Connect with us

ಸಾಮಾಜಿಕ ಮಾಧ್ಯಮ

Google Map : ಗೂಗಲ್ ಮ್ಯಾಪ್ ನೋಡಿ ಚಲಾಯಿಸುವಾಗ ನದಿಗೆ ಬಿದ್ದ ಕಾರು ! ಇಬ್ಬರು ವೈದ್ಯರು ಮೃತ್ಯು ; ಈ ದುರಂತದ ಬಳಿಕ ಮ್ಯಾಪ್‌ ಬಳಕೆದಾರರಿಗೆ ಪೊಲೀಸ್‌ ಇಲಾಖೆ ಹೊರಡಿಸಿದ ಅಗತ್ಯ ಸಲಹೆಗಳ ಮಾಹಿತಿ ಇಲ್ಲಿದೆ

Ad Widget

Ad Widget

ತಮಗೆ ಗೊತ್ತಿಲ್ಲದ ಊರಿಗೆ ಅಥಾವ ಅಪರಿಚಿತ ರಸ್ತೆಯಲ್ಲಿ ಪ್ರಯಾಣಿಸುವ ಸಂದರ್ಭ ಹಿಂದೆಯೆಲ್ಲ ದಾರಿಹೋಕರಲ್ಲಿಯೂ, ರಸ್ತೆಯ ಇಕ್ಕೆಲಾಗಳಲ್ಲಿ ಇರುವ ಮನೆ ಅಥಾವ ಅಂಗಡಿಗಳಲ್ಲಿ ದಾರಿ ಕೇಳುವ ಪರಿಪಾಠ ಚಾಲಕರು ಇಟ್ಟುಕೊಂಡಿದ್ದರು. ಆದರೇ ಗೂಗಲ್‌ ಮ್ಯಾಪ್‌ ಎಂಬ ತಂತ್ರಜ್ಞಾನ ಮೊಬೈಲ್‌ ಗಳಲ್ಲಿ ಬಂದ ಮೇಲೆ ಪ್ರತಿಯೊಬ್ಬರು ಅದನ್ನೆ ಅವಲಂಬಿಸಿ ಪ್ರಯಾಣಿಸುತ್ತಾರೆ. ಅದು ನಿಖರವಾಗಿ ರಸ್ತೆಯನ್ನು ತಿಳಿಸುವ ಜತೆಗೆ ಕ್ರಮಿಸಬೇಕಾದ ದೂರ ಅವಧಿ, ಬದಲಿ ರಸ್ತೆ , ರಸ್ತೆ ಮಧ್ಯೆ ಇರುವ ಟ್ರಾಫಿಕ್‌ ಎಲ್ಲವನ್ನು ಸವಿಸ್ತಾರವಾಗಿ ತಿಳಿಸುತ್ತದೆ. ಇದು ವಾಹನ ಚಾಲಕರಿಗೆ ಪ್ರಯಾಣವನ್ನು ಸರಳ ಮತ್ತು ಸುಲಭವಾಗಿಸಿದೆ. ಆದರೇ ಅದೇ ತಂತ್ರಜ್ಞಾನ ಸಾವಿನ ದವಡೆಗೂ ದೂಡುತ್ತದೆ ಅಂದರೇ ನಂಬುತ್ತೀರಾ ? ನಂಬಲೇ ಬೇಕಾದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

Ad Widget

Ad Widget

Ad Widget

Ad Widget

ಜಡಿ ಮಳೆಯಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಗೂಗಲ್‌ ಮ್ಯಾಪ್‌ ತೋರಿಸಿದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಆದ ಎಡವಟ್ಟಿನಿಂದ ಪೆರಿಯಾರ್ ನದಿಗೆ ಬಿದ್ದು, ಇಬ್ಬರೂ ವೈದ್ಯರ ಸಾವಾಗಿದೆ.

Ad Widget

Ad Widget

Ad Widget

ಭಾನುವಾರ ಬೆಳಗಿನ ಜಾವ 12.30ಕ್ಕೆ ಕೊಚ್ಚಿಯ ಗೋಥೂರತ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಚಲಾವಣೆ ಮಾಡುತ್ತಿದ್ದ ಯುವ ವೈದ್ಯರು ಗೂಗಲ್ ಮ್ಯಾಪ್ ಹಾಕಿಕೊಂಡಿದ್ದರು. ತಾಂತ್ರಿಕ ದೋಷ ಉಂಟಾಗಿ ಗೂಗಲ್ ಮ್ಯಾಪ್ ಅವರನ್ನು ನದಿ ಬಳಿಗೆ ತಂದು ನಿಲ್ಲಿಸಿತ್ತು. ಅಪಘಾತ ಸಂಭವಿಸುವ ವೇಳೆ ಮಧ್ಯ ರಾತ್ರಿಯಾಗಿತ್ತು. ಜೊತೆಗೆ ವಿಪರೀತ ಮಳೆ ಕೂಡಾ ಬರುತ್ತಿತ್ತು. ಕಾರು ಚಾಲಕನಿಗೆ ಮುಂದೇನಿದೆ ಎಂದೇ ಗ್ರಹಿಸಲಾಗದ ಪರಿಸ್ಥಿತಿ ಇತ್ತು. ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಹೀಗಾಗಿ. ಗೂಗಲ್‌ ಮ್ಯಾಪ್‌ನ ಮಾರ್ಗವನ್ನು ಆತನ ಸರಿಯಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ.

Ad Widget

ಗಾಯಾಳುಗಳ ಪ್ರಕಾರ ಗೂಗಲ್ ಮ್ಯಾಪ್ ಅವರಿಗೆ ಬಲಕ್ಕೆ ತಿರುಗಿ ಎಂದು ಹೇಳಿತ್ತು. ಆದರೆ ಕಾರು ಚಲಾಯಿಸುತ್ತಿದ್ದ ಯುವ ವೈದ್ಯ ತಪ್ಪಾಗಿ ಕಾರನ್ನು ಎಡಕ್ಕೆ ತಿರುಗಿಸಿದ್ದ. ಹೀಗಾಗಿ, ಕಾರು ನದಿ ದಡದಲ್ಲಿ ಸಾಗುವ ವೇಳೆ ನದಿಗೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ರಸ್ತೆ ತುಂಬಾ ನೀರು ತುಂಬಿದರಿಂದ ಪಕ್ಕದಲ್ಲಿ ಹರಿಯುತ್ತಿದ್ದ ನದಿ ಹಾಗೂ ರಸ್ತೆಯ ಮಧ್ಯದ ವ್ಯತ್ಯಾಸವನ್ನು ಆ ಧಾರಾಕಾರ ಮಳೆಯಲ್ಲಿ ಚಾಲಕ ವಿಫಲನಾಗಿದ್ದು ದುರಂತಕ್ಕರ ಕಾರಣವಾಗಿದೆ ಕಾರಿನಲ್ಲಿದ್ದ ಬದುಕುಳಿದವರು ಮಾಹಿತಿ ನೀಡಿದ್ದಾರೆ.

Ad Widget

Ad Widget

ಘಟನೆ ಸಂಭವಿಸಿದ ವೇಳೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನದಿಯಿಂದ ಕಾರನ್ನು ಮೇಲಕ್ಕೆ ಎತ್ತಲು ಸಹಕಾರ ನೀಡಿದರು. ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೂ ಮಾಹಿತಿ ರವಾನಿಸಿದರು. ಹರಸಾಹಸಪಟ್ಟು ಉಕ್ಕಿ ಹರಿಯುತ್ತಿದ್ದ ನದಿಯಿಂದ ಕಾರನ್ನು ಮೇಲಕ್ಕೆ ಎತ್ತಲಾಯ್ತು. ಈ ವೇಳೆ ಕಾರಿನಲ್ಲಿ ಇದ್ದ ಐವರ ಪೈಕಿ ಇಬ್ಬರು ಜೀವ ಬಿಟ್ಟಿದ್ದರು. ಮಿಕ್ಕ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಗೊಂಡ ಮೂವರಲ್ಲಿ ಓರ್ವಳು ಯುವತಿ. ಮೃತಪಟ್ಟ ಇಬ್ಬರು ಯುವಕರು ನದಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲು ಸ್ಕೂಬಾ ಡೈವಿಂಗ್ ತಂಡದ ನೆರವು ಪಡೆದು ಅವರ ಶವಗಳನ್ನು ನದಿಯಿಂದ ಮೇಲಕ್ಕೆ ತರಲಾಗಿದೆ. ಗಾಯಾಳುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಈ ದುರ್ಘಟನೆಯ ಬಳಿಕ ಕೇರಳ ಪೊಲೀಸರು ಗೂಗಲ್‌ ಮ್ಯಾಪ್‌ ಬಳಕೆದಾರರಿಗೆ ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ

  1. ಪ್ರವಾಹ ಮತ್ತು ಧಾರಾಕಾರ ಮಳೆಯಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ರಸ್ತೆ ಸಂಚಾರವನ್ನು ಬದಲಾಯಿಸುವುದು ಸೂಕ್ತ . Google ನಕ್ಷೆಗಳು ಇದನ್ನು ನಿಮಗೆ ತಿಳಿಸುವುದಿಲ್ಲ.
  2. ಮಾನ್ಸೂನ್ ಸಮಯದಲ್ಲಿ, Google Maps ಅಲ್ಗಾರಿದಮ್ ನಮಗೆ ಸುಲಭ ಮಾರ್ಗಗಳಾಗಿ ಕಡಿಮೆ ಟ್ರಾಫಿಕ್ ಇರುವ ರಸ್ತೆಗಳಲ್ಲಿ ಮಾರ್ಗದರ್ಶನ ನೀಡುತ್ತದೆ. ಆದರೆ ಕಡಿಮೆ ಜನನಿಬಿಡ ರಸ್ತೆಗಳು ಸುರಕ್ಷಿತವಲ್ಲ.
  3. ಗೂಗಲ್ ನಕ್ಷೆಗಳು ಉಕ್ಕಿ ಹರಿಯುವ ಹೊಳೆಗಳು, ಭೂಕುಸಿತಗಳು, ಬಿದ್ದ ಮರಗಳು ಮತ್ತು ಕಿರಿದಾದ ಮತ್ತು ದುಸ್ತರವಾದ ರಸ್ತೆಗಳು ಅಪಾಯಗಳಿಂದ ತುಂಬಿರುವ ದುರ್ಗಮ ರಸ್ತೆಗಳನ್ನು ಕೂಡ ಮಾರ್ಗ ಸೂಚಿಯಲ್ಲಿ ಪ್ರದರ್ಶಿಸಬಹುದು. ಆದರೆ ಅದು ನಮ್ಮನ್ನು ಗಮ್ಯಸ್ಥಾನಕ್ಕೆ ಕೊಂಡೊಯ್ಯುವುದಿಲ್ಲ.
  4. ಮಳೆಗಾಲದಲ್ಲಿ ಮತ್ತು ರಾತ್ರಿ ಸಮಯದಲ್ಲಿ ಅಪಘಾತ ಸಾಧ್ಯತೆಯಿರುವ ಸರಿಯಾಗಿ ಪರಿಚಿತವಲ್ಲದ ಮತ್ತು ನಿರ್ಜನ ರಸ್ತೆಗಳನ್ನು ತಪ್ಪಿಸಿ ಪ್ರಯಾಣಿಸುವುದು ಸುರಕ್ಷಿತ ಕ್ರಮವಾಗಿದೆ.
  5. ರಾತ್ರಿಯಲ್ಲಿ GPS ಸಿಗ್ನಲ್ ಕಳೆದುಹೋಗುತ್ತದೆ ಮತ್ತು ಮಾರ್ಗವು ಕೆಲವೊಮ್ಮೆ ತಪ್ಪಿ ಹೋಗಬಹುದು.

6.ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶ ಕೆಲವು ರೆಸಾರ್ಟ್‌ ಅಥಾವ ಪ್ರವಾಸಿ ಕೇಂದ್ರದವರು ಉದ್ದೇಶ ಪೂರ್ವಕವಾಗಿ ಅಥವಾ ದುರುದ್ದೇಶ ರಹಿತವಾಗಿ ಗೂಗಲ್‌ನಲ್ಲಿ ತಮ್ಮ ಸ್ಥಳವನ್ನು ತಪ್ಪಾಗಿ ರೆಕಾರ್ಡ್ ಮಾಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

  1. ಸಿಗ್ನಲ್ ಕಳೆದುಕೊಳ್ಳುವ ಸಾಧ್ಯತೆ ಇರುವ ಮಾರ್ಗಗಳಲ್ಲಿ ಮುಂಚಿತವಾಗಿ ಗುರುತಿಸುವ ಮೂಲಕ ಆಪಾಯವನ್ನು ತಪ್ಪಿಸಬಹುದು
  2. ನಕ್ಷೆಯಲ್ಲಿ ಪ್ರಯಾಣಿಸುವ ವಾಹನದ ವಿಧವನ್ನು ಆಯ್ಕೆ ಮಾಡಲು ಮರೆಯಬೇಡಿ. ನಾಲ್ಕು ಚಕ್ರದ ವಾಹನ, ದ್ವಿಚಕ್ರ ವಾಹನ, ಸೈಕಲ್, ವಾಕಿಂಗ್ ಮತ್ತು ರೈಲು ಆಯ್ಕೆಗಳಿಂದ ಆರಿಸಿಕೊಳ್ಳಿ. ಬೈಕ್ ಹೋಗುವ ದಾರಿಯಲ್ಲಿ ನಾಲ್ಕು ಚಕ್ರದ ವಾಹನ ಹೋಗುವಂತಿಲ್ಲ.
  3. ಒಂದು ಸ್ಥಳಕ್ಕೆ ಹೋಗಲು ಎರಡು ಮಾರ್ಗಗಳಿದ್ದ ಸಂದರ್ಭ ನಮಗೆ ಪರಿಚಿತವಿರುವ ಸ್ಥಳವನ್ನು ಆಡ್ ಸ್ಟಾಪ್ ಆಗಿ ನೀಡಿದರೆ ದಾರಿ ತಪ್ಪುವುದನ್ನು ತಪ್ಪಿಸಬಹುದು.
  4. ನೀವು ಕಳೆದುಹೋದರೆ, Google ನಕ್ಷೆಗಳು ನಿಮ್ಮ ಗಮ್ಯಸ್ಥಾನಕ್ಕೆ ಪರ್ಯಾಯ ಮಾರ್ಗವನ್ನು ತೋರಿಸುತ್ತದೆ. ಆದರೆ, ಈ ಮಾರ್ಗವು ನಾಲ್ಕು ಚಕ್ರದ ವಾಹನಗಳು ಅಥವಾ ದೊಡ್ಡ ವಾಹನಗಳಿಗೆ ಸೂಕ್ತವಲ್ಲ.
  5. ಪ್ರಯಾಣದದ ವೇಳೆ ಟ್ರಾಫಿಕ್ ಜಾಮ್ ಅನ್ನು ಗಮನಿಸಿದರೆ, ನೀವು ಅದನ್ನು Google ನಕ್ಷೆಗಳ ಅಪ್ಲಿಕೇಶನ್‌ನಲ್ಲಿ ‘ Contribution’ ಆಯ್ಕೆಯ ಮೂಲಕ ವರದಿ ಮಾಡಬಹುದು. ಅಪ್ಲಿಕೇಷನ್‌ ನ ಎಡಿಟ್ ಮ್ಯಾಪ್ ಆಯ್ಕೆಯಲ್ಲಿ ಆಡ್ ಅಥವಾ ಫಿಕ್ಸ್ ರೋಡ್ ಆಯ್ಕೆ ಮಾಡುವ ಮೂಲಕ ಸಮಸ್ಯೆಯನ್ನು ವರದಿ ಮಾಡಬಹುದು. ಗೂಗಲ್ ಮ್ಯಾಪ್ಸ್ ಇದನ್ನು ಪರಿಗಣಿಸುತ್ತದೆ. ಇದು ಬಳಿಕ ಆ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಅಗತ್ಯ ಸೂಚನೆ ನೀಡುವ ಮೂಲಕ ಸಹಾಯ ಮಾಡುತ್ತದೆ. ಇದೆ ಮಾದರಿಯಲ್ಲಿ ಸ್ಥಳದ ಹೆಸರುಗಳು ತಪ್ಪಾಗಿ ನಮೊದಿಸಲಾಗಿದ್ದರೇ ಮತ್ತು ಪ್ರದೇಶಗಳನ್ನು ಗುರುತಿಸಿರದಿದ್ದರೇ ಇದೇ ರೀತಿಯಲ್ಲಿ Google ಗೆ ವರದಿ ಮಾಡಬಹುದು
Continue Reading
Click to comment

Leave a Reply

ಸಾಮಾಜಿಕ ಮಾಧ್ಯಮ

Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ –  ಅದರಲ್ಲಿದೆ ಗುಂಡೇಟಿನ ವಿಚಾರ

Ad Widget

Ad Widget

 ಹಾಸನ: ನಾಡಿಗೆ ಬಂದ ಕಾಡಾನೆಗಳ  ಪಂಡಾಟವನ್ನು ಹತ್ತಿಕ್ಕಲು ನಡೆಸುವ ಕಾರ್ಯಚರಣೆಯಲ್ಲಿ ಸದಾ ಮುಂದಿರುತ್ತಿದ್ದ ಸಾಕಾನೆ ಅರ್ಜುನ ನಿನ್ನೆ ಹೋರಾಡುತ್ತಲೇ ಜೀವ ಕಳೆದುಕೊಂಡಿದ್ದಾನೆ . ಆದರೇ ಆತನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಅರ್ಜುನ ಮೃತಪಟ್ಟ ಕಾರ್ಯಚರಣೆಯಲ್ಲಿ ಪಾಲ್ಗೊಂಡ  ಮಾವುತರೊಬ್ಬರು ನೀಡಿದ ಹೇಳಿಕೆ ಈ ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ.

Ad Widget

Ad Widget

Ad Widget

Ad Widget

ನಾಡ ಹಬ್ಬ ಮೈಸೂರು ದಸಾರ ಸಂದರ್ಭ ತನ್ನ ಭುಜದ ಮೇಲೆ ನಾಡ ದೇವಿ ಚಾಮುಂಡೇಶ್ವರಿಯ ಅಂಬಾರಿಯನ್ನು ಹೊತ್ತ ಅರ್ಜುನ ಸಾವಿಗೆ ಗುಂಡೇಟು ಕಾರಣ ಎಂಬ ಅನುಮಾನವನ್ನು ಆ ಮಾವುತ ವ್ಯಕ್ತಪಡಿಸಿರುವ ಆಡಿಯೋ ವೊಂದು ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿದೆ.

Ad Widget

Ad Widget

Ad Widget

ಅರಣ್ಯ ಇಲಾಖೆ ನೀಡಿರುವ ಅಧಿಕೃತ ಹೇಳಿಕೆ ಪ್ರಕಾರ, ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನಿಗೆ ಒಂಟಿ ಸಲಗವೊಂದು ಕಿಬ್ಬೊಟ್ಟೆಗೆ ತಿವಿದಿದೆ. ಈ ಗಾಯದಿಂದಾಗಿ ಅರ್ಜುನ ಅಸುನೀಗಿದ್ದಾನೆ. ಆದರೇ ವೈರಲ್‌ ಆಡಿಯೋದ ಪ್ರಕಾರ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ಮಾಡಿದಾಗ ತಪ್ಪಿಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಗುಂಡು ಹಾರಿಸಿದಾಗ ಅದು ಅರ್ಜುನನ ಕಾಲಿಗೆ ತಗುಲಿದೆ ಕಾಲಿಗೆ ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ದಾಳಿ ಮಾಡಿದ್ದರಿಂದ ಸಾವಾಗಿದೆ. ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದೆ

Ad Widget

 ವೈರಲ್‌ ವಿಡಿಯೋದಲ್ಲಿ ಏನಿದೆ

Ad Widget

Ad Widget

ಅರ್ಜುನ ಆನೆ ಮೊದಲ‌ ಬಾರಿಗೆ ಕಾಡಾನೆ ಮೇಲೆ ದಾಳಿ ಮಾಡಿತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ಕೋವಿನಿಂದ ಗುಂಡು ಹಾರಿಸಿದರು. ಅದು ಅರ್ಜುನನ ಕಾಲಿಗೆ ತಗುಲಿತು. ಅರ್ಜುನ ಶಕ್ತಿ ಕಳೆದುಕೊಂಡ. ನಾವು ಆನೆ ಮೇಲಿಂದ ಇಳಿದು ಓಡಿದೆವು. ಗುಂಡು ಬಿದ್ದ ನಂತರ ಅರ್ಜುನನಿಗೆ ನಡೆದಾಡಲು ಆಗಲಿಲ್ಲ. ಇದೇ ವೇಳೆ ಕಾಡಾನೆ ಸಾಕಾನೆ ಅರ್ಜುನನ ಮೇಲೆ ಹಠಾತ್ ದಾಳಿ ಮಾಡಿತು ಎಂದು ಸ್ಥಳೀಯರೊಬ್ಬರು ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ ಆಗಿದ್ದು, ಅರ್ಜುನನ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.

ಮದದಲ್ಲಿರುವ ಕಾಡಾನೆ ಹುಚ್ಚನಂತೆ ಆಡುತ್ತದೆ ಎಂಬ ಮಾಹಿತಿ ಗೊತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಪ್ಪು ನಿರ್ಧಾರ ಮಾಡಿದ್ದಾರೆ ಎಂಬ ಬಗ್ಗೆ ತಜ್ಞರು ಟೀಕೆ ಮಾಡಿದ್ದಾರೆ.

Continue Reading

ಸಿನೆಮಾ

Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

Ad Widget

Ad Widget

ಟಾಲಿವುಡ್ ನಿರ್ದೇಶಕ ಮಾಡಿರುವ ‘ಅನಿಮಲ್‌’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಜನರು ಫಿದಾ ಆಗಿದ್ದಾರೆ . ಸಿನಿಮಾವು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ‘ಅನಿಮಲ್’ ಸಿನಿಮಾದ ಕಲೆಕ್ಷನ್ ಕುರಿತಂತೆ ಇಲ್ಲಿದೆ ಮಾಹಿತಿ.

Ad Widget

Ad Widget

Ad Widget

Ad Widget

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ಅವರ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ ಅನಿಮಲ್ ಡಿಸೆಂಬರ್ 1 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ.ಹಿಂದಿ ಜೊತೆಗೆ, ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಯಲ್ಲೂ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇದು ಅಡಲ್ಟ್ ಸಿನಿಮಾ. 18 ವರ್ಷ ವಯಸ್ಸು ಮೇಲ್ಪಟ್ಟವರು ಮಾತ್ರವರು ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.’ಅನಿಮಲ್’ ಸಿನಿಮಾದ ಅವಧಿ 3 ಗಂಟೆ 21 ನಿಮಿಷ ಇದೆ.

Ad Widget

Ad Widget

Ad Widget

ಬಿಡುಗಡೆ ಆದ ಮೊದಲ ದಿನವೇ (ಡಿಸೆಂಬರ್ 1) ‘ಅನಿಮಲ್’ ಸಿನಿಮಾ 72.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಎರಡನೇ ದಿನ 66.27 ಕೋಟಿ ರೂಪಾಯಿ ಹಾಗೂ ಮೂರನೇ ದಿನ 72.50 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 202 ಕೋಟಿ ರೂಪಾಯಿ . ವಿಶ್ವಾದ್ಯಂತ ‘ಅನಿಮಲ್’ ಸಿನಿಮಾ 300+ ಕೋಟಿ ರೂಪಾಯಿ ಬಾಚಿಕೊಂಡಿದೆ.

Ad Widget

Ad Widget

Ad Widget
Continue Reading

ಸಿನೆಮಾ

BBK Season10: ನನಗೆ ಇವರ ಮೇಲೆ ಫೀಲಿಂಗ್ ಇದೆ – ಬಿಗ್ ಬಾಸ್ ಕನ್ನಡ ಶೋನಲ್ಲಿ ಸ್ನೇಹಿತ್ ಗೌಡಗೆ ನಮ್ರತಾ ಗೌಡ ಮೇಲೆ ಲವ್

Ad Widget

Ad Widget

Big Boss kannada Love Story: ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಸ್ಪರ್ಧಿಗಳ ಮಧ್ಯೆ  ಲವ್ ಸ್ಟೋರಿ  ಶುರುವಾದಂತಿದೆ. ಪ್ರತಿ ಸೀಸನ್‌ ನಲ್ಲೂ ಈ ರೀತಿ ಲವ್‌ ಸ್ಟೋರಿಗಳು ಇದ್ದೆ ಇರುತ್ತೆ. ಕೆಲವು ಜೋಡಿಗಲು ಬಿಗ್‌ ಬಾಸ್‌ ಮನೆಯಲ್ಲಿ ಶುರು ಮಾಡಿದ ಲವ್‌ ಅನ್ನು ಮನೆ ಹೊರಗಡೆಯು ಮುಂದುವರಿಸಿ ಮದುವೆಯಾದ ಉದಾಹರಣೆಯೂ ಇದೆ.

Ad Widget

Ad Widget

Ad Widget

Ad Widget

ಬಿಗ್‌ ಬಾಸ್‌ 10 ರಲ್ಲಿ ನಮ್ರತಾ ಗೌಡ ಮೇಲಿನ ಲವ್ ಅನ್ನು  ಸ್ನೇಹಿತ್  ನೇರವಾಗಿ ಹೇಳಿಕೊಂಡಿದ್ದಾರೆ.  ನನಗೆ ನಮ್ರತಾ ಮೇಲೆ ಫೀಲಿಂಗ್ ಇದೆ’ ಎಂದು ಸ್ನೇಹಿತ್ ಗೌಡ  ಹೇಳಿಕೊಂಡಿದ್ದಾರೆ. ಈ ಬಗ್ಗೆ ವಿನಯ್ ಗೌಡ ಬಳಿ ವಿವರಿಸಿದ್ದಾರೆ. ಅದನ್ನು ಕೇಳಿ ವಿನಯ್ ಅವರು ಅಚ್ಚರಿಪಟ್ಟಿದ್ದಾರೆ.

