ಸಿನೆಮಾ
ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀ ದೇವಿ ಸಾವು ಸಹಜ ಸಾವಲ್ಲ … ಕೊನೆಗೂ ಮೌನ ಮುರಿದ ಪತಿ ಬೋನಿ ಕಪೂರ್

ಐದು ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ ಹಿಂದಿ ಸಿನಿ ರಂಗದ ಸಕ್ಸಸ್ ಫುಲ್ ನಟಿ ಶ್ರೀದೇವಿ ಅವರ ಸಾವಿನ ಬಗ್ಗೆ ಅವರ ಪತಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮೌನ ಮುರಿದಿದ್ದಾರೆ. ಶ್ರೀದೇವಿ ಸಾವಿನ ಕುರಿತಾಗಿ ಬೋನಿ ಕಪೂರ್ ವಿರುದ್ದ ಹಲವು ಆರೋಪಗಳು ಬಂತಾದರೂ 5 ವರ್ಷಗಳ ಸುದೀರ್ಘ ಕಾಲ ಅವರು ಎಲ್ಲೂ ಒಂದಕ್ಷರ ಮಾತನಾಡಿರಲಿಲ್ಲ. ಇದೀಗ ಆಕೆಯ ಸಾವು ಸಹಜ ಸಾವು ಆಗಿರಲಿಲ್ಲ ಎಂಬ ಸ್ಪೋಟಕ ಮಾಹಿತಿಯನ್ನು ಬೋನಿ ಹೊರಗೆಡವಿದ್ದಾರೆ.
ಭಾರತೀಯ ಸಿನಿಮಾ ರಂಗ ಕಂಡ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಅವರು 2018ರ ಫೆಬ್ರವರಿಯಲ್ಲಿ ದುಬೈನ ಹೋಟೆಲ್‌ವೊಂದರಲ್ಲಿ ಸಾವನ್ನಪ್ಪಿದ್ದರು. ಸ್ನಾನದ ಕೋಣೆಯ ಬಾತ್‌ಟಬ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಆದರೇ ಈ ವಿಚಾರವನ್ನು ಒಪ್ಪಿಕೊಳ್ಳಲು ಬಹುತೇಕ ಯಾರೂ ತಯಾರಿರಲಿಲ್ಲ . ಭಾರತೀಯ ಮಾದ್ಯಮಗಳಂತೂ ಹಲವು ಊಹಾಪೋಹಾದ ಸುದ್ದಿಗಳನ್ನು ದಿನದ 24 ಗಂಟೆಯೂ ಪ್ರಸಾರ ಮಾಡಿದ್ದರು.
ಆರೋಗ್ಯವಾಗಿದ್ದ ಶ್ರೀದೇವಿ ಹಠಾತ್ ನಿಧನರಾದ ಸುದ್ದಿಯನ್ನು ಸಹಜ ಸಾವು ಎಂದು ಯಾರೂ ನಂಬಲು ತಯಾರಿರಲಿಲ್ಲ. ಹಾಗಾಗಿ ಆ ಸಾವಿಗೆ ರೆಕ್ಕಪುಕ್ಕಗಳು ಹುಟ್ಟುಕೊಂಡವು. ಅತಿಯಾದ ಮದ್ಯ ಸೇವನೆಯಿಂದ ಶ್ರೀದೇವಿ ನಿಧನರಾಗಿದ್ದಾರೆ ಎಂದು ಕೆಲವರು ಪುಕಾರು ಹಬ್ಬಿಸಿದರೆ, ಇನ್ನೂ ಕೆಲವರು ಬಾತ್ ಟಬ್ ನಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದೂ ಮಾತನಾಡಿಕೊಂಡರು. ಹಾಗಾಗಿ ಅವರ ಸಾವು ನಿಗೂಢವಾಗಿ ಉಳಿದಿತ್ತು.
ಈದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಬೋನಿ ಕಪೂರ್ (Boney Kapoor) ಶ್ರೀದೇವಿ ಅವರ ಸಾವಿಗೆ ವಿಪರೀತವಾಗಿ ಅವರು ಡಯೆಟ್ ಮಾಡುತ್ತಿದ್ದದ್ದೆ ಕಾರನ ಎಂದಿದ್ದಾರೆ. ಸದಾ ತಾನು ಸುಂದರವಾಗಿಯೇ ಇರಬೇಕು ಎಂದು ಶ್ರೀದೇವಿ ಪಥ್ಯ ಮಾಡುತ್ತಿದ್ದರು. ಹಲವಾರು ಬಾರಿ ಉಪವಾಸ ಇರುತ್ತಿದ್ದಳು. ಉಪ್ಪು ಸೇವಿಸುತ್ತಿರಲಿಲ್ಲ. ಹೀಗಾಗಿ ಕಡಿಮೆ ರಕ್ತದೊತ್ತಡದ ಸಮಸ್ಯೆ ಗೆ ತುತ್ತಾಗಿದ್ದಳು. ಇದನ್ನು ವೈದ್ಯರು ತಿಳಿಸಿದರೂ ಶ್ರೀದೇವಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.
ಶ್ರೀ ದೇವಿ ನಿಧನರಾದಾಗ ದುಬೈ ಪೊಲೀಸರು ಹಲವು ಗಂಟೆಗಳ ಕಾಲ ತನಿಖೆಗೆ ಒಳಪಡಿಸಿದ್ದರು ಎನ್ನುವ ಸಂಗತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಸುಳ್ಳು ಪತ್ತೆ ಸೇರಿದಂತೆ ಹಲವಾರು ರೀತಿಯ ತನಿಖೆಗಳನ್ನೂ ಪೊಲೀಸರು ಮಾಡಿದ್ದಾರೆ ಎನ್ನವ ಮಾಹಿತಿಯನ್ನು ಬೋನಿ ಕಪೂರ್ ಬಹಿರಂಗ ಪಡಿಸಿದ್ದಾರೆ
ಶ್ರೀದೇವಿ ಅವರು ಹಾಗೆ ಕುಸಿದು ಬೀಳುವುದು ಅದೇ ಮೊದಲೇನೂ ಆಗಿರಲಿಲ್ಲ ಎನ್ನುವ ಸಂಗತಿಯನ್ನೂ ಹಂಚಿಕೊಂಡಿದ್ದಾರೆ. ಹಲವಾರು ಬಾರಿ ಶೂಟಿಂಗ್ ಸಂದರ್ಭದಲ್ಲಿ ಹಾಗೆ ಕುಸಿದು ಬಿದ್ದಿದ್ದರು ಎಂದು ಹೇಳಿಕೊಂಡಿದ್ದಾರೆ. ನಿರ್ಮಾಪಕ ನಾಗಾರ್ಜುನ ಕೂಡ ತಮ್ಮದೇ ಸಿನಿಮಾದ ಶೂಟಿಂಗ್ ನಲ್ಲಿ ಶ್ರೀದೇವಿ ನಿಶ್ಯಕ್ತಿಯಿಂದ ಬಿದ್ದಿದ್ದ ಸಂಗತಿಯನ್ನೂ ತಮಗೆ ತಿಳಿಸಿದ್ದರು ಎಂದು ಬೋನಿ ಕಪೂರ್ ಮಾತನಾಡಿದ್ದಾರೆ.
ಸಿನೆಮಾ
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಟಾಲಿವುಡ್ ನಿರ್ದೇಶಕ ಮಾಡಿರುವ ‘ಅನಿಮಲ್’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಜನರು ಫಿದಾ ಆಗಿದ್ದಾರೆ . ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ‘ಅನಿಮಲ್’ ಸಿನಿಮಾದ ಕಲೆಕ್ಷನ್ ಕುರಿತಂತೆ ಇಲ್ಲಿದೆ ಮಾಹಿತಿ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಅವರ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ.ಹಿಂದಿ ಜೊತೆಗೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲೂ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದು ಅಡಲ್ಟ್ ಸಿನಿಮಾ. 18 ವರ್ಷ ವಯಸ್ಸು ಮೇಲ್ಪಟ್ಟವರು ಮಾತ್ರವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.’ಅನಿಮಲ್’ ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದೆ.
ಬಿಡುಗಡೆ ಆದ ಮೊದಲ ದಿನವೇ (ಡಿಸೆಂಬರ್ 1) ‘ಅನಿಮಲ್’ ಸಿನಿಮಾ 72.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡನೇ ದಿನ 66.27 ಕೋಟಿ ರೂಪಾಯಿ ಹಾಗೂ ಮೂರನೇ ದಿನ 72.50 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 202 ಕೋಟಿ ರೂಪಾಯಿ . ವಿಶ್ವಾದ್ಯಂತ ‘ಅನಿಮಲ್’ ಸಿನಿಮಾ 300+ ಕೋಟಿ ರೂಪಾಯಿ ಬಾಚಿಕೊಂಡಿದೆ.
ಸಿನೆಮಾ
BBK Season10: ನನಗೆ ಇವರ ಮೇಲೆ ಫೀಲಿಂಗ್ ಇದೆ – ಬಿಗ್ ಬಾಸ್ ಕನ್ನಡ ಶೋನಲ್ಲಿ ಸ್ನೇಹಿತ್ ಗೌಡಗೆ ನಮ್ರತಾ ಗೌಡ ಮೇಲೆ ಲವ್

Big Boss kannada Love Story: ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಗಳ ಮಧ್ಯೆ ಲವ್ ಸ್ಟೋರಿ ಶುರುವಾದಂತಿದೆ. ಪ್ರತಿ ಸೀಸನ್ ನಲ್ಲೂ ಈ ರೀತಿ ಲವ್ ಸ್ಟೋರಿಗಳು ಇದ್ದೆ ಇರುತ್ತೆ. ಕೆಲವು ಜೋಡಿಗಲು ಬಿಗ್ ಬಾಸ್ ಮನೆಯಲ್ಲಿ ಶುರು ಮಾಡಿದ ಲವ್ ಅನ್ನು ಮನೆ ಹೊರಗಡೆಯು ಮುಂದುವರಿಸಿ ಮದುವೆಯಾದ ಉದಾಹರಣೆಯೂ ಇದೆ.
ಬಿಗ್ ಬಾಸ್ 10 ರಲ್ಲಿ ನಮ್ರತಾ ಗೌಡ ಮೇಲಿನ ಲವ್ ಅನ್ನು ಸ್ನೇಹಿತ್ ನೇರವಾಗಿ ಹೇಳಿಕೊಂಡಿದ್ದಾರೆ. ನನಗೆ ನಮ್ರತಾ ಮೇಲೆ ಫೀಲಿಂಗ್ ಇದೆ’ ಎಂದು ಸ್ನೇಹಿತ್ ಗೌಡ ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿನಯ್ ಗೌಡ ಬಳಿ ವಿವರಿಸಿದ್ದಾರೆ. ಅದನ್ನು ಕೇಳಿ ವಿನಯ್ ಅವರು ಅಚ್ಚರಿಪಟ್ಟಿದ್ದಾರೆ.
ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜೊತೆ ನಾನು ಫ್ರೆಂಡ್ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು’ ಎಂದು ಸ್ನೇಹಿತ್ ಗೌಡ ಹೇಳಿದ್ದಾರೆ.

‘ಸ್ನೇಹಿತ್ ಗೌಡ ಬಿಗ್ ಬಾಸ್ ಮನೆಯಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿಲ್ಲ. ಸದ್ಯಕ್ಕಂತೂ ಅವರು ಡೇಂಜರ್ ಜೋನ್ನಲ್ಲಿ ಇದ್ದಾರೆ. ಹಾಗಿದ್ದರೂ ಕೂಡ ತಮ್ಮ ಪ್ರೀತಿಯ ಬಗ್ಗೆ ಅವರೀಗ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆದರೆ ಈ ಪ್ರೀತಿಗೆ ನಮೃತಾ ಗ್ರೀನ್ ಸಿಗ್ನಲ್ ಕೊಡ್ತಾರ ಕಾದು ನೋಡಬೇಕಾಗಿದೆ.

ಬಿಗ್ ಬಾಸ್ 10 ರಲ್ಲಿ (BBK SEASON 10) ಮೈಕಲ್- ಇಶಾನಿ ಹಾಗೂ ಸಂಗೀತಾ-ಕಾರ್ತಿಕ್ ನಡುವೆ ಆತ್ಮೀಯತೆ ಬೆಳೆದಿರುವುದು ಗೊತ್ತೇ ಇದೆ. ಇದೀಗ ಸ್ನೇಹಿತ್ ಗೌಡ ಹಾಗೂ ನಮ್ರತಾ ಸ್ನೇಹ ಎಲ್ಲಿಗೆ ಹೋಗಿ ಮುಟ್ಟಲಿದೆಯೋ ಎಂದು ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.
ಮೊದಲಿಗೆ ಸಂಗೀತಾ ಜತೆ ಕ್ಲೋಸ್ ಆಗಲು ನೋಡಿದ ಸ್ನೇಹಿತ್‌ಗೆ ಕಾರ್ತಿಕ್ ಕಾರಣಗಳಿಂದ ವಿಫಲವಾಯ್ತು. ಮತ್ತೆ ಇಶಾನಿಗೂ ಟ್ರೈ ಮಾಡಿದ್ದರೂ ಮೈಕಲ್ ಜತೆ ಇಶಾನಿ ಕ್ಲೋಸ್ ಆದ ಕಾರಣ ಅಲ್ಲಿಯೂ ಅವರಿಗೆ ಹಿನ್ನಡೆ ಆಯ್ತು. ನಮ್ರತಾಗೂ ಮೊದಲ ದಿನದಂದಲೂ ಕಾಳು ಹಾಕುತ್ತಲೇ ಇರುವ ಸ್ನೇಹಿತ್ ಟಾಸ್ಕ್ ವಿಚಾರವಾಗಿ ನಮ್ರತಾ ಜತೆ ಸ್ವಲ್ಪ ಸಲುಗೆಯಿಂದ ಕೂಡ ಇದ್ದಿದ್ದರು.
ಸಿನೆಮಾ
Payal Ghosh: 5 ವರ್ಷ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡಿದ್ದೆ – ಈ ಟೈಮ್ ನಲ್ಲಿ ನನ್ನ ಇಷ್ಟ ಪಡುತ್ತಿದ್ದ ಗಂಭೀರ್ ಪದೆ ಪದೇ ಕಾಲ್ ಮಾಡಿ ಪೀಡಿಸುತ್ತಿದ್ದ : ನಟಿ ಪಾಯಲ್ ಬೋಲ್ಡ್ ಹೇಳಿಕೆ

ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ( bollywood Actress) ಪಾಯಲ್ ಘೋಷ್ (payal Ghosh) ಭಾರತ ತಂಡದ ಮಾಜಿ ಕ್ರಿಕೇಟಿಗರಾದ (Indian cricket Team) ಇರ್ಫಾನ್ ಪಠಾಣ್, (Irfhan patan) ಗೌತಮ್ ಗಂಭೀರ್ (Goutham Gambir) ಜತೆಗಿನ ತನ್ನ ರಿಲೇಷನ್ ಶಿಪ್ (Relationship) ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇರ್ಫಾನ್ ಪಠಾಣ್ ಜತೆಗೆ ತಾನು ತೆಗೆಸಿಕೊಂಡಿರುವ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಾವಿಬ್ಬರು ಲವ್ ಮಾಡುತ್ತಿದ್ದೇವು ಎನ್ನುವುದಕ್ಕೆ ಸಾಕ್ಷಿ ಒದಗಿಸಿದ್ದಾರೆ.
