Connect with us

ಸುಳ್ಯ

ವಿವಾಹಿತೆ ಜತೆ ಪಲ್ಲಂಗದಾಟ – ನಗ್ನ ಚಿತ್ರ ಸೆರೆಹಿಡಿದು ಬ್ಲ್ಯಾಕ್‌ ಮೇಲ್‌ : ಪುತ್ತೂರು ನಿವಾಸಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಆರೆಸ್ಟ್‌

Ad Widget

Ad Widget

ವಿವಾಹಿತೆಯ ಜತೆ ಸಲುಗೆ ಬೆಳೆಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ನಗ್ನ ಚಿತ್ರ ಸೆರೆಹಿಡಿದು ಅದನ್ನು ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಹಾಗೂ ಆ ಮಹಿಳೆಯ ಆಕ್ಷೇಪಾರ್ಹ ಫೋಟೊ ಹಾಗೂ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಆರೋಪದಡಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಅರ್ಲಪದವು ಬಳಿ ನಿವಾಸಿ ಪ್ರಶಾಂತ ಭಟ್ ಮಾಣಿಲ (35) ಬಂಧಿತ. ಈತ ಮೂಲತ: ಪುತ್ತೂರಿನ ಅರ್ಲಪದವು ನಿವಾಸಿಯಾದರೂ, ಆತನ ಕಾರ್ಯಕ್ಷೇತ್ರವಿದ್ದದು ಸುಬ್ರಹ್ಮಣ್ಯದಲ್ಲಿ . ಅಲ್ಲಿ ಆತ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ

Ad Widget

Ad Widget

Ad Widget

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 28ರ ಹರೆಯದ ಮಹಿಳೆ ಸಂತ್ರಸ್ತೆ. ಈಕೆಗೆ ಹಾಡುವ ಖಯಾಲಿ ಇದ್ದು, ತನ್ನ ಸಂಗೀತ ಆಸಕ್ತಿಯನ್ನು ಪ್ರದರ್ಶಿಸಿಸಲು ಕ್ಲಬ್‌ ಹೌಸ್‌ ಅಪ್ಲಿಕೇಷನನ್ನು ವೇದಿಕೆಯಾಗಿ ಬಳಸುತ್ತಿದ್ದಳು . ಸಂಗೀತ ಆಸಕ್ತನಾಗಿದ್ದ ಪ್ರಶಾಂತ್ ಈಕೆಯ ಚ್ಯಾಟ್‌ ರೂಂ ಸೇರಿಕೊಂಡು ಹಾಡನ್ನು ಆಲಿಸುತ್ತಲೇ ಆಕೆಯ ಜತೆ ಚಾಟ್‌ ಮಾಡಲು ಆರಂಭಿಸಿದ್ದಾನೆ. ಬಣ್ಣ ಬಣ್ಣದ ಮಾತುಗಳಿಂದ ಆಕೆಯ ಹಾಡನ್ನು ಹೊಗಳಿದ ಆತ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಆಮೀಷವೊಡ್ಡಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ

Ad Widget

ಆರ್ಕೆಸ್ಟ್ರಾದಲ್ಲಿ ಹಾಡಬೇಕೆಂಬ ಆಸೆ ಹೊತ್ತಿದ್ದ ಮಹಿಳೆ ಇವನಿಗೆ ಮೊಬೈಲ್‌ ನಂಬರ್‌ ನೀಡಿದ್ದಾಳೆ. ಬಳಿಕ ನಡೆದದ್ದು ಮಾತ್ರ ಲವ್ವಿ ಡವ್ವಿ . ಸರಿ ಸುಮಾರು 2 ವರ್ಷ ಕಾಲ ಅವರಿಬ್ಬರು ಫೋನ್ ನಲ್ಲಿ ಮೆಸೇಜ್ ಹಾಗೂ ಕಾಲ್ ಮಾಡಿಕೊಂಡು ಕಾಲ ಕಳೆದಿದ್ದರು. ಇದೇ ವರ್ಷದ ಜನವರಿ ತಿಂಗಳ ಕೊನೆಯಲ್ಲಿ ಶಿರಸಿ ಮಾರಿಗುಡಿ ದೇವಸ್ಥಾನದಲ್ಲಿ ಭೇಟಿಯಾದ ಅವರಿಬ್ಬರು ಬಳಿಕ ಅಲ್ಲಿಂದ ನೇರ ಹೋಗಿ ಶಿರಸಿಯ ಖಾಸಗಿ ಲಾಡ್ಜ್ ನಲ್ಲಿ ಪಲ್ಲಂಗದಾಟ ಶುರು ಮಾಡಿಕೊಂಡಿದ್ದಾರೆ. ಬಳಿಕ ಅದು ಮುಂದಿನ ತಿಂಗಳು ಮುಂದುವರಿದಿದೆ. ಈ ವೇಳೆ ಅವರಿಬ್ಬರು ಜತೆ ಜತೆಯಾಗಿ ಫೊಟೊಗೆ ಫೋಸ್‌ ಕೂಡ ನೀಡಿದ್ದಾರೆ. ಇವೆಲ್ಲವೂ ಪ್ರಶಾಂತ್‌ ಮೊಬೈಲ್‌ ನಲ್ಲಿ ಭದ್ರವಾಗಿ ಸಂಗ್ರಹವಾಗಿತ್ತು

Ad Widget

Ad Widget

ಈ ಫೋಟೊ ಹಿಡಿದುಕೊಂಡು ಸಂತ್ರಸ್ತೆಯನ್ನು ಆರೋಪಿ ಬ್ಲ್ಯಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾನೆ. ವೀಡಿಯೋ ಕಾಲ್ ಮಾಡಿ, ಬೆತ್ತಲೆ ದೇಹವನ್ನು ತೋರಿಸುವಂತೆ ಒತ್ತಡ ಹಾಕಿದ ಆತ ತಪ್ಪಿದ್ದಲ್ಲಿ ಲಾಡ್ಜ್‌ ನಲ್ಲಿ ತೆಗೆದ ಫೋಟೊ ತಾಯಿ ಹಾಗೂ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಗತ್ಯಂತರವಿಲ್ಲದೇ ಮಹಿಳೆ ಮೊಬೈಲ್‌ ನಲ್ಲಿ ದೇಹ ಪ್ರದರ್ಶಿಸಿದ್ದು , ಅದು ಕೂಡ ಸ್ಕ್ರೀನ್ ಶಾಟ್ ರೂಪದಲ್ಲಿ ಪ್ರಶಾಂತ್‌ ನ ಫೋನ್‌ ಸೇರಿದೆ

ಈ ಬಳಿಕ ಈ ಎಲ್ಲ ಫೋಟೊಗಳನ್ನು ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು ಮಹಿಳೆ ಒಂದು ಬಾರಿ 25 ಸಾವಿರ ರೂಪಾಯಿ ಗೂಗಲ್‌ ಪೇ ಮಾಡಿದ್ದಾಳೆ. ಆದರೇ ಸ್ವಲ್ಪ ದಿನದ ಬಳಿಕ ಮತ್ತಷ್ಟೂ ಹಣಕ್ಕೆ ಬೇಡಿಕೆ ಇಟ್ಟ ಪ್ರಶಾಂತ್‌ 7 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹಾಕಿದ್ದಾನೆ. ಹಣ ನೀಡದಿದ್ದಾಗ ಆಕೆಯ ಖಾಸಗಿ ಫೋಟೋಗಳನ್ನು ಹಾಗೂ ತನ್ನ ಜೊತೆ ಇರುವ ಫೋಟೋಗಳನ್ನು ಮಹಿಳೆಯ ತಾಯಿಯ ಮೊಬೈಲಿಗೆ ವಾಟ್ಸಪ್ ಮಾಡಿದ್ದಾನೆ

