Connect with us

ಶಿಕ್ಷಣ

Massive job fair ಅ.6 ಮತ್ತು 7: ಆಳ್ವಾಸ್‌ʼನ ಬೃಹತ್ ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ 204 ಕಂಪೆನಿಗಳು, ಸಿಗಲಿದೆ ಸಾವಿರಾರು ಉದ್ಯೋಗ : ಪುತ್ತೂರಿನಿಂದ ತೆರಳುವವರಿಗೆ ಶಾಸಕರಿಂದ ಉಚಿತ ಬಸ್ಸು ಸೌಲಭ್ಯ

Ad Widget

Ad Widget

ಪುತ್ತೂರು: ಅ. 6 ಮತ್ತು 7 ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳದ ಲಾಭವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಯುವಕ ಯುವತಿಯರು ಪಡೆದುಕೊಳ್ಳಬೇಕು. ಇದಕ್ಕಾಗಿ ಈ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ

Ad Widget

Ad Widget

Ad Widget

Ad Widget

ಅ.6 ರಂದು ಬೆಳಿಗ್ಗೆ 7 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಿಂದ ಬಸ್ ಹೊರಡಲಿದೆ. ಆಕಾಂಕ್ಷಿಗಳು ಶಾಸಕರ ಕಚೇರಿಯನ್ನು ಭೇಟಿಯಾಗಿ ಹೆಸರು‌ನೋಂದಾವಣೆ ಮಾಡಿಕೊಳ್ಳಬಹುದು ಎಂದು‌ಶಾಸಕರು ತಿಳಿಸಿದರು.

Ad Widget

Ad Widget

Ad Widget

ಉದ್ಯೋಗ ಮೇಳದಲ್ಲಿ 204 ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು ಮೇಳದಲ್ಲಿ ಭಾಗವಹಿಸುವ ಸಾವಿರಾರು‌ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು,ಬಿ ಎ ,ಬಿಕಾಂ, ಬಿಎಸ್ಸಿ ಹಾಗೂ ಇನ್ನಿತರ ಪಧವೀದರರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಸಣ್ಣ ಉದ್ಯೋಗದಿಂದ ಆರಂಭಗೊಂಡು ದೊಡ್ಡ ಹುದ್ದೆಯವರೆಗೂ ಮೇಳದಲ್ಲಿ ಆಯ್ಕೆಗಳು ನಡೆಯುತ್ತದೆ ಎಂದು ಹೇಳಿದರು.

Ad Widget

ದ ಕ ಜಿಲ್ಲೆಯವರು ಹಿಂದೇಟು ಹಾಕುತ್ತಿದ್ದಾರೆ: ವಿವೇಕ ಆಳ್ವ

Ad Widget

Ad Widget

ಸಭೆಯಲ್ಲಿ‌ ಮಾತನಾಡಿದ‌ ಉದ್ಯೋಗ‌ ಮೇಳದ ರೂವಾರಿ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ ಆಳ್ವರವರು ಮಾತನಾಡಿ ದ ಕ ಮತ್ತು ಉಡುಪಿ ಜಿಲ್ಲೆಯವರು ಉದ್ಯೋಗ ಮೇಳಕ್ಕೆ ಬರುವುದು ಅಪರೂಪ ಎಂಬಂತಾಗಿದೆ. ಸಾವಿರಾರು ಮಂದಿ ಭಾಗವಹಿಸುವ ಮೇಳದಲ್ಲಿ ‌ಬೆರಳೆಣಿಕೆಯ‌ ಮಂದಿ ಮಾತ್ರ ನಮ್ಮ‌ ಜಿಲ್ಲೆಯವರು ಭಾಗವಹಿಸುತ್ತಾರೆ. ಆದರೇ ಈ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಉದ್ಯೋಗ ಪಡೆಯುತ್ತಿದ್ದು ಬಹುತೇಕರು ಹೊರ ಜಿಲ್ಲೆಯವರು ಎಂದರು

