ಅಪರಾಧ
ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ – 7 ಮನೆ 2 ವಾಹನ ಜಖಂ – ನಿಷೇದಾಜ್ಞೆ ಜಾರಿ

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ (Eid Milad Procession) ವೇಳೆ ಕಲ್ಲು ತೂರಾಟ (Stone Pelting) ನಡೆಸಿರುವ ಘಟನೆ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಶಾಂತಿನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಗಲಭೆ ಪೀಡಿತ ಪ್ರದೇಶದಲ್ಲಿ ಸೆ 144 ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಆದೇಶಿಸಿದ್ದಾರೆ.
2 ಗುಂಪಿನ ನಡುವೆ ಕಲ್ಲು ತೂರಾಟ ನಡೆದು, 6 ಮಂದಿ ಗಾಯಗೊಂಡಿದ್ದಾರೆ. 7 ಮನೆ, 1 ಕಾರು, 1 ಬೈಕ್ ಜಖಂಗೊಂಡಿವೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. 35 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈದ್ ಮಿಲಾದ್ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಮುಸ್ಲಿಂ ಬಾಂಧವರು ಮೆರವಣಿಗೆ ಹಮ್ಮಿಕೊಂಡಿದ್ದರು. ಸೆ 28 ರಂದು ಹಿಂದೂ ಮಹಾಸಭಾ ವತಿಯಿಂದ ಆರಾಧಿಸಲ್ಪಟ್ಟ ಗಣಪತಿಯ ವಿಸರ್ಜನಾ ಮೆರವಣಿಗೆ ಇದ್ದಿದ್ದರಿಂದ, ಈದ್ ಮಿಲಾದ್ ಮೆರವಣಿಗೆಯನ್ನು ನಿನ್ನೆಗೆ (ಭಾನುವಾರ) ಮುಸ್ಲಿಂ ಮುಖಂಡರು ಹಮ್ಮಿಕೊಂಡಿದ್ದರು. ಈ ಮೆರವಣಿಗೆಗೆ ಶಿವಮೊಗ್ಗ ನಗರವನ್ನು ಹಸಿರುಮಯ ಮಾಡಲಾಗಿತ್ತು. ಹಸಿರು ಬಾವುಟ, ಟಿಪ್ಪು ಸುಲ್ತಾನ್, ಔರಂಗಜೇಬ್ ಕಟೌಟ್ ಹಾಕಿದ್ದರು.
ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಾಂಧಿ ಬಜಾರಿನ ಜಾಮೀಯಾ ಮಸೀದಿಯಿಂದ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಲು ನಗರದ ಎಲ್ಲಾ ಬಡಾವಣೆಗಳಿಂದ ಮುಸ್ಲಿಂರು ಆಗಮಿಸಿದರು. ರಾಗಿಗುಡ್ಡದಿಂದಲೂ ಮೆರವಣಿಗೆಯಲ್ಲಿ ಭಾಗಿಯಾಗಲು ಕೆಲ ಮುಸ್ಲಿಂ ಸಮುದಾಯದವರು ತೆರಳುತ್ತಿದ್ದರು. ಈ ವೇಳೆ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುವಾಗ ಕಲ್ಲು ತೂರಾಟ ನಡೆದಿದೆ ಎಂದು ಸುದ್ದಿ ಹರಡಿದ್ದು ಇದರಿಂದ ಉದ್ವೀಗ್ನಗೊಂಡ ತಂಡವೊಂದು ಹಿಂಸಾಚರಕ್ಕೆ ಮುಂದಾಗಿ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪರಿಣಾಮ ಹಿಂದೂ ಸಮುದಾಯದವರಿಗೆ ಸೇರಿದ ಒಟ್ಟು 7 ಮನೆಗಳು ಹಾಗೂ 1 ಬೈಕ್, 1 ಕಾರು ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಲಾಗಿದೆ ಎಂದು ಕನ್ನಡದ ದೈನಿಕವೊಂದು ವರದಿ ಮಾಡಿದೆ.