ಕೊನೆಗೆ ಈತನ ಉಪಟಳ ತಾಳಲಾರದೇ ಮಹಿಳೆ ಕಾರವಾರ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮನೆ ಮಂದಿಗೆ ಹಾಗೂ ಮಾರ್ಯಾದೆಗೆ ಅಂಜಿ ತಡವಾಗಿ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾರೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ

Continue Reading
Click to comment

Leave a Reply

ಸುಳ್ಯ

ಸುಳ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ, ಪುತ್ತೂರು ಪಟ್ಟೆ ನಿವಾಸಿ ಸೂಯಿಸೈಡ್

Ad Widget

Ad Widget

ಪುತ್ತೂರು : ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ( ಡಿ 2) ರಾತ್ರಿ ಸಂಭವಿಸಿದೆ. ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ  ಪಟ್ಟೆ ನಿವಾಸಿ ಪ್ರೀತಂ(26) ಆತ್ಮಹತ್ಯೆ ಮಾಡಿಕೊಂಡವರು.

Ad Widget

Ad Widget

Ad Widget

Ad Widget

ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆನಂದ ಗೌಡ ಅವರ ಪುತ್ರ, ಸುಳ್ಯದ ಪರಿವಾರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪ್ರೀತಂ ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ ಮನೆಮಂದಿ ಮಲಗುವ ವೇಳೆ ನಾಳೆ ಮೂಡುಬಿದಿರೆಯಲ್ಲಿ ತರಬೇತಿ ಇದೆ. ಬೇಗ ಎಬ್ಬಿಸಿ ಎಂದು ತಾಯಿಯಲ್ಲಿ ತಿಳಿಸಿ ಬಳಿಕ ಕೋಣೆಯಲ್ಲಿ ಮಲಗಿದ್ದರು.

Ad Widget

Ad Widget

Ad Widget

ಭಾನುವಾರ ಬೆಳಗ್ಗೆ ತಾಯಿ ಪ್ರೀತಂ ಅವರನ್ನು ಎಬ್ಬಿಸಲು ಕೋಣೆಗೆ ಹೋದಾಗ ಅಲ್ಲಿ ಆತನಿರಲಿಲ್ಲ. ಹುಡುಕಾಡಿದಾಗ ಮನೆಯ ಅಂಗಳದ ಬಾವಿಯ ಪಕ್ಕದಲ್ಲಿ ಪ್ರೀತಂ ಚಪ್ಪಲಿ ಮತ್ತು ಮೊಬೈಲ್ ಕಂಡುಬಂದಿತ್ತು.

Ad Widget

ಈ ಹಿನ್ನಲೆಯಲ್ಲಿ ನೀಡಲಾದ ಮಾಹಿತಿಯಂತೆ ಅಗ್ನಿಶಾಮಕದವರು ಸ್ಥಳಕ್ಕೆ ಬಂದು ಬಾವಿಯಲ್ಲಿ ಶೋಧಿಸಿದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಪ್ರೀತಂ ಯಾವುದೋ ಕಾರಣದಿಂದಾಗಿ ಜೀವನದಲ್ಲಿ ಜಿಗುಪ್ಪೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Ad Widget

Ad Widget

ತಂದೆ ಆನಂದ ಗೌಡ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಸುಳ್ಯ

ಎಸ್ಪಿಯಾಗಿ ಪದೋನ್ನತಿ ಹೊಂದಿದ ಬೆಳ್ಳಾರೆಯ ಜಗನ್ನಾಥ್ ರೈ ಬಜನಿ

Ad Widget

Ad Widget

ಬೆಂಗಳೂರು : ಸುಳ್ಯ ತಾಲೂಕಿನ ಬೆಳ್ಳಾರೆಯ ಬಜನಿಗುತ್ತು ನಿವಾಸಿ ಜಗನ್ನಾಥ್ ರೈಯವರು ಸುಪರಿಂಡೆಂಟ್ ಆಫ್ ಪೊಲೀಸ್ ಆಗಿ ಪದೋನ್ನತಿ ಹೊಂದಿದ್ದಾರೆ.

