Mahesh Vikram Hegde | ಕಟೀಲ್ ಕೈನಲ್ಲೂ ಏನೂ ಮಾಡಲ್ಲಾಗಿಲ್ಲ – ಕೇಂದ್ರವೇ ನಮ್ಮ ಕೈಯಲ್ಲಿದೆ ಸೌಜನ್ಯಳಿಗಾದ ಗತಿ ನಿನ್ನ ಮಗಳಿಗೂ ಆಗ್ತದೆ : ಪೋಸ್ಟ್ ಕಾರ್ಡ್ ನ ಮಹೇಶ್ ವಿಕ್ರಮ್ ಹೆಗ್ಡೆ ವಿರುದ್ಧ ದೂರು ದಾಖಲು

FB_IMG_1695033783976
Ad Widget

Ad Widget

Ad Widget

ಬೆಂಗಳೂರು (ಸೆ.18): ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವರಿಗೆ ಬೆದರಿಕೆ ಮಾನಹಾನಿಕಾರ ಕಾಮೆಂಟ್ ಹಾಕಿದ ಆರೋಪ ಹಿನ್ನೆಲೆ ಪೋಸ್ಟ್ ಕಾರ್ಡ್ ಸ್ಥಾಪಕ ಮಹೇಶ್ ವಿಕ್ರಮ್ ಹೆಗಡೆ (Mahesh Vikram Hegde) ವಿರುದ್ಧ ಬೆಂಗಳೂರಿನ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

Ad Widget

ದೂರುದಾರ ಸುರೇಶ್ ಬಾಬು ಮತ್ತು ಆತನ ಮಗಳ ಬಗ್ಗೆ ವಿಕ್ರಮ್ ಹೆಗಡೆ ಟಿವಿ ವಿಕ್ರಮ್ ಅಧಿಕೃತ ಪೇಜ್‌ನಲ್ಲಿ ಮಾನಹಾನಿಯಾಗುವ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ದೂರದಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

Ad Widget

Ad Widget

ದೂರುದಾರರಿಗೆ ಕರೆ ಮಾಡಿರುವ ಮಹೇಶ್ ವಿಕ್ರಮ್ ಹೆಗಡೆ, ನಾವು ಸೌಜನ್ಯಳನ್ನೇ ಬಿಟ್ಟಿಲ್ಲ. ಅಂತಹ ಕಟೀಲ್ ಕೈನಲ್ಲೂ ಏನೂ ಮಾಡಲು ಆಗಿಲ್ಲ. ಇನ್ನು ನೀನು ಏನ್ ಕಿತ್ಕೊಳ್ತಿಯಾ? ಎಂದು ಬೆದರಿಕೆ ಹಾಕಿದ್ದಲ್ಲದೇ, ಕೇಂದ್ರ ಸರ್ಕಾರ ನಮ್ಮ ಕೈಯಲ್ಲಿದೆ ಸೌಜನ್ಯಳಿಗೆ ಆದ ಗತಿಯೇ ನಿನ್ನ ಮಗಳಿಗೆ ಆಗುತ್ತೆ ಎಂಬ ರೀತಿ ದೂರುದಾರರಿಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Ad Widget

ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ದೂರುದಾರ ಸುರೇಶ ಬಾಬು ಎಂಬುವವರಿಂದ ದೂರು ದಾಖಲು ಮಾಡಲಾಗಿದೆ.

Ad Widget

Ad Widget

Leave a Reply

Recent Posts

error: Content is protected !!
%d bloggers like this: