Connect with us

ಬಿಗ್ ನ್ಯೂಸ್

ಲೋಕಸಭಾ ಚುನಾವಣೆಗೆ ಇನ್ನೊಂದೇ ಮೆಟ್ಟಿಲು – ಮಹತ್ವದ ಬೆಳವಣಿಗೆಯಲ್ಲಿ ಪಂಚ ರಾಜ್ಯ ಚುನಾವಣೆ ಘೋಷಣೆ – ಡಿ.3ರಂದು ಫಲಿತಾಂಶ

Ad Widget

Ad Widget

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

Ad Widget

Ad Widget

Ad Widget

Ad Widget

ಛತ್ತೀಸ್‌ಗಢ, ಮಧ್ಯಪ್ರದೇಶ, ಮಿಜೋರಾಂ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.

Ad Widget

Ad Widget

Ad Widget

4 ರಾಜ್ಯಗಳಲ್ಲಿ ಒಂದೇ ಹಂತ, ಛತ್ತೀಸ್ ಘಡದಲ್ಲಿ 2 ಹಂತದಲ್ಲಿ ಮತದಾನ
ಇನ್ನು ಮಿಜೋರಾಂ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನಕ್ಸಲ್ ಸಂಘರ್ಷ ಪೀಡಿತ ಛತ್ತೀಸ್ ಘಡದಲ್ಲಿ ಮಾತ್ರ 2 ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ಯೋಜಿಸಿದೆ. ಅದರಂತೆ ಮಿಜೋರಾಂ ನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದ್ದು, ಛತ್ತೀಸ್ ಘಡದಲ್ಲಿ ನವೆಂಬರ್ 7 ಮತ್ತು 17ರಂದು 2 ಹಂತದಲ್ಲಿ ಮತದಾನ ನಡೆಯಲಿದೆ. ಉಳಿದಂತೆ ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು, ರಾಜಸ್ಥಾನದಲ್ಲಿ ನವೆಂಬರ್ 23ರಂದು ಮತ್ತು ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Ad Widget

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, “ಮಿಜೋರಾಂ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯುವ ಚುನಾವಣೆಯಲ್ಲಿ ಒಟ್ಟು 8.2 ಕೋಟಿ ಪುರುಷ ಮತ್ತು 7.8 ಕೋಟಿ ಮಹಿಳಾ ಮತದಾರರು ಇರಲಿದ್ದಾರೆ. ಈ ಪೈಕಿ 60.2 ಲಕ್ಷ ಮಂದಿ ಮೊದಲ ಬಾರಿಗೆ ಮತದಾರರಾಗಿದ್ದಾರೆ” ಎಂದು ಹೇಳಿದರು.

Ad Widget

Ad Widget

ಅಂತೆಯೇ ಐದು ವಿಧಾನಸಭಾ ಚುನಾವಣೆಗೆ ಮುನ್ನ ನಾವು ರಾಜಕೀಯ ಪಕ್ಷಗಳು ಮತ್ತು ಜಾರಿ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರು, ರಾಜಕೀಯ ಪಕ್ಷಗಳ ವಕ್ತಾರರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಚುನಾವಣಾ ಆಯುಕ್ತರು ನೀಡಿರುವ ಮಾಹಿತಿಯಂತೆ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17ಗೆ ಕೊನೆಗೊಳ್ಳಲ್ಲಿದ್ದು, ಛತ್ತೀಸ್ಗಢ ವಿಧಾನಸಭೆ ಅವಧಿ ಜನವರಿ 3, ಮಧ್ಯಪ್ರದೇಶ ವಿಧಾನಸಭೆ ಅವಧಿ ಜನವರಿ 8, ರಾಜಸ್ಥಾನ ವಿಧಾನಸಭೆ ಅವಧಿ ಜನವರಿ 14 ಮತ್ತು ತೆಲಂಗಾಣ ವಿಧಾನಸಭೆ ಅವಧಿಯು ಜನವರಿ 18ಕ್ಕೆ ಕೊನೆಗೊಳ್ಳಲಿದೆ.

ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳು, ಛತ್ತೀಸ್‌ಗಢದ- 90 ಸ್ಥಾನಗಳು, ರಾಜಸ್ಥಾನದ 200 ಸ್ಥಾನಗಳು, ತೆಲಂಗಾಣದ 119 ಸ್ಥಾನಗಳು ಮತ್ತು ಮಿಜೋರಾಂನ 90 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾರರು ಅಕ್ಟೋಬರ್ 17 ರಿಂದ ನವೆಂಬರ್ 30 ರವರೆಗೆ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ನವೀಕರಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅಂತೆಯೇ 5 ರಾಜ್ಯಗಳಲ್ಲಿ 1.77 ಲಕ್ಷ ಮತಗಟ್ಟೆಗಳು ಮತ್ತು 1.01 ಲಕ್ಷ ಮತಗಟ್ಟೆಗಳು ವೆಬ್ ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ ಎಂದು ಅವರು ಮಾಹಿತಿ ನೀಡಿದರು.

