Connect with us

ಬಂಟ್ವಾಳ

Kalladka Accident ಕಲ್ಲಡ್ಕ : ಕಾರು ಢಿಕ್ಕಿ ಹೊಡೆದು ಪಾದಚಾರಿ ಮೃತ್ಯು – ಪಲ್ಟಿ ಹೊಡೆದ ಕಾರು ಕೂಡ ಚರಂಡಿಗೆ

Ad Widget

Ad Widget

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಪಾದಚಾರಿ ಯುವತಿ ಮೃತಪಟ್ಟ ಘಟನೆ ಇಂದು ಸಂಜೆ ರಾಷ್ಟ್ರೀಯ ಹೆದ್ದಾರಿ 75 ರ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ನಡೆದಿದೆ. ವೀರಕಂಭ ಗ್ರಾಮದ ಬಾಯಿಲ ನಿವಾಸಿ ಶೇಖರ ಪೂಜಾರಿ ಅವರ ಪುತ್ರಿ ಪಾವನ (23) ಮೃತಪಟ್ಟ ಯುವತಿ.

Ad Widget

Ad Widget

Ad Widget

Ad Widget

ಪಾವನ ಬಿಸಿರೋಡಿನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಉದ್ಯೋಗಿ. ಸಂಜೆ ಕೆಲಸ ಬಿಟ್ಟ ಬಳಿಕ ಎಂದಿನಂತೆ ಬಿಸಿರೋಡಿನಿಂದ ಬಸ್ ಮೂಲಕ ಮನೆ ಕಡೆಗೆ ಹೊರಟಿದ್ದಾಳೆ. ಮನೆ ಸಮೀಪದ ಬಸ್ಸು ನಿಲ್ದಾಣವಾದ ದಾಸಕೋಡಿಯಲ್ಲಿ ಸಂಜೆ 6.30ರ ಸುಮಾರಿಗೆ ಇಳಿದಿದ್ದಾರೆ. ಬಳಿಕ ಆಕೆ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Ad Widget

Ad Widget

Ad Widget

ಢಿಕ್ಕಿಯ ರಭಸಕ್ಕೆ ಯುವತಿ ರಸ್ತೆ ಬದಿಯ ತೋಡಿಗೆ ಎಸೆಯಲ್ಪಟ್ಟಿದ್ದು ತುಸು ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕಾರು ಕೂಡ ಪಲ್ಟಿಯಾಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಡಲಾಗಿದೆ.

Ad Widget

ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

Ad Widget

Ad Widget
Continue Reading
Click to comment

Leave a Reply

ಬಂಟ್ವಾಳ

ಬಂಟ್ವಾಳ : ಅಕ್ರಮ-ಸಕ್ರಮ ಹಗರಣದ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತನ ಹತ್ಯೆಗೆ ಯು.ಪಿ ಗೆ ಡೀಲ್ – ಆಡಿಯೋ ವೈರಲ್ : ಪ್ರಕರಣ ದಾಖಲು

Ad Widget

Ad Widget

ಬಂಟ್ವಾಳ: ತಾಲೂಕಿನಲ್ಲಿ ಜಮೀನಿನ ಅಕ್ರಮ-ಸಕ್ರಮ ಭೂಮಂಜೂರಾತಿ ಸಂಬಂಧಿಸಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಎಂಬುವರಿಗೆ ಆರೋಪಿಗಳಿಬ್ಬರು ಅವಾಚ್ಯವಾಗಿ నింದಿಸಿ ಜೀವಬೆದರಿಕೆಯೊಡ್ಡಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಅಕ್ರಮ-ಸಕ್ರಮದ ಭೂ ಮಂಜೂರಾತಿ ಬಗ್ಗೆ ಆರೋಪಿಗಳು ಪದ್ಮನಾಭ ಸಾಮಂತ ಅವರನ್ನು ಹತ್ಯೆ ಸಾಮಾಜಿಕ

Ad Widget

Ad Widget

Ad Widget

ಬಂಟ್ವಾಳ: ತಾಲೂಕಿನಲ್ಲಿ ಜಮೀನಿನ ಅಕ್ರಮ-ಸಕ್ರಮ ಭೂಮಂಜೂರಾತಿ ಸಂಬಂಧಿಸಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಲು ಸರ್ಕಾರಕ್ಕೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಸಾಮಂತ ಎಂಬುವರಿಗೆ ಆರೋಪಿಗಳಿಬ್ಬರು ಅವಾಚ್ಯವಾಗಿ నింದಿಸಿ ಜೀವಬೆದರಿಕೆಯೊಡ್ಡಿದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

ಅಕ್ರಮ-ಸಕ್ರಮದ ಭೂ ಮಂಜೂರಾತಿ ಬಗ್ಗೆ ಆರೋಪಿಗಳು ಪದ್ಮನಾಭ ಸಾಮಂತ ಅವರನ್ನು ಹತ್ಯೆ ನಡೆಸಲು ಉತ್ತರ ಪ್ರದೇಶದ ಯುವಕರನ್ನು ಸೆಟ್ ಮಾಡಿರುವ ಆಡಿಯೋ ವೈರಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget

2018ನೇ ಸಾಲಿನ ಅಕ್ರಮ-ಸಕ್ರಮ ಸಮಿತಿಯ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಮೂಲಕ ಭೂಕಂದಾಯ ನಿಯಮಗಳನ್ನು ಉಲ್ಲಂಘಿಸಿ ಮಾಡಿರುವ ಭೂ ಮಂಜೂರಾತಿಗಳನ್ನು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಂಟ್ವಾಳ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಉತ್ತರ ಪ್ರದೇಶದ ಯುವಕರನ್ನು ಸೆಟ್ ಮಾಡಿರುವ ಆಡಿಯೋ ವೈರಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ.

2018ನೇ ಸಾಲಿನ ಅಕ್ರಮ-ಸಕ್ರಮ ಸಮಿತಿಯ ಭ್ರಷ್ಟಾಚಾರ ಹಾಗೂ ಅವ್ಯವಹಾರದ ಮೂಲಕ ಭೂಕಂದಾಯ ನಿಯಮಗಳನ್ನು ಉಲ್ಲಂಘಿಸಿ ಮಾಡಿರುವ ಭೂ ಮಂಜೂರಾತಿಗಳನ್ನು ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಬಂಟ್ವಾಳ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

Continue Reading

ಬಂಟ್ವಾಳ

Young Boy and Girl Missing: ಅಕ್ಕಪಕ್ಕದ ಮನೆಯ ಕೂಲಿ ಕೆಲಸ ಮಾಡುವ ಯುವಕ ಹಾಗೂ ಫಾರ್ಮಸಿ ವಿದ್ಯಾರ್ಥಿನಿ ಒಂದೇ ದಿನ ಮನೆಯಿಂದ ನಾಪತ್ತೆ – ಬಂಟ್ವಾಳ ಠಾಣೆಯಲ್ಲಿ ದಾಖಲಾಯಿತು 2 ಮಿಸ್ಸಿಂಗ್‌ ಕಂಪ್ಲೈಂಟ್‌

Ad Widget

Ad Widget

ಬಂಟ್ವಾಳ : ಅಕ್ಕಪಕ್ಕದ ಮನೆಯ ಯುವಕ ಮತ್ತು ಯುವತಿ ಒಂದೇ ದಿನ ನಾಪತ್ತೆಯಾದ ಅಚ್ಚರಿಯ ಪ್ರಕರಣವೊಂದು ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗವಾದ ಸಜಿಪ ಮುನ್ನೂರು ಎಂಬಲ್ಲಿ ನಡೆದಿದೆ. ಎರಡು ಕುಟುಂಬದವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು ನಾಪತ್ತೆ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget

ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಪುತ್ರಿ ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು.

Ad Widget

Ad Widget

Ad Widget

ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸಿನಾನ್‌ ಪ್ರಸ್ತು ಕೂಲಿ ಕೆಲಸ ಮಾಡಿಕೊಂಡಿದ್ದು, ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ.