Ad Widget

Ad Widget

Ad Widget

ನನಗೆ ಹುಡುಗಿಯರು ಇಷ್ಟ ಆಗಿದ್ದು ಬಹಳ ಕಡಿಮೆ. ಒಬ್ಬಳು ಇಷ್ಟ ಆಗಿದ್ದಳು. ಅದು ವರ್ಕ್ ಆಗಲಿಲ್ಲ. ಅದಾದ ಬಳಿಕ ಈಗಲೇ ಆಗಿರುವುದು. ಬಿಗ್ ಬಾಸ್ ಮನೆಗೆ ಬಂದಾಗ ಒಬ್ಬರು ನನಗೆ ಇಷ್ಟೆಲ್ಲ ಇಷ್ಟ ಆಗುತ್ತಾರೆ ಎಂದು ನನಗೂ ನಂಬಿಕೆ ಇರಲಿಲ್ಲ. ಅದನ್ನು ನಂಬೋಕೆ ಆಗುತ್ತಿಲ್ಲ. ಇವರ ಜೊತೆ ನಾನು ಫ್ರೆಂಡ್ಗಿಂತಲೂ ಚೂರು ಜಾಸ್ತಿ ಅಟ್ಯಾಚ್ ಆಗಿದ್ದೇನೆ ಎಂಬುದು ನಾನು ಜೈಲಿಗೆ ಹೋದಾಗ ಗೊತ್ತಾಯಿತು’ ಎಂದು ಸ್ನೇಹಿತ್ ಗೌಡ ಹೇಳಿದ್ದಾರೆ.  

Ad Widget
Ad Widget

Ad Widget

‘ಸ್ನೇಹಿತ್ ಗೌಡ  ಬಿಗ್‌ ಬಾಸ್ ಮನೆಯಲ್ಲಿ ಅವರು ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿಲ್ಲ. ಸದ್ಯಕ್ಕಂತೂ ಅವರು ಡೇಂಜರ್ ಜೋನ್ನಲ್ಲಿ ಇದ್ದಾರೆ.  ಹಾಗಿದ್ದರೂ ಕೂಡ  ತಮ್ಮ ಪ್ರೀತಿಯ ಬಗ್ಗೆ ಅವರೀಗ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆದರೆ ಈ ಪ್ರೀತಿಗೆ ನಮೃತಾ ಗ್ರೀನ್ ಸಿಗ್ನಲ್ ಕೊಡ್ತಾರ ಕಾದು ನೋಡಬೇಕಾಗಿದೆ.

ಬಿಗ್‌ ಬಾಸ್‌ 10 ರಲ್ಲಿ (BBK SEASON 10) ಮೈಕಲ್‌- ಇಶಾನಿ ಹಾಗೂ ಸಂಗೀತಾ-ಕಾರ್ತಿಕ್‌ ನಡುವೆ ಆತ್ಮೀಯತೆ ಬೆಳೆದಿರುವುದು ಗೊತ್ತೇ ಇದೆ. ಇದೀಗ ಸ್ನೇಹಿತ್‌ ಗೌಡ ಹಾಗೂ ನಮ್ರತಾ ಸ್ನೇಹ ಎಲ್ಲಿಗೆ ಹೋಗಿ ಮುಟ್ಟಲಿದೆಯೋ ಎಂದು ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.

ಮೊದಲಿಗೆ ಸಂಗೀತಾ ಜತೆ ಕ್ಲೋಸ್‌ ಆಗಲು ನೋಡಿದ ಸ್ನೇಹಿತ್‌ಗೆ ಕಾರ್ತಿಕ್‌ ಕಾರಣಗಳಿಂದ ವಿಫಲವಾಯ್ತು. ಮತ್ತೆ ಇಶಾನಿಗೂ ಟ್ರೈ ಮಾಡಿದ್ದರೂ ಮೈಕಲ್‌ ಜತೆ ಇಶಾನಿ ಕ್ಲೋಸ್‌ ಆದ ಕಾರಣ ಅಲ್ಲಿಯೂ ಅವರಿಗೆ ಹಿನ್ನಡೆ ಆಯ್ತು. ನಮ್ರತಾಗೂ ಮೊದಲ ದಿನದಂದಲೂ ಕಾಳು ಹಾಕುತ್ತಲೇ ಇರುವ ಸ್ನೇಹಿತ್‌ ಟಾಸ್ಕ್‌ ವಿಚಾರವಾಗಿ ನಮ್ರತಾ ಜತೆ ಸ್ವಲ್ಪ ಸಲುಗೆಯಿಂದ ಕೂಡ ಇದ್ದಿದ್ದರು.

Continue Reading

Trending

error: Content is protected !!