ಚುನಾವಣೆ ನಡೆಯುವ ಈ ಐದು ರಾಜ್ಯಗಳಲ್ಲಿ 940 ಕ್ಕೂ ಹೆಚ್ಚು ಅಂತರ-ರಾಜ್ಯ ಗಡಿ ಚೆಕ್ ಪೋಸ್ಟ್‌ ಗಳನ್ನು ನಿರ್ಮಿಸಲಾಗುತ್ತಿದ್ದು, ಆ ಮೂಲಕ ನಾವು ಯಾವುದೇ ಅಕ್ರಮ ನಗದು, ಮದ್ಯ, ಉಚಿತ ವಸ್ತುಗಳು ಮತ್ತು ಮಾದಕ ವಸ್ತುಗಳ ಗಡಿಯಾಚೆಗಿನ ಚಲನೆಯನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು

Click to comment

Leave a Reply

ಸಿನೆಮಾ

  Lakshmika Sajeevan ಹಠಾತ್‌ ಹೃದಯಾಘಾತ – 24ರ ಹರೆಯದ  ಮಲಯಾಳಂ ನಟಿ ಲಕ್ಷ್ಮಿಕಾ  ಸಜೀವನ್ ಮೃತ್ಯು

Ad Widget

Ad Widget

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.

Ad Widget

Ad Widget

Ad Widget

Ad Widget

ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

Ad Widget

Ad Widget

Ad Widget

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Ad Widget

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

Ad Widget

Ad Widget
Continue Reading

ಸುಳ್ಯ

 Kukke subrahmnya Temple ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಗಮನಕ್ಕೆ :  ಡಿ.8ರಿಂದ 24ರ ತನಕ ಕ್ಷೇತ್ರದಲ್ಲಿ ಪ್ರಧಾನ ಸೇವೆ ಸಹಿತ ಹಲವು ಸೇವೆಗಳು ಅಲಭ್ಯ,  ವ್ಯತ್ಯಯ – ಇಲ್ಲಿದೆ ಮಾಹಿತಿ

Ad Widget

Ad Widget

ಶ್ರೀ ಕ್ಷೇತ್ರದ  ಜಾತ್ರೋತ್ಸವದ ಹಿನ್ನಲೆ ಇಲ್ಲಿನ  ಪ್ರಧಾನ ಸೇವೆಗಳಲ್ಲಿ  ಒಂದಾದ ಸರ್ಪ ಸಂಸ್ಕಾರವು ಡಿ.8ರಿಂದ 24ರ ತನಕ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವೊಂದು ಸೇವೆಗಳು ನೆರವೇರುವುದಿಲ್ಲ. ಭಕ್ತಾದಿಗಳು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.  

Ad Widget

Ad Widget

Ad Widget

Ad Widget

ಪ್ರಾರ್ಥನೆ, ಆಶ್ಲೇಷ ಬಲಿ ಸೇವೆಯಲ್ಲಿ ವ್ಯತ್ಯಯ:

Ad Widget

Ad Widget

Ad Widget

ಲಕ್ಷದೀಪೋತ್ಸವ (ಡಿ.12), ಚೌತಿ (ಡಿ.16), ಪಂಚಮಿ (ಡಿ.17) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.18) ದಿನದಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ನೆರವೇರುವುದಿಲ್ಲ.

Ad Widget

 ಲಕ್ಷದೀಪೋತ್ಸವ (ಡಿ.12), ಚೌತಿ  (ಡಿ.16), ಪಂಚಮಿ (ಡಿ.18) ಮತ್ತು ಕೊಪ್ಪರಿಗೆ ಇಳಿಯುವ ದಿನ (ಡಿ.24) ದಂದು ಮಹಾಭಿಷೇಕ ಸೇವೆ ನಡಯುವುದಿಲ್ಲ. ಡಿ.10ರಿಂದ ಡಿ.24ರ ತನಕ ಸಾಯಂಕಾಲದ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

Ad Widget

Ad Widget

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

ಚಂಪಾಷಷ್ಠಿ ಜಾತ್ರೋತ್ಸವವು ಡಿ.10 ರಿಂದ 24ರ ತನಕ ನಡೆಯಲಿದ್ದು, ಜಾತ್ರೋತ್ಸವದ ಪ್ರಧಾನ ದಿನಗಳಾದ ಲಕ್ಷದೀಪ, ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಾತ್ರ ಕೆಲವೊಂದು ಸೇವೆಗಳನ್ನು ನೆರವೇರಿಸಲು ಅವಕಾಶಗಳು ಇರುವುದಿಲ್ಲ. ಆದರೆ ಇತರ ದಿನಗಳಲ್ಲಿ ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಜೆ, ತುಲಾಭಾರ, ನಾಗಪ್ರತಿಷ್ಠೆ ಮೊದಲಾದುವುಗಳು ಎಂದಿನಂತೆ ನೆರವೇರಲಿದೆ. ಸರ್ಪಸಂಸ್ಕಾರ ಮತ್ತು ಸಂಜೆಯ ಆಶ್ಲೇಷ ಬಲಿ ಸೇವೆಗಳು ಮಾತ್ರ ಡಿ.24ರ ತನಕ ನೆರವೇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.9 ದರುಶನದಲ್ಲಿ ವ್ಯತ್ಯಯ: ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯು ಪವಿತ್ರ ಕಾರ್ಯದ ಕಾರಣ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ, 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Continue Reading