ನಾನು ಹಾಗೂ ಇರ್ಫಾನ್ ಪಠಾಣ್ ಐದು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದೆವು. ನಾನು ಇರ್ಫಾನ್ ಅನ್ನು ಪ್ರೀತಿಸುತ್ತಿದ್ದ ಸಮಯದಲ್ಲಿ ಗೌತಮ್ ಗಂಭೀರ್ ಪದೇ ಪದೆ ನನಗೆ ಕಾಲ್ ಮಾಡುತ್ತಿದ್ದರು.ಇದೆ ವೇಳೆ ಚಿತ್ರ ನಟ ಅಕ್ಷಯ್ ಕುಮಾರ್ ಕೂಡ ನನ್ನ ಬೆನ್ನ ಹಿಂದೆ ಬಿದ್ದಿದ್ದರು. ಆದರೇ ನನಗೆ ಪಠಾಣ್ ಮೇಲೆ ಬಹಳ ಪ್ರೀತಿಯಿತ್ತು. ಹೀಗಾಗಿ ನಾನು ಆತನನ್ನು ಬಿಟ್ಟು ಬೇರೆ ಯಾರನ್ನೂ ನಾನು ನೋಡಲಿಲ್ಲ.

ಗೌತಮ್ ಗಂಭೀರ್ ಪ್ರತಿಬಾರಿ ನನಗೆ ಫೋನ್ ಮಾಡಿದಾಗಲೂ ಆ ಮಿಸ್ ಕಾಲ್ ಗಳನ್ನು ನಾನು ಇರ್ಫಾನ್ ಪಠಾಣ್ ಗೆ ತೋರಿಸುತ್ತಿದ್ದೆ. ಇದು ಬೇಸರ ತಂದಿತ್ತು. ಈ ಬಗ್ಗೆ ಅವರ ಸಹೋದರ ಪಠಾಣ್ ಬಳಿಯೂ ಅವರು ಮಾತನಾಡಿದ್ದರು. ಈ ವಿಷಯ ಹಾರ್ದಿಕ್ ಪಾಂಡ್ಯಾ ಹಾಗೂ ಕೃನಾಲ್ ಪಾಂಡ್ಯಾ ಅವರುಗಳಿಗೆ ಸಹ ಗೊತ್ತು. ಅವರು ಪುಣೆಯಲ್ಲಿ ರಣಜಿ ಪಂದ್ಯ ಆಡುವಾಗ ನಾನು ಅಲ್ಲಿಗೆ ಹೋಗಿದ್ದೆ. ಆಗ ನನ್ನ ಎದುರೇ ಇರ್ಫಾನ್ ಪಠಾಣ್ ಈ ವಿಷಯವನ್ನು ಪಾಂಡ್ಯಾ ಸಹೋದರರಿಗೆ ಹೇಳಿದ್ದರು. ಆದರೆ ನಾನೂ ಹಾಗೂ ಇರ್ಫಾನ್ ಪಠಾಣ್ 2016ರ ವಿಶ್ವಕಪ್ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡೆವು ಎಂದಿದ್ದಾರೆ.

ಈ ಹಿಂದೆ ಪಾಯಲ್ ಘೋಷ್ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅನುರಾಗ್ ಕಶ್ಯಪ್ ನನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದರು. ಈಗ ಮತ್ತೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಆರೋಪ ಮಾಡಿದ್ದಾರೆ. ” ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆದರೆ, ಅಕ್ಷಯ್ ಕುಮಾರ್ ನನ್ನೊಂದಿಗೆ ಯಾವಾಗಲೂ ಅಸಭ್ಯವಾಗಿ ವರ್ತಿಸಿಲ್ಲ. ಎಂತಹ ದೊಡ್ಡ ಸ್ಟಾರ್, ನಾನು ಯಾವಾಗಲೂ ಅವರನ್ನು ಗೌರವಿಸುತ್ತೇನೆ. ಅನುರಾಗ್ ಕಶ್ಯಪ್ ನಟ ಅಕ್ಷಯ್ ಕುಮಾರ್‌ನ ಶೂಗೂ ಸರಿಸಮಾನರಲ್ಲ.” ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

-
ಅಪರಾಧ8 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್12 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ12 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ9 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ10 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಾಮಾಜಿಕ ಮಾಧ್ಯಮ17 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಚಿನ್ನ-ಬೆಳ್ಳಿ ದರ18 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?