ಈ ಮೇಳದಲ್ಲಿ ಪ್ರತಿಷ್ಟಿತ ಕಂಪೆನಿಗಳು ಭಾಗವಹಿಸುತ್ತಿದ್ದು , ಒಳ್ಳೆಯ ಉದ್ಯೋಗ ಸಿಗುತ್ತದೆ ವಿದ್ಯಾವಂತ ಉದ್ಯೋಗ ಆಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ. ಕೆಲಸ ಇಲ್ಲ ಎಂಬುದು ಸುಳ್ಳು ನಮಗೆ ಕೆಲಸ ಮಾಡಲು ಇಚ್ಚಾಶಕ್ತಿ ಇದ್ದರೆ ಸಾಕಷ್ಟು ಕೆಲಸಗಳು ಇದೆ. ವರ್ಷದ 365 ದಿನವೂ ಆಳ್ವಾಸ್ ಸಂಸ್ಥೆಯಲ್ಲಿ ಉದ್ಯೋಗ ನೋಂದಣಿ ನಡೆಯುತ್ತಿರುತ್ತದೆ ಎಂದು ಹೇಳಿದರು.

ಮೆಕ್ಯಾನಿಕ್, ಇಲೆಕ್ಟ್ರಿಕ್, ಐಟಿಐ, ಡಿಪ್ಲೊಮಾ ವಿದ್ಯಾಭ್ಯಾಸ ಮಾಡಿದವರಿಗೆ 2000 ಹುದ್ದೆಗಳು ಇದೆ. ಈ ಕೋರ್ಸುಗಳನ್ನು ‌ಮಾಡಿದವರಿಗೆ ಸೇರಿದಂತೆ ಇತರ ಡಿಗ್ರಿ, ಮಾಸ್ಟರ್ ಡಿಗ್ರಿಯಾದವರಿಗೂ ಸಾವಿರಾರು ಉದ್ಯೋಗ ಇದ್ದು, ವಿದೇಶಿ ಕಂಪೆನಿಗಳು‌ ಮೇಳದಲ್ಲಿ ಭಾಗವಹಿಸುತ್ತಿದೆ ಎಂದು ವಿವೇಕ್ ಆಳ್ವ ತಿಳಿಸಿದರು.

ವಿದ್ಯುತ್‌ ಕಂಬ ಹತ್ತುವ ತರಬೇತಿ

ಪುತ್ತೂರು ಸೇರಿದಂತೆ ಜಿಲ್ಲೆಯಾಧ್ಯಂತ ಮೆಸ್ಕಾಂ ನಲ್ಲಿ ಕಾರ್ಮಿಕರ ಕೊರತೆ ಇದೆ. ಇದಕ್ಕಾಗಿ ಆಸಕ್ತಿ ಇರುವ ಮಂದಿಗೆ ವಿದ್ಯುತ್‌ ಕಂಬ ಹತ್ತುವ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗ ಕಲ್ಪಿಸಲಾಗುವುದು. ಪೊಲೀಸ್ ಹುದ್ದೆಗೆ ಕೆಲವೇ ತಿಂಗಳಲ್ಲಿ ನೇಮಕಾತಿ ನಡೆಯಲಿದ್ದು ಅದಕ್ಕೂ ಅಗತ್ಯ ತರಬೇತಿ ನೀಡುವ ಕಾರ್ಯ ನಮ್ಮ ಟ್ರಸ್ಟ್ ವತಿಯಿಂದ ನಡೆಯಲಿದೆ ಎಂದು ಶಾಸಕರು ಹೇಳಿದರು.

ಕಾರ್ಯಕ್ರಮದಲ್ಲಿ ಮೇಳದ ಸಂಘಟಕರಾದ ಶ್ರೀನಿವಾಸ್, ಪುತ್ತೂರು ಐಟಿಐ ಪ್ರಚಾರ್ಯರಾದ ಪ್ರಕಾಶ್ ಪೈ, ಅಕ್ಷಯ ಕಾಲೇಜಿನ ಸಂಪತ್,ಫಿಲೋಮಿನಾ ಕಾಲೇಜಿನ ಭಾರತಿ ಎಸ್ ರೈ, ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅಪ್ಪು,ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಶ್ರೀಕಾಂತ್,ವಿಟ್ಲ ಸರಕಾರಿ ಪ್ರಥಮ ಕಾಲೇಜಿನ ಪದ್ಮನಾಭ, ಬೆಟ್ಡಂಪಾಡಿ ಕಾಲೇಜಿನಡಾ. ಕಾಂತೇಶ್,ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಗೋಪಾಲಕೃ್ಷ್ಣ ಉಪಸ್ಥಿತರಿದ್ದರು.

ರೈ ಎಜುಕೇಶನಲ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಸದಸ್ಯರುಗಳಾದ ರಿತೇಶ್ ಶೆಟ್ಟಿ, ಜಯಪ್ರಕಾಶ್ ಬದಿನಾರ್, ಯೋಗೀಶ್‌ ಸಾಮಾನಿ, ರಾಕೇಶ್ ರೈ ಕುದ್ಕಾಡಿ ಉಪಸ್ಥಿತರಿದ್ದರು. ಟ್ರಸ್ಟ್ ನ ಮುಖ್ಯಸ್ಥರಾದ ನಿಹಾಲ್ ಶೆಟ್ಟಿ ಸ್ವಾಗತಿಸಿದರು.‌ ಮಹಮ್ಮದ್ ಬಡಗನ್ನೂರು ವಂದಿಸಿದರು

Continue Reading
Click to comment

Leave a Reply

ಶಿಕ್ಷಣ

Ambika Vidyaalaya: ಯುವಕರು ಜಾಗೃತರಾದರೆ ಭಾರತವನ್ನು ತಡೆಯುವ ಮತ್ತೊಂದು ಶಕ್ತಿಯಿಲ್ಲ : ಸುಬ್ರಹ್ಮಣ್ಯ ನಟ್ಟೋಜ