ಸುಳ್ಯ

Kukke Shri Subrahmanya Temple ದಕ್ಷಿಣ  ಭಾರತದ ಪ್ರಸಿದ್ದ ನಾಗಕ್ಷೇತ್ರದಲ್ಲಿ ನಾಳೆ (ಡಿ 9) ಮೂಲ ಮೃತಿಕಾ  ಪ್ರಸಾದ ವಿತರಣೆ – ಇಲ್ಲಿದೆ  ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಈ  ಪ್ರಸಾದದ ಮಹತ್ವ  

Ad Widget

Ad Widget

Kukke Shri Subrahmanya Temple ಡಿಸೆಂಬರ್ 06;  ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವಾರಾಂತ್ಯದಲ್ಲಿ  ದರ್ಶನ ಮತ್ತು ವಿವಿಧ ಸೇವೆಗಳು ಅರ್ಧ ದಿನದ ಕಾಲ ಲಭ್ಯವಿರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.  

Ad Widget

Ad Widget

Ad Widget

Ad Widget

ದೇವಳದಲ್ಲಿ 2023-24ನೇ ಸಾಲಿನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಪೂರಕವಾಗಿ ಡಿ.9ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ಇರಲಿದೆ. ಈ ಹಿನ್ನಲೆಯಲ್ಲಿ ಆ ದಿನ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆಯ ತನಕ ದೇವರ ದರುಶನ ಹಾಗೂ ಸೇವಾದಿಗಳನ್ನು ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ

Ad Widget

Ad Widget

Ad Widget

ಕುಕ್ಕೆ ಸುಬ್ರಮಣ್ಯದಲ್ಲಿ “ಮೂಲಮೃತಿಕಾ” ಪ್ರಸಾದಕ್ಕೆ ಹೆಚ್ಚಿನ ಮಹತ್ವವಿದೆ. ಮೂಲಸ್ಥಾನವಾದ ಕುಕ್ಕೆ ಸುಬ್ರಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಪ್ರಸಾದ. ಯಾವುದೇ ದೇವಾಲಯದಲ್ಲಿ ಸಹ ಈ ಮಾದರಿ ಪ್ರಸಾದ ಸಿಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ಪ್ರಸಾದ ತೆಗೆಯಲಾಗುತ್ತದೆ.

Ad Widget

ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೂಲಮೃತಿಕಾ ಪ್ರಸಾದವನ್ನು ತೆಗೆದು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ ಶಕ್ತಿ ಹೊಂದಿದೆ ಎಂಬುದು ಭಕ್ತರ ನಂಬಿಕೆಯಾಗಿದೆ.  ಈ ಮೃತ್ತಿಕೆ ಪ್ರಸಾದ ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.

Ad Widget

Ad Widget

ಸಾವಿರಾರು ಭಕ್ತರು ಮೂಲಮೃತಿಕಾ ಪ್ರಸಾದವನ್ನು ತೆಗೆದುಕೊಂಡು ಹೋಗಲು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಶುಭ ಕಾರ್ಯಗಳ ಸಂದರ್ಭದಲ್ಲಿ, ರೋಗಗಳ ನಿವಾರಣೆಗೆ ಸಹ ಈ ಪ್ರಸಾದವನ್ನು ಬಳಕೆ ಮಾಡುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಕರ್ನಾಟಕ ರಾಜ್ಯದ ಸುಬ್ರಹ್ಮಣ್ಯಂ ಗ್ರಾಮದಲ್ಲಿ ಬರುತ್ತದೆ. ಪ್ರಕೃತಿಯ ಸೌಂದರ್ಯದಲ್ಲಿ ನೆಲೆಸಿರುವ ಈ ಭವ್ಯವಾದ  ದೇವಾಲಯವು ಗ್ರಾಮದ ಹೃದಯಭಾಗದಲ್ಲಿದೆ. ಪ್ರಕೃತಿ ನದಿಗಳು, ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ಈ ದೇವಾಲಯವು ತನ್ನ ಅನನ್ಯ ಸೌಂದರ್ಯವನ್ನು ಬಹಿರಂಗಪಡಿಸುತ್ತದೆ .ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ.

Continue Reading

Trending

error: Content is protected !!