Ad Widget

ಆಯಿಸತ್ ರಸ್ಮಾಳಿಗೆ ಒಂದು ವಾರಗಳ ಕಾಲ ಕಾಲೇಜಿಗೆ ರಜೆಯಿತ್ತು. ಹೀಗಾಗಿ ಆಕೆ ಮನೆಯಲ್ಲಿದ್ದಳು. ನ.22 ರಾತ್ರಿ ಮನೆಯವರ ಜೊತೆ ಮಲಗಿದ್ದ ಈಕೆ ಬೆಳಿಗ್ಗೆ ಎದ್ದು ನೋಡುವಾಗ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿನಾನ್ ಕೂಡ ನ.22. ರಂದು ಮನೆಯವರ ಜೊತೆಗೆ ಮಲಗಿದ್ದು, ನ.23.ರಂದು ಬೆಳಿಗ್ಗೆ ಕಾಣೆಯಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

Ad Widget

Ad Widget

ಅಕ್ಕಪಕ್ಕದ ನಿವಾಸಿಯಾಗಿರುವ ಇವರಿಬ್ಬರು ಪರಿಚಯಸ್ಥರಾಗಿದ್ದು ಸಲುಗೆಯಿಂದ ಇದ್ದರು ಎನ್ನಲಾಗುತ್ತಿದೆ. ಅವರಿಬ್ಬರು ಜತೆಯಾಗಿ ಊರು ಬಿಟ್ಟು ತೆರಳಿದ್ದಾರೆ ಆತ ಒಂದೇ ದಿನ ನಾಪತ್ತೆಯಾಗಿರುವುದು ಕಾಕತಾಳಿಯವೇ ? ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಎರಡು ಮನೆಯವರ ಪೋಷಕರು ಕಾಣೆಯಾದ ಇಬ್ಬರನ್ನು ಹುಡುಕಿಕೊಡುವಂತೆ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Continue Reading

ಬಂಟ್ವಾಳ

Yakshagana | ಯಕ್ಷ ವೇಷದಲ್ಲಿ ಭಿಕ್ಷಾಟನೆ ಮಾಡುತಿದ್ದವನ ಕಂಡು ಗರಂ ಆದ ಅಸಲಿ ಯಕ್ಷಗಾನ ಕಲಾವಿದ..! ವೇಷ ಕಳಚುವವರೆಗೆ ಪಟ್ಟು ಬಿಡದ ‘ಸರಪಾಡಿ’..! ವಿಡಿಯೋ ನೋಡಿ

Ad Widget

Ad Widget

ಬಂಟ್ವಾಳ: ನವರಾತ್ರಿ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ‘ನಕಲಿ ಕಲಾವಿದ’ನನ್ನು ಯಕ್ಷಗಾನದ (Yakshagana) ಅಸಲಿ ಕಲಾವಿದ ತಡೆದು ನಿಲ್ಲಿಸಿ ವೇಷ ಕಳಚಿಸಿ ಕಳುಹಿಸಿಕೊಟ್ಟ ವಿಶೇಷ ಪ್ರಸಂಗ ಬಿ.ಸಿ. ರೋಡಿನಲ್ಲಿ ಶನಿವಾರ ನಡೆದಿದೆ.

Ad Widget

Ad Widget

Ad Widget

Ad Widget

ನಕಲಿ ಯಕ್ಷನ ವೇಷ ಕಳಚಿಸಿದ ಅಸಲಿ ಕಲಾವಿದ ಸರಪಾಡಿ..! ನವರಾತ್ರಿಯ ನೆಪದಲ್ಲಿ ದಾವಣಗೆರೆಯ ವ್ಯಕ್ತಿಯೋರ್ವ ಯಕ್ಷಗಾನದ ‘ವೇಷ’ ಧರಿಸಿ ಬಂಟ್ವಾಳ ಪೇಟೆಯಲ್ಲಿ ಭಿಕ್ಷೆ ಎತ್ತುತಿದ್ದ. ಇದನ್ನು ಗಮನಿಸಿ ಆಕ್ರೋಶಗೊಂಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ವೇಷಧಾರಿಯನ್ನು ತಡೆದು ನಿಲ್ಲಿಸಿ ಸ್ಥಳದಲ್ಲಿಯೇ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

