಬರವನ್ನಾಗಿ ಬಳಕೆ ಮಾಡಲಾಗುತ್ತದೆ. ಇದು ಪ್ರಕೃತಿ ಸ್ನೇಹಿ ಪ್ರಕ್ರಿಯೆ.

Ad Widget

Ad Widget

Ad Widget

2019ರಲ್ಲಿ ವಾಷಿಂಗ್ಟನ್ ಈ ‘ಹಸಿರು ಸಂಸ್ಕಾರ’ಕ್ಕೆ ಅನುಮತಿ ನೀಡಿದ ಮೊದಲ ರಾಜ್ಯವಾಗಿತ್ತು. ಬಳಿಕ ಕೊಲಾರಡೋ, ಒರಿಗನ್, ವೆರ್ಮೋಂಟ್ ಹಾಗೂ ಕ್ಯಾಲಿಫೋರ್ನಿಯಾ ಕೂಡ ಇದನ್ನು ಕಾನೂನುಬದ್ಧಗೊಳಿಸಿದ್ದವು.

Ad Widget

ಸದ್ಯ ನ್ಯೂಯಾರ್ಕ್ ಕೂಡ ಡ್ಯೂಮನ್ ಕಾಂಪೋಸ್ಟಿಂಗ್‌ಗೆ ಅನುಮತಿ ಕೊಟ್ಟಿದೆ. ನ್ಯೂಯಾರ್ಕ್ ಗೌವರ್ನರ್ ಕ್ಯಾತಿ ಹೋಚುಲ್ ಅವರು ಈ ಶಾಸನಕ್ಕೆ ಶನಿವಾರ ಸಹಿ ಹಾಕುವ ಮೂಲಕ ಕಾನೂನು ಮಾನ್ಯತೆ ನೀಡಿದ್ದಾರೆ.

Ad Widget

Ad Widget

ಹೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಹೇಗೆ?

ಮೃತದೇಹವನ್ನು ಮುಚ್ಚಿದ ಪೆಟ್ಟಿಗೆಯಲ್ಲಿ ಇರಿಸಿ ಮರದ ತುಂಡುಗಳು, ಒಣಹುಲ್ಲು ಹಾಗೂ ಇನ್ನಿತರ ವಸ್ತುಗಳನ್ನು ಬಳಸಿ ದೇಹವನ್ನು ಮಣ್ಣಾಗಿ ಪರಿವರ್ತಿಸಲಾಗುತ್ತದೆ. ಸೂಕ್ಷ್ಮ ಜೀವಿಗಳ ಪ್ರಕ್ರಿಯೆಯಿಂದ ದೇಹವು ಮಣ್ಣಾಗಿ ಪರಿವರ್ತನೆಗೊಳ್ಳುತ್ತದೆ.

ದೇಹವು ಮಣ್ಣಾಗಲು ಕೆಲವು ತಿಂಗಳುಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಬಳಿಕ ಅದರಲ್ಲಿ ಇರುವ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಬಿಸಿ ಮಾಡಲಾಗುತ್ತದೆ. ಬಳಿಕ ಅದನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುತ್ತದೆ. ಅದನ್ನು ಅವರು ಗೊಬ್ಬರವಾಗಿ ಬಳಸಿಕೊಳ್ಳುತ್ತಾರೆ.

ಪರಿಸರ ಸ್ನೇಹಿ ಪ್ರಕ್ರಿಯೆ

ಮೃತ ದೇಹವನ್ನು ಸುಡುವ ಹಾಗೂ ಹೂಳುವಂಥ ಸಾಂಪ್ರದಾಯಿಕ ಪ್ರಕ್ರಿಯೆಗಿಂತ ಡ್ಯೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆ ಹೆಚ್ಚು ಪರಿಸರ ಸ್ನೇಹಿ ಎನ್ನುವುದು ವಿಜ್ಞಾನಿಗಳ ಅಭಿಮತ. ಸಾಂಪ್ರದಾಯಿಕ ಪ್ರಕ್ರಿಯೆಗಳಿಂದ ಉಂಟಾಗುವ ಟನ್‌ಗಳಷ್ಟು ಕಾರ್ಬನ್ ಹೊರಸೂಸುವಿಕೆ ಇದರಿಂದ ಇಲ್ಲವಾಗುತ್ತದೆ.

ಕಾರ್ಬನ್ ಡೈ ಆಕ್ಸೆಡ್ ಹೊರಸೂಸುವಿಕೆ ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವೂ ಹೌದು. ಹೂಮನ್ ಕಾಂಪೋಸ್ಟಿಂಗ್ ಪ್ರಕ್ರಿಯೆಯಲ್ಲಿ ಕಾರ್ಬನ್ ಹೊರಸೂಸುವಿಕೆ

ಶವಪೆಟ್ಟಿಗೆಯಲ್ಲಿ ಮೃತದೇಹ ಇಟ್ಟು ಹೂಳುವ ಸಾಂಪ್ರದಾಯಿಕ ಶವ ಸಂಸ್ಕಾರಕ್ಕೆ ಕಟ್ಟಿಗೆ, ಭೂಮಿ ಕೂಡ ಬೇಕು. ಹೂಮನ್ ಕಾಂಪೋಸ್ಟಿಂಗ್‌ಗೆ ಅವೆಲ್ಲಾ ಬೇಕಿಲ್ಲ. ಅಲ್ಲದೇ ದೊಡ್ಡ ದೊಡ್ಡ ನಗರಗಳಲ್ಲಿ ಶವ ಹೂಳಲು ಭೂಮಿಯ ಕೊರತೆ ಕೂಡ ಇದೆ. ಆದರೆ ಈ ಪ್ರಕ್ರಿಯೆಯಲ್ಲಿ ಅದರ ತಲೆಬಿಸಿ ಇಲ್ಲ.

Continue Reading

Trending

error: Content is protected !!