Connect with us

ರಾಷ್ಟ್ರೀಯ

Shabari Male: ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಕರಣ ; ಸುಪ್ರೀಂ ಕೋರ್ಟ್ ನಲ್ಲಿ ಮಹತ್ವದ ಬೆಳವಣಿಗೆ

Ad Widget

Ad Widget

ಕಾಸರಗೋಡು: ಶಬರಿಮಲೆ‌ ಮಹಿಳೆಯ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ವಿಚಾರಣೆ ಆರಂಭಿಸುವ ಕುರಿತು ಸುಪ್ರೀಂ ಕೋರ್ಟ್ ಅ.12 ರಂದು ನಿರ್ಧರಿಸಲಿದೆ. ಸಂವಿಧಾನ ಪೀಠಗಳ ಪರಿಗಣನೆಯಲ್ಲಿರು ವಈ ಪ್ರಕರಣಗಳನ್ನು ಮುಂದಿನ ವಾರ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶುಕ್ರವಾರ ವ್ಯಕ್ತಪಡಿಸಿದ್ದಾರೆ.

Ad Widget

Ad Widget

Ad Widget

Ad Widget

ಐದು ಮಂದಿ ಸದಸ್ಯರ ಸಂವಿಧಾನ ನ್ಯಾಯ ಪೀಠ ವಿವಿಧ ವಿಷಯಗಳ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ನೀಡಲಿದೆ. ಇದಾದ ಬಳಿಕ 7, 9 ಸದಸ್ಯರ ನ್ಯಾಯ ಪೀಠದ ಪರಿಗಣನೆಯಲ್ಲಿರುವ ಪ್ರಕರಣಗಳನ್ನು ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಇನ್ನೊಂದು ಪ್ರಕರಣವನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

Ad Widget

Ad Widget

Ad Widget

ಶಬರಿಮಲೆ ಮಹಿಳೆಯರ ಪ್ರವೇಶ ಪ್ರಕರಣ 9 ಸದಸ್ಯರ ನ್ಯಾಯ ಪೀಠದ ಪರಿಶೀಲನೆಯಲ್ಲಿದೆ. ವಿವಿಧ ಪ್ರಕರಣಗಳು ಈ ಪೀಠದ ಪರಿಗಣನೆಗೆ ಬಂದಾಗ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣವನ್ನೂ ಸೇರಿಸಲಾಗುವುದು ಎಂದು ಸೂಚಿಸಲಾಗಿದೆ.

Ad Widget

ಈ ಮೊದಲು 7 ಸದಸ್ಯರ ಪೀಠದ ಪರಿಗಣನೆಗೆ ಬಂದಿದ್ದ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪನ್ನು ಮುಂದೂಡಲಾಗಿತ್ತು.ಇನ್ನೂ ಕೆಲವು ಅರ್ಜಿಗಳು ಪೀಠದ ಮುಂದೆ ಬಾಕಿ ಇವೆ.ಈ ವಿಷಯದಲ್ಲಿ ವಾದಗಳನ್ನು ಪೂರ್ಣಗೊಳಿಸಿದ ಬಳಿಕ 9 ಸದಸ್ಯರ ನ್ಯಾಯ ಪೀಠದ ಮುಂದೆ ಇರುವ ಪ್ರಕರಣಗಳತ್ತ ಸುಪ್ರೀಂ ಕೋರ್ಟ್ ಮುಂದುವರಿಯಲಿದೆ‌.

Ad Widget

Ad Widget

ಸಿನೆಮಾ

  Lakshmika Sajeevan ಹಠಾತ್‌ ಹೃದಯಾಘಾತ – 24ರ ಹರೆಯದ  ಮಲಯಾಳಂ ನಟಿ ಲಕ್ಷ್ಮಿಕಾ  ಸಜೀವನ್ ಮೃತ್ಯು

Ad Widget

Ad Widget

ಚಲನಚಿತ್ರ ಹಾಗೂ ಟೆಲಿಫಿಲ್ಮ್ʼ ಗಳ ನಟನೆಯ ಮೂಲಕ ಮನೆಮಾತಾಗಿದ್ದ ಮಲಯಾಳಂ ನಟಿ (Mollywood Actress) ಲಕ್ಷ್ಮಿಕಾ ಸಜೀವನ್ (Lakshmika Sajeevan) ಅವರು ಹಠಾತ್ ಅಸ್ವಸ್ಥಗೊಂಡು ಶಾರ್ಜಾದಲ್ಲಿ ನಿಧನರಾದರು. 24ರ ಹರೆಯದ ಉದಯೋನ್ಮುಖ ಪ್ರತಿಭೆ ಹಠಾತ್ ಹೃದಯಘಾತಕ್ಕೆ (Heart Attack) ತುತ್ತಾಗಿ ಮೃತಪಟ್ಟಿರುವುದಾಗಿ ವರದಿ ತಿಳಿಸಿವೆ.