ಭಾನುವಾರ ಮುಂಜಾನೆ ಕೂಡ ರಾಗಿಗುಡ್ಡದಲ್ಲಿ ಗೊಂದಲ ಉಂಟಾಗಿತ್ತು. ರಾಗಿಗುಡ್ಡದ ವೃತ್ತವೊಂದರಲ್ಲಿ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದರು. ಟಿಪ್ಪು ಸುಲ್ತಾನ್ ಇಬ್ಬರು ಹಿಂದೂ ಮಾದರಿಯ ಸೈನಿಕರನ್ನು ತುಳಿಯುತ್ತಿರುವ ರೀತಿ ಕಟೌಟ್ ಹಿಂದೂತ್ವವಾದಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿ ಅದನ್ನು ತೆಗೆಯುವುಂತೆ ಒತ್ತಾಯಿಸಿದರು . ಇದರಿಂದ ಉಂಟಾದ ಗೊಂದಲ ನಿವಾರಿಸಲು ಪೊಲೀಸರು ಕೆಲ ಭಾಗಗಳಿಗೆ ಬಿಳಿ ಬಣ್ಣ ಹಚ್ಚಿ ಮುಚ್ಚಿದ್ದರು ಎಂದು ಕನ್ನಡ ವರದಿ ಮಾಡಿದೆ. ಇದಕ್ಕೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು. ನಂತರ ಸ್ಥಳಕ್ಕೆ ಎಸ್‌ಪಿ ಮಿಥುನ್ ಕುಮಾರ್ ಭೇಟಿ ನೀಡಿ ಮನವೊಲಿಸಿದ್ದರು.
ಇಷ್ಟಾದ ಮೇಲೂ ರಾಗಿಗುಡ್ಡದಿಂದ ಗಾಂಧಿ ಬಜಾರಿಗೆ ಮೆರವಣಿಗೆ ತೆರಳುತ್ತಿದ್ದ ಸಂದರ್ಭ ಇತ್ತಂಡಗಳಿಂದ ಕಲ್ಲು ತೂರಾಟ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ 25 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರೆಸಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದೆ. . ರಾಗಿಗುಡ್ಡ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸದ್ಯ ಗಲಭೆ ನಡೆದ ಸ್ಥಳದಲ್ಲಿ ಆರ್‌ಎಎಫ್, ಡಿಎಆರ್, ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಅಪರಾಧ
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಪುತ್ತೂರು: ಕೆದಿಲದಲ್ಲಿ ನವೆಂಬರ್ 22 ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಡಿ 4 ರಂದು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು , ಇಂದು(ಮಂಗಳವಾರ) ಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಹಾಲಿ ಚಿಕ್ಕಮಂಗಳೂರು ಉಪ್ಪಳ್ಳಿ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ.19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಕೆದಿಲದ ರಮ್ಲ ಕುಂಞಿ ಮನೆಯಲ್ಲಿ ಕಳ್ಳತನಗೈದಿದ್ದ ಆರೋಪಿ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳವುಗೈದಿದ್ದ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ ಸಂಖ್ಯೆ 112 ಮತ್ತು 113ರಂತೆ ಪ್ರಕರಣ ದಾಖಲಾಗಿತ್ತು.
ಸಿಕ್ಕಿಬಿದ್ದದ್ದು ಹೀಗೆ
ಈ ಪೈಕಿ ಆರೋಪಿಯು ಕಳವು ಗೈದ ದ್ವಿಚಕ್ರವಾಹನ ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ. ಅದನ್ನು ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸೋಮವಾರ ಅಬೂಬ್ಬಕರ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಖರೀದಿಸಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಉಂಟಾಗಿದೆ. ಅವರು ಆತನ ಬೆನ್ನ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.