Ad Widget

Ad Widget

Ad Widget

Ad Widget

ಬೆಳ್ಳಾರೆ ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿ , ನಂತರ ಪಿಯುಸಿ ಹಾಗೂ ಡಿಗ್ರಿ ವಿದ್ಯಾಭ್ಯಾಸವನ್ನು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು.

Ad Widget

Ad Widget

Ad Widget

1996 ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇರ್ಪಡೆಗೊಂಡ ಜಗನ್ನಾಥ್ ರೈ ಯವರು, ನಂತರ ಇನ್ಸ್ ಪೆಕ್ಟರ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತದನಂತ ಡಿವೈಎಸ್ಪಿ ಯಾಗಿ ಸಿಸಿಬಿ ಎಸಿಪಿಯಾಗಿ ಇದೀಗ ಎಸ್ಪಿಯಾಗಿದ್ದಾರೆ.

Ad Widget

ಬೆಂಗಳೂರಿನ ಗುಪ್ತಚಾರ ವಿಭಾಗದ ಎಸ್ಪಿಯಾಗಿ ಪದೋನ್ನತಿ ಹೊಂದಿದ್ದಾರೆ.

Ad Widget

Ad Widget

ಜಗನ್ನಾಥ ರೈಯವರು ಬೆಳ್ಳಾರೆ ಬಜನಿಗುತ್ತು ರಾಮಯ್ಯ ರೈ ಹಾಗೂ ಕುಸುಮಾವತಿ ದಂಪತಿಯ ಪುತ್ರ

Continue Reading

ಸುಳ್ಯ

ಶಾಲಾ ಮುಖ್ಯ ಶಿಕ್ಷಕ ಜನಾರ್ದನ ಗೌಡ ಹೃದಯಾಘಾತದಿಂದ ನಿಧನ

Ad Widget

Ad Widget

ರಾಮಕುಂಜ: ಕೊಯಿಲ ಗ್ರಾಮದ ಗಂಡಿಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ, ಅಲಂಕಾರು ಗ್ರಾಮದ ತೀರ್ಥಜಾಲು ನಿವಾಸಿ ಜನಾರ್ದನ ಗೌಡ (59) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.

Ad Widget

Ad Widget

Ad Widget

Ad Widget

ಜನಾರ್ದನ ಗೌಡ ಅವರು ಮಂಗಳವಾರ ಮಧ್ಯಾಹ್ನದ ವರೆಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಿ ಸಂಜೆ ಮನೆಗೆ ಬಂದಿದ್ದರು. ರಾತ್ರಿ ಅವರಿಗೆ ಎದೆನೋವು ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ಉಪ್ಪಿನಂಗಡಿಯ ಆಸ್ಪತ್ರೆಗೆ ಕರೆತಂದರಾದರು ಆ ವೇಳೆಗಾಗಲೇ ಜನಾರ್ಧನಗೌಡರವರು ಮೃತಪಟ್ಟಿದ್ದರು ಎನ್ನಲಾಗಿದೆ.

Ad Widget

Ad Widget

Ad Widget

ಜನಾರ್ದನ ಗೌಡ ಅವರು ನರಿಮೊಗರು ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ಬಳಿಕ ಕುಂಡಾಜೆ, ಕಳಪ್ಪಾರು, ಆಲಂಕಾರು ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ಎರಡು ವರ್ಷ ದ ಹಿಂದೆ ಮುಖ್ಯಶಿಕ್ಷಕರಾಗಿ ಭಡ್ತಿ ಪಡೆದು ಗಂಡಿಬಾಗಿಲು ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು

Ad Widget
Continue Reading

Trending

error: Content is protected !!