ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಹೆಗ್ಡೆ (Mahesh Vikram Hegde) ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ಸುರೇಶ್ ಎಂಬವರು ತನ್ನ ಮಗಳಿಗೆ ಅವಹೇಳನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದು, ಈ ಬಗ್ಗೆ ಮಹೇಶ್ ಪ್ರತಿಕ್ರಿಯಿಸಿದ್ದು, ಸರಕಾರ ಇದೆ ಎಂಬ ಮಾತ್ರಕ್ಕೆ ಈ ಮಟ್ಟಕ್ಕೆ ಸುಳ್ಳು ಹೇಳಿಕೆಗಳೇ? ಕೇಸು ಎಫ್‌ಐಆರ್ ಗಳೇ?
ಕೆಲ ದಿನಗಳ ಹಿಂದೆ ನನ್ನ ಫೇಸ್‌ಬುಕ್ ವಾಲ್‌ನಲ್ಲಿ ಬಂದು ನಮ್ಮ ಟಿವಿ ವಿಕ್ರಮದ ಮುಮ್ತಾಜ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಹಾಕಿದ ವ್ಯಕ್ತಿ, ಕೆಲ ವರ್ಷಗಳ ಹಿಂದೆ ಆತನ ಅಕ್ಕನ ಮಗಳ ವಿಚಾರದಲ್ಲಿ ನನ್ನ ಬಳಿ ಸಹಾಯಕ್ಕೆ ಅಂಗಲಾಚಿದ್ದ. ಅಂದು ನಾನು ಆತ ಕಾಂಗ್ರೆಸ್ ಅಥವಾ ಯಾರೋ ಎಂದು ನೋಡದೆ ಹೆಣ್ಣು ಮಗಳ ವಿಚಾರಕ್ಕಾಗಿ ಸಹಾಯ ಮಾಡಿದ್ದೆ ಮತ್ತು ಕಾನೂನು ಪ್ರಕಾರವೇ ಆತನ ಸಹಾಯಕ್ಕೆ ನಿಂತಿದ್ದೆ. ಅಂದು ಕಣ್ಣೀರು ಸುರಿಸಿದ್ದ ವ್ಯಕ್ತಿ ಇಂದು ನನ್ನ ಮೇಲೆ ಸುಳ್ಳು ಹೇಳಿಕೆ ನೀಡಿ ಕೇಸ್ ಹಾಕಿದ್ದಾನೆ.
ಪರವಾಗಿಲ್ಲ ಕೇಸ್ ಕೋರ್ಟ್ ನನಗೆ ಹೊಸದೇನಲ್ಲ, ಆದರೆ ಈ ಮಟ್ಟಕ್ಕೆ ಸುಳ್ಳು ಹೇಳಿ ಕೇಸ್???
ಈ ಕೆಳಗಿನ Screen shot ನಲ್ಲಿ ಎಲ್ಲವೂ ಸ್ಪಷ್ಟವಾಗಿ ಇದೆ, ಇದು ಹತ್ತು ದಿನಗಳ ಹಿಂದಿನ ಘಟನೆ. ಸರಿಯಾಗಿ ಗಮನಿಸಿ ಯಾವುದು ಸತ್ಯ ಎಂಬುದನ್ನು.
“ನೀನು ಕಾಂಗ್ರೆಸಿಗನಾದರೂ ನಿನ್ನ ಮನೆಯ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಿದ ನಾನು ಬೇರೆ ಹೆಣ್ಣು ಮಕ್ಕಳನ್ನು ಬಿಟ್ಟು ಬಿಡುತ್ತೇನೆಯೇ!” ಎಂದು ನಾನು ಹಾಕಿದ್ದ ಕಾಮೆಂಟ್‌ಗೆ ಆತ ಬೇರೆಯೇ ಅರ್ಥ ಕಲ್ಪಿಸಿ ಕೇಸ್ ನೀಡಿದ್ದಾನೆ.
ನೀನು ನೀಡಿದ ದೂರಿನಲ್ಲಿ ಇರುವಂತೆ ನಾನು ಆ ರೀತಿ ಹೇಳಿಕೆ ನೀಡಿದ್ದೇನೆ ಎಂಬ ಒಂದೇ ಒಂದು ಸಾಕ್ಷಿ ತೋರಿಸಿದರೆ ಇದೇ ಪೋಸ್ಟ್‌ಕಾರ್ಡ್ ಸಂಸ್ಥೆಯನ್ನು ಇಂದೇ ಮುಚ್ಚುತ್ತೇನೆ… ನಾನು ಸತ್ಯದ ಪರ ಇರುವಾಗ ನಿನ್ನಂತಹ ಸುಳ್ಳುಕೋರರ ಆರೋಪ/ಕೇಸ್‌ಗೆ ಖಂಡಿತವಾಗಿಯೂ ಹೆದರಿ ಕುಗ್ಗುವವನು ನಾನಲ್ಲ!
ಪರವಾಗಿಲ್ಲ, ಕಾನೂನು ಮೂಲಕವೇ ಹೋರಾಟಕ್ಕೆ ಹೆಜ್ಜೆ ಇಡುತ್ತೇನೆ, ಅಂದು ಬೇಡಿಕೊಂಡ ಕೈಗಳಿಂದಲೇ ಮತ್ತೆ ನಮಸ್ಕಾರ ಮಾಡಿಸಿಕೊಳ್ಳುತ್ತೇನೆ!
ಕೆಳಗಿನ ಲಿಂಕ್ ಓದಿ