ಈತ ಅಲ್ಲಿಂದ ತಾನು ಬೈಕ್ ಅಡಗಿಸಿಟ್ಟಿದ್ದ ಗುಡ್ಡಕ್ಕೆ ತೆರಳಿದ್ದು ಈ ವೇಳೆ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ವಿಚಾರಿಸಿದ್ದಾರೆ. ಈವೇಳೆ ಆತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಬಳಿಕ ಸ್ಥಳೀಯರು ಆತನನ್ನು ಠಾಣೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಒಂದೇ ದಿನ ಎರಡು ಕಳ್ಳತನ
ರಮ್ಲ ಕುಂಞಿ ಬೆಂಗಳೂರು ಕಂಬಳಕ್ಕೆ ವ್ಯಾಪಾರಕ್ಕೆಂದು ನ.22ರಂದು ರಾತ್ರಿ 8 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದು, ಕೆದಿಲ ಮಿತ್ತಪಡ್ಪು ನಿವಾಸಿ ಹಮೀದ್ ನ.23 ರಂದು ಬೆಳಗ್ಗೆ ಹೋಗಿ ನೋಡುವ ಸಂದರ್ಭದಲ್ಲಿ ಬೀಗ ಮುರಿದಿದ್ದು ಪತ್ತೆಯಾಗಿತ್ತು, ಕಪಾಟಿನಲ್ಲಿದ್ದ ಸುಮಾರು ೨ಲಕ್ಷ ಕಳವಾಗಿತ್ತು. ಇದರ ಜತೆಗೆ ಕೋಡಿ ನಿವಾಸಿ ಉಮ್ಮರ್ ಫಾರೂಕ್ ಅವರಿಗೆ ಸೇರಿದ ದ್ವಿಚಕ್ರವಾಹನ ಮನೆಯ ಅಂಗಳದಿಂದ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿತ್ತು.
ಇತ್ತೆ ಬರ್ಪೆ ಹೆಸರು ಬಂದದ್ದು ಹೇಗೆ :
ಟ್ಲದಲ್ಲಿ ಅಟೋ ರಿಕ್ಷಾ ಹೊಂದಿದ್ದ ಅಬೂಬಕ್ಕರ್ ರಿಕ್ಷಾ ಹಿಂಭಾಗದಲ್ಲಿ ಇತ್ತೆ ಬರ್ಪೆ ಎಂದು ಬರೆದಿಕೊಂಡಿದ್ದರು. ಇದರಿಂದ ಆ ಹೆಸರಿನಲ್ಲೇ ಜನರಿಗೆ ಚಿರಪರಿಚಿತರಾಗಿದ್ದರು. ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80 ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿತ್ತು.
ಅಪರಾಧ
Ballari Murder case ಸರಿಯಾಗಿ ಆರೈಕೆ ಮಾಡ್ತಿಲ್ಲ ಎಂದು ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ: ಪೊಲೀಸರಿಗೆ ಆರೋಪಿ ಶರಣು
ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿಲ್ಲವೆಂದು ಪತಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಬಳ್ಳಾರಿ, (ಡಿಸೆಂಬರ್ 04): ಸರಿಯಾಗಿ ಆರೈಕೆ ಮಾಡುತ್ತಿಲ್ಲ ಎಂದು ಕೋಪಗೊಂಡ ಪತಿರಾಯನೊಬ್ಬ(Husband) ಹೆಂಡತಿಯನ್ನು(Wife) ಕೊಚ್ಚಿ ಕೊಂದಿರುವ ಘಟನೆ ಬಳ್ಳಾರಿ(Bellary) ಜಿಲ್ಲೆಯ ಸಿರುಗುಪ್ಪದ ಬಲಕುಂದಿ ಗ್ರಾಮದಲ್ಲಿ ನಡೆದಿದೆ. ಮೈಬುನಾ ಬಿ. (35) ಕೊಲೆಯಾದ ಮಹಿಳೆ.