Ad Widget

Ad Widget

Ad Widget

ವೇಷ ಕಳಚುವವರೆಗೂ ಪಟ್ಟು ಬಿಡಲಿಲ್ಲ ಯಕ್ಷಗಾನದ ವೇಷಕ್ಕೆ ತನ್ನದೇ ಆದ ಗೌರವ ಇದೆ. ಅದು ಅನೇಕ ಮಂದಿ ಕಲಾವಿದರಿಗೆ ಬದುಕು ನೀಡಿದೆ. ಯಕ್ಷ ವೇಷ ಧರಿಸಿ ಭಿಕ್ಷೆ ಬೇಡಿ ಯಕ್ಷಗಾನ ಕಲೆಯನ್ನು ಅವಮಾನಿಸುವುದು ಸಮಂಜಸವಲ್ಲ ಎಂದ ಅವರು, ತಕ್ಷಣ ವೇಷ ಕಳಚುವಂತೆ ಒತ್ತಾಯಿಸಿದ್ದಲ್ಲದೆ ವೇಷ ಕಳಚುವವರೆಗೂ ಪಟ್ಟು ಹಿಡಿದರು.ಯಕ್ಷಗಾನ ಬಟ್ಟೆ ಬಾಡಿಗೆ ನೀಡಿದವರ ವಿವರ ಕೇಳಿದರು.

Ad Widget

ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಕೊನೆಗೂ ಅಸಲಿ ಯಕ್ಷಗಾನ ಕಲಾವಿದನ ಆಕ್ರೋಶಕ್ಕೆ ಮಣಿದು ವೇಷ ಕಳಚಿದ. ಅಶೋಕ್ ಶೆಟ್ಟಿಯವರ ನಡೆಗೆ ಯಕ್ಷ ಪ್ರೇಮಿಗಳು ಹಾಗೂ ಕಲಾವಿದರಿಂದ ಪ್ರಶಂಸೆ ವ್ಯಕ್ತವಾಗಿದೆ.

Ad Widget

Ad Widget

ಕರಾವಳಿಯ ಗಂಡುಕಲೆ ಎಂದೇ ಖ್ಯಾತಿಯಾದ ಯಕ್ಷಗಾನಕ್ಕೆ ಕರಾವಳಿ ಭಾಗದಲ್ಲಿ ತನ್ನದೇ ಆದ ಮಹತ್ವ, ಗೌರವವಿದೆ. ಈ ಹಿಂದೆ ದೇವರ ವೇಷ ಧರಿಸಿ , ಧರ್ಮಕ್ಕೆ ಅಪಮಾನ ಆಗುವ ರೀತಿ ವೇಷ ಧರಿಸಿ ಬಿಕ್ಷಾಟನೆ ಮಾಡುವುದು ನಿಷೇಧವಾಗಿದೆ. ಇತ್ತಿಚೆಗೆ ಕೊರಗ ವೇಷ ಹಾಕುವುದು ಶಿಕ್ಷಾರ್ಹ ಅಪರಾಧ ಎಂಬ ನಿಯಮ ಜಾರಿಯಾಗಿದೆ.

ಈಗ ರಕ್ಕಸರ ವೇಷ ಧರಿಸಿ ಹೊರ ಊರಿನಿಂದ ಬಂದು ಬಿಕ್ಷಾಟನ ಮಾಡುವ ಬಹುದೊಡ್ಡ ತಂಡವೇ ಹಲವು ಕಡೆ ಕಾರ್ಯನಿರ್ವಹಿಸುತ್ತಿದೆ. ವೇಷ ಧರಿಸುವವರಿಗೂ ಇಲ್ಲಿಯ ನಂಬಿಕೆಗಳ ಬಗ್ಗೆ ಅರಿವಿಲ್ಲದಿರುವುದೇ ಪ್ರಮುಖ ಕಾರಣವಾಗಿದೆ.

ವಿಡಿಯೋ ನೋಡಿ:

Continue Reading

Trending

error: Content is protected !!