Connect with us

ರಾಜಕೀಯ

ಚೈತ್ರಾ ಅಂಡ್‌ ಟೀಮ್‌ ಗೆ ಇನ್ನು 15 ದಿನ ನ್ಯಾಯಾಂಗ ಬಂಧನ – ಮತ್ತೆ ಕೋರ್ಟಿನಲ್ಲಿ ಕಣ್ಣೀರು ಸುರಿಸಿದ ಫೈರ್‌ ಬ್ರ್ಯಾಂಡ್‌ – ಈ ಬಾರಿ ಕಾರಣವೇನು ಗೊತ್ತೇ ?

Ad Widget

Ad Widget

ಉದ್ಯಮಿಗೆ ಐದು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapura) ಮತ್ತು ಇತರೆ ಆರು ಮಂದಿ ಆರೋಪಿಗಳನ್ನು ಅಕ್ಟೋಬರ್ 6ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ (Bangalore) 3ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಇದೇ ವೇಳೆ ನ್ಯಾಯಾದೀಶರ ಮುಂದೆ ಮತ್ತೆ ಚೈತ್ರಾ ಕಣ್ಣೀರು ಸುರಿಸಿದ್ದಾರೆ.

Ad Widget

Ad Widget

Ad Widget

Ad Widget

ಇಂದಿಗೆ ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಸೇರಿದಂತೆ ಇತರೆ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸಿದ್ದರು. ಈ ವೇಳೆ ಇನ್ನು ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಕಾಲಾವಕಾಶ ಬೇಕು ಎಂದು ಸಿಸಿಬಿ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದರು. ಈ ಹಿನ್ನೆಲೆ ಚೈತ್ರಾ ಕುಂದಾಪುರ ಸೇರಿ ಪ್ರಕರಣದ ವಿಚಾರಣೆ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನನಾಯ್ಕ್, ಧನರಾಜ್, ಶ್ರೀಕಾಂತ್ ಆರೋಪಿಗಳನ್ನು ಮುಂದಿನ 15 ದಿನಗಳವರೆಗೆ ಅಂದರೆ, ಅಕ್ಟೋಬರ್‌ 6 ವರೆಗೂ ನ್ಯಾಯಾಂಗ ಬಂಧನ ಮುಂದುವರೆಸುವಂತೆ ಆದೇಶಿಸಿದೆ.

Ad Widget

Ad Widget

Ad Widget

ಸಿಸಿಬಿ ತನಿಖಾಧಿಕಾರಿಯವರು ಚೈತ್ರಾ ಮತ್ತು ಇತರೆ ಆರೋಪಿಗಳನ್ನು ವಿಚಾರಣೆ ನಡೆಸಿ ಎಲ್ಲಾ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ಚೈತ್ರಾ ಹಾಗೂ ಅಭಿನವ ಹಾಲಶ್ರೀ ಆಪ್ತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಾಲಶ್ರೀ ಅವರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

Ad Widget

ಚೈತ್ರಾ ಕುಂದಾಪುರ ಅವರನ್ನು ಮೊದಲ ಬಾರಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭದಲ್ಲಿ ಪೊಲೀಸರ ಮೇಲೆ ದೂರು ಹೇಳಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದರು. ಈ ಬಾರಿ ವಕೀಲರ ಬದಲಾವಣೆಗೆ ಚೈತ್ರಾ ಮನವಿ ಮಾಡಿಕೊಂಡರು. ಅಲ್ಲದೇ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದರು.

Ad Widget

Ad Widget

ಜಾಮೀನು ಅರ್ಜಿ 26ಕ್ಕೆ ಮುಂದೂಡಿಕೆ

ಇದೇ ಸಂದರ್ಭದಲ್ಲಿ ಆರೋಪಿಗಳಾದ ರಮೇಶ್, ಚನ್ನನಾಯ್ಕ್‌ ಮತ್ತು ಧನರಾಜ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಸೆಪ್ಟೆಂಬರ್‌ 26ಕ್ಕೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಟರ್‌ಗೆ ಕೋರ್ಟ್‌ ಸೂಚನೆ ನೀಡಿದೆ. ವಿಚಾರಣೆಯನ್ನು ಆ ದಿನಕ್ಕೆ ಕೋರ್ಟ್‌ ಮುಂದೂಡಿದೆ

Continue Reading
Click to comment

Leave a Reply

ರಾಜಕೀಯ

Harish Poonja Moved Privilege motion ತನ್ನ ಮೇಲೆ ಎಫ್‌ ಐ ಆರ್‌ ದಾಖಲಿಸಿದ ಅರಣ್ಯ ಅಧಿಕಾರಿಗಳ ವಿರುದ್ದ ಸದನದಲ್ಲಿ ಹಕ್ಕು ಚ್ಯುತಿ ಮಂಡಿಸಿದ ಹರೀಶ್‌ ಪೂಂಜಾ – ಏನಿದು ಪ್ರಕರಣ ? ಮುಂದೇನಾಯಿತು?