ಡಯಾಲಿಸಿಸ್ ರೋಗಿಯಾಗಿರುವ ಆರೋಪಿ ರಸೂಲ್ ಸಾಬ್, ಪತ್ನಿ ಸರಿಯಾಗಿ ಕೇರ್ ಮಾಡುತ್ತಿಲ್ಲ ಎಂದು ಮಲಗಿದ್ದ ಮೈಬುನಾಳನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ರಸೂಲ್ ಸಾಬ್ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ರಸೂಲ್ ಸಾಬ್ ನನಗೆ ಡಯಾಲಿಸಿಸ್ ಕಾಯಲೆ ಇದೆ. ಆದ್ರೆ, ಪತ್ನಿ ಸರಿಯಾಗಿ ಆರೈಕೆ ಮಾಡುತ್ತಿಲ್ಲ. ಹೀಗಾಗಿ ನಾನು ಬೇಗ ಸಾಯುತ್ತೇನೆ. ನನಗಿಂತ ಮೊದಲು ಪತ್ನಿ ಸಾಯಬೇಕು ಎಂದು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ತೆಕ್ಕಲಕೋಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅಪರಾಧ
Shabarimala ಶಬರಿಮಲೆ ಅಯ್ಯಪ್ಪ ಭಕ್ತರ ವೇಷ ಧರಿಸಿ ಕಾರಿನಲ್ಲಿ ಕೋಟ್ಯಂತರ ಮೌಲ್ಯದ ಅಂಬರ್ ಗ್ರೀಸ್ ಸಾಗಾಟ; ಮೂವರ ಬಂಧನ

ಗುರುವಾಯೂರು: ಶಬರಿಮಲೆ ಅಯ್ಯಪ್ಪ ಭಕ್ತರ ಸೋಗಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತ ಕೋಟ್ಯಂತರ ಮೌಲ್ಯದ ತಿಮಿಂಗಿಲದ ವಿಸರ್ಜನೆ ಅಂಬರ್ ಗ್ರೀಸ್ ಅಕ್ರಮ ಸಾಗಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಲಾಗಿದೆ. ಕೊಯಿಲಾಂಡಿ ಮರಕ್ಕಾಟ್ಟುಪೊಯಿಲ್ ನ ಬಾಜಿನ್ (31), ಕೊಯಿಲಾಂಡಿ ವಟ್ಟಕಂಡಿಯ ರಾಹುಲ್ (26), ಕೋಝಿಕ್ಕ್ಕೋಡ್ ಅರಿಕ್ಕುಳಂ ರಾಮಪಾಟ್ಕಂಡಿಯ ಅರುಣ್ ದಾಸ್ (30) (30) ಬಂಧಿತರು. ಈ ಮೂವರು ಆಯ್ಯಪ್ಪ ವರತಧಾರಿಗಳಂತೆ ವೇಷ ಧರಿಸಿದ್ದರು.
ಆರೋಪಿಗಳನ್ನು ತ್ರಿಶೂರ್ ನಗರ ಪೊಲೀಸ್ ಕಮಿಷನರ್ ನೇತೃತ್ವದ ಶ್ಯಾಡೋ ಪೊಲೀಸ್ ಜಿಲ್ಲಾ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಗುರುವಾಯೂರ್ ದೇಗುಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.1972ರ ವನ್ಯಜೀವಿ ಸಂರಕ್ಷಣೆ ಕಾಯಿದೆಯಡಿ ದೇಶದಲ್ಲಿ ತಿಮಿಂಗಿಲದ ವಿಸರ್ಜನೆ ಹೊಂದಿರುವುದು ಸಾಗಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂಬರ್ ಗ್ರೀಸ್ ಖರೀದಿಸಲು ಬಂದ ಮಧ್ಯವರ್ತಿಗಳ ಸೋಗಿನಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಇವರು ಅಯ್ಯಪ್ಪ ವೃತಧಾರಿಗಳು ಬಳಸುವ ಕಪ್ಪು ವಸ್ತ್ರ ಧರಿಸಿದ್ದು, ಮೈಯೆಲ್ಲ ಆಯ್ಯಪ್ಪ ಭಕ್ತರಂತೆ ವಿಭೂತಿ ಬಳಿದುಕೊಂಡಿದ್ದರು. ಪೊಲೀಸರ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಅವರು ಈ ರೀತಿ ನಾಟಕವಾಡಿದರು ಎಂದು ಆರೋಪಿಗಳು ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ಪ್ರಯಾಣಿಸುತ್ತಿದ್ದ ಕಾರಿನಿಂದ ಐದು ಕೆಜಿ ಅಂಬರ್ ಗ್ರೀಸ್ ಮತ್ತು ಐಷಾರಾಮಿ ಕಾರನ್ನು ವಶಪಡಿಸಲಾಗಿದೆ. ಗುರುವಾಯೂರು ದೇಗುಲ ಠಾಣೆಯ ಪೊಲೀಸರು ದಾಖಲಿಸಿಕೊಂಡ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಗುರುವಾಯೂರು ಎಸಿಪಿ ಕೆ.