Ad Widget

Ad Widget


ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಪುತ್ತೂರು: ಸ್ವಾತಂತ್ರಾö್ಯನAತರದ ಏಳು ದಶಕಗಳ ಬಳಿಕವೂ ನಾವು ಬ್ರಿಟಿಷರ ಮಾನಸಿಕತೆಯಿಂದ ಹೊರಬಂದಿಲ್ಲ. ಅನೇಕರು ತಾವು ಭಾರತೀಯರು ಎಂಬ ಕಲ್ಪನೆಯನ್ನು ಬೆಳೆಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಉತ್ಕೃಷ್ಟವಾದ ಭಾರತೀಯ ವಿಚಾರಧಾರೆಗಳು, ಪರಂಪರೆಗಳು ಕಣ್ಣ ಮುಂದಿದ್ದರೂ ವಿದೇಶೀ ವಿಚಾರಗಳೆಡೆಗೆ ಆಕರ್ಷಿತರಾಗುತ್ತಿದ್ದೇವೆ. ಯುವಮನಸ್ಸುಗಳಿಗೆ ಒಮ್ಮೆ ನಮ್ಮ ಪಾರಂಪರಿಕವಾದ ಸಂಗತಿಗಳ ಶ್ರೇಷ್ಟತೆ ಅರಿವಾದರೆ ಮತ್ತೆ ಭಾರತವನ್ನು ತಡೆಯುವ ಶಕ್ತಿ ಜಗತ್ತಿನಲ್ಲಿಲ್ಲ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ‘ರಾಷ್ಟಿçÃಯ ಚಿಂತನೆಗಳು ಹಾಗೂ ಯುವಶಕ್ತಿ’ ವಿಚಾರವಾಗಿ ಮಾತನಾಡಿದರು.
ನಮ್ಮ ಋಷಿ ಮುನಿಗಳ ಕಾಲದಿಂದಲೂ ಸಾಧನೆಯೆಡೆಗಿನ ಹಾದಿಯ ಬಗೆಗೆ ಮಾರ್ಗದರ್ಶನಗಳು ನಿರಂತರವಾಗಿ ಒದಗಿ ಬಂದಿವೆ. ಭೋಗ ಸುಖಕ್ಕೆ ಆದ್ಯತೆ ನೀಡದೆ ಹಠ ಸಾಧನೆಗೆ ಮಹತ್ವ ನೀಡಲಾಗಿದೆ. ಮನುಷ್ಯನೊಳಗೆ ಒಮ್ಮೆ ಸಾಧಿಸುವ ಹಠ ಮೂಡಿದರೆ ಅದ್ಭುತವಾದದ್ದನ್ನು ಸಾಕಾರಗೊಳಿಸುವುದಕ್ಕೆ ಸಾಧ್ಯ. ನಮ್ಮ ದೇಹವನ್ನು ಸಾಧನಾಪಥಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕೆಂಬ ದಾರಿಯನ್ನು ನಮ್ಮ ಹಿರಿಯರೇ ಆಚರಿಸಿ ತೋರಿದ್ದಾರೆ. ಅವರ ಹಾದಿಯನ್ನು ಅನುಸರಿಸುವುದಷ್ಟೇ ನಮ್ಮ ಮುಂದಿರುವ ಜವಾಬ್ದಾರಿ ಎಂದರು.
ಯೋಗ – ಧ್ಯಾನಗಳಂತಹ ಮಹತ್ತರವಾದ ಕೊಡುಗೆಯನ್ನು ನಮ್ಮ ಪರಂಪರೆ ನಮಗೆ ನೀಡಿದೆ. ದಿನವೊಂದಕ್ಕೆ ಅದಕ್ಕಾಗಿ ಮೀಸಲಿಡುವ ಹತ್ತು – ಹದಿನೈದು ನಿಮಿಷಗಳು ನಮ್ಮನ್ನು ತೇಜಸ್ವೀ ಮನುಷ್ಯರನ್ನಾಗಿಸುತ್ತವೆ. ಹಿಂದೂ ಧರ್ಮ ನಮಗೆ ನೀಡಿರುವ ಮಹಾನ್ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸುವ ಕಾರ್ಯ ಆಗಬೇಕಿದೆ. ಯಾರು ಧರ್ಮವನ್ನು ರಕ್ಷಿಸುತ್ತಾನೋ ಅಂಥಹವನನ್ನು ಧರ್ಮವೇ ರಕ್ಷಿಸುತ್ತದೆ ಎಂಬುದು ಬಾಯಿಮಾತಲ್ಲ. ಅದರ ಹಿಂದಿರುವ ಅರ್ಥಗಳನ್ನು ಗ್ರಹಿಸಿ ಕಾರ್ಯತತ್ಪರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಎ, ಶಶಿಕಲಾ ವರ್ಕಾಡಿ, ಅನನ್ಯಾ ವಿ, ಜಯಂತಿ ಪಿ, ಸಂಧ್ಯಾ ಎಂ, ಗಿರೀಶ ಭಟ್ ಕುವೆತ್ತಂಡ, ಹರ್ಷಿತ್ ಪಿಂಡಿವನ, ವೀಣಾ ಶಾರದಾ, ಕಚೇರಿ ಉದ್ಯೋಗಿಗಳಾದ ಗಾಯತ್ರೀದೇವಿ ಹಾಗೂ ಪ್ರಮೋದ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿ, ಮನಃಶಾಸ್ತç ವಿಭಾಗದ ಮುಖ್ಯಸ್ಥ ಚಂದ್ರಕಾAತ ಗೋರೆ ವಂದಿಸಿದರು.

Ad Widget

Ad Widget

Ad Widget

Ad Widget
Continue Reading

ಶಿಕ್ಷಣ

Ambika Vidyalaya: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಕ್ರೀಡಾ ಮೈತ್ರಿ 2023 ಪಂದ್ಯಾಟಕ್ಕೆ ತೆರೆ – ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ : ರಾಜೇಂದ್ರ ಪ್ರಸಾದ್

Ad Widget

Ad Widget


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ವಾಲಿಬಾಲ್ ಹಾಗೂ ಥ್ರೋ ಬಾಲ್ ಪಂದ್ಯಾಟದ ಸಮಾರೋಪ ಸಮಾರಂಭ ಶುಕ್ರವಾರ ನಡೆಯಿತು. ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಪುರುಷರ ವಾಲಿಬಾಲ್ ತಂಡ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಮಹಿಳಾ ಥ್ರೋ ಬಾಲ್ ತಂಡ ಕ್ರಮವಾಗಿ ಚಾಂಪಿಯನ್ಸ್ ಟ್ರೋಫಿ ತಮ್ಮದಾಗಿಸಿಕೊಂಡರು.