Ad Widget

Ad Widget

ಬೆಳಗಾವಿ: ತನ್ನ  ಮೇಲೆ ಎಫ್‌ಐಆರ್‌ ಹಾಕಿದ ಅರಣ್ಯಾಧಿಕಾರಿಗಳ ಮೇಲೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ (Belthangady MLA Harish Poonja) ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಹಕ್ಕು ಚ್ಯುತಿ ಮಂಡಿಸಿದ್ದಾರೆ. ಇದನ್ನು ಸ್ಪೀಕರ್‌ ಯು.ಟಿ. ಖಾದರ್‌  ಅವರು ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ವರ್ಗಾಯಿಸಿದ್ದಾರೆ.

Ad Widget

Ad Widget

Ad Widget

Ad Widget

   2 ತಿಂಗಳ ಹಿಂದೆ  ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ರೈತರೊಬ್ಬರ  ಮನೆಯನ್ನು  ಕಿತ್ತು ಹಾಕಲು ಮುಂದಾದಾಗ  ಅರಣ್ಯ ಅಧಿಕಾರಿಗಳ ಕ್ರಮವನ್ನು  ಶಾಸಕ ಹರೀಶ್‌ ಪೂಂಜಾ   ರೈತರ ಪರ ನಿಂತಿದ್ದರು. ಈ ವೇಳೆ  ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೂಂಜಾ ಮದ್ಯೆ ಮಾತಿನ ಚಕಮಕಿ ನಡೆದಿತ್ತು.ಇದನ್ನೆ ಮುಂದಿಟ್ಟು ಅರಣ್ಯ ಅಧಿಕಾರಿಗಳು ಪುಂಜಾ ವಿರುದ್ದ   ಎಫ್‌ಐಆರ್ ದಾಖಲಿಸಿದ್ದರು.

Ad Widget

Ad Widget

Ad Widget

ಈ ಎಫೈ ಆರ್‌ ವಿರುದ್ದ  ಆಕ್ರೋಶ  ಹೊರಹಾಕಿರುವ ಹರೀಶ್‌ ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ  ತಮ್ಮ ಹಕ್ಕಿಗೆ ಚ್ಯುತಿ ತರಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ  ಎಫ್‌ಐಆರ್‌ ದಾಖಲು ಮಾಡಿದ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ್ದಾರೆ.   

Ad Widget

ವಿಧಾನಸಭಾ  ಕಲಾಪದಲ್ಲಿ  ವಿರೋಧ ಪಕ್ಷದ ಸದಸ್ಯರು ಹಕ್ಕು ಚ್ಯುತಿ ಮಂಡಿಸಲು ಅವಕಾಶ ನೀಡುವಂತೆ ಕೋರಿದರು. ಇದಕ್ಕೆ ಜೆಡಿಎಸ್ ಸದಸ್ಯರು ಬೆಂಬಲ ನೀಡಿದ್ದಾರೆ . ಈ ಬಗ್ಗೆ ಸುನೀಲ್ ಕುಮಾರ್ ಮಾತನಾಡಿ ಬೆಳ್ತಂಗಡಿ ಶಾಸಕರ ಹಕ್ಕುಚ್ಯುತಿ ಮಂಡನೆ ಮಾಡಬೇಕಿದೆ. ಅರಣ್ಯ ಇಲಾಖೆಯವರು ಮನೆ ತೆರವು ಮಾಡಲು‌ ಹೋಗಿದ್ದರು. ಈ ವೇಳೆ ಶಾಸಕರಿಗೆ ಹಕ್ಕುಚ್ಯುತಿ ಆಗಿದೆ. ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

Ad Widget

Ad Widget

ಆದರೆ, ಅವಕಾಶ ಕೊಡದಿದ್ದಕ್ಕೆ ಸದನದಲ್ಲಿ ಗದ್ದಲ ಮುಂದುವರಿದಿತ್ತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯ ಪ್ರವೇಶ ಮಾಡಿ, ನಾನು ಬರಗಾಲ ಬಗ್ಗೆ ತಡವಾಗಿ ಚರ್ಚೆ ಮಾಡುತ್ತೇನೆ. ಈಗ ಶಾಸಕರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು

. ಆದರೆ ಈ ಮನವಿಯನ್ನು ನಿರಾಕರಿಸಿದ ಸ್ಪೀಕರ್‌ ಯು.ಟಿ. ಖಾದರ್‌, ನಾಳೆ ಬೆಳಗ್ಗೆ ಅವಕಾಶ ‌ನೀಡುತ್ತೇನೆ. ಈಗ ಬರಗಾಲ ಬಗ್ಗೆ ಚರ್ಚೆ ನಡೆಯಲಿ ಎಂದು ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯರು ಪಟ್ಟು ಬಿಡದೆ ಈಗಲೇ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಶಾಸಕನ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದೆ. ಹಕ್ಕು ಚ್ಯುತಿ ಪಡೆದುಕೊಂಡು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಲೇ ಹಕ್ಕುಚ್ಯುತಿ ಸಮಿತಿಗೆ ರೆಫರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸುನೀಲ್ ಕುಮಾರ್ ರವರು ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧದ ಕೇಸ್‌ ಅನ್ನು ವಾಪಸ್ ತೆಗೆದುಕೊಳ್ಳುತ್ತೀರಿ. ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳುತ್ತೀರಿ. ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದ ಸ್ಪೀಕರ್ ಯು.ಟಿ. ಖಾದರ್, ಹಕ್ಕುಚ್ಯುತಿ ಮಂಡನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದುಕೊಂಡರು.

ಆದರೆ ಹಕ್ಕುಚ್ಯುತಿಗೆ ಪ್ರಸ್ತಾಪಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ  ವ್ಯಕ್ತಪಡಿಸಿದರು. ಬರದ ಚರ್ಚೆ ನಡುವೆ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ‌ ಏಕೆ ಎಂದು ಪ್ರಶ್ನೆ ಮಾಡಿದರು. ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

 ಈ ವೇಳೆ ಶಾಸಕರ ಹಕ್ಕಿಗೆ ಚ್ಯುತಿ ಮಾಡಲು ಬಿಜೆಪಿ ಮುಂದಾದಾಗ ಅರಣ್ಯ ಅಧಿಕಾರಿಗಳ ಪರವಾಗಿ ಈಶ್ವರ್ ಖಂಡ್ರೆ ನಿಂತುಕೊಂಡರು. ಇದರಿಂದ ಬಿಜೆಪಿ ಶಾಸಕರು ಕೆರಳಿ ಕೆಂಡವಾದರು. “ಇದು ಅಧಿಕಾರಿಗಳ ರಾಜ್ಯವೇ?  ಒಬ್ಬ ಶಾಸಕನ ಬಳಿ ಡಿಎಫ್‌ಒ ಮುಚ್ಚಳಿಕೆ ಬರಿಸಿಕೊಳ್ಳುತ್ತಾನೆ ಎಂದರೆ ಈ ವಿಧಾನಸಭೆ, ಶಾಸಕರು ಯಾಕೆ ಇರಬೇಕು? ಇದು ಅಧಿಕಾರಿಗಳ ರಾಜ್ಯವೇ?” ಎಂದು ಆರ್‌. ಅಶೋಕ್‌ ಆಕ್ರೋಶ ಹೊರಹಾಕಿದರು

ಈ ವಿಚಾರದ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ :ಮಾನವ – ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ನಗರಕ್ಕೆ ಕಾಡು ಪ್ರಾಣಿಗಳು ಬರುತ್ತಿವೆ. ಇದಕ್ಕೆ ಯಾರು ಹೊಣೆ? ಅರಣ್ಯ ಅತಿಕ್ರಮಣವಾದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅತಿಕ್ರಮಣ ಸಮರ್ಥನೆ ಮಾಡಿದರೆ ಅರಣ್ಯ ನಾಶವಾಗುತ್ತದೆ ಎಂದು ಹೇಳಿದರು.

ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್.‌ ಅಶೋಕ್  ಅರಣ್ಯ ರಕ್ಷಣೆ ಮಾಡುವುದರ ಪರವಾಗಿ ನಾವೂ ಇದ್ದೇವೆ. ಮಾನವ ಕಾಡು ಪ್ರಾಣಿ ಸಂಘರ್ಷ ಸಾಮಾನ್ಯವಾಗಿದೆ. ಅರಣ್ಯ ಒತ್ತುವರಿ ಜಮೀನು ರೈತರಿಗೆ ಕೊಡಬೇಕು ಎಂದು ಸಾಕಷ್ಟು ಹೋರಾಟ ನಡೆದಿದೆ. ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಆಗಿದೆ ಎಂದು ಆರೋಪ ಬಂದಿತ್ತು. ನಾವು ಕೂಡಲೇ ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದೇವೆ. ಅಧಿಕಾರಿಗಳನ್ನು ಕೇಳುವವರು ಹೇಳುವವರು ಯಾರೂ ಇಲ್ಲದಂತಾಗಿದೆ. ಶಾಸಕರ ಮೇಲೆ ಎಫ್ಐಆರ್ ಹಾಕುತ್ತಾರೆ ಎಂದರೆ ಏನು ಅರ್ಥ ಬರುತ್ತದೆ? ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಕೇಸ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಬಳಿಕ ಸ್ಪೀಕರ್‌ ಯು.ಟಿ. ಖಾದರ್‌, ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ನಿರ್ಣಯವನ್ನು ರವಾನಿಸಿದ್ದಾರೆ.

Continue Reading

ಉದ್ಯೋಗ

Colse Road Side Nonveg Hotel: ರಸ್ತೆ ಬದಿಯಿರುವ ನಾನ್ ವೆಜ್ ಹೋಟೆಲ್ಗಳನ್ನು ಮುಚ್ಚಿ : ಚುನಾವಣೆಯಲ್ಲಿ ಗೆಲ್ಲುತ್ತಲೇ ನೂತನ ಬಿಜೆಪಿ ಶಾಸಕನ ಆದೇಶ

Ad Widget

Ad Widget

ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ. ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸೋಲನ್ನು ಕಂಡಿದೆ.
ತಾನು ಚುನಾವಣೆಯಲ್ಲಿ ಗೆದ್ದ ಬೆನ್ನಲೆ , ಜೈಪುರದ ಹವಾ ಮಹಾಲ್ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ತಮ್ಮ ಕ್ಷೇತ್ರದ ರಸ್ತೆಯ ಬದಿಗಳಲ್ಲಿರುವ ನಾನ್ ವೆಜ್ ಹೋಟೆಲ್ಗಳನ್ನು ಮುಚ್ಚುವಂತೆ ಆದೇಶ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿ, ರಸ್ತೆ ಬದಿಯಲ್ಲಿರುವ ನಾನ್ ವೆಜ್ ಹೋಟೆಲ್ಗಳನ್ನು ಸಂಜೆ ಒಳಗೆ ಮುಚ್ಚಿಸುವಂತೆ ಸೂಚನೆ ನೀಡಿದ್ದಾರೆ.
ನಾನ್ ವೆಜ್ ಅನ್ನು ರಸ್ತೆಯಲ್ಲಿ ಬಹಿರಂಗವಾಗಿ ಮಾರಾಟ ಮಾಡಬಹುದೇ? ಹೌದೋ ಅಥವಾ ಇಲ್ಲವೋ ಉತ್ತರಿಸಿ. ಹಾಗಾದ್ರೆ ನೀವು ಇದನ್ನು ಬೆಂಬಲಿಸುತ್ತೀರಿ. ಕೂಡಲೇ ರಸ್ತೆ ಬದಿಯ ಎಲ್ಲ ಮಾಂಸಾಹಾರಿ ಅಂಗಡಿಗಳನ್ನು ಮುಚ್ಚಬೇಕು. ಸಂಜೆ ನಿಮ್ಮಿಂದ ವರದಿ ತರಿಸಿಕೊಳ್ಳುತ್ತೇನೆ. ಅಧಿಕಾರಿ ಯಾರೆಂಬುದನ್ನು ಸಹ ನಾನು ನೋಡುವುದಿಲ್ಲ ಎಂದು ಬಾಲಮುಕುಂದ್ ಆಚಾರ್ಯ ಎಚ್ಚರಿಕೆ ನೀಡಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ:
ಈ ಬಗ್ಗೆ ಪ್ರತಿಕ್ರಿಯಿಸಿದ ಅಸಾದುದ್ದೀನ್ ಓವೈಸಿ ಈ ಆದೇಶ ಸರಿಯಲ್ಲ ,ನಾನ್ವೆಜ್ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಯಾರಾದರೂ ಮಾಂಸಾಹಾರಿ ಆಹಾರದ ಮಳಿಗೆ ಸ್ಥಾಪಿಸಲು ಬಯಸಿದರೆ ಅದನ್ನು ತಡೆಯುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ರವರು ರಾಜಸ್ಥಾನದ ಹವಾ ಮಹಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನ ಆರ್ಆರ್ ತಿವಾರಿ ಅವರನ್ನು 600 ಮತಗಳಿಂದ ಸೋಲಿಸುವ ಮೂಲಕ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಕಾಂಗ್ರೆಸ್ 69 ಸ್ಥಾನಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿಯಿತು

Ad Widget

Ad Widget

Ad Widget

Ad Widget
Continue Reading

ರಾಜಕೀಯ

captain Pranjal: ಟ್ರೋಲ್‌ ಬಳಿಕ ಎಚ್ಚೆತ್ತ ಸಿಎಂ -ಪ್ರಾಂಜಲ್ ಕುಟುಂಬಕ್ಕೆ 50 ಲ. ರೂ ಪರಿಹಾರದ ಚೆಕ್‌ ಇಂದು ವಿತರಣೆ – ಸಿದ್ದರಾಮಯ್ಯ ಹೇಳಿದ್ದೇನು?

Ad Widget

Ad Widget

ಬೆಂಗಳೂರು:  ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ( ಐವತ್ತು ಲಕ್ಷ ) ಪರಿಹಾರಧನ ಮಂಜೂರು ಮಾಡಿ ಸಿಎಂ ಸಿದ್ದರಾಮಯ್ಯ ಆದೆಶ ಹೊರಡಿಸಿದ್ದಾರೆ. ಈ ವಿಷಯವನ್ನು ಅವರು ತನ್‌ ಎಕ್ಸ ಖಾತೆಯಲ್ಲಿ ಘೊಷಿಸಿಕೊಂಡಿದ್ದಾರೆ. ನವೆಂಬರ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಇತರ ಮೂರು ಭಾರತೀಯ ಸೈನಿಕರೊಂದಿಗೆ ಪ್ರಾಂಜಲ್‌ ಹತರಾಗಿದ್ದರು.

Ad Widget

Ad Widget

Ad Widget

Ad Widget

 ಜಮ್ಮು – ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ.50,00,000 ( ಐವತ್ತು ಲಕ್ಷ ) ಪರಿಹಾರ ಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

Ad Widget

Ad Widget

Ad Widget

ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ, ಬಲಿದಾನಕ್ಕೆ ಬೆಲೆಕಟ್ಟಲಾಗದು, ಆದರೆ ದೇಶದ ಕೋಟ್ಯಂತರ ಜನರ ಪರವಾಗಿ ಈ ಹೊತ್ತಿನಲ್ಲಿ ಅವರ ಕುಟುಂಬದ ಜೊತೆ ನಿಲ್ಲಬೇಕಾದುದ್ದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Ad Widget

 ಪರಿಹಾರಧನದ ಚೆಕ್ ಅನ್ನು ಸಿದ್ಧಪಡಿಸಲಾಗಿದ್ದು ನಾಳೆ ( ನ 5ರಂದು)  ಮೃತ ಯೋಧನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಮತ್ತೊಮ್ಮೆ ಕ್ಯಾಪ್ಟನ್ ಪ್ರಾಂಜಲ್ ಅವರ ಅನನ್ಯ ದೇಶಸೇವೆ, ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸುತ್ತಾ, ಗೌರವ ನಮನ ಸಲ್ಲಿಸುತ್ತೇನೆ ಎಂದು ನಿನ್ನೆ ಅವರು ಎಕ್ಸ್‌ ನಲ್ಲಿ ಹಾಕಿದ ಪೋಸ್ಟ್‌ ನಲ್ಲಿ  ತಿಳಿಸಿದ್ದಾರೆ.

Ad Widget

Ad Widget

ಟ್ರೋಲ್

ಹುತಾತ್ಮರಾದ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಹೆಸರನ್ನು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಸಂದರ್ಶನವೊಂದರಲ್ಲಿ ಮರೆತ ಹಾಗೆ ಮಾತನಾಡಿದ್ದರು. ಅಲ್ಲದೇ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಕುಟುಂಬಕ್ಕೆ ಪರಿಹಾರದ ಕಾಲಮಿತಿ ಕುರಿತು ಪತ್ರಕರ್ತರು ಕೇಳಿದಾಗ, ಪರಿಹಾರವನ್ನು ಯಾರು, ಯಾವಾಗ ಘೋಷಿಸಿದರು ಎಂದು ಸಿದ್ದರಾಮಯ್ಯ ಉಡಾಫೆಯಾಗಿ ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ

Continue Reading

Trending

error: Content is protected !!