ಜಿ.ಸುರೇಶ್, ದೇಗುಲ ಠಾಣೆಯ ಎಚ್ ಒಸಿ. ಪ್ರೇಮಾನಂದ ಕೃಷ್ಣನ್, ಎಸ್ಐ ವಿ.ಪಿ.ಅಶ್ರಫ್, ಸೀನಿಯರ್ ಸಿಪಿಒ ಎನ್.ರಜಿತ್, ಶ್ಯಾಡೋ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಎನ್.ಜಿ. ಸುವ್ರತಕುಮಾರ್, ಸಿಪಿಒಗಳಾದ ಪಿ.ಎಂ. ರಫಿ, ಎಂ.ಎಸ್. ಲಿಗೇಶ್, ಎಸ್. ಶರತ್, ಸಿಂಪ್ಸನ್ ಮತ್ತು ಪ್ರದೀಪ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

-
ಅಪರಾಧ8 hours ago
ವಿಟ್ಲ : 80 ಪ್ರಕರಣಗಳ ಸರದಾರ ʼಇತ್ತೆ ಬರ್ಪೆ ಅಬೂಬ್ಬಕರ್ʼ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು – ಅಷ್ಟಕ್ಕೂ ಈತ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತಾ? ಇತ್ತೆ ಬರ್ಪೆ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ
-
ಬಿಗ್ ನ್ಯೂಸ್13 hours ago
ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಕುಟುಂಬಕ್ಕೆ ಚೆಕ್ ವಿತರಣೆ : ಮೊತ್ತ ತಾಯಿ-ಪತ್ನಿಗೆ ಸಮಪಾಲು ಮಾಡಿದ ಸರ್ಕಾರ
-
ಕ್ರೀಡೆ12 hours ago
Bomb Threat ಪ್ರಿಯಕರ ಕೊಟ್ಟ ಐಡಿಯಾ ನಂಬಿ ಗಂಡನ ಜೈಲಿಗೆ ಕಳುಹಿಸಲು ಆತನ ಮೊಬೈಲ್ʼನಿಂದ ಹೆಂಡತಿ ಕಳುಹಿಸಿದಳು ಬೆದರಿಕೆ ಮೆಸೇಜ್ – ಆದರೇ ಮುಂದೇನಾಯಿತು ?
-
ಕ್ರೀಡೆ10 hours ago
Jay shah: ಜಯ್ ಶಾಗೆ ಸ್ಪೋರ್ಟ್ಸ್ ಬ್ಯುಸಿನೆಸ್ ಲೀಡರ್ ಆಫ್ ದಿ ಇಯರ್ ಪ್ರಶಸ್ತಿಯ ಗರಿ – ಬಿಸಿಸಿಐ ಕಾರ್ಯದರ್ಶಿಗೆ ಈ ಗೌರವ ಸಿಕ್ಕಿದ್ದು ಯಾಕೆ ಗೊತ್ತೆ ?
-
ರಾಜಕೀಯ10 hours ago
Harish Poonja Moved Privilege motion ತನ್ನ ಮೇಲೆ ಎಫ್ ಐ ಆರ್ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?
-
ಸಿನೆಮಾ1 day ago
Animal Box Office collection ರಣ್ ಬೀರ್ – ರಶ್ಮಿಕಾ ಜೋಡಿ ಕಮಾಲ್ : ಅನಿಮಲ್ ಬಾಕ್ಸ್ ಆಫೀಸ್ನಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?
-
ಸಾಮಾಜಿಕ ಮಾಧ್ಯಮ17 hours ago
Dasara Elephant Arjun Dies ಅರ್ಜುನ ಸಾವಿನ ಸುತ್ತ ಹಲವು ಅನುಮಾನ – ಮಾವುತರೊಂದಿಗೆ ಮಾತನಾಡಿದ ಕಾವಾಡಿಗರ ವಿಡಿಯೋ ವೈರಲ್ – ಅದರಲ್ಲಿದೆ ಗುಂಡೇಟಿನ ವಿಚಾರ
-
ಚಿನ್ನ-ಬೆಳ್ಳಿ ದರ18 hours ago
Gold Rate Hike:ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ : ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ದರ ಸಾರ್ವಕಾಲಿಕ ಜಿಗಿತ – ಮುಂದಿನ ದಿನಗಳಲ್ಲಿ ರೇಟ್ ಹೇಗಿರಲಿದೆ?