Chaithra Kundapura | ಚೈತ್ರ ಕುಂದಾಪುರಳ ಮೇಲೆ ಮತ್ತೊಂದು ವಂಚನೆ ಪ್ರಕರಣ ದಾಖಲು – ಮೀನು ವ್ಯಾಪಾರಿಗೆ ಟೋಪಿ : ಇದಕ್ಕೂ ಬಿಜೆಪಿ ಹೆಸರೇ ಉಪಯೋಗ..?

FB_IMG_1695089934037
Ad Widget

Ad Widget

Ad Widget

ಕೋಟ: ಉದ್ಯಮಿ, ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣದ ಬೆನ್ನಲ್ಲೇ ಚೈತ್ರಾ ಕುಂದಾಪುರ (Chaithra Kundapura) ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Ad Widget

ಬ್ರಹ್ಮಾವರ ತಾಲೂಕು ಕೋಡಿ ನಿವಾಸಿ ಸುದಿನ ಎಂಬವರಿಗೆ ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ, ಸುಮಾರು ಐದು ಲಕ್ಷ ರೂ. ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ ಹಣವನ್ನು ಮರಳಿಸದೆ, ಜೀವ ಬೆದರಿಕೆ ಹಾಕಿ ವಂಚಿಸಿ, ವಿಶ್ವಾಸ ದ್ರೋಹ ಎಸಗಿರುವುದಾಗಿ ದೂರಿನಲ್ಲಿ ಬರೆಯಲಾಗಿದೆ.

Ad Widget

Ad Widget

Ad Widget

ಸುದಿನ ಎಂಬವರು ಮೀನು ವ್ಯಾಪಾರವನ್ನು ನಡೆಸಿಕೊಂಡು ಬಂದಿದ್ದು 2015 ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ತಾನು ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿದ್ದು, ಹಲವು ಮಂತ್ರಿಗಳ, ಸಚಿವರ ಹಾಗೂ ಶಾಸಕರ ನಿಕಟ ಸಂಪರ್ಕದಲ್ಲಿರುವುದಾಗಿ ತಿಳಿಸಿ, ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ತಿಳಿಸಿದ್ದಳು.

Ad Widget

ಬಳಿಕ ಚೈತ್ರಾ ಕುಂದಾಪುರ ಪದೇ ಪದೇ ಕರೆ ಮಾಡಿ ಸುದಿನ ಅವರಿಂದ 2018 ರಿಂದ 2022ರ ವರೆಗೆ ಸುಮಾರು ಐದು ಲಕ್ಷ ರೂ. ಪಡೆದಿರುತ್ತಾಳೆ.

Ad Widget

Ad Widget

ಸುಮಾರು 3 ಲಕ್ಷ ಹಣವನ್ನು ಸುದೀನ ತನ್ನ ಖಾತೆ ಹೊಂದಿದ ವಿಜಯವಾಡ ಶಾಖೆಯ ಕೋಟಕ್ ಮಹಿಂದ್ರ ಬ್ಯಾಂಕ್‌ ಹಾಗೂ ಕರ್ಣಾಟಕ ಬ್ಯಾಂಕ್ ಸಾಸ್ತಾನ ಶಾಖೆಯ ಖಾತೆಯಿಂದ ಚೈತ್ರಾಳ ಖಾತೆಗೆ ವರ್ಗಾಯಿಸಿದ್ದರು.

ಇನ್ನುಳಿದ ಮೊತ್ತವನ್ನು ನಗದಾಗಿ 2023ರ ತನಕ ಆಕೆಗೆ ನೀಡಿದ್ದರು. ಅಂಗಡಿಯ ಬಗ್ಗೆ ಚೈತ್ರಾಳಲ್ಲಿ ಕೇಳಿದಾಗ ಆಕೆ ಪ್ರತಿ ಬಾರಿಯೂ ಅಂಗಡಿ ಹಾಕುವ ಬಗ್ಗೆ ಈಗಾಗಲೇ ಸ್ಥಳೀಯ ಮುಖಂಡರಲ್ಲಿ ಮಾತುಕತೆ ನಡೆಸಿದ್ದು, ಅಂತಿಮ ಹಂತದಲ್ಲಿರುವುದಾಗಿ ನಂಬಿಸಿದ್ದಳು.

ನಂತರದ ದಿನಗಳಲ್ಲಿ ಆಕೆಯು ಚುನಾವಣಾ ಪ್ರಚಾರ, ವಿವಿಧೆಡೆ ಭಾಷಣ-ಪ್ರವಚನ, ಕಾರ್ಯಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ಇವುಗಳನ್ನು ನೆಪವಾಗಿರಿಸಿ, ದಿನಗಳನ್ನು ಮುಂದೂಡುತ್ತಾ ಬರುತ್ತಿದ್ದು ಇನ್ನಷ್ಟು ಹಣಕ್ಕೆ ಬೇಡಿಕೆಯನ್ನು ಇಟ್ಟಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚೈತ್ರಾಳ ಬಗ್ಗೆ ಅನುಮಾನಗೊಂಡ ಸುದಿನ ಅವರು ನನಗೆ ಕೂಡಲೇ ಬಟ್ಟೆ ಅಂಗಡಿಯನ್ನು ಹಾಕಿ ಕೊಡುವಂತೆ ಅಥವಾ ನಾನು ನೀಡಿದ ಹಣವನ್ನು ಸಂಪೂರ್ಣವಾಗಿ ವಾಪಾಸು ನೀಡುವಂತೆ ಕೇಳಿಕೊಂಡರು. ಆಗ ಚೈತ್ರಾಳು ಸುದಿನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸುವುದಾಗಿ ಹಾಗೂ ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದಳು.

ಇತ್ತೀಚೆಗೆ ಚೈತ್ರಾಳು ಇನ್ನಷ್ಟು ಜನರಿಗೆ ವಂಚಿಸಿದ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ನನಗೆ ಮೋಸ ಮಾಡಿ, ನನ್ನಿಂದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ನನಗೆ ಬಟ್ಟೆ ಅಂಗಡಿಯನ್ನು ಹಾಕಿಕೊಡುವುದಾಗಿ ನಂಬಿಸಿ ನನ್ನಿಂದ ಸುಮಾರು ಐದು ಲಕ್ಷ ರೂಪಾಯಿ ಪಡೆದು ಬಟ್ಟೆ ಅಂಗಡಿಯನ್ನು ಹಾಕಿ ಕೊಡದೆ, ಹಣವನ್ನು ವಾಪಾಸು ನೀಡದೆ, ಹಣವನ್ನು ಕೇಳಿದ ನನಗೆ ಜೀವ ಬೆದರಿಕೆಯನ್ನು ಹಾಕಿದ್ದಾಳೆ ಎಂದು ಸುಧೀನ ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: