ಸುಳ್ಯ, ಸೆ 18: ಸುಳ್ಯ ಜಯನಗರದ ಮಹಿಳೆಗೆ ವಿದೇಶದಲ್ಲಿರುವ ಪತಿ ವಾಟ್ಸಪ್ ಸಂದೇಶದ ಮೂಲಕ ತ್ರಿವಳಿ ತಲಾಖ್ (Whatsapp Talaq) ನೀಡಿರುವ ಘಟನೆ ನಡೆದಿದೆ.
ಈ ಬಗ್ಗೆ ಮಹಿಳೆ ಸುಳ್ಯ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದಾರೆ. ಕೇರಳ ತ್ರಿಶೂರ್ ಮೂಲದ ಅಬ್ದುಲ್ ರಾಶಿದ್ ಎಂಬವರು ಏಳು ವರ್ಷಗಳ ಹಿಂದೆ ಸುಳ್ಯ ಜಯನಗರದ ಯುವತಿಯನ್ನು ವಿವಾಹವಾಗಿದ್ದರು.
ವಿವಾಹದ ಬಳಿಕ ಚೆನ್ನಾಗಿ ಜೇವನ ಸಾಗಿಸುತ್ತಿದ್ದು, ಈ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ರಾಶಿದ್ ತನ್ನ ಪತ್ನಿಯನ್ನು ವಿದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಎರಡನೇ ಮಗುವಿನ ಹೆರಿಗೆಗಾಗಿ ಪತ್ನಿಯನ್ನು ಸುಳ್ಯದ ಪತ್ನಿ ಮನೆಯಲ್ಲಿ ಬಿಟ್ಟು ವಿದೇಶಕ್ಕೆ ಉದ್ಯೋಗಕ್ಕೆ ತರೆಳಿದ್ದರು.
ಕಳೆದ ಆರು ತಿಂಗಳಿನಿಂದ ಸಂಸಾರದಲ್ಲಿ ಅಲ್ಪ ಸ್ವಲ್ಪ ಕಿರಿಕಿರಿ ಉಂಟಾಗಿತ್ತು ಎನ್ನಲಾಗಿದ್ದು ಆದರೆ ಸಂಬಂಧಿಕರು, ಹಿರಿಯರು ಇದರ ಬಗ್ಗೆ ಮಾತನಾಡಿ ಸರಿಪಡಿಸಲು ಪ್ರಯತ್ನಿಸಿದ್ದರು.
ಆದರೆ ಇದು ಯಾವುದನ್ನು ಕೇಳದೆ ಏಕಾಏಕಿ ಪತಿ ರಾಶಿದ್, ಪತ್ನಿಯ ಮೊಬೈಲ್‌ಗೆ ಮೂರು ತಲಾಖ್‌ನ ವಾಟ್ಸಾಪ್ ಸಂದೇಶ ಕಳುಹಿಸಿದ್ದಾರೆ. ಇದರಿಂದ ಮನನೊಂದ ಮಹಿಳೆ ಸುಳ್ಯ ಪೊಲೀಸರಿಗೆ ತನಗೆ ನ್ಯಾಯ ಕೊಡಿಸುವಂತೆ ದೂರು ನೀಡಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.