ಚಾಮರಾಜನಗರ, (ಸೆಪ್ಟೆಂಬರ್ 19 ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಶಾಲಾ ಶಿಕ್ಷಕಿಯನ್ನು ಬೆದರಿಸುವ ಇಬ್ಬರು ದುಷ್ಕರ್ಮಿಗಳು 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವೊಂದು ಚಾಮರಾಜನಗರ (Chamarajnagar) ಜಿಲ್ಲೆ ಕೊಳ್ಳೆಗಾಲದಲ್ಲಿ ಬೆಳಕಿಗೆ ಬಂದಿದೆ. ಬೇಡಿಕೆಯಷ್ಟು ಹಣ ನೀಡದಿದ್ದರೇ ಚಾಮರಾಜನಗರದಲ್ಲಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್ ಮೇಲ್(blackmail) ಮಾಡಿದ್ದಾರೆ. ಅಬ್ದುಲ್ ಅಸೀಮ್ ಹಾಗೂ ಮಯೂರ್ ಕೃತ್ಯ ಎಸಗಿರುವ ಆರೋಪಿಗಳು. ಶಿಕ್ಷಕಿ ಅವರಿಬ್ಬರ ವಿರುದ್ದ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅಬ್ದುಲ್ ಅಸೀಮ್ ಹಾಗೂ ಮಯೂರ್ ಎಂಬುವವರು ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ ಕುಟುಂಬಸ್ಥರಿಗೆ ಕಳುಹಿಸಿದ್ದಾರೆ. ಅಬ್ಧುಲ್ ಅಸೀಮ್ ಎನ್ನುವಾತ ನೊಂದ ಸಂತ್ರಸ್ಥೆ (ಶಿಕ್ಷಕಿ) ಜೊತೆ ಕಳೆದ 7 ವರ್ಷಗಳಿಂದ ಸ್ನೇಹಿತನಾಗಿದ್ದ.
ಶಿಕ್ಷಕಿಗೆ 2 ವರ್ಷಗಳ ಹಿಂದೆ ವಿವಾಹವಾಗಿದ್ದು ಆ ಬಳಿಕ ಆರೋಪಿಗಳ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ವಿವಾಹದ ಬಳಿಕ ಪತಿಯನ್ನ ಬಿಟ್ಟು ನನ್ನ ಜೊತೆ ಬಾ ಎಂದು ದುಂಬಾಲು ಬಿದ್ದಿದ್ದ. ಪತಿಯನ್ನ ಬಿಟ್ಟು ಬರದೆ ಇದ್ದರೆ ನಮ್ಮಿಬ್ಬರ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಹಲವು ದಿನಗಳ ಹಿಂದೆಯೇ ಆರೋಪಿ ಕೃತ್ಯ ನಡೆದಿದ್ದು, ಸಂತ್ರಸ್ತೆ ಮಾನಕ್ಕೆ ಹೆದರಿ ದೂರು ನೀಡಿರಲಿಲ್ಲ. ಆದರೇ ಯಾವಾಗ ಆರೋಪಿ ವಿಡಿಯೋವನ್ನು ಪತಿಗೆ ಕಳುಹಿಸಿದ್ದಾನೋ ಆಗಗಟ್ಟಿ ಮನಸ್ಸು ಮಾಡಿ ಸಂತ್ರಸ್ತೆ ಠಾಣೆ ಮೇಟ್ಟಿಲು ಏರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇನ್ನೂ ಪ್ರಕರಣ ದಾಖಲಾಗುತ್ತಿದ್ದಂತೆ ಇತ್ತ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.