Ad Widget

Ad Widget

Ad Widget

Ad Widget

ಶೋಷಿತ ಸಮುದಾಯಗಳ ಹೋರಾಟಗಳ ಮೇಲೆ ಬೆಳಕು ಚೆಲ್ಲುವ ಸಿನಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದ ಟೆಲಿಫಿಲ್ಮ್ ‘ಕಕ್ಕ’ದಲ್ಲಿ ಪಂಚಮಿಯ ಪಾತ್ರ ಲಕ್ಷ್ಮಿಕಾಗೆ ಭಾರೀ ಜನಪ್ರಿಯತೆ ತಂದು ಕೊಟ್ಟಿತ್ತು. ಅದರಲ್ಲಿ ಆಕೆ ಮನೋಜ್ಞವಾಗಿ ನಟಿಸಿದ್ದು, ಚಿತ್ರದಲ್ಲಿನ ಆಕೆಯ ಅಭಿನಯವು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಪಾತ್ರದ ನಟನೆಗೆ ಪ್ರೇಕ್ಷಕರಿಂದ ಲೂ ಭರಫುರ ಮನ್ನಣೆ ಮತ್ತು ಮೆಚ್ಚುಗೆ ದೊರಕಿತ್ತು.

Ad Widget

Ad Widget

Ad Widget

ದುಲ್ಕರ್ ಸಲ್ಮಾನ್ ಅವರ ‘ಒರು ಯಮಂದನ್ ಪ್ರೇಮಕಥಾ,’ ‘ಪಂಚವರ್ಣತಥಾ,’ ‘ಸೌದಿ ವೆಲ್ಲಕ್ಕ,’ ‘ಪುಜಯಮ್ಮ,’ ‘ಉಯರೆ,’ ‘ಒರು ಕುಟ್ಟನಾಡನ್ ಬ್ಲಾಗ್,’ ಮತ್ತು ‘ನಿತ್ಯಹರಿತ ನಾಯಕನ್’ ಆಕೆ ನಟಿಸಿದ ಪ್ರಮುಖ ಸಿನಿಮಾಗಳು. ಕೊಚ್ಚಿಯ ವಜವೇಲಿಲ್ ಮೂಲದ ಲಕ್ಷ್ಮಿಕಾ ಶಾರ್ಜಾದ ಬ್ಯಾಂಕಿಂಗ್ ಕ್ಷೇತ್ರದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

Ad Widget

ಪ್ರಶಾಂತ್ ಬಿ ಮೊಲಿಕಲ್ ನಿರ್ದೇಶನದ ಮತ್ತು ಅಮಲ್ ಮೋಹನ್ ಬರೆದ ಥ್ರಿಲ್ಲರ್ ‘ಕೂನ್’ ಚಿತ್ರದಲ್ಲಿ ಲಕ್ಷ್ಮಿಕಾ ನಟಿಸಿದ್ದರು. ವಿಜೀಶ್ ಮಣಿ ನಿರ್ದೇಶನದ ‘ಪುಳಯಮ್ಮ’ ನಾಟಕ ಚಿತ್ರದಲ್ಲಿನ ದೇವಯಾನಿ ಟೀಚರ್ ಪಾತ್ರಕ್ಕಾಗಿ ಅವರು ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದರು.

Ad Widget

Ad Widget
Continue Reading

ಅಪರಾಧ

Dowry Harasment: ʼಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಡೆತ್ ನೋಟ್ ಬರೆದಿಟ್ಟು ವರದಕ್ಷಿಣೆ ಕಿರುಕುಳಕ್ಕೆ ಒಳಗಾದ ಯುವ ವೈದ್ಯೆ ಆತ್ಮಹತ್ಯೆ – ಅಷ್ಟಕ್ಕೂ ವರನ ಮನೆಯವರು ಇಟ್ಟ ಡಿಮ್ಯಾಂಡ್ ಎಷ್ಟು ಗೊತ್ತೆ ?

Ad Widget

Ad Widget

ತಿರುವನಂತಪುರಂ : ಕಳೆದ ವರ್ಷ ಕೇರಳದಲ್ಲಿ ದೊಡ್ಡ ಅಭಿಯಾನಕ್ಕೆ ಕಾರಣವಾಗಿದ್ದ ವರದಕ್ಷಿಣೆ ಕಿರುಕುಳ ಮತ್ತೆ ಆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಎರಡು ದಿನಗಳ ಹಿಂದೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಕೇರಳದ (Kerala) ಯುವ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು. ಮೃತಳನ್ನು ಶಹನಾ (Shahana) (26) ಎಂದು ಗುರುತಿಸಲಾಗಿದೆ̤ ಈಕೆಯ ಆತ್ಮಹತ್ಯೆಗೆ ಪ್ರಚೊಧನೆ ನೀಡಿದ ಆರೋಪದಡಿ ಆಕೆಯ ಬಾಯ್ ಫ್ರೆಂಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Ad Widget

Ad Widget

Ad Widget

Ad Widget


ಶಹಾನಾ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಪಿಜಿ ವಿದ್ಯಾರ್ಥಿನಿ. ಈಕೆಯ ಮೃತ ದೇಹ ಮಂಗಳವಾರ ಬೆಳಗ್ಗೆ ಕಾಲೇಜ್ ಬಳಿಯ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿದೆ. ಡಾ. ಸಹನಾ, ತಮ್ಮ ತಾಯಿ ಮತ್ತು ಇಬ್ಬರು ಒಡಹುಟ್ಟಿದವರ ಜತೆ ವಾಸವಿದ್ದರು. ಗಲ್ಫ್ನಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರು ಡಾ. ಇಎ ರುವಾಯಿಸ್ನನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.
ಬಳಿಕ ಆ ಯುವಕನ ಕುಟುಂಬ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ ಹಿನ್ನಲೆಯಲ್ಲಿ ಅ ಮದುವೆ ಮುರಿದು ಬಿದ್ದಿತ್ತು. ಇದರಿಂದ ಮಾನಸಿಕ ಖಿನ್ನತೆ ಅನುಭವಿಸಿದ ಅಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಸಂಬಂಧಿಕರು ಆರೋಪಿಸಿದ್ದಾರೆ. ಈ ವಿಚಾರ ಕೇರಳದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಅವರು ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
ತರುವಾಯ, ವೈದ್ಯಕೀಯ ಕಾಲೇಜು ಪೊಲೀಸರು ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಶಹಾನಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅದೇ ಸಂಸ್ಥೆಯಲ್ಲಿ ಪಿಜಿ ವಿದ್ಯಾರ್ಥಿಯಾಗಿರುವ ಯುವಕ ಪ್ರಕರಣದ ಆರೋಪಿ. ಈತ ಮೂಳೆ ಚಿಕಿತ್ಸೆಯಲ್ಲಿ ಪಿಜಿ ಮಾಡುತ್ತಿರುವ ವೈದ್ಯ.ಈತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವರದಕ್ಷಿಣೆಗಾಗಿ ಕಿರುಕುಳ ಪ್ರಕರಣ ದಾಖಲಾಗಿದೆ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾವು ದಾಖಲಿಸಿಕೊಂಡಿರುವ ವಿವಿಧ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿದೆ. ಆ ಬಳಿಕವಷ್ಟೇ ಯುವಕನ ಬಂಧನ ಸೇರಿದಂತೆ ಮುಂದಿನ ಪ್ರಕ್ರಿಯೆಗಳ ಕುರಿತಾಗಿ ನಿರ್ಧರಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಶಹನಾ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಶಹಾನಾ ಅವರ ಕುಟುಂಬಸ್ಥರು ದೂರು ನೀಡಿದ ಬಳಿಕ ಅದರಂತೆ ಐಪಿಸಿ ಸೆಕ್ಷನ್ಗಳನ್ನು ಬದಲಾಯಿಸಿದರು.

Ad Widget

Ad Widget

Ad Widget

ವರದಕ್ಷಿಣೆಯಾಗಿ 150 ಪವನ್ ಚಿನ್ನ, ಐಷಾರಾಮಿ BMW ಕಾರು ಮತ್ತು 15 ಎಕ್ರೆ ಜಮೀನು ನೀಡುವಂತೆ ಆರೋಪಿ ಕುಟುಂಬ ಬೇಡಿಕೆಯಿಟ್ಟಿತ್ತು. ಆದರೆ, ಶಹನಾಳ ಮನೆಯವರಿಗೆ ಅಷ್ಟು ದೊಡ್ಡ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ . ಈ ಬಳಿಕ ವೈದ್ಯಕೀಯ ಪಿಜಿ ವೈದ್ಯರ ಸಂಘದ ಪ್ರತಿನಿಧಿಯೂ ಆಗಿದ್ದ ಆರೋಪಿ ವೈದ್ಯ ಶಹಾನಾ ಜೊತೆಗಿನ ಸಂಬಂಧವನ್ನು ಕಡಿತಗೊಳಿಸಿದ್ದಾನೆ.
ಪೊಲೀಸರು ಮೃತಳು ವಾಸ್ತವ್ಯವಿದ್ದ ಕೊಠಡಿಯಿಂದ ಡೆತ್ ನೋಟ್ ಅನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ “ಪ್ರತಿಯೊಬ್ಬರಿಗೂ ಹಣ ಬೇಕು ಮತ್ತು ಹಣ ಎಲ್ಲಕ್ಕಿಂತ ಪರಮೊಚ್ಚʼ ಎಂದು ಬರೆದು ಕೊಂಡಿದ್ದಾಳೆ . ತಾನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಗೆಳೆಯನ ಜತೆ ಮದುವೆಗೆ ಸಿದ್ಧತೆ ನಡೆಸಿದ್ದ ಡಾ. ಸಹನಾಗೆ ಇದು ಭಾರಿ ಆಘಾತ ಉಂಟುಮಾಡಿತ್ತು. ಇದರಿಂದ ತೀವ್ರ ನೊಂದಿದ್ದ ಸಹನಾ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಮತ್ತು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ

Ad Widget
Continue Reading

ರಾಷ್ಟ್ರೀಯ

Divorce under Hindu Marriage Act : ಹಿಂದು ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ʼಈʼ ನಿಯಮ ಪಾಲನೆ ಕಡ್ಡಾಯ – ಕೊರ್ಟು ಮಹತ್ವದ ಆದೇಶ ; ಏನದು ನಿಯಮ ?

Ad Widget

Ad Widget

ಬೆಂಗಳೂರು: ಹಿಂದು ವಿವಾಹ ಕಾಯ್ದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಏಕಾಏಕಿ ವಜಾಗೊಳಿಸದೆ 18 ತಿಂಗಳು ಕಾಯಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ ವಿಚ್ಛೇದನದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ಕೋರ್ಟ್ ಆದೇಶವನ್ನು ರದ್ದು ಮಾಡಿದ ನ್ಯಾ.ಕೆ.ಎಸ್. ಮುದ್ಗಲ್, ನ್ಯಾ ಕೆ.ವಿ.ಅರವಿಂದ ಅವರಿದ್ದ ಪೀಠವು ದಂಪತಿಗೆ ಮಧ್ಯಸ್ಥಿಕೆ ಕೇಂದ್ರ ಸಂರ್ಪಕಿಸಲು ಸೂಚಿಸಿದೆ.
ಮಧ್ಯಸ್ಥಿಕೆ ಕೇಂದ್ರ ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿಯನ್ನು ಇತ್ಯರ್ಥ ಪಡಿಸಬಹುದು ಎಂದು ಆದೇಶಿಸಿದೆ. ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ಅರ್ಜಿಯನ್ನು ವಜಾಗೊಳಿಸಬಾರದು ಎಂದೂ ಸಹ ಪೀಠ ಹೇಳಿದೆ.
ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅನ್ವಯ, ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಸೂಚನೆಗಳನ್ನು ಪಾಲಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

Ad Widget

Ad Widget

Ad Widget

Ad Widget
  1. 1ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪಕ್ಷಗಾರರು ಜತೆಯಲ್ಲಿ ವಾಸ ಮಾಡುವಂತಿಲ್ಲ
  2. ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು
  3. ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯದ ಮುಂದೆ ಮಂಡಿಸುವಂತಿಲ್ಲ
    ಆದರೆ, ಈ ಪ್ರಕರಣದಲ್ಲಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಅದಕ್ಕೂ ಹೆಚ್ಚಾಗಿ ಸೆಕ್ಷನ್ 13 ಬಿ(2) ನಿಯಮದ ಪಾಲನೆ ಆಗಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿದೆ.
    ಪ್ರಕರಣದ ಹಿನ್ನೆಲೆ:
    ಅರ್ಜಿದಾರ ದಂಪತಿ 2020ರ ನ.27ರಂದು ಮದುವೆಯಾಗಿದ್ದರು ಮತ್ತು ಅವರು 2021ರ ಸೆ. ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇಬ್ಬರೂ ವಿವಾಹ ಬಂಧನ ಕಡಿದುಕೊಳ್ಳಲು ಹಿಂದು ವಿವಾಹ ಕಾಯ್ದೆ ಸೆಕ್ಷನ್ 13ಬಿ ಅನ್ವಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿತ್ತು
    ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ. ಹಾಗಾಗಿ ಮಧ್ಯಸ್ಥಿಕೆ ಕೇಂದ್ರದ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ, ದಂಪತಿಗೆ ಈ ಪ್ರಕರಣ ಮುನ್ನಡೆಸಲು ಆಸಕ್ತಿ ಇಲ್ಲ ಎಂದು ದಾಖಲಿಸಿ ಕೇಸ್ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು
    ಆದರೆ, ಈ ಪ್ರಕರಣದಲ್ಲಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಅದಕ್ಕೂ ಹೆಚ್ಚಾಗಿ ಸೆಕ್ಷನ್ 13 ಬಿ(2) ನಿಯಮದ ಪಾಲನೆ ಆಗಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿದೆ.
Continue Reading

Trending

error: Content is protected !!