Connect with us

ಕ್ರೈಂ

ಶಿವಮೊಗ್ಗದಲ್ಲಿ ಪ್ರಚೋದನಾತ್ಮಕ ಹೇಳಿಕೆ ಮತ್ತು ನಿಷೇಧಾಜ್ಞೆ ಉಲ್ಲಂಘನೆ – ಅರುಣ್‌ ಪುತ್ತಿಲ ವಿರುದ್ದ ಸುಮೋಟೊ ಪ್ರಕರಣ

Ad Widget

Ad Widget

ಶಿವಮೊಗ್ಗ: ಕಳೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿಡಿದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದ , ಪ್ರಭಾವಿ ಹಿಂದೂ ಮುಖಂಡ ಅರುಣ್ ಪುತ್ತಿಲ ವಿರುದ್ದ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget

Ad Widget

Ad Widget

Ad Widget

ಪುತ್ತಿಲರವರು ಶುಕ್ರವಾರ ಗಲಭೆ ಪೀಡಿತ ರಾಗಿಗುಡ್ಡಕ್ಕೆ ಭೇಟಿ ನೀಡಿದ್ದರು . ಈ ವೇಳೆ ಮಾದ್ಯಮಗಳ ಜತೆ ಮಾತನಾಡುತ್ತಾ” ಹಿಂದೂಗಳು ಮನೆಯಲ್ಲಿ ತಲ್ವಾರ್ ಒಟ್ಟುಕೊಳ್ಳಬೇಕು, ಆಯುಧ ಪೂಜೆ ದಿನ ಪೂಜೆ ಮಾಡಬೇಕು. ಮತಾಂಧರಿಗೆ ಉತ್ತರ ನೀಡುವ ಸಂದರ್ಭ ಬರಬಹುದು ಎಂಬ ಹೇಳಿಕೆ ನೀಡಿದ್ದರು .

Ad Widget

Ad Widget

Ad Widget

ಪುತ್ತಿಲ ಅವರು ಪ್ರಚೋದನಾತ್ಮಕ ಹೇಳಿಕೆ ಮತ್ತು ನಿಷೇಧಾಜ್ಞೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ‌. ಸಂತ್ರಸ್ತರ ಮನೆಗೆ ಭೇಟಿ‌ ನೀಡಿರುವ ಪುತ್ತಿಲ ಅವರು ಕೋಮು ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂಬ ಕಾರಣಕ್ಕೆ ವಿಡಿಯೋ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget

ಈದ್‌ ಮಿಲಾದ್‌ ಹಬ್ಬದ ಮೆರವಣಿಗೆಯ ಸಂದರ್ಭ ಕಲ್ಲು ತೂರಾಟ ನಡೆದು ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದಲ್ಲಿ ಉದ್ವೀಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ನಡೆದ ಅಹಿತಕರ ಘಟನೆಯಲ್ಲಿ ಕೆಲ ಮನೆಗಳಿಗೆ ಹಾನಿಯಾಗಿತ್ತು. ಈ ಹಿನ್ನಲೆಯಲ್ಲಿ ಅರುಣ್‌ ಪುತ್ತಿಲರವರು ರಾಗಿಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿಸಂತ್ರಸ್ತರ ಮನೆಗಳಿಗೆ ತೆರಳಿ ಸಾಂತ್ವಾನ ಹೇಳಿದರು.

Ad Widget

Ad Widget

ನಗರದ ಅವರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಶಿವಮೊಗ್ಗದ ರಾಗಿಗುಡ್ಡದಲ್ಲಿ ಮತಾಂಧ ಮುಸಲ್ಮಾನ ಸಮುದಾಯದಿಂದ ನಡೆದಿರುವ ಘಟನೆಗಳಿಂದ ನೊಂದ ಕುಟುಂಬಸ್ಥರ ಭೇಟಿ ಮಾಡಿದ್ದೇನೆ. ನಾವು ಅವರೊಂದಿಗೆ ಇರುತ್ತೇವೆ ಎಂದು ಹೇಳಿ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ತಲ್ವಾರ್ ಗಳಿವೆ..!

ಈ ಘಟನೆ ನಾಗರಿಕ ಸಮುದಾಯ ತಲೆತಗ್ಗಿಸುವಂತಹದು. ನಾವೆಲ್ಲರೂ ಸಂತ್ರಸ್ತರ ಜೊತೆಗಿದ್ದೇವೆ. ಇಂತಹ ಸಾವು ನೋವುಗಳಿಂದ ನಮ್ಮ ಸಮಾಜವನ್ನು ರಕ್ಷಣೆ ಮಾಡಬೇಕಿರುವ ಸವಾಲು ನಮ್ಮ ಮುಂದೆ ಇದೆ. ಸರ್ಕಾರ ತಲ್ವಾರ್ ನಂತಹ ಮಾರಕಾಸ್ತ್ರಗಳನ್ನು ಹಿಡಿದು ಮೆರವಣಿಗೆ ಮಾಡಿಸಲು ಅವಕಾಶ ನೀಡುತ್ತದೆ. ಹಿಂದೂಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೇ, ನಮ್ಮಲ್ಲೂ ತಲ್ವಾರ್ ಗಳಿವೆ. ನಮ್ಮಲ್ಲೂ ಶಸ್ತ್ರಾಸ್ತ್ರಗಳಿವೆ. ಅನಿವಾರ್ಯ ಸಂದರ್ಭ ಬಂದರೆ ಇವೆ ಶಸ್ತ್ರಾಸ್ತ್ರಗಳ ಮೂಲಕ ಪ್ರತಿಕ್ರಿಯೆ ನೀಡಲು ಹಿಂದೂ ಸಮಾಜ ಹಿಂದೂ ಮುಂದೆ ನೋಡುವುದಿಲ್ಲ. ಈ ವಿಷಯವನ್ನು ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಲು ನಾನು ಇಷ್ಟಪಡುತ್ತೇನೆ ಎಮದು ಪುತ್ತಿಲ ಹೇಳಿದ್ದಾರೆ .

ನವರಾತ್ರಿ ಉತ್ಸವ ಇನ್ನೇನು ಬರಲಿದೆ. ಈ ಸಂದರ್ಭ ಶಸ್ತ್ರಗಳನ್ನು ಪೂಜೆ ಮಾಡುವುದಿದೆ. ಈ ಸಂದರ್ಭದಲ್ಲಿ ನನ್ನ ಹಿಂದೂ ಬಾಂಧವರಿಗೆ ಹೇಳುವುದಿಷ್ಟೇ. ನವರಾತ್ರಿ ಸಂದರ್ಭದಲ್ಲಿ ಶಸ್ತ್ರಗಳಿಗೆ ಪೂಜೆ ಮಾಡಿ. ಸ್ಕ್ರ್ಯೂ ಡ್ರೈವರ್, ಸ್ಪಾನರ್ ಗಳ ಪೂಜೆ ಬಿಡಿ. ಅನಿವಾರ್ಯ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದರೆ ಶಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂದರು.

ಪರಿಹಾರ ನೀಡಿ :

ದಾಳಿಯಾದ ಮನೆಗಳಿಗೆ ಸರ್ಕಾರ ಪರಿಹಾರ ನೀಡಬೇಕು. ಘಟನೆಗೆ ಯಾರೆಲ್ಲಾ ಪಾಲ್ಗೊಂಡಿದ್ದಾರೆ, ಬಹು ಸಂಖ್ಯಾತರ ಮೇಲೆ ನಡೆದ ದಾಳಿ ಸಂಬಂಧ ಕಾನೂನು ಕ್ರಮ ಕೈಗೊಳ್ಳಬೇಕು. ಪೊಲೀಸರ ಮೇಲೆ ನನಗೆ ಗೌರವ ಇದೆ. ತಮ್ಮ ಮನೆ- ಮಠ ಬಿಟ್ಟು ಸಮಾಜದ ಶಾಂತಿಗಾಗಿ ದಿನವಿಡೀ ದುಡಿವ ಅವರ ಮೇಲೂ ಕೂಡ ಹಲ್ಲೇ ಮಾಡಲಾಗಿದೆ. ಆದರೆ ಪೊಲೀಸ್ ತನಿಖೆಗೆ ಸರ್ಕಾರ ಹಸ್ತಕ್ಷೇಪ ಮಾಡುವ ಮೂಲಕ ಅವರ ಕೆಲಸಕ್ಕೂ ಅಡ್ಡಿಯಾಗಿದೆ. ಇದು ನಮಗೆ ಸಾಕಷ್ಟು ನೋವು ತಂದಿದೆ. ಪೊಲೀಸರ ಮೇಲೆ ಕಲ್ಲು ತೂರಾಟದ ಪ್ರಕರಣವನ್ನು ಕೂಡ ಸರ್ಕಾರ ಸಂಪೂರ್ಣವಾಗಿ ತನಿಖೆ ಮಾಡಬೇಕು. ಪೋಲಿಸ್ ಇಲಾಖೆಗೂ ಕೂಡ ರಕ್ಷಣೆ ನೀಡುವ ಸಂದರ್ಭ ಬಂದಿದೆ ಎಂದು ಪುತ್ತಿಲ ಹೇಳಿದರು.

ಗಲಭೆ ಪೂರ್ವನಿಯೋಜಿತ

ಮುಸಲ್ಮಾನರ ತೃಷ್ಟೀಕರಣಕ್ಕೆ, ಮತ ಬ್ಯಾಂಕ್ ಯೋಚನೆಯಲ್ಲಿ ಸರ್ಕಾರ ಪರೋಕ್ಷವಾಗಿ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಇದು ಪೂರ್ವ ನಿಯೋಜಿತ ಕೃತ್ಯದ ಮಾದರಿಯಲ್ಲಿ ನಡೆದ ಘಟನೆ. ಹಿಂದೂ ಮಹಾಸಭಾ ಈ ಭಾಗದಲ್ಲಿ ಗಣೇಶ್ೋತ್ಸವ ಅದ್ಧೂರಿಯಾಗಿ ನಡೆಸುತ್ತದೆ ಎಂದರು

ಮುಂದಿನ ದಿನಗಳಲ್ಲಿ ಹಿಂದೂ ಶಕ್ತಿ ಬೆಳೆದರೆ ಅವರಿಗೆ ಮುಳುವಾಗುತ್ತದೆ ಎಂದು ಆಲೋಚಿಸಿ ಇತರಹದ ಕಿಡಿಗೇಡಿ ಕೃತ್ಯಗಳನ್ನು ಎಸಗುತ್ತಿದ್ದಾರೆ. ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ರೋಹನ್ ಎಂಬ ಹಿಂದೂ ಕಾರ್ಯಕರ್ತನ ಮನೆ ಮೇಲೆ ದಾಳಿ ನಡೆಸಿ, ಆತನ ಮನೆ ಮುಂದೆ ನಿಂತಿರುವ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಬೋಧನೆ ಮಾಡಿರುವಂತಹ ಶಿಕ್ಷಕರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಇಂತಹ ಮುಸ್ಲಿಂ ಶಿಷ್ಯಂದಿರ ದಾಳಿಯನ್ನು ನೋಡಿದರೆ ಮುಂದೆ ಈ ಮತಾಂಧ ಶಕ್ತಿಗಳು ಆಘಾತಕಾರಿಯಾಗಿ ಪರಿಣಮಿಸಬಹುದು ಎಂದರು.

Continue Reading
Click to comment

Leave a Reply

ಕ್ರೈಂ

Acid Attack ಚಿಕ್ಕಮಗಳೂರು: ನೆರೆಮನೆಯ ನಾಯಿ ಬೊಗಳಿದ್ದೇ ತಪ್ಪಾಯ್ತಾ? ಮಾಲೀಕನ ಮೇಲೆ ಆಸಿಡ್ ದಾಳಿ

Ad Widget

Ad Widget

ಚಿಕ್ಕಮಗಳೂರು: ನಾಯಿ ಬೊಗಳಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ನಾಯಿಯ ಮಾಲೀಕನ ಮೇಲೆ ಆಸಿಡ್ ದಾಳಿ ಮಾಡಿದ ಘಟನೆ ಎನ್.ಆರ್.ಪುರ ತಾಲೂಕಿನ ಕುರಗುಂದ ಗ್ರಾಮದಲ್ಲಿ ನಡೆದಿದೆ. ಆಸಿಡ್ ದಾಳಿಗೊಳಗಾದ ವ್ಯಕ್ತಿಯನ್ನು ಕುರಗುಂದ ನಿವಾಸಿ ಸುಂದರ್ ರಾಜ್ ಎಂದು ಗುರುತಿಸಲಾಗಿದೆ.

Ad Widget

Ad Widget

Ad Widget

Ad Widget

ತಾನು ಸಾಕುತ್ತಿರುವ ನಾಯಿ ಬೊಗಳಿದ್ದಕ್ಕೆ ಯಜಮಾನ ಸುಂದರ್ ನಾಯಿಗೆ ಬೈಯ್ಯುತ್ತಿದ್ದ. ಆದರೆ ಜೇಮ್ಸ್ ಎನ್ನುವ ವ್ಯಕ್ತಿ ತನಗೆ ಬೈಯುತ್ತಿದ್ದಾನೆ ಎಂದು ಅಪಾರ್ಥ ಮಾಡಿಕೊಂಡು ನೆರೆಮನೆಯ ನಿವಾಸಿ ಸುಂದರ್ ರಾಜ್ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದು ಬಂದಿದೆ.

Ad Widget

Ad Widget

Ad Widget

ಸದ್ಯ ಗಾಯಾಳು ಸುಂದರ್ ರಾಜ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad Widget

Winter Health ಚಳಿಗಾಲದಲ್ಲಿ ಪ್ರತಿದಿನ ತುಪ್ಪ ಸೇವಿಸುವುದು ತಪ್ಪಾ ?

Ad Widget

Ad Widget

ಆಸಿಡ್ ದಾಳಿಯಿಂದಾಗಿ ಸುಂದರ್ ರಾಜ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಡಗಣ್ಣಿನ ಪದರ ಬದಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ನಾಯಿ ಹೆಸರಿನಲ್ಲಿ ತನಗೆ ಬಯ್ಯುತ್ತಿರುವುದಾಗಿ ಜೇಮ್ಸ್ ಆರೋಪಿಸಿದ್ದು, ಈತನ ವಿರುದ್ಧ ಎನ್.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೈಂ

BJP Ticket Deal: ಹಿಂದೂತ್ವದ ಪ್ರಖರ ವಾಗ್ಮಿ ಚೈತ್ರಾ 84 ದಿನಗಳ ಬಳಿಕ ಜೈಲಿನಿಂದ ಬಿಡುಗಡೆ – ಜಾಮೀನು ಮಂಜೂರು

Ad Widget

Ad Widget

chaitra Got Bail ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಕೊಡಿಸುವುದಾಗಿ (BJP Ticket Deal) ಹೋಟೆಲ್ ಉದ್ಯಮಿ ಗೋವಿಂದಬಾಬು ಪೂಜಾರಿಗೆ (Govinda Babu poojary) ಕೋಟ್ಯಾಂತರ ರೂಪಾಯಿ ವಂಚಿಸಿ ಬಂಧನಕ್ಕೀಡಾಗಿದ್ದ ಹಿಂದೂತ್ವದ ಪ್ರಖರ ವಾಗ್ಮಿ  ಚೈತ್ರಾ (Infamous Hindutva Orator) ಸಹಿತ ಇಬ್ಬರಿಗೆ ಕೊನೆಗೂ ಜಾಮೀನು (chaitra Got Bail) ಮಂಜೂರಾಗಿದೆ.  ಇಬ್ಬರಿಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸರಿ ಸುಮಾರಿ 82 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಚೈತ್ರಾ (chaitra) ಕೊನೆಗೂ ಡಿ 5 ರಂದು ಬಿಡುಗಡೆಯಾಗಲಿದ್ದಾರೆ

Ad Widget

Ad Widget

Ad Widget

Ad Widget

 ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಚೈತ್ರಾ ಪ್ರಥಮ ಆರೋಪಿಯಾಗಿದ್ದಾರೆ, ಹಾಲಶ್ರೀ ಸ್ವಾಮೀಜಿ   ಮೂರನೇ ಆರೋಪಿಯಾಗಿದ್ದರು . ಹಾಲಶ್ರೀಗೆ ಕೆಲ ದಿನಗಳ ಹಿಂದೆಯೇ ಜಾಮೀನು ದೊರಕಿತ್ತು.

Ad Widget

Ad Widget

Ad Widget

ಚೈತ್ರಾ ಹಾಗೂ ಸಹಚರರು ಒಟ್ಟು 5 ಕೋಟಿ ರೂಪಾಯಿಯಷ್ಟು ಹಣ ಪಡೆದು ಬಳಿಕ ವಂಚಿಸಿದ್ದರು ಎಂದು ಗೋವಿಂದ ಬಾಬು ಆರೋಪಿಸಿದ್ದರು.  ಸೆ.8ರಂದು ಬಂಡೇಪಾಳ್ಯ ಠಾಣೆಯಲ್ಲಿ ಚೈತ್ರಾ ಮತ್ತು ಇತರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಆಗಿತ್ತು. ಬಳಿಕ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಸೆ 12 ರಂದು ರಾತ್ರಿ  ಚೈತ್ರಾ, ಗಗನ್ ಕಡೂರು ಬಂದಿಸಿದ್ದರು.

Ad Widget
Ad Widget

Ad Widget

ಪ್ರಕರಣ ಬೆಳಕಿಗೆ ಬರುತ್ತಲೇ ತಲೆ ಮರೆಸಿಕೊಂಡಿದ್ದ  ಹೊಸಪೇಟೆಯ ಸ್ವಾಮೀಜಿ ಹಾಲಶ್ರೀ ಸ್ವಾಮೀಜಿಯನ್ನು ವಾರಗಳ ಹುಡುಕಾಟದ ಬಳಿಕ ಒಡಿಸ್ಸಾದಲ್ಲಿ ಬಂಧಿಸಲಾಗಿತ್ತು. ಏತನ್ಮಧ್ಯೆ ಉಳಿದ ಆರೋಪಿಗಳಾದ ಚೈತ್ರಾ ಬರೆದ ಸ್ಕ್ರಿಪ್ಟ್‌ ನ ಪಾತ್ರದಾರಿಗಳಾದ  ಚನ್ನನಾಯ್ಕ, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಸೇರಿ ಓಟ್ಟು  9 ಮಂದಿಯನ್ನು ಈ ಪ್ರಕರಣದಡಿ ಬಂಧಿಸಲಾಗಿತ್ತು.

ಆರೋಪಿಗಳು ಅಕ್ರಮ ಹಣದಿಂದ ಸಂಪಾದಿಸಿದ್ದ ಲಕ್ಷಾಂತರ ರೂ. ನಗದು ಹಾಗೂ ಕೆಲ ಆಸ್ತಿಗಳ ಪತ್ರಗಳು ಸೇರಿ 4 ಕೋಟಿ ರೂ. ಅಧಿಕ ವಶಕ್ಕೆ  ಪಡೆದುಕೊಳ್ಳಲಾಗಿತ್ತು.   ಚೈತ್ರಾ ಬಳಿ 81 ಲಕ್ಷ ರೂ. ನಗದು ಹಾಗೂ 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಸಹಕಾರಿ ಬ್ಯಾಂಕ್ನಲ್ಲಿ 1.08 ಕೋಟಿ ಮೌಲ್ಯದ ಭದ್ರತಾ ಠೇವಣಿ. ಇದರ ಜತೆಗೆ 12 ಲಕ್ಷ ರೂ. ಮೌಲ್ಯದ ಕಿಯಾ ಕಾರನ್ನು ವಶಪಡಿಸಿಕೊಂಡಿದ್ದರು.

ಇನ್ನು ಚೈತ್ರಾ ಸಹಚರರಾದ ಗಗನ್ ಕಡೂರ್, ಧನರಾಜ್ ರಮೇಶ್ ರಿಂದ 26 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಅಭಿನವ ಹಾಲಾಶ್ರೀ ಬಳಿ 56 ಲಕ್ಷ ರೂ. ನಗದು, 25 ಲಕ್ಷ ರೂ. ಮೌಲ್ಯದ ಕಾರು ಜಪ್ತಿ ಮಾಡಲಾಗಿತ್ತು. ಅಲ್ಲದೆ, ತನಿಖೆ ಪೂರ್ಣಗೊಳಿಸಿ ಇತ್ತೀಚೆಗಷ್ಟೇ 9 ಮಂದಿ ಆರೋಪಿಗಳ ವಿರುದ್ಧ ಕೋರ್ಟ್ಗೆ ಸಿಸಿಬಿ ಆರೋಪಪಟ್ಟಿ ಕೂಡ ಸಲ್ಲಿಸಿತ್ತು.

ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಹಾಗೂ 7ನೇ ಆರೋಪಿ ಶ್ರೀಕಾಂತ್ಗೆ 3ನೇ ಎಸಿಎಂಎಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಲಿದ್ದಾರೆ.

Continue Reading

ಅಪರಾಧ

Ballari Murder case ಸರಿಯಾಗಿ ಆರೈಕೆ ಮಾಡ್ತಿಲ್ಲ ಎಂದು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ: ಪೊಲೀಸರಿಗೆ ಆರೋಪಿ ಶರಣು

ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂದು ಪತಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Ad Widget

Ad Widget

ಬಳ್ಳಾರಿ, (ಡಿಸೆಂಬರ್ 04): ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದು ಕೋಪಗೊಂಡ ಪತಿರಾಯನೊಬ್ಬ(Husband) ಹೆಂಡತಿಯನ್ನು(Wife) ಕೊಚ್ಚಿ ಕೊಂದಿರುವ ಘಟನೆ ಬಳ್ಳಾರಿ(Bellary) ಜಿಲ್ಲೆಯ ಸಿರುಗುಪ್ಪದ ಬಲಕುಂದಿ ಗ್ರಾಮದಲ್ಲಿ ನಡೆದಿದೆ. ಮೈಬುನಾ ಬಿ. (35) ಕೊಲೆಯಾದ ಮಹಿಳೆ.

Ad Widget

Ad Widget

Ad Widget

Ad Widget

ಡಯಾಲಿಸಿಸ್ ರೋಗಿಯಾಗಿರುವ ಆರೋಪಿ ರಸೂಲ್ ಸಾಬ್, ಪತ್ನಿ ಸರಿಯಾಗಿ ಕೇರ್ ಮಾಡುತ್ತಿಲ್ಲ ಎಂದು ಮಲಗಿದ್ದ ಮೈಬುನಾಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ರಸೂಲ್ ಸಾಬ್ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ.

Ad Widget

Ad Widget

Ad Widget

ಈ ಬಗ್ಗೆ ಮಾತನಾಡಿರುವ ರಸೂಲ್ ಸಾಬ್ ನನಗೆ ಡಯಾಲಿಸಿಸ್ ಕಾಯಲೆ ಇದೆ. ಆದ್ರೆ, ಪತ್ನಿ ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಹೀಗಾಗಿ ನಾನು ಬೇಗ ಸಾಯುತ್ತೇನೆ. ನನಗಿಂತ ಮೊದಲು ಪತ್ನಿ ಸಾಯಬೇಕು ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತೆಕ್ಕಲಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Ad Widget
Continue Reading

Trending

error: Content is protected !!