Ad Widget

Ad Widget

Ad Widget

Ad Widget


ಅಂತೆಯೇ ಪುರುಷರ ವಾಲಿ ಬಾಲ್ ಪಂದ್ಯಾಟದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪುರುಷ ತಂಡ ರನ್ರ್ಸ್ ಟ್ರೋಫಿ ಪಡೆದರೆ ಥ್ರೋಬಾಲ್ ಪಂದ್ಯಾಟದಲ್ಲಿ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮಹಿಳಾ ತಂಡ ರನ್ರ್ಸ್ ಟ್ರೋಫಿ ಪಡೆದರು.

Ad Widget

Ad Widget

Ad Widget

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಸೋಲು ಗೆಲುವಿನ ಹಂಗಿಲ್ಲದೆ ಕೇವಲ ಆಡುವ ದೃಷ್ಟಿಕೋನದಿಂದ ಅಂಗಳಕ್ಕಿಳಿದಾಗ ಮನಸ್ಸಿಗೆ ಮುದ ದೊರಕುವುದಕ್ಕೆ ಸಾಧ್ಯ. ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಆಂತರಿಕ ಕ್ರೀಡೆಯನ್ನು ಆಯೋಜಿಸುವುದು ಅತ್ಯಂತ ಮುಖ್ಯ ಹಾಗೂ ಪರಿಣಾಮಕಾರಿ ಎಂದರು.

Ad Widget


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ ಎ, ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಅಂಬಿಕಾ ಮಹಾವಿದ್ಯಾಲಯದ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾAತ ಗೋರೆ ಉಪಸ್ಥಿತರಿದ್ದರು. ಅಂಬಿಕಾ ಮಹಾವಿದ್ಯಾಲಯದ ಅಂತಿಮ ಬಿ.ಕಾಂ ವಿದ್ಯಾರ್ಥಿ ಅನ್ಮಯ್ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಪಂದ್ಯಾಟಗಳನ್ನು ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ದೈಹಿಕ ಶಿಕ್ಷಕರಾದ ಸುಚಿತ್ರಾ ಹಾಗೂ ಮಹೇಶ್ ನಡೆಸಿಕೊಟ್ಟರು

Ad Widget

Ad Widget
Continue Reading

ಶಿಕ್ಷಣ

Philomina Pu College: ಫಿಲೋಮಿನಾ ಪ. ಪೂ ಕಾಲೇಜಿನ ವಿಂಧ್ಯಾಶ್ರೀ ರೈ ರಾಜ್ಯ ಮಟ್ಟಕ್ಕೆ ಆಯ್ಕೆ

Ad Widget

Ad Widget


ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿಶ್ವಮಾನವ ಪದವಿ ಪೂರ್ವ ಕಾಲೇಜು ಕೊಮ್ಮೇರಹಳ್ಳಿ, ಮಂಡ್ಯ ಇಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿಂಧ್ಯಾಶ್ರೀ ರೈ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Ad Widget

Ad Widget

Ad Widget

Ad Widget


ಇವರು ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಇವರು ಶ್ರೀ ಮದ್ ಭಗವದ್ಗೀತಾ ಜಯಂತಿ ಪ್ರಯುಕ್ತ ನಡೆಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget

Ad Widget

Ad Widget


ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಉಪ್ಪಿನಂಗಡಿ ಹೋಬಳಿ ಘಟಕ, ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನೇತೃತ್ವದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಪುತ್ತೂರು ತಾಲೂಕು ಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ, ಹಾಗೂ ದೇಶಭಕ್ತಿಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad Widget


ಇವರು ಕುರಿಯ ನಿವಾಸಿಯಾದ ಉಮೇಶ್ ರೈ ಮತ್ತು ಶೋಭಾವತಿ. ಯು.ರೈ ದಂಪತಿಗಳ ಪುತ್ರಿ . ಕಾಲೇಜಿನ ಪ್ರಾಂಶುಪಾಲರಾದ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಯನ್ನೂ ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ನಿರ್ದೇಶಕರಾದ ಸುಮನ ರಾವ್, ರಶ್ಮಿ ಪಿ ಎಸ್, ಹಾಗೂ ಭರತ್ ಜಿ.ಪೈ ಉಪಸ್ಥಿತರಿದ್ದರು.

Ad Widget

Ad Widget
Continue Reading

Trending

error